ಅನಿವಾಸಿ ಕನ್ನಡಿಗರ ಘಟಕಕ್ಕೆ ಸಲಹೆ


ಯಡಿಯೂರಪ್ಪನವರ ಸರ್ಕಾರ ಹೊರನಾಡ ಕನ್ನಡಿಗ ಮತ್ತು ಕನ್ನಡ ನಾಡಿನ ನಡುವೆ ಸೇತುವೆಯಾಗಿರೋ ಒಂದು ಘಟಕಾನ ಹುಟ್ಟುಹಾಕಿರೋದು ಒಳ್ಳೆ ಬೆಳವಣಿಗೆ ಗುರು! ಈ ಘಟಕದ ಕಾರ್ಯ ವ್ಯಾಪ್ತಿ ಏನು? ಏನೇನು ಕೆಲಸ ಮಾಡಕ್ಕೆ ಇದು ಮುಂದಾಗುತ್ತೆ ಅಂತಾ ಇನ್ನೂ ವಿವರಗಳು ಹೊರ ಬರಬೇಕಿದೆ, ಆದ್ರೂ ಇದು ಕನ್ನಡಿಗರ ಅದ್ರಲ್ಲೂ ಹೊರನಾಡ ಕನ್ನಡಿಗರ ಪಾಲಿಗೆ ಒಳಿತನ್ನು ಮಾಡುವಲ್ಲಿ ಒಳ್ಳೇ ಹೆಜ್ಜೆಯಾಗಿದೆ.

ಹೊರನಾಡ ಕನ್ನಡಿಗರೆಂದರೆ?

ಹೊರನಾಡ ಕನ್ನಡಿಗರು ಅಂದ್ರೆ ಬರೀ ಭಾರತದ ಹೊರಗಿರೋ ಕನ್ನಡಿಗ್ರು ಮಾತ್ರಾ ಅಲ್ಲ, ಅದು ಕನ್ನಡ ನಾಡನ್ನು ಬಿಟ್ಟು ಹೊರಗಿರೋ ಎಲ್ಲಾ ಕನ್ನಡಿಗ್ರು. ಹಾಗಂದುಕೊಂಡು ನೋಡುದ್ರೆ ಹೊರದೇಶದಲ್ಲಿರೋರಿಗಾಗಿ ಒಂದು, ಹೊರ ರಾಜ್ಯದಲ್ಲಿರೋರಿಗೆ ಇನ್ನೊಂದು ಘಟಕಗಳನ್ನು ಮಾಡೋದು ಒಳ್ಳೇದು. ಗಡಿ ಭಾಗಗಳಲ್ಲಿ ಹೊರರಾಜ್ಯದ ಕನ್ನಡಿಗ್ರು ಕನ್ನಡಾನ ಉಳಿಸಿಕೊಳ್ಳಕ್ಕೆ ಎಷ್ಟು ಒದ್ದಾಡ್ತಿದಾರೆ ಅನ್ನೋದನ್ನು ಮಹಾರಾಷ್ಟ್ರ, ಆಂಧ್ರದಲ್ಲಿನ ಕನ್ನಡ ಶಾಲೆಗಳ ಸಮಸ್ಯೆ, ಅಲ್ಲಿನ ಕನ್ನಡ ಪುಸ್ತಕಗಳ ಕೊರತೆಯ ಸಮಸ್ಯೆಗಳು ಎತ್ತಿ ತೋರಿಸ್ತಿವೆ. ಹಾಗಾಗಿ ಹೊರರಾಜ್ಯದ ಕನ್ನಡಿಗರು ತಮ್ಮ ತಾಯ್ನಾಡು ತಾಯ್ನುಡಿಯೊಂದಿಗೆ ಬೇರಿನ ಸಂಬಂಧ ಉಳಿಸಿಕೊಳ್ಳೋಕೆ, ಅಲ್ಲಿನ ಕನ್ನಡ ಸಂಘಗಳು ಇಲ್ಲಿನ ಸರ್ಕಾರದ ಜೊತೆ ನೇರ ಸಂಪರ್ಕ ಸಾಧ್ಸಕ್ಕೆ ಈ ವಿಶೇಷ ಘಟಕ ನೆರವಾಗಬೇಕು. ಹೊರನಾಡಲ್ಲೇ ಹುಟ್ಟಿ ಬೆಳ್ಯೋ ಕನ್ನಡದ ಮಕ್ಕಳು ತಾಯ್ನುಡಿಯ ನಂಟು ಉಳಿಸಿಕೊಳ್ಳಲು, ತಾಯ್ನಾಡಿನಲ್ಲಿ ಅಗತ್ಯ ಸವಲತ್ತು ಸೌಕರ್ಯ ಪಡೆಯಲು ಅನುಕೂಲ ಮಾಡಿಕೊಡಲು ಸಖತ್ ಸಹಾಯ ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ಒಂದೊಂದು "ತಾಯ್ನಾಡು ಸಂಪರ್ಕ ಕೇಂದ್ರ"ಗಳನ್ನು ಹುಟ್ಟುಹಾಕುದ್ರೆ ಭಾಳಾ ಒಳ್ಳೇದು ಗುರು!

ಹೊರದೇಶಗಳ ಕನ್ನಡಿಗರು

ಹೊರದೇಶಗಳ ಕನ್ನಡಿಗರಿಗೆ ಬಂಡವಾಳ ಹೂಡಿಕೆಗೆ ಉತ್ತೇಜನ ಕೊಡಬೇಕಾದ್ದು ಒಂದು ಸಹಜವಾದ ಚಟುವಟಿಕೇನೆ ಆಗಿದ್ರೂ ಇದು ಬರೀ ಬಂಡವಾಳ ಸೆಳೆಯೋಕೆ ಇರೋ ಘಟಕ ಆಗಬಾರ್ದು ಗುರು. ಅಲ್ಲಿನ ಕನ್ನಡಿಗರ ಸುಖದುಃಖಕ್ಕೆ ಒದಗೋ ಶಕ್ತಿಯಾಗಬೇಕು. ಇಲ್ಲಿಂದ ಹೊರನಾಡಿಗೆ ಹೋಗೋರಿಗೆ ಮಾರ್ಗದರ್ಶನ, ಸಲಹೆ, ತರಬೇತಿ ಕೊಡೋದು, ಅಲ್ಲಿನ ಕನ್ನಡಿಗರು ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಕ್ಕೆ ಸಹಾಯ ಮಾಡೋದೂ ಕೂಡಾ ಈ ಘಟಕದ ಅಂಗವಾಗೋದು ಒಳ್ಳೇದು. ಕನ್ನಡ ನಾಡಿನ ಉದ್ದಿಮೆದಾರರ ಪರವಾಗಿ ಹೊರನಾಡುಗಳಲ್ಲಿ ಬೆಂಬಲವಾಗಿ ನೀಲ್ಲಬೇಕು. ಕನ್ನಡದ ಮಾರುಕಟ್ಟೆ ಬೆಳಸಕ್ಕೆ ಉತ್ತೇಜನ ಕೊಡಲು ಮುಂದಾಗಬೇಕು. ಉದಾಹರಣೆಗೆ ಕನ್ನಡ ಸಿನಿಮಾಗೆ ಮಾರುಕಟ್ಟೆ ಕಟ್ಟಿಕೊಡಲು ಈ ಒಂದು ಘಟಕ ತನ್ನ ಎಲ್ಲ ಸಂಪರ್ಕಗಳನ್ನು ಬಳಸಿಕೊಂಡು ಸಹಾಯ ಒದಗಿಸಿಕೊಡಬಹುದು. ಹೊರದೇಶಗಳ ಕನ್ನಡಿಗರಲ್ಲೇ ಸಂಪರ್ಕ ಜಾಲ ಹುಟ್ಟುಹಾಕಬಹುದು. ಒಟ್ನಲ್ಲಿ ಹೊರನಾಡ ಕನ್ನಡಿಗರಿಗೆ ತಾಯ್ನಾಡಿನ ಜೊತೆ ಇರೋ ಸಂಬಂಧವನ್ನು ಉತ್ತಮಗೊಳಿಸೋದೂ, ತಾಯಿಬೇರಿನ ನಂಟನ್ನು ಗಟ್ಟಿ ಮಾಡೋದೂ ಈ ಘಟಕದ ಮೂಲೋದ್ದೇಶವಾಗಲಿ. ಈ ಘಟಕದ ಕೆಲಸದ ವ್ಯಾಪ್ತಿ ಸಮಗ್ರವಾಗಿರಬೇಕಾದ್ದು ನಾಡಿನ ನಾಳಿನ ಒಳಿತಿನ ದೃಷ್ಟಿಯಿಂದ ಸಖತ್ ಅಗತ್ಯವಾದದ್ದು ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಯೆಡಿಯೂರಪ್ಪನವರ ಸರ್ಕಾರ ಬಂದಾಗಿನಿಂದ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಕೆಲವು ಒಳ್ಳೆಯ ಪಾಲಿಸಿಗಳನ್ನು ತಂದಿದ್ದಾರೆ ಎಂದಂತಾಯಿತು. ಈ ಹಿಂದೆ ಬಂದ ’ಆಟಗಾರರ ಪಲಾಯನ’ ನಿಲ್ಲಿಸುವುದಕ್ಕೂ ಕ್ರಮ ಕೈಗೊಂಡಿರುವುದರ ಬಗ್ಗೆ ಇದುವೇ ಕನ್ನಡ ದಲ್ಲಿ ವರದಿ ಬಂದಿದೆ.
http://thatskannada.oneindia.in/news/2008/07/01/karnataka-to-adopt-sports-policy-soon.html

Anonymous ಅಂತಾರೆ...

I hope this will help us in 2 ways. One drawing investment to Karnataka and the other part is helping improve market for our products and companies.
by the by, The idea is a brain child of our vishweshwar Bhat of Vi.Ka. We should congradulate him too.

Anonymous ಅಂತಾರೆ...

Naanobba horannadu kannadiga..namma kannadigarigaagi..kannadigara olithigaagi en maadokku sidhha guru

ಉಉನಾಶೆ ಅಂತಾರೆ...

ಒಳ್ಳೆಯ ವಿಚಾರ.
ಕನ್ನಡಕ್ಕೆ, ಕರ್ನಾಟಕಕ್ಕೆ ಪರದೇಶದಲ್ಲಿರುವ ಕನ್ನಡಿಗರು ಏನು ಸೇವೆ ಮಾಡಬಹುದು ಎಂಬ ಬಗ್ಗೆ ಯೋಜನೆಗಳು ಮತ್ತು ಬೆಂಬಲ ಈ ಘಟಕದಿಂದ ಬಂದರೆ ಚೆನ್ನಾಗಿರುತ್ತೆ.
ಇತೀ,
ಉಉನಾಶೆ

Anonymous ಅಂತಾರೆ...

anivaasi kannaDigara ghaTaka, ido0du uttama salaheyaadarU hosadalla. 1994ralli Daa. e0.e0 kalaburgi, vishraa0ta kulapati, kannaDa vishvavidyaalaya, ha0pi avaru aasTrEliyaa, nyUjilE0D mattu si0gaapura dEshagaLige bhETikoTTu mUru ti0gaLa kaala vaasisi allina kannaDigara samasyegaLannu svataH anubhavisi, manavarikemaaDiko0Du, vaapasa hOgi karnaaTaka sarakaarakke "vidEshi kannaDigara sa0parka ilaakhe" sthaapisuva vivaravaada lEkhanavannu oppisiddaare. I ilaakhe "kannaDa praadhikaara" da darjege irabEke0ba avara vichaaravannu tamma lEkhanadalli ma0Disiddaare. allade kannaDigare0dare yaaru? kannaDigaru tamma bhaviShyavannu chennaagi rUpisikoLLalu taaynaaDannu biTTu bEre kaDege valasehOdarU, tamma sa0skRutiya bErannu kaLedukoLLUttiddEve annuva bhayakaaDuttiddu, adannu uLisikoLLalu, hechchu kannaDigariruva sthaLagaLalli sa0gha sa0sthegaLannu huTTuhaaki, saa0skRutika karnaaTakavannE sthaapisuttiddaare. Daa. kalaburgiyavara prakaara vidEshagaLalli, saa0skRutika karnaaTakagaLu. bhougOlika karnaaTakakke sarakaara koDuva ella savalattugaLannU, horanaaDu, mattu vidEshi kannaDigara saa0skRutika karnaaTakagaLannU samanaagi nODikoLLabEke0budu avara salahe.
idE vichaaravannu naanu kannaDa baLaga yu.ke avaru aacharisuva rajata mahOtsava 2008, 22 - 25 agaShTa, cheshaayarnalli ma0DisuttiddEne.
I vichaaravannu kaaryarUpakke taralu karnaaTakadalliruva kannaDa saahitigaLU, adhikaarigaLU mattu nIvellarU allade horanaaDinalliruva mattu vidEshagalalliruva kannaDigarellarU karnaaTaka ghanasarakaarakke ottaDa taruvire0du aashisuttEne.

Daa. li0gappa kalaburgi
sa0sthaapaka kaaryadarhi
nyUjilE0D kannaDa kUta
aaklyaa0D (nyUjilE0D)


vina0ti: I nanna vichaaravannu baraha dalli mudrisabEkeodu kOruve.

Anonymous ಅಂತಾರೆ...

enguru, horanaadu kannada sangha gaLu entaha kaaryakrama hammikonDare kannadakke oLitu anta ondu post baredare anukoola aagabahudu .. yaake andre namma horanada kannada sangha gaLalli karyakrama haakikondaagella, innu chennagi kannadakke uttejana kodabahudu ansatte ...

Anonymous ಅಂತಾರೆ...

[shreeyuta kalburgi avare, barahadalli haakideeni. mundina sali dayavittu neeve maadi - jagga]

ಅನಿವಾಸಿ ಕನ್ನಡಿಗರ ಘಟಕ, ಇದೋ೦ದು ಉತ್ತಮ ಸಲಹೇಯಾದರೂ ಹೋಸದಲ್ಲ. ೧೯೯೪ರಲ್ಲಿ ಡಾ. ಏ೦.ಏ೦ ಕಲಬುರ್ಗಿ, ವಿಶ್ರಾ೦ತ ಕುಲಪತಿ, ಕನ್ನಡ ವಿಶ್ವವಿದ್ಯಾಲಯ, ಹ೦ಪಿ ಅವರು ಆಸ್ಟ್ರೇಲಿಯಾ, ನ್ಯೂಜಿಲೇ೦ಡ ಮತ್ತು ಸಿ೦ಗಾಪುರ ದೇಶಗಲಿಗೇ ಭೇಟಿಕೋಟ್ಟು ಮೂರು ತಿ೦ಗಲ ಕಾಲ ವಾಸಿಸಿ ಅಲ್ಲಿನ ಕನ್ನಡಿಗರ ಸಮಸ್ಯೇಗಲನ್ನು ಸ್ವತಃ ಅನುಭವಿಸಿ, ಮನವರಿಕೇಮಾಡಿಕೋ೦ಡು, ವಾಪಸ ಹೋಗಿ ಕರ್ನಾಟಕ ಸರಕಾರಕ್ಕೇ "ವಿದೇಶಿ ಕನ್ನಡಿಗರ ಸ೦ಪರ್ಕ ಇಲಾಖೇ" ಸ್ಥಾಪಿಸುವ ವಿವರವಾದ ಲೇಖನವನ್ನು ಓಪ್ಪಿಸಿದ್ದಾರೇ. ಈ ಇಲಾಖೇ "ಕನ್ನಡ ಪ್ರಾಧಿಕಾರ" ದ ದರ್ಜೇಗೇ ಇರಬೇಕೇ೦ಬ ಅವರ ವಿಚಾರವನ್ನು ತಮ್ಮ ಲೇಖನದಲ್ಲಿ ಮ೦ಡಿಸಿದ್ದಾರೇ. ಅಲ್ಲದೇ ಕನ್ನಡಿಗರೇ೦ದರೇ ಯಾರು? ಕನ್ನಡಿಗರು ತಮ್ಮ ಭವಿಷ್ಯವನ್ನು ಚೇನ್ನಾಗಿ ರೂಪಿಸಿಕೋಲ್ಲಲು ತಾಯ್ನಾಡನ್ನು ಬಿಟ್ಟು ಬೇರೇ ಕಡೇಗೇ ವಲಸೇಹೋದರೂ, ತಮ್ಮ ಸ೦ಸ್ಕೃತಿಯ ಬೇರನ್ನು ಕಲೇದುಕೋಲ್ಲೂತ್ತಿದ್ದೇವೇ ಅನ್ನುವ ಭಯಕಾಡುತ್ತಿದ್ದು, ಅದನ್ನು ಉಲಿಸಿಕೋಲ್ಲಲು, ಹೇಚ್ಚು ಕನ್ನಡಿಗರಿರುವ ಸ್ಥಲಗಲಲ್ಲಿ ಸ೦ಘ ಸ೦ಸ್ಥೇಗಲನ್ನು ಹುಟ್ಟುಹಾಕಿ, ಸಾ೦ಸ್ಕೃತಿಕ ಕರ್ನಾಟಕವನ್ನೇ ಸ್ಥಾಪಿಸುತ್ತಿದ್ದಾರೇ. ಡಾ. ಕಲಬುರ್ಗಿಯವರ ಪ್ರಕಾರ ವಿದೇಶಗಲಲ್ಲಿ, ಸಾ೦ಸ್ಕೃತಿಕ ಕರ್ನಾಟಕಗಲು. ಭೌಗೋಲಿಕ ಕರ್ನಾಟಕಕ್ಕೇ ಸರಕಾರ ಕೋಡುವ ಏಲ್ಲ ಸವಲತ್ತುಗಲನ್ನೂ, ಹೋರನಾಡು, ಮತ್ತು ವಿದೇಶಿ ಕನ್ನಡಿಗರ ಸಾ೦ಸ್ಕೃತಿಕ ಕರ್ನಾಟಕಗಲನ್ನೂ ಸಮನಾಗಿ ನೋಡಿಕೋಲ್ಲಬೇಕೇ೦ಬುದು ಅವರ ಸಲಹೇ.
ಇದೇ ವಿಚಾರವನ್ನು ನಾನು ಕನ್ನಡ ಬಲಗ ಯು.ಕೇ ಅವರು ಆಚರಿಸುವ ರಜತ ಮಹೋತ್ಸವ ೨೦೦೮, ೨೨ - ೨೫ ಅಗಷ್ಟ, ಚೇಶಾಯರ್ನಲ್ಲಿ ಮ೦ಡಿಸುತ್ತಿದ್ದೇನೇ.
ಈ ವಿಚಾರವನ್ನು ಕಾರ್ಯರೂಪಕ್ಕೇ ತರಲು ಕರ್ನಾಟಕದಲ್ಲಿರುವ ಕನ್ನಡ ಸಾಹಿತಿಗಲೂ, ಅಧಿಕಾರಿಗಲೂ ಮತ್ತು ನೀವೇಲ್ಲರೂ ಅಲ್ಲದೇ ಹೋರನಾಡಿನಲ್ಲಿರುವ ಮತ್ತು ವಿದೇಶಗಲಲ್ಲಿರುವ ಕನ್ನಡಿಗರೇಲ್ಲರೂ ಕರ್ನಾಟಕ ಘನಸರಕಾರಕ್ಕೇ ಓತ್ತಡ ತರುವಿರೇ೦ದು ಆಶಿಸುತ್ತೇನೇ.

ಡಾ. ಲಿ೦ಗಪ್ಪ ಕಲಬುರ್ಗಿ
ಸ೦ಸ್ಥಾಪಕ ಕಾರ್ಯದರ್ಹಿ
ನ್ಯೂಜಿಲೇ೦ಡ ಕನ್ನಡ ಕೂತ
ಆಕ್ಲ್ಯಾ೦ಡ (ನ್ಯೂಜಿಲೇ೦ಡ)


ವಿನ೦ತಿ: ಈ ನನ್ನ ವಿಚಾರವನ್ನು ಬರಹ ದಲ್ಲಿ ಮುದ್ರಿಸಬೇಕೇಓದು ಕೋರುವೇ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails