ಮೊನ್ನೆ ಬೆಂಗಳೂರಲ್ಲಿ, ಅಲ್ಲಲ್ಲಿ ಬಾಂಬ್ ಸಿಡೀತಲ್ಲಾ, ಅದ್ರಾಗೆ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಆಗ್ದೆ ಇರೋದು ಸಮಾಧಾನದ ವಿಷ್ಯ. ಈ ಘಟನೆಗಳ ಬಗ್ಗೆ ಶಾಸಕರಾದ ನರೇಂದ್ರಬಾಬು ಅವ್ರೊಂದು ತೂಕದ ಮಾತಾಡಿದಾರೆ ಗುರು! ವಲಸಿಗರ ಮೇಲೊಂದು ಕಣ್ಣಿಡಬೇಕು ಅನ್ನೋ ಅವ್ರ್ ಮಾತು ಸರಿಯಾಗೇ ಇದೆ. ಬೆಂಗಳೂರು ಆರ್ಥಿಕವಾಗಿ ಬೆಳೀತಿದೆ ಅನ್ನೋದೂ ಇಲ್ಲಿ ಉಗ್ರರ ಕಣ್ಣು ಸೆಳ್ಯಕ್ ಕಾರಣ ಅನ್ನೋದೂ ನಿಜಾನೆ. ಆದ್ರೂ ಇಂಥಾ ಸಮಯದಲ್ಲಿ, ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕು, ನಮ್ಮ ವ್ಯವಸ್ಥೆ ಹೆಂಗಿರಬೇಕು ಅನ್ನೋ ಯೋಚನೆ ಬರುತ್ತೆ.
ಬಾಂಬ್ ಇಡೋರನ್ನ ಹೆಂಗ್ ತಡೆಯೋದು?
ಇಡೀ ಪೊಲೀಸ್ ವ್ಯವಸ್ಥೆ ಯಾರು ಎಲ್ಲಿ ಬಾಂಬ್ ಇಡ್ತಾರೆ ಅಂತಾ ಹುಡುಕ್ಕೊಂಡು ಇಪ್ಪತ್ನಾಕು ಗಂಟೆ ಕಣ್ಣುಗ್ ಎಣ್ಣೆ ಬಿಟ್ಕೊಂಡು ಇರಕ್ ಆಗುತ್ತಾ? ಅಥ್ವಾ ಯಾರು ಬಾಂಬ್ ಇಡಬಹುದು ಅನ್ನೋದನ್ನು ಮೊದಲೇ ಊಹೆ ಹೆಂಗ್ ಮಾಡಕ್ ಆಗುತ್ತೆ ಅಂತ ಅನ್ಸದು ಸಹಜ. ಆದ್ರೆ ಅದುಕ್ಕೆ ಅಂತಲೇ ಪೊಲೀಸ್ ಇಲಾಖೆಯೋರು ಗುಪ್ತಚರರನ್ನು ಇಟ್ಕೊಂಡಿರ್ತಾರೆ. ಆದ್ರೂ ಹೀಗಾಗಿದೆ ಅಂದ್ರೆ ಇದರ ಹೊಣೆಗಾರಿಕೆ ಅವ್ರುದ್ದೇ ತಾನೆ. ಇಡೀ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಕಣ್ತಪ್ಪಿಸಿ ಈ ಸಿಡಿತಗಳಾಗಿರೋದು ಎದ್ದು ಕಾಣ್ತಿದೆ. ಕೇಂದ್ರದೋರು ನಾವು ಮೊದ್ಲೆ ಸುಳಿವು ಕೊಟ್ಟಿದ್ವಿ ಅಂತಲೂ, ಇಲ್ಲ ಕೊಟ್ಟಿರಲಿಲ್ಲ ಅಂತ ರಾಜ್ಯಸರ್ಕಾರದೋರು ಅಂತಲೂ, ಒಬ್ರು ಮೇಲೊಬ್ರು ಗೂಬೆ ಕೂರಿಸೋದುನ್ನ ಬಿಟ್ಟು ಇನ್ಮುಂದ್ ಹೀಗಾಗ್ದೆ ಇರೋಕೆ ಬೇಕಾದ ಕ್ರಮಗಳನ್ನು ಮುಲಾಜಿಲ್ಲದೆ ತೊಗೋಬೇಕು.
ಒಳಗ್ ಬರೋರ್ ಬಗ್ಗೆ ನಿಗಾ ಬೇಕು
ನಮ್ಮ ಮನೆ ಒಳಗಡೆ ಯಾರೋ ಹೊರಗಿನವ್ರು ಬಂದ್ರೆ ಸುಮ್ನೆ ಬಾಗ್ಲು ತೆಗ್ದು ಒಳಗ್ ಬಿಟ್ಕೋತೀವಾ? ಇಲ್ಲಾ ತಾನೆ? ಹಾಗಿದ್ ಮೇಲೆ ನಮ್ಮೂರ ಒಳಗ್ ಬರೋರನ್ನು ಒಳಗ್ ಬಿಡಕ್ ಮೊದ್ಲು ಏನೇನು ಪರೀಕ್ಷೆ ಮಾಡಿ ಬಿಟ್ಕೋತಿದೀವಿ. ಹೊರನಾಡಿಂದ ಬರೋರ ಬಗ್ಗೆ ಹಿಂದೆ ಮುಂದೆ ತಿಳ್ಕೊಳಕ್ಕೆ ಏನ್ ವ್ಯವಸ್ಥೆ ಇದೆ ಇಲ್ಲಿ? ಹಾಗೆ ವಲಸೆ ಬರೋರ ಯಾವ ದಾಖಲೇನ ಪರೀಕ್ಷೆ ಮಾಡಿ ಒಳಗ್ ಬಿಟ್ಕೊತಾ ಇದೀವಿ? ಅಸಲಿಗೆ ಅಂಥಾ ವ್ಯವಸ್ಥೆಯ ಅಗತ್ಯ ಇದೇ ಅನ್ನೋದೆ ನಮ್ಮೋರಿಗೆ ಮನವರಿಕೆ ಆಗಬೇಕಾಗಿದೆ.
ಇದ್ರ ಜೊತೆಗೆ ನಮ್ ಜನತೆ ಅಕ್ಕಪಕ್ಕ ವಾಸಕ್ ಬರೋರ್ ಯಾರು? ಅವ್ರ್ ಚಟುವಟಿಕೆ ಎಂಥದ್ದು? ಅಂತಾ ಕಣ್ಣು ಬಿಟ್ಕೊಂಡಿರ್ಬೇಕು ಗುರು. ಅಂದ್ರೆ ಇಂಥಾ ಕಠಿಣವಾದ ಸವಾಲನ್ನು ಎದ್ರುಸಕ್ಕೆ ಬರೀ ಪೊಲೀಸರಲ್ಲ, ನಾವು ಕೂಡಾ ಒಂದಾಗಬೇಕು, ಮುಂದಾಗಬೇಕು. ಏನಂತೀ ಗುರು!
ಕೊನೆಹನಿ : ಕೆಲವು ಮಾಧ್ಯಮಗಳೋರೂ, ಅಧಿಕಾರಿಗಳೂ ’ಈ ಕೆಲಸ ಮಾಡಿರೋರು ಸ್ಥಳೀಯರೇ’ ಅಂತಿದಾರೆ. ಸ್ಥಳೀಯ ಅನ್ನೋದ್ರ ಅರ್ಥ ಏನು ಗುರು? ಇಲ್ಲಿ ಹುಟ್ಟಿ ಬೆಳದೋರು ಅಂತಲಾ? ಇಲ್ಲಿ ಸ್ವಂತ ಮನೆ ಇಟ್ಕೊಂಡೋರು ಅಂತ್ಲಾ? ಇಲ್ಲೇ ಬದುಕ್ತಿರೋರು ಅಂತ್ಲಾ? ಉಹೂ ಅಂತವ್ರ್ ಯಾರನ್ನೂ ಸ್ಥಳೀಯರು ಅನ್ನಕ್ಕಾಗಲ್ಲ. ನಮ್ಮ ಮುಖ್ಯವಾಹಿನೀಲಿ ಒಂದಾಗಿ ಈ ನಾಡನ್ನು ತನ್ನದು ಅಂದ್ಕೊಂಡಿರೋರು ತಾನೆ ಸ್ಥಳೀಯರು. ಅಂಥಾವ್ರು ತನ್ನ ಮನೇಗೆ ಬಾಂಬ್ ಇಡೋಕೆ ಸಾಧ್ಯಾನೆ ಇಲ್ಲ ಗುರು!
3 ಅನಿಸಿಕೆಗಳು:
Guru, locals means local turks having connections and trained in Pakistan to support their CASTE ! That is the maining of locals, thinking these locals care for thei homeland is bit NAIVE ! These guys don't care for anything, except for the KAUM (religion), money flows from middle east, of course it is free oil money ! Let us, the KANNADIGAS be not so nice to all , let us treat them how we r treated outside our state !
Some anti nationals are roaming around the country bombing the important places and scaring the people and govt. and medias initially termed its just LOCAL miscreants.
Lets start conversing only in Kannada.. just anywhere and everywhere... I speak English only when its desperately needed. An apartment security guard near my house, says to me loudly that he dont know Kannada and I need to speak in Hindi for him to understand. I am not chasing these poor people, but look at their courage and our innocence, we are letting the sit on our heads.
PS: A Bihari Panipoori seller on the road side says, "you dont know Sir, Banglore mein Bihari aagaya to samjho aap ka baap banke dikhayega". I am only telling that those who come in search of food, have so much courage, and we still and we still eat panipoori at their kiosk saying, ya ya, Bihari can become my baap, ya ya ya..
ಅನಾನಿಮಸ್ ಹೇಳಿರೋದು ಸರಿನೇ. ಆ ಹನಿಫ್ ನೋಡಿ, ನಮ್ಮಲ್ಲೇ ಹುಟ್ಟಿ ಬೆಳೆದು ಇಲ್ಲೆ ಪಕ್ಕ ಮೂಡಿಗೆರೆಯಲ್ಲಿ ಓದಿ, ಅದು ವೈದ್ಯಕೀಯ ಓದಿ, ಅವನ ಸಂಬಧಿಕ ಬಾಂಬ್ ಇಡೊದನ್ನ ನೋಡಿಕೊಂಡು ಸುಮ್ಮನೆ ಕೂತಿದ್ದ.
ಅದಷ್ಟೆ ಅಲ್ಲ, ಅವನು ಇಲ್ಲಿಗೆ ಬಂದಾಗ ಕಲ್ಲಲ್ಲ್ಲಿ ಹೊಡೆಯೋದು ಬಿಟ್ಟೂ ನಮ್ಮ ಕುಮಾರಣ್ಣನಂತವರು ಅವನಿಗೆ ಕೆಲಸ ಆಫರ್ ಮಾಡಿ ಸನ್ಮಾನ ಮಾಡಿ ಕಳ್ಸಿದ್ರಲ್ಲ. ಇಂತವ್ರಿಗೆ ಏನು ಹೇಳಬೇಕು.
ಅಂದ ಹಾಗೆ ಗುರುಗಳು ಹೇಲಿರೋ ಥರ ವಲಸಿಗರ ಮೇಲೆ ಕಣ್ಣು ಇಟ್ಟಿರಲೇ ಬೇಕು. ಅನಿಯಂತ್ರಿತ ವಲಸೆ ಇಂದ ಪೋಲೀಸರಿಗೆ ಕಷ್ಟ ಆಗುತ್ತೆ. ಭಯೋತ್ಪಾದಕ ಕ್ರುತ್ಯಗಳಷ್ಟೆ ಅಲ್ಲ ಬೇರೆ ಕ್ರಿಮಿನಲ್ ಕೆಲ್ಸಗಳು ಹೆಚ್ಚಗುತ್ವೆ. ವಲಸೆಗೆ ತಡೆಗಟ್ತಲು ಎನದ್ರು ಮಡ್ಲೇ ಬೇಕು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!