ಬೆಂಗಳೂರು ವಿಶ್ವವಿದ್ಯಾಲಯದೋರು 2೦೦9~ 2010ರಿಂದ ಹೋಟೆಲ್ ಮ್ಯಾನೇಜ್ ಮೆಂಟ್ ಪದವಿಯ ಮೂರನೇ ಸೆಮಿಸ್ಟರ್ ತರಗತಿಗೆ ಕನ್ನಡವನ್ನು ಕಡ್ಡಾಯ ಮಾಡಿರೋ ಸುದ್ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ 31.12.2008ರ ಸಂಚಿಕೆಯಲ್ಲಿ ವರದಿ ಮಾಡಿದ ಸುದ್ದಿ ನೋಡಿ ಒಂದು ಕಡೆ ಖುಷಿ, ಇನ್ನೊಂದು ಕಡೆ ದುಃಖ ಆಗ್ತಿದೆ ಗುರು! ಈ ವರದಿಯಂತೆ ಈ ಪದವಿಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಕನ್ನಡಿಗರ ಸಂಖ್ಯೆ 30%ರ ಆಸುಪಾಸಿನಲ್ಲಿದೆಯಂತೆ! ಕನ್ನಡಿಗರು ಹೆಚ್ಚು ಹೆಚ್ಚು ಉದ್ಯಮಶೀಲರಾಗೋಕೆ ಇಂಥಾ ಓದುಗಳಲ್ಲಿ ಹೆಚ್ಚೆಚ್ಚು ತೊಡಗಬೇಕು ಅನ್ನೋ ನಮ್ಮ ಆಶಯಾನ ಸದ್ಯಕ್ಕೆ ಬದಿಗಿಟ್ಟು ಈಗ ವಿ.ವಿ ಉದ್ದೇಶಿಸಿರೋ ಕನ್ನಡ ಕಡ್ಡಾಯದ ಬಗ್ಗೆ ಮಾತಾಡೋಣ ಬನ್ನಿ.
ವಲಸೆ ನಿಯಂತ್ರಣಕ್ಕೊಂದು ಸಾಧನ ಕನ್ನಡ ಪರೀಕ್ಷೆ!
ತುಂಬಾ ದೇಶಗಳಲ್ಲಿ ಹೆಚ್ಚಿನ ಓದು ಓದಕ್ಕೆ ಯಾರಾದ್ರೂ ಹೋಗಬೇಕೂ ಅಂದ್ರೆ ಅಲ್ಲಿನ ಭಾಷೆ ಕಲಿತು, ಅದರಲ್ಲೊಂದು ಪರೀಕ್ಷೆ ಬರ್ದು ಪಾಸಾಗಬೇಕು ಅನ್ನೋ ನಿಯಮ ಇದೆ ಅನ್ನೋದನ್ನು ಗಮನಿಸಿದಾಗ ನಮ್ಮ ನಾಡಲ್ಲಿ ಕನ್ನಡಾನ ಒಂದು ಸೆಮಿಸ್ಟರ್ರಿಗೆ ಕಡ್ಡಾಯ ಮಾಡಿರೋದೇ ಮಾಧ್ಯಮಗಳಲ್ಲಿ ಸುದ್ದಿಯಾಗ್ತಿರೋದು ಅಚ್ಚರಿ ತರುತ್ತಲ್ವಾ? ಕನ್ನಡ ನಾಡಲ್ಲಿರೋ ಇಂಜಿನಿಯರಿಂಗು, ಮೆಡಿಕಲ್ಲು, ಹೋಟೆಲ್ ಮ್ಯಾನೇಜ್ ಮೆಂಟು, ನರ್ಸಿಂಗ್ ಮೊದಲಾದ ಕಾಲೇಜುಗಳಲ್ಲಿ ಹೊರನಾಡಿನಿಂದ ಬಂದಿರೋ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿದಾರೆ. ಇವ್ರೆಲ್ಲಾ ಇಲ್ಲಿ ಓದು ಮುಗಿಸಿದ ನಂತರ ಇಲ್ಲೇ ಝಾಂಡಾ ಊರೋ ಸಾಧ್ಯತೆಗಳೇ ಹೆಚ್ಚು ಅನ್ನೋದನ್ನೂ ಗಮನಿಸಿ. ಇಲ್ಲಿನ ಸಾಫ್ಟ್ ವೇರ್ ಸಂಸ್ಥೆಗಳು, ಆಸ್ಪತ್ರೆಗಳ ದಾದಿಗಳು ಇವರನ್ನೆಲ್ಲಾ ನೋಡುದ್ರೇ ಇದು ನಿಚ್ಚಳವಾಗಿ ಕಾಣುತ್ತೆ. ಹೀಗೆ ಅನಿಯಂತ್ರಿತವಾಗಿ ವಲಸೆ ಆಗೋದನ್ನು ತಡೆಯೋಕೆ ಕನ್ನಡ ಪಾಸಾಗೋದು ಕಡ್ಡಾಯ ಮಾಡೋದು ಒಂದೊಳ್ಳೆ ಸಾಧನ. ಜೊತೇಲಿ ಇದು ಪರಭಾಷಿಕರು ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲ ಮಾಡಿಕೊಡುತ್ತೆ.
ಮುಂದಾಗಬೇಕಾದ್ದೇನು?
ಸದ್ಯಕ್ಕೆ ಬೆಂಗಳೂರಿನ ವಿ.ವಿ ತೆಗೆದುಕೊಂಡಿರೋ ಈ ನಿರ್ಧಾರ ಸರಿಯಾದದ್ದೂ, ಅಗತ್ಯವಾದದ್ದೂ, ಮೆಚ್ಚುಗೆಗೆ ಅರ್ಹವಾದದ್ದೂ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕರ್ನಾಟಕದಲ್ಲಿರೋ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಬಿ.ಎಸ್.ಇ/ ಇ.ಸಿ.ಎಸ್.ಸಿ ಶಾಲೆಗಳೂ ಸೇರಿದಂತೆ ಪ್ರಾಥಾಮಿಕ ಶಾಲಾ ಹಂತದಿಂದ ಐ.ಐ.ಎಂ.ಬಿ ತನಕದ ಎಲ್ಲ ಹಂತದ ಕಲಿಕಾ ಕೇಂದ್ರಗಳಲ್ಲಿ ಕನ್ನಡವನ್ನು ಕಲಿಸೋದು, ಕಲಿಯೋದು, ಪರೀಕ್ಷೆ ಬರ್ದು ಪಾಸಾಗೋದನ್ನು ಕಡ್ಡಾಯ ಮಾಡಬೇಕು. ಇಷ್ಟೇ ಅಲ್ಲದೆ ಇಲ್ಲಿನ ಉದ್ದಿಮೆಗಳಿಗೆ ತನ್ನಲ್ಲಿ ಕೆಲಸ ಮಾಡೊ ಪರಭಾಷಿಕರಿಗೆ ಕನ್ನಡ ಕಲಿಸೋ ಜವಾಬ್ದಾರೀನಾ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಪರಭಾಷಿಕರನ್ನು ನಾಡಿನ ಮುಖ್ಯವಾಹಿನಿಗೆ ತರಲು ಮುಂದಾಗಬೇಕು. ಕಡಿಮೆ ಅಂದ್ರೆ ಇಷ್ಟಾದ್ರೂ ಆಗಲೇಬೇಕು... ಏನಂತೀ ಗುರು?
4 ಅನಿಸಿಕೆಗಳು:
idu olleya suddi. ellade Kannada beku anta hoDedaaTa maaDi maaDi naanu rosattiddini. idakke kone yavaga?
janarige yavattu buddi baratte? English, Hindi namma baashe alla. Kannada namma sarvasva anta ee kacchaDagaLige yavattu manavarige agatto. hair cutting salon inda hididu software company nallu hodedaadiddene.
bhagavantanalli keLkotini bega sari madappa anta.
ಇದು ವಳ್ಲೇಯಸುದ್ದಿ ಆದರೆ ಪ್ರೈವೇಟ್ ಕಾಲೇಜ್ದವರು ಸುಮ್ಮನೆ ಇರತಾರ? ಪ್ರೈವೇಟ್ ಪ್ರೈಮರಿ ಶಾಲೆಯವರ ಹಾಗೆ ಕೊರ್ಟೆಗೆ ಹೋಗದೆ ಇರತಾರ? ಇದು ವೊಂದು ಹಣ ಮಾಡುವದಂಧೆ ಅಲ್ಲಾ ಅನ್ನೋದು ಸಮಯವೇ ಹೇಳಬೇಕು.
guru
naanu belgium, france, germany gella hogidini
without their language u wont get priority or preference in jobs and it is so compelling situation in there that you will be forced to learn atleast a few words and sentences to push your days.
why go overseas, kongru naadige hodre tamil ilde swalpa kasta anubhavisidini. naavu horagina vottadakke yake baggabeku alva ?
if we dont enforce kannada on those freaks and stop encouraging them in our state, we are going to lose the identity. so awaken people awaken !!!
Naanoo ee suddi odide. aadare, idu summane melnotakke kannada kaDDaaya antha. adakke credit illa. paasaadaroo ok, fail aadaroo ok. idu kannadakke salluva maryaadegintha, ondu reeti nayavanchane ende helabahudu.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!