ಭಾರತದ ಲೋಕಸಭೆಯಲ್ಲಿ ಹಿಂದಿಯಲ್ಲಿ ಮಾತನ್ನಾಡಬೇಕು ಅಂತಾ ಹಿಂದಿ ರಾಜ್ಯಭಾಷೆಯಾಗಿರೋ ಉತ್ತರಪ್ರದೇಶದ ಸಂಸದ ಶ್ರೀ ಮುಲಾಯಂ ಸಿಂಗ್ ಯಾದವ್ ಒತ್ತಾಯಿಸದರಂತೆ ಅನ್ನೋ ಸುದ್ದಿ 16.07.2009ರ ಪ್ರಜಾವಾಣಿಯ ಏಳನೇ ಪುಟದಲ್ಲಿ ವರದಿಯಾಗಿದೆ.
ಎಂಥಾ ಸೋಜಿಗವಪ್ಪಾ ಇದು?
ಇಂಥಾ ಪ್ರಶ್ನೆಗೆ ಮುಜುಗರಕ್ಕೆ ಒಳಗಾದ ಸಚಿವರು ಕನ್ನಡಿಗರಾದ ಜೈರಾಮ್ ರಮೇಶ್ ಅವ್ರು. "ಇದು ಭಾರತದ ಸಂಸತ್ತು, ಲಂಡನ್ನಿನದ್ದಲ್ಲ" ಅಂದ್ರಂತೆ ಯಾದವ್ ಅವ್ರು. ಹಾಗಂದಿದ್ದೇ ತಡ ನಿಜವಾಗ್ಲೂ ಸಚಿವರು ಬುದ್ಧಿವಂತರಾಗಿದ್ದಿದ್ರೆ ಕನ್ನಡದಲ್ಲಿ ಉತ್ತರ ಕೊಡಬೇಕಿತ್ತು. ಆಗ ಮುಲಾಯಂ ಮತ್ತವರಂತಹ ಸಂಸದರು "ಈಗ ಭಾರತ ಒಕ್ಕೂಟಕ್ಕೆ ಖಳೆ ಬಂತು. ಯಾಕಪ್ಪಾ ಅಂದ್ರೆ ಕನ್ನಡ ಕೂಡಾ ಭಾರತದ್ದೇ ಭಾಷೆ, ಕನ್ನಡ ಕೂಡಾ ಹಿಂದಿಯಷ್ಟೇ ಮಾನ್ಯತೆ ಹೊಂದಿದೆ" ಅಂತಾ ಸುಮ್ಮನೆ ಕೂಡ್ತಿದ್ರು ಅನ್ಸುತ್ತೆ!
ಆದ್ರೆ ಸಂಸದರ ಒತ್ತಾಯ, ನೀವು ಭಾರತೀಯ ಸಂಸತ್ತಿನಲ್ಲಿ ಮಾತಾಡ್ತಾ ಇದೀರಾ, ಆದ್ದರಿಂದ ಹಿಂದೀಲಿ ಮಾತಾಡಿ ಅನ್ನೋದಾಗಿತ್ತಲ್ಲಾ? ಭಾರತದ ಸಂಸತ್ತಿನಲ್ಲಿ ಹಿಂದಿಯಲ್ಲಿ ಮಾತ್ರಾ ಮಾತಾಡಿ ಅನ್ನೋ ಒತ್ತಾಯ ಒಕ್ಕೂಟ ವ್ಯವಸ್ಥೆಗೆ ಶೋಭೆ ತಂದೀತಾ ಗುರು!
ಭಾರತ ಎಂಬ ಸಮಾನತೆಯ ಶಿಖರ(?)ವಾದ ದೇಶದಲ್ಲಿ ಎಲ್ಲಾ ಭಾಷೆಗಳೂ ಸಮನಾಗಿರುವಾಗ ಸಂಸತ್ತಿನಲ್ಲಿ ಯಾಕೆ ಹಿಂದಿಯನ್ನು ಮಾತ್ರಾ ಬಳಸಬೇಕು? ಪಂಜಾಬಿ ತಾಯ್ನುಡಿಯ ಪ್ರಧಾನಮಂತ್ರಿಗಳು ಆಗಸ್ಟ್ ಹದಿನೈದರ ಕೆಂಪುಕೋಟೆಯ ಭಾಷಣಾನ ಪಂಜಾಬಿಯಲ್ಲಿ ಮಾಡಿದ ದಿನ, ಭಾರತ ಸರಿಯಾದ ಒಕ್ಕೂಟ ಧರ್ಮ ಪಾಲಿಸಲು ಶುರು ಮಾಡಿದೆ ಅಂತನ್ನಬಹುದು, ಅಲ್ವಾ ಗುರು!!
1 ಅನಿಸಿಕೆ:
ಅದನ್ನೆ ಮೆನಕಾ ಗಾಂಧಿಗೂ ಹೇಳಿದ್ರಂತೆ ಮುಲಯಮ್ ..ಅದಕ್ಕೆ ಆ ಅಮ್ಮ ನಂಗೆ ಬೇಕಾದ ಬಾಷೆಲಿ ನಾನ್ ಮಾತಾಡ್ತೇನೆ ನಿಂದೇನು ಅಂದು ಇಂಗ್ಲೀಷ್ ನಲ್ಲೆ ಮಾತಾಡಿದ್ರಂತೆ ..ಆವಿಷ್ಯ ನಿಮ್ಮ ಕಿವಿ ತಲ್ಪಿಲ್ಲವ ಗುರು?
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!