ಸಂಸದರ ಪ್ರತಿಭಟನೆ ಹುಟ್ಟು ಹಾಕಿರೋ ಪ್ರಶ್ನೆಗಳು!

ಮೊನ್ನೆ ಮೊನ್ನೆ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿತು. ಇದಾದ ನಂತರ ಅಸ್ಸಾಮಿನ ಸಂಸದರು ತಮ್ಮ ರಾಜ್ಯವನ್ನು ಕಡೆಗಣಿಸಲಾಗಿದೆ ಅನ್ನುತ್ತಾ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದ ಸ್ವಾರಸ್ಯಕರ ಘಟನೆ ನಡೀತು ಅಂತಾ 08.07.2009ರ ಕನ್ನಡಪ್ರಭದ ಏಳನೇ ಪುಟದಲ್ಲಿ ಬಂದಿರೋ ಈ ಫೋಟೋ ಹೇಳ್ತಿದೆ. ಇವರು ಯಾವ ಕಾರಣಕ್ಕಾಗೇ ಪ್ರತಿಭಟಿಸಿರಲಿ, ಇಂಥಾ ಸನ್ನಿವೇಶ ನೋಡ್ದಾಗ ಕೆಲವು ಪ್ರಶ್ನೆಗಳು ಹುಟ್ಕೊಂಡಿದ್ದು ಮಾತ್ರಾ ನಿಜಾ ಗುರು!

ಈ ಫೋಟೊ ಹುಟ್ಟುಹಾಕೋ ಪ್ರಶ್ನೆಗಳು!

೧. ಇವರು ಸಂಸತ್ತಿನ ಒಳಗಡೆ ದನಿ ಎತ್ತೋ ಅವಕಾಶ ಇದ್ರೂ, ಬೀದೀಗೆ ಬಂದು ಪ್ರತಿಭಟಿಸೋ ಅಂಥಾ ಪರಿಸ್ಥಿತಿ ಏನು?
೨. ಅಸ್ಸಾಮಿನಂತಹ ಪುಟ್ಟ ರಾಜ್ಯಗಳ ಒಟ್ಟೂ ಸಂಸದರ ದನಿಗೆ ಸಂಸತ್ತಿನ ಒಳಗಡೆ ಬೆಲೆ ಇದೆಯೋ ಇಲ್ಲವೋ?
೩. ಅಸ್ಸಾಮಿನ ಕಥೆ ಇರಲಿ, ಯಾವ ರಾಜ್ಯದ ಸಂಸದರ ಸಂಖ್ಯೆ ಹೆಚ್ಚೋ ಆಯಾ ರಾಜ್ಯಗಳ ದನಿ ಮಾತ್ರಾ ಭಾರತದ ಸಂಸತ್ತಿನ ಒಳಗೆ ಪರಿಣಾಮಕಾರಿಯೇ?
೪. ಯಾವುದೇ ವಿಷಯವಿರಲಿ, ಅದರ ಬಗ್ಗೆ ತನ್ನ ಹಕ್ಕು, ನಿಲುವು, ಅಭಿಪ್ರಾಯಕ್ಕೆ ಹೆಚ್ಚು ಸಂಸದರಿರೋ ರಾಜ್ಯಕ್ಕಿರುವಷ್ಟು ತೂಕವೇ/ ಬಲವೇ ಕಡಿಮೆ ಸಂಸದರ ಚಿಕ್ಕ ರಾಜ್ಯಕ್ಕೂ ಇದೆಯೇ?
೫. ಭಾರತೀಯ ಸಂಸತ್ತಿನಲ್ಲಿ ಒಂದು ರಾಜ್ಯದ ಒಟ್ಟೂ ಸಂಸದರ ಸಂಖ್ಯೆಯೇ ನಿರ್ಣಾಯಕವಾದರೆ ಪುಟ್ಟರಾಜ್ಯಗಳಿಗೆ ಅನ್ಯಾಯವಾಗದೇ?

ಗುರುಗಳೇ, ಉತ್ರ ನಮ್ಮುನ್ ಕೇಳಬೇಡಿ. ಪ್ರಶ್ನೆ ಮಾತ್ರಾ ಕೇಳ್ಕೊಳಿ... ಹಾಗೇ ಸುಮ್ಮನೆ!!

1 ಅನಿಸಿಕೆ:

Anonymous ಅಂತಾರೆ...

ಕರ್ನಾಟಕ ಸೇರಿ ದೇಶದ ಎಲ್ಲಾ ರಾಜ್ಯಗಳಿಗೂ ಜಮ್ಮು ಮತ್ತು ಕಾಶ್ಮೀರದ ಮಾದರಿಯಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಜಾರಿಗೆ ತರಬೇಕು. ಹಣಕಾಸು, ಸೈನ್ಯ, ವಿದೇಶಾಂಗ ವ್ಯವಹಾರ ಬಿಟ್ಟು ಬೇರೆ ಎಲ್ಲಾ ವಿಷಯಗಳಲ್ಲೂ ರಾಜ್ಯಗಳಿಗೆ ಸಂಪೂರ್ಣ ಸ್ವಾಯುತ್ತತೆ ಇರಬೇಕು. ಹಾಗಿದ್ದಲ್ಲಿ ಮಾತ್ರ ಎಲ್ಲಾರಿಗೂ ಸಮಾನ ಅವಕಾಶ ಮತ್ತು ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ಪ್ರತಿಯೊಂದು ರಾಜ್ಯವೂ ಅಸ್ಸಾಂ ಆಗುವುದರಲ್ಲಿ ಸಂದೇಹವೇ ಇಲ್ಲ.

- ಬ್ಯಾಟರಾಯ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails