ಮತ್ತದೇ ಬಜೆಟ್ಟು: ಅದೇ ಹಳಿಯೂ ! ಅದೇ ರೈಲೂ!!


ಹೊಸ ರೈಲು ಮಂತ್ರಿಗಳು ಈ ಬಾರಿ ಬಜೆಟ್ಟಲ್ಲಿ ಮತ್ತದೇ ಹಳೇ ಹಳಿ ಮೇಲೆ ಮತ್ತವೇ ರೈಲು ಬುಟ್ಟವ್ರಲ್ಲಾ ಗುರು! ಇರಲಿ, ಮೊದಲಿಗೆ ಇವ್ರು ಮಾಡಿರೋ ಒಳ್ಳೇ ಕೆಲಸಾನ ಹೊಗಳ್ಬುಡಮಾ...ಆಮೇಲೆ ಮಾಡಬಹುದಾಗಿದ್ರ ಬಗ್ಗೆ ಮಾತಾಡಮಾ.

ಮುನಿಯಪ್ಪನವ್ರ ಒಳ್ಳೇ ಕೆಲ್ಸ!

ಈ ಸಲ ರೈಲ್ ಬಜೆಟ್ಟಲ್ಲಿ ಬೆಂಗಳೂರಿನ, ಮಂಗಳೂರಿನ ನಿಲ್ದಾಣಗಳ್ನ ವಿಶ್ವದರ್ಜೆಗೆ ಏರಿಸೋ ಯೋಜನೆ ಹಾಕಂಡಿರೋದು ಒಳ್ಳೇದು. ಬೀದರ, ಲೋಂಡಾ ನಿಲ್ದಾಣಗಳ್ನ ಮಾದರಿ ನಿಲ್ದಾಣ ಮಾಡ್ತೀವಿ ಅಂದಿರೋದು ಪಸಂದಾಗೈತೆ. ಬೆಂಗಳೂರು - ಹುಬ್ಬಳ್ಳಿ - ಸೊಲ್ಲಾಪುರದ ನಡುವೆ ಹೊಸ ಫಾಸ್ಟ್ ಪ್ಯಾಸೆಂಜರ್ ರೈಲು ಹಾಕ್ತಿರೋದು ಸ್ಸೂಪರ್! ಬೆಂಗಳೂರು-ಹುಬ್ಬಳ್ಳಿ ರೈಲನ್ನು ಧಾರವಾಡವರೆಗೆ ಓಡ್ಸೋದು, ಬೆಂಗಳೂರು-ಶಿವಮೂಗ್ಗ ಇಂಟರ್ ಸಿಟಿ ರೈಲು, ಇನ್ನು ಹೊಸಮಾರ್ಗದ ಸಮೀಕ್ಷೆ ವಿಷಯಕ್ ಬಂದ್ರೆ ಹರಿಹರ-ಶಿವಮೂಗ್ಗ ರೈಲು ಸಂಚಾರ, ಕೊಪ್ಪಳ-ಆಲಮಟ್ಟಿ, ಗದಗ್- ಹಾವೇರಿ, ಆಲಮಟ್ಟಿ -ಯಾದಗಿರಿ ಮಾರ್ಗ, ಆನೇಕಲ್- ಬಿಡದಿ ಮಾರ್ಗಗಳ ಸಮೀಕ್ಷೆ... ಇವೆಲ್ಲಾ ಮಾಡಕ್ ಹೊಂಟಿರೋದು ಒಳ್ಳೇದೆ. ಇವೆಲ್ಲಾ ಯೋಜನೆಗಳ್ನ ಕರ್ನಾಟಕಕ್ಕೆ ಕೊಡಮಾಡಿರೋ ಮುನಿಯಪ್ಪನವರಿಗೆ ಇಡೀ ಕನ್ನಡನಾಡಿನ ಪರವಾಗಿ ಅಭಿನಂದನೆ ಹೇಳ್ಬುಡಮಾ ಗುರು!

ಆದ್ರೆ ಇದ್ಯಾಕ್ ಇಂಗ್ ಮಾಡ್ಬುಟ್ರಿ?

ಅಲ್ಲಾ, ಪೇಪರ್ ತುಂಬಾ ಕರ್ನಾಟಕಕ್ ಎಂಟು ಹೊಸ ರೈಲು ಅಂತ ಹಾಕಿದಾರೆ ಅಂತಾನೂ, ಟೀವೀ ತುಂಬಾ "ಅಯ್ಯಯ್ಯೋ ಅನ್ಯಾಯ ಅನ್ನೋ ಹಂಗಿಲ್ಲಾ" ಅಂತಾನೂ, ಅಂತರ್ಜಾಲ ಪತ್ರಿಕೆಗಳು ಕಣ್ಣು ಬಿಟ್ಟ ಕೇಂದ್ರ ಅಂತಾನೂ ಅನ್ನೋ ಹಂಗೆ ಚಮಕ್ ಮಾಡ್ಬುಟ್ರಲ್ಲಾ... ಮಾನ್ಯ ಮುನಿಯಪ್ಪನವ್ರೇ, ಒಸಿ ನೀವೇ ಹೇಳ್ಬುಡಿ, ಈ ಕೆಳಗಿನ ಪ್ರಶ್ನೆಗಳ್ಗೆ ಉತ್ರವಾ!
೧. ಕಾರವಾರ - ಮುಂಬೈ ರೈಲು, ಮಂಗಳೂರು - ಚೆನ್ನೈ - ಪುದುಚೇರಿ ರೈಲು, ಬೆಂಗಳೂರು - ಮಂಗಳೂರು - ಕಣ್ಣೂರು ರೈಲು, ಹೌರಾ - ಬೆಂಗಳೂರು ರೈಲುಗಳು ಕರ್ನಾಟಕದಲ್ಲಿ ಎಷ್ಟು ಕಿಲೋಮೀಟರ್ ದೂರ
ಓಡುತ್ತವೆ?
೨. ಹಾಕಿರೋ ಹೊಸ ರೈಲುಗಳೆಲ್ಲಾ ಹೌರಾ, ಅಮೇಥಿ, ತಿರುವನಂತಪುರಂ, ಪುದುಚೆರಿ, ಚೆನ್ನೈ, ಮುಂಬೈ, ಕಣ್ಣೂರು... ಹೀಗೆ ಹೊರರಾಜ್ಯಗಳಿಗೇ ಯಾಕೆ ಹೋಗುತ್ವೆ?
೩. ಕರ್ನಾಟಕದಲ್ಲಿರೋ ಬಂದರು ನಗರಗಳಿಗೆ ಸಂಪರ್ಕ ಬಲಪಡಿಸೋದು ನಮ್ಮ ನಾಡಿಗೆ ಒಳ್ಳೇದೋ,
ಅಥ್ವಾ ಮುಂಬೈ ಮತ್ತು ಚೆನ್ನೈಗಳಿಗೆ ಮತ್ತಷ್ಟು ರೈಲು ಹಾಕೋದು ಒಳ್ಳೇದೋ?
೪. ಕರ್ನಾಟಕದಲ್ಲಿ ನಮ್ಮ ಊರುಗಳಿಗೆ ಸಂಪರ್ಕ ಕಲ್ಪಿಸೋ ರೈಲುಮಾರ್ಗಗಳು, ರೈಲುಗಳು, ಹೊಸ ಯೋಜನೆಗಳೂ ಎಷ್ಟಿವೆ, ತಮ್ಮ ಬಜೆಟ್ಟಿನಲ್ಲಿ?
೫. ಬೆಂಗಳೂರು - ಮೈಸೂರು ಜೋಡಿಮಾರ್ಗ ಎಲ್ಲಿ ತಂಕ ಬರಲಿದೆ, ನಿಮ್ಮ್ ಬಜೆಟ್ಟಲ್ಲಿ?
೬. ಮಮತಕ್ಕ ತಮ್ಮ ರಾಜ್ಯಕ್ಕೆ ಒಂದು ಕೋಚ್ ಫ್ಯಾಕ್ಟರಿ ಹಾಕುಸ್ಕೊಂಡ್ರಲ್ಲಾ, ತಾವು ಯಾವ ಫ್ಯಾಕ್ಟರಿ ತರಲಿದ್ದೀರಿ ಕರ್ನಾಟಕಕ್ಕೆ?
೭. ರೈಲ್ವೇಯ ಈ ಬಜೆಟ್ಟು ಎಷ್ಟು ಉದ್ಯೋಗಗಳನ್ನು ಹುಟ್ಟುಹಾಕಿದೆ ಕರ್ನಾಟಕದಲ್ಲಿ?
೮. ಕೊಡಗು, ಚಿಕ್ಕಮಗಳೂರಿನ ನೆಲದ ಮೇಲೆ ರೈಲು ಹಳಿ ಹಾಕಬಾರದು ಅನ್ನೋ ನಿಯಮವೇನಾದರೂ ನಿಮ್ಮ ಇಲಾಖೆಯಲ್ಲಿದೆಯೇ? ಇದ್ದರೂ ಅದನ್ನು ಬದಲಾಯಿಸೋ ಕೆಲಸ ನಿಮ್ಮ ಕಾಲದಲ್ಲೇ ಆದೀತಾ?
೯. ರೈಲು ಹಳಿ, ನಿಲ್ದಾಣಗಳಿದ್ದೂ ಬರೀ ಒಂದೆರಡು ಜಿಲ್ಲೆಗಳಿಗೆ ಮಾತ್ರಾ ಸಂಪರ್ಕ ಇರೋ ಚಾಮ್ರಾಜನಗರ, ಉಡುಪಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ದಕ್ಷಿಣಕನ್ನಡ ಬೀದರ್ ಮೊದಲಾದ ಜಿಲ್ಲೆಗಳ ಜಾಲ ಹೆಚ್ಸೋದಕ್ಕೆ ಏನು ಮಾಡಲಿದೆ ನಿಮ್ಮ ಬಜೆಟ್?
೧೦. ಶಿವಮೊಗ್ಗದಿಂದ ಕರ್ನಾಟಕದ ಉತ್ತರ ಭಾಗಗಳನ್ನು ಜೋಡಿಸೋ ರೈಲು ಮಾರ್ಗಗಳ ಅಗತ್ಯವಿಲ್ಲವೇ?
೧೧. ತಡೆರಹಿತ ರೈಲು, ಬೆಂಗಳೂರು - ಮಂಗಳೂರು ಹಗಲು ರೈಲು, ಮಂಗಳೂರು ರೈಲನ್ನು ಕಾರವಾರದತನಕ, ಬಾಗಲಕೋಟೆ - ಕುಡುಚಿ, ದಾವಣಗೆರೆ-ತುಮಕೂರು ಜೋಡಿಮಾರ್ಗ, ಅರಸಿಕೆರೆ-ಬೀರೂರು ಜೋಡಿಮಾರ್ಗ ಇವೆಲ್ಲಾ ಮಾಡಲಿಕ್ಕಾಗದ ಯಾವ ಕಾರಣ ಇತ್ತು ಮಂತ್ರಿಗಳೇ?
ಏನೋ ತಕ್ಷಣಕ್ ತೋಚಿದ್ ಒಂದ್ ನಾಕು ಪ್ರಶ್ನೆ ಕೇಳಿದೀವಿ, ಅಷ್ಟೆಯಾ! ಇದನ್ನೆಲ್ಲಾ ನೋಡಿದಮೇಲೂ ನಿಮಗೆ ನಿಮ್ ಬಜೆಟ್ ಕರ್ನಾಟಕಕ್ಕೆ ಬಂಪರ್ ತಂದುಕೊಟ್ಟಿದೆ ಅನ್ಸುತ್ತಾ? ಗುರುಗಳೇ!!

4 ಅನಿಸಿಕೆಗಳು:

ಮುರಳಿ ಅಡಿಗಾ ಅಂತಾರೆ...

ದುರಂತ ಅಂದ್ರೆ ಮಂಗಳೂರಿಗೆ ಇದ್ದ ಒಂದೇ ಒಂದು ಟ್ರೈನ್ ಅನ್ನು ಕೇರಳದ ಕಣ್ಣೂರಿನವರೆಗೆ ವಿಸ್ತರಿಸಿರುವುದು. ಇದರಿಂದ ಮಂಗಳೂರಿನವರಿಗೆ ಇನ್ನ ಮೇಲೆ ತತ್ಕಾಲ್ ಬುಕಿಂಗ್ ಮಾಡೋ ಹಾಗಿಲ್ಲ ಯಾಕಂದ್ರೆ ಆ ವ್ಯವಸ್ಥೆ ಇರೋದು ರೈಲು ಶುರು ಆಗೋ ಸ್ಟೇಶನ್ ಗೆ ಮಾತ್ರ (ಕಣ್ಣೂರು ಇನ್ನ ಮೇಲೆ). ಇನ್ನೂ ಬುಕಿಂಗ್ ಅಲ್ಲೂ ಬರೀ ೨೦% ಮಾತ್ರ ಮಂಗಳೂರಿಗೆ ಸಿಗೋದು. ಯಾಕಂದ್ರೆ ಕೇರಳದ ಕಣ್ಣೂರಿನಿಂದ, ಕಾಸರಗೋಡಿನವರೆಗೆ ಬರೋ ೪ ಸ್ಟೇಶನ್ ನಲ್ಲಿ ಉಳಿದ ೮೦% ಟಿಕೆಟ್ ಇನ್ನ ಮೇಲೆ ಹಂಚತಾರೆ.

ಕರವೇ ಈ ಕಡೆನೂ ಸ್ವಲ್ಪ ಗಮನ ಹರಿಸಿ, ಮಂಗಳೂರಿನಲ್ಲಿ ದೊಡ್ಡ ಪ್ರತಿಭಟನೆ ಮಾಡಬೇಕು. ಆ ಮೂಲಕ ಅಲ್ಲಿನ ಕನ್ನಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

sanjeev s ಅಂತಾರೆ...

houdu,, KRV avaru idanna tagondu dodda issue maadbeku,, last time, group D huddegala vicharadalli avarindaane namage nyaya sikkiddu..

Anonymous ಅಂತಾರೆ...

ಚಿಕ್ಕಮಗಳೂರಿನ ನೆಲದ ಮೇಲೆ ರೈಲು ಹಳಿ
yavaga

Suraj ಅಂತಾರೆ...

Viparysa andare..Mangalore inda Trivendram ge dina 5 trains ide. mangalore inda bangalore ge dina 1 (yeega 0.3 ) train aste.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails