ಹಿಂದೀ ಶೂಲಕ್ಕೆ ಬಲಿಯಾಗದಿರಲಿ ಬಿ.ಎಂ.ಟಿ.ಸಿ!!


ಬೆಂಗಳೂರಿನ ಬಸ್ಸುಗಳಲ್ಲಿ ನೀವೇನಾದ್ರು ಪ್ರಯಾಣ ಮಾಡೋದಾದ್ರೆ ಇನ್ಮುಂದೆ ನೀವು ಕಣ್ಮುಚ್ಕೊಂಡು ನಿದ್ದೆ ಮಾಡ್ಬೋದು. ಗಳಿಗೆಗೊಂದ್ಸಲ ಈಗ ಬಸ್ಸೆಲ್ಲಿದೆ ಅಂತಾ ಬೆಚ್ಚಿಬಿದ್ದು ಎದ್ದು ನೋಡೋ ಗೋಳು ತಪ್ಪುತ್ತೆ. ಈಗ ಈ ಮಾಹಿತೀನಾ ಬಸ್ಸಲ್ಲೇ ತಿಳಿಸಿಕೊಡೋ ಯೋಜನೇನಾ ಜಾರಿಗೆ ತರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂ) ಮುಂದಾಗಿದೇ ಅನ್ನೋ ಸುದ್ದೀನಾ ಕನ್ನಡಪ್ರಭದೋರು 17.07.2009ರ ಸಂಚಿಕೆಯ 5ನೇ ಪುಟದಲ್ಲಿ ಹಾಕಿದ್ದಾರೆ! ಆದ್ರೆ ಈ ಸುದ್ದಿಯ ಸಿಹಿಗಡುಬು ಗಂಟಲಲ್ಲೇ ಕಚ್ಕೊಂಡು ಸಿಹೀನ ಸವಿಯಕ್ ಆಗ್ದಂಗೆ ಮಾಡಿರೋದು ಇದು ಮೂರು ಭಾಷೇಲಿರುತ್ತೆ ಅನ್ನೋ ಸುದ್ದಿ!!
ಗಂಟಲಲ್ಲಿ ಸಿಕ್ಕೊಂಡ ಕಡುಬು!

ಜನಕ್ಕೆಲ್ಲಾ ಸಹಾಯ ಆಗಬೇಕೂಂತಾ ಈ ಯೋಜನೆ ಮಾಡಿರೋದು ಒಳ್ಳೇದೆ. ಆದರೆ ಇದರಂತೆ ಇನ್ಮೇಲೆ ಬಸ್ಸು ಎಲ್ಲಿಗೆ ಬಂದಿದೆ? ಮುಂದಿನ ನಿಲ್ದಾಣ ಯಾವ್ದು? ಇತ್ಯಾದಿ ಮಾಹಿತಿಗಳನ್ನು ಮೂರು ಮೂರು ಭಾಷೆಗಳಲ್ಲಿ ಹೇಳುಸ್ತಾರಂತೆ! "ಕನ್ನಡದೋರಿಗೆ ಕನ್ನಡ, ಕನ್ನಡ ಬರದೇ ಇರೋರಿಗೆ ಇಂಗ್ಲಿಷ್ ಸಾಲದಾ? ಇನ್ನು ಮೂರನೇ ಭಾಷೆ ಯಾಕೆ? ಹಾಗೆ ಮೂರನೇ ಭಾಷೆ ಇದ್ದರೂ ಅದ್ಯಾವ್ದಾಗಿರುತ್ತೆ?" ಅನ್ನೋ ಪ್ರಶ್ನೆಗಳು ನಮ್ಮ ಜನರ ತಲೇಲಿ ಹುಟ್ಕೊಳ್ಳೋಕೆ ಮೊದಲೇ "ಆ ದೇವಭಾಷೆ ಇನ್ಯಾವುದೂ ಅಲ್ಲಾ, ಹಿಂದಿ" ಅಂದಿದೆ ಬಿ.ಎಂ.ಟಿ.ಸಿ.
"ಇದೇನು ಗುರು? ಬೆಂಗಳೂರಲ್ಲಿ ಕನ್ನಡದೋರನ್ನು ಬಿಟ್ಟರೆ ಬರೀ ಹಿಂದಿಯೋರೇ ಹೆಚ್ಚಿರೋದಾ? ಬೆಂಗಳೂರಲ್ಲಿರೋ ತಮಿಳ್ರು, ತೆಲುಗ್ರು, ಮಾರವಾಡಿಗಳು, ಮರಾಠಿಗರು... ಎಲ್ಲಾ ಏನು ಪಾಪ ಮಾಡಿದ್ರು? ಯಾಕೆ ಆ ಭಾಷೆಗಳಲ್ಲೂ ಪ್ರಕಟಣೆ ಇರಬಾರದು? ಯಾಕೆ ಹಿಂದೀಲಿ ಮಾತ್ರಾ ಇರಬೇಕು" ಅಂತೆಲ್ಲಾ ನಮ್ಮ ಜನರು ಕೇಳದೆ "ಭಾರತದ ಒಗ್ಗಟ್ಟಿಗಾಗಿ ಹಿಂದಿಯಲ್ಲಿ ಇರಬೇಕಾದ್ದೇ ಸರಿ" ಅಂತ ಒಪ್ಕೊಳ್ಳೋ ಹಾಗೇ ಹುಸಿ ರಾಷ್ಟ್ರೀಯತೆಯ ಹುಳಾನಾ ಕನ್ನಡದೋರ ತಲೇಲಿ ಸ್ವಾತಂತ್ರ ಬಂದಾಗಿಂದ ಸಕತ್ತಾಗಿ ಬಿಡಲಾಗುತ್ತಿದೆ.
ಹಿಂದಿಯನ್ನು ಬಲ್ಲ ಕನ್ನಡೇತರರು ಅಲ್ಪ-ಸ್ವಲ್ಪ ಕನ್ನಡ ಕಲಿತು, ಮುಖ್ಯ ವಾಹಿನಿಗೆ ಬರಲು ನೆರವಾಗಬಹುದಾದ ಈ ಬಸ್ಸುಗಳನ್ನು ಹಿಂದಿಗೇ ಮಣೆ ಹಾಕಲು ಉಪಯೋಗಿಸಲು ಹೊರಟಿರುವ ಈ ಸಂಸ್ಥೆಗೆ ಗ್ರಾಹಕರಾಗಿ ನಾವು ಬುದ್ಧಿ ಹೇಳಬೇಕು ಗುರು. ನೀವೇ ಯೋಚಿಸಿ ನೋಡಿ, ಇವತ್ತು ಬೋರ್ಡು, ಅನೌನ್ಸುಮೆಂಟು ಬರೋದಾದ್ರೆ, ಇನ್ಮುಂದೆ ಬೆಂಗಳೂರಿನ ಬಿ.ಎಂ.ಟಿ.ಸಿಯಲ್ಲಿ ಚಾಲಕ/ ನಿರ್ವಾಹಕರ ಕೆಲಸ ಬೇಕು ಅಂದ್ರೆ ಹಿಂದಿಯನ್ನು ಕಲಿತರಬೇಕಾದ್ದು ಕಡ್ಡಾಯ ಅನ್ನೋ ವ್ಯವಸ್ಥೆ ಹುಟ್ಕೊಳುತ್ತೆ. ವಲಸಿಗ ನಾಡಿನ ಮುಖ್ಯವಾಹಿನಿಯಲ್ಲಿ ಸೇರೋಕೆ ತೊಡಕಾಗಿರೋ ಈ ಯೋಜನೇನಾ ಸರ್ಕಾರ ತಕ್ಷಣ ಕೈಬಿಡದಿದ್ರೆ ನಾಳೆ ನಮ್ಮೂರ ನಗರಪಾಲಿಕೆ ಆಡಳಿತದಲ್ಲೂ ಹಿಂದಿಯನ್ನು ತ್ರಿಭಾಷಾ ಸೂತ್ರದ ನೆಪದಲ್ಲಿ ತೂರಿಸೋದ್ರಲ್ಲಿ ಅನುಮಾನಾ ಇರಲ್ಲ.
ನಾಳೆ ಏನಾದೀತು?

ಮುಂದೆ ತ್ರಿಭಾಷಾ ಸೂತ್ರವನ್ನು ಒಪ್ಪಿರೋದ್ರಿಂದ ನಾವು ಹಿಂದೀಲೂ ಹಾಕ್ತೀವಿ. ಇದ್ರಿಂದ ನಿಮಗೇನು ತೊಂದರೆ? ಕನ್ನಡದಲ್ಲೂ ಹೇಳ್ತಿದೀವಲ್ಲಾ? ಅನ್ನೋ ವಾದ ಕೇಳೋ ದಿನ ಬಂದೀತು! ಇನ್ಮೇಲೆ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಆಸ್ತಿ ತೆರಿಗೆ ಅರ್ಜಿ, ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಗಳು, ವಿಧಾನ ಸೌಧ, ಗ್ರಾಮ ಪಂಚಾಯ್ತಿ ಎಲ್ಲಾ ಕಡೆ ತ್ರಿಭಾಷಾ ಸೂತ್ರಾನ ಜಾರಿ ಮಾಡ್ಬೇಕು ಅನ್ನೋ ದಿನವೂ ಬಂದೀತು! ಘನ ಕರ್ನಾಟಕ ರಾಜ್ಯ ಸರ್ಕಾರವು, ನಾಡಿಗೆ ಮುಳುವಾಗಿರೋ ತ್ರಿಭಾಷಾ ಸೂತ್ರಕ್ಕೆ ಈಗಲೂ ಎಳ್ಳೂನೀರು ಬಿಡದಿದ್ರೆ... ಬೆಂಗಳೂರಿಗರು ಕನ್ನಡಕ್ಕೆ ಎಳ್ಳುನೀರು ಬಿಡಬೇಕಾಗುತ್ತೆ!! ಆದ್ರಿಂದ ನಾವೂ ನೀವು ಎಲ್ಲಾ ಸರ್ಕಾರಕ್ಕೆ ನೀವು ಇಡಕ್ ಹೊರಟಿರೋ ಈ ತಪ್ಪು ಹೆಜ್ಜೇನಾ ಹಿಂತೊಗೊಳ್ಳಿ ಅನ್ನಬೇಕಾಗಿದೆ ಗುರು! ತ್ರಿಭಾಷಾ ಸೂತ್ರದ ಸೋಗಿನ ಹಿಂದಿ ಶೂಲಕ್ಕೆ ಬಲಿಯಾಗದಿರಲಿ ಬಿಎಂಟಿಸಿ ಅನ್ನಬೇಕಾಗಿದೆ.
ಕೊನೆಹನಿ : ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ವಿಶೇಷವಾಗಿ ರೈಲ್ವೇಯಲ್ಲಿ ಮೊದಲು ತ್ರಿಭಾಷಾ ಸೂತ್ರಾ ಇದೆಯಾ? ಊಹೂಂ... ಸೂತ್ರಾ-ಪಾತ್ರಾ ಇವೆಲ್ಲಾ ರಾಜ್ಯಸರ್ಕಾರಕ್ಕೆ ಮಾತ್ರಾನಾ, ಕೇಂದ್ರಕ್ಕೆ ಅನ್ವಯವಾಗ್ತಿಲ್ಲ. ಇಷ್ಟಕ್ಕೂ ಸರಿಯಾದ ಒಕ್ಕೂಟದಲ್ಲಿ ಯಾಕೆ ತ್ರಿಭಾಷಾ ಸೂತ್ರಾ ಬೇಕಾಗಿದೆ? ಕನ್ನಡನಾಡಲ್ಲಿ ಕನ್ನಡಿಗರಿಗೆ ಕನ್ನಡವೂ, ಕನ್ನಡ ಬರದೇ ಇದ್ದೋರಿಗೆ ಇಂಗ್ಲೀಷು ಸಾಲದಾ? ಹಿಂದೆ ಸಂಸದರೊಬ್ಬರು ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಾ "ದೊಡ್ದ ಬೆಕ್ಕಿಗೆ ದೊಡ್ಡ ಕಿಂಡಿ, ಸಣ್ಣ ಬೆಕ್ಕಿಗೆ ಸಣ್ಣಕಿಂಡಿ ಯಾಕೆ? ನ್ಯಾಷನಲ್ ಲೆವೆಲ್ಲಿಗೆ ಹಿಂದಿ, ಇಂಟರ್ ನ್ಯಾಷನಲ್ ಲೆವೆಲ್ಲಿಗೆ ಇಂಗ್ಲೀಷ್ ಯಾಕೆ? ಇಂಗ್ಲಿಷ್ ಅನ್ನೋ ದೊಡ್ಡ ಕಿಂಡಿ ಸಾಕು" ಅಂದಿದ್ರಂತೆ ಗುರು!

10 ಅನಿಸಿಕೆಗಳು:

ಮೈ ಕನ್ನಡ್ ಹು ಅಂತಾರೆ...

ಹೌದು ಗುರು ಸಕ್ಕತ್ತಾಗಿ ಹೇಳಿದ್ದೀರಾ. ಬ್ಲಾಗ್ ಗಳಲ್ಲಿ ಎಲ್ಲರೂ ಆಗ್ಲೆ ಇದೇ ವಿಷಯ ಚರ್ಚೆ ಮಾಡ್ತಿದ್ದಾರೆ. ಇಲ್ಲಿ ನೋಡಿ http://www.sampada.net/blog/priyankks/19/07/2009/22745

ಹಿ೦ದಿಯನ್ನು ಕನ್ನಡಿಗರು ಒಪ್ಪಿಕೊಳ್ಳುವ ಹಾಗೆ ಹುನ್ನಾರ ನಡೆಸುತ್ತಿರುವಹಾಗಿದೆ. ಒಮ್ಮೆ BMTC ನಲ್ಲಿ ಹಿ೦ದಿಯನ್ನು ತ೦ದುಬಿಟ್ಟರೆ ಮು೦ದೆ, ಪಾಲಿಕೆಗಳಲ್ಲಿ ಹಿ೦ದಿಯ ಬಳಕೆಯನ್ನು ತರಬಹುದು. ಆಮೇಲೆ ಉತ್ತರ ಭಾರತದವರಿಗೆ ನಮ್ಮೂರಿನ ಆಡಳಿತ ಕೊಟ್ಟು ಅವರಿ೦ದಿ ಹಿ೦ದಿ ಹೇರಿಸಿಕೊಳ್ಳಬಹುದು. ಆಮೇಲೆ KSRTC ನಲ್ಲಿ, ಆಮೇಲೆ ಮೆಟ್ರೋ ನಲ್ಲಿ... ಹೀಗೆ ಮು೦ದೊದು ದಿನ ನಮ್ಮ ರಾಜ್ಯದ ಆಡಳಿತವನ್ನು ಬೇರೆಯವರಿಗೆ ಒಪ್ಪಿಸಿ ಅತ೦ತ್ರರಾಗೋದು ಖ೦ಡಿತ.

Anonymous ಅಂತಾರೆ...

En madodu .. bari novu anubhavisode aithu... enadru yake madbaradu !! navella koodi ...!!

idella kendra sarkarada duddininda rajya sarkara gaddigege bandiddurinda anisutte.

Nam CM devaru en mudde tindu malgiddra???

guru ಅಂತಾರೆ...

NEEVU HELIDDU SATHYA NANU ISTONDU YOCHANE MADIRLILLA NANU ELLAR TARA ADARALENU TAPPU ANTHA ANKONDIDDE TUMBA THANKS

admin ಅಂತಾರೆ...

ಟಾಟಾದವರ "ಇನ್ ನರ್ಮ್" ಬಸ್ಸುಗಳ ಬೋರ್ಡುಗಳು ಬರೀ ಇಂಗ್ಲೀಷಿನಲ್ಲಿ ಇವೆ, ಯಾಕೆ? :-( ಬಿ.ಎಮ್.ಟಿ.ಸಿ ಕನ್ನಡವನ್ನು ಕಡೆಗಣಿಸುತ್ತಿದೆ ಗುರು.

Anonymous ಅಂತಾರೆ...

ಏನ್ಗುರು ಇದೆಂತಾ ಅನ್ಯಾಯ ಇದು, ಅವನ್ನೋಡು ಕೇಟ್ ಬೋರ‍್ಡಿನ್ ಟಾಟಾ ಬಸ್ಸಲ್ ಕೂತು, ಅವರಮ್ಮನ್ ಬಾಷೇಲೇ ಮಾತಡ್ತಾನೆ. ಇಲ್ಲಿ ತಾಯ್ನುಡಿಗೆ ಮಾತ್ರ ಜಾಗ ಇರೋದು ಅಂತ ಅವನ್ಗೆ ಹ್ಯಾಗೆ ಕಲಿಸೋದು? ಬೇರೆ ಊರಿನಲ್ಲಿದ್ರೂ ನಾನ್ನೊಡು, ಕೆಲಸಕ್ಕೆ ಹೋದಾಗ ಮಾತ್ರ ಆ ಊರಿನ್ನುಡೀಲ್ ಮಾತಾಡೊದ್ ಬಿಟ್ಟು ಮಿಕ್ಕಿದ್ ಟೈಮ್ ನಲ್ಲೇಲ್ಲಾ ಕನ್ನಾಡಾನೇ ಮಾತಾಡೋದು. ಬೀರ್ ಕುಡಿಯೋವ ಸಿಗರೇಟ್ ಸೇದ್ತ ಸೇದ್ತಾ ಕುಷಿಯಾದಗ ನಾನು ಕನ್ನಡದಲ್ಲೇ ’ಅಹಾ’ ಅಂತೀನಿ. ಇವನಿಲ್ಲಿಗೇ ಬರೋಕೆ ಕಾರಣ ಅವನ ಕೆಲ್ಸ. ಇವನಿಗೆ ಕೇಲ್ಸ ಕೊಟ್ಟಿರೋನ್ ನೋಡು ಅವನು ಪಿಕನಾಸಿ ಇಂಗ್ಲಿಷ್ನಲ್ಲೇ ಕೆಲಸ ನಡೆಯೋಂತ ಕಂಪನಿ ತಂದಿದಾನೆ. ನಾನಿರೋ ಉರನಲ್ಲಂತೂ ಲೋಕ ಬಾಷೇಲೆ ಕೆಲಸ ಮಾಡಿಸ್ತಾರೆ. ಇವನೂಬೇಡ ಇವನ ಕೇಲಸದೌನೂ ಬೇಡ, ಇನ್ನುಮೇಲೇ ಹಳೇ ಕಾಲದ ತರ {ಇಂಗ್ಲೀಷನೋನು, ಮುಸ್ಲಿಮ್ಮೂ ನಮ್ಮುರಿಗೆ ದಾಳಿ ಇಡೊಕೂ ಮೊದಲು, ಆರ್ಯ ಅಂತ ಸಂಸೃತ ಹೇರೋಕೂ, ದೇಷಾನೆಲ್ಲಾ ಒಂದು ಮಾಡ್ತೀವೀ ಅಂತ ಹಿಂದಿ ಹೇರೋಕೂ ಮುಂಚಿನ್ ಕಾಲ} ಕನ್ನಡ ಬಿಟ್ಟು ಬೇರೆ ಬಾಷೆ ಕೆಲಸದ್ ಕಂಪನೀನೆ ತರ್ಬಾರ್ದೂ ಅಂತ ಮಾಡೋಣ. ಆಗ ಎಲ್ಲಾರು ತಾಯ್ನುಡಿಲೇ ಮಾತಡ್ಬೇಕಾಗುತ್ತೆ, ಅವರ ಮಾತೃಬಾಷೇ, ಮದರ್ ಟನ್ಗೂ ಎಂತೇನೇನೊ ಹೇಳಿ ಬೇರೆ ಬಾಷೆಲಿ ಮಾತೋಡೊದೆ ನಿಂತೋಗುತ್ತೇ.

ಕ್ಲಾನ್ಗೊರೌಸ್ ಅಂತಾರೆ...

ಕನ್ನಡಿಗರೇ,
ಅದು 'ಇನ್ ನರ್ಮ್' ಅಲ್ಲ 'ಜೆ. ಏನ್ ನರ್ಮ್' , ಜವಾಹರ್ಲಾಲ್ ನೆಹರು ಹೆಸರಿನಲ್ಲಿ ಕೇಂದ್ರ ಸರಕಾರದ ಸ್ಕೀಮ್ . ಹಿಂದಿ ಹೇರೋಕ್ಕೆ ಆಗ್ಲಿಲ್ಲ ಅದುಕ್ಕೆ ಇಂಗ್ಲಿಷ್ ಹೇರ್ತಾ ಇದ್ದಾರೆ.

Anonymous ಅಂತಾರೆ...

karnatakadalli modalu kannadakke aadhyate kodabeku.adannu bittu bere bhashegalige aadhyate kopduvadhu sariyalla,

chandrasekhara ಅಂತಾರೆ...

kannda balasi belasi sankocha madkobedi bengaloorigare eegladru eddelthira illa cheli antha hodgondu malakkothira

Krishna ಅಂತಾರೆ...

ಎಲ್ಲರಿಗು ನನ್ನ ನಮಸ್ಕಾರ,

ತ್ರಿಭಾಷೆ ಬೇಡ ಅನ್ನೋದು ಸರಿ.. ಆದ್ರೆ 'ಹಿಂದಿ'ನ ಯಾಕೆ ಅಷ್ಟು ಕಡೆಗಣಿಸಿ ಇಂಗ್ಲಿಷ್ ಇದ್ರೆ ಪರವಾಗಿಲ್ಲ ಅಂತಿದ್ದಿರ? ಇದು ಬರೀ ನಮ್ಮ ರಾಜ್ಯ ಆದ್ರೆ ಸಾಕ ಅಥವಾ ನಮ್ಮ ದೇಶ ಆಗ್ಬೇಕ? ಎಷ್ಟು ಕನ್ನಡಿಗರು ಇವತ್ತು ವಲಸೆ ಬಂದಂತ ತೆಲುಗು, ತಮಿಳ್ ಅವರ ಹತ್ರ ಕನ್ನಡ ಮಾತಾಡ್ತಾರೆ? ನೀವು ಆಂಧ್ರಗೋ ತಮಿಳ್ ನಾಡಿಗೋ ಹೋದ್ರೆ ನಿಮ್ಮನ ಯಾರದ್ರು ಕನ್ನಡದಲ್ಲಿ ಮತಾಡಿಸ್ತಾರ? ಇಷ್ಟೆಲ್ಲಾ ಇದ್ದೋರು ಇಂಗ್ಲಿಷ್ ಇದ್ರೆ ಓಕೆ ಅಂತ ಯಾಕ್ ಹೇಳ್ತಿರ? ನಿಮ್ಮ ಮನಸ್ಸಾಕ್ಷಿನ ನೀವೇ ಕೇಳ್ಕೊಳಿ . ದೇಶ ಇಂಗ್ಲಿಷ್ಮಯ ಆದ್ರೂ ಪರವಾಗಿಲ್ಲ ಆದ್ರೆ ಹಿಂದಿ ಬೇಡ ಅನ್ನೋ ವಿಚಾರ ನನಗೆ ಇಷ್ಟ ಆಗಿಲ್ಲ.

kM

ಕ್ಲಾನ್ಗೊರೌಸ್ ಅಂತಾರೆ...

ಸ್ವಾಮಿ ಕೃಷ್ಣ,
ಇಂಗ್ಲಿಷ್ ಇವತ್ತು ಅನ್ನ ಕೊಟ್ಟಿದೆ ಹಿಂದಿ ಏನ್ ಕೊಟ್ಟಿದೆ? ಅದೇ ಕೆಟ್ಟ ಬಾಲಿವುಡ್ ಬಿಟ್ರೆ ಪೊಳ್ಳು ರಾಷ್ಟ್ರೀಯತೆ ಹೆಸರಿನಲ್ಲಿ ಹೇರಿಕೆ ಅಷ್ಟೆ

ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails