ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!



ಮೊನ್ನೆ ಮೊನ್ನೆ ಸುವರ್ಣ ಚಾನೆಲ್ಲಿನಲ್ಲಿ "ಶ್ವೇತನಾಗ" ಅನ್ನೋ ಸಿನಿಮಾ ಬಂತು, ಅದು ಮೊದಲು ತೆಲುಗಲ್ಲಿ ತೆಗೆದು ಆಮೇಲೆ ಕನ್ನಡಕ್ಕೆ ಡಬ್ ಮಾಡಲಾದ ಚಿತ್ರ ಅಂತಾ ಅದನ್ನು ಪ್ರಸಾರ ಮಾಡ್ದೋರೂ, ನಿರ್ಮಾಪಕರೂ ಎಲ್ಲಾರ ಮೇಲೂ ಕನ್ನಡ ಚಿತ್ರರಂಗದ ದಿಗ್ಗಜರುಗಳು, ಮೈಮೇಲೆ ಮುರ್ಕೊಂಡು ಬಿದ್ದ ಸುದ್ದಿ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಇವರುಗಳು ಅರ್ಥಮಾಡ್ಕೊಬೇಕಿರೋದ್ ಏನಪ್ಪಾ ಅಂದ್ರೆ ಇವರ ಈ ನಿಲುವು ಕಾನೂನು ಬಾಹಿರವಾಗಿರೋದ್ ಮಾತ್ರಾ ಅಲ್ದೆ ಇಡೀ ನಾಡಿಗೆ ಮಾರಕವಾಗಿದೆ ಅನ್ನೋದಾಗಿದೆ.

ಡಬ್ಬಿಂಗ್ ಇತಿಹಾಸ

ಹಿಂದೆ ಕನ್ನಡ ಚಿತ್ರರಂಗ ತನ್ನೆಲ್ಲಾ ಕೆಲ್ಸಗಳಿಗಾಗಿ ಚನ್ನೈ ಮೇಲೆ ಅವಲಂಬಿತವಾಗಿದ್ದಾಗ, ಕನ್ನಡ ಸಿನಿಮಾ ತೆಗೆಯೋ ನಿರ್ಮಾಪಕರು ಶ್ರಮ ಪಡೋ ಬದಲು ಡಬ್ಬಿಂಗ್ ತಂತ್ರಜ್ಞಾನಾನ ಬಳಸಿ ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡದಲ್ಲಿ ತರಕ್ ಮುಂದಾದ್ರು. ಇದು ಹೀಗೇ ನಡುದ್ರೆ ಮುಂದೆ ಕನ್ನಡ ಚಿತ್ರಗಳು ಅಂದ್ರೆ ಹಿಂದಿ, ತಮಿಳು, ತೆಲುಗು ಚಿತ್ರಗಳ ಡಬ್ಬಾ (ಡಬ್ಬ್ ಆಗಿರೋದು) ಅಂತಾ ಆಗಿಬಿಡುತ್ತೆ ಅನ್ನೋ ಬೆದರಿಕೆ ಹುಟ್ಕೊಳ್ತು. ಆಗ ಡಬ್ಬಿಂಗ್ ವಿರೋಧಿ ಚಳವಳಿ ನಡೀತು. ಅವತ್ತು ಶುರುವಾದ ಈ ನಿಷೇಧ ಇಲ್ಲೀತನಕ ಬಂದಿದೆ.

ಇವತ್ತೇನಾಗಿದೆ?

ಇವತ್ತು ಕನ್ನಡ ಚಿತ್ರರಂಗ ಸ್ಟುಡಿಯೋ, ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಧ್ವನಿಮುದ್ರಣ ಕೇಂದ್ರ, ತಂತ್ರಜ್ಞಾನ, ಹಂಚಿಕೆ, ಚಿತ್ರಮಂದಿರ... ಹೀಗೆ ಎಲ್ಲಾ ವಿಭಾಗದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗ್ ಹೋಗುತ್ತೆ ಅನ್ನೋ ಪರಿಸ್ಥಿತಿ ನಿಜವಾಗ್ಲೂ ಇಲ್ಲ. ಸ್ಪರ್ಧೆ ಎದ್ರುಸಕ್ ಆಗ್ದಿರೋ, ತಾವು ರಿಮೇಕ್ ಮಾಡೊ ಅವಕಾಶ ಕಳ್ಕೊಳೋ ಭಯದಿಂದ ಕೆಲ ಪಟ್ಟಭದ್ರರು ಇಂಥಾ ವಿರೋಧಕ್ ಮುಂದಾಗಿದಾರೆ ಅನ್ಸುತ್ತೆ ಗುರು! ಅಲ್ಲಾ ಇವರು ಕನ್ನಡದೋರುನ್ನ ಏನಂದ್ಕೊಂಡಿದ್ದಾರೆ? ಡಬ್ ಆಗಿರೋ ಸಿನಿಮಾ ಬಂದ್ರೆ ಮೂಲ ಕನ್ನಡ ಚಿತ್ರಗಳನ್ನು ನೋಡೋರಿರೋದಿಲ್ಲಾ ಅಂತಾನಾ? ಪಕ್ಕದ ತಮಿಳುನಾಡು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗ್ ಇಲ್ವಾ? ಅಲ್ಲಿ ಟಿವಿ ಧಾರಾವಾಹಿಗಳಿರಲಿ, ನ್ಯೂಸನ್ನೂ ಬಿಡದೆ ಡಬ್ ಮಾಡ್ತಾರೆ. ಭಾರತ ಬೇಡಾ ಅಂದ್ರೆ ಜಪಾನಿಗೆ ಹೋಗಿ ನೋಡಿ, ಅಲ್ಲಿ ಪಾಪ್ ಹಾಡುಗಳು, ಬಾಂಡ್ ಸಿನಿಮಾಗಳನ್ನೂ ಬಿಡದೇ ಡಬ್ ಮಾಡ್ತಾರೆ. ಆ ಚಿತ್ರರಂಗಗಳೆಲ್ಲಾ ಏನ್ ಸತ್ತು ಹೋಗಿವೆಯಾ?

ಈಗ ಡಬ್ಬಿಂಗ್ ಬೇಡಾ ಅನ್ನೋ ಈ ಕೂಗಿಗೆ ಹೊಸದಾಗಿ ಇನ್ಮೇಲೆ ಟಿವಿ, ರೇಡಿಯೋ ಜಾಹೀರಾತುಗಳನ್ನು ಡಬ್ ಮಾಡಬಾರದು ಅನ್ನೋ ಅತಿರೇಕವೂ ಸೇರ್ಕೊಂಡಿದೆ. ಹಿಂದೇನೋ ಈ ಡಬ್ಬಿಂಗ್ ನಿಂತಾಗ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ಬಂದವು. ಆದ್ರೆ ನಿಧಾನವಾಗಿ ಕನ್ನಡದೋರು ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಕ್ ಶುರು ಹಚ್ಕೊಂಡ್ರು. ಇದರ ಪರಿಣಾಮ ಇವತ್ತಿನ ದಿವಸ ಕನ್ನಡ ಚಿತ್ರಗಳಿಗೆ ಬೆಂಗಳೂರಿನ ಅರ್ಧಕ್ಕರ್ಧ ಚಿತ್ರ ಮಂದಿರಗಳು ಟಾಟಾ ಹೇಳಿವೆ. ಇದರ ಪರಿಣಾಮವಾಗಿ, ವಲಸಿಗನಿಗೆ ಮಾತ್ರಾ ತನ್ನ ಭಾಷೆ ಚಿತ್ರಾನಾ ತನ್ನ ಭಾಷೇಲೇ ನೋಡೋ ಸೌಭಾಗ್ಯ ಸಿಕ್ಕಿದೆ. ಕನ್ನಡದವ್ರು ಮಾತ್ರಾ ಚಿತ್ರರಂಗದ ಈ ಹಟದಿಂದ ಅರ್ಧಂಬರ್ಧ ಅರ್ಥ ಮಾಡ್ಕೊಂಡಾದ್ರೂ ತಮಿಳು, ತೆಲುಗು, ಹಿಂದಿ ಸಿನಿಮಾಗಳ್ನ ನೋಡ್ತಾ ನೋಡ್ತಾ, ತಾವು ಆ ಭಾಷೆ ಕಲ್ತು, ಆಯಾ ಭಾಷಿಕ ಪ್ರದೇಶದಿಂದ ಇಲ್ಲಿಗೆ ಬಂದಿರೋ ವಲಸಿಗನಿಗೆ ಕನ್ನಡದ ಅಗತ್ಯ ಇಲ್ಲದಂಗೆ ಮಾಡ್ತಿದಾರೆ.

ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳ್ಸುತ್ತೆ!

ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ದಿದ್ರೆ ನೋಡಕ್ ಆಗಲ್ಲಾ ಅನ್ನೋ ಸ್ಥಿತಿ ಹುಟ್ಟೋದು ಖಂಡಿತಾ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಇವತ್ತು ಡಬ್ಬಿಂಗಿಗೆ ಒಪ್ಪೋದ್ರಿಂದ ಕನ್ನಡ ಚಿತ್ರರಂಗ ಬೆಳ್ಯುತ್ತೆ ಅಂತಾ ಇದನ್ನು ವಿರೋಧ್ಸೋರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಮಾತಿಗ್ ಮೊದಲು ಡಾ. ರಾಜ್ ಹೆಸರು ತೊಗೊಂಡು ಡಬ್ ಮಾಡೋರನ್ನು ಕೊಲೆ ಮಾಡಿದೋರ್ನ ನಡುಸ್ಕೊಳ್ಳೋ ಹಂಗೆ ನಡುಸ್ಕೊಳ್ಳೋ ಬದ್ಲು ಒಂದು ಸರಿಯಾದ ಚರ್ಚೆ ನಡ್ಸಿ ಇಡೀ ಚಿತ್ರರಂಗ ಡಬ್ಬಿಂಗ್ ಒಪ್ಕೊಳ್ಳೋದು ನಾಡಿಗೂ ಕ್ಷೇಮ ಮತ್ತು ಹೀಗೆ ವಿರೋಧುಸ್ತಾ ಇರೋರ ಮುಖವೂ ಉಳ್ಯುತ್ತೆ. ಇಲ್ಲಾ ಅಂದ್ರೆ ಯಾರಾದ್ರೂ ಕೋರ್ಟಿನ ಮೆಟ್ಟಿಲು ಹತ್ತಿದರೆ ಮಂಗಳಾರತಿ ಗ್ಯಾರಂಟಿ! ಏನಂತೀ ಗುರು?

13 ಅನಿಸಿಕೆಗಳು:

ನಸೀಮ್ ಅಂತಾರೆ...

ಯಾವುದೋ ಸರಿಯಾದ ಶಾಲೆಯಲ್ಲಿ ಓದಿದ ಹುಡುಗ ಇರಬೇಕು ಈ ಆಮೀರ್ ಖಾನ್. ಮೊನ್ನೆ ಹಿಲರಿ ಕ್ಲಿ೦ಟನ್ ಜೊತೆ ಮು೦ಬೈನಲ್ಲಿ ವೇದಿಕೆ ಹ೦ಚಿಕೊ೦ಡಿದ್ದ ಆಮೀರ್ ಲೀಡ್ ಇ೦ಡಿಯಾ ಉಪನ್ಯಾಸಕರ ಸಭೆಯಲ್ಲಿ ಚೆನ್ನಾಗಿ ಮಾತನಾಡಿದರು.

ಆಮೀರ್ ಪ್ರಕಾರ ಓದಿಗೂ ಇ೦ಗ್ಲೀಷ್ ನ ಅರಿಮೆ ಇಲ್ಲದಿರುವುದಕ್ಕೂ ಎಳ್ಳಷ್ಟೂ ಸ೦ಭ೦ದವಿಲ್ಲ. ಓದುವುದು ವಿಷಯವನ್ನು ಅರ್ಥೈಸಿಕೊಳ್ಳುವಕ್ಕೆ ಹೊರತೆ ಇ೦ಗ್ಲೀಷ್ ಕಲಿಯುವುದೇ ಓದಲ್ಲ. ಮರಾಠಿ ಭಾಷಿಕರು ಮರಾಠಿಯಲ್ಲಿ ಓದುವುದೇ ಸರಿ, ಇತರೆ ಭಾರತೀಯ ಭಾಷೆಗಳ ಮಕ್ಕಳು ಅವರವರ ಭಾಷೆಗಳಲ್ಲಿ ಓದುವುದೇ ಸರಿ ಅ೦ತ ಆಮೀರ್ ಹೇಳುತ್ತಿದ್ದುದನ್ನು ವೀಕ್ಷಿಸಿ ಬಹಳ ಸ೦ತೋಷ ಆಯ್ತು. ಒಳ್ಳೆಯ ಆಲೋಚನೆ ಇಟ್ಟುಕೊ೦ಡಿರುವ ಇವರ ಮೇಲೆ ಗೌರವ ಹೆಚ್ಚಿತು.

ನಸೀಮ್ ಅಂತಾರೆ...

ಬೆಕ್ಕಿಗೆ ಗ೦ಟೆ ಕಟ್ಟೋರು ಯಾರು?

Anonymous ಅಂತಾರೆ...

ಅಲ್ಲ ಗುರು ಡಬ್ಬಿಂಗ್ ಇಂದ ಕನ್ನಡ ಉದ್ದಾರ ಆಗುತ್ತೆ ಅಂತ ಯಾವನಪ್ಪ ಹೇಳಿದ್ದು. ಕೊನೆ ಪಕ್ಷ ರಿಮೇಕ್ ಆದರು ನಮ್ಮ ಕನ್ನಡದ ಕಲಾವಿದರಿಗೆ ಕೆಲಸ ಸಿಗುತ್ತಿದೆ.ಒಂದು ವೇಳೆ ಡಬ್ಬಿಂಗ್ ಮಾಡಿದರೆ ನಮ್ಮ ಕನ್ನಡ ಹಾಗು ಕರ್ನಾಟಕಕ್ಕೆ ಸಂಬಂದವಿಲ್ಲದ ಸಂಸ್ಕೃತಿಯನ್ನೇ ನೋಡುವ ಪ್ರಾರಬ್ದ ಕರ್ಮ ಬರುತ್ತದೆ.ಈಗೀಗ ತೆಲುಗಿನವರು ಹಾಗು ತಮಿಳಿನವರು ಡಬ್ಬಿಂಗ್ ಗೆ ತಿಲಾಂಜಲಿ ಕೊಟ್ಟು ರಿಮೇಕ್ ಸಂಸ್ಕೃತಿಗೆ ಮರಳಿದ್ದಾರೆ.ಒಂದು ವೇಳೆ ಎಲ್ಲ ಬಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುತ್ತಿವಿ ಅಂತ ತೀರ್ಮಾನ ಮಾಡಿದರೆ, ಆಯಾಯ ಬಾಷೆಯ ಜನರು ಅವರ ಚಿತ್ರಗಳನ್ನೇ ನೋಡಬೇಕೆಂದು ಕೋರ್ಟಿನಲ್ಲಿ ದಾವೆ ಹೂಡಲ್ಲ ಅಂತ ಗ್ಯಾರಂಟಿ ಏನು? ಮೊದಲು ನಮ್ಮ ನಿರ್ಮಾಪಕರಿಗೆ ಹೊಸ ಹೊಸ ಪ್ರಯೋಗ, ಹಾಗು ನಿರ್ಮಾಣ ಮಾಡಿದರೆ ಖಂಡಿತ ನಮ್ಮ ಜನ ಪ್ರೋತ್ಸಾಹಿಸುತ್ತಾರೆ. ಆಗ ರಿಮೇಕ್ ಟ್ರೆಂಡ್ ಹೇಳ ಹೆಸರಿಲ್ಲದಂತೆ ಹೋಗುತ್ತದೆ.

Anonymous ಅಂತಾರೆ...

ಡಬ್ಬಿಂಗ್ ಮಾಡಬಾರದು ಅನ್ನುವ ಈ ಕಾನೂನಿಂದ ಎಷ್ಟೆಲ್ಲಾ ನಷ್ಟ ನೋಡಿ: ನೆರೆಯ ತೆಲುಗು, ತಮಿಳು, ಮರಾಠಿ ಮಕ್ಕಳು ತಮ್ಮ ತಮ್ಮ ಭಾಷೆಯಲ್ಲಿ ಕಾರ್ಟೂನು ನೋಡುತ್ತಾರೆ, ತಮ್ಮ ಭಾಷೆಯನ್ನೇ ಕಲಿಯುತ್ತಾರೆ. ಆದರೆ ನಮ್ಮ ಕನ್ನಡದ ಮಕ್ಕಳು ಇಂಗ್ಲೀಷಲ್ಲಿ ಕಾರ್ಟೂನು ನೋಡಿ ಇಂಗ್ಲಿಷ್ ಕಲಿಯುತ್ತಾರೆ, ತಾಯ್ನುಡಿ ಮರೆಯುತ್ತಾರೆ.
ಡಬ್ಬಿಂಗಿಂದಾಗಿ ಕನ್ನಡದ ಡಬ್ಬಿಂಗ್ ಕಲಾವಿದರಿಗೆ ಕೆಲಸ ಸಿಗುವುದಿಲ್ಲವೆ? ಈಗಲಾದರೂ ಕನ್ನಡದ ನಾಯಕಿಯರಿಗೆ ಕೆಲಸವೆಲ್ಲಿದೆ? ಎಲ್ಲಾ ಹಿಂದಿ ಬೆಂಗಾಳಿ ಪಂಜಾಬಿ ಹುಡುಗಿಯರೇ ತುಂಬಿಕೊಂಡಿದ್ದಾರೆ. ಇವರಿಗಾಗಿ ಹೇಗಾದರೂ ನಮ್ಮವರೇ ಡಬ್ಬ್ ಮಾಡಬೇಕು, ಇದರೊಂದಿಗೆ ಮತ್ತಷ್ಟು ಕೆಲಸ ಸಿಕ್ಕಿದಂತಾಗುವುದಿಲ್ಲವೆ?

Anonymous ಅಂತಾರೆ...

Hi Ananymous,

Even if things happen as you say, kannadigas will watch other language movies in kannada. To that extent kannadigas will be insulated from other languages. Secondly, As you said, surely there is a threat of non-kannadigas demand for release of movies in the original version. But we can check this by limiting the number of theatres. Off course, Film chamber can enforce/ convince the non-kannada film distributers in this regard. In my opinion, nobody can demand release of movies in their own language. Read another post about dubbing from enguru which was published long back, which says how it helps kannada's growth.

Regards

Sundar

Anonymous ಅಂತಾರೆ...

houdu sundar,

neevu hELiddu sariyaagide. illide nODi ee baraha by enguru : http://enguru.blogspot.com/2007/08/blog-post_04.html

Regards

Ram

Vikram ಅಂತಾರೆ...

uttama chitra madidre kannada cinemavannu kooda prekshaka mechthane aadre naavu kevala machchu laangu hididre mathinnenagotthe?

ಅಜೇಯ ಅಂತಾರೆ...

Dubbing irebeku, aadre bari chennagiro anta chitragaLanna maatra dub maaDbeku. Zee cinemali thorastaralla telugu, tamil chitragala dubbing aatharaha irbaardu. Dubbing nindaagi english athava parabhashegaLa melina avalambane kaDime agutte. Kannada maadhyamadalle oodidavarigu sahaya agutte.

Anonymous ಅಂತಾರೆ...

If the intention is to ensure local artists and workers don't lose their job, why not implement this policy in totality? Why do they bring heroines from outside ? Why do they bring singers from outside ? This is a big contradiction from people opposing dubbing.

Unknown ಅಂತಾರೆ...

ಡಬ್ಬಿoಗ್ ಮಾಡೋದ್ರಿಂದ ಕನ್ನಡ ಭಾಷೆ ಒಂದು ರೀತಿಲಿ ಜಾಸ್ತಿ ಬಳಕೆ ಆಗುತ್ತೆ. ನಾವು ನಗರದಲ್ಲಿ ಇರೋವ್ರು ಬೇರೆ ಭಾಷೆ ಚಿತ್ರ ಬಂದ್ರೆ ನೋಡಿ ಅರ್ಥ ಏನೋ ಮಾಡ್ಕೋತೀವಿ. ಆ ಚಿತ್ರದಲ್ಲಿ ಜನಗಳು ಕಲಿಯೋಥರ ವಿಷಯ ಇದ್ರೆ, ಬೇರೆ ಯಾವುದೇ ಭಾಷೆ ಬರದ ಹಳ್ಳಿ ಜನ, ಕನ್ನಡದಲ್ಲಿ ಡಬ್ಬಿoಗ್ ಮಾಡಿರೋ ಚಿತ್ರ ನೋಡಿ ತಿಳ್ಕೋಬಹುದು. ಉದಾಹರಣೆಗೆ ಅಶುತೊಶ್ ಗವಾರಿಕರ್ ನಿರ್ದೇಶಿಸಿದ "ಸ್ವದೇಸ್" ಚಿತ್ರ ಕನ್ನಡದಲ್ಲಿ ಡಬ್ ಆಗಬಹುದಿತ್ತು. ಆಥರ ನೋಡಿದ್ರೆ ಸಾವಿರಾರು ಚಿತ್ರಗಳ್ನ ಡಬ್ಬಿoಗ್ ಮಾಡಬಹುದಿತ್ತು.

ಜನ ಬೇರೆ ಭಾಷೇನೆ ಕೇಳೋದಿಲ್ಲ, ಕಲಿಯೋದಿಲ್ಲ, ಮಾತಾಡೋದಿಲ್ಲ ಅಂತ ಇದ್ರೆ, ಹಿಂದಿಲಿ ಬಿಡುಗಡೆ ಆಗೋ ಎಲ್ಲ ಚಿತ್ರಗಳು ಕನ್ನಡದಲ್ಲಿ ಡಬ್ಬಿoಗ್ ಮಾಡ್ತಾ ಇದ್ರೋ ಏನೋ, ನಮ್ ನೆರೆ ರಾಜ್ಯ ತಮಿಳು ನಾಡಿನಲ್ಲಿ ಹಾಗೇನೆ ತಾನೇ?

ಚಲನ ಚಿತ್ರ ಬಿಟ್ರೆ, ಟಿ ವಿ ಲಿ ಬಾರೋ ಜಾಹಿರಾತುಗಳು ಈಗ ಡಬ್ಬಿoಗ್ ಆಗೇ ತಾನೇ ಪ್ರಸಾರ ಆಗೋದು? ಅದಕ್ಕೆ ಯಾರು ತಡೆ ಹಾಕಿಲ್ವೆ?

Jayateerth Nadagouda ಅಂತಾರೆ...

Vikram avre,
Kannada dalli saakashtu olleya chitragalive. Bari machhu longina chitragalu ive anno nimma abhipraaya tappu. Ee varsha nodi Jackie,Super,Krishanan Love story,Mylaari,Yaksha anno saakashtu olleya chitragalu bandive.
Illi dubbing maadidre tappenella anno vaada sariyadaddu.Naavu dubbing maadabeku.

ಕ್ಲಾನ್ಗೋರೌಸ್ ಅಂತಾರೆ...

ಭರತ್ ನಾರಾಯಣ್ ಅವರೇ..,
ಬಹುಷಃ ನಿಮಗೆ ಗೊತ್ತಿಲ್ಲ ಅನ್ಸುತ್ತೆ "ಸ್ವದೇಶ್" ನಮ್ಮ ಕನ್ನಡದ್ದೇ ಆದ "ಚಿಗುರಿದ ಕನಸ್ಸು" ಚಿತ್ರದ ರೀಮೇಕ್. ಮೊದಲು ಕನ್ನಡಿಗರು ಹಿಂದಿಯ SRK (ಶಾಹ್ ರುಖ್ ಖಾನ್) ನ ವ್ಯಾಮೋಹ ಬಿಟ್ಟು ನಮ್ಮ SRK (ಶಿವರಾಜಕುಮಾರ್) ಮಾಡಿದ ಚಿತ್ರದ ಬಗ್ಗೆ ತಿಳ್ಕೊಳ್ಳಿ.

Anonymous ಅಂತಾರೆ...

ಸುಜಯೇಂದ್ರ
ಡಬ್ಬಿಂಗ ಸರಿಯಾದ ಉಪಾಯವೆನಿಸುತ್ತದೆ, ರಿಮೇಕು ಬರಲಿ ಆದರೆ ಕ್ರಿಯಾಶೀಲತೆಯು ಅದಕ್ಕೆ ಪೈಪೋಟಿಯಲ್ಲಿ ಬರಬೇಕು.
ಆಗಲೆ ಕನ್ನಡ ಉಳಿಯಲು ಸಾಧ್ಯ.
ಹಾಗೆಯೆ ಟಿ ವಿ ಯಲ್ಲಿ ಕನ್ನಡ ಚಾನೆಲ್ ಗಳೆ ಹೆಚ್ಚ್ ಹೆಚ್ಚ್ ಬರ್ ಬೇಕು ಈ ಹೊರರಾಜ್ಯಗಳಲ್ಲು ಒಂದೇ ಒಂದು ಕನ್ನಡ ಚಾನೆಲ್ ಬಿಟ್ರೆ ಬೇರೆ ಬರಲ್ಲ, ವಿದೇಶಿ ಚಾನಲ್ ಹೊರತು ಪಡಿಸಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails