ಬಿಬಿಎಂಪಿಯ ಹೊಸ ಆಯುಕ್ತರು ಮೂಡಿಸಿರೋ ಭರವಸೆ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದಿರೋ ಶ್ರೀ ಭರತ್ ಲಾಲ್ ಮೀನಾ ಅವ್ರು ಹೊಸ ಆಫೀಸಿಗೆ ಬಂದ ಕೂಡ್ಲೇ ಬಂಗಾರದಂಥಾ ಕೆಲಸ ಮಾಡಿದಾರೆ ಅಂತಿದೆ 24.06.2009ರ ಎಕ್ಸ್’ಪ್ರೆಸ್ ಬಝ್ ಪತ್ರಿಕೇಲಿ ಬಂದೀರ‍ೋ ಈ ಸುದ್ದಿ! ಪಾಲಿಕೆಯ ಅಧಿಕಾರಿಗಳ ಸಭೇನ ಇದಕ್ಕಾಗೇ ವಿಶೇಷವಾಗಿ ಕರೆದು ಚರ್ಚೆ ಮಾಡಿದಾರೆ ಅಂದ್ರೆ ಅದ್ಯಾವ ವಿಷ್ಯಾನಪ್ಪಾ ಅಂತನ್ನಿಸೋದು ನಿಜವೇ! ನಾಮಫಲಕಗಳಲ್ಲಿ ಕನ್ನಡವನ್ನು ಸರಿಯಾಗಿ ಬಳಸೋ ಹಾಗೆ ಮಾಡಕ್ಕೆ ಏನ್ ಮಾಡಬೇಕು ಅಂತಾ ಚರ್ಚಿಸೋಕೆ ಆ ಸಭೆ ಕರ್ದಿದ್ರಂತೆ. ನಾಮಫಲಕಗಳಲ್ಲಿ ಕನ್ನಡದ ಬಳಕೆ ಬಗ್ಗೆ ಕರ್ನಾಟಕ ರಾಜ್ಯಸರ್ಕಾರದೋರು ಹೊರಡ್ಸಿದ್ದ ಪುರಾತನವಾದ ಈ ಒಂದು ಆದೇಶಾನ ಜಾರಿಗೊಳಿಸೋಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದೋರು ನೀಡಿರೋ ನಿರ್ದೇಶನಾನ ಜಾರಿಗೊಳಿಸೋದು ಹ್ಯಾಗೆ ಅಂತ ಅಧಿಕಾರಿಯೊಬ್ರು ಗಂಭೀರವಾಗಿ ಕ್ರಮ ತೊಗೊಳ್ಳಕ್ಕೆ ಮುಂದಾಗಿರೋದು ಒಳ್ಳೇ ಬೆಳವಣಿಗೆ ಗುರು!

ಇದರಲ್ಲಿನ ಮೆಚ್ಚೋ ಅಂಶ!

ನಾಮಫಲಕಗಳಲ್ಲಿ ಕನ್ನಡ ಕಡೆಗಣ್ಸುದ್ರೆ ದಂಡ ಹಾಕ್ತೀವಿ, ಲೈಸೆನ್ಸ್ ಕಿತ್ಕೋತೀವಿ ಅಂತಾ ಅಂಗಡಿ/ ಮುಂಗಟ್ಟುಗಳ ಮಾಲೀಕರಿಗೆ ಎಚ್ಚರಿಕೆ ಕೊಡೋದು ಒಂದುಕಡೆಯಾದ್ರೆ, ಈ ಹೊಸ ಸಾಹೇಬರ ಶೈಲೀನೇ ಬೇರೆಯಾಗಿದೆ. ಇವರು ಮಹಾನಗರಪಾಲಿಕೆಯ ಸುಲಭ್ ಶೌಚಾಲಯ, ಬಸ್ ನಿಲ್ದಾಣಗಳು, ಬಸ್ಸುಗಳು... ಮುಂತಾದ ಕಡೆಗಳಲ್ಲೆಲ್ಲಾ ಕನ್ನಡ ಬಳ್ಸಕ್ ಆದೇಶಾ ನೀಡಿರೋದ್ರು ಜೊತೆಗೆ ಜಾಹೀರಾತು ಸಂಸ್ಥೆಗಳೋರ್ನ ಕರೆಸಿ ಅವರನ್ನೂ ಈ ಸಭೆಯಲ್ಲಿ ತೊಡಗಿಸಿಕೊಂಡಿರೋದು ಮುಖ್ಯವಾದ್ದು. ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ್ದು. ಇಂಥಾ ಒಂದು ಆದೇಶಾನಾ ಜಾರಿಗೊಳಿಸೋದ್ರಲ್ಲಿ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ಕೈಜೋಡಿಸ್ಬೇಕಾಗಿದೆ! ಹ್ಞಾಂ...ಎಲ್ರೂ ಅಂದ್ರೆ ನಾವೂ ನೀವೂನೂ ಸೇರ್ತೀವಿ ಗುರು!

7 ಅನಿಸಿಕೆಗಳು:

Anonymous ಅಂತಾರೆ...

One interesting thing is, he is basically from Rajastan but speaks fluent kannada.

- sidda

Unknown ಅಂತಾರೆ...

It's a very good move but it should not create problem for outsiders who cannot understad kannada and find it difficult to locate place. Kannada is on top priority but English which is a common language of the whole world shouldnot be ignored

KSK
www.knowinfonow.com

Anonymous ಅಂತಾರೆ...

hinde bharat laal mina avaru shivamogga jilladikaariyaagiddaga chennagi kelasa maadiddare.

Gangadhar ಅಂತಾರೆ...

ಒಳ್ಳೆಯ ಬೆಳವಣಿಗೆ, ಕೈ ಜೋಡಿಸೋಣ ಬನ್ನಿ

ಗಂಗಾಧರ್ ಕೆ

ಸಾಗರದಾಚೆಯ ಇಂಚರ ಅಂತಾರೆ...

ಭರತ್ ಲಾಲ್ ಮೀನಾ ಎಲ್ಲೇ ಹೋದರು ಅವರ ಛಾಪನ್ನು ಒತ್ತಿ ಬಂದವರು, ಸುಧಾರಣೆಯ ಹರಿಕಾರ, ಅವರನ್ನು ಬೆಂಬಲಿಸೋಣ,

Harsha ಅಂತಾರೆ...

this person is identifying problems of our state & working for solutions..feel good for his activities..

Aravinda B N ಅಂತಾರೆ...

@KSK
ಸ್ವಾಮಿ ಸಂತೋಷ್‌ ಅವರೇ, ಇತರ ಭಾಷಿಕರು ಇಲ್ಲಿಗೆ ಬಂದರೆ ಕನ್ನಡ ಕಲಿಯೋದು ಅತ್ಯಗತ್ಯ ಆಗಬೇಕು. ಅದಕ್ಕೆ ಇದೇ ಒಂದು ದಾರಿ ಆಗಲಿಬಿಡಿ. ಪರಭಾಷಿಕರಿಗೆ ನಾವು ಅಷ್ಟು ಅನಗತ್ಯ ಮಹತ್ವ ಕೊಡ್ತಾ ಇರೋದ್ರಿಂದ್ಲೇ ಅವರಿಗೆ ಕನ್ನಡ ಕಲೀದೇ ತಲೆ ಪ್ರತಿಷ್ಠೆ ತೋರಿಸ್ಕೊಳ್ಳೋಕೆ ಆಗ್ತಿರೋದು. ಪ್ರತಿಯೊಬ್ರು ಅವರಿಗೆ ತೊಂದ್ರೆ ಆಗದೇ ಇರಬೇಕು ಅಂದ್ರೆ ಅವರೇ ದಾರಿ ಕಂಡುಕೊಳ್ಳಬೇಕು. ಹಾಗೆ ಅವರು ಕನ್ನಡ ಕಲಿಯಲು ಬಿಡಿ. ಇಲ್ಲವಾದರೆ ಬೆಂಗಳೂರಲ್ಲಿ ಕೇವಲ ಕೆಲ ವೆಬ್‌ಸೈಟ್‌ಗಳಲ್ಲಿ ಮಾತ್ರ ಕನ್ನಡ ಕಂಡು ಹೊರಗಿನ ಸೈಟ್‌ಗಳಲ್ಲಿ ಬರಿ ಇಂಗ್ಲಿಷ್‌ ಅಥವಾ ಪರಭಾಷೆ ಕಾಣಿಸುತ್ತೆ ಅಷ್ಟೇ ಇದು ಬೇಕಾ ನಿಮಗೆ :(

-ಆರವಿಂದ ಬ ನ
ಕನ್ನಡಿಗ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails