‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

(ಫೋಟೋ ಕೃಪೆ: kannada.oneindia.in - http://bit.ly/ww4Wn2)
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ,  ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.

‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?

ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!

ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!


ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?

ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.

ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.

ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...

ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ  (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.

ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.

ಬರಹದ ಆಶಯ

ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?

48 ಅನಿಸಿಕೆಗಳು:

Mahesh ಅಂತಾರೆ...

ಭಾಷೆ, ಸಂಸ್ಕೃತಿಗಳು ಈ ಜಗತ್ತಿನಲ್ಲಿ ಪರಸ್ಪರ ಸಾಮರಸ್ಯಕ್ಕಿಂತ, ಪರಸ್ಪರ ಮೇಲಾಟಗಳಲ್ಲೇ ಇರುತ್ತವೆ ಎಂಬುದೇ ವಾಸ್ತವ. ಪ್ರಬಲವಾದ ಭಾಷೆ, ಸಂಸ್ಕೃತಿಗಳು ಇನ್ನೊಂದನ್ನು ಸಹಜವಾಗಿ ದುರ್ಬಲಗೊಳಿಸುತ್ತದೆ. ಇನ್ನು ಸಂಫದ ವಿಷಯ, ಸಂಫದ ಚಿಂತಕರಲ್ಲಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿನಲ್ಲೇ ಶ್ರೇಷ್ಠ ಸಂಸ್ಕೃತಿಯೆಂದು ತೋರಿಸಿಕೊಳ್ಳುವ ಬಯಕೆ ಇದೆ. ಅದಕ್ಕೆ ತುಸು ಕುತ್ತಾದರೂ ವಿಪರೀತ ನೋವು ಪಟ್ಟುಕೊಳ್ಳುತ್ತಾರೆ.
ಎಲ್ಲಾ ಭಾಷೆಗಳೂ ಸಂವಿಧಾನಾತ್ಮಕವಾಗಿ ಸಮಾನ. ಆದರೆ ನಮ್ಮ ಭಾಷೆಯನ್ನು ಪ್ರಬಲಗೊಳಿಸುವದು ನಮ್ಮ ಕೈಯಲ್ಲೇ ಇದೆ. ಕನ್ನಡ, ಕನ್ನಡ ಎನ್ನುವವರೂ ಕೂಡ ಕೇವಲ ಕನ್ನಡದಿಂದ ಬದುಕು ಸಾಧ್ಯವಿಲ್ಲ ಎಂಬುದನ್ನು ಹೃದಯಪೂರ್ವಕವಾಗಿ ಅಂತರ್ಯದಲ್ಲಿ ಒಪ್ಪಿಕೊಳ್ಳುತ್ತಾರೆ( ಕೆಲವರು ವಾದಕ್ಕಾಗಿ ಇದನ್ನು ವಿರೋಧಿಸಬಹುದು)

maaysa ಅಂತಾರೆ...

" ನಮ್ಮ ಭಾಷೆಯನ್ನು ಪ್ರಬಲಗೊಳಿಸುವದು ನಮ್ಮ ಕೈಯಲ್ಲೇ ಇದೆ. ಕನ್ನಡ, ಕನ್ನಡ ಎನ್ನುವವರೂ ಕೂಡ ಕೇವಲ ಕನ್ನಡದಿಂದ ಬದುಕು ಸಾಧ್ಯವಿಲ್ಲ ಎಂಬುದನ್ನು ಹೃದಯಪೂರ್ವಕವಾಗಿ ಅಂತರ್ಯದಲ್ಲಿ ಒಪ್ಪಿಕೊಳ್ಳುತ್ತಾರೆ( ಕೆಲವರು ವಾದಕ್ಕಾಗಿ ಇದನ್ನು ವಿರೋಧಿಸಬಹುದು)"

This is only possible more and more Kannada people become educated and rich, and hold important decision making position in government and private organisations. This fact is proven my Tamils and Malayalis.

Anonymous ಅಂತಾರೆ...

ಮಹೇಶ್ ಸರ್,
ನಮ್ಮ ಭಾಷೆಯನ್ನು ಬಲಪಡಿಸಿಕೊಳ್ಳುವುದು ನಮ್ಮ ಕೈಯ್ಯಲ್ಲೇ ಇದೆ ಎನ್ನುವುದು ಯಾವ ಭಾಷೆಗೂ ಆಡಳಿತ ಯಂತ್ರದ ವಿಶೇಷ ಬೆಂಬಲ ಇಲ್ಲವಾದಾಗ ಮಾತ್ರಾ. ಇಲ್ಲದಿದ್ದರೆ ತನ್ನ ನಾಡಿನಲ್ಲೇ ಒಂದು ಭಾಷೆ ಮೂಲೆಗುಂಪಾಗುತ್ತದೆ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ, ಧಾರವಾಡದ ಭಾಗದಲ್ಲಿ ಹಿಂದೆ ಕನ್ನಡ ಜನರ ಭಾಷೆಯಾಗಿದ್ದರೂ ಆಳುವ ಭಾಷೆ ಮರಾಠಿ, ಉರ್ದು ಆಗಿದ್ದಾಗ ಕನ್ನಡ ಮತ್ತು ಕನ್ನಡಿಗರು (ಆಡಳಿತ ಭಾಷೆ ಬಾರದ ಕನ್ನಡಿಗರು) ಮೂಲೆಗುಂಪಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳಲ್ಲಿ ನೋಡಬಹುದು. ಈಗ ಹಿಂದೀ ಭಾಷೆಯನ್ನು ಭಾರತದ ತುಂಬಾ ಹರಡಲು, ಆಡಳಿತದಲ್ಲಿ ಬಳಸಲು ಕೇಂದ್ರಸರ್ಕಾರ ಒತ್ತುಕೊಡುತ್ತಿರುವಾಗ ಇತಿಹಾಸ ಮರುಕಳೀಸದೇ?

ಕೆಂಪಯ್ಯ

Anonymous ಅಂತಾರೆ...

ಗುರೂ...

ಫೋಟೋ ಚಿಂದಿಯಾಗಿದೆ. ಗುರುಜಿಯನ್ನು ಹೊತ್ತ ಆನೆಯ ಹಿಂದೆ ಹೊರಟಿರುವ ಇಡೀ ಸಂಘದ ಸಿಪಾಯಿಗಳನ್ನು ಇನ್ಯಾರೋ ಪಕ್ಕಕ್ಕೆ ತಿರುಗಿಸುತ್ತಿದ್ದಾರೆ. ಆ ಚಿತ್ರದಂತೇ ಪ್ರಬಲ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯಗಳ, ಸಮಾನ ಸ್ಥಾನಮಾನದ ಭಾಷಾನೀತಿಗಳೆನ್ನುವ ಸರಿದಾರಿಯತ್ತ ಸಂಘವನ್ನು ತಿರುಗಿಸುವ ಸ್ವಯಂಸೇವಕ ಬರಬೇಕಾಗಿದೆ.

ಚಂದ್ರಶೇಕರ ಮಂಟೇಸ್ವಾಮಿ

Mahesh ಅಂತಾರೆ...

ಕೆಂಪಯ್ಯನವರೇ,
ನಿಮ್ಮ ಆತಂಕವನ್ನು ಹೇಗೆ ನಿವಾರಿಸಬಹುದೆಂಬ ಬಗ್ಗೆ ನಿಮಗಿಂತ ಮೇಲೆ ಕಾಮೆಂಟ್ ಮಾಡಿದ ಮಾಯ್ಸ ಅವರ ಉತ್ತರದಲ್ಲಿದೆ. ಕನ್ನಡಿಗ ಪ್ರಬಲನಾದರೆ ಕನ್ನಡ ಪ್ರಬಲವಾಗುತ್ತದೆ.

Pramod ಅಂತಾರೆ...

Well said Chandrashekhara Manteswami. RSS has in fact refined over time. Golwalkar who had written controversial comments in his book in his early age also refined as he got aged. People do change. In fact RSS was never involved in any serious malpractices or crimes. The other article by en guru coffee against RSS was quite exaggerated and one sided. Actually, RSS's contribution in Sino-Indian war, mobilizing land reforms, participation in flood relief, Goa freedom from portuguese, resistance during emergency time etc are really commendable. They also had taken part in republic day marching in the past. Simply making unnecessary allegations on RSS like some of our media is not healthy. You should blame them only as much as they deserve. I have interacted closely with some of the swayamsevaks. The problem with them is they honestly feel their point of view is right. It is pity to see such misguided souls. They have lot of energy and dedication in them. It is only that we have to channelize them in the right direction. Simply making allegations and blaming all the time like politicians and media will make them aggravate in the wrong direction. Hope our leaders understand this. While BJP used RSS for coming to power Congress use them in the opposite way blaming them at the drop of a hat for luring muslim votes. Finally anything and everything in our country is becoming only political, political, political. With this kind of mindset we will not land up anywhere ...

Priyank ಅಂತಾರೆ...

ಪ್ರಮೋದ್ ಅವರೇ,

ಆರ್.ಎಸ್.ಎಸ್ ಕಡೆಯಿಂದ ನಡೆದ ಕೆಲ ಒಳ್ಳೆ ಕೆಲಸಗಳ ಬಗ್ಗೆ ನೀವು ಹೇಳಿದ್ದೀರ.ಆದನ್ನ ಇಲ್ಲಿ ಯಾರೂ ಅಲ್ಲಗಳೆಯುತ್ತಿಲ್ಲ.
ಆರ್.ಎಸ್.ಎಸ್ಸಿನ ಸಿದ್ಧಾಂತದ ಬಗ್ಗೆ ಪ್ರಶ್ನೆ ಎತ್ತಲಾಗಿದೆ.
ಶ್ರೀ ಗೋಲ್ವಾಲ್ಕರ್ ಅವರ ಚಿಂತನಗಂಗಾದಲ್ಲಿರೋ ಮಾತುಗಳು ಆರ್.ಎಸ್.ಎಸ್ಸಿನ ಸಿದ್ಧಾಂತ ಆಗಿದ್ದರೆ, ಅದರಲ್ಲಿರೋ ತೊಂದರೆಗಳೇನು ಎಂಬ ಬಗ್ಗೆ ಕಳೆದ ಬ್ಲಾಗು ಮಾತನಾಡಿತ್ತು.
ಆ ಬ್ಲಾಗಿಗೆ ಬಂದ ಕಾಮೆಂಟುಗಳು, "ಚಿಂತನಗಂಗಾ ಆರ್.ಎಸ್.ಎಸ್ಸಿನ ಸಿದ್ಧಾಂತ ಅಲ್ಲ" ಎಂಬಂತೆ ಮಾತನಾಡಿದ್ದವು. "ಹಾಗಿದ್ದರೆ ಸಾವಿರಾರು ಜನ ಸ್ವಯಂಸೇವಕರು ದುಡಿಯುತ್ತಿರೋದು ಯಾವ ಸಿದ್ಧಾಂತದ ಅಡಿಯಲ್ಲಿ?"
ಡೆಮಾಕ್ರಸಿಯಲ್ಲಿ, ಯಾವುದೇ ಒಂದು ಸಂಘಟನೆ ಏನು ಮಾಡ ಹೊರಟಿದೆ ಎಂಬುದನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ.
"ಒಳ್ಳೆ ಕೆಲಸಗಳಿಗೆ ಕೈಜೋಡಿಸ ಬನ್ನಿ, ಆದರೆ ಆ ಕೆಲಸಗಳು ಯಾವ ಸಿದ್ಧಾಂತಕ್ಕೆ ಪೂರಕವಾಗಿವೆ ಎಂಬುದನ್ನ ಹೇಳೋಲ್ಲ" ಅಂದರೆ, ಅದು ನೇರತನವಾಗೊಲ್ಲ.
"ಆರ್.ಎಸ್.ಎಸ್ ಸಿದ್ಧಾಂತ ನಮಗೆ ಗೊತ್ತಿದೆ, ಅದನ್ನ ಯಾರಿಗೂ ಹೇಳುವ ಅವಶ್ಯಕತೆಯಿಲ್ಲ, ನಿಮಗೆ ಆರ್.ಎಸ್.ಎಸ್ಸಿನ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ ಎಂದರೆ ಸಂಘಕ್ಕೆ ಏನೂ ನಷ್ಟ ಇಲ್ಲ" ಎಂದು ಕೆಲವರು ಹೇಳಬಹುದು.
- ಅದು ನೇರತನವಾಗೊಲ್ಲ.
- ಸಿದ್ಧಾಂತ ಇದು ಎಂಬುದನ್ನು ಜನರ ಮುಂದೆ ಇಟ್ಟರೆ, ಜನರು ಓದಿಕೊಳ್ಳುತ್ತಾರೆ, ಇದರಿಂದ ಯಾರಿಗೂ ನಷ್ಟವೂ ಇಲ್ಲ.
- ಸಾವಿರಾರು ಸ್ವಯಂಸೇವಕರನ್ನುಳ್ಳ ಆರ್.ಎಸ್.ಎಸ್ ಅಂತಹ ದೊಡ್ಡ ಸಂಘಟನೆಗೆ, ತನ್ನ ಸಿದ್ಧಾಂತ ಇದು ಎನ್ನುವುದನ್ನು ಒಂದು ವೆಬ್ಸೈಟಿನಲ್ಲಿ ಹಾಕೋದು ಕಷ್ಟವೇನಲ್ಲ. ಅತವಾ, ಈಗಾಗಲೇ ಹಾಕಲಾಗಿದ್ದರೆ, "ಇಲ್ಲಿದೆ ನೋಡಿ" ಎಂದು ತೋರಿಸೋದು ಕಷ್ಟವೇನಲ್ಲ.

Ravi Savkar ಅಂತಾರೆ...

@Pramod: This blog asks for official stance of RSS. The blog asks openly whether RSS have a different stance on the 4 subjects. If so, then what is the official stance.
Intent of the blog is not to make allegations on RSS but to question the principles which is influencing the happenings in Karnataka.
" ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!"

Anonymous ಅಂತಾರೆ...

"ಚಿಂತನಾ ಗಂಗಾ" - ಆರೆಸ್ಸೆಸ್ ಚಿಂತನೆಗಳ ಗಂಗೆ. ಆದರೆ ಇದು ಹರಿದ್ವಾರದ ಗಂಗೆಯಲ್ಲಾ. ಮನುಷ್ಯತ್ವದ ಹೆಣ ಅರ್ಧಬೆಂದು ಕೊಳೆತು ತೇಲುತ್ತಿರುವ ಕಾಶಿಯ ಗಂಗೆ!

ಪ್ರಶಾಂತ್

Ganesh ಅಂತಾರೆ...

‎5 ಮತ್ತು 8ನೆಯ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳನ್ನು ಓದಿದ ಮಕ್ಕಳಷ್ಟೇ ಅಲ್ಲ, ಇದನ್ನು ಓದಿದ ಹಿರಿಯರು ಕೂಡ ಮತೀಯವಾದಿಯರಾಗುವುದರಲ್ಲಿ ಸಂದೇಹವಿಲ್ಲ. ಇಡೀ ಪಠ್ಯ ಕೇಸರೀಕರಣ, ವೈದಿಕಶಾಹಿ ಮತ್ತು ಸಾಮ್ರಾಜ್ಯಶಾಹಿ ಮೌಲ್ಯಗಳಲ್ಲಿ ಮುಳುಗಿ ಹೋಗಿದೆ. ಪ್ರಗತಿಪರರು, ಪ್ರಜಾಪ್ರಭುತ್ವವಾದಿಗಳು, ಮಾನವತಾವಾದಿಗಳು, ಸಾಮಾಜಿಕ ಹೋರಾಟಗಾರರು ಈ ಹುನ್ನಾರದ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ.
http://www.prajavani.net/web/include/story.php?news=3374&section=30&menuid=14

Amarnath Shivashankar ಅಂತಾರೆ...

ಈ ಹಿಂದಿನ ಬ್ಲಾಗಿನಲ್ಲಿ ಚಿಂತನಗಂಗಾದಲ್ಲಿ ಹೇಳಿರುವ ವಿಷಯಗಳು ಹೇಗೆ ಕನ್ನಡ, ಕನ್ನಡಿಗ, ಕರ್ನಾಟಕ್ಕೆ ಮುಳುವಾಗುತ್ತದೆ ಅನ್ನುವುದನ್ನು ಸವಿಸ್ತಾರವಾಗಿ ಹೇಳಲಾಗಿತ್ತು.ಬಹಳಷ್ಟು ಆರ್.ಎಸ್.ಎಸ್ ಬೆಂಬಲಿಗರು ಕಾರ್ಯಕರ್ತರು ಆರ್.ಎಸ್.ಎಸ್ ಸಿದ್ಧಾಂತಕ್ಕೂ ಚಿಂತನಗಂಗಾದಲ್ಲಿ ಹೇಳಿರುವ ವಿಷಯಕ್ಕೂ ಸಂಬಂಧವೇ ಇಲ್ಲ ಅನ್ನುವ ಹಾಗೆ ಕೆಲವು ಮಾತುಗಳು ಬಂತು. ಇನ್ನು ಕೆಲವರು ಬ್ಲಾಗಿನಲ್ಲಿ ಹೇಳಿರುವ ವಿಷಯವನ್ನ ಪ್ರಸ್ತಾಪಿಸದೆಯೇ ತಮಗೆ ಹೇಳಿಕೊಟ್ಟಿರುವ, ತಲೆಯಲ್ಲಿ ತುಂಬಿರುವ ಗಿಣಿಪಾಠವನ್ನು ಸಕ್ಕತ್ ಆಗಿ ಒಪ್ಪಿಸಿದರು.
ಸಮಾಜದಲ್ಲಿ ಸಂಘ ಮಡುತ್ತಿದ್ದೇವೆ ಎಂದು ಹೇಳಿರುವ ಸಮಾಜ ಸೇವೆಯ ಕೆಲಸಗಳು ನಿಜಕ್ಕು ನಡೆದಿದ್ದರೆ, ಅದರ ಬಗ್ಗೆ ಗೌರವ ಖಂಡಿತ ಇದೆ. ಅದೇ ರೀತಿ ಸಂಘ ಹೇಗೆ ತಮ್ಮ ರಾಜಕೀಯ ಮುಖವಾದ ಬಿಜೆಪಿಯ ಮೂಲಕ ಕನ್ನಡ ಮನಸ್ಸುಗಳಿಗೆ, ಕನ್ನಡಿಗರಿಗೆ ಕೊಡಲಿ ಪೆಟ್ಟನ್ನು ಕೊಟ್ಟರು ಅನ್ನುವುದನ್ನು ಈ ಬ್ಲಾಗು ಚೆನ್ನಾಗಿ ಹೇಳುತ್ತದೆ.
ಈ ಎರಡು ಬ್ಲಾಗುಗಳನ್ನು ಎಲ್ಲ ಸಂಘದ ಕಾರ್ಯಕರ್ತರು ಬಿಚ್ಚು ಮನಸ್ಸಿನಿಂದ ಓದಿಕೊಂಡು ತಮಗೆ ಕನ್ನಡ-ಕನ್ನಡಿಗ-ಕರ್ನಾಟಕ ಏಳಿಗೆ ಮುಖ್ಯವಾ, ಅಲ್ಲವಾ ಅನ್ನುವುದನ್ನು ಯೋಚಿಸಲು. ಬಹುಷ ಅದನ್ನ ಬಹಿರಂಗವಾಗಿ ಹೇಳುವ ಮನಸ್ಸು, ಧೈರ್ಯ ಇಲ್ಲವಾದರು ಪರವಾಗಿಲ್ಲ. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡು ಯಾವುದು ವಾಸ್ತವ, ಯಾವುದು ಕೃತಕ ಅನ್ನುವ ನಿಲುವಿಗೆ ಬರುವಂತಾಗಲೀ.

Anonymous ಅಂತಾರೆ...

En guru, kaafi kudididdu hechaaytho? Chikori hechu ide ansuthe nim kaafili. Alla swami,naanenoo poorna RSS nonu alla. aadre nodideeni sangha da chatuvatike. bhaashaa virodhi antha hanepatti katto nimma moudhya kke enenbeko? ivathu yaavude sangatane irbahudu,book prakara yaaroo hogolla. hogirthidre ivothu deshadalli ishtu problem galoo irthirlilla.Nimma praadeshika andhathe ge modalu Bhaaratheeya, nantra praadeshikavaada galu anno bhaavane ellide? Elroo avaravara bhaashege, praadeshikathege jothu beelbahudu. Kodagu, Mangalore, Uttara Karnataka heege,. yaarannoo bekaadaroo nodi aatha nalli praadeshikathe ya kurithu gourava ve illa antha doorabahudu eega En guru, En RSS antha kelo haage. Nimma Kannige Shathaavadhaani R.Ganesh, Bhyrappa ella praadeshika bhaavane illadoru. nimminda naadu udhaara anno bhrame kelavarigide alla, aha, enennbeko? Maathu maathige Kuvempu anno En guru ge, namma naada geethe yalli baree Karnaataka da mahaneeyarannu maatra smarisilla annodu nenepirali. Haagaagi Kuvempu ge VishwaMaanava karege bele bandaddu. adakke Kuvempu Vishwa maanava, naavu innoo olle kannadiga naagilla. baree huluku hudukuthaa, thanna manasina koche yannu itharara mele erachuthaa adaralle vikrutha aananda padeyodu. Jai Bhaaratha Janani ya thanujaathe, neene kaapadu

Dayanand Gowda

shanks ಅಂತಾರೆ...

No organisation and political party in India have a clear stand on many issues, they live on those contradictions. No organisation will keep giving their stand on any issues asked by any group or individuals. Like, let me ask Anand owner of this site, categorically, what is his stand on FDI, Reservation for Muslims in jobs and colleges, Muslim Personal Law, Censoring Internet by GoI, etc., etc., and importantly which does he have his affiliation or inclination today.

Priyank ಅಂತಾರೆ...

ದಯಾನಂದ್ ಗೌಡ ಅವರೇ,
ಪ್ರಾದೇಶಿಕತೆಯಿಂದ ಕೆಡುಕು ಅಂತ ತಾವು ಬಗೆದಂತಿದೆ.
ಜನರು ತಮ್ಮ ಪ್ರದೇಶದ ಏಳಿಗೆಯ ಬಗ್ಗೆ ಯೋಚಿಸೋದೇ ತಪ್ಪು ಅನ್ನೋ ಹಂಗಿದೆ ತಮ್ಮ ಮಾತು. "ತಮ್ಮ ನಾಡಿನ ಜನರ ಏಳಿಗೆ, ಇತರರಿಗೆ ತೊಂದರೆಯಾಗದಂತೆ ಇರಲಿ" ಎನ್ನುವ ಮನಸ್ಸು ಬೇಕು ತಾನೇ !
ಈ ಬರಹದಲ್ಲಿ, ಬೇರೆ ಭಾಷಿಕರಿಗೆ ಕೆಡುಕಾಗಲಿ ಅಂತ ಹೇಳಿಲ್ಲವಲ್ಲ. ಕನ್ನಡಿಗರ ಮೇಲೆ ಹೇರಿಕೆ ನಿಲ್ಲಲಿ ಅಂತ ತಾನೇ ಇಲ್ಲಿ ತೋರ್ಪಡಿಸಿರುವ ಆಶಯ. ಇದರಲ್ಲಿ ತಮಗೆ ತಪ್ಪೇನು ಕಾಣಿಸ್ತು?
ಎಲ್ಲರೂ ಪ್ರಾದೇಶಿಕತೆಗೆ, ನುಡಿಗೆ ಜೋತು ಬೀಳಬಹುದು ಅಂತ ನೀವು ಹೇಳಿದೀರ. ಹಾಗೆ ಎಲ್ಲರೂ ತಮ್ಮ ಪ್ರದೇಶದ ಬಗೆಗೆ, ನುಡಿಯ ಬಗೆಗೆ, ಕಾಳಜಿಯುಳ್ಳವರಾಗಬಹುದು. ಅದರಲ್ಲಿ ತಪ್ಪೇನಿದೆ?
ಕುವೆಂಪು ಹೇಳಿದ ವಿಶ್ವಮಾನವ ಸಂದೇಶ ಆರ್.ಎಸ್.ಎಸ್ಸಿನ ನಿಲುವುಗಳಲ್ಲಿ ನನಗೆ ಕಾಣುಸ್ತಿಲ್ಲ. ಕುವೆಂಪು ಅವರು ಮನುಜಮತದ ಬಗ್ಗೆ ಮಾತನಾಡಿದರೇ ಹೊರತು, ಯಾವುದೋ ಒಂದು ಜಾತಿ/ಮತ ಬಗ್ಗೆ ಮಾತನಾಡಲಿಲ್ಲ. ಮೇಲಾಗಿ, ಕುವೆಂಪು ಅವರು ಒಂದು ನಾಡಿನ ಏಳಿಗೆಗಾಗಿ, ಇನ್ನೊಂದು ನಾಡಿನ ಬಲಿಯನ್ನು ಒಪ್ಪುತ್ತಿರಲಿಲ್ಲ. ಕುವೆಂಪು ಅವರ ಬಗ್ಗೆ ತಾವು ಹೆಚ್ಚು ತಿಳಿದರೆ ಒಳಿತು, ಒಳ್ಳೆಯ ಕನ್ನಡಿಗರಾಗುತ್ತೀರ ಆಗ.
"ಚಿಕೋರಿ ಜಾಸ್ತಿಯಾಗಿ ಪಿತ್ತ ಏರಿದೆ" ಎಂಬ ಮಾತುಗಳನ್ನಾಡಿ ವಿಕ್ರುತ ಆನಂದ ಪಡೆಯೋದು ಬಹುಶ ತಾವು ಆಗ ನಿಲ್ಲಿಸಬಹುದು.

sunil indian ಅಂತಾರೆ...

Shanks,
First thing first. Anand's stand on what you asked is not so important. You know Why? Anand is influencing Karnataka's society like RSS, Anand is not running the govt from the backdoor like RSS and as RSS is doing all these things, it must answer it's stance on the issues of Federalism, Language policy, social justice and non hindu religions. I hope you get the point.

Anil surapura ಅಂತಾರೆ...

What is this pradeshika or rashtriya manobhavane? I don't really understand it. Hindi is spoken in some regions, so if somebody vouches for hindi, it should also mean pradeshika manobhavane right?

India is a union of states and every state has the right to work, vouch for it's languages, it's culture and all this is nationalistic feelings horatu pradeshika bhava alla.

pradeshagalella seri desha aagiruvaaga pradeshada bagge abhimana taaluvudu tappalla..

equality for everyone, every language, every religion makes India strong and not parochial feelings as expressed in chintanaganga..

Vijaya kumar. A ಅಂತಾರೆ...

Dear Shanka and Dayananda,

First we shall try to make people aware of the problems faced by karnataka and kannadiga and mobilise kannadigas. Our life is very short. When all our dreams about karnataka and kannada is fulfilled, we shall think about the issues u have raised, if at all, we have time. One at a time boss. We too are humans not robots. Dayanand Gowda tension yaake, cool aagiri swami. Why do u tear your clothes, it is very cold out there?

Mahesh ಅಂತಾರೆ...

ಧರ್ಮದ ಹೆಸರಿನಲ್ಲಿ ಉರ್ದು ಭಾಷೆಯ ಹೇರಿಕೆಯನ್ನು ವಿರೋಧಿಸಿ, ಬಾಂಗ್ಲಾದೇಶ ಹುಟ್ಟಿಕೊಂಡಿದ್ದು ನಮಗೆಲ್ಲಾ ತಿಳಿದಿದೆ. ಸಂಫದವರು ಇದನ್ನು ಚೆನ್ನಾಗಿ ತಿಳಿಯುವದು ಒಳ್ಳೆಯದು. ಹುಚ್ಚು ಧಾರ್ಮಿಕತೆಯಿಂದ ಯಾರಿಗೂ ಒಳ್ಳೆಯದಾಗಿಲ್ಲ. ಪಾಕಿಸ್ತಾನದಲ್ಲಿ ಇಸ್ಲಾಂ ಹೆಸರಿನಲ್ಲಿ ಯಾವ ಇತಿಹಾಸ ಕಲಿಸಿದರು ಮತ್ತು ಅದರಿಂದ ಇಂದು ಅನುಭವಿಸುತ್ತಿರುವ ದುಷ್ಪರಿಣಾಮಗಳು ಇಂದು ನಮಗೆ ಪಾಠವಾಗಬೇಕು. ಪಾಕಿಸ್ತಾನದಲ್ಲಿ ಯಾವ ರೀತಿಯ ಇತಿಹಾಸ ಕಲಿಸಿದರು ಮತ್ತು ಅದರಿಂದ ದ್ವೇಷ ಭಾವನೆಗಳು ಹೇಗೆ ಹುಟ್ಟಿಕೊಂಡಿವೆ ಎಂಬುದನ್ನು ಪಾಕಿಸ್ತಾನದ ಸುಪ್ರಸಿದ್ಧ ಇತಿಹಾಸಕಾರ ನಜಮ್ ಸೇತ್ ರವರು ಇಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ
http://www.youtube.com/watch?v=wb5ZzcU5l10&feature=related
ದಯವಿಟ್ಟು ಇದರಿಂದ ನಾವು ಕಲಿಯುವಂಥದ್ದು ಬಹಳಷ್ಟಿದೆ.

maaysa ಅಂತಾರೆ...

"ಇಡೀ ಪಠ್ಯ ಕೇಸರೀಕರಣ, ವೈದಿಕಶಾಹಿ ಮತ್ತು ಸಾಮ್ರಾಜ್ಯಶಾಹಿ ಮೌಲ್ಯಗಳಲ್ಲಿ ಮುಳುಗಿ ಹೋಗಿದೆ. ಪ್ರಗತಿಪರರು, ಪ್ರಜಾಪ್ರಭುತ್ವವಾದಿಗಳು, ಮಾನವತಾವಾದಿಗಳು, ಸಾಮಾಜಿಕ ಹೋರಾಟಗಾರರು ಈ ಹುನ್ನಾರದ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ."

I too read that letter in Prajavani. I was shocked. When I studied my high school, our text books were so progressive.

By the way, the govt. which has brought all these new 'values' into the text book, is filled with corrupt and moral-less people. Look at them fighting like crazy dogs in public. And they claimed they were trained by a great nationalist organisation, the savior of Indian culture.

When we read any news about Yeddy etc.. it very hard to raise our head up in proud that we belong to Karnataka.

ಮಹೇಶ ಭಟ್ಟ ಅಂತಾರೆ...

ಈ ಹಿಂದೆ ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮದ ಹೆಸರಿನಲ್ಲಿ ಉರ್ದು ಭಾಷೆಯ ಹೇರಿಕೆಯ ಕಾರಣದಿಂದಲೇ ಬಾಂಗ್ಲಾದೇಶ ಹುಟ್ಟಿಕೊಳ್ಳಲು ಕಾರಣವಾಯಿತು ಎನ್ನುವದನ್ನು ನಾವೆಲ್ಲರು ಅರಿತುಕೊಂಡಿದ್ದೇವೆ. ಹುಚ್ಚು ಧಾರ್ಮಿಕತೆಯಿಂದ ಯಾರಿಗೂ ಒಳ್ಳೆಯದಾಗುವದಿಲ್ಲ. ಇದನ್ನು ಸಂಫದವರು ಅರಿತುಕೊಂಡರೆ ಒಳ್ಳೆಯದು. ಪಾಕಿಸ್ಥಾನದಲ್ಲಿ ಧರ್ಮದ ಹೆಸರಿನಲ್ಲಿ ಸತತವಾಗಿ ತಿರುಚಿದ ಇತಿಹಾಸಗಳನ್ನು ಕಲಿಸಿದ ಕಾರಣದಿಂದ ಉಂಟಾದ ಇಂದು ಆ ದೇಶದ ಪರಿಸ್ಥಿತಿಯನ್ನು ನಾವೆಲ್ಲರೂ ಮನಗಾಣಬೇಕಿದೆ. ಆ ದ್ವೇಷ ಭಾವನೆಗಳಿಂದ ಹಿಂತಿರುಗಲು ಇನ್ನು ತಲೆಮಾರುಗಳೇ ಬೇಕೇನೋ. ಧಾರ್ಮಿಕ ಮುಖಂಡರ ಕೈಗೆ ಸಿಲುಕಿ ತಿರುಚಲ್ಪಟ್ಟ ಇತಿಹಾಸದಿಂದಾದ ದುಷ್ಪರಿಣಾಮವನ್ನು ಪಾಕಿಸ್ಧಾನದ ಸುಪ್ರಸಿದ್ಧ ಇತಿಹಾಸಕಾರರಾದ ನಜಮ್ ಸೇತ್ ರವರು ಮುಂದಿನ ವೀಡಿಯೋಗಳಲ್ಲಿ ಎಳೆ,ಎಳೆಯಾಗಿ ವಿವರಿಸಿದ್ದಾರೆ. http://www.youtube.com/watch?v=wb5ZzcU5l10&feature=related

ಇಂತಹ ಫಟನೆಗಳು ನಮಗೆಲ್ಲರಿಗೂ ಪಾಠವಾಗಬೇಕು. ನಮ್ಮಲ್ಲೂ ಅಂತಹುದು ನಡೆಯುವ ಮುಂಚೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.

maaysa ಅಂತಾರೆ...

"ಈ ಹಿಂದೆ ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮದ ಹೆಸರಿನಲ್ಲಿ ಉರ್ದು ಭಾಷೆಯ ಹೇರಿಕೆಯ ಕಾರಣದಿಂದಲೇ ಬಾಂಗ್ಲಾದೇಶ ಹುಟ್ಟಿಕೊಳ್ಳಲು ಕಾರಣವಾಯಿತು ಎನ್ನುವದನ್ನು ನಾವೆಲ್ಲರು ಅರಿತುಕೊಂಡಿದ್ದೇವೆ."

Also check with the USSR what happened. USSR Russianized Latvia, Ukraine, Estonia, Belarus etc etc etc. Now all these small countries have large Russian minorities, insisting of continuing Russian as an official language, and become a big problem in their society.

However, after the dissolution of USSR, Russian businessmen and politicians became ultra-rich. They are buying many the F1-teams in Europe. Where as Lativia is suffering from mass emigration of its youth to western Europe for livelihood.

ವಸಂತ ಅಂತಾರೆ...

ವಿಷಯಾಂತರವಾಗುವುದು ಬೇಡ. ಇಲ್ಲಿರುವ ಮುಖ್ಯ ಪ್ರಶ್ನೆಗಳು ನಿನ್ನೆಗೂ ಇಂದಿಗೂ ಹೆಚ್ಚೆನು ಬದಲಾಗಿಲ್ಲ. ಇಲ್ಲಿ ಆರ್.ಎಸ್.ಎಸ್ ಒಂದು ಸಂಘಟನೆಯಾಗಿ ಹೇಗಿದೆ, ಅಲ್ಲಿ ಶಿಸ್ತಿದೆಯೇ? ಅಲ್ಲಿ ಕನ್ನಡ ಬಳಸುತ್ತಾರೆಯೇ, ಎಷ್ಟು ಬಳಸುತ್ತಾರೆ, ಎಲ್ಲೆಲ್ಲಿ ಬಳಸುತ್ತಾರೆ ಅನ್ನುವುದು ಚರ್ಚೆಯ ವಿಷಯವಲ್ಲ. ಚರ್ಚೆಯ ಮುಖ್ಯ ಪ್ರಶ್ನೆಗಳು ಅವೇ ಮೂರೋ-ನಾಲ್ಕು ಪ್ರಶ್ನೆಗಳು ೧>ಬಹು ಭಾಷಾ ಭಾರತದಲ್ಲಿ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಯಾಗಲಿ ಅನ್ನದೇ ಹಿಂದಿಯೇ ಆಗಬೇಕು ಅನ್ನುವ ನಿಲುವಿಗೆ ಸಂಘ ಈಗಲೂ ಬದ್ದವೇ? ೨> ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತದ ಒಕ್ಕೂಟ ಸ್ವರೂಪ ಅಳಿಸಿ ಯುನಿಟರಿ ಆಳ್ವಿಕೆ ತರಬೇಕು ಅನ್ನುವ ನಿಲುವಿಗೆ ಸಂಘ ಈಗಲೂ ಬದ್ದವೇ? 3> ಮುಸ್ಲಿಂ, ಕ್ರಿಶ್ಚಿಯನ್ನರು ಎಂದಿಗೂ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಅನ್ನುವ ನಿಲುವಿಗೆ ಸಂಘ ಈಗಲೂ ಬದ್ದವೇ? ? 4> ಹಣದಾಸೆ ತೋರಿಸಿ ಜಾತಿ ಬುಡಕಟ್ಟಿನ ಗುರುತುಗಳಾಗುತ್ತಿವೆ ಹೊರತು ಸಮಾಜಿಕ ಅಸಮಾನತೆಯೇ ಇರಲಿಲ್ಲ ಅನ್ನುವ ನಿಲುವಿಗೆ ಸಂಘ ಈಗಲೂ ಬದ್ದವೇ? ಈ ವಿಶ್ಯಗಳ ಬಗ್ಗೆ ಚರ್ಚೆಯಾಗಲಿ. ಕಾಲಾಂತರದಲ್ಲಿ ಆರ್.ಎಸ್.ಎಸ್ ನ ನಿಲುವು ಬದಲಾಗಿದ್ದರೆ ಅದು ತಿಳಿಯಲಿ, ಇಲ್ಲವೇ ಬದಲಾಗದಿದ್ದರೆ ಅದೂ ತಿಳಿಯಲಿ.

ವಸಂತ ಅಂತಾರೆ...

ಪ್ರಜಾವಾಣಿಯಲ್ಲಿ ಪಠ್ಯಪುಸ್ತಕಗಳನ್ನು ತಿರುಚಿ ಕೇಸರಿಬಣ್ಣಕ್ಕೆ ತಿರುಗಿಸುವ ಕುರಿತ ಲೇಖನ ನಿಜಕ್ಕೂ ಕಳವಳ ತರುವಂತದ್ದು. ಸರಿಯಾದ ಕಲಿಕೆಯ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಪ್ರತಿಯೊಂದನ್ನು ಪ್ರಶ್ನಿಸಿ ತಿಳಿಯುವ ಕುತೂಹಲದ ಮನಸ್ಥಿತಿ, ಮಾನವೀಯ, ನಾಗರೀಕ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಮಕ್ಕಳ ಮನಸ್ಸನ್ನು ಹಕ್ಕಿಯಂತೆ ಹಾರಿಕೊಂಡು, ಮುಕ್ತವಾಗಿ ತೆರೆದ ಮನಸ್ಸಿನಂತೆ ಯೋಚಿಸುವಂತೆ ಕಟ್ಟಿದಲ್ಲಿ ಮಾತ್ರ ಜಗತ್ತು ಬೆರಗಾಗುವಂತ ಅಪರೂಪದ ಸಾಧನೆ ಆ ಮಕ್ಕಳು ಸಾಧಿಸಲು ಸಾಧ್ಯ. ಆದ್ದರಿಂದ ಮಕ್ಕಳ ಮನಸ್ಸನ್ನು ಯಾವುದೇ ಧರ್ಮದ, ಪಂಥದ, ಜಾತಿಯ ಆಚರಣೆಯ ಚೌಕಟ್ಟಿಗೆ ಬಂಧಿಸುವ ಕೆಲಸ ಶಾಲೆಗಳಲ್ಲಿ ಆಗಬಾರದು. ಧರ್ಮ, ವೈದಿಕತೆ, ದ್ವಿ ಪಕ್ಷ ಪದ್ದತಿ ಹೀಗೆ ಬಿಜೆಪಿಯ ಸಿದ್ದಾಂತಕ್ಕೆ ಯಾವುದು ಸರಿ ಅನ್ನಿಸುತ್ತೋ ಅದನ್ನು ಮಾತ್ರ ಮಕ್ಕಳು ಕಲಿಯಲಿ ಅನ್ನುವಂತೆ ಮಾಡಿದರೆ ವಿಷವಾಗುವ ಮಕ್ಕಳ ಮನಸ್ಸನ್ನು ಸರಿಪಡಿಸಲಾದಿತೇ? ಧರ್ಮ ಅಫೀಮಿನಂತೆ. ಅದು ನೆತ್ತಿಗೆರಿದರೆ ಅದು ಹಿಂದೂ ಇರಲಿ, ಮುಸ್ಲಿಂ ಇರಲಿ, ಧರ್ಮಾಂಧರಾದ ಕಣ್ಣುಗಳು ಸುತ್ತಲಿನ ಪ್ರಪಂಚವೇ ಕಾಣದಂತೆ ಮಾಡುವುದು. ಹಾಗೇ ಧರ್ಮಾಂಧರಾದವರೇ ಮುಂಬೈ ಮೇಲೆ ದಾಳಿ ಮಾಡಿದ್ದು, ಹಾಗೇ ಧರ್ಮಾಂಧರಾದವರೇ ಗಾಂಧಿಯನ್ನು ಕೊಂದಿದ್ದು. ಯಾವ ರೂಪದ ಧರ್ಮಾಂಧತೆಯು ನಮಗೆ ಬೇಡ. ನಮಗೆ ಬೇಕಿರುವುದು ಸಮ ಗೌರವದ, ಸಮಾನತೆಯ ನೆಲೆಯ ಒಕ್ಕೂಟ, ಎಲ್ಲ ಭಾಶೆಗಳಿಗೂ ಸಮಾನ ಸ್ಥಾನಮಾನ, ಸಮಾಜದ ಎಲ್ಲ ವರ್ಗಗಳು ಏಳಿಗೆಯಾಗುವಂತಹ ಕಲಿಕೆ, ದುಡಿಮೆಯ ಏರ್ಪಾಡುಗಳು. ಧರ್ಮಾಂದತೆಯ ಸೆರಗಿಗೆ ಸಿಕ್ಕ ಪಾಕಿಸ್ತಾನದಲ್ಲ ಏನಾಗಿದೆ ಗಮನಿಸಿ. ಭಾರತದ ದ್ವೇಷವೇ ಜೀವನ ಅನ್ನುವಂತಹ ಜನರು ಅಲ್ಲಿ ಹುಟ್ಟಿಕೊಂಡಿದ್ದಾರೆ. ನಮ್ಮಲ್ಲೂ ಅದಾಗಬೇಕೇ? ಸಮಾಜ ಎದುರಿಸುತ್ತಿರುವ ಭಯೋತ್ಪಾದನೆಗೆ ಪರಿಹಾರ ಭಯೋತ್ಪಾದಕರನ್ನು ಮಟ್ಟ ಹಾಕುವುದು, ಅದು ಹಿಂದೂ ಇರಲಿ, ಮುಸ್ಲಿಂ ಇರಲಿ. ಅದು ಬಿಟ್ಟು ಅದೆಲ್ಲದಕ್ಕೂ ಒಂದು ಧರ್ಮದ ಎಲ್ಲರನ್ನೂ ಉಗ್ರರೆನ್ನುವುದು ಏನು ಸಾಧಿಸೀತು? ಅವರೆಲ್ಲರೂ ನಿಜಕ್ಕೂ ಉಗ್ರರಾದರೇ ನಾಡಿನ ಪಾಡು ಏನಾದೀತು? ಕನ್ನಡಿಗರ (ಎಲ್ಲ ಧರ್ಮ, ಜಾತಿ, ವರ್ಗಕ್ಕೆ ಸೇರಿದ) ಏಳಿಗೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುವಾಗ ಆ ಗುರುತನ್ನು, ಅದರ ಒಗ್ಗಟ್ಟನ್ನು ಒಡೆಯುವ ಎಲ್ಲದನ್ನೂ ಪ್ರಶ್ನಿಸಬೇಕಾದ, ಪರಿಹಾದಸ ಬಗ್ಗೆ ಚರ್ಚೆ ಮಾಡಬೇಕಾದ, ವೈಯಕ್ತಿಕವಾಗದೇ ಶಾಂತಿಯುತವಾಗಿ ಪರಸ್ಪರ ಗೌರವದಿಂದ ಚರ್ಚಿಸುವ ಅಗತ್ಯ ನಮ್ಮ ಮುಂದಿದೆ. ಅದಾಗಲಿ.

Anonymous ಅಂತಾರೆ...

ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವ್ಯವಸ್ಥೆಯ ಮೂಲೋತ್ಪಾಟನೆ ಮಾಡಲು ಕರೆ ನೀಡಿದ್ದರು. ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ್ದರು. ಆದರೆ ಇಂದು ಸಂಘ ಪರಿವಾರದವರು ಪುರೋಹಿತಶಾಹಿ ವ್ಯವಸ್ಥೆಯ ಸಬಲೀಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಮುಂದುವರಿಯುತ್ತಿದ್ದಾರೆ. ಮೂಢ ನಂಬಿಕೆಗಳನ್ನು ಬಿತ್ತಿ ಬೆಳೆಸುತ್ತಿರುವ ವ್ಯವಸ್ಥೆಯ ವಿರುದ್ಧ ಸಂಘ ಪರಿವಾರ ಹೋರಾಟ ನಡೆಸಿದ್ದು ಕಂಡು ಬರುತ್ತಿಲ್ಲ, ಬದಲಿಗೆ ಹಲವು ಮೂಢ ನಂಬಿಕೆಗಳ ಪರವಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹೋರಾಡುತ್ತಿರುವುದು ಕಂಡು ಬರುತ್ತದೆ. ಸಂಘ ಪರಿವಾರವು ಕೆಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ, ಈ ಹಿಂದೆಯೂ ಮಾಡಿದೆ ಆದರೆ ಅದರ ಜೊತೆಯೇ ಕೆಲವು ರಾಷ್ಟ್ರದ ಹಿತಕ್ಕೆ ಮಾರಕವಾದ ಕೆಲಸಗಳನ್ನೂ ಮಾಡುತ್ತಿದೆ. ಕೇಂದ್ರದಲ್ಲಿ ಸಂಘ ಪರಿವಾರದ ರಾಜಕೀಯ ಅಂಗವಾದ ಬಿಜೆಪಿ ಸರ್ಕಾರವಿರುವಾಗ ಜ್ಯೋತಿಷ್ಯದಂಥ ಪರಮ ಮೂಢ ನಂಬಿಕೆಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಒಂದು ವಿಷಯವಾಗಿ ಕಲಿಸುವ ಪ್ರಯತ್ನ ಮಾಡಿತ್ತು. ಇಂದು ಕೂಡ ಬಿಜೆಪಿ ಮಂತ್ರಿಗಳು, ಮುಖ್ಯ ಮಂತ್ರಿಗಳು ಅಧಿಕಾರ ವಹಿಸಿಕೊಳ್ಳುವಾಗ ಪೂಜೆ ಪುನಸ್ಕಾರದಂಥ ಪುರೋಹಿತಶಾಹಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಇದು ವಾಸ್ತವವಾಗಿ ಸ್ವಾಮಿ ವಿವೇಕಾನಂದರ ಕರೆಗೆ ವಿರುದ್ಧವಾದುದಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಘ ಅಸ್ತಿತ್ವದಲ್ಲಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಗಾಂಧೀಜಿಯವರು ಸ್ವಾಮಿ ವಿವೇಕಾನಂದರ ಕರೆಯಂತೆ ಪುರೋಹಿತಶಾಹಿ ವ್ಯವಸ್ಥೆಗೆ ವಿರುದ್ಧವಾಗಿ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಗಾಂಧೀಜಿವವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದು ಸಂಘದ ಪ್ರೇರಣೆಯಿಂದ ಎಂದು ತಿಳಿದುಬರುತ್ತದೆ. ಏಕೆಂದರೆ ಸುಧಾರಣೆಗಳನ್ನು ಜಾರಿಗೆ ತರಲು ಹೋರಾಡುತ್ತಿದ್ದ ಗಾಂಧೀಜಿ ಹಿಂದೂ ಪುರೋಹಿತಶಾಹಿಗೆ ಒಂದು ದೊಡ್ಡ ಬೆದರಿಕೆಯಾಗಿದ್ದರು. ಸಂಘವು ಅನ್ಯ ಧರ್ಮಗಳ ಜನರು ಹಿಂದೂಗಳ ಹಿತಕ್ಕೆ ಮಾರಕ ಎಂದು ಬಿಂಬಿಸಿ ಹಿಂದೂಗಳ ಮತಬ್ಯಾಂಕ್ ರೂಪಿಸಿ ಅಧಿಕಾರಕ್ಕೆ ಬರುವ ಹುನ್ನಾರ ಲಾಗಾಯ್ತಿನಿಂದಲೂ ಮಾಡುತ್ತ ಬಂದಿದೆ, ಆದರೆ ಹಿಂದೂ ಧರ್ಮದಲ್ಲಿರುವ ತಾರತಮ್ಯ ವ್ಯವಸ್ಥೆಯ ನಿವಾರಣೆಗೆ ಸಮರ್ಪಕ ಕಾರ್ಯಕ್ರಮ ಕೈಗೊಂಡಿಲ್ಲ. ಅಂಥ ಕೆಲಸದಲ್ಲಿ ಅದಕ್ಕೆ ಆಸಕ್ತಿಯೂ ಇರುವಂತೆ ಕಾಣುವುದಿಲ್. - ಕೃಷ್ಣಪ್ಪ

Anonymous ಅಂತಾರೆ...

Priyank avare, nimma baraha aha, enennabeko?!! Nimma helike-> Thamma naadina janara eligege, innobbarige thondareyaagadanthe irali. sari nimma helike. Nimma vaakyavanne bareyodadare ishtakkoo RSS elli kannada da mele dabbaalike nadeside? heli Priyaank? Chinthana Ganga sangha sidhaantha pustaka irabahudu. haage helodaadre ella sangha gala pustaka gala mele bareyona. avarellarigoo ondondu kannada virodhi anno topi ready maadona. ashtaaguvaaga namage baraha kke, ankanakke vishaya siguthe, naavoo prasidharaagbahudu. Illaddannu kandu hedarike huttisuvudakke enenna beko? Yaava RSS kaaryakarthanoo kannada virodhi alla. Thaanu/thanna parivaara maatra shudha kannadiga antha thiliyuvudu ideyalla, shudha moorkhathana. Praadeshikathe andare namma chinthane yoo praadeshika aagirabeku antha alla. Sankuchitha emba artha allavalla Priyank? Innu herike anno nimma bhaashege. Yaava RSS shaakhe yalli Hindi Herike maadidru Priyaank? Kannada dalliro swaraakshara, vyanjana galannu parishkarisi samskritha, asamskrutha antha divide maadi samrudha bhaashe ge kodali etu haakalu havanisuthaaralla, avarenu kannada premigale? idu bhaashaabhimaanada sankethave? Eegaagale KV Thirumalesh, R.Ganesh, innoo halavaaru panditharu ee kurithu ethida aakshepakke answer maadade kannada da contract vahisikondanthe maathaaduthaarallaa, idenu? Yaavude sangha vaagali, adara sidhaanthakkintha modalu adara seve yannu, raashtra prajne yannu thiliyona. Virodhakkaagi virodha beda.Indina kannada da sthithi ge RSS sidhaantha 5 paise yashtoo kaarana alla. modalu analysis sariyaagi maadi nanthara yaaryaaru kannada vannu eshteshtu haalu maadiddaare antha koshtaka prakatisona. Adu bittu Gummana thorsi thanna swaartha chinthane ge, fame na hinde biddu, thannannu thaane Guru vina sthaanadalli koorisi meredaado aham beda. Vineetha budhi irali. Induina kannadigara sthithi ge kannadigare nera kaarana horathu RSS, DMK, AIADMK antha beralu thorisodralli artha illa. Ishtakkoo anukampa gittisi namagenu aagbeku? alvaa?
Kuvempu ravara samagra kruthi odiddene. Kuvempu elliyoo raashtra prajne dhikkarisu antha helilla. adu avara Vishwamaanava prajne ya anga voo alla. Haagiddare Kuvempu andu helida e maathigenu artha? -> Yaava bhaashe Anna koduthado aa bhaasheyannu jana ishta padthaare antha. Idakkenu heltheeri? Bhaashe anna kodbeku antha heliddaare Kuvempu.Priyaank, neevu kalitha English herike alvaa? Tulu kaliyonige Kannada Herike alvaa? Kodava nige Kannada herike alvaa? Konkaniganige Kannada herike alvaa? haagiddare neevu prathipaadiso praadeshikathe enthaddu? heli. Heege maathaaduvudu hege asambadhavo haageye chinthana ganga pustaka thorisi kannada da kurithu bhaashana bigiyodoo aviveka. RSS hutti 85 varsha aaythu,.iduvarege illada RSS kurithaada praadeshikatheyemba gumma En Guru ge kandide. great kannadiga.alvaa Guru?

bye,
Dayanand Gowda

Anonymous ಅಂತಾರೆ...

ಸಂಘದ ಬಾಯಿಗೆ ಏಕೆ ಪ್ರೆಶ್ನೆಗಳನ್ನು ತುರುಕುವ ಪ್ರಯತ್ನ?

Priyank ಅಂತಾರೆ...

ದಯಾನಂದ್ ಗೌಡ ಅವರೇ,
ನಿಮ್ಮ ಮನಸ್ಸಿನಲ್ಲಿರೋ ವಿಷಯಗಳನ್ನ ಹೇಳಿ ಒಳ್ಳೆ ಕೆಲಸ ಮಾಡಿದೀರಿ. ನಿಮಗಿರುವ ಗೊಂದಲ ಏನು ಎಂಬುದು ಈಗ ನನಗೆ ಪೂರ್ತಿಯಾಗಿ ಗೊತ್ತಾಯಿತು.
ನಿಮ್ಮ ಪ್ರಶ್ನೆಗಳಿಗೆ ಉದ್ದದ ಉತ್ತರ ಕೊಟ್ಟಿದೀನಿ.
೧. ನಿಮ್ಮ ಮಾತು - "ಆರ್.ಎಸ್.ಎಸ್ ದಬ್ಬಾಳಿಕೆ ನಡೆಸಿಲ್ಲ. ಕರ್ನಾಟಕದ ಪ್ರತಿಯೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನೂ ಕನ್ನಡ ಮಾತಾಡ್ತಾನೆ. ಹಾಗಿದ್ದೂ ಕನ್ನಡ ಆರ್.ಎಸ್.ಎಸ್ಸಿನಿಂದಾಗಿ ಹಾಳಾಯ್ತು ಅಂತೀರಲ್ಲ".
- ಆರ್.ಎಸ್.ಎಸ್ ದಬ್ಬಾಳಿಕೆ ನಡೆಸಿದೆ ಅಂತ ನಾನು ಹೇಳಿಲ್ಲ. ಕನ್ನಡಿಗರೂ, ತಮಿಳರೂ, ತೆಲುಗರೂ, ತಮ್ಮ ತಮ್ಮ ನಡುವೆ ವ್ಯವಹಾರಕ್ಕೆ ಹಿಂದಿ (ಮುಂದೊಂದು ದಿನ ಸಂಸ್ಕ್ರುತ) ಬಳಸಲಿ ಎನ್ನುವುದು ಗೋಲ್ವಾಲ್ಕರ್ ಅವರ ನಿಲುವು. ಅದಕ್ಕಾಗಿ ಎಲ್ಲ ಕನ್ನಡಿಗರೂ ಹಿಂದಿ ಕಲಿಯಬೇಕಾ? ಎಲ್ಲಾ ಕನ್ನಡಿಗರೂ ಹಿಂದಿ ಕಲಿಯುವಂತೆ ಮಾಡಲು ಸರ್ಕಾರದ ಹಣ ಬಳಕೆಯಾಗುವುದು ಹೇರಿಕೆ ತಾನೇ? ಇಂತಹ ಹೇರಿಕೆಯನ್ನು ಬೆಂಬಲಿಸುವ ನಿಲುವು (ಯಾರದೇ ಆಗಲಿ) ಪ್ರಶ್ನಾರ್ಹವೇ!
ಕನ್ನಡಿಗರು ಇಂತಹ ನುಡಿ ಕಲಿಯಬೇಕು ಅಂತ ಹೇಳಲು ಯಾರಿಗಾದರೂ ಏನು ಹಕ್ಕಿದೆ?
೨. ನಿಮ್ಮ ಮಾತು - ಯಾವುದೇ ಸಂಘವಾಗಲೀ ಅದರ ಸಿದ್ಧಾಂತಕ್ಕಿಂತಾ ಮೊದಲು ಅದರ ಸೇವೆಯನ್ನು ನೋಡಬೇಕು. ವಿರೋದಕ್ಕಾಗಿ ವಿರೋದ ಬೇಡ.
- ಸಿದ್ಧಾಂತದಿಂದಲೇ ಕೆಲಸಗಳು ಕೈಗೆತ್ತಿಕೊಳ್ಳಲ್ಪಡುತ್ತವೆ ಎಂಬುದು ತಮಗೆ ತಿಳಿದಂತಿಲ್ಲ. ಕನ್ನಡಿಗರಲ್ಲಿ ಕನ್ನಡತನ ಸಂಕುಚಿತವೆಂಬ ಬಾವನೆ ತುಂಬಬೇಕು ಎಂಬ ಸಿದ್ಧಾಂತವಿದ್ದರೆ, ಅಂತಹ ಸಂಘಟನೆಯಿಂದಾ ನಡೆಯುವ ಕೆಲಸಗಳೆಲ್ಲಾ ಇದನ್ನೇ ಸಾಧಿಸಲು ಮಾಡಿದುದಾಗಿರುತ್ತವೆ. ಸಿದ್ಧಾಂತ ಸಮಾಜಕ್ಕೆ ಒಳಿತಲ್ಲ ಎನಿಸಿದವರೆಲ್ಲರೂ, ಸಿದ್ದಾಂತವನ್ನು ಪ್ರಶ್ನಿಸಬಹುದಾಗಿದೆ. ಅದುವೇ ಪ್ರಜಾಪ್ರಬುತ್ವ. ಮೇಲಾಗಿ, ಆರ್.ಎಸ್.ಎಸ್ ಸಿದ್ಧಾಂತವೇನು ಮುಚ್ಚಿಟ್ಟುಕೊಳ್ಳುವಷ್ಟು ಕೆಟ್ಟದೇ? ಸಿದ್ಧಾಂತವನ್ನು ಪ್ರಶ್ನೆ ಮಾಡೋದೇ ತಪ್ಪು ಅಂತ ನೀವು ಮಾತಾಡೋದು ನೋಡಿದರೆ, ನಿಜಕ್ಕೂ ಸಿದ್ಧಾಂತದಲ್ಲಿ ಇನ್ನೂ ಏನೇನಿದೆಯೋ ಎಂಬ ಗುಮಾನಿ ಏಳುತ್ತೆ.
ಕ್ರಿಶ್ಚಿಯನ್ ಮಿಶನರಿ ಸಂಸ್ಥೆಗಳೂ ಒಳ್ಳೆಯ ಕೆಲಸ ಮಾಡುತ್ತವೆ, ಹಾಗಂತ ಅವರ ಗುರಿ/ಸಿದ್ಧಾಂತವನ್ನು ನೀವು ಆರ್.ಎಸ್.ಎಸ್ಸಿನೋರು ಪ್ರಶ್ನೆ ಮಾಡೊಲ್ಲವೇ ?
೩. ನಿಮ್ಮ ಮಾತು - ಕುವೆಂಪು ಅವರು ಬಾಶೆ ಅನ್ನ ಕೊಡುವ ಬಾಶೆಯಾಗಬೇಕು ಎಂದಿದಾರೆ. ನೀವು ಇಂಗ್ಲೀಶ್ ಕಲಿತಿರೋದು ಹೇರಿಕೆಯಲ್ಲವೆ?
- ಇವತ್ತು ಇಂಗ್ಲೀಶ್ ಅನ್ನ ಕೊಡುವ ಬಾಶೆಯಾಗಿದ್ದರಿಂದಲೇ ಇಷ್ಟೊಂದು ಜನರು ಇಂಗ್ಲೀಶ್ ಕಲಿಯುತ್ತಿರೋದು. ಕೇಂದ್ರ ಸರಕಾರದ ಕೆಲಸಗಳು ಸಿಗಬೇಕೆಂದರೆ ಹಿಂದಿ ಗೊತ್ತಿರಬೇಕು ಎಂಬುದು ಕಡ್ಡಾಯ ಮಾಡಿರೋದು, ಅನ್ನದ ಆಸೆಯಿಂದ ಒಂದಷ್ಟು ಜನ ಹಿಂದಿಯೇತರರು ಹಿಂದಿ ಕಲಿಯಲಿ ಎಂಬ ಉದ್ದೇಶದಿಂದಾ. ಈಗ ಹೇಳಿ, ಕರ್ನಾಟಕದ ಒಳಗಿರೋ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡಲು ಕನ್ನಡ ಗೊತ್ತಿರಬೇಕು ಎಂಬ ಕಡ್ಡಾಯ ರೂಲ್ ಇದೆಯಾ? ಇಲ್ಲವಾದಲ್ಲಿ, ಯಾಕಿಲ್ಲ?
ನಿಮ್ಮ ಮಾತಿನ ಇನ್ನೊಂದು ಅರ್ಥ ನನಗೆ ಕಾಣುತ್ತಿದೆ. "ನಿಮಗೆ ಇಂಗ್ಲೀಶ್ ಹೇರಿಕೆಯಾದರೆ ಪರವಾಗಿಲ್ಲ. ಹಿಂದಿ ಹೇರಿಕೆ ಇಷ್ಟವಿಲ್ಲ, ಯಾಕೆ?" ಅನ್ನುವಂತೆ ಕಾಣುತ್ತಿದೆ ನಿಮ್ಮ ಮಾತು. ನಿಮ್ಮದೂ ಇದೇ ಅರ್ಥವಲ್ಲವೆಂದರೆ ತಿಳಿಸಿ. ನಿಜಕ್ಕೂ ಅದೇ ಅರ್ಥವೆಂದರೆ, ತಾವು ಹಿಂದಿ ಹೇರಿಕೆ ಆಗಲೇಬೇಕು ಎಂಬ ತೀರ್ಮಾನ ಮಾಡಿದಂತಿದೆ. ಯಾರ ಮೇಲೂ ಯಾವ ನುಡಿಯ ಹೇರಿಕೆಯೂ ಆಗಬಾರದು ಎಂಬ ತೀರ್ಮಾನ ತಾವು ತೆಗೆದುಕೊಳ್ಳಲಾರಿರಿ ಅನಿಸುತ್ತದೆ.
೪. ಕೊಡವರ ಮೇಲೆ, ತುಳುವರ ಮೇಲೆ ಕನ್ನಡ ಹೇರಿಕೆ ಆಗಿಲ್ಲವೇ.
- ಕೊಡವರಿಗೆ, ತುಳುವರಿಗೆ ಕನ್ನಡ ಕಲಿಯಲೇಬೇಕೆಂಬ ಸ್ತಿತಿ ಕಟ್ಟಿ, ಅವರಿಗೆ ಕನ್ನಡ ಕಲಿಸುವುದು ನಡೆಯುತ್ತಿದ್ದಲ್ಲಿ ಅದು ಕನ್ನಡದ ಹೇರಿಕೆಯೇ. ಅದನ್ನು ವಿರೋದಿಸುವ ಎಲ್ಲಾ ಹಕ್ಕೂ ತುಳುವರಿಗೆ, ಕೊಡವರಿಗೆ ಇದೆ. ಅವರು ವಿರೋದಿಸಿದಲ್ಲಿ, ಅದನ್ನು ತಡೆಯುವ ಎಲ್ಲಾ ಕೆಲಸಗಳೂ ನಡೆಯಲಿ.
ನಿಮ್ಮ ಮಾತಿನ ಅರ್ಥ ಹೇಗಿದೆ ಅಂದರೆ, "ನೀವು ಕನ್ನಡ ಹೇರಿಕೆ ಮಾಡ್ತಿಲ್ವಾ, ನಿಮ್ಮ ಮೇಲೆ ಹಿಂದಿ ಹೇರಿಕೆ ನಡೆಯಲಿ ಬಿಡಿ". ಇಲ್ಲೂ, ಕನ್ನಡಿಗರ ಮೇಲೆ ಇನ್ನೊಂದು ನುಡಿಯ ಹೇರಿಕೆ ತಪ್ಪು ಅನ್ನೋ ಮಾತು ನಿಮಗೆ ಅರಿವಾದಂತಿಲ್ಲ. ಎಲ್ಲಾ ನುಡಿಗಳನ್ನೂ ಸಮಾನವೆಂದು ಕಾಣುವುದು ತಮ್ಮಿಂದ ಸಾಧ್ಯವಾದಂತಿಲ್ಲ. ಕನ್ನಡಿಗರಿಗೆ ಇನ್ನೊಂದು ನುಡಿ ಕಲಿಸಲೇಬೇಕು ಎಂದು ತಾವು ತೀರ್ಮಾನ ಮಾಡಿದಂತಿದೆ. ಬಹುಶ, ಆರ್.ಎಸ್.ಎಸ್. ಸಿದ್ಧಾಂತದ ಪ್ರಬಾವಕ್ಕೆ ಒಳಗಾಗಿ ತಮಗೆ ಈ ರೀತಿ ಮನಸ್ತಿತಿ ಬಂದಿರಬೇಕು, ಅಲ್ವಾ?

Anonymous ಅಂತಾರೆ...

nanu obba kannadiga mane bhashe tulu, nammalli tumba vayasadavaru mattu avidyavantharige eegalu kelevarige kannada matanadalua baudilla..andare namage gotide kannada namma mele herike adabhasheye,dakshina bharathada 5 dravida bhashegalalli tuluvu ondu..tuluvina lipiyu eega labyaviddu adu malayalipiyannu holutade andare malayaliyalli balasuva lipiyu tuluvinadagiralu sadyategalive..andare keralada kelavu bagavu modalu tulunadige serttu.......andare... tulu bhashe, sanskrti ,achara,ahara paddati, habbgalu, acharisu reeti tulu -kannada aja gajaantara vyatyasvide....matravalla keralavu bahuteka samyavu ide ...
estella eddaru nanu kannadiga ennalu hemme padutene kannadavu heralpatta bhashe adaru adnnu gauravisutene....yekendare adu nanna rajyada rajya bhashe agide........
hagene hindi namma rshtra bhashe enndu angeekarisalagide, adannu gauravisudu namma kartavyavagide matanadalu baradiddare namma daurbagya..
hindiyu uttara baratada bashe... nammadalla endella vadaviddaru adu tappu uttarabaratadllu urdu,odissi bagla bojpuri,modalada prabala mattu noraru sthaleeya bashegalive..
adaru avaru hindiyannu oppikondiddare..
nammali kerala talil nadu hindiyannu virodisutidda3radaroo eteechina dinagalalli kaliyutiddare,hageye madya ashiyada arab deshagalli englishgintalu hindiyu chalavane yagutide alliya jana ella idiannarannu hindigalendu kareyutare, hindi andare arab deshadali gauravavu ide
hagagi hindi yennalu namageke agaurava?....
hagenadaru kannadakke apayaviddare adu modalu ENGLISG,TAMIL,TELUG,MARATHI,MALAYALAM ninda jasti agutide,
namage nammade ada rajya bhashe eruvaga rastra mattadalli ondu bhasheya agathy ide adu pramuka samparka bashe agabeku,adu yara bhashe yellinda bantu emba prashne sariyall egagale ondu rashsta bhasheyanna arisidare kaleda kelavu dashakagalinda adannu anusarideve
aa basheyu ellarigu kaddaya vagi barabeku ennuvudaralliyu tappilla adu hindi ennuva uddeshakke virodisuvudu moorkatana..
jaikarnataka...jaihind.

KASHYAP ಅಂತಾರೆ...

@ ಆನಂದ್ (ಸಂಪಾದಕ), @Amarnath Shivashankar @Priyank
ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಲು RSS ಬಾಯಿಗೆ ನಿಮ್ಮ ಪ್ರಶ್ನೆಗಳನ್ನು ತುರುಕುವುದನ್ನ ಬಿಟ್ಟು ಬೇರೆ ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸಿ... ಒಳ್ಳೆಯ ಲೇಖನ ಬರೆಯೊದಂತು ಬಿಟ್ಟುಬಿಟ್ಟಿದ್ದೀರಾ.

ನಿಮ್ಮ RSS ಬಗ್ಗೆ ಮೊದಲ ಲೇಖನಕ್ಕೆ RSS-ನವರಿಂದ ಪ್ರತಿಕ್ರಿಯೆ ನಿಮಗೆ ಸಿಗದಿದ್ದರೂ Blogಗೆ ಒಳ್ಳೆಯ ಪ್ರತಿಕ್ರಿಯೆ (hits) ಸಿಕ್ಕಿದ ಕಾರಣಕ್ಕಾಗಿ ಈಗ RSSನ ಬಗ್ಗೆ ಇನ್ನೊದು ಲೇಖನ ಬರೆದಂತಿದೆ.

"SIGNALನಲ್ಲಿ ನೀವೆಲ್ಲಾ ಮಂಗಳಮುಖಿಯರಿಗೆ ಹೇಗೆ ಪ್ರತಿಕ್ರಯಿಸುವುದಿಲ್ಲವೋ" ಹಾಗೇ RSS ನಿಮ್ಮಂತವರಿಗೆಲ್ಲಾ ಪ್ರತಿಕ್ರಯಿಸುವುದಿಲ್ಲಾ....

ನೀವು ರಾಜಕೀಯ ಮಾಡಿ ನಿಮ್ಮ ತುಂಬ ಓದುಗರನ್ನು ಕಳೆದುಕೊಂಡಿರುವುದಂತೂ ಸತ್ಯ....

Anonymous ಅಂತಾರೆ...

@ananymous
"hagene hindi namma rshtra bhashe enndu angeekarisalagide"
hindi namma rshtra bhashe enndu yaavaga ,yaaru aMgeekarisiddu yaaru?
hindi is not our national language.....
en.wikipedia.org/wiki/Languages_with_official_status_in_India

Avinash Bhat ಅಂತಾರೆ...

Kashyap,
First develop the civility to participate in a debate without getting personal. As Enguru reader for last 5 years, I know some of them and their integrity, passion towards the cause they espouse.

RSS runs the govt from back doors, RSS has considerable influence on Karnataka and obviously with this influence, what are they trying to achieve in Karnataka need to looked at. As their entire philosophy is driven by "bunch of thoughts" of golvakarji, it becomes important for all sane thinking Kannadigas to know their stand on Social Justice, Federalism, Language policy and Non hindu religions, as Karnataka too has weaker sections of society whose rights to education, employment and life needs to be taken care, as Karnataka too is impacted with over centralisation that is happening affecting the federal structure of our country, as Karnataka too is affected by increased migration due to hindi imposition, as Karnataka too has 15-20% of Kannadigas having faith in non hindu religions. If the stand of RSS on these four issues are still the same as mentioned in bunch of thoughts, then it's a concern for all of us as BJP driven by the very same philosophy is in power. So, if RSS makes it's stand clear on these issues and distances itself from what is there in bunch of thoughts, then there is no problem.

harsha ಅಂತಾರೆ...

Religion based politics, administration is very bad..
ಅದನ ನಾವು ಈಗಲೇ ವಿರೋಧಿಸಬೇಕು . ಹಿಂದೂ ಧರ್ಮ ದಲ್ಲಿ ಒಂದೇ ಭಾಷೆ ಒಂದೇ ದೇವರು ಅಂತ ಎಂದು ಹೇಳು ಇಲ್ಲ.
RSS ಅಂತ ಸಂಘ ಸಂಸ್ಥೆ ತಪ್ಪು ಕಲ್ಪನೆಯನು ಜನರ ಮನಸು ನಲ್ಲಿ ಹಾಕುತಾರೆ. ಹಿಂದೂ ಅಂದ್ರೆ ಹಿಂದಿ ಅಂತ ಯಾವ ದೇವರು ಹೇಳಿದರೆ ಸ್ವಾಮಿ? ಸ್ವಲ್ಪ ತೋರ್ಸಿ ನೋಡೋಣ.

ಮಧು ಭಟ್ ಅಂತಾರೆ...

ನನ್ನ ಹೈಸ್ಕೂಲಿನ ದಿನಗಳು ಅವು, ಒಂದೆಡೆ ಕರಸೇವೆಯ ಅಬ್ಬರ, ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತಿದ್ದ ದಿನಗಳಿವು. ನಮ್ಮ ರಸ್ತೆಯಲ್ಲಿ ಅನೇಕ ಹುಡುಗರು ಆರ್.ಎಸ್.ಎಸ್ ಹೋಗುತ್ತ ಇದ್ದೆವು, ಮಸೀದಿ ಬಿದ್ದಾಗ ಸಿಹಿ ಹಂಚಿ ತಿಂದೆವು. ಹಿಂದು ಎನ್ನುವುದು ಮನದಲ್ಲಿ ಎಷ್ಟರ ಮಟ್ಟಿಗೆ ನಾಟಿತ್ತು ಎಂದರೆ, ಹಿಂದು ಎದ್ದಲ್ಲಿ ದೇಸ ಎದ್ದಿತು ಎನ್ನುವ ಮಾತುಗಳು ಸರಿ ಎನಿಸುತ್ತ ಇದ್ದವು. ಇದರಿಂದ ಒಂದು ಕೋಮಿನ ಬಗ್ಗೆ ಅಸಹನೆ ಶುರು ಅಗಿದ್ದ ದಿನಗಳು ಅವು. ಇವು ತಣ್ಣಗಾಗಿ ನಾವುಗಳು ವಯಸ್ಸಿನ ವಿಷಯಗಳಲ್ಲಿ ಮುಳುಗಿದಾಗ ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ, ೧೯೪೭ ಪಾರ್ಟಿಷನ್ ಸಮಯದಲ್ಲಿ ನಡೆದ ಜನಾಂಗೀಯ ಹೊಡೆದಾಟದ ಬಗ್ಗೆ ಚರ್ಚೆಯಾಗಿ ಮತ್ತೆ ನಮ್ಮಲ್ಲಿ ಇದು ತುಂಬುತ್ತ ಇದ್ದರು. ಸುತ್ತಮುತ್ತಲ ದೇವಸ್ಥಾನದಲ್ಲಿ ಗೀತಾ ಕಂಠಪಾಠ ಆಯೋಜನೆ, ರಕ್ತದಾನ ಶಿಬಿರ, ಭೂಕಂಪ ಪೀಡಿತರಿಗೆ ಸಹಾಯ ಇತರೆ ಸಮಾಜಿಕ ಕೆಲ್ಸದಲ್ಲಿ ಕಾರ್ಯಕರ್ತನಾಗಿ ಪಾಲ್ಗೊಂಡಾಗಲು ನಮ್ಮ ಚರ್ಚೆ ಮೇಲಿನ ವಿಶಯಗಳ ಬಗ್ಗೆ ಗಿರಿಕಿ ಹೊಡೆಯುತ್ತ ಇತ್ತು. ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬಂದು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು. ಆಗ ನಮಗೆ ಸಿದ್ದಾಂತ, ಗುರೂಜೀ ಎನು ಗೊತ್ತಿರದ ದಿನಗಳು, ಅಷ್ಟೆ ಯಾಕೆ ನಮಗೆ ನಮ್ಮ ಮೇಲಿನ ಒಂದಿಬ್ಬರು ಬಿಟ್ಟರೆ ಇನ್ನೂ ಯಾರು ಗೊತ್ತಿರಲಿಲ್ಲ.
ಇವತ್ತು ಮೇಲೆ ಅನೇಕರ ಉತ್ತರ ನೋಡಿದಾಗ ಆವತ್ತು ನಾನಿದ್ದ ನೆಲೆಯಲ್ಲೇ ಅನೇಕರು ಇದ್ದಾರೆ, ಸಂಘದ ಸಿದ್ದಾಂತ ಮೇಲ್ಪಟ್ಟ ಜನರಿಗೆ ಮಾತ್ರ ಗೊತ್ತಿರುತ್ತದೆ, ಇಲ್ಲಿ ವಾದ ಮಾಡುತ್ತ ಇರುವರು ಕೇವಲ ಸೈನಿಕರು ಮಾತ್ರ, ಅವರ ಆಸ್ತ್ರ ಕಾಶ್ಮೀರ, KFD, ಮತಾಂತರ, ಸಂಸ್ಕೃತ ಮಹಾನ್, ಹಿಂದು ದೇಶ ಮೊದಲು, ಹಿಂದಿ ನಮ್ಮ ರಾಷ್ಟ್ರಭಾಷೆ ಇವುಗಳಲ್ಲೇ ಗಿರಿಕಿ ಹೊಡೆಯುತ್ತದೆ. ಸಿದ್ಧಾಂತದಲ್ಲಿ ಚರ್ಚೆ ಮಾಡುವರು ಯಾರು ಇಲ್ಲಿ ಬಂದಿಲ್ಲ, ಆಗ ಬಂದರೆ ಈ ಚರ್ಚೆ ಉತ್ತಮ ಆಗಬಹುದು.

maaysa ಅಂತಾರೆ...

"nanu obba kannadiga mane bhashe tulu, "

Well. I am not a part of enguru. I belong to a different gang.

Our definition of a Kannadiga is ' A Kannadiga/Kannadti is the one whose mother tongue is Kannada'.

Kannada-tana is not a religion so that anyone can adopt it whenever they want and separate out of it whenever they feel.

If the person who made that comment really feels that "Kannada is the supreme and authoritative language of the Kannada land", he won't be arguing falsely about imposition of Kannada on Tulu etc. What a drama!

He should read about "Kayyaara knjnjnana rai" who wanted the Kannada district to join to the greater Karnataka and wanted Kannada as the sole supreme language of the land.

ಮಹೇಶ ಭಟ್ಟ ಅಂತಾರೆ...

ದಯವಿಟ್ಟು ಇಲ್ಲಿಯ ಇಂಗ್ಲಿಷ್ ಕಾಮೆಂಟ್ ಗಳನ್ನು ಕನ್ನಡದಲ್ಲಿ ಬರೆಯಲು ಒತ್ತಾಯಿಸಿ ಅಥವಾ ಡಿಲಿಟ್ ಮಾಡಿ. ಅವುಗಳು ನನಗೆ, ನನ್ನಂತಹವರಿಗೆ ಕನ್ನಡ ಬ್ಲಾಗುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಬೇಕೆ ಬೇಕು ಎಂಬ ಭಾವನೆಯನ್ನು ಹುಟ್ಟಿಸುತ್ತಿವೆ. ಇದೇ ರೀತಿ ಮುಂದುವರಿದರೆ ಜನ ಹಿಂದಿ, ಜರ್ಮನ್, ಫ್ರೆಂಚ್ ಭಾಷೆಗಳಲ್ಲೂ ಕಾಮೆಂಟ್ ಬರೆದಾರು. ಬರೆದರೆ ತಪ್ಪೇನು?

ಅಥವಾ ಇಂಗ್ಲಿಷ್ ಅನ್ನ ಕೊಡುವ ಭಾಷೆಯಾದ್ದರಿಂದ ಇಂಗ್ಲಿಷಿಗೆ ಮಾತ್ರ ಆ ವಿನಾಯಿತಿ ಇದೆಯಾ?

ವಿಷಯಾಂತರವೆನಿಸಿದರೆ ಪ್ರಕಟಿಸಬೇಡಿ. ಆದರೆ ಈ ಅಂಶಗಳನ್ನು ದಯವಿಟ್ಟು ನಿಮ್ಮ ಗಮನದಲ್ಲಿ ಇಟ್ಟುಕೊಳ್ಳುತ್ತೀರೆಂದು ಭಾವಿಸುತ್ತೇನೆ.

Amarnath Shivashankar ಅಂತಾರೆ...

ಇಲ್ಲಿ ಕೆಲವರಿಗೆ ಹೇಳಿಕೊಟ್ಟಿರುವ ಗಿಣಿ ಪಾಠ ಮುಗಿದಿದೆ. ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರವಂತೂ ಬರುವ ಸೂಚನೆ ಇಲ್ಲ. ಚರ್ಚೆಯಲ್ಲಿ ಭಾಗವಹಿಸಿ ನಮ್ಮ ನಿಲುವುಗಳನ್ನು ಹೇಳಬೇಕೆ ಹೊರತು ನಮ್ಮ ವಾದವನ್ನು ಒಪ್ಪದವರನ್ನು ಜರಿಯುವುದು ಕೀಳು ಮಟ್ಟದ ಪ್ರವೃತ್ತಿ.
ಶಿಸ್ತಿನ ಸಂಘಟನೆಯ ಬೆಂಬಲಿಗರು ಶಿಸ್ತು ಕಾಪಾಡಬೇಕಲ್ಲವೇ?

Kannada ಅಂತಾರೆ...

ಕರ್ನಾಟಕವನ್ನು ಕೇಸರೀಕರಿಸಲು ಕನ್ನಡ ಕಲಿಗಳು ಬಿಡಬಾರದು. ಕರ್ನಾಟಕ, ಕನ್ನಡ ನಾಡು ಎಂದೆಂದಿಗೂ ಹಳದಿ-ಕೆಂಪು ಬಣ್ಣದಲ್ಲೇ ರಾರಾಜಿಸಬೇಕು. ಕೋಮುವಾದಿ ಸಂಘಟನೆಗಳು ನಡೆಯುತ್ತಿರುವ ದಾರಿ ನಿಜಕ್ಕೂ ಸಮಾಜವನ್ನು ಕತ್ತಲಿಗೆ ತಳ್ಳುವಂತಿದೆ. ಇವತ್ತು ಕರಾವಳಿ ಕರ್ನಾಟಕಕ್ಕೆ ಹೋದರೆ ಗಾಬರಿಯಾಗುತ್ತದೆ. ಜಾತಿ, ಮತ, ಧರ್ಮಗಳಲ್ಲಿ ಜನ ಹುಚ್ಚೆದ್ದು ಮುಳುಗಿದ್ದಾರೆ. ನಮಗೆ ನಮ್ಮ ಜಾತಿ, ಮತ, ಧರ್ಮದಲ್ಲಿ ಗೌರವವಿರಬೇಕು ಮತ್ತು ಅದರ ಆಚರಣೆಗಳು ಮನೆ ಬಾಗಿಲೊಳಗೆ ಸೀಮಿತವಾಗಿರಬೇಕು. ಸಮಾಜದಲ್ಲಿ ಎಲ್ಲರೂ ನಾವು ಪಾಲಿಸುವುದನ್ನೇ ಪಾಲಿಸಲಿ ಅನ್ನುವ ಹಿಟ್ಲರ್ ಮನಸ್ಥಿತಿ ಸಮಾಜಕ್ಕೆ ಕ್ಯಾಂಸರ್ ಖಾಯಿಲೆಯಂತೆ. ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಹೇಳಿದ್ದರು. ನಾವುಗಳು ಅದನ್ನು ಸಾಕಾರಗೊಳಿಸಬೇಕು.
ಜೈ ಕನ್ನಡಾಂಬೆ. ಇಂತಹ ಲೇಖನಗಳು ಇನ್ನು ಹೆಚ್ಚು ಹೆಚ್ಚು ಬರಲಿ. ಕನ್ನಡಿಗರಿಗೆ ಕನ್ನಡವೇ ಸಾರ್ವಭೌಮ. ಕನ್ನಡಿಗರಿಗೆ ಕನ್ನಡತನವೊಂದೇ ಜೀವಾಳ

Vishwa Maanava ಅಂತಾರೆ...

ಒಳ್ಳೆಯವರು ಹಿಂದು, ಕ್ರೈಸ್ತ, ಮುಸಲ್ಮಾನ ಮುಂತಾದ ಎಲ್ಲ ಧರ್ಮಗಳಲ್ಲಿಯು ಇರ್ತಾರೆ. ಕೆಟ್ಟವರೂ ಸಹ ಹಿಂದು, ಕ್ರೈಸ್ತ, ಮುಸಲ್ಮಾನ ಮುಂತಾದ ಎಲ್ಲ ಧರ್ಮಗಳಲ್ಲಿಯು ಇರ್ತಾರೆ.generalize ಮಾಡಿ ಒಂದು ಧರ್ಮೀಯ ಜನ ಮತ್ತೊಂದು ಧರ್ಮವನ್ನು ದೂಶಿಸುವುದು ಅಸಹ್ಯ.

maaysa ಅಂತಾರೆ...

"ದಯವಿಟ್ಟು ಇಲ್ಲಿಯ ಇಂಗ್ಲಿಷ್ ಕಾಮೆಂಟ್ ಗಳನ್ನು ಕನ್ನಡದಲ್ಲಿ ಬರೆಯಲು ಒತ್ತಾಯಿಸಿ ಅಥವಾ ಡಿಲಿಟ್ ಮಾಡಿ."

Dear Sir. When you open this website, you do have to type "Enguru.blogshot.com" in Latin letters.

Many of us cannot type in Kannada letter. Because there is not yet a good typing software available on many platforms ex: Android etc.

May be if the website provides us an embedded typing facility like http://indicross.com/ it would be convenient.

Sorry.. for not writing in Kannada.

Now instead of spending millions on Sanskrit university why cannot the govt. of Karnataka look into these and provide us with good typing facilities on many platforms.

ಮಹೇಶ ಭಟ್ಟ ಅಂತಾರೆ...

ಕನ್ನಡದಲ್ಲಿ ಬರೆಯಲಾಗದ ಕನ್ನಡಿಗರ ಅಸಹಾಯಕತೆ. ಇದಕ್ಕೆ ಕನ್ನಡಿಗರು ಪ್ರಬಲರಾಗಿಲ್ಲದೆ ಇರುವದೆ ಕಾರಣವಲ್ಲವೇ. ಕನ್ನಡಿಗರು ಪ್ರಬಲರಾಗಿದ್ದರೆ android ಕನ್ನಡವನ್ನು ಸೇರಿಸುತ್ತಿತ್ತು ಅಥವಾ android ನಲ್ಲಿ ಕನ್ನಡ ಬರೆಯಲು ಬರುವಂತೆ ಕನ್ನಡಿಗರು ಒತ್ತಾಯ ಪಡಿಸುತ್ತಿದ್ದರೆನೋ?

maaysa ಅಂತಾರೆ...

"ಕನ್ನಡದಲ್ಲಿ ಬರೆಯಲಾಗದ ಕನ್ನಡಿಗರ ಅಸಹಾಯಕತೆ. ಇದಕ್ಕೆ ಕನ್ನಡಿಗರು ಪ್ರಬಲರಾಗಿಲ್ಲದೆ ಇರುವದೆ ಕಾರಣವಲ್ಲವೇ. ಕನ್ನಡಿಗರು ಪ್ರಬಲರಾಗಿದ್ದರೆ android ಕನ್ನಡವನ್ನು ಸೇರಿಸುತ್ತಿತ್ತು ಅಥವಾ android ನಲ್ಲಿ ಕನ್ನಡ ಬರೆಯಲು ಬರುವಂತೆ ಕನ್ನಡಿಗರು ಒತ್ತಾಯ ಪಡಿಸುತ್ತಿದ್ದರೆನೋ?"

I don't believe in crowd-sourcing as a solution for any problem faced by us Kannadigas as an ethnicity.

When we can vote and elect our own government, and also pay taxes, why should we as citizens venture to develop our facilities?

We must pester our rulers for each and everything. We nag and complain them. We must criticize them harshly. We must not be content for them being incompetent.

By the way do you know Tamil Nadu provides health insurance to its citizens? When will rulers of Karnataka think about 'welfare' of us?

maaysa ಅಂತಾರೆ...

I see resemblance to the Stalin's communism and Indian nationalists. Both want to destroy the native culture, religion and autonomy by deceiving to a false 'greater goal'.

They always have glorious singing, powerful speeches and heavy brain washing methods.

Does the RSS Hinduism worship our native Gods like Maramma, Maddooramma through out India? They not even mention them. They purposely narrow down Hinduism to Vedic tradion because it is convenient and easy, and hardly a few really read or understand Vedas.

Now these extreme right wing (Ex: Hitler) and extreme left wing (Ex: Stalin, Khmer rouge) both massacred both millions.

What we need is a moderated socialism like Sweden. A lot of welfare to the people and strong economic democratic free country. Read about Swedish economic and welfare model which is discussed quite a in the US media.

SURAJ CHANDARGI ಅಂತಾರೆ...

can anybody tell me how to follow this blog.... my blog is surajchandargi.blogspot.com

maaysa ಅಂತಾರೆ...

"ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ"
"http://kannada.oneindia.in/news/2012/02/04/india-cm-jayalalithaa-replied-to-hosur-mla-in-kannada-aid0189.html"

An example of how being very assertive about our rights works!

maaysa ಅಂತಾರೆ...

Some other blogsite has started to comment about this article. And I wrote the following comment there. They seems to hate enguru for some old animosity!

However the following argument is worth discussing.

“ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ.”
ಕನ್ನಡದಲ್ಲಿ ದೊರೆತಿರುವ ಮೊದಲ ಕಬ್ಬ ಕವಿರಾಜಮಾರ‍್ಗ ಒಂದು ಜೈನ ಕಬ್ಬ. ಅದರಾಗೆ ಜೈನ ಮತದ ಹುರುಳುಗಳು ಸಾಕಶ್ಟಿವೆ. ಮಾದರಿಯಾಗಿ ವೈದಿಕ ಸಂಸ್ಕೃತಿಯಲ್ಲಿ ಅರಿಷಡ್ವರ‍್ಗಗಳೆಂಬುದನ್ನು, ಕವಿರಾಜಮಾರ‍್ಗವು ಜೈನ ಮತದಂತೆ ಸಪ್ತರಿಪುವರ‍್ಗ ಎಂದು ಹೇಳುವುದು. ಜೈನ ಮತದ ಭಾಷೆ ಪಾಕೃತ ಸಂಸ್ಕೃತವಲ್ಗ. ಅದೂ ಅಲ್ಲದೇ ಕವಿರಾಜಮಾರ‍್ಗದಲ್ಲೇ ಸಂಸ್ಕೃತ ಕನ್ನಡಕ್ಕೆ ಬರೆಸಿದಿದರೆ ಕನ್ನಡದ ಸಿಹಿತನ ಕಡಮೆಯಾಗಿ ಹರಿದ ಡೊಳ್ಲು ನುಡಿಸಿದಂತೆ ಮಾತು ಕರ‍್ಕಶವಾಗುವುದು ಎಂದು ಹೇಳಿದೆ.
ಕವಿರಾಜಮಾರ‍್ಗಕಾರನು ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, ಬೆದಂಡೆ, ಚೆತ್ತಾಣ, ಹಾಗೂ ಒನಕೆವಾಡುಗಳು ಮುಖ್ಯವಾದುವು.
ಕನ್ನಡ ಸಾಹಿತ್ಯದಲ್ಲಿ ಹಳಗನ್ನಡದಲ್ಲಿ ಜೈನ ಕವಿಗಳು ಪ್ರಧಾನ. ಪಂಪ, ರನ್ನ ಮುಂತಾದವರು ಜೈನರು. ನಡುಗನ್ನಡದಲ್ಲಿ ಕುಮಾರವ್ಯಾಸರಂತಹವರು ಇದ್ದಿದ್ದರೂ, ಆ ಕಾಲಘಟ್ಟದಲ್ಲಿ ಕನ್ನಡನಾಡಿನಲ್ಲಿ ಪ್ರಮುಖವಾಗಿದ್ದು ವಚನ ಚಳುವಳಿ ಹಾಗು ಅದರಿಂದ ಹೊರಬಂದ ಅಚ್ಚಕನ್ನಡದ, ಆಡುಮಾತಿಗೆ ಹತ್ತಿರವಾದ, ಹಾಗು ಕನ್ನಡ ನೆಲದಲ್ಲೇ ಹುಟ್ಟಿದ ಹೊಸ ಆಧ್ಯಾತ್ಮ ಹಾಗು ಧರ‍್ಮದ ಹೊಸ ವ್ಯಾಖ್ಯಾನ ವಚನಗಳು.
ಮುಂದೆ ದಾಸ ಸಾಹಿತ್ಯವೂ ಕೂಡ ಕನ್ನಡ ನೆಲದಲ್ಲೇ ಹುಟ್ಟಿದ ಕರ‍್ನಾಟಕ ಶಾಸ್ತ್ತೀಯ ಸಂಗೀತಕ್ಕೆ ತಕ್ಕಂತೆ ಬೆಳೆಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ಭರತ ನಾಟ್ಯವನ್ನು ಅಧ್ಯಯನ ಮಾಡಿದ ಹಲವರು ಅವುಗಳು ದಕ್ಷಿಣಭಾರತದ ದ್ರಾವಿಡ-ಕರ‍್ನಾಟ-ಆಂಧ್ರ ಮುಂತಾದ ನಾಡುಗಳ ಜನಪದದ ಹಾಡು ಹಾಕು ಕುಣಿತಗಳ ಅಂಶಗಳಿಗೆ ಶಾಸ್ತ್ರೀಯತೆಯನ್ನು ಕೊಟ್ಟ ಕಾರ‍್ಯಗಳೇ.
ಇನ್ನು ಹೊಸಗನ್ನಡದ ನವ್ಯ, ಬಂಡಾಯ ಸಾಹಿತ್ಯವೂ ಪಾಶ್ಚಿಮಾತ್ಯ ಸಾಹಿತ್ಯ ಹಾಗು ಆದರ್ಶಗಳ ಪ್ರಭಾವಕ್ಕೆ ಒಳಪಟ್ಟಿದೆ.
ಹೀಗೆ ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಂಸ್ಕೃತ ಹಾಗು ವೈದಿಕ ಸಂಪ್ರದಾಯಗಳ ಪ್ರಭಾವ ಇದ್ದರೂ ಪ್ರಧಾನವಲ್ಲ. ಇನ್ನು ಸಂಸ್ಕೃತಪದಗಳ ಬಳಕೆ ಹೆಚ್ಚಿರುವುದು ಇತ್ತೀಚಿನ ದಶಕಗಳಲ್ಲಿ. ಮೈಸೂರು ಅರಸರ ಕಾಲ ಶಾಸನಗಳಲ್ಲಿ ಹೆಚ್ಚು ಕನ್ನಡವೇ ಇದ್ದು, ಸಂಸ್ಕೃತಪದಗಳು ಈಗಿನ ಬರಹ ಹಾಗು ಸರಕಾರಿ ಕನ್ನಡಕ್ಕಿಂತ ಕಡಮೆಯೇ ಇದೆ.

Anonymous ಅಂತಾರೆ...

kelavu kannnadada para vaada maduvavaru, sanskritadinda kannadakke astenu prayojana agill, samskrita pada kannadalli balasudannu kadime madabeku, heege abhipraya helutare,
nanagond chikka anumana........navu kannadalli[yavude bashe]
samaanya vagi balasuva-------"vishaya,swataha,bhashe,sahitya,moola, prerane,madari,sanskriti,matha,kaviraja,saptharipu,kala, prasidda,sahitya prakara,mukhya,pradana,kaalaghatta,vachana,aadyatma,dharma, dasa, vyakyana,karnataka[=ettarada mattu kappu mannina nela... ello odida nenapu],shastreeya,sageeta,naatya,adyayan,dakshina,janpada, amsha,kaarya,navya,pashimatya,aadrsha,pradana,dashaka,shasanasarakari---- ee ella shabda-galu yavudu swami hachha kannadaddo? athava sanskrita mooladdo? ee padagalannau bittu kannadavu poorna agabahude?..... aguvudadare, athi-bashabimanigalu eegindale prayathisi..nimma anisikegalu "saskrita mukta"kannada dalli horahommali namma lekhakaru kuda prayatisali.
nanu ee padagalannu sulabavagi padeyalu melina ondu anisike-inda aydu-kondiddene,idu "atikrama"anta kandare kshamisi...
elli nanna anumanada bere kelavu kannada shabda-galive adara moolavu swalpa yaradaru tilisi
namaskara,namaste,jai,maate,santosha,sukha,dukha,arogya,ahara,abharana,aradane,athithi,alochane,krishi,bhoomi,daanya,---------heege dina nithya blakeya 80% sanskritha moolada shabda-galallave? idella herike aagaddu, eega herike aagtide saku-saku endare hege swami?andare eega namage english aakelsa vannu maadutide allave?--- expl:t.v ge doora darshaka yantra ennabahudu....l,c,d t.v ge ennanabahudu? allu uttara irabahudu, agaloo 50% sanskrita shabda-galannu balasiye namma maana ulisa-bekagutade,
andare nammali adara kalpaneye illada aa samayadallu, shabdavagi,vastuvagi,anubavavagi,vicharavagi,anweshana -vastuvagi, saaviraaru varsha-galinda daraakaravaagi haridu bandide, adellavannu tindundu namma bashe sadradavagide, eega adu herike-hore andare, maga - hettu sakida thayanne nindisida hagallave? eega enlish anna koduva bhase annuteve, adannu hage madiddu nave allave? prapanchada 10-12 deshagallai mathra english chalavane agutade-ante,adesto deshaada janaru englishannu uccharisaloo aagada janariddaare,
france-nanta desha-galalli katuvagi virodisu-tare,matra-valla prapanchada yalla deshadali allina sthaleeya bashe-galiddaroo avaru thamma rashtra basheya bagge hemme padutare,horagina desha-galige hodaga tamma janorondige adaralliye matanadutare, adare barateeyaru rastra basheya vishayadallu kachaduteve, englishe namma mathr bashe ennuva-hage prapacha-dalle adakondu athyagra stahna koduvalli horaadu-tideve.
heege kannada para , tamil para, telugu para, malayam para,marati.........ella sangatanegalu tamagariv-illade? aa kelasavannu madutide. eevatu english matanaduva sankyeyali bharata modala stanadallide-ante!!!
ee yella karana-kira-bahudu kuvempu-ravro kannada-kintaloo modalu bareyalu pra-rambisiddu english-nalli-ante!!!!
adakke irabeku avaru "vishwa manava" adaddu.

maaysa ಅಂತಾರೆ...

^^^ I didn't understand. So hard to read.

["saskrita mukta"kannada dalli horahommali namma lekhakaru kuda prayatisali."] means?

@Enguru,
What is the argument made in the above comment?

Anonymous ಅಂತಾರೆ...

http://kannada.oneindia.in/news/2012/02/15/districts-teach-kannada-non-kannadigas-bangalore-it-milan-aid0038.html

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails