ವಾಯ್ಸ್ ಆಫ್ "ಹಿಂದಿ"ಯಾ?

ಅಲ್ಲಾ ಗುರು, ಭಾರತ ಅಂದ್ರೆ ಹಿಂದಿ ಅಂತನ್ನೊ ಪೆದ್ದರಿಗೆ ಯಾವತ್ತಿಗೆ ಬುದ್ಧಿ ಬಂದೀತು? ಇತ್ತೀಚಿಗೆ ಸ್ಟಾರ್ ಟಿ.ವಿಯೋರು ನಡುಸ್ತಿರೋ ಈ ಒಂದು ಕಾರ್ಯಕ್ರಮದ ಹೆಸರನ್ನು ವಾಯ್ಸ್ ಆಫ್ ಇಂಡಿಯಾ ಅಂತ ಕರೆದು ಅದ್ರಲ್ಲಿ ಬರೀ ಹಿಂದಿ ಹಾಡಿಗೆ ಮಾತ್ರಾ ಅವಕಾಶಾ ಕೊಡೋದು ತಪ್ಪಲ್ವಾ ಗುರು? ಮೊನ್ನೆ ಮೊನ್ನೆ ’ರಿತೀಶಾ ಅನ್ನೊ ಬೆಂಗಳೂರಿನ ಹುಡುಗಿ ಆ ಕಾರ್ಯಕ್ರಮದಲ್ಲಿ ಚೆನ್ನಾಗಿ ಹಾಡಿ ಗೆಲುವಿಗೆ ಹತ್ರ ಆಗ್ತಿದಾಳೆ... ಅವಳಿಗೆ ಮತ ಹಾಕಿ, ಎಸ್ಸೆಮ್ಮೆಸ್ ಕಳ್ಸಿ’ ಅಂತಾ ಕರ್ನಾಟಕದ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯೋ ಸುದ್ದಿ. ನಮ್ಮೂರ ಹುಡುಗಿ, ದೇಶ ವಿದೇಶದಲ್ಲಿ ತನ್ನ ಪ್ರತಿಭೆ ತೋರ್ಸಿ ಗೆಲ್ಲೋದ್ರ ಬಗ್ಗೆ ನಮ್ಗೂ ಸಂತೋಷಾನೆ ಗುರು! ಆದ್ರೆ ಇದುನ್ನ ಒಂದು ವೈಯುಕ್ತಿಕ ಸಾಧನೆ ಅಂತಾ ನೋಡ್ದೆ ವಾಯ್ಸ್ ಆಫ್ ಇಂಡಿಯಾದ ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಹಾಡಿ ಗೆದ್ರೆ, ಕರ್ನಾಟಕಕ್ಕೆ ಆಸ್ಕರ್ ಬಹುಮಾನ ಬರುತ್ತೆ ಅನ್ನೊ ಹಾಗೆ ನಮ್ಮ ಜನರಲ್ಲೇ ಕೆಲವರು ಖುಷಿ ಪಡೋದು, ಅವಳಿಗೆ ವೋಟ್ ಮಾಡಿ "ಕರ್ನಾಟಕದ ಮಾನ ಉಳಿಸಿ" ಅಂತ ಎಸ್ಸೆಮ್ಮೆಸ್ಸು, ಈಮೇಲು ಅಂತಾ ಶುರು ಹಚ್ಚಕೊಳ್ಳೊದು ನೋಡಿದ್ರೆ ಅಯ್ಯೋ ಅನ್ಸುತ್ತೆ ಗುರು!

ಭಾರತ ಅಂದ್ರೆ ಹಿಂದಿ ಮಾತ್ರಾ ಅನ್ನೋ ಅಪಾಯಕಾರಿ ನಿಲುವು

ಹಿಂದಿ ಚಾನಲ್ ಒಂದರಲ್ಲಿ ಹಾಡಿದ್ನೇ, ಭಾರತ ಮಟ್ಟದ (?) ಚಾನಲ್ ಒಂದರಲ್ಲಿ ಹಾಡಿದಂಗೆ ಅನ್ನೋದಾಗಲಿ, ಅಲ್ಲಿ ಇವ್ರು ಕರ್ನಾಟಕವನ್ನು ಪ್ರತಿನಿಧಿಸಿದರು ಅನ್ನೋದಾಗಲಿ ಪೆದ್ದತನ ಅಲ್ಲದೇ ಇನ್ನೇನ್ ಗುರು ? ಹಾಗೆ ಅನ್ನೋರ ತಲೇಲಿ "ಭಾರತ = ಹಿಂದಿ ", " ಹಿಂದಿ ಚಾನಲ್ = ಭಾರತ ಮಟ್ಟದ ಚಾನಲ್ " ಅನ್ನೊ ಸೆಗಣಿ ತಾನೆ ಇರೋದು? ವಾಯ್ಸ್ ಆಫ್ ಇಂಡಿಯಾ ಅನ್ನೋ ವಾಕ್ಯದ ನಿಜವಾದ ಅರ್ಥವಾದ್ರೂ ಏನು? ಭಾರತದ ಧ್ವನಿ ಅಂತಾ ತಾನೆ? ಹಾಗಿದ್ರೆ ಹಿಂದಿಯೊಂದೇ ಭಾರತದ ಧ್ವನಿ ಹೇಗಾಗುತ್ತೆ? ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಇವೆಲ್ಲ ಏನು ಚಂದ್ರಲೋಕದ ಭಾಷೆಗಳಾ? ಭಾರತದ ಧ್ವನಿ ಅನ್ನೋವಾಗ ಭಾರತದ ಎಲ್ಲ ಭಾಷೆಗಳಿಗೂ ಅಲ್ಲಿ ಸ್ಥಾನ ಸಿಗಬೇಕು ತಾನೆ? ಅದಿಲ್ಲ ಅಂದ್ರೆ ಇದನ್ನ ವಾಯ್ಸ್ ಆಫ್ ಇಂಡಿಯಾ ಅನ್ನದೇನೆ ವಾಯ್ಸ್ ಆಫ್ ಹಿಂದಿಯಾ ಅಂತ ತಾನೇ ಅನ್ನಬೇಕು? ಇವರ ಲೆಕ್ಕದಲ್ಲಿ ಜೀವನದಲ್ಲಿ ಒಂದೇ ಒಂದು ಹಿಂದಿ ಹಾಡ್ನ ಹಾಡಿಲ್ಲದೇ ಇರೋ ಕಾರಣಕ್ಕೇ ನಮ್ಮ ಡಾ.ರಾಜಕುಮಾರ್ ಅವರ ವಾಯ್ಸು ’ವಾಯ್ಸ್ ಆಫ್ ಇಂಡಿಯಾ’ ಅಗಕ್ಕೆ ಲಾಯಕ್ಕಿಲ್ಲಾ ಗುರು!

ಇದು ಬರೀ ಹಾಡಿನ ಸ್ಪರ್ಧೆ ಅಲ್ಲ! ಹಿಂದಿಗೆ ಮಾರುಕಟ್ಟೆ ಗಳ್ಸಿಕೊಡೋ ತಂತ್ರ
ಭಾರತದ ಒಂದು ಪ್ರಾದೇಶಿಕ ಭಾಷೆಯಾದ ಹಿ೦ದಿಯಲ್ಲಿನ ಈ ಕಾರ್ಯಕ್ರಮ ಇಡೀ ಭಾರತದ ಕಾರ್ಯಕ್ರಮ ಹೇಗಾದೀತು? ಒಟ್ನಲ್ಲಿ ಈ ಹಿಂದಿ ಕಾರ್ಯಕ್ರಮದಲ್ಲಿ ಕನ್ನಡದೋರೊಬ್ರು ಹಾಡಿ ಗೆಲ್ಲಬೇಕು ಅಂದ್ರೆ, ಕನ್ನಡಿಗರು ವೋಟ್ ಮಾಡಬೇಕು ಅಷ್ಟೆ. ಇದನ್ನೊಂದು ಪ್ರತಿಷ್ಠೆಯ, ಅಭಿಮಾನದ ವಿಷಯ ಅನ್ನೋ ಥರ ಎಲ್ಲಾ ಮಾಧ್ಯಮದ ಮೂಲಕ ಪ್ರಚಾರ ಮಾಡಿ, ವೋಟು ವೋಟು ಅಂತ ವದರಾಡಿ, ಕಡೆಗೆ ಹಿಂದಿಯಲ್ಲಿ ಓ ಅಂದ್ರೆ ಠೋ ಅನ್ನೋದೂ ಗೊತ್ತಿಲ್ಲದೋರೂ ಕೂಡಾ ಟಿ.ವಿ ಮುಂದೆ ಕೂತು, ಈ ಹಿಂದಿ ಕಾರ್ಯಕ್ರಮಾನ ನೋಡೋ ಹಾಗೆ ಮಾಡೊ ಮಾರುಕಟ್ಟೆ ತಂತ್ರ ಇದು ಅನ್ನೋದ್ನ ನಾವು ಅರಿಯಬೇಕಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಹಿಂದಿಗೆ ದೊಡ್ಡ ಮಾರುಕಟ್ಟೆ ಇದೆ ಅಂತಾ ನಮ್ಮ ನಾಡಲ್ಲೇ ಇರೋ ಕನ್ನಡದ ಚಾನಲ್ಲುಗಳು ನಾಳೆ ಹಿಂದಿ ಹಾಡು ಹಾಡಸೋಕೆ ಶುರು ಮಾಡ್ತಾರೆ (ಈಗಾಗಲೇ ಕೆಲವು ವಾಹಿನಿಯಲ್ಲಿ ಅಂತಾ ಪ್ರಯತ್ನ ಮಾಡಿದ್ನ ಮರೆಯೋ ಹಾಗಿಲ್ಲ). ಹಿಂದಿ ಹಾಡಕ್ಕೆ ಬರದೇ ಇರೋರು, ಎಷ್ಟೇ ಅದ್ಭುತ ಗಾಯಕರಾಗಿದ್ರೂ ಅವಕಾಶ ಇಲ್ದೇ ಮೂಲೆಗುಂಪಾಗಬೇಕಾಗುತ್ತೆ. ಇದ್ನೇ ತಾನೇ ಹೇರಿಕೆ ಅನ್ನೋದು. ಹೀಗೆ ತಾನೆ ನಮ್ಮ ಮನೆ-ಮನಗಳಿಗೆ ನಮ್ಮದಲ್ಲದ ಹಿಂದಿ ಲಗ್ಗೆ ಹಾಕೋದು? ನಮ್ಮ ದುಡ್ಡು ಕೊಟ್ಟು, ನಮ್ಮ ಮನೆಗೆ ಮಾರಿನಾ ಬಿಟ್ಕೊಳ್ಳೊದು ಅಂದ್ರೆ ಇದೇ ತಾನೆ?

ಕನ್ನಡ ಚಿಕ್ಕದು ಹಿಂದಿ ದೊಡ್ಡದು?

ಹಿಂದಿಯೊಂದೆ ಭಾರತವನ್ನು ಪ್ರತಿನಿಧಿಸೋ ಭಾಷೆ, ಉಳಿದ ಭಾರತೀಯ ಭಾಷೆಗಳೆಲ್ಲ ಲೆಕ್ಕಕ್ಕೆ ಇಲ್ಲದ ಭಾಷೆಗಳು ಅನ್ನೊ ಹಿಂದಿ ಮೇಲರಿಮೆಯ ಕಾರಣದಿಂದಲೇ ಹಿಂದಿ ಅನ್ನೊ ಪ್ರಾದೇಶಿಕ ಭಾಷೆಯ ಕಾರ್ಯಕ್ರಮಕ್ಕೆ ವಾಯ್ಸ್ ಆಫ್ ಇಂಡಿಯಾ ಅನ್ನುವ ಹೆಸರಿಡುವ ಸೊಕ್ಕಿಗೆ ಕಾರಣವಾಗುತ್ತೆ. "ಕನ್ನಡ ಚಿಕ್ಕದು! ಹಿಂದಿ ದೊಡ್ಡದು!!" ಅನ್ನೋದನ್ನು ಮನಮನಗಳಲ್ಲಿ ತುಂಬೋ ಪ್ರಯತ್ನವೇ ಈ ಕಾರ್ಯಕ್ರಮಗಳದ್ದು. ಕರ್ನಾಟಕದಲ್ಲಿ ಹಿಂದಿ ಮನರಂಜನೆಗೆ ಮಾರುಕಟ್ಟೆ ಕಟ್ಟಿಕೊಡಲು ಯತ್ನಿಸುತ್ತಿರುವ ಇಂಥಾ ರಿಯಾಲಿಟಿ ಶೋಗಳಿಗೆ ಕನ್ನಡಿಗರು ಮರುಳಾಗಬಾರದು ಗುರು.

7 ಅನಿಸಿಕೆಗಳು:

Anonymous ಅಂತಾರೆ...

ರಿತೀಶಾ ಬಗ್ಗೆ ಅಷ್ಟು ಅಭಿಮಾನ ತೋರಿಸೊರು ಒಮ್ಮೆ ಆಕೆಯ ಈ ಪ್ರೊಫೈಲ್ ನೋಡಿ.

http://voiceofindia.indya.com/contestants/Ritisha.asp

ಆಕೆಯ ಇಷ್ಟದ ಸಂಗೀತಗಾರರು ತಮಿಳರು, ಇಷ್ಟದ ಹಾಡುಗಾರರು ಹಿಂದಿಯವರು. ಆಕೆಯ ಇಡಿ ಪ್ರೊಫೈಲ್ ನಲ್ಲಿ ನಯಾ ಪೈಸೆ ಕನ್ನಡದ ಬಗ್ಗೆ ಆಗಲಿ, ಕನ್ನಡಿಗರ ಬಗ್ಗೆ ಆಗಲಿ ಇಲ್ಲ. ವೋಟ್ ಕೇಳೊಕೆ ಮಾತ್ರ ಕನ್ನಡ ಬೇಕಾಗಿರೋದು ಅನ್ಸುತ್ತೆ. ಇಲ್ಲ ಅಂದ್ರೆ,, ಯಾವುದೇ formal training ಇಲ್ಲದೇ , ತಮ್ಮ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ನಮ್ಮ ಅಣ್ಣಾವ್ರು ಸಹ ಆಕೆಯ ಇಷ್ಟದ ಪಟ್ಟಿಯಲ್ಲಿ ಇಲ್ಲ. ಯಾಕಿರುತ್ತೆ ಹೇಳಿ,, ಹಿಂದಿ ನ್ಯಾಶನಲ್ಲು, ಅಲ್ಲೆಲ್ಲ ಕನ್ನಡದಂತ ಲೋಕಲ್ ಭಾಷೆ ಆಗಲಿ, ಲೋಕಲ್ ಕಲಾವಿದರಾದ ರಾಜ್ ಕುಮಾರ್ ಆಗಲಿ ಲೆಕ್ಕಕ್ಕೆ ಇಲ್ಲ. ಕನ್ನಡದ ಹೆಸರು ಎತ್ತೋದೆ ಕೀಳು ಅನ್ಸುತ್ತೆ..

ಇಂತೋರಿಗೆ ವೋಟ್ ಮಾಡಿ, ವೋಟ್ ಮಾಡಿ,, ಅಂತಾ ದುಂಬಾಲು ಬೀಳೊದು ಬೇರೆ ಕೇಡು...

Anonymous ಅಂತಾರೆ...

ಸಂಗೀತಕ್ಕೆ ಭಾಷೆಯ ಭೇಧವಿಲ್ಲ, ಕನ್ನಡತಿಯೊಬ್ಬರು ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಗೆದ್ದರೆ, ಅವರಿಗೆ ಅವಕಾಶದ ಬಾಗಿಲು ತೆಗೆಯುತ್ತೆ, ಅವರಿಗೆ ಸಾಕಷ್ಟು ಅವಕಾಶಗಳು, ಹೆಸರು, ಮನ್ನಣೆ ಸಿಗುತ್ತೆ ಅನ್ನೋರಿಗೆ ಏನು ಕಮ್ಮಿ ಇಲ್ಲ. ಹಾಗೆ ಅನ್ನೊರು ಒಮ್ಮೆ ಇಂತ ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಗೆದ್ದ ಕನ್ನಡತಿ ಅರ್ಚನಾ ಉಡುಪರ ಬಗ್ಗೆ ತಿಳಿದರೆ ಒಳ್ಳೆದು. ಕನ್ನಡತಿ ಅರ್ಚನಾ ಗೆದ್ದಾಗಲೂ ಸ್ವರ್ಗಕ್ಕೆ ಮೂರೇ ಗೇಣು ಅನ್ನೊ ತರಹ ಆಡಿದವರು ಇದ್ರು. ಅವರ ಲೆಕ್ಕದಲ್ಲಿ ಹಾಗೇ ಗೆದ್ದ ಅರ್ಚನ ಉಡುಪರಿಗೆ ಸಾಕಷ್ಟು ಅವಕಾಶಗಳು, ಹೆಸರು ಮನ್ನಣೆ ಸಿಗಬೇಕಿತ್ತು. ಆದ್ರೆ ಹಾಗಾದದ್ದು ನಾವ್ಯಾರು ಕಂಡಿಲ್ಲ, ಬದಲಿಗೆ, ಅರ್ಚನ ಅವರು ತಮ್ಮ ಪರಿಶ್ರಮದಿಂದ ಕನ್ನಡ ಸುಗಮ ಸಂಗೀತ, ಭಾವಗೀತೆಯಂತ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿವುದರೊಂದಿಗೆ ಕನ್ನಡದ ಭರವಸೆಯ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ನಮ್ಮೆಲ್ಲರ ಅಚ್ಚುಮೆಚ್ಚಿನ ರಾಜೇಶ್ ಕೃಷ್ಣನ್ ಅವರದು ಇದೇ ಪಾಡು, ಕನ್ನಡದಲ್ಲಿ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೇ ನೆಲೆಸಿರುವ ರಾಜೇಶ್ ಕೃಷ್ಣನ್ ಅವರು ಇತ್ತೀಚಿಗೆ ಹಿಂದಿ ಸಿನಿಮಾದಲ್ಲಿ ಅವಕಾಶಕ್ಕಾಗಿ ಹೋಗಿದ್ದಾಗ 'ನೀನೊಬ್ಬ ಅದ್ಭುತ ಗಾಯಕ, ಆದರೇನು? ನಿನ್ನ ಉಚ್ಚರಣಾ ಶೈಲಿ ಹಿಂದಿಯವರಂತಿಲ್ಲ, ಅದಕ್ಕೆ ನಿನಗೆ ಅವಕಾಶವಿಲ್ಲ' ಎಂದು ಅಪಮಾನ ಮಾಡಿ ಕಳಿಸಿದ್ದನ್ನು ಮರೆಯೋಕಾಗುತ್ತಾ? ಇದು ಸಾಧ್ಯವಾಗೋದು ಹಿಂದಿ ಮೇಲರಿಮೆಯ ಕಾರಣದಿಂದ ಮಾತ್ರಾ. ಇಲ್ಲದಿದ್ದರೆ ಕನ್ನಡದಲ್ಲಿ ಅವರುಗಳು ಹಾಡುವಾಗ ಉಚ್ಚಾರಣೆಗೆ ಇಲ್ಲದ ಪ್ರಾಮುಖ್ಯತೆ ಹಿಂದಿ ಹಾಡುವ ಇತರರಿಗೆ ಹೇಗೆ ಅನ್ವಯವಾಗಬಲ್ಲದು? ಗುರು. ನೀನು ಹೇಳಿದ ಹಾಗೆ ಇದೆಲ್ಲ ಕನ್ನಡ ಚಿಕ್ಕದು ಹಿಂದಿ ದೊಡ್ಡದು ಅನ್ನೋದನ್ನು ಮನಮನಗಳಲ್ಲಿ ತುಂಬೋ ಪ್ರಯತ್ನವೇ ಈ ಕಾರ್ಯಕ್ರಮಗಳದ್ದು.

Anonymous ಅಂತಾರೆ...

ಕರ್ನಾಟಕದಲ್ಲಿ ವಾಯ್ಸ್ ಆಫ್ ಇ೦ಡಿಯಾ ಮಾಡಿ ಕನ್ನಡದಲ್ಲಿ ಮಾತ್ರ ಹಾಡಿಸಿದರೆ ಹೆ೦ಗಿರುತ್ತೆ? ಅದೇ ತರಹ ನಡೆದುಕೊಳ್ಳುತ್ತಿದ್ದಾರೆ ಇವರು!

ಇ೦ತಹ ರಾಷ್ಟ್ರೀಯ ಕಾರ್ಯಕ್ರಮಗಳನ್ನು ತೀವ್ರವಾಗಿ ಖ೦ಡಿಸಬೇಕು. ಏಕೆ೦ದರೆ ಈ ರಾಷ್ಟ್ರ ಹಿ೦ದಿಯವರೊಬ್ಬರದ್ದೇನಲ್ಲ.

ಹೌದು ಸಾರ್, ರಾಜೇಶ್ ಕೃಷ್ಣನ್ ರವರು ಸ್ವತಃ ತಮಗೆ ಮು೦ಬೈನಲ್ಲಿ ಆದ ಆದ ಅನುಭವವನ್ನು ಜೀ ಕನ್ನಡದಲ್ಲಿ ಹೇಳಿಕೊಳ್ಳುತ್ತಿದ್ದರು. ಹಾಡಲು ಅವಕಾಶ ಕೊಡಲಿಲ್ಲ ಎ೦ದು ಹೇಳಿದುದರ ಬಗ್ಗೆ ಅವರ ಬೇಜಾರಿರಲಿಲ್ಲ. ಆದರೆ ಅವರು ಹೇಳಿದ್ದು ಕನ್ನಡವನ್ನು ಸರಿಯಾಗಿ ಉಚ್ಚಾರಣೆ ಮಾಡಲು ಬರದವರು ಕನ್ನಡ ಹಾಡು ಹಾಡುತ್ತಾರೆ, ನಾವದನ್ನು ಎಷ್ಟು ಆರಾಮಾಗಿ ಒಪ್ಪಿಬಿಟ್ಟಿದ್ದೇವೆ? ಎ೦ದು . ಇದನ್ನು ನೋಡಿ ಅವರಲ್ಲಿ ಕನ್ನಡದ ಬಗ್ಗೆ ಇರುವ ಕಳಕಳಿ, ಸ್ವಾಭಿಮಾನ ವ್ಯಕ್ತವಾಗುತ್ತದೆ.

Rohith B R ಅಂತಾರೆ...

itteechege naanu europinalli ondu hotelinalli kanda drushya idu. alli tayaarisidda tinisugala mele sheershikeyaagi "North Indian Dishes" anta achchukattaagi bardittu. idu nanage bahala ishtavaagi hotelinavanannu karedu kelide neenu elliyonu anta.. adakke avanu alliya deshadavane, aadare avana aduge bhatta *North Indian* anta helida.

aaga tiliyitu, intaha hindi melu, kannada keelu annuva bheda bhaava illadiruva janaralli ondu janaangadinda mattondu janaangavannu clear aagi vyatyaasa helalu saadhya. aaddarinda ivanu *North Indian* dish anta helirodu. ivanoo kooda *Indian* dish anta helbodaagittu. aadre ivanige India li innu halavaaru bageya dish galu siguttve anta arivu moodide.

ide reeti ee haadina spardhe nadeyali, aadre "voice of hindi" anno hesralli maatra annodu ellroo artha maadkobekiro nija.

haageye, namma deshada IIFA anta iro samsthe HIFA anta hesru itkobekide. Indian badalu Hindi Instt of Film Academy anta hesru irbeku.

Madhu ಅಂತಾರೆ...

Dhanyanadhe Ritisha profile oodhi.

Obbaradru kannada nata / gayakara bagge helike illavalla. thu

Anonymous ಅಂತಾರೆ...

This is ritisha's orkut profile. We can leave her a scrap asking questions of why all her favs r from tamils and hindi or any other question ppl might have. We can also ask her to sing kannada song in the pgm.
http://www.orkut.com/Main#Profile.aspx?uid=1796170347991904980

bd ಅಂತಾರೆ...

ಹಹಾ ಸರಿಯಾಗಿ ಹೇಳಿದೆ ಗುರು! ಕನ್ನಡವನ್ನು ಪ್ರಚಲಿತಗೊಳಿಸ್ದೆ ಒಂದು ಹಿಂದೀ ಕಾರ್ಯಕ್ರಮವನ್ನು Indiaದ Voice ಅಂಥ ಹೇಳೋದು ಸುತಾರಾಂ ತಪ್ಪು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails