ಪ್ರಜಾರಾಜ್ಯಂ: ಕನ್ನಡ ಮಾಧ್ಯಮಗಳ ದೊಂಬರಾಟ!

ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿ.ಕ ಪತ್ರಿಕೆಯಲ್ಲಿ ಬಂದ ಸುದ್ದಿಯೊಂದನ್ನ ನೋಡಿ ಕನ್ನಡಿಗರು ದಂಗು ಬಡಿದು ಕುಂತಿದ್ದಾರೆ ಗುರು! ಆಂಧ್ರಪ್ರದೇಶದಲ್ಲಿ ಅಲ್ಲಿನ ಚಿತ್ರನಟ ಚಿರಂಜೀವಿ ಹೊಸದಾಗಿ ಕಟ್ಟಿರುವ ಪ್ರಜಾರಾಜ್ಯಂ ಅನ್ನೋ ರಾಜಕೀಯ ಪಕ್ಷದ ಬಗ್ಗೆ, ತೆಲುಗು-ತೆಲುಗ-ತೆಲುಗುನಾಡಿನ ಬಗ್ಗೆ ಅವರಿಗಿರುವ ಕನಸುಗಳೇನಪ್ಪಾ ಅಂತ ಬರ್ಕಂಬರಕ್ಕೆ ಹೋದ ನಮ್ಮ ವರದಿಗಾರ ಕೊನೆಯಲ್ಲಿ "ಕರ್ನಾಟಕಕ್ಕೆ ಪ್ರಜಾರಾಜ್ಯಂ ಪಕ್ಷ ಯಾವಾಗ ಕಾಲಿಡಲಿದೆ?" ಅನ್ನೋ ಪ್ರಶ್ನೆ ಕೇಳಿದ್ನ ನೋಡಿ ಕನ್ನಡಿಗರು ಕಣ್ ಕಣ್ ಬಿಡ್ತಾ "ಈ ಕನ್ನಡದ ವರದಿಗಾರರಿಗೆ ಅದ್ಯಾವ ಬರಬಾರದ ರೋಗ ಬಂದಿದೆ" ಅಂತಾ ಕನವರಿಸೋ ಹಾಗಾಗಿದೆ ಗುರು!
ಪಕ್ಕದ್ ಮನ್ಲಿ ಮದ್ವೆ ಅಂದ್ರೆ ಇವ್ರುಗೆ ಸೋಬ್ನದ್ ಸಡಗರ!

ಆಂಧ್ರಪ್ರದೇಶ, ತೆಲುಗು, ತೆಲುಗರ ಉದ್ಧಾರದ ಗುರಿ ಇಟ್ಟುಕೊಂಡು, ನಟ ಚಿರಂಜೀವಿ ಪಕ್ಷ ಕಟ್ಟಿದರೆ, ಅದನ್ನು ಕರ್ನಾಟಕದ ನಾಡಹಬ್ಬಾ ಏನೋ ಅನ್ನೊ ಹಾಗೆ ಹಗಲು ರಾತ್ರಿ ಪ್ರಸಾರ ಮಾಡಿ ಧನ್ಯರಾದರು ನಮ್ಮ ಕನ್ನಡದ ಟಿ ವಿ ಮಾಧ್ಯಮದವರು. ಅಲ್ಲಾ ಚಿರಂಜೀವಿ ತೆಲುಗರಿಗಾಗಿ, ತೆಲುಗರ ನಾಡಲ್ಲಿ ಪಕ್ಷ ಕಟ್ಟಿದ್ರೆ, ನಮ್ಮ ನಾಡಿನ ಪತ್ರಿಕೆಗಳು, ಟಿ.ವಿ. ಚಾನಲ್ ನವರು ’ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು, ಕನ್ನಡಿಗರು ಇನ್ನ ಮೇಲೆ ಚಿನ್ನದ ಚಮಚೆಯಲ್ಲೆ ಉಣ್ಣೋದು’ ಅನ್ನೊ ಹಾಗೆ ಸಂಭ್ರಮಿಸಿದ್ದು ನೋಡಿ ಇವರೇನು ಕನ್ನಡ ನಾಡಿನಲ್ಲಿ, ಕನ್ನಡಿಗರಿಗಾಗಿ ಇರೋ ಪತ್ರಿಕೆಗಳಾ, ಚಾನಲ್ ಗಳಾ ಅನ್ನೋ ಸಂದೇಹ ಚೂರುಪಾರು ಮರ್ಯಾದೆ ಇರೋ ಕನ್ನಡಿಗರಿಗೆಲ್ಲ ಬಂದಿರೋದು ಖಂಡಿತಾ ಗುರು! ಆದ್ರೂ ಕನ್ನಡ ಮಾಧ್ಯಮದವರಿಗೆ ಇಂತವರಿಗೆ ಇಲ್ಲದ ಸಲ್ಲದ ಗೌರವ ಕೊಟ್ಟು, ಕನ್ನಡಿಗರ ತಲೆ ಮೇಲೆ ಕೂರಿಸೋದು ಅಂದ್ರೆ ಅದೇನು ಖುಷಿಯೋ!

ಕರ್ತವ್ಯ ಮರೆತ ಮಾಧ್ಯಮ

ಕರ್ನಾಟಕ-ಕನ್ನಡ-ಕನ್ನಡಿಗನಿಗೆ ಸಂಬಂಧಿಸಿದ ಎಲ್ಲ ವಿಷ್ಯದಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಬೇಕಾಗಿರೋ ನಮ್ಮ ಕನ್ನಡ ಮಾಧ್ಯಮದವರು ತಮ್ಮ ಕರ್ತವ್ಯ ಮರೆತು ತಮಿಳರ, ಹಿಂದಿಯವರ ಚಿತ್ರಗಳಿಗೆ ಇಲ್ಲದ ಪ್ರಚಾರ ಕೊಟ್ಟು, ಕರ್ನಾಟಕದಲ್ಲಿ ಮಾರುಕಟ್ಟೆ ಹುಟ್ಟು ಹಾಕೋ ಕೆಲಸ ಮಾಡ್ತಾ ಇದ್ದಾರೆ ಗುರು. ಅಷ್ಟಕ್ಕೆ ನಿಲ್ಲದೇ, ಇವತ್ತು ನಟನೊಬ್ಬ ಅಲ್ಲೆಲ್ಲೊ ಪಕ್ಷ ಕಟ್ಟಿದ್ರೆ, ಅವನಿಗೆ ಕಾಲ ತೊಳೆದು, ಎಲೆ-ಅಡಿಕೆ ಕೊಟ್ಟು ಕರ್ನಾಟಕಕ್ಕೆ ಯಾವಾಗ ಬರ್ತಿರಾ? ಬಂದು ಕೊಚ್ಚೆಗುಂಡೀಲ್ ಬಿದ್ದು ಒದ್ದಾಡ್ತಿರೋ ಈ ಕನ್ನಡದೋರನ್ನು ಯಾವಾಗ ಉದ್ಧಾರ ಮಾಡ್ತಿರಾ? ಅಂತ ಕೇಳ್ತಾರಲ್ಲ!!! ಇದೇನಿವರ ಅಭಿಮಾನ್ಯಶೂನ್ಯತೇನೋ, ಇವುರ್ಗಾಗಿರೋ ಬುದ್ದಿ ಭ್ರಮಣೇನೋ?
ಕರ್ನಾಟಕಕ್ಕೆ ಯಾವಾಗ ಬರ್ತಿರಾ ಅಂತ ಕೇಳೊದ್ರ ಮೂಲಕ ಪರೋಕ್ಷವಾಗಿ, ನಮ್ಮ ನಾಡು, ನಾಡಿಗರಿಗೆ ಯಾವ ಸಂಬಂಧವೂ ಇಲ್ಲದ, ಎಲ್ಲಿಯದೋ ಒಂದು ಪಕ್ಷವನ್ನು, ಪಕ್ಷದವರನ್ನು " ಬನ್ನಿ, ಕರ್ನಾಟಕ ಅನ್ನೋದು ತೋಟದಪ್ಪನ ಛತ್ರ, ಇಲ್ಲಿ ಯಾರು ಬೇಕಾದ್ರೂ ಬಂದು ತಮ್ಮ ಬೇಳೆ ಬೇಯಿಸಿಕೊಬೌದು" ಅಂತಾ ಆಹ್ವಾನ ಕೊಟ್ಟಂಗಲ್ವಾ? ತೆಲುಗು-ತೆಲುಗರಿಗಾಗಿಯೇ ಹುಟ್ಟಿದ ಪಕ್ಷವೊಂದು ಕರ್ನಾಟಕಕ್ಕೆ ಕಾಲಿಟ್ಟರೆ, ಅದು ಎಂದಿಗಾದರೂ ಕನ್ನಡ-ಕನ್ನಡಿಗನ ಪರವಾಗಿ ನಿಲುವು ತೆಗೆದುಕೊಂಡೀತಾ? ಇಂತದೊಂದು ಮಾತಿನ ಮೂಲಕ ಕನ್ನಡಿಗರು ತಮ್ಮನ್ನು ತಾವು ಆಳಿಕೊಳ್ಳಲು ಆಗದವರು, ಅವರನ್ನ ಉದ್ಧಾರ ಮಾಡೋಕೆ ಅಲ್ಲೆಲ್ಲಿಂದ್ಲೋ ಒಂದು ಪಕ್ಷ ಬರಬೇಕು ಅನ್ನೊದು ಇವರ ನಿಲುವು ಅಂತಾ ತೋರುಸ್ತಿದಾರಾ? ಮಾಧ್ಯಮದವರ ಇಂತಾ ಬರವಣಿಗೆ ಇಡೀ ನಾಡಿನ ಮೇಲಾಗೋ ಪರಿಣಾಮದ ಬಗ್ಗೆ ಅರಿವಿರದೆ ಬೇಜವಾಬ್ದಾರಿಯಿಂದ ಆಡ್ತಿರೋ ಅಕ್ಷರ ಹುಚ್ಚಾಟ ಅಲ್ದೆ ಇನ್ನೇನು ಗುರು?

12 ಅನಿಸಿಕೆಗಳು:

Anonymous ಅಂತಾರೆ...

ಈ ಮಾಧ್ಯಮದ ಮುಂಡೇ ಮಕ್ಕಳ ಮುಖಕ್ಕೆ ಮಸ್ತಾಗಿ ಉಗ್ದಿದೀಯಾ...ಗುರು,ನೀ ಹೇಳಿದ್ದು ಅವುಕ್ಕೆ ಅರ್ತವಾದ್ರು, ಒಪ್ಪೋ ದೊಡ್ತನಾ ಇರಲ್ಲ ಅವುಕ್ಕೆ

Anonymous ಅಂತಾರೆ...

ಇನ್ನೂ ಕನ್ನಡಿಗರು ನಿದ್ದೆ ಮಾಡ್ತಿದ್ರೆ ಕಷ್ಟ ಸಿವ! ಕನ್ನಡ ನಮ್ಮದ್ದೇ ಸ್ವತ್ತು ಅನ್ನೋ ಹಾಗೆ ಮಾಧ್ಯಮದಲ್ಲಿರುವವರು ಹುಚ್ಚು ಹುಚ್ಚಾಗಿ ಬರೆದು ಕನ್ನಡಿಗನ ಸ್ವಾಭಿಮಾನವನ್ನು ದಿನೇ ದಿನೇ ಕೆಣಕುತ್ತಲೇ ಇರುತ್ತಾರೆ. ಕನ್ನಡದ ಬಗ್ಗೆ ತಮಗೇ ಕಾಳಜಿ ಇರುವ ಹಾಗೆ ಇಲ್ಲದ ಸಲ್ಲದ ಉದಾಹರಣೆಗಳೊ೦ದಿಗೆ ಕನ್ನಡ ಸ೦ಘಗಳನ್ನು ದೂರುವುದು ಕಾಮನ್ ಆಗಿಹೋಗಿದೆ ಇವರಿಗೆ.

ಕನ್ನಡ, ಕನ್ನಡಿಗ ಹಾಗೂ ಕನ್ನಡ ನಾಡಿನ ಬಗ್ಗೆ ಒ೦ದು ಚೂರೂ ಸರಿಯಾದ ನಿಲುವನ್ನು ಹೊ೦ದಿಲ್ಲದ ಇವರು ನಮ್ಮನ್ನು ಆಳುವವರಾರು ಎ೦ದು ನಿರ್ಧರಿಸಲು ಎಷ್ಟು ಅರ್ಹರು ಸಿವ. ಕನ್ನಡಿಗರನ್ನು ಪೊರೆಯುವ ಮಾಹಾಶೂರರಿವರು ಎನ್ನುವ೦ತೆ ಮಾತಾಡುತ್ತಾರೆ. ಯಾ ತೆಗಿಲಾ ಮತ್ತೆ, ನಮ್ಮೂರ್ಗೆ ಯಾವ್ ಪಕ್ಸ ಬತ್ತೈತೆ ಅ೦ತ ಕನ್ನಡಿಗ್ರು ನಿರ್ಧಾರ ತಕ್ಕ೦ತರೆ ಬಿಡು.

Unknown ಅಂತಾರೆ...

nijvaaglu sathya guru! ee thara ella prachaara kodbaardu haage allello yaavdo paksha kattidre illi yaak adanna prachaara maadbeku?

ಗುರು [Guru] ಅಂತಾರೆ...

ನಿಮ್ಮ ಅನಿಸಿಕೆ ಸರಿಯಾಗಿದೆ. ನನಗೆ ನಿಮ್ಮಿಂದ ಒಂದು ಸಹಾಯವಾಗಬೇಕಿತ್ತು. ನಿಮ್ಮ ಬ್ಲಾಗ್‌ನ template ತುಂಬಾ ಚೆನ್ನಾಗಿದೆ. ಅದನ್ನು ನಾನು ನನ್ನ ಬ್ಲಾಗಿಗೆ ಅಳವಡಿಸುವುದು ಹೇಗೆ ? ಸ್ವಲ್ಪ ಹೇಳುತ್ತೀರಾ?
ನನ್ನ ಬ್ಲಾಗ್:
http://kannadaputhra.blogspot.com

Anonymous ಅಂತಾರೆ...

ಗುರುಗಳೇ,
ಅದೆಲ್ಲಿಂದ ಹೆಕ್ಕಿ ತೆಗುದ್ರಿ ಈ ಫೋಟೋನಾ? ಇಂಥಾ ಆಯ್ಕೆಗಳಿಂದಲೆ ನಮಗೆ ಏನ್ ಗುರು ಇಷ್ಟ ಆಗೋದು. ಚಿರಂಜೀವಿ ಹಳದಿ ಕೆಂಪು ಬಟ್ಟೆ ತೊಟ್ಟರೂ ಕನ್ನಡದೋರಾಗಲ್ಲ ಅಂತಾನೋ, ಇವ್ರು ತೊಟ್ಟ ಅಂಗಿಗೆ ನಮ್ಮ ಮಾಧ್ಯಮದೋರು ಮರುಳಾದರೆಂದೋ ಸೊಗಸಾಗಿ ತೋರ್ಸಿದೀರಾ. ಹ್ಯಾಟ್ಸ್ ಆಫ್ ...

Anonymous ಅಂತಾರೆ...

ಮಾಧ್ಯಮದವರು ವಿಶ್ವಮಾನವರು, ಅದಕ್ಕೇ ಏನೋ ಯಾರ್ಯಾರನ್ನೋ ಕರೆದು ಅವರ ಆಳ್ವಿಕೆಗೆ ಶರಣುಹೋಗಲಿಚ್ಚಿಸುತ್ತಿದ್ದಾರೆ.

Anonymous ಅಂತಾರೆ...

ಹೇಗೆ ಇಮಾಮಸಾಬಿಗೂ - ಕ್ರಷ್ಣಾಷ್ಟಮಿಗೂ ಏನಂದರೆ ಏನ ಸಂಬಂಧವಿಲ್ಲವೋ, ಹಾಗೇ, ಕನ್ನಡ-ಕರ್ನಾಟಕ-ಕನ್ನಡಿಗನಿಗೂ ಚಿರಂಜೀವಿಯ ಹೊಸ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ. ಆದ್ರೂ ಕನ್ನಡ ಮಾಧ್ಯಮದವರಿಗೆ ಇವರನ್ನೆಲ್ಲ ಹೊಗಳಿ ಹಾಡಿ, ನಮ್ಮ ತಲೆ ಮೇಲೆ ಕೂರಿಸಿ ಮೆರವಣಿಗೆ ಮಾಡಿ, ಕನ್ನಡಿಗರು ವಿಶಾಲ ಹೃದಯಿಗಳು, ದೊಡ್ಡ ಮನಸ್ಸಿನವರು ಅನ್ನಿಸಿಕೊಳ್ಳೊ ತಿಕ್ಕಲತನಾ ಗುರು !

ಚೆನ್ನಾಗಿ ಉಗದಿದ್ದಿಯಾ ಇವರ ಮಕಕ್ಕೆ... ನಾಚಿಕೆ, ಮಾನ, ಮರ್ಯಾದೆ ಇದ್ರೆ ಇನ್ನ ಮೇಲಾದ್ರೂ ಪರ ಭಾಷೆ ಸಿನೆಮಾ, ತಾರೆಯರನ್ನ ಕನ್ನಡ ಪತ್ರಿಕೆ, ಚಾನಲ್ ಗಳಲ್ಲಿ ಮೆರೆಸೊದನ್ನ ನಿಲ್ಲಿಸಲಿ..

Kumara Vyasa ಅಂತಾರೆ...

ಏನು ಯೋಚನೆ ಮಾಡಬೇಕಾಗಿಲ್ಲ, ಈಗಾಗಲೇ AIADMK ನಮ್ಮ ರಾಜ್ಯದಿಂದ ಸ್ಪರ್ಧಿಸುತ್ತ ಇದಾರೆ. ಹಾಗಂದಮಾತ್ರಕ್ಕೆ ಅವರು ನಮ್ಮನ್ನು ಆಳ್ತಾ ಇದರಾ? ನಾವು ಬೇರೆ ಯಾರಿಗೂ ಅವಕಾಶ ಕೊಡಲ್ಲ. ಜನರು ಜಾಗೃತರಾಗಿದ್ದಾರೆ.

Anonymous ಅಂತಾರೆ...

ಕುಮಾರ ವ್ಯಾಸ ಅವರೇ,,
ಅದಕ್ಕು ಇದಕ್ಕು ವ್ಯತ್ಯಾಸ ಇದೆ,, AIADMK ಗೆ ಇಲ್ಲಿನ ಮಾಧ್ಯಮದವರು ಪ್ರಚಾರ ಕೊಡ್ತಿಲ್ಲ,, ಚಿರಂಜೀವಿಗೆ ಮಾಧ್ಯಮದವರು ಮಾಡ್ತಿರೋ ಹಾಗೆ aIADMK ge ಇಲ್ಲಿ ಮಾರುಕಟ್ಟೆ ಸೃಷ್ಟಿಸೋ ಕೆಲ್ಸಾನು ಅವರು ಮಾಡಿಲ್ಲ,,

Rohith B R ಅಂತಾರೆ...

ಈ ವಿಚಾರವನ್ನ ಠೀಕಿಸಿ ವಿ.ಕರ್ನಾಟಕದ ವಾಚಕರ-ವಾಣಿಯಲ್ಲೋ, ಅಥವಾ ಸಂಪಾದಕರಿಗೆ ಪ್ರತ್ಯೇಕ ಪತ್ರ-ರೂಪದಲ್ಲೋ ತಿಳಿ ಹೇಳಬೇಕು - "ಚಿರಂಜೀವಿ ಹೆಸ್ರನ್ನ ಉಪ್ಯೋಗ್ಸಿ ಕರ್ನಾಟಕದಲ್ಲಿ ರೀಡರ್ಶಿಪ್ ಪಡ್ಕೊಳೋ ಸಣ್ಣ ಬುದ್ಧಿ ಬಿಡಿ, ಅದರ ಬದಲು ಇಲ್ಲಿಯ ಸುದ್ಧಿಯನ್ನೇ ಬೇಕಿದ್ರೆ ದೊಡ್ಡದು ಮಾಡಿ ಹಣ ಗಳಿಸಿ.." ಅಂತ..

ಹೆಚ್ಚು ಜನ ಕ್ಯಾಕರಿಸಿ ಉಗಿದಷ್ಟು ಪ್ರಭಾವ ಜಾಸ್ತಿ ಇರತ್ತೆ..

Anonymous ಅಂತಾರೆ...

ಈಟಿವಿ ಮತ್ತು ಟಿವಿ೯ ಎರಡೇ ಇಂತಹ ಹೊಲಸು ಕೆಲಸ ಮಾಡಲಿಕ್ಕೆ ಲಾಯಕ್ಕು ಅಂದುಕೊಂಡಿದ್ದೆ. ಈಗ ವಿಜಯ ಕರ್ನಾಟಕವೂ ಅದರ ಸಾಲಿಗೆ ಸೇರಿತಲ್ಲ ಅಂತ ಬೇಜಾರು

Anonymous ಅಂತಾರೆ...

ರಜನಿಕಾಂತ್ ಗಿಂತ ಚಿರಂಜೀವಿ great aa?
ಅಂತ ರಜನಿಕಾಂತೇ ಕ್ಷಮೆ ಕೇಳೋತರ ಮಾಡಿದ್ದೀವಿ ನಾವು ಕನ್ನಡಿಗರು,ಹೀಗಿರುವಾಗ ಚಿರಂಜಿವಿಗೆ, ಮಾಧ್ಯಮದ ಮಾತು ಕೇಳಿ ಮಣೆ ಹಾಕ್ತಿವ? no way.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails