ಯಾವ ಚಿತ್ರ ಎತ್ತಂಗಡಿಯಾಗ್ಬೇಕು?
"ಅಲ್ಲಾ ಗುರು! ನಿನ್ನ ಎಡಗಣ್ಣು ಹೋದ್ರೆ ಒಳ್ಳೇದಾ? ಬಲಗಣ್ಣಾ? ಅಂದಂಗಾಯ್ತು ಅಲ್ವಾ ಈ ಕೇಸು... ಎಲ್ಡೂ ಕನ್ನಡ ಚಿತ್ರಗಳೇ ಅಲ್ವಾ? ಇವ್ಯಾಕೆ ಈ ಥರಾ ಥಿಯೇಟರ್ಗಾಗಿ ಕಚ್ಚಾಡಬೇಕು? ಅಷ್ಟಕ್ಕೂ ಬೆಂಗಳೂರಲ್ಲಿ ಬೇರೆ ಒಳ್ಳೇ ಟಾಕೀಸುಗಳಿಲ್ವಾ?" ಅನ್ನೋ ಪ್ರಶ್ನೆಗೆ ಯಾರು ಉತ್ರಾ ಕೊಡಬೇಕು? ನಿಜಾ ಅಂದ್ರೆ ಒಂದಾನೊಂದು ಕಾಲದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಕಂಗೊಳಿಸುತ್ತಿದ್ದ ಬೆಂಗಳೂರಿನಲ್ಲಿ ಇವತ್ತಿಗೂ ಚಿತ್ರಮಂದಿರಗಳಿಗೇನೂ ಕೊರತೆಯಿಲ್ಲ. ಒಳ್ಳೇ ಚಿತ್ರಮಂದಿರಗಳಿಗೂ ಕೊರತೆಯಿಲ್ಲ. ಆದ್ರೆ ದಿಟವೇನಪ್ಪಾ ಅಂದ್ರೆ ಇದರಲ್ಲಿ ಅರ್ಧಕ್ಕರ್ಧ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಾಳು ತೆರೆಕಾಣೋದೇ ಇಲ್ಲಾ. ಅಂದ್ರೆ ನಮ್ಮೂರಿನ ಬಹಳಷ್ಟು ಚಿತ್ರಮಂದಿರಗಳನ್ನು ಬೇರೆ ಭಾಷೇ ಚಿತ್ರಗಳಿಗೇ ಅಂತಲೇ ಮೀಸಲು ಮಾಡಿಟ್ಟಂಗ್ ಇದೆ. ಐನಾಕ್ಸ್, ಫೋರಂ ಥರದ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡದ ಎಷ್ಟು ತೆರೆಗಳು ಇವೆ ಅನ್ನೋದೂ ಅಲ್ಲಿಗೆ ಹೋದವರಿಗೆ ಗೊತ್ತಾಗುತ್ತೆ. ಇನ್ನು ಅಭಿನಯ, ಶಂಕರನಾಗ್ ಮೊದಲಾದ ಕಡೆ ಕನ್ನಡಚಿತ್ರಗಳು ಓಡಬಹುದು ಅನ್ನೋ ನೆನಪೇ ನಮ್ಮವರಿಗಿಲ್ವಾ ಅನ್ಸುತ್ತೆ ಗುರು! ನಮ್ಮೂರಿನ ಚಿತ್ರಮಂದಿರಗಳಲ್ಲಿ ಮೊದಲ ಆದ್ಯತೆ ನಮ್ಮೂರಿನ ಚಿತ್ರಗಳಿಗೆ ಇರಬೇಕು, ನಮ್ಮವಕ್ಕೇ ಜಾಗಾ ಇಲ್ಲಾ ಅನ್ನೋ ಪರಿಸ್ಥಿತಿ ಬೀದೀಲಿ ಹೋಗೋ ಒಂಟೇನಾ ಗುಡುಸ್ಲಲ್ ಬಿಟ್ಕೊಂಡು ಮನೆ ಮಕ್ಳುನ್ನ ಬೀದಿಗ್ ತಳ್ದಂಗ್ ಅಲ್ವಾ? ಕನ್ನಡನಾಡಿನಲ್ಲಿ ಒಂದು ಕನ್ನಡ ಚಿತ್ರ ಚೆನ್ನಾಗ್ ಓಡ್ತಾ ಇದ್ದಾಗಲೂ ಇನ್ನೊಂದ್ ಕನ್ನಡ ಚಿತ್ರಕ್ಕಾಗಿ ಜಾಗ ಖಾಲಿ ಮಾಡ್ಬಿಡಬೇಕು ಅನ್ನೋದು ದುಸ್ಥಿತಿ ಅಲ್ವಾ ಗುರು? ಈಗ ಒಸಿ ನೀವೇ ಹೇಳಿ ನಿಜವಾಗ್ಲೂ ಎತ್ತಂಗಡಿ ಆಗ್ಬೇಕಾಗಿರೋ ಚಿತ್ರಗಳು ಯಾವುವು ಅಂತಾ!!!
4 ಅನಿಸಿಕೆಗಳು:
mungaru male banda time alli,, sheshadripurada nataraja theatre modala baari kannada cinemakke sikkittu,, alli 50 dina mungaru male odittu. nam film chamber sariyaag idre idella samasye barode illa,, ivaru rajanikanth, chiranjeevi avara guna gaana, seve maadodralle "kannada seve" aaytu ankolloru,,
igaa matte nataraja theater alli bari tamilu cinemagala abbara,,
kabaddi sakat cinema,, tumbane chennagide,, eddelu manjunatha sakat hype idey,, aadre ee cinemagale kittadodu eshtu dodda duranta :(
kai meeri hogide guru namkade kannada cinema hakode illa. idakke horata madidru nu theatre galu baggalla
ಇವಾಗ ಬರೋ ಕನ್ನಡ ಹಾಡುಗಳು ಸಕ್ಕತ್ತಾಗಿವೆ. ಹಾಗೆ ಸಿನೆಮಾನು ಸಕ್ಕತ್ತಾಗಿರತ್ತೆ. ಆದ್ರೆ ಅದನ್ನು ಧಿಯೇಟರ್ ಗಳಲ್ಲಿ ಹಾಕಬೇಕಾಗಿದೆ. ಪ್ರದರ್ಶನನೇ ಇಲ್ಲದೆ ಇದ್ರೆ ಹೇಗೆ ಸಿನ್ಮಾ ನೋಡೋದು. ಕಬಡ್ಡಿ ಒಳ್ಳೆ ಸಿನೆಮಾ ಅನಿಸತ್ತೆ -- ಆದ್ರೆ ಅವತ್ತಿ೦ದ ಬರೇ ವಾಲ್ ಪೋಸ್ಟರ್ ನೋಡೋದೇ ಆಯ್ತು ಜೀವನ. ಯಾವ ಥಿಯೇಟರ್ ನಲ್ಲು ಇದು ಪ್ರದರ್ಶನ ಕಾಣ್ತಿಲ್ಲ.
nanna hesaru srinivas.
naanu hyderabad karnataka prdeshadavanu. Nanna swanta ooru bellary .
alli 20 theater ive. isvi 2000 ra verege 10 theater nalli kannada cinema irta ittu . Ivaga onde ondu theater nalli kannada cinema irutte.
Nammalli prathibhe ilvo ,duddu ilvo cinema madoke arthane aagolla.(Mungaru male bittu).
hyderabad-karnataka bhagadalli ella janakku kannada & telugu bande barotte, Olle film bandre ellaru nodtare. adakke udaharane mungaru male, milana.
Nanna prakara ondu bhashe kaliyalu aa pradehada cinemagalu tumba prabhava beeruttave.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!