ಬೆಂಗಳೂರಲ್ಲಿ ವಳ್ಳುವರ್ ಪ್ರತಿಮೆ... ಸುತ್ತಮುತ್ತ!

ಇವತ್ತಿನ (26.07.2009ರ) ಪ್ರಜಾವಾಣಿಯ 7ನೇ ಪುಟದಲ್ಲಿ ಒಂದು ಅಂಕಣ ತಿರುವಳ್ಳುವರ್ ವಿರೋಧಿಸಿ ಸಣ್ಣವರಾಗೋದ್ ಬ್ಯಾಡಾ ಅಂತ ಮುದ್ರಣವಾಗಿದೆ. ಹೌದು, ಶ್ರೀ ಪದ್ಮರಾಜ ದಂಡಾವತಿಯವರು ಹೇಳಿದ ಈ ಮಾತು ಕಣ್ಣಿಗೆ ತಂಪಾಗಿಯೂ, ಕಿವಿಗೆ ಇಂಪಾಗಿಯೂ ಇದೆ. ಆದ್ರೆ ಈ ವಳ್ಳುವರ್ ಪ್ರತಿಮೇನಾ ವಿರೋಧಿಸೋದು ಸಣ್ಣತನಾ ಅನ್ನೋ ಭರದಲ್ಲಿ ಪದ್ಮರಾಜ್ ಅವರು ಇಡೀ ಕನ್ನಡ ಕುಲಕೋಟಿಗೆ ಹಲವಾರು ಹಣೆಪಟ್ಟಿಗಳನ್ನು ಅಂಟಿಸಿದ್ದಾರೆ. ಮತ್ತು ಮತ್ತದೇ ಕಾಗಕ್ಕಂಗೆ ನರಿಯಣ್ಣ ಸಕ್ಕತ್ತಾಗಿ ಹಾಡ್ತಿ ಹಾಡು ಅಂದು ರೊಟ್ಟಿ ಎಗುರಿಸಿದಂಥಾ ಡೈಲಾಗನ್ನೂ ಹೊಡ್ದಿದಾರೆ.
ಕನ್ನಡಿಗರ ಹೆಸರು ಕೆಡುತ್ತೆ! ಅನ್ನೋ ಪುಂಗಿ

ಇದು ಮಾಮೂಲಿ ಕಣ್ರಿ. ಕರ್ನಾಟಕದಲ್ಲಿ ಕನ್ನಡಿಗರು ಭಾಳಾ ಸಹಿಷ್ಣುಗಳು. ನಗುಮೊಗದವರು. ಭಾಳಾ ಒಳ್ಳೇವ್ರು, ಎಲ್ಲಾ ಭಾಷೆಗಳೂ ಇಲ್ಲಿ ನಡ್ಯುತ್ತೆ, ಇವ್ರು ನೀರು ಕೇಳಿದ್ರೆ ಮಜ್ಜಿಗೆ ಕೊಡ್ತಾರೆ ಅಂತಾ ಹೊಗಳೀ ಹೊಗಳೀ ಹೊನ್ನಶೂಲಕ್ಕೇರಿಸೋದನ್ನು ಹಿಂದಿನಿಂದ್ಲೂ ನೋಡ್ತಾನೇ ಬಂದಿದೀವಿ. ಈ ಮಾತು ನಮ್ಮ ಹಕ್ಕೊತ್ತಾಯದ ಕೂಗನ್ನು ಅಡಗಿಸೋ ತಂತ್ರ ಮಾತ್ರಾ ಅಂತ ಜನ ಈಗಾಗ್ಲೆ ಅರ್ಥ ಮಾಡ್ಕೊಂಡಿದಾರೆ. ಇನ್ನೂ ಈ ತಂತ್ರ ನಡ್ಯುತ್ತೆ ಅಂದ್ಕೊಳ್ಳೋದು ಸರಿಯಲ್ಲ. ಇರಲಿ, ನಿಜಕ್ಕೂ ಈಗ ವಳ್ಳುವರ್ ಪ್ರತಿಮೆ ಬೆಂಗಳೂರಲ್ಲಿ ತಲೆಯೆತ್ತಬೇಕಾ? ಬೇಡವಾ? ಅನ್ನೋದನ್ನು ವಿಚಾರ ಮಾಡೋಣ.

ತಿರುವಳ್ಳುವರ್ ಬಗ್ಗೆ ಗೌರವ ಇಲ್ದಿದ್ರೆ ಮಾನವತೆಗೇ ಗೌರವ ಇಲ್ದಂಗೆ!

ಹೌದ್ರೀ, ತಮಿಳು ನಾಡಿನ ದಾರ್ಶನಿಕ ವಳ್ಳುವರ್ (ಇದು ಒಬ್ಬರಲ್ಲಾ, ಅನೇಕರು ಅಂತಾ ನಮ್ಮ ಬಿ.ಜಿ.ಎಲ್ ಸ್ವಾಮಿಗಳು ತಮ್ಮ ತಮಿಳು ತಲೆಗಳ ನಡುವೆ ಹೊತ್ತಿಗೆಯಲ್ಲಿ ಬರ್ದಿದಾರೆ) ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿರೋ ಕುರುಳ್ ಹೆಸರಿನ ಪದ್ಯಗಳು, ನಮ್ಮ ಸರ್ವಜ್ಞನ ವಚನದಂತೆಯೇ ಸಮಾಜದ ಒಳಿತಿನ ಪಾಠ ಕಲಿಸೋ ಮಹಾನ್ ನುಡಿಮುತ್ತುಗಳು. ಇಂಥಾ ದಾರ್ಶನಿಕರು ಜಗತ್ತಿನ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ ಮತ್ತು ಇವರುಗಳು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ್ದಾರೆ. ವಳ್ಳುವರ್, ಕಬೀರ್, ತ್ಯಾಗರಾಜ, ತುಳಸಿದಾಸ, ಶರೀಫಜ್ಜ.... ಅಯ್ಯೋ ಒಬ್ರಾ ಇಬ್ರಾ ಆ ಪಟ್ಟಿ ದೊಡ್ಡದಿದೆ ಬಿಡಿ. ಇವರನ್ನು ಅಪಮಾನಿಸೋದಿರಲಿ, ಇಂಥವರಿಗೆ ಗೌರವ ಕೊಡ್ದೇ ಇರೋದೂ ಕೂಡಾ ಸಣ್ಣತನವೇ. ಹಾಗಾದರೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆಗೆ ವಿರೋಧಿಸೋದು ಸಣ್ಣತನಾನೇ ಅಲ್ವಾ?

ವಿಷಯ ಪ್ರತಿಮೆಯದ್ದಲ್ಲ! ಸಮಾನ ಗೌರವದ್ದು!!

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ, ವಳ್ಳುವರ್ ಅವರಿಗೆ ತೋರಿಸೋ ಗೌರವ ಅನ್ನೋದನ್ನು ಪಕ್ಕಕ್ಕಿಟ್ಟು ಇನ್ನೊಂದೆರಡು ವಿಷಯ ಇತ್ಯರ್ಥ ಮಾಡ್ಕೋಬೇಕಿದೆ. ಯಾಕಂದ್ರೆ ಈ ಪ್ರತಿಮೆಯ ಸ್ಥಾಪನೆ ಮಾಡ್ತಿರೋರಿಗೂ, ಬೇಡ ಅಂತಿರೋರಿಗೂ ಇದು ಬರೀ ಒಬ್ಬ ದಾರ್ಶನಿಕನ ಗೊಂಬೆ ಆಗಿಲ್ಲ. ಒಂದು ಸಂಸ್ಕೃತಿಯ, ತಿಕ್ಕಾಟದ ಇತಿಹಾಸದ, ನಾಡಿನ ಸ್ವಾಭಿಮಾನದ ಮತ್ತು ಸಾರ್ವಭೌಮತ್ವ ಸ್ಥಾಪನೆಯ ಪ್ರತೀಕಗಳಾಗಿವೆ ಅನ್ನೋದಾಗಿದೆ.
- ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ಹಂಚಿಕೆ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಅದರ ತೀರ್ಪು ನ್ಯಾಯಯುತವಾಗಿದೆ ಅಂತಾ ಇನ್ನೂ ಕನ್ನಡಿಗರು, ಕರ್ನಾಟಕ ಸರ್ಕಾರ ಒಪ್ಪಿಲ್ಲ. ಈ ವ್ಯಾಜ್ಯ ಪರಿಹಾರದ ವಿಷಯದಲ್ಲಿ ಟ್ರಿಬ್ಯೂನಲ್ ಜನ ಬಂದಾಗ ತಮಿಳುನಾಡು, ಇವರಿಗೆ ಭರ್ಜರಿ ಕಾಣಿಕೆಗಳ್ನ ಕೊಟ್ಟು ವಶೀಲಿ ಮಾಡೋ ಯತ್ನ ಮಾಡುದ್ರು ಅಂತಾ ಕರ್ನಾಟಕವೇ ಆರೋಪ ಮಾಡಿತ್ತು.
- ಪ್ರತಿಮೆ ಸ್ಥಾಪಿಸಿ ಸೌಹಾದ್ರತೆ ಹೆಚ್ಚಿಸೋ ಮಾತಾಡೋರು ಹೊಗೇನಕಲ್ ನಡುಗಡ್ಡೆಯಲ್ಲಿ ಜಂಟಿ ಸರ್ವೇಗೆ ಒಪ್ಸಿ/ ಒಪ್ಪಿ ಸೌಹಾರ್ದತೆ ಹೆಚ್ಚಿಸೋ ಮಾತಾಡಬೇಕಿತ್ತಲ್ವಾ ಗುರು?
- ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಅಡ್ಡಗಾಲು ಹಾಕ್ಕೊಂಡು ಸೌಹಾರ್ದತೆ ತೋರುಸ್ತಿರೋ ತಮಿಳುನಾಡಿನ ದೊಡ್ಡತನದ ಮುಂದೆ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಬೇಡ ಅಂದ್ರೆ ಕನ್ನಡಿಗರು ಚಿಕ್ಕವರಾಗಲ್ವಾ?
- ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನೋ ಕೂಗನ್ನು ಎಬ್ಸಿದ್ದು, ಶ್ರೀರಾಮಪುರದಲ್ಲಿ ಕೇಂದ್ರಸರ್ಕಾರದ ಪೊಲೀಸ್ ಠಾಣೆ ಇಡೀ ಅಂದಿದ್ದು, ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಡಿ.ಎಂ.ಕೆಯ ಕಪ್ಪು ಕೆಂಪು ಬಾವುಟ ಹಾರಿಸೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
- ಬೆಂಗಳೂರನ್ನು ಕಟ್ಟಿದೋರು ನಾವು ನಮಗೆ ಇಲ್ಲಿನ ಅರ್ಧದಷ್ಟಾದರು ವಿಧಾನಸಭಾ ಸೀಟುಗಳ ಮೇಲೆ ಹಕ್ಕಿದೆ ಅನ್ನೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
ಇವೆಲ್ಲಾ ಒಂದು ತೂಕವಾದರೆ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡದ ಕಣ್ಮಣಿ ಡಾ.ರಾಜ್ ಅಪಹರಣವಾದಾಗ (ಮಾಡಿಸಿದಾಗ ಅನ್ನೋ ಗುಮಾನಿ ಇದೆ) ವೀರಪ್ಪನ್ (ಕಡೆಯಿಂದ) ಮುಂದಿರಿಸಿದ್ದ ಬೇಡಿಕೆಗಳ ಪಟ್ಟಿ ನೋಡಿದರೆ ಸಾಕು ಈ ಅಪಹರಣ ಒಬ್ಬ ಜುಜುಬಿ ಕಾಡುಗಳ್ಳನದೋ ಅಥವಾ ಇದರ ಹಿಂದಿನ ಷಡ್ಯಂತ್ರ ಬೇರೆ ಇದೆಯೋ ಅನ್ನೋದು ತಿಳ್ಯಲ್ವಾ ಗುರು?
- ಕರ್ನಾಟಕದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರ, ಅನೇಕ ಉದ್ದಿಮೆಗಳು, ಹೊಸ ಉದ್ದಿಮೆ ಕಾರಿಡಾರು, ಅನೇಕ ರೈಲು ಯೋಜನೆಗಳು... ಒಂದಾ ಎರಡಾ ತಮಿಳುನಾಡು ದಕ್ಕಿಸಿಕೊಂಡಿದ್ದು? ಪ್ರತಿಯೊಂದು ವಿಷಯದಲ್ಲೂ ಕನ್ನಡನಾಡಿನ ದೊಡ್ಡಣ್ಣನಂತೆ ತಮಿಳುನಾಡು ವರ್ತಿಸೋ ರೀತಿ ಕಾಣ್ತಿದ್ದಾಗ ಈ ಪ್ರತಿಮೆ ಸ್ಥಾಪನೆ ಬರೀ ಸೌಹಾರ್ದತೆ ಹೆಚ್ಚಿಸೋ ಕ್ರಮವಾದೀತೇ ಅನ್ನೋ ಅನುಮಾನ ಹುಟ್ಟಲ್ವಾ ಗುರು? ಇರಲಿ, ತಿರುವಳ್ಳುವರ್ ಪ್ರತಿಮೆ ಖಂಡಿತಾ ನಮ್ಮೂರಲ್ಲಿ ಬರಲಿ. ಆದರೆ ಅದೇ ಸಮಯದಲ್ಲಿ ಅದೇ ದಿವಸ, ಅದೇ ಹೊತ್ತಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಂಗಳೂರಿನ ವಳ್ಳುವರ್ ಪ್ರತಿಮೆ ಇಟ್ಟಿರೋ ಅಂಥದ್ದೇ ಪ್ರಮುಖವಾದ ಸ್ಥಳದಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡೋದು ಈ ವಿಷಯದಲ್ಲಿ ಸಮ ಗೌರವದ ಕ್ರಮವಾಗುತ್ತೆ ನಿಜಾ. ಆದ್ರೆ ಇಷ್ಟು ಸಾಕಾ? ನಮ್ಮ ಸರ್ಕಾರ ಇದೇ ಸ್ಪೂರ್ತಿಯಿಂದ ಉಳಿದ ವಿಷಯಗಳ ಬಗ್ಗೇನೂ ತಮಿಳುನಾಡಿನ ಜೊತೆ ಮಾತುಕತೆಯಾಡೀತಾ? ಈಗ ಈ ಪ್ರತಿಮೆ ನೆಪದಲ್ಲಿ ಅವೆಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದಿತ್ತಲ್ವಾ? ಅದುಬಿಟ್ಟು ಕನ್ನಡಿಗರು ಜಗಳಗಂಟರು, ಅಸಹಿಷ್ಣುಗಳು, ಕೆಟ್ಟೋರು ಅನ್ನುಸ್ಕೋಬಾರ್ದು ಅದಕ್ಕೇ ಇದುಕ್ ಒಪ್ಕೊಳ್ಳೋಣ ಅಂದ್ರೆ ಹೆಂಗೇ ಗುರು?

14 ಅನಿಸಿಕೆಗಳು:

ಕಿಶೋರ್! ಅಂತಾರೆ...

ಈ ಪ್ರತಿಮೆ ಬರುತ್ತಿರೋದು ಯಾಕೆ ಗೊತ್ತಾ? ಮು೦ದೊ೦ದು ದಿನ ತಮಿಳರ ಹಕ್ಕಿಗೆ ಹೋರಾಟ ಮಾಡೋರಿಗೆ ಯಾವುದಾದರು ಪ್ರತಿಮೆಗೆ ಅ೦ಟಿಕೊ೦ಡು ಕೂತು ಧರಣಿ ಸತ್ಯಾಗ್ರಹ ಮಾಡಬೇಕಲ್ಲಾ. ಇವೆಲ್ಲಾ ಲಾಲ್-ಬಾಗ್, ಅರಮನೆ ಮೈದಾನ ಗಳಲ್ಲಿ ಮಾಡಿದ್ರೆ ಕೇಳೋರು ಯಾರು ಇರಲ್ಲ ನೋಡಿ, ಅದಕ್ಕೇ ಈ ಅರೇ೦ಜ್-ಮೆ೦ಟ್.

ರಮಾನಂದ ಅಂತಾರೆ...

ಇವತ್ತಿನ ವಿಜಯ ಕರ್ನಾಟಕ ನೋಡಿ, ವಿಶ್ವ(ಮಾನವ) ಭಟ್ಟರು ಯಡ್ಡಿಯನ್ನು ಬೆಂಬಲಿಸಿ ತಮ್ಮ ಪ್ರಾಯೋಜಿತ ಲೇಖನವನ್ನು ಬರೆದಿದ್ದಾರೆ. ಇವರ ಪ್ರಕಾರ ಸರ್ವಜ್ಞತೆಯನ್ನು ನಾವು ಮೆರೆಯಬೇಕಂತೆ, ಹೊಗೆನಕಲ್, ಶಾಸ್ತ್ರೀಯ ಭಾಷೆ ಬಗ್ಗೆ ಕೇಳಿ ನಮ್ಮ ಸಣ್ಣತನ ತೋರಿಸಬಾರದಂತೆ.
ಯಡಿಯೂರಪ್ಪ ಅವರ ತುಘಲಕ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಮ್ಮ ಅಸಾಹಯಕತೆಯನ್ನು ತೊರಿಸಿದ್ದಾರೆ.
ಅಲ್ಲಾ ಭಟ್ಟರಿಗೆ ಹೊಗೆನಕಲ್ ಬಗ್ಗೆ ಆಗಲಿ ಇಲ್ಲ ಶಾಸ್ತ್ರೀಯ ಬಗ್ಗೆ ಆಗಲಿ ಯಡಿಯೂರಪ್ಪ ತೆಗೆದುಕೊಂಡ ಕ್ರಮ ಬಗ್ಗೆ ಇಲ್ಲ ತಮಿಳುನಾಡಿನ ಸರ್ವಜ್ಞತೆ ಬಗ್ಗೆ ಕಾಣಿಸಿಲ್ಲ. ಅವರು ನಮಗೆ ಕೊಡದಿದ್ದರು ನಾವು ಕೊಡೊಣ , ಅವರ ಮುಂದೆ ಇನ್ನು ತಲೆ ತಗ್ಗೀಸೋಣ ಇದೆ ಸರ್ವಜ್ಞರು ಹೇಳಿದ್ದು ಎಂದು ಪತರುಗುಟ್ಟಿದ್ದಾರೆ. ಅಲ್ಲ ತಮ್ಮ ಹೇಡಿತನವನ್ನು ಮತ್ತು ಅವಕಾಶತನವನ್ನು ಕನ್ನಡಿಗರ ಗುಣ ಎಂದು ಕರೆಯುವ ಇವರ ಭಟ್ಟಂಗಿತನ ಎದ್ದು ಕಾಣುತ್ತಿದೆ.

ಅಲ್ಲಾ ಸ್ವಾಮಿ, ಯಾರು ಕೇಳಿದ್ದಾರೆ ಈ ಪ್ರತಿಮೆ ವಿಷಯವನ್ನು, ಆರೋಗ್ಯ ತೋರಿಸಿಕೊಳ್ಳಲು ಹೋದ ಯಡ್ಡಿ, ನೆಟ್ಟಗೆ ನಿದ್ದೆ ಬಂದಿಲ್ಲಾ ಅಂತ ಕರುಣಾನಿಧಿ ಮನೆಗೆ ಹೋಗಿ ಎನೇನೊ ಒಪ್ಪಿಕೊಂಡು ಬಂದು, ನಮಗೆ ಒಪ್ಪಿಕೊಳ್ಳಿ ಅಂತ ಹೇಳುತ್ತ ಇರುವುದು ನೋಡಿ ಕನ್ನಡಿಗನಿಗೆ ನಗು ಬರುತ್ತದೆ.

ಮಹಾನಗರ ಚುನಾವಣೆಗೆ ಒಂದು ತಿಂಗಳು ಇರುವಾಗ ಇದಕ್ಕೆ ಮುಂದಾದ ಕ್ರಮ ಭಟ್ಟರಿಗೆ ಅದು ಹೇಗೆ ಸಾಮರಸ್ಯ ಕಾಣಿಸಿತೊ ನಾ ಕಾಣೆ. ಇದು ತಮಿಳು ಓಟು ಪಡೆಯಲು ಮಾಡುತ್ತಿರುವ ಕ್ರಮ ಎಂದು ಎಲ್ಲರಿಗೂ ಗೊತ್ತು, ಪಾಪ ಭಟ್ಟರಿಗೆ ಬಿಟ್ಟು...

ರಮೇಶ ಅಂತಾರೆ...

ಸರಕಾರಕ್ಕೆ ಸೌಹಾರ್ದತೆಯ ಸೋಗು. ಇಲ್ಲಿ ಅಡಗಿರೋದು ಬರಿಯ ಮತ ಬ್ಯಾಂಕಿನ ರಾಜಕರಣ. ಮುಂಬರುವ ಬೆಂಗಳೂರು ನಗರ ಪಾಲಿಕೆ ಚುನಾವಣೆಯಲ್ಲಿ ತಮಿಳರ ಮತಗಳಿಸುವ ಹುನ್ನಾರ.
ಕನ್ನಡಿಗರು ಇದನ್ನು ವಿರೋಧಿಸಿದರೆ; ಕನ್ನಡಿಗರದ್ದು ಸಂಕುಚಿತ ಮನೋಭಾವ, ಅದೇ ಮತಕ್ಕಾಗಿ ರಾಜಕೀಯ ನಡೆಸಿದರೆ, ಅದು ವಿಶಾಲ ಮನೋಭಾವ.

prasadh ಅಂತಾರೆ...

ರಾಜಕೀಯ ಸ್ತರದಲ್ಲಿ ನೋಡಿದರೆ ಇವೆಲ್ಲ ನಾಟಕ ಕರುಣಾನಿಧಿಗೆ ಬೆಂಗಳೂರಿನ ತಮಿಳರ ಒಲವು ದೊರಕಿದಂತಾಗುತ್ತದೆ. ಯೆಡ್ಯೂರಪ್ಪನವರಿಗೆ ಯಾವುದೆ ಲಾಭವಾಗುವುದಿಲ್ಲ.
ಸಾಂಸ್ಕೃತಿಕ ಮಟ್ಟದಲ್ಲಿ ನೋಡಿದರೆ, ನಗೆ ಪಾಟಲು ಆಗುವ ಸಂಭವವಿದೆ ಯಾಕಂದ್ರೆ ಈ ವಿಷಯ ನಾನು ನನ್ನ ಕೊಲೀಗ್‌ಗಳೊಂದಿಗೆ ಹಂಚಿಕೊಂಡೆ, ಸಹಜವಾಗಿಯೆ ಕೇಳಿದರು ಸರ್ವಜ್ಞ ಅಂದ್ರೆ ಯಾರು? ಅಂತ. ನಾನು ಕಿರು ಪರಿಚಯ ಮಾಡಿಕೊಟ್ಟೆ ಅದಕ್ಕೆ ಅವರೆಲ್ಲರು ಘೊಳ್ಳೆಂದು ಎಂದು ನಗುತ್ತಾ ನಿಮ್ಮ ಸರ್ವಜ್ಞ ಬಹುಶ: ನಮ್ ತಿರುವಳ್ಳವುರ್‌ದು ಕಾಪಿ ಮಾಡಿದಾರೆ ಅಷ್ಟೆ ಎಂದು ಕೇಳಿಸಿಕೊಂಡ ನನಗೆ ಹೇಗೆನಿಸಿರಬೇಡ? ಕಾಲಲ್ಲಿರುವುದನ್ನು ತೆಗೆದು ಅವರಿಗೆ ಹೊಡೆಯುವ ಬದಲು ನನಗೆ ಹೊಡೆದುಕೊಳ್ಳುವ ಹಾಗಾಗಿತ್ತು Sad ದನದ ಚರ್ಮವಿರುವವರು ಇವರು - ಕೊಂಗರು. ತಮಿಳು, ತಮಿಳುನಾಡು ಬಿಟ್ಟರೆ ಮಿಕ್ಕೆಲ್ಲವು ಮಾಯೆಗೆ ಸಮ ಇವರಿಗೆ, ಕಣ್ಣಿದ್ದೂ ಕಾಣರೂ. ಏನೇ ಕಾರಣವಿದ್ದರೂ ಸಹ ಪ್ರತಿಮೆಯನ್ನು ಸ್ಥಾಪಿಸಲು ಬಿಡಬಾರದು, ತಿರುವಳ್ಳವುರ್‌ ಅವರಿಗೆ ಕನ್ನಡಿಗರಿಂದ ಮೆನ್ನಣೆ ದೊರೆಯುತ್ತದೆ ವಿನ: ಕಾಟ್‌ಪಾಡಿಗಳಿಂದ ಬಸವಣ್ಣನವರು ನಗೆ ಪಾಟಲಿಗೀಡಾಗುವುದು ಬೇಡ. ವಿಶಾಲ ಹೃದಯ ಕನ್ನಡಿಗರು ಅಗತ್ಯಕ್ಕಿಂತ ಬೆಜಾನ್ ಇದಾರೆ.
ಕಾವೇರಿ ಗಲಾಟೆ ಇತ್ಯರ್ಥವಾಗಲು ಬಿಡುವುದಿಲ್ಲ ಹಾಗಾಗಿ ಗಲಾಟೆಯಾದಾಗ ಪ್ರತಿಮೆಗಳನ್ನ ಜೈಲಿನಲ್ಲಿಡುವ ಕ್ರಮಗಳನ್ನೆಲ್ಲಾ ತೆಗೆದುಕೊಳ್ಳಬೇಕಾಗುತ್ತದೆ. ಇವೆಲ್ಲ ಯಾಕೆ ಬೇಕು? ಹಂದಿಯನ್ನು(ತಮಿಳರಿಗೆ ಸಂಬಂಧಪಟ್ಟ ಯಾವುದೆ ವಿಚಾರ) ತೋಟದಿಂದ(ಕರ್ನಾಟಕ) ದೂರವಿಟ್ಟಷ್ಟು ತೋಟ ಹಸನಾಗಿರುತ್ತದೆ.

-ಪ್ರಸಾದ್

Anonymous ಅಂತಾರೆ...

ಈವತ್ತು ವಿಜಯಕರ್ನಾಟಕದ (ಜುಲೈ ೨೭, ೨೦೦೯) ಮುಖಪುಟದಲ್ಲಿ ವಿಶ್ವೇಶ್ವರ ಭಟ್ಟರು “ತಿರುಗಿ ವೈಮನಸ್ಯ ಬೇಡ, ಸರ್ವಜ್ಞತೆ ಮೆರೆಯೋಣ” ಅಂತ ಲೇಖನ ಬರೆದಿದ್ದಾರೆ. ಯಾವುದೇ ಹುರುಳಿಲ್ಲದ, ತಿಪ್ಪೇ ಸಾರಿಸುವಂತ ಈ ಲೇಖನವನ್ನು ನೋಡಿದರೆ ತಿಳಿಯುತ್ತೆ. ಇದನ್ನು ದುಡ್ಡುಕೊಟ್ಟು ಯಾರೋ ಬರೆಸಿರೋದು ಅಂತ. ತಮ್ಮ ಕ್ರೆಡಿಬಿಲಿಟಿಯನ್ನು ತಾವೇ ಕೈಯಾರೆ ಕೊಲ್ಲುವಂತ ಇಂತಹ ಲೇಖನಗಳನ್ನು ಬರೆಯುವುದಕ್ಕೆ ಮುಂಚೆ ಭಟ್ಟರು ಯೋಚಿಸಿದರೆ ಒಳ್ಳೇದು.

-ವಿಶ್ವೇಶ್ವರ ಭಟ್ಟರ ಒಬ್ಬ ಅಭಿಮಾನಿ ಓದುಗ.

Anonymous ಅಂತಾರೆ...

ವಿಶ್ವೇಶ್ವರ ಭಟ್ಟರು “ಮನದಲ್ಲಿ ಸ್ಥಾಪನೆಯಾಗಿರೋ ಸಣ್ಣತನದ ಪ್ರತಿಮೆಯ ಕಿತ್ತೊಗೆಯೋಣ” ತಲೆ ಬರಹದಡಿ ಬರೆದಿರೋ ಲೇಖನ ಓದಿ ಸ್ವಲ್ಪ ಕೋಪ ಬಂತು! ಅದು ಪ್ರಾಮಾಣಿಕತೆಯಿಂದ ಬರೆದಿರೋ ಲೇಖನ ಅಲ್ಲ. ಬದಲಿಗೆ ಒಬ್ಬ ರಾಜಕಾರಣಿ ಆಡಿರೋ ಮಾತುಗಳಂತಿದೆ. ಇದೇ ತರಹದ ಲೇಖನ ಪ್ರಜಾವಾಣಿಯಲ್ಲಿ ಪದ್ಮರಾಜ ಅನ್ನೋರು ಬರೆದಿದ್ದಾರೆ. ಕನ್ನಡಿಗನನ್ನೇ ಗುರಿಯಾಗಿಟ್ಟುಕೊಂಡು ಪತ್ರಕರ್ತರು ಬಾಣಬಿಡುತ್ತಿರೋದನ್ನ ನೋಡಿದರೆ ಮನಸ್ಸಿನಲ್ಲಿ ಹಲವಾರು ಸಂದೇಹಗಳು ಮೂಡುತ್ತಿವೆ.

:(

-Guruprasad

ಪುಂಗ್ಸಿವ ಅಂತಾರೆ...

ದೊಡ್ಡವರೆಲ್ಲ(ಈ ವಿಷಯದ ಸೂತ್ರಧಾರಿಗಳ?) ಜಾಣರಲ್ಲ... ಚಿಕ್ಕವರೆಲ್ಲ(ನಾವ?) ಕೋಣರಲ್ಲ... ಭಟ್ಟರು ಹೇಳಿದ ಮಾತುಗಳೆಲ್ಲ ಒಂದು ನಿಜವಲ್ಲ...
ಸ್ವಾಮಿ ಭಟ್ಟರೆ,
ಮಾನವೀಯತೆ ಮೆರೆಯೋ ಭರಾಟೇಲಿ ನಿಮ್ಮತನವನ್ನೆ ಮರ್ಯೋ ಸಣ್ಣ ಬುದ್ಧಿ ತೋರಿಸ್ಬಿಟ್ರಲ್ಲ! ನೀವು ತಪ್ಪು-ಸರಿ ತೂಗು ಹಾಕೊ ನಿಮ್ಮ ತಕ್ಕಡಿಗೆ ಜ್ವರ ಮೆಟ್ಕೊಂಡಿರ್ಬೋದು ನೋಡಿ. ಕನ್ನಡಿಗರು ಅತೀ ಸಹಿಷ್ಣುತೆ ಹೊಂದಿರೊ ಜನ ಅಂತ ಈವರೆಗೆ ಟೊಪ್ಪಿ ಹಾಕಿಸ್ಕೊಂಡಾಗಿದೆ, ನೀವು ಕಿವಿಗಳ್ಗೆ ಹೂವ ಇಡ್ತಿದೀರ? ನೀವು ಹೇಳೊ ಹಾಗೆ ಈ ರೀತೀಲಿ ನಾವು ದೊಡ್ಡವರಾಗಕ್ಕೆ ಹೊರಟ್ರೆ ನಮ್ಮ ಮಹನೀಯರನ್ನೆಲ್ಲ ಕೆಳಮಹಡಿಯಲ್ಲಿ ಮಲಗಿಸಿ ಬೀದಿ ಬೀದಿಗೆ ಬೇರೆಯವರ ಪ್ರತಿಮೆಗಳನ್ನ ಸ್ಥಾಪಿಸ್ಬೇಕಾಗತ್ತೆ. ಯಾಕಂದ್ರೆ ನಾವು ಬರೀ ಪಕ್ಕದ ತಮಿಳುನಾಡಿನವರಿಗೆ ದೊಡ್ಡವರಾದರೆ ಸಾಲದಲ್ಲ... ಎಲ್ಲಾ ದೇಶಗಳನ್ನ ಮೀರಿ, ಎಲ್ಲಾ ರಾಜ್ಯಗಳನ್ನ ಮೀರಿ ದೊಡ್ಡವರಾಗಬೇಕಲ್ಲ!?

Anonymous ಅಂತಾರೆ...

Esuginta 30 varsha munche huttidnante vallu ee padmarajana prakara. ivane hOgi nodkond bandidda! vallu huttiddu 5-7 (AD) nE shatamanakkinta munche aagirlikkilla anta iravatham mahadevan antha kongarE nirdharisirbekadare.. ee baddi maga hind gottilde mund gottilde baritanalla.. idu ivattina patrikOdyamada dusthithi. rajakaraNakkinta hecchu koLetu naaruttiruva kasabu andare patrikOdyamavE irabeku.

oMdE dina eraDu (naa kaMDa haMge - prajavani mattu vi.ka) patrikegaLalli adE peeTike kuydidare andare adaralle gottagatte adu rajakaraNigala ottayaakke duddu togondu tammanna taavu maarkondu bardirOdu anta.

sarvagnyana pratime madrasina aache iro koLaku ayanawaramalli sthapisidare, ee vallu pratime hebbal aacheno yelahanka acheno yaavudo haLLilO charanDilO sthapisabeku.

vallu pratime halasooru kereli sthapisabekaadare, sarvagnyana pratime madras marina beachallE sthapisabeku anta ottayisabeku. khadima nan makklu ayanawaramalli yaavudO hEL hesarillade irO parkalli sthapistarante! adunU aa park LIC maintain maaDOd ante! madras parkgaLigU shauchalayakko yaava vyatyasavu illa. haagirbekadare sarvagnyana pratimeyannu antaha parknalli sthapisalu oppikoLLuvudu moorkhatanada paramavadi.

marina beach gandhi statue pakka jaaga sigade iddalli, ee pratime vyavaharane beda anta allige kai bidabeku. yaav purusharthakke ee pratimegaLanna 'kottu taMdu' maaDO sketch haakadro gottilla. thut!

-sisya.

ರಮಾನಂದ ಅಂತಾರೆ...

ಅಯ್ಯೊ ಪದ್ಮರಾಜ್ ದಂಡಾವತೆ ಮತ್ತು ವಿ.ಭಟ್ಟರು ಇಬ್ಬರೂ ತಮ್ಮ ಋಣವನ್ನ್ಉ ತೀರಿಸಿದ್ದಾರೆ.
ಆರ್.ಪಿ ಜಗದೀಶ್ ನಂತರ ಪ್ರಜಾವಾಣಿಯನ್ನು ಬಿಜೆಪಿವಾಣಿಯನ್ನಾಗಿ ಪರಿವರ್ತನೆ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ನಡೆಸಿದ ವಿಶೇಷ ಪತ್ರಿಕಾ ಕಾರ್ಯಗಾರದಲ್ಲಿ "ರಾಜಕಾರಣಿಗಳು ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು" ಎಂಬುದರ ಬಗ್ಗೆ ಉಪನ್ಯಾಸ ಕೊಟ್ಟು ಬಂದವರು ಪದ್ಮರಾಜ ದಂಡಾವತಿ. ಅವರ ಉಪನ್ಯಾಸಕ್ಕೆ ಪುಟ್ಟ ಸಂಭಾವನೆ - ಒಂದು ಲಕ್ಷ ರೂ ನಗದು ಹಾಗೂ 20 ಗ್ರಾಂ ಚಿನ್ನ. ಅಂದರೆ ಕಳೆದ ರಾಜ್ಯೊತ್ಸವ ಪ್ರಶಸ್ತಿ.

Anonymous ಅಂತಾರೆ...

V Bhat is a great writer but some times he goes beyod his belief to support BJP and rss chaddis

putta ಅಂತಾರೆ...

ನಮ್ಮ ಸರ್ವಜ್ಞನ ಮೂರ್ತಿನ ಅಲ್ಲಿ ಅವರು ಯಾವುದೋ ಮೂಲೇಲಿ ಇಡ್ತಾರೆ..ಅದು ೧೦೦ ಪರ್ಸೆಂಟ್ ನಿಜ..ಹೊಗೆನಕಲ್, ಕಾವೇರಿ ವಿಷಯ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ವಿಷಯ - ಇವೆಲ್ಲದರಲ್ಲೂ ಯಾವಾಗಲೂ ತೊಡರುಗಾಲು ಆಗಿರುವ ತಮಿಳರಿಗೆ, ತಿರು ಪ್ರತಿಮೆನ ನಗರದ ಕೇಂದ್ರ ಭಾಗದಲ್ಲಿ ಇಡೋದರಿಂದ ಇಲ್ಲಿರೋ ತಮಿಳರಿಗೆ ರಾಜಮರ್ಯಾದೆ ನೀಡಿ ಕುಮ್ಮಕ್ಕು ಕೊಟ್ತಂಗಾಗುತ್ತೆ. ಇಷ್ಟೆಲ್ಲಾ ಆಗ್ತಿದ್ರು ಚಕಾರ ಎತ್ತದೆ ಇಷ್ಟೊಂದು ಹೇತ್ಲಾಂಡಿತನ ತೋರ್ಸಿತಿದಾರಲ್ಲ ನಮ್ಮ ರಾಜಕಾರಣಿಗಳು!! ಇಲ್ಲಿರೋ ತಮಿಳರ ಮತ ಬೇಕು ಅವ್ರಿಗೆ ಅಷ್ಟೇ.. ಬೇರೇನೂ ಅಲ್ಲ..ಒಂದು ವಿಷಯ ನಂಗೆ ಇನ್ನೂ ಅರ್ಥ ಆಗ್ತಿಲ್ಲ..ಅವರ ಪ್ರತಿಮೆ ಅವರಿಗಿರಲಿ ನಮ್ಮವರ ಪ್ರತಿಮೆ ನಮಗಿರಲಿ..ಅಲ್ಲಿದನ್ನು ಇಲ್ಲಿಗೆ ಇಲ್ಲಿದನ್ನು ಅಲ್ಲಿಗೆ ಮಾಡೋದು ಯಾಕೆ ಬೇಕು..ಎಷ್ಟೇ ದೊಡ್ಡ ಕವಿ ಆಗಿದ್ರು ಅಥವಾ ಮಹಾ ವ್ಯಕ್ತಿ ಆಗಿದ್ರು ಅವರೆಲ್ಲರೂ ತಮಿಳರಿಗೆ ತಿರುವಳ್ಳುವರ್ಗಿಂತ ಕಮ್ಮಿಯೇ .. ಅಷ್ಟು ದುರಭಿಮಾನ ಅವರಿಗೆ.. ಸೌಹಾರ್ದತೆ ಸೋಗಿನಲ್ಲಿ ಸೋಗಲಾಡಿ ರಾಜಕಾರಣಿಗಳು ತಮ್ಮ ಬೇಳೆ ಬೇಯ್ಸ್ಕೊಳೋದು ಬ್ಯಾಡ ...

lakki ಅಂತಾರೆ...

in bangalore, there is shivaji statue, kamaraj road etc. have we named any main road on sir MV who is also a bharatratna? we have shivajinagar, rajajinagar,indiranagar etc.. do we have named D,URS or Kuvempu for any main localities? ( names are examples.. there are different stalwarts like RaJ, G.hanagal and all stalwarts from different walks of life).. we only have HBR, HRBR, OMBR etc,,, nothing in the name of kannadigas..
this goes to show that none of the so called elite educated or elected representatives of this land have any Abhimana on kannada or kannadiga Swabhimaana.. even when people wanted the name of Kempegowda for B'lore international airport, people started proposing different names.. when the same people are quiet for a "shivaji"nagar, or a "Rajaji"nagar.
unless this attitude is not changed,, bangalore will definitely not belong to kannadigas and karnataka in the near future.. its time to wake up put the kannada authority on this place.. Karnaatakadalli Kannadigaane Saaravabhouma..

Selvaraj ಅಂತಾರೆ...

Dont want any statue in Karnataka. This will lead to public unrest in later years. These statues will last only till the next cauvery row.

ದೇವೇಶ್ ರಾವ್ ಅಂತಾರೆ...

!ಸಹೃದಯಿ ಸಿ೦ಹವನ್ನು ಕೆಣಕಬೇಡಿ!
ಕನ್ನಡಿಗರು ಹೃದಯ ಶ್ರೀಮಂತರು. ಅಲ್ಲದೆ ಬುದ್ಧಿವಂತರು. ಎಲ್ಲಾ ಭಾಷೆಗಳನ್ನು ಕಲಿತು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವಂತಹವರು. ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಕನ್ನಡಿಗರು ಎಂತಹವರು ಎಂದರೆ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದೆಲ್ಲಾ ಗುಣಗಾನ ಮಾಡಿರುವುದು ಇದಕ್ಕೆ ಸಾಕ್ಷಿ ಎಂತಲೂ ಹೇಳಬಹುದು.

ಕನ್ನಡಿಗರು ಕಲೆಯನ್ನು, ಕಲೆಗಾರರನ್ನು, ಸ೦ಸ್ಕೃತಿಯನ್ನು ಮತ್ತು ಸಾಹಿತ್ಯವನ್ನು ಎ೦ದಿಗೂ ಪ್ರೀತಿಸುವವರು, ಪೋಷಿಸುವವರು ಮತ್ತು ಗೌರವಿಸುವವರು. (ಉದಾ: ಕನ್ನಡಿಗ - ಎಸ್. ಜಾನಕಿಯವರನ್ನು, ಎಸ್.ಪಿ.ಬಿ ರವರನ್ನು ತನ್ನ ಮನೆಯವರ೦ತೆಯೇ ಪ್ರೀತಿಸುತ್ತಾನೆ). ಯಾರೇ ತನ್ನಲ್ಲಿ ನೆಲೆಯರಸಿ ಬ೦ದರೂ ಅವರಿಗೆ ಅನ್ನ ಆಶ್ರಯಗಳನ್ನು ನೀಡುವ೦ತಹವನು. ಇದು ಕನ್ನಡಿಗನ ಸಹಜ ಗುಣವಷ್ಟೇ! ಆದರೆ ಈಗೀಗ ಕನ್ನಡಿಗನ ಈ ಗುಣವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ನೋಡಬಹುದು.

ಕನ್ನಡಿಗನು ಎಷ್ಟು ಸಹೃದಯನೋ ಅಷ್ಟೇ ಸಿಡಿದೆದ್ದುಬೀಳುವ ರಕ್ಕಸ ಅಲೆಯ ಶಕ್ತಿಯುಳ್ಳವನು. ತನ್ನ, ತನ್ನ ನಾಡಿನ ಮತ್ತು ತನ್ನ ಜನರ ಮಾನಾಪಮಾನಗಳನ್ನು ಕಾಪಾಡಿಕೊಳ್ಳಲು ಸ೦ಪೂರ್ಣವಾಗಿ ಸಮರ್ಥನು.

ಕನ್ನಡಿಗನನ್ನು ಏನೆ೦ದು ಔಮಾನಿಸಿದರೂ ಸಹಿಸಿಕೊಳ್ಳುತ್ತಾನೆ ಎ೦ದು ನ೦ಬಿರುವವರು ಎಚ್ಚೆತ್ತುಕೊಳ್ಳುವ ಸಮಯ ಬ೦ದೊದಗಿದೆ. ಇತ್ತೀಚೆಗೆ, ಕನ್ನಡಿಗರು ಹೃದಯಶ್ರೀಮ೦ತಿಕೆ ತೋರಿಸಬೇಕು, ತಮ್ಮ ಮನಸನ್ನು ತೆರೆದುಕೊಳ್ಳಬೇಕು, ಹಾಗೆ ಹೀಗೆ ಲೊಟ್ಟೆ ಲೊಸುಕು ಎ೦ಬ ಬುದ್ಧಿವಾದವನ್ನು ಸಮಾಜಕ್ಕೆ ನೀಡುತ್ತಿರುವ ಪತ್ರಿಕೆಗಳು ತಮ್ಮ ತಪ್ಪನ್ನು ಒಪ್ಪಿಕೊ೦ಡು ಒಡನೆಯೇ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕಾಗಿದೆ.

ಕನ್ನಡವೇ ಸತ್ಯ..... ಕನ್ನಡವೇ ನಿತ್ಯ..... ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡ೦ ಬಾಳ್ಗೆ.

ದೇವೇಶ್ ರಾವ್.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails