ಇನ್ನೊಂದು ವಾರ ಆದಮೇಲೆ Bangalore ಅಲ್ಲ, Bengaluru!

ಇನ್ನೊಂದು ವಾರದಲ್ಲಿ Bangalore ಆಗತ್ತೆ Bengaluru ಅಂತ ಇವತ್ತಿನ ವಿ.ಕ. ಮತ್ತು ಡೆಕನ್ ಹೆರಾಲ್ಡ್ ಸುದ್ದಿ. ಅದಕ್ಕೆ ಬೇಕಾದ ಅಪ್ಪಣೆ ಕೇಂದ್ರದಿಂದ ಸಿಕ್ಕಿದೆಯಂತೆ. ಡೆಕನ್ ಹೆರಾಲ್ಡಲ್ಲಿ ಬೆಂಗಳೂರು ಜೊತೆಗೆ...
Other places set to change their names are: Mysore as Mysuru, Ballary(Bellary), Mangaluru (Mangalore), Vijapura (Bijapur), Belagavi (Belgaum), Chikkamagaluru (Chickmagalur); Kalaburgi (Gulbarga), Hosapete (Hospet), Shivamogga (Shimoga), Hubballi (Hubli), Tumakuru (Tumkur) and Kapu (Kaup).

ಅಂತಿದೆ.

ಬ್ರಿಟಿಷರು ಹೋದ ಕಡೆಯೆಲ್ಲಾ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೋ ಹಾಗೆ ಮಾರ್ಪಡಿಸಿಕೊಂಡಿದ್ದರು (ಬೆಂಗಳೂರು "Bangalore" ಆಗಿದ್ದು, ಅದರಿಂದ್ಲೇ ಬೆಳಗಾವಿ "Belgaum" ಆಗಿದ್ದು ಇದರಿಂದಾನೇ). ಆಡಳಿತದಲ್ಲಿ ತಮ್ಮ ಭಾಷೆಯಾದ ಇಂಗ್ಲೀಷನ್ನ ಎಕ್ಕಾಮುಕ್ಕಾ ಉಪಯೋಗಿಸುತ್ತಿದ್ದ ಬ್ರಿಟೀಷ್ ಸರ್ಕಾರ ತನ್ನ ದಾಖಲೆಗಳಲ್ಲೆಲ್ಲ ಈ ಮಾರ್ಪಟ್ಟ ಹೆಸರುಗಳನ್ನೇ ಉಪಯೋಗಿಸುತ್ತಿತ್ತು. ಬಂತು ಬ್ರಿಟಿಷರಿಂದ ಬಿಡುಗಡೆ. ಕಳೀತು ೬೦ ವರ್ಷ. ಇವತ್ತಿಗೂ ಕೇಂದ್ರಸರ್ಕಾರ ಆಡಳಿತಕ್ಕೆ ಇಂಗ್ಲೀಷನ್ನೇ ಬಳಸುತ್ತಾ ಬಂದಿದ್ದು ನಮ್ಮ ಭಾಷೆಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸೋಲೊಪ್ಪಿಕೊಂಡಂತೆಯೇ ಇದೆ. ಯೂರೋಪಿನ ಒಕ್ಕೂಟ ವ್ಯವಸ್ಥೆಯಲ್ಲಿ ಸದಸ್ಯ ರಾಜ್ಯಗಳೆಲ್ಲವುಗಳ ಭಾಷೆಗಳಲ್ಲೂ ಎಲ್ಲಾ ದಾಖಲೆಗಳೂ ಸಿಗುವಂತೆ ಭಾರತೀಯ ಒಕ್ಕೂಟದಲ್ಲೂ ಸಿಗಬೇಕು. ಅದು ಬಿಟ್ಟು ಇಂಗ್ಲೀಷ್ನ ತಲೇಮೇಲೆ ಕೂರಿಸಿಕೊಂಡಿರೋದು ಮೊದಲಾಗಿ ಸರಿಯೇ ಅಲ್ಲ. ಇನ್ನು ಲೆಕ್ಕಕ್ಕಿಲ್ಲದಿದ್ದರೂ ಆಟಕ್ಕೆ ಅಂತ ಹಿಂದೀನ ಮೆರಸುತ್ತಿರೋದಂತೂ ದಂಡವೋ ದಂಡ.

ಏನೇ ಇರಲಿ, ಸದ್ಯಕ್ಕಂತೂ ಇಂಗ್ಲೀಷ್ನ ತಲೆಮೇಲೆ ಕೂಡಿಸಿಕೊಂಡಿರುವಂಥಾ ವ್ಯವಸ್ಥೇನೇ ಇರೋದು. ಈ ವ್ಯವಸ್ಥೆಯಲ್ಲಿ ಓಡಾಡೋ ದಾಖಲೆಗಳ ಮೇಲೆ ನಮ್ಮೂರ ಹೆಸರುಗಳು ನಮ್ಮೂರ ಹೆಸರುಗಳಂತೆಯೇ ಮತ್ತೊಮ್ಮೆ ಕೇಳಿಸುತ್ತವೆ ಅಂದ್ರೆ ಸ್ವಲ್ಪವಾದರೂ ಖುಷಿಪಡಬೇಕಾದ್ದೇ.

ಒಂದೇನಪ್ಪಾ ಅಂದರೆ - ಹಳೇ ಹೆಸರುಗಳ ಬಳಕೆ ೦% ಆಗುವುದಕ್ಕೆ ಒಂದು ಕಡೇದಿನಾಂಕ ಅಂತ ಸರ್ಕಾರದೋರು ಇಟ್ಟುಕೋಬೇಕು. ಅದು ೬ ತಿಂಗಳಾದರೂ ಆಗಲಿ, ೧ ವರ್ಷವಾದರೂ ಆಗಲಿ. ಆ ದಿನಾಂಕ ಮುಗಿದ ಮೇಲೆ ಯಾವಯಾವ ದಾಖಲೆಗಳ ಮೆಲೆ ಊರಿನ ಹೆಸರು ತಪ್ಪಾಗಿರತ್ತೋ ಅವುಗಳನ್ನ ಕಸದಬುಟ್ಟಿಗೆ ಹಾಕ್ತೀವಿ ಅಂತ ಮೊದ್ಲೇ ಜನರಿಗೆ ಎಚ್ಚರಿಕೆ ಕೊಡಬೇಕು. ಆಗ್ಲೇ ಹೆಸರಿಟ್ಟಿದ್ದು ನಿಜವಾಗ್ಲೂ ಇಟ್ಟಂಗೆ. ಇಲ್ಲದಿದ್ದರೆ ನಾಯಿಬಾಲ ಡೊಂಕು ಅಂದಂಗೆ ಇನ್ನೂ Bangalore, Mysore, Belgaum... ಅಂತ ಜನ ಬಳಸೋದು ನಿಲ್ಲಿಸೋದಿಲ್ಲ (ಅವರಲ್ಲೂ ವಲಸಿಗರು, ಹೊರದೇಶ/ಹೊರರಾಜ್ಯದೋರು). ಬೆಂಗಳೂರಿನ ಬಿ.ಟಿ.ಎಂ. ಲೇಔಟಿಗೆ "ಕುವೆಂಪುನಗರ" ಅಂತ ಹೆಸರಿಟ್ಟರೂ ಅದನ್ನ ಸರಿಯಾಗಿ ಜನ ಪಾಲಿಸೋಹಾಗೆ ಮಾಡಲಿಲ್ಲವಲ್ಲ, ಹಾಗಾಗಬಾರದು.

ಇದು ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಒಂದು ಪುಟ್ಟ ಹೆಜ್ಜೆ. "ಹೆಸರಲ್ಲೇನಿದೆ?" ಅಂತ ತಮ್ಮನ್ನ ತಾವೇ ಅತೀಬುದ್ಧಿವಂತರು ಅಂದುಕೊಂಡಿರೋರು ಅನ್ನಬೋದು, ಆದರೆ ಅವರಿಗೇನು ಗೊತ್ತು ಸಂಸ್ಕೃತಿ, ಅವರಿಗೇನು ಗೊತ್ತು ನುಡಿಯ ಹಿರಿಮೆ? ಅವರಿಗೇನು ಗೊತ್ತು ಒಗ್ಗಟ್ಟು ಅಂದ್ರೆ? ಅವರಿಗೇನು ಗೊತ್ತು ಸ್ವಾಭಿಮಾನ ಅಂದ್ರೆ? ಅವರಿಗೇನು ಗೊತ್ತು ಇದರಿಂದ ನಮ್ಮ ಜನರಿಗೆ ಎಷ್ಟು ಸಂತಸವಿದೆ ಅಂತ? ಅವರಿಗೇನು ಗೊತ್ತು ಹಳ್ಳಿಯಿಂದ ಈ ಊರುಗಳಿಗೆ ಬಂದವನಿಗಾಗುವ ಬವಣೆ?

7 ಅನಿಸಿಕೆಗಳು:

Anonymous ಅಂತಾರೆ...

ಇಲ್ಲಿ ನೋಡಿ ಗುರು(www.eetimes.com). ಇವರು ಬಹಳ ದಿನಗಳಿಂದ Bengaluru ಅಂತಾನೆ ಬಳ್ಸೋದು.
ಆದರೆ ನಮ್ಮ ಡೆಕ್ಕನ್ ಹೆರಾಲ್ಡ್ ಅವರು ಇನ್ನು Bangalore
ಅಂತ ಬರೀತಾರೆ. !!!

Anonymous ಅಂತಾರೆ...

ಇನ್ನು ಎಲ್ಲರೂ bengaluruಅಂತ ಬರೆಯಲೇ ಬೇಕು!!

:)

ಇದೊಂದು ಒಳ್ಳೆಯ ಕೆಲಸ ಸರಕಾರದಿಂದ!!

santosh ಅಂತಾರೆ...

ಅಲ್ಲ ದೇವ್ರು ನನ್ನ ಕೇಳಿದ್ರೆ ಇದನ್ನ ಬೆಂದಕಾಳೂರು ಅಂತ ಹೇಳ್ಬೇಕು ಇದು ಬಸ್ ಅನ್ನೋ ಆಂಗ್ಲ ಪದಾನ ಬಸ್ಸು ಅಂತ ಕನ್ನಡದಲ್ಲಿ ಹೇಳ್ದಾಂಗ್ ಆಯ್ತು ಸಿವಾ.....

Anonymous ಅಂತಾರೆ...

ಬೆಂದಕಾಳೂರು ಬೆಂಗಳೂರಾಗಿದ್ದು ಕನ್ನಡಿಗನ ನಾಲಿಗೆಯಲ್ಲಿ. ಅದಾದ ಎಷ್ಟೋ ವರ್ಷಗಳಾದಮೇಲೆ ಅದು ಇಂಗ್ಲೀಷರ ನಾಲಿಗೆಯಲ್ಲಿ Bangalore ಆಗಿದ್ದು. ಅಲ್ಲವೆ? ಕನ್ನಡಿಗರ ನಾಲಿಗೆಯಲ್ಲಾದ ಬದಲಾವಣೆಯನ್ನು ಕೈಬಿಡುವ ಅವಶ್ಯಕತೆಯಿಲ್ಲ. ಅದು ನಮ್ಮ ಪಾಲಿಗೆ ಕಣ್ಣಿಗೊತ್ತಿಕೊಂಡು ಒಪ್ಪಿಕೊಳ್ಳಬೇಕಾದ ಸತ್ಯ.

Anonymous ಅಂತಾರೆ...

Shouldnt it be Benalooru, mysooru, mangalooru, chikkamagalooru. It should be ooru rather than uru.

Amarnath Shivashankar ಅಂತಾರೆ...

namage idu yavattu bangalore, mysore aagiralE illa.
namagendendigU idu bengaLooru,mysooru, mangaLooru ityaadi :)

modalige ee badalaavaNeyannu ella IT companygaLu hEge aLavaDisuttare, eshtu bega spandisuttareMbudu mukhya.

IrsuMursu ಅಂತಾರೆ...

ಹೆಸರಲ್ಲೇನಿದೆ ಅಂತ ಕೇಳೋ ಮಹಾಶಯರಿಗೆ ಒಂದು ಮಾತು.

ನೀವು ನಿಮ್ಮ ಹೆಸರನ್ನು ಸರಿಯಾಗಿ ಉಚ್ಚರಿಸಲಿಕ್ಕೆ ಬರದವರಿಗೆ, ಸರಿಯಾದ ಉಚ್ಚರಣೆ ಹೇಳಿ ಕೊಡ್ತೀರೋ ಇಲ್ವೋ? ಲಕ್ಷ್ಮಣ ಅನ್ನೋದನ್ನ ಲ್ಯಾಕ್ಸಮ್ಯಾನ್ ಅಂದರೆ ಸುಮ್ನೆ ಇರ್ತೀರಾ? ಇದು ಹಾಗೆನೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails