ಸ್ಥಳೀಯ ಮಂದಿನ್ನ ಕೆಲಸಕ್ಕೆ ಇಟಗೋರಿ: ಶಿವಸೇನಾ

ಕಳದ ಶನಿವಾರ, ಜುಲೈ 28. ಮುಂಬೈ ನಗರದಾಗ್ ಶಿವಸೇನಾ ತನ್ನ ಮಣ್ಣಿನ ಮಕ್ಕಳ ಹಕ್ಕಿನ ಸಲುವಾಗಿ, ಅಲ್ಲಿ ನೆಲೆಗೊಂಡಿರುವ ರಿಲಯನ್ಸ್ ಸಂಸ್ಥಾ ಹೆಂಗ ಅಲ್ಲಿನ ಸ್ಥಳೀಯ ಮರಾಠಿ ಮಂದಿನ್ನ ಮೂಲೆಗುಂಪ ಮಾಡುದ್ರಾಗ ಸಫಲ ಆಗೆತಿ ಅನ್ನು ವಿವರಣೆ ನೀಡಕೊಂತ, ರಿಲಯನ್ಸ್ ಕಂಪನಿಯ ಧೋರಣೆಯನ್ನು ಖಂಡಿಸುತ್ತ ಮರಾಠಿ ಮಂದಿಗ್ ನ್ಯಾಯ ಕೊಡಸು ಸಲುವಾಗಿ, ಅವರ ಪರವಾಗಿ ದೊಡ್ಡ ಮಟ್ಟದಾಗ್ ಪ್ರತಿಭಟನೆ ಹಮ್ಮಿಕೊಂಡಿತ್ತು ಅಂತ ಔರಂಗಾಬಾದ್ನ ಲೋಕಮತ ಟೈಮ್ಸ ವರದಿ ಮಾಡೇತಿ (ಚಿತ್ರ ನೋಡಿ).

ಬಹುರಾಷ್ಟ್ರೀಯ / ಬಹುರಾಜ್ಯ ಕಂಪನಿಗಳು ಅಂದಕೂಡಲೆ ಸ್ಥಳೀಯ ಮಂದಿಗ್ ಆದ್ಯತೆ ಮ್ಯಾಲ ಕೆಲ್ಸ ಕೊಡವಲ್ರು ಅಂದ್ರ ಹೆಂಗ್ಪಾ ಗುರು? ಈ ಕಂಪನಿ ನಡಸೋರ ತಲಿಯೊಳ್ಗ ಏನ್ರ ಐತಿ ಅನ್ನೋದಾದ್ರ ಸ್ಥಳೀಯ ಮಂದಿನ್ನ ಕೆಲ್ಸಕ್ ಇಟಗೊಂಡ್ರ ವೆಚ್ಚಾ ಕಡಮಿ ಆಗತೇತಿ ಅನ್ನೋದಾದರೂ ತಿಳೀಬಾರದೆ? ಅದ ಬಿಟ್ಟ ತಾ ಬಂದ ಊರಿಂದಲೇ ಕೆಲ್ಸಕ್ ಮಂದಿನ್ನೂ ಕರಕೊಂಡ ಬರ್ತೀನಿ ಅಂದ್ರ ಹೆಂಗ ಗುರು?

7 ಅನಿಸಿಕೆಗಳು:

Anonymous ಅಂತಾರೆ...

ಅಲಾಲ ಲ್... ಗುರುಗಳು ನಮ್ ಧಾರವಾಡ್ ಕನ್ನಡದಾಗ್ ಅಗದಿ ಭೇಷಂಗ್ ಬರದೀರಿ,, ಓದಾಕ್ ಖುಷಿ ಆತ್ರಿ.. ಶಿವಸೇನ ಮರಾಠಿ ಮಂದಿ ಸಲುವಾಗಿ ಹೋರಾಟ ಮಾಡಿದ್ರಾಗ್ ಅಂತಾ ಪರಿ ಆಶ್ಚರ್ಯ ಆಗುವಂತಾದ್ ಏನಿಲ್ರಿ,, ಯಾಕಂದ್ರ,, ಅದು ಅಲ್ಲಿನ ಮುಖ್ಯ ರಾಜಕೀಯ ಪಕ್ಷ ಐತಿ. ಆದ್ರ,, ನಮ್ಮ ಕರ್ನಾಟಕದ ಪರಿಸ್ಟಿತಿ ನೋಡ್ರಿ.. ಅವನೌನ್,, ಇಲ್ಲಿನ ಒಂದಾ ಒಂದ ರಾಜಕೀಯ ಪಕ್ಷಕ್ಕೂ ಇವೆಲ್ಲಾ ಮುಖ್ಯ ವಿಷ್ಯಾ ಅನಸಂಗೆ ಇಲ್ಲಾ.. ಬರೇ ದಿಲ್ಲಿ ಮಂದಿಗ ಬಹುಪರಾಕ್ ಮಾಡುದ್ರಾಗ ಇವರ ಜೀವನಾ ಎಲ್ಲಾ ಸವದ ಹೋತು..

Anonymous ಅಂತಾರೆ...

ಕ ರ ವೇ ಬಿಟ್ರೆ ಬೇರೆ ಯಾವ್ದು ನಮ್ಮ್ ಪರವಾಗಿಲ್ಲ ಅನ್ನೋದು ಇದರಿಂದೆ ಸಾಬೀತಾಗಿದೆ. ಕನ್ನಡಿಗರಿಗೆ ಕೆಲಸ ಕೊಡಿ ಎಂದು ಕ ರ ವೇ ಹೊರತು ಪಡಿಸಿ ಯಾರು ಕೂಗು ಹಾಕಿದಾರೆ ಹೇಳಿ ನೊಡೊಣ.
ಮತ್ತೊಂದು ವಿಶಯ ಈ ಬ್ಲಾಗ್ ನಲ್ಲಿ ಗಮನಿಸಬೇಕಾದ್ದೆನೆಂದರೆ ಇಲ್ಲಿ ಕನ್ನಡದ ಎಲ್ಲ ರೀತಿಯ ಭಾಷಾ ಪ್ರಯೋಗ ಮಾಡುತ್ತಿದ್ದಾರೆ. ಇವತ್ತಿನ ಭಾಷಾ ಪ್ರಯೋಗವಂತು ಸುಪರ್. ಹಿಂಗೆ ಮಂಗಳೂರು ಕನ್ನಡ, ಹವ್ಯಕ್ ಕನ್ನಡ ದಲ್ಲು ಬರೆಯುವ ಪ್ರಯತ್ನ ಮಾಡಿ. ಇದರಿಂದ ಇಡೀ ಕನ್ನಡ ಜನತೆ ಒಂದು ಎಂದು ತೋರಿಸೋಣ. ಕರ್ನಾಟಕವನ್ನ ಉತ್ತರ ಕರ್ನಾಟಕ, coastal ಕರ್ನಾಟಕ, ಹಳೆ ಮೈಸೂರು ಎಂದು ಗುರುತಿಸುವ ಬದಲು ಇಡಿಯಾಗಿ ಕರ್ನಾಟಕ ಎಂದು ಗುರುತಿಸುವಂತಾಗಬೇಕು.
ಮತ್ತೆ ಧಾರವಾಡ ಶೈಲಿಯ ಕನ್ನಡ ಮಾತನಾಡುವವರು ಬೆಂಗಳೂರಿಗೆ ಬಂದಾಗ ಮುಜುಗರ ಪಡುತ್ತಾರೆ ಎಂದು ಯಾರೊ ಹೇಳಿದ್ದರು.

Anonymous ಅಂತಾರೆ...

ದಾರವಾಡದ ಕನ್ನಡದ ಸೊಗಡು ಬೊಂಬಾಟ್ ಗುರುವೇ!

ಶ್ವೇತಕ್ಕ ಹೇಳೋ ಹಂಗೆ ಬೇರೆ ಬೇರೆ ಕನ್ನಡಗಳನ್ನು ಬರೆದು ನಾವೆಲ್ಲ ಒಂದೇಯ ಅಂತ ತೋರುಮ...

ಮಂಗಳೂರು ಬಾಸೆಯೂ ಬರ್ಲಿ, ಮಂಡ್ಯ ಬಾಸೆಯೂ ಬರ್ಲಿ, ದಾವಣಗೆರೆ, ಬಳ್ಳಾರಿ, ಬೀದರ, ಸೋಲಿಗ, ಹವ್ಯಕ ಎಲ್ಲವೂ ಬರ್ಲಿ...

ಹಿಂಗೇ ಬರೇ ಗುರು.. ಮಸ್ತ್ ನೀನು!

Anonymous ಅಂತಾರೆ...

karnatakakke ondu swadeshika paksha beku..Urdu, hindi, English modalaada parakeeyabhaashegalnnella doora idabeku..

Shree ಅಂತಾರೆ...

ಏನ್ ಗುರು?

ವಿಷಯಗಳ ತಟ್ಟೆ ಅನ್ನೋ ಬದ್ಲು... ವಿಷಯಗಳ ಬುತ್ತಿ ಅಂದ್ರೆ ಹೇಗಿರೊತ್ತೆ...?

ಬನವಾಸಿ ಬಳಗ ಅಂತಾರೆ...

ಶ್ರೀ ಅವರೆ,

ನಿಮ್ಮ ಸಲಹೆ ಚೆನ್ನಾಗಿದೆ. ತಟ್ಟೆ ಈಗ ಬುತ್ತಿ! ನನ್ನಿ! ಹೀಗೇ ಒಳ್ಳೆಯ ಸಲಹೆಗಳನ್ನು ನೀಡುತ್ತಿರಿ!

Samarasa ಅಂತಾರೆ...

nimma bhashe balu chandade hege barirappa, adre bhala besara agedre nange alli marathigaru prathibathane madayar staliyarige naukri kodalilla antha illi namma karnatakadage yaru horadvallaru enri agade ivarigella

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails