ಹೊರನಾಡಿನ ಕನ್ನಡ ಸಮ್ಮೇಳನಗಳಲ್ಲಿ ಕರ್ನಾಟಕದ ಏಳ್ಗೆಯ ಬಗ್ಗೆ ಚರ್ಚೆಗಳು ನಡೆಯಬೇಕು

ಕುವೈತಿನಲ್ಲಿ ಇದೇ ವರ್ಷದ ನವಂಬರ್ ೩೦ ಮತ್ತು ಡಿಸೆಂಬರ್ ೧ ರಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ ಅಂತ ಸುದ್ದಿ. ಈ ಸಮ್ಮೇಳನಗಳಲ್ಲಿ ಸಾಹಿತ್ಯ, ಕವಿಗೋಷ್ಠಿ, ಹಾಸ್ಯ ಹಾಗೂ ಮಾಧ್ಯಮ ಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ, ವಸ್ತು ಮತ್ತು ಪುಸ್ತಕ ಪ್ರದರ್ಶನಗಳು, ಬಹುಮಾನ ಕೊಡುವಿಕೆಗಳು - ಇವೆಲ್ಲ ನಡೆಯಲಿವೆ.


ಈ ಎಲ್ಲಾ ಕಾರ್ಯಕ್ರಮಗಳೇನೋ ಸರಿ. ನಡೀಬೇಕು. ಇದರಿಂದ ಹೊರನಾಡು ಕನ್ನಡಿಗರಿಗೆ ಆಗಾಗ ನಾಡಿನ ಅಗಲಿಕೆಯ ನೋವು ಕಡಿಮೆಯಾಗುವುದೇನೋ ನಿಜ, ಕನ್ನಡ ಸಂಸ್ಕೃತಿಯ ಸವಿಯನ್ನು ಸವಿಯುವ ಸದವಕಾಶ ಸಿಗುವುದೇನೋ ನಿಜ. ಆದರೆ ಇಷ್ಟಕ್ಕೇ ನಿಲ್ಲಿಸದೆ "ಕರ್ನಾಟಕದ, ಕನ್ನಡದ, ಕನ್ನಡಿಗರ ಏಳ್ಗೆ ಹೇಗೆ?", "ಕರ್ನಾಟಕದ ಸ್ಥಿತಿ ಇವತ್ತು ಹೇಗಿದೆ?", "ಕನ್ನಡ ಹೇಗೆ ಬೆಳೆಯುತ್ತಿದೆ?", "ಅದು ಎದರಿಸುತ್ತಿರುವ ತೊಂದರೆಗಳೇನು?", "ಇದಕ್ಕೆಲ್ಲ ಪರಿಹಾರ ಏನು?", "ಕರ್ನಾಟಕ ಬೆಳವಣಿಗೆ ಹೊಂದುವುದು ಹೇಗೆ?", "ಕನ್ನಡಿಗರ ಕೀರುತಿ ಮುಗಿಲುಮುಟ್ಟಬೇಕಾದರೆ ಏನೇನಾಗಬೇಕು?" - ಇಂತಹ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯಬೇಕು. ಹಾಗೇ ಕುವೈತಿನಿಂದ ಹ್ಯೂಸ್ಟನ್ನು, ಹ್ಯೂಸ್ಟನ್ನಿನಿಂದ ಸಿಡ್ನಿ, ಸಿಡ್ನಿಯಿಂದ ಟೋಕ್ಯೋ, ಟೋಕ್ಯೋದಿಂದ ದಿಲ್ಲಿ, ದಿಲ್ಲಿಯಿಂದ ಮುಂಬೈ, ಮುಂಬೈ...ಹೀಗೆ ಈ ಬಗೆಯ ಚಿಂತನೆ ನಡೆಯುತ್ತಾ ಹೋಗಬೇಕು, ಒಂದು ದೇಶದಿಂದ ಮತ್ತೊಂದಕ್ಕೆ ಸಮ್ಮೇಳನದ ತೇರು ಹೊರಟಂತೆ ಏಳ್ಗೆಯ ಚಿಂತನೆಯೂ ಹೋಗಬೇಕು. ಜೊತೆಗೆ ಒಳನಾಡಿನ ಕನ್ನಡಿಗರೂ ಒಗ್ಗೂಡಬೇಕು. ಆಗ ನಮ್ಮ ಕನಸು ನನಸಾದೀತು.
ಕುವೈತಿನಿಂದಲೇ ಇದು ಶುರುವಾದರೆ ಎಷ್ಟು ಚೆನ್ನ! ಕುವೈತ್ ಕನ್ನಡ ಕೂಟದ ತಾಣ ಇಲ್ಲಿದೆ.

3 ಅನಿಸಿಕೆಗಳು:

Satish ಅಂತಾರೆ...

’ಬಬ’ ಕ್ಕೆ ಬಂದ್ ನೋಡಿ ಎಂದು ಕರೆ ಕೊಡುವ ಹಲವು ಇ-ಮೇಲ್, ಬ್ಲಾಗ್ ಕಾಮೆಂಟುಗಳ ನಡುವೆ ಹಿಂದೆ ’ಏನ್‌ಗುರು’ವನ್ನು ಏನ್ ಸಾರ್? ಅಂತ ಮಾತನಾಡಿಸಿದ್ರೂ ಕಾಮೆಂಟ್ ಬಿಟ್ಟಿರಲಿಲ್ಲ, ಆದ್ರೆ ಇವತ್ತು ಆ ಅವಕಾಶ ಬಂತು ಅಷ್ಟೇ.

’ಬಬ’ಕ್ಕೆ ಒಂದ್ ವೆಬ್ ಸೈಟ್ ಮಾಡಿಕೊಳ್ಳಿ, ಫ್ರೀ ಸರ್ವರ್‌ಗಳೂ, ವೆಬ್‌ಸೈಟುಗಳು ಸಿಗೋದರ ಬಗ್ಗೆ ನಿಮಗೇನು ನಾನು ಹೇಳ್ಬೇಕಾಗಿಲ್ಲ. ಜೊತೆಯಲ್ಲಿ About Us ಅನ್ನೋದರ ಬಗ್ಗೆ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಒಂದೆರಡು ಪುಟದ ವಿವರವನ್ನೂ ಕೊಡಿ. ನೀವು ಮಾಡ್ತೀರೋ ಕಾರ್ಯಕ್ರಮಗಳ ಬಗ್ಗೆ ಹಿಂದೆಲ್ಲಾ ಓದಿದ್ದೇನೆ, ಅವುಗಳನ್ನು ಬ್ಲಾಗಿನ ಒಂದು ವಿಭಾಗದಲ್ಲಿ ಆನ್‌ಲೈನ್ ಅವತರಣಿಕೆಯಾಗಿ ಹಾಕಿ (ಈ ಹಿಂದೆ ಮಾಡಿದ ಪ್ರಾಜೆಕ್ಟ್‌ಗಳನ್ನು ತೋರಿಸ್ತಾರಲ್ಲ ಹಾಗೆ).

’ಬಬ’ ಕವಿರಂ, ಅಥವಾ ಮತ್ಯಾವುದೇ ಇತರ ಒಕ್ಕೂಟಗಳಿಗಿಂತ ಹೇಗೆ ಭಿನ್ನ ಎಂಬುದನ್ನು ನಿಮ್ಮ ಓದುಗರೆಡೆಯಲ್ಲಿ ತೆರೆದುಕೊಳ್ಳುವುದೂ ಒಂದು ಒಳ್ಳೆಯ ಬೆಳವಣಿಗೆ.

ಒಳಿತಾಗಲಿ...

ಬನವಾಸಿ ಬಳಗ ಅಂತಾರೆ...

ನಿಮ್ಮ ಸಲಹೆಗಳಿಗೆ ಧನ್ಯವಾದಗಳು. ಅವುಗಳನ್ನು ಆಗುಮಾಡಿಸಲು ಪ್ರಯತ್ನ ಮಾಡುತ್ತೇವೆ.

Unknown ಅಂತಾರೆ...

ಹೌದು ನಿಜ... ಈ ತರದ ಚಿಂತನೆ ನಡಿತಾಯಿರಬೇಕು.. ಕನ್ನಡಿಗರು ಜಾಗೃತರಾಗಬೇಕು... ಸಾವಿರಾರು ವರ್ಷಗಳ ಇತಿಹಾಸ ಇರುವ ಭಾಷೆ ಸಂಸೃತಿ ಉಳಿಸಲು ಎಲ್ಲರು ಸಿದ್ದರಾಗಬೇಕು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails