ಶಾಸಕರ ಬಾರಿಗೆ ರಾತ್ರೋರಾತ್ರಿ ಸೈ, ರಾಜ್ ಸ್ಮಾರಕಕ್ಕೆ ಮೀನ-ಮೇಷ!

ಗೋಕಾಕ್ ಚಳುವಳಿಯನ್ನ ಐದನೇ ಗೇರಿಗೆ ತೊಗೊಂಡೋದ ನಟ ಡಾ.ರಾಜ್ ಕುಮಾರ್ ಸಮಾಧಿಯನ್ನ ಒಂದು ಸ್ಮಾರಕ ಮಾಡೊ ವಿಷಯದಲ್ಲಿ ನಮ್ಮ ಸರ್ಕಾರ ಮೀನ-ಮೇಷ ಏಣಿಸ್ತಾ ಇರೋ ಬಗ್ಗೆ ಇವತ್ತಿನ ವಿ.ಕ. ವರದಿ ಮಾಡಿದೆ.

ನಂ ಬೆಂಗಳೂರಿನಾಗೆ ಶಿವಾಜಿ, ತಿರುವಳ್ಳುವರ್ ಅಂದ್ರೆ "ಪುಸುಕ್" ಅಂತ ಪ್ರತಿಮೆಗೆ ರಾತ್ರೋರಾತ್ರಿ ಒಪ್ಪಿಗೆ ಕೊಡೋರು, ಶಾಸಕರಿಗೆ ಅಂತ ಬಾರ್ ಕಟ್ಟಕ್ಕ್ ಹಿಂದ್-ಮುಂದ್ ನೋಡದೇ ಇರೋರಿಗೆ ಐದೂವರೆ ಕೋಟಿ ಕನ್ನಡಿಗರ ಕಣ್ಮಣಿ ಡಾ|| ರಾಜ್ ಸ್ಮಾರಕ ನಿಲ್ಸಕ್ ಏನು ಬೇನೆ?

ಹಣಕಾಸು ಸಮಸ್ಯೆ ಆದ್ರೆ ನಾವ್ ಕೊಡ್ತೀವೀಂತ ಔರ್ ಮನೇವ್ರು ಅಂದ್ರೆ "ಇಲ್ಲ, ಇಲ್ಲ, ಅದು ಸಮಸ್ಯೆ ಅಲ್ಲ" ಅನ್ನೋ ಥರ ಬ್ಯಾಡಾ ಅಂತಾರೆ, ಆದ್ರೆ ಕೆಲ್ಸ ಶುರೂ ಕೂಡಾ ಮಾಡಲವಲ್ಲ ಗುರು?
ಹುಟ್ಟಿದರೇ ಕನ್ನಡ ನಾಡಲ್ ಹುಟ್ತಬೇಕು
ಮೆಟ್ಟಿದರೇ ಕನ್ನಡ ಮಣ್ಣಾ ಮೆಟ್ಟಬೇಕು . . .
ಮುಂದಿನಾ ನನ್ನಾ ಜನ್ಮ
ಬರೆದಿಟ್ಟಾನಂತೆ ಬ್ರಹ್ಮ
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನಿಲ್ಲಿಯೇ . . .

ರಾಜ್ ಸ್ಮಾರಕ ಕಟ್ಟೀಂತ ಪ್ರಪಂಚದ ಮೂಲೆಮೂಲೆಗಳಲ್ಲಿರೋ ಕನ್ನಡಿಗರಿಂದ ಬರ್ತಿರೋ ಕೂಗೇ "ಎಂದಿಗೂ" ಡಾ|| ರಾಜ್ "ಇಲ್ಲಿಯೇ" ಅನ್ನೋದರ ಗುರ್ತಲ್ವಾ ಗುರು?

10 ಅನಿಸಿಕೆಗಳು:

Anonymous ಅಂತಾರೆ...

immediately Dr.Raj smarakakke enu beko ellavannu eegine govt maadabeku. Bengalooru intl airport ge Dr.Raj avara hesaru idabeku. Halasoorina beedigalige tamilara hesaru ido jana, Kamraj road ant hesaru ido jana, Dr.Raj nenapige avara smaaraka hagu airport ge avara hesaru idalendu aashisuttene.

Anonymous ಅಂತಾರೆ...

" ಬೇಡರ ಕಣ್ಣಪ್ಪನಾಗಿ " ಕಣ್ಣುಗಳನ್ನು ಅರ್ಪಿಸುತ್ತ ಚಿತ್ರರಂಗ ಪ್ರವೇಶಿಸಿ, ಐದು ದಶಕಗಳ ಕಾಲ
ರಸಿಕರ ಕಣ್ಮಣಿಯಾಗಿ ರಾರಾಜಿಸಿ, ಇಡೀ ಕನ್ನಡ ಸಮುದಾಯಕ್ಕೆ ಬೆಳಕಾಗಿ, ಪ್ರಕಾಶಿಸಿ, ಪ್ರಜ್ವಲಿಸಿ,
ಕಣ್ಮುಚ್ಚಿ ಅಸ್ತಂಗತನಾದಮೇಲೂ ಇನ್ನೆರಡು ಜೀವಗಳಿಗೆ ಹೊಸ ಬೆಳಕು ನೀಡಿ, " ಬರುವಾಗಲೂ
ಬೆತ್ತಲೆ...ಹೋಗುವಾಗಲೂ ಬೆತ್ತಲೆ " ಎಂದು ಬರಿ ಆಡದೆ, ಮಾಡಿಯೂ ತೋರಿಸಿದ ಮಹಾಚೇತನ ನಮ್ಮ
ಕನ್ನಡ ಕಂಠೀರವ, ರಸಿಕರ ರಾಜ, ನಟಸಾರ್ವಭೌಮ, ಗಾನ ಗಂಧರ್ವ, ಕೆಂಟಕಿ ಕರ್ನಲ್, ಪದ್ಮಭೂಷಣ,
ಕರ್ನಾಟಕ ರತ್ನ ಡಾ||ರಾಜಕುಮಾರ.

ತಾಯಿಗೆ ಹೇಗೆ ಒಳ್ಳೆಯ ಮಗನಾಗಿರುವುದು, ಹೇಗೆ ಆದರ್ಶ ಪತಿಯಾಗಿ ಜೀವಿಸ ಬಹುದು, ಉತ್ತಮ
ಸಹೋದರನಾಗಿ ಹೇಗೆ ನಡೆದುಕೊಳ್ಳಬಹುದು ಎಂದು ಭಾವಪೂರ್ಣವಾಗಿ ಅಭಿನಯಿಸುತ್ತ, ನಾಯಕನಾಗಿ
ಇಡಬೇಕಾದ ಹೆಜ್ಜೆಗಳು, ನ್ಯಾಯ-ನೀತಿ-ಧರ್ಮಗಳ ಪಾಲಿನೆ, ಶ್ರಮಜೀವಿ-ರೈತ-ಕಾರ್ಮಿಕ ಹೀಗೆ ಹತ್ತು
ಹಲವು ಆದರ್ಶಗಳನ್ನು ತಮ್ಮ ಪಾತ್ರಗಳ ಮೂಲಕ ಪ್ರತಿಬಿಂಬಿಸುತ್ತ, ಕಾಳಿದಾಸ-ರಾಮ-ಮಯೂರ-ಪುಲಿಕೇಶಿ-ಕೃಷ್ಣದೇವರಾಯರನ್ನು ಸಾಕ್ಷಾತ್ ನಮ್ಮ ಕಣ್ಣ ಮುಂದೆ ಮೋಡಿ ಮಾಡಿ ನಿಲ್ಲಿಸಿ ಮಂತ್ರಮುಗ್ಧರನ್ನಾಗಿಸಿದ್ದ, ಕೈ
ಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವವನ್ನು ಪ್ರತಿಪಾದಿಸುತ್ತ, ಸರಳ ಸಜ್ಜನಿಕೆಯನ್ನು ನಿತ್ಯ
ಜೀವನದಲ್ಲಿ ಪಾಲಿಸುತ್ತ ಅನೇಕರಿಗೆ ಮಾರ್ಗದರ್ಶಿಯಾಗಿದ್ದವರು ನಮ್ಮ ಬಂಗಾರದ ಮನುಷ್ಯ.

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಿಗೆ ಮತ್ತು ಕನ್ನಡತನಕ್ಕೆ ಹಿರಿಮೆ, ಗೌರವ, ಮನ್ನಣೆ ಮತ್ತು
ಸದಭಿಪ್ರಾಯ ಮೂಡಿಸಿದವರು ರಾಜ್‌ಕುಮಾರ್. ಅನೇಕ ದಿಗ್ದರ್ಶಕರ, ಚಿತ್ರ ಸಾಹಿತಿಗಳ, ಸಂಗೀತ
ನಿರ್ದೇಶಕರ, ತಂತ್ರಜ್ಞರ ಪರಿಶ್ರಮ ನೈಪುಣ್ಯತೆಗಳು ರಾಜ್‌ಕುಮಾರರ ಅಭಿನಯ, ಸಂಗೀತ, ಹಾಡುಗಳ
ಮೂಲಕ ಅಸಂಖ್ಯಾತ ಅಭಿಮಾನಿ ಹೃದಯಗಳನ್ನು ಮುಟ್ಟಿ ಸಾರ್ಥಕವಾಗಿವೆ. ಅವರು ತಮ್ಮ
ಕಲಾಸೇವೆಯಿಂದ ನಮ್ಮೆಲ್ಲರ ಬದುಕನ್ನು ಸುಂದರಗೊಳಿಸಿದ ಸಾಕಾರಮೂರ್ತಿ.

ರಾಜ್‌ಕುಮಾರ್ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ ಅದು ಇಡಿ ಕರ್ನಾಟಕದ ಶಕ್ತಿಯಾಗಿತ್ತು. ಅಜಾತ
ಶತ್ರುವಾಗಿದ್ದ ಅವರು ಕನ್ನಡ ಸಾರಸ್ವತ ಲೋಕದ ಹಾಗು ಇತರೇ ಯಾವುದೇ ಕ್ಷೇತ್ರದ ಗಣ್ಯರ ಪ್ರೀತಿ-
ಪಾತ್ರಗಳಿಗೆ ಒಳಗಾಗಿದ್ದರು. ಅವರ ಸೃಜನ ಶೀಲ ನಡತೆ, ಹೊಣೆಗಾರಿಕೆ, ತಿಳುವಳಿಕೆ, ವಿನಯ ಮತ್ತು ಸ್ನೇಹ
ಪರತೆ ಇತರ ಪ್ರಾಂತ್ಯಗಳ ಹೆಸರಾಂತ ಸಮಕಾಲೀನ ನಟರು, ಕಲಾವಿದರು, ಇತರ ಗಣ್ಯ ಹಾಗು ಉನ್ನತ
ವ್ಯಕ್ತಿಗಳು ಅವರನ್ನು ಮತ್ತು ಕನ್ನಡವನ್ನು ಗೌರವದಿಂದ ಕಾಣುವಂತೆ ಮಾಡಿತ್ತು.

ಸ್ವಂತ ಪರಿಶ್ರಮ, ನೇರ ನಡವಳಿಕೆ, ಶಿಸ್ತು, ಸಮಯ ಪಾಲನೆಗೆ ಪರ್ಯಾಯವಾಗಿದ್ದ ನಮ್ಮ
ರಾಜಕುಮಾರ, ಕೊನೆ ತನಕ ಕನ್ನಡಿಗನಾಗಿದ್ದು, ಯಾವುದೇ ಪದವಿ, ಅಧಿಕಾರದ ಆಮಿಷಗಳಿಗೆ ಒಳಗಾಗದೆ
ಕೇವಲ ಒಬ್ಬ ಕಲಾವಿದನಾಗೆ ಮುಂದುವರೆದು ನಾಡಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸ್ಪಂದಿಸಿ,
ಹಲವರನ್ನು ಹುರಿದುಂಬಿಸಿ, ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಿಜವಾದ ಮಣ್ಣಿನ ಮಗ.
ಅವರ ನೆನಪುಗಳು ಕನ್ನಡಿಗರೆಲ್ಲರ ತನು ಮನಗಳಲ್ಲಿ ಶಾಶ್ವತ, ಸೂರ್ಯ ಚಂದ್ರರಂತೆ ಅವರ ಕೀರ್ತಿ
ಅಜರಾಮರ. ಇಂತಹ ಇನ್ನೊಬ್ಬ ದೇವತಾ ಮನುಷ್ಯನನ್ನು ಸೃಷ್ಠಿಸಲು ಕನ್ನಡ ತಾಯಿ ರಾಜರಾಜೇಶ್ವರಿಗೂ
ಸಾಧ್ಯವಿಲ್ಲವೇನೋ!

ಸೂರ್ಯನ ಕಾಂತಿಗೆ ಸೂರ್ಯನೊಬ್ಬನೆ ಸಾಟಿ, ಅಲ್ಲವೇ?

ಇಂತಹ ಮಹನೀಯರಿಗೆ ಇನ್ನೂ ಸ್ಮಾರಕ ಮಾಡಲು ನಮ್ಮ ಸರ್ಕಾರ ಮೀನ-ಮೇಶ ಎಣಿಸುತ್ತಿರುವುದು ನಾಚಿಕೆಗೇಡಿನ ವಿಷಯ

P K Bhat ಅಂತಾರೆ...

nannadoMdu salahe,

namagelaarigu gottiro haage Karnaatakada rajakeeya vyaktigaLige Kannda athava Kannadakkaagi yenadaru maaDabEkeMba prgne chUro illa. avaru haage iddiddare naavu Kannadakkaagi ishtu pratibaTane, hooraatagaLannu maaDuva avashyakathe iralilla.

RajaNNana abhimaanigaLella sEri yaake kai jooDisa baaradu, naavE yaake smaaraka nirmisabaaradu, Kannadakkaagi tanna jeevanavannu muDipiiTTa namma RajjaNanige naavu sallisuva kaaNike yaaguttade.

iMti,
P Karthik Bhat

Anonymous ಅಂತಾರೆ...

ನಮಸ್ಕಾರ್ ಗುರುಗಳೇ..
ನಮ್ಮ ಕರ್ನಾಟಕಕ್ಕ್, ನಮ್ಮ ಕನ್ನಡ ಮಂದಿಗ್ ಒಂದ್ cultural identity ಕೊಟ್ಟು,, ನಾವ್ಯಾರಪಾ ಅಂದ್ರ ನಾವು ಕನ್ನಡದೋರು ಅಂತ ಗುರುತಸಕೊಳ್ಳು ಹಂಗ ಮಾಡಿದ ಮಹಾನುಭಾವರಲ್ಲಿ ನಮ್ಮ ಅಣ್ಣಾವ್ರು ಒಬ್ಬರ್ ರೀ... ತಮ್ಮ ಚಿತ್ರದೋಳಗ್ ತೋರಸಿದ ಮನುಷ್ಯತ್ವ, ಮಾನವೀಯತೆ, ಕನ್ನಡದ, ಕರ್ನಾಟಕದ ಭಾಷೆ, ಸಂಸ್ಕ್ರುತಿ ಗಳ್ ಹಿರಿಮೆ,, ಇವೆಲ್ಲಾ ಸೇರಿ ,,, ಅಣ್ಣಾವ್ರು,, ಕನ್ನಡಕೊಬ್ಬನ್ ರಾಜಕುಮಾರ್ ಅಂತ ಆಗಿದ್ದು.. ಅಂತಾದ್ರಾಗ್ ಇ ದರಿದ್ರ ಸರ್ಕಾರ ದ್ ಹಿಂತಾ ಹೊಲಸ್ attitude ಬಗ್ಗ್ ಏನ್ ಹೇಳೊಣ್ ರೀ.. ಆದಷ್ಟ ಲಗೂನ ಸರ್ಕಾರ್ ಅಣ್ಣಾವ್ರ ಸಮಾಧಿ ಚಲೊತಂಗ ಮಾಡು ಕೆಲ್ಸ ಮಾಡಿ ಮರ್ಯಾದಿ ಉಳಸ್ಕೊಳ್ಳಲಿ...

Anonymous ಅಂತಾರೆ...
This comment has been removed by a blog administrator.
ಬನವಾಸಿ ಬಳಗ ಅಂತಾರೆ...

ಅನಾನಿಮಸ್ ಅವರೆ,

ಎರಡು ರೂಪಾಯಿ ನಾಣ್ಯದ ಬಗ್ಗೆ ನಿಮ್ಮ ಕೊಂಡಿ ಇಲ್ಲಿ ಚರ್ಚೆಗೆ ಅಸಂಬದ್ಧ. ಆದ್ದರಿಂದ ಅನಿಸಿಕೆಯನ್ನು ತೆಗೆಯಲಾಗಿದೆ.

ಅನಿಸಿಕೆ ಬರೆಯುವವರು ವಿಷಯಕ್ಕೆ ಸಂಬಂಧವಿಲ್ಲದ್ದನು ಬರೆಯಬೇಡಿ ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ.

Anonymous ಅಂತಾರೆ...

ಕನ್ನಡಕ್ಕೆ ಇರೊರು ರಾಜ್ಕುಮಾರ್ ಒಬ್ಬರೇ ಏನು ಅನ್ನುವ ಮೊರ್ಖರಿಗೆ ಸರಿಯಾಗಿ ಹೇಳಿದಿರಿ ಕಲ್ಯಾಣ ರಾಮನ್ ಅವರೆ. ಬ್ಲಾಗ್ ಕೂಡ ಚೆನಾಗಿದೆ. ಸರ್ಕಾರದ ಕಣ್ಣು ಈಗಲಾದರು ತೆಗೆಯುತ್ತಾ ನೊಡ್ಬೇಕು.

Anonymous ಅಂತಾರೆ...

nice news i found this site is nice to kannada film industry http://www.tharegalu.com

Anonymous ಅಂತಾರೆ...

ನಮಸ್ಕಾರ ಗುರುಗಳೇ,

ಡಾ.ರಾಜ್ ಕುಮಾರ್ ರವರ ಸ್ಮಾರಕಕ್ಕೆ ಮಾಡಿದ ವಿಳಂಬ ಕನ್ನಡ ಮತ್ತು ಕನ್ನಡಗರಿಗೆ ವೆಸಗಿದ ದ್ರೋಹವೆಂದು ಅರ್ಥೈಸಬೇಕಾಗಿದೆ ಮತ್ತು ಕನ್ನಡಪರ ಕಾಳಜಿಯಿಲ್ಲದ ಈ ದರಿದ್ರ ಕಲಬೆರಕೆ ಸರ್ಕಾರಗಳಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಕಾಲಮಿತಿಯನ್ನೊಳಗೊಂಡಂತೆ ಮುಂದಿನ ಹೋರಾಟಗಳನ್ನು ರೂಪಿಸುವುದು ಅವಶ್ಯವಾಗಿದೆ.

ಶಾಂತಕುಮಾರ್ ಕಪ್ಪಗಲ್

Kannada ಅಂತಾರೆ...

ee vishayavaagi monne Karnataka Rakshana Vedike pratibhaTane maaDide.
namma rajannanige sarkaara sariyaada reetiyalli gourava torisuttila

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails