ಹಕಾರದ ಗೆರೆ
ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ನಿಯಮಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಉದಾಹರಣೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ನಿಯಮವನ್ನು ಗಮನಿಸಬಹುದು.
ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಪದ ಅಂಬು ಎಂದಾಗುತ್ತದೆ, ಹಾವು ಪದ ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಮತ್ತು ಹುಣಸೂರಿನ ಕನ್ನಡದಲ್ಲಿ ಬದಲಾಗದೆ ಉಳಿದಿವೆ ಎಂಬ ನಿಯಮ ಈ ವ್ಯತ್ಯಾಸದ ಹಿಂದೆ ಅಡಗಿದೆ.
ಹಕಾರ ಬಿದ್ದುಹೋಗುವ ಈ ಮಾರ್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್. ನಗರ ಮತ್ತು ಪಿರ್ಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಚ್ಚರಿಸುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿರುವುದನ್ನು ಕಾಣಬಹುದು.
ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ’ಹಕಾರದ ಗೆರೆ’ ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವಕ್ಕಾಗಿ ಹಾಯ್ದೇತು.
ಈ ಗೆರೆ ಮಯ್ಸೂರು ಜಿಲ್ಲೆಯನ್ನು ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಎರಡು ತುಂಡುಗಳಾಗಿ ಒಡೆಯುತ್ತಿದೆಯೆಂದು ತೋರುತ್ತದೆ. ಯಾಕೆಂದರೆ ಗುಲ್ಬರ್ಗ ಮತ್ತು ಶಾಬಾದ್ ಗಳ ನಡುವೆಯೂ ಇಂತಹದೇ ಹಕಾರ ಬಿದ್ದುಹೋಗುವ ಮತ್ತು ಹೋಗದಿರುವ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಆದರೆ ನಿಜಕ್ಕೂ ಈ ಎರಡು ತುದಿಗಳ ನಡುವಿನ ಜಿಲ್ಲೆಗಳನ್ನು ಈ ಹಕಾರದ ಗೆರೆ ಉದ್ದಕ್ಕೂ ಕತ್ತರಿಸುತ್ತಾ ಸಾಗುತ್ತದೆಯೇ ಎಂಬುದನ್ನು ತಿಳಿಯಲು ಮಂಡ್ಯ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲೆಲ್ಲ ಸುತ್ತಾಡಿ ಅಲ್ಲಿನ ಜನರ ಮಾತನ್ನು ಕೇಳಿನೋಡಬೇಕು. ಈ ಕೆಲಸವಿನ್ನೂ ನಡೆದಿಲ್ಲ.
ಕನ್ನಡದ ಆಡುನ್ನುಡಿಗಳನ್ನು ಕತ್ತರಿಸುವ ಹಾಗೆ ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಉದಾಹರಣೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಈ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜ್ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ.
ಈ ರೀತಿ ಒಂದೇ ಹಳ್ಳಿಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಆಡುಮಾತಿನಲ್ಲಿ ಕಾಣಿಸುವ ವ್ಯತ್ಯಾಸಗಳೂ ಬೇರೆ ಬೇರೆ ಊರುಗಳ ನಡುವೆ ಕಾಣಿಸುವ ವ್ಯತ್ಯಾಸಗಳಷ್ಟೇ ನಿಯಮಬದ್ದವಾಗಿವೆ. ಇದಕ್ಕೆ ಇನ್ನೊಂದು ಉದಾಹರಣೆಯಾಗಿ ನಂಜನಗೂಡಿನ ಒಕ್ಕಲಿಗರ ಮತ್ತು ಆದಿಕರ್ನಾಟಕರ ಮಾತುಗಳನ್ನು ಹೋಲಿಸಿ ನೋಡಬಹುದು. ಒಕ್ಕಲಿಗರು ಮನೆ ಎನ್ನುವುದಕ್ಕೆ ಆದಿಕರ್ನಾಟಕರು ಮನ ಎನ್ನುತ್ತಾರೆ. ಅಣೆ (ಹಣೆ)ಗೆ ಅಣ ಎನ್ನುತ್ತಾರೆ, ತಲೆಗೆ ತಲ ಎನ್ನುತ್ತಾರೆ, ಅತ್ತೆಗೆ ಅತ್ತ ಎನ್ನುತ್ತಾರೆ. ಹೆಸರುಗಳ ಕೊನೆಯಲ್ಲಿ ಬರುವ ಎಕಾರಗಳೆಲ್ಲ ಆದಿಕರ್ನಾಟಕರ ಮಾತಿನಲ್ಲಿ ಅಕಾರವಾಗಿ ಬದಲಾಗಿವೆ ಎಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.
ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳಿಗೆ ಈ ರೀತಿ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು. ಯಾಕೆಂದರೆ ಎರಡೂ ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ನಿಯಮಗಳೇ ಕಾಣಿಸುತ್ತವೆ.
ಉದಾಹರಣೆಗಾಗಿ ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ನಿಯಮ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ನಿಯಮದ ಹಾಗೆಯೇ ಇದೆ.
ಅಂದಹಾಗೆ ಬಟ್ಟರು ತಮ್ಮನ್ನು ತಾವು "ಭಟ್ಟರು" ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ, ಏಕೆಂದರೆ ಬೇರೆಲ್ಲ ಕನ್ನಡಿಗರಂತೆ ಅವರ ನಾಲಿಗೆಯಲ್ಲೂ ಮಹಾಪ್ರಾಣ ಹೊರಳುವುದಿಲ್ಲ. ಹಾಗೆಯೇ ಮೇಲಿನ ಬರಹವನ್ನೂ ಅವರು ತಮ್ಮ "ಹೊಸ" ಬರಹದಲ್ಲಿ ಬರೆದಿದ್ದಾರೆ (ಮಹಾಪ್ರಾಣಗಳಿಲ್ಲ, "ಷ" ಬದಲು "ಶ", ಐ ಬದಲು ಅಯ್, ಔ ಬದಲು ಅವ್, ಹೀಗೆ). ಯೂನಿಕೋಡಿಗೆ ಬಟ್ಟರ ಹೊಸ ಬರಹ ಅಷ್ಟು ಚೆನ್ನಾಗಿ ಬಾರದ ಕಾರಣ ನಾವು ಅದನ್ನು ಬರೆಯುವಾಗ ಅಲ್ಲ್ಲಲ್ಲಿ ತಪ್ಪುಗಳಾಗಿವೆ.
12 ಅನಿಸಿಕೆಗಳು:
ನನ್ನಿ
ಯೂನಿಕೋಡಲ್ಲಿ ಅರೆಕವೊತ್ತು ಇಲ್ಲದೇ ಬರೆಯಕ್ಕೆ ಆಗಲ್ಲ..
ಆದರೆ ಮಾಪ್ರಾಣ , ಷ, ಋಗಳನ್ನು ಬಿಟ್ಟು ಬರೆಯಬೋದು.!
ಯುನಿಕೋಡ್ ಮಂದಿ ಈ ಅರೆಕವೊತ್ತು ಇಲ್ಲದೇ ಬರೆಯಕ್ಕೆ ಸವಲತ್ತು ಕೊಡಲಿ.
ನಮ್ಮ ಹೆಸರುಗಳು ರಮೇಶ್, ಗಿರೀಶ್, ಮಹೇಶ್ ಇವುಗಳು ಕನ್ನಡವೋ ಇಲ್ಲವೇ ರಮೇಶ ಎ೦ದು ಕರೆದುಕೊಳ್ಳಬೇಕೊ? ಹೇಗೆ ತಮಿಳರು ಸೇಖರನ್, ಸರ್ ವನ್ ಎ೦ದು ಕರೆದುಕೊಳ್ಳುತ್ತಾರೋ ಹಾಗೆಯೇ ನಮ್ಮತನವನ್ನು ತೋರಿಸಲು ನಮ್ಮ ಹೆಸರನ್ನೂ ನಾವು ಸರಿಪಡಿಸಬೇಕೋ ನಾ ತಿಳಿಯೆ!
ಅನಾನಿಮಸ್ ಅವರೆ,
ರಮೇಶ್ ಆಗಲಿ ರಮೇಶ ಆಗಲಿ, ಕನ್ನಡದ ಮೂಲದ್ದಲ್ಲ. ಸಂಸ್ಕೃತದ ಮೂಲದ್ದು. ಕನ್ನಡಿಗರು (ಅದರಲ್ಲೂ ಹೆಚ್ಚಾಗಿ ಪೇಟೆಗಳ ಕನ್ನಡಿಗರು) ತಮ್ಮ ಮಕ್ಕಳಿಗೆ ಹೆಸರಿಡುವಾಗ ಸಂಸ್ಕೃತ ಮೂಲದ ಪದಗಳಿಗೇ ಮೊರೆಹೋಗುತ್ತಾರೆ ಎನ್ನುವುದು ಎಲ್ಲರಿಗೂ ಕಾಣಸಿಗುವಂಥದ್ದು.
ಆದರೆ ಹಿಂದೆಯೂ ಹೀಗಿರಲಿಲ್ಲ, ಈಗಲೂ ಹಳ್ಳಿಗಳ ಕಡೆ ಹೀಗಿಲ್ಲ. ಕನ್ನಡಿಗರಿಗೆ ಕನ್ನಡದ್ದೇ ಆದ ಹೆಸರುಗಳನ್ನು ಇಡುವುದೇ ಕೀಳು ಎಂಬ ಮನೋಭಾವ ಬಂದುಬಿಟ್ಟಿದೆ ಎನ್ನುವುದು ಕಟು ಸತ್ಯ.
ಕಮಲ ಎಂದು ಹೆಸರಿಡುತ್ತಾರೆಯೇ ಹೊರತು ತಾವರೆ ಎಂದಲ್ಲ. ಬಿಂದು ಎಂದು ಇಡುತ್ತಾರೆಯೇ ಹೊರತು ಚುಕ್ಕಿ ಎಂದಲ್ಲ. ಆಕಾಶ್ ಎಂದು ಇದುತ್ತಾರೆಯೇ ಹೊರತು ಬಾನು ಎಂದಲ್ಲ.
ಸಂಸ್ಕೃತದಲ್ಲಿ ನಪುಂಸಕಲಿಂಗ ಹೆಚ್ಚಾಗಿ ಬಳಸಲಾಗುವುದಿಲ್ಲವಾದ ಕಾರಣ ಜಡವಸ್ತುಗಳಿಗೂ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗವನ್ನು ಆರೋಪಿಸಿರುತ್ತಾರೆ. ಆದ್ದರಿಂದ ಅದರಲ್ಲಿ ಬಹಳ ಹೆಸರುಗಳು ಇವೆ ಎನಿಸುತ್ತದೆ. ಆದರೆ ಕನ್ನಡದಲ್ಲಿ ಜಡವಸ್ತುಗಳಿಗೆ ನಪುಂಸಕಲಿಂಗವೊಂದೇ ಇರುವುದರಿಂದ ಅವುಗಳ ಹೆಸರನ್ನು ಮನುಷ್ಯರಿಗೆ ಇಡಲು ಕನ್ನಡಿಗರಿಗೆ ಮುಜುಗರ.
ಆದರೆ ಆ ಜಡವಸ್ತುಗಳನ್ನು ಉಳ್ಳವನು, ಬಲ್ಲವಳು, ಹಿಡಿದವನು, ಹಿದಿದವಳು ಮುಂತಾಗೆಲ್ಲ ನಮ್ಮಲ್ಲಿ ಹೆಸರುಗಳಿವೆ. ಆ ಹೆಸರುಗಳನ್ನು ಇಡಲು ಕನ್ನಡಿಗರು ಹಿಂಜರಿಯುತ್ತಾರೆ.
ಮತ್ತೊಂದೇನೆಂದರೆ ಇವತ್ತು ಸಂಸ್ಕೃತದ ಹೆಸರುಗಳು ಎಷ್ಟು ಪ್ರಚಲಿತವಾಗಿವೆ ಎಂದರೆ ಜನರಿಗೆ ಯಾವುದು ಸಂಸ್ಕೃತ, ಯಾವುದು ಕನ್ನಡ ಎನ್ನುವುದೇ ನೆನಪಿಲ್ಲ. ಇದರಲ್ಲಿ ತೊಂದರೆಯೇನಿಲ್ಲ. ಹೆಸರುಗಳನ್ನು ಸಂಸ್ಕೃತದಿಂದಲೇ ಇಟ್ಟರೆ ತಪ್ಪೇನಿಲ್ಲ.
ತಪ್ಪೇನು ಗೊತ್ತಾ? ಕನ್ನಡದ ಹೆಸರುಗಳನ್ನು ಇಟ್ಟುಕೊಂಡವರನ್ನು ಕೀಳು ಎಂದು ನೋಡುವುದು ತಪ್ಪು, ಅಷ್ಟೆ.
ಮನೀಷ್ ಅಥವಾ ಮನೀಷ avare,
avru keLidde bEre neevu hELiddE bEre...
enguru,
ಹಕ್ಕಿ ಅಕ್ಕಿ erdu onde aadre avugaLa artha vytyasa tiliyodu hege ... ee sandharbhadalli aaduva maatinallu artha gottu maadkobodu aadre kelavondu sala idu kashta aagutte ... anthadralli ಹಕ್ಕಿ ಅಕ್ಕಿ erdu uchhara sari anta hEge heLbodu ... ondu bhashe anda mele adarade aada neeti nibhaMdanegaLu irolve ?
Anonymous,
ನಿಮ್ಮ ಅನಿಸಿಕೆಗಾಗಿ ನನ್ನಿ.
ಹಕ್ಕಿಗೂ ಅಕ್ಕಿಗೂ ವ್ಯತ್ಯಾಸ ತಿಳಿಯೋದು ಹೇಗೆ ಎನ್ನುವ ನಿಮ್ಮ ಪ್ರಶ್ನೆ ಸರಿಯಾಗೇ ಇದೆ. ಈ ಪ್ರಶ್ನೆಗೆ ಉತ್ತರ: ಸಂದರ್ಭದಿಂದ ತಿಳಿಯುವುದು. ಬೇಯಿಸಿದಾಗ ಅನ್ನವಾಗುವ ಅಕ್ಕಿಗೂ ಹಾರುವ ಅಕ್ಕಿಗೂ ವ್ಯತ್ಯಾಸವನ್ನು ಮನುಷ್ಯ ಬಹಳ ಸುಲಭವಾಗಿ ತಿಳಿದುಕೊಳ್ಳುತ್ತಾನೆ ಎಂದು ಗಮನಿಸಿ.
ಇದು ಕನ್ನಡಕ್ಕಾಗಿ ಒಂದು ಹೊಸ ನಿಯಮವೇನಲ್ಲ, ಇಲ್ಲವೇ ಕನ್ನಡಿಗರಿಗೆ ಮಾತ್ರ ಇರುವ ಒಂದು ಶಕ್ತಿಯಲ್ಲ. ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಕೆಲವು ಪದಗಳ ಅರ್ಥ ಸಂದರ್ಭದಿಂದಲೇ ಸಾಧಿಸಲಾಗುವುದನ್ನು ಕಾಣಬಹುದು.
ಇಂಗ್ಲೀಷಿನಲ್ಲೂ ಈ ರೀತಿ ಒಂದೇ ಪದಕ್ಕೆ ಎರಡು ಇಲ್ಲವೇ ಹೆಚ್ಚು ಅರ್ಥಗಳಿರುವುದನ್ನು ನೀವು ಕಂಡೇ ಇರುತ್ತೀರಿ. ಯಾವುದೇ ಇಂಗ್ಲೀಷ್ ನಿಘಂಟು ತೆಗೆದು ನೋಡಿದರೂ ನಿಮಗೆ ಇದು ಕಾಣಿಸಿಯೇ ಕಾಣಿಸುತ್ತದೆ.
Spring ಎನ್ನುವುದು ಒಂದು ಸುರುಳಿಯೂ (coil) ಆಗಬಹುದು, ಒಂದು ಋತುವೂ (spring season) ಆಗಬಹುದು, ಜಿಗಿತ (jump) ಎಂಬ ಒಂದು ಕ್ರಿಯಾಪದವೂ ಅಗಬಹುದು. ಒಂದು ಹಾಸಿಗೆಯ ಒಳಗೇನಿದೆ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾಗ ಯಾರೂ ಜಿಗಿತ ಇಲ್ಲವೇ ವಸಂತಕಾಲವನ್ನು ನೆನಪಿಸಿಕಳ್ಳುವುದಿಲ್ಲ.
August ಎನ್ನುವುದು ಒಂದು ವಿಶೇಷಣವೂ ಆಗಬಹುದು (August surroundings), ಒಂದು ತಿಂಗಳೂ ಆಗಬಹುದು. ಆಗಸ್ಟ್ ತಿಂಗಳ ಬಗ್ಗೆ ಮಾತನಾಡುತ್ತಿದ್ದಾಗ ಆ ಪದ ಒಂದು ವಿಶೇಷಣ ಎಂದು ಯಾರೂ ತಿಳಿದುಕೊಳ್ಳುವುದಿಲ್ಲ.
ಸಂಸ್ಕೃತದಲ್ಲೂ ಹೀಗೇ ಪದಗಳಿಗೆ ಬೇರೆ ಬೇರೆ ಅರ್ಥಗಳು ಇರುವುದನ್ನು ಕಾಣಬಹುದು. ಆತ್ಮ ಎಂಬ ಪದಕ್ಕೆ ಕಡಿಮೆ ಎಂದರೆ ೧೦ ಅರ್ಥಗಳಿವೆ.
ಇನ್ನು "ಒಂದು ಭಾಷೆ ಅಂದ ಮೇಲೆ ಅದರದೇ ಆದ ನೀತಿ ನಿಬಂಧನೆಗಳು ಇರೋಲ್ವೆ?" ಎಂದು ನೀವು ಕೇಳಿರುವುದೂ ಸಾಧುವೇ. ಹೌದು, ಇರಬೇಕು. ಕನ್ನಡಕ್ಕೂ ಆ ನೀತಿ ನಿಬಂಧನೆಗಳು ಇವೆ. ಆ ನೀತಿ-ನಿಬಂಧನೆಗಳಲ್ಲಿ ಒಂದೇನಪ್ಪಾ ಅಂದರೆ - ಹೀಗೆ ಪದಗಳ ಮೊದಲ ಹಕಾರ ಕೆಲವು ಕನ್ನಡಿಗರ ಬಾಯಲ್ಲಿ ಬಿದ್ದು ಹೋಗುವುದು ಎನ್ನುವುದು. ಇದೇ ನಿಯಮ. ಇದೇ ನಿಬಂಧನೆ.
ಪದಗಳ ಮೊದಲಿನ ಹಕಾರ ಕೆಲವು ಜಾಗಗಳಲ್ಲಿ ಮತ್ತು ಜಾತಿಗಳಲ್ಲಿ ಬಿದ್ದು ಹೋಗುವುದು, ಮಿಕ್ಕೆಡೆ ಬಿದ್ದು ಹೋಗದಿರುವುದು ಎಂಬ ನೀತಿ ಇಲ್ಲವೇ ನಿಬಂಧನೆ ಯಾವ ಭಾಷೆಗೆ ಇದೆಯೋ ಅದೇ ಕನ್ನಡ. ಮತ್ತೊಂದಲ್ಲ.
ಹೀಗೇ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾ ಇರಿ. ನನ್ನಿ.
Checkout the following wiki link:
http://en.wikipedia.org/wiki/Sound_change
The ha-a debate here is called "Sound change" in linguistics, and is understood in quite a bit of detail by Linguists.
Sound change happens everywhere, in every language. It's only here in India that people (including so-called linguists!) come to arrogant and often racist conclusions about societal status based on pronunciation. This is a disease of the Indian mind.
dhyanyavadagaLU enguru avre ....
houdu hechhu kammi naanu adE swabhavadavanu ... sariyada ucchara maadadavanu bhashe sariyagi artha maadkondilla annOdE nanna abhiprayavagittu ....
sumne tamashege ondu udAharaNe kodta idini ...sittigElbEdi :)
gangavati beechi heLda haage ..' namma karnatakada heMgasaru haadara - haatithyakke esaru vaasi'
haagagi ella kade 'aa' mattu 'ha' kara ucchara badlagodu sari anslikkilla .....
namma gurugaLu hElta idru ' ennigagi ramayaNa, mannigagi mabarta' aMta ... naavella avra 'ha' 'aa' kara ucchara keli nagta iddevu ...
enO nanna abhiprayadalli ella kade alpapraNa mahaPrana bidodu sariyaglikkilla ....
alde enguru taavu heLida udaharaNegaLEnO sariyaGe ive aadre avu onde uchhara bere bere artha kodo udaharaNegaLu ...
'read' and 'read' might be correct one here .... alde ivella odbekadre sulabhavagi sandharbhochitavagi sariyada artha kalpskobodu aadre kelavondu sala kashta aagbodu ashte...
oLLe lekhana ... konE paksha ondu prejudice swalpanadru doora aaytu ;)
anyway
i am not able to distinguish between Kannada words and Sanskrit words. But few words I had studid still stays in mind. For Vidye its Bijje in Kannada. Rashtra=Nadu, Mandira=Gudi etc., So when I find people who use these words, I dont find it strange. Infact, Kannada words seems more appealing though its not in use these days.
ಕನ್ನಡ ಯಾವುದು ಸಂಸ್ಕ್ರುತ ಯಾವುದು ಎಂದು ಪತ್ತೆ ಮಾಡಕ್ಕೆ ಈ ಬರಹ ನೆರವಾಗಬಹುದು
ಏನ್ ಗುರು ಅವರ ಒಳ್ಳೆಯ ಬದಿಲಿಗೆ ನನ್ನಿ..!
"ಅಕ್ಕಿ ಆರಿವೋಯಿತು" ಎಂದಾಗ "ಅಕ್ಕಿಕಾಳು ತಣ್ಣಗಾಗಿ ಹೋಯಿತು" ಎಂಬ ತಿಳಿವು ಬರಲು ಆಗಲ್ಲ..
ಹಾಗೇ
"ಅಕ್ಕಿ ಎಕ್ಕಿ ಆಕಿ" ಎಂದಾಗ"ಅಕ್ಕಿ ಹೆಕ್ಕಿ ಹಾಕಿ" ಎಂದೇ ತಿಳಿವು ಹೊರತು "ಹಕ್ಕಿ ಹೆಕ್ಕಿ ಹಾಕಿ" ಎಂದಲ್ಲ..!!
ಒಂದು ಸಂಗತಿ ನೆನಪಲ್ಲಿ ಇಡಬೇಕು.. ಆಡುಮಾತು ಒಬ್ಬರಿಗೊಬ್ಬರಿಗೆ ತಿಳಿಯುತ್ತಿದೆ ಅಂದರೆ ಅದರ ಹಾಗೆ ಬರೆದರೂ ತಿಳಿಯಬೇಕು...
ನಾವು ಬರಹವನ್ನು ಬರೀ ಓದುತ್ತೀವಿ, ನಾವು ಬರಹವನ್ನು ಕೇಳಿಸಿಕೊಳ್ಳುವುದನ್ನು ಕಲಿಯಬೇಕು!!
ಏನ್ ಗುರುಗೆ ಮತ್ತೆ ನನ್ನಿ!
I am not able to distinguish between Kannada words and Sanskrit words. The preset day Kannada is so much mixture of Sanskrit, my colleauges say that Malayaalam & Kannada is just the mixture of words from Sanskrit and not exactly like Tamil, which is not untouched by Sanskrit. So stop boasting about Gannada. Why did we accept Sanskrit?? To become perfect Hindus, do we have to know Sanskrit. Can we not perform all rituals in Kannada. Is there a original Kannada existing without the influence of Sanskrit. Where can I get it.
ಇಲ್ಲೊಬ್ಬರು "ರಮೇಶ್, ಮಹೇಶ್" ಇದರ ಬಗ್ಗೆ ಮಾತೆತ್ತಿದ್ದಾರೆ.
ಸಂಸ್ಕ್ರುತವ್ಯಾಕರಣದ ಪ್ರಕಾರವೂ ರಮೇಶ್, ಮಹೇಶ್, ಕಿರಣ್, ದರ್ಶನ್, ರಾಮ್ ಮುಂತಾದವು ತಪ್ಪು.
ಸಂಸ್ಕ್ರುತದಲ್ಲೂ ಯಾವ ಅಕಾರಾಂತ ಪದಗಳನ್ನು ಹಲಾಂತಗೊಳಿಸುವ ಕ್ರಿಯೆಯಿಲ್ಲ. ರಾಮಃ ಎಂಬುದು ರಾಮ ಎಂದೇ ಸಂಬೋಧನೆಯಲ್ಲಿ, ರಾಂ ಎಂದಲ್ಲ.
ರಮೇಶ್, ಮಹೇಶ್, ಕಿರಣ್ ಇವೆಲ್ಲ ಹಿಂದಿಯ ವ್ಯಾಕರಣ.
ಇತ್ತೀಚೆಗೆ ಕನ್ನಡ ಹೆಂಗಸರ ಹೆಸರುಗಳಲ್ಲೂ ಹೀಗೆ ಹಲಾಂತಗಳು ಕಾಣಲಾರಂಭಿಸಿದೆ. ಕಿರಣ್, ಸುಮನ್, ಮೃದಲ್, ಕಾಜಲ್ ಹೀಗೆ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!