ಸರ್ ಎಂ.ವಿ ಎನ್ನುವ ಕನ್ನಡಿಗರ ಹೆಮ್ಮೆಯ ಭಾರತ ರತ್ನದ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವ್ರು ಅಂತ. ಈ ಮಹಾನುಭಾವ ತನ್ನ ಅದ್ಭುತ ದೂರದೃಷ್ಟಿಯಿಂದ ಕನ್ನಡ ನಾಡಿನ ಸರ್ವತೋಮುಖ ಏಳಿಗೆಗೆ ಅಡಿಪಾಯ ಹಾಕಿದವರು. ಅಣೆಕಟ್ಟೆಯ ಬಾಗಿಲಿನ ವಿನ್ಯಾಸಕ್ಕೆ ಹಕ್ಕುಸಾಮ್ಯ (ಪೇಟೆಂಟ್) ಹೊಂದಿದ್ದ ಇವರು ಕೆಆರ್ಎಸ್ ಅಣೆಕಟ್ಟೆ ಕಟ್ಟಿದ್ದಲ್ಲದೆ ಅನೇಕ ಉದ್ದಿಮೆಗಳನ್ನು, ವಿಶ್ವವಿದ್ಯಾಲಯಗಳನ್ನು, ಸಾಹಿತ್ಯ ಪರಿಷತ್ ಅನ್ನು ಕಟ್ಟಲು ಕಾರಣರಾದರು. ಇದಷ್ಟೇ ಅಲ್ಲದೆ ಭಾರತದ ಅನೇಕ ಅಣೆಕಟ್ಟುಗಳ ನಿರ್ಮಾಣದಲ್ಲಿ ಇವರ ಕೊಡುಗೆ ಇದೆ. ತಿರುಪತಿ ತಿರುಮಲ ರಸ್ತೆ, ಆಂಧ್ರದ ಹೈದರಾಬಾದ್ ನಗರದ ನೆರೆತಡೆ ವ್ಯವಸ್ಥೆ, ಪುಣೆಯ ಬಳಿ ಜಲಾಶಯ... ಹೀಗೆ ಇಡೀ ಭಾರತದ ಏಳಿಗೆಗಾಗಿ ದುಡಿದವರು ಈ ಸಾಧಕ. ಇವ್ರುನ್ನ ಬರೀ ಕನ್ನಡಿಗರಲ್ಲ, ಇಡೀ ಭಾರತವೇ ನೆನೆಸಿಕೊಳ್ಳೋ ಅಂಥಾ ಸಾಧನೆ ಇವರದ್ದು. ಅದನ್ನು ಗುರುತಿಸಿ ಗೌರವಿಸಲೆಂದೇ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು 1955ರಲ್ಲಿ ನೀಡಲಾಯಿತು ಅನ್ನೋದೇನೋ ಸರಿ. ಆದರೆ ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲೇ ಇವರ ಹೆಸರನ್ನು ಹ್ಯಾಗೆ ಬರೆದಿದಾರೆ ಅಂತ ನೋಡುದ್ರೆ ಅದೆಷ್ಟು ಅಸಡ್ಡೆ ಕನ್ನಡಿಗರನ್ನು ಕಂಡ್ರೆ ಅಂತ ತಿಳ್ಯುತ್ತೆ ಗುರು! ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ, ಭಾರತರತ್ನಗಳ ಪಟ್ಟಿಯಲ್ಲೇ ಇವರ ಹೆಸರು ಡಾ. ಎಂ. ವಿವೇಸ್ವರಾಯ ಅಂತ ಇದೆ. ಭಾರತ ಸರ್ಕಾರದೋರು ನಾಡಿನ ಹೆಮ್ಮೆಯ ವ್ಯಕ್ತಿಗಳ ಹೆಸರನ್ನೇ ತಪ್ಪು ತಪ್ಪಾಗಿ ಬರೀತಾರೆ ಅಂದ ಮೇಲೆ ಇನ್ನು ಮತದಾರರ ಪಟ್ಟೀಲಿ ನಮ್ಮ ನಿಮ್ಮ ಹೆಸರು ತಪ್ಪಾಗೋದ್ರಲ್ಲಿ ಯಾವ ಅಚ್ಚರಿಯೂ ಇಲ್ಲ ಗುರು!
14 ಅನಿಸಿಕೆಗಳು:
ಒಂದು ಸರತಿ VTU ನೋಡಿರಿ
http://www.vtu.ac.in/
ಮೂರು ಸರತಿ ಹೆಸರು ತಿದ್ದಿದ್ದಿದ್ದಾರೆ.
VTU ಸೈಟ್ ನಲ್ಲಿ ಯಾರೋ ಕೊಂಗ ಬರಿದಿರೋದು .
ಅವರ ಭಾಷೆಯೇಲ್ಲಿ "ಶ" ಇಲ್ಲ .ಎಲ್ಲ ಕಡೆ "ಸ " ಉಪಯೋಗ ಮಾಡ್ತಾರೆ .ಇವ್ರಿಗೆ ಏನ್ ಬಂದಿದೆ ಅದನ್ನ ಸರಿ ಮಾಡೋಕೆ.ಇವ್ರಿಗೆ ಹೇಳಿ ಇದನ್ನ ಸೇರಿ ಮಾಡ್ಸ್ ಬೇಕು
-ಪ್ರಶಾಂತ್
naachikegedu.. central govt bidi.. VTU nalli "visves" anta ide.
"Vishvesh" alve? "sha"karakke "sa"kaara koduva ee kaatpaadigaLa kaata tumba ide. Yeshwantpur railway station eega Ye"s"wantpur agide.
Raamanagara hogi Ramnagaram agide..
kalaasipaalya hogi Kalaasipaalyam agide. kannadadavru idanna nodkondu aaramagi irtare.. yake andre all educated kannadigas think that it is below their dignity to raise a voice for kannada when such atrocities happen, unlike any other state's people. If organisations like KRV protest, they are also looked down upon by our great learned brainy people...namma ee paristhitige kannadigare kaaraNa .. alve?
illi feed-back bareyoNa... sari maadi antha
http://india.gov.in/feedback_next.php
ಇಂಥ ವಿಷಯಗಳು ಎಲ್ಲೋ ಸುದ್ದಿಯಾಗೊದೆ ಇಲ್ಲ ನೋಡಿ..
ಥ್ಪೂ.. ಯೂರ್ ಜನ್ಮಕ್ಕಷ್ಟು ...
ಕರ್ನಾಟಕದಲ್ಲಿ ಕನ್ನಡದ ತಂತ್ರಾಂಶವೇ ಸರಿಯಾಗಿ ಇಲ್ಲದೆ ಇರುವಾಗ.... ಇಂಥ ತಪ್ಪುಗಳು ಆಗುವುದು ಸಹಜವೇ ಸರಿ, ಇಂತಹ ತಪ್ಪುಗಳು ಮತ್ತೆ ಆಗದಿರಲು ನಾಲ್ಲರು ಸರ್ಕಾರದ ಮೇಲೆ ಕನ್ನಡದ ಹೇರಿಕೆಯನ್ನು ಹೇರಬೇಕು......
ಪರಭಾಷಿಕರು ನಮ್ಮ ಜಾಗಗಳನ್ನು ಹೇಗೆ ಕರಿತಾರೆ ನೋಡಿ. ನಾವೂ ಅದೇ ತರ ಕರಿಯಕ್ಕೆ ಶುರು ಮಾಡಿದ್ದೇವೆ.
ಜಯ್ ನಗರ್, ವಿಜಯ್ ನಗರ್, ಬೆಸ್ ವ೦ತ್ ಪುರ್ (ಇದು ಯಾವ ಜಾಗ ಅನ್ಕೊ೦ಡ್ರಾ - ಇದು ಯಶವ೦ತಪುರ), ಹೆಬ್ಬಾಲ್, ಮರತ್ ಹಲ್ಲಿ..
Dr. M. Vivesvaraya - ನೋಡಿದೋರು ಯಾರಿದು ಅ೦ತ ಆಶ್ಚರ್ಯಪಡಬೇಕು.
ayyo not only calling the names of the cities wrongly they have claimed few of the places like hosur and kasargodu which were once part of karnataka. we have to spread the message to fellow kannadigas like a wild fire. opposition and implementation should be quicker just like tamil nadu govt making central govt shiver and making them talk with srilanka. all is needed is a revolution
VTU hagu Bharatha Rathna Padedhavara sallinalli namma Sir. M.V. avara hesaru tappagi barediruvudu nodi tumba khedhaniya anisuthu. Nachike kedu ivarana Janmake.... Saarthakavayithu bidi avaru ee deshadhalli janma thalidhake....
Jai Karnataka
iga tappannu sari madiddare
http://india.gov.in/myindia/bharatratna_awards_list1.php
ido noDi.... ega SirMV avara hesaru hege ide antha:
http://india.gov.in/myindia/bharatratna_awards_list1.php
idu feed-back nindaada kelsa antha nanaganistha ide .. :)
Some one in this blog was mentioning that most articles are filled up with emotional than logic and fact. Mokshagundam is Sir MV's mother's place. M stands for Muddenahalli. There was no change in this practice even inspite Sir MV clarified this. Balaga' people do not know this. And trying to point others mistakes. I am doubtful about publishing this comment too.
Ananymousರವರೇ,
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅಂತಾ ಇರೋದಕ್ಕೆ ಈ ಲಿಂಕು ನೋಡಿಕೊಳ್ಳಿ:
http://en.wikipedia.org/wiki/Mokshagundam_Vishweshwaraiah
ಸುಮ್ಮನೆ ಬಯ್ಯಬೇಕು ಅಂತಾ ಬಯ್ಯೋಕೆ ಹೋಗಬೇಡಿ!
ಗುರು
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!