ಕರ್ನಾಟಕದಲ್ಲಿ ಕನ್ನಡಕ್ಕೆ "ಮಾರುಕಟ್ಟೆ ಇಲ್ಲ", "ಕನ್ನಡದ ಹಾಡುಗಳಿಗೆ ಹಕ್ಕುಗಳನ್ನು ಪಡೆಯುವುದು ಬಹಳ ಕಷ್ಟ"...ಅಂತೆಲ್ಲ ಅಂದುಕೊಂಡು ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದ ಬೆಂಗಳೂರಿನ ಎಫ್.ಎಂ. ವಾಹಿನಿಗಳಲ್ಲಿ ಮಿರ್ಚಿಯೂ ಒಂದು.
powered by ODEO
ನಿಮಗೆ ನೆನಪಿರಬಹುದು, ೨೦೦೬ ರ ಏಪ್ರಿಲ್ ನಲ್ಲಿ ೯೩.೩ ಕಂಪನಾಂಕದಲ್ಲಿ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ವಾಹಿನಿಯನ್ನು ಆರಂಭಿಸಿದಾಗ ಕೇಳುಗರನ್ನು ತನ್ನತ್ತ ಸೆಳೆಯಲು ಬಳಸಿಕೊಂಡದ್ದು ನಾಗಾಭರಣ, ಕವಿತ ಲಂಕೇಶ್, ಗಿರೀಶ್ ಕಾಸರವವಳ್ಳಿ, ಜಗ್ಗೇಶ್ ಮುಂತಾದ ಕನ್ನಡ ಮನರಂಜನೆ-ಲೋಕದ ದೊಡ್ಡದೊಡ್ಡ ಹೆಸರುಗಳನ್ನೇ. ಆದರೆ ಬರಬರುತ್ತ ಅದೇನು ತಲೆ ತಿರುಗಿತೋ ಕಾಣೆ...ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಾಲ್ಕು ಜನ ವಲಸಿಗರನ್ನು ಕಂಡು ಅಂಥವರೇ ಇಡೀ ಬೆಂಗಳೂರಿನಲ್ಲೆಲ್ಲ ಇರುವ ಜನ ಅಂತ ತಮಗೆ ತಾವೇ ಅಂದುಕೊಂಡು ಹಿಂದಿಯ ಹುಚ್ಚು ಹಿಡಿಸಿಕೋತು. ಹಿಂದಿ ಹಾಡು, ಹಿಂದಿ ಜಾಹೀರಾತು...ಹೀಗೆ. ಜನ ಕೇಳಲಿ ಬಿಡಲಿ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಬೆಂಗಳೂರಿನ ನಂಬರ್ ೧ ವಾಹಿನಿ ಎಂದು ಕೊಚ್ಚಿಕೊಂಡಿದ್ದೇನು! ಅಬ್ಬಬ್ಬಬ್ಬಬ್ಬ! ಎಷ್ಟು ಸರಿ ಸುಳ್ಳು ಹೇಳಿದರೂ ಕೇಳುಗರನ್ನು ಸಕ್ಕತ್ತಾಗಿ ಕಳೆದುಕೊಂಡಿದ್ದು ಸುಳ್ಳಾಗಲ್ಲವಲ್ಲ? ಕನ್ನಡ ಹಾಡು ಕಡಿಮೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ನೆಲೆ ಕಳೇದುಕೊಳ್ಳುವ ಸ್ಥಿತಿ ಬಂದಿತ್ತು ಮಿರ್ಚಿಗೆ.
೨೪ ಘಂಟೆಗಳ ಏಕೈಕ ಕನ್ನಡ ವಾಹಿನಿ ಎಂದು ಒಳ್ಳೇ ಹೆಸರು ಮಾಡಿದ್ದ ಎಸ್ ಎಫ್. ಎಂ. ೯೩.೫ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸಮಯದಲ್ಲಿ ತನ್ನ ಒಲವು ಎಲ್ಲಿಗೆ ಎನ್ನುವುದನ್ನು ತೋರಿಸುತ್ತ ಕನ್ನಡವನ್ನು ಕಡಿಮೆ ಮಾಡಿದೆ ಬೇರೆ! ಹೀಗಾಗಿ ಒಂದು ಕಡೆ ಕನ್ನಡ ಹಾಡುಗಳಿಗಾಗಿ ಹಾತೊರೆಯುತ್ತಿರುವ ಬೆಂಗಳೂರಿನ ಜನತೆ, ಮತ್ತೊಂದು ಕಡೆ ಕನ್ನಡ ಪ್ರಸಾರವನ್ನು ಕಡಿಮೆ ಮಾಡಿದ್ದ ಎಸ್ ಎಫ್. ಎಂ., ಮಗದೊಂದು ಕಡೆ ಬೆಂಗಳೂರಿನ ಕೇಳುಗರನ್ನು ಕಳೆದುಕೊಂಡು ಸಾಯುತ್ತಿರುವ ಮಿರ್ಚಿ. ವ್ಯಾಪಾರಿಗೆ ಇಲ್ಲಿ ಒಳ್ಳೇ ಅವಕಾಶ ಕಾಣದೆಯೇನಿಲ್ಲ, ಮಿರ್ಚಿ ಗಬಕ್ಕನೆ ಅವಕಾಶ ಹಿಡೀತು! ಸ್ವಲ್ಪ ತಲೆ ಉಪಯೋಗಿಸಿ, ಮೀನ-ಮೇಷ ಏಣಿಸದೆ ಕಳೆದ ವಾರದಿಂದ ಮಿರ್ಚಿ ಇನ್ಮೇಲೆ "ಓನ್ಲಿ ಕನ್ನಡ", "ಶೇಕಡ ೧೦ ಅಲ್ಲ, ೫೦ ಅಲ್ಲ, ೭೫ ಅಲ್ಲ ೧೦೦ ಕ್ಕೆ ೧೦೦ ಕನ್ನಡ" ಎಂದು ಡೋಲು ಹೊಡಿತಿದೆ!
ಇದು ಮಿರ್ಚಿಯ ಭವಿಷ್ಯಕ್ಕೆ ಒಳ್ಳೇ ಹೆಜ್ಜೇನೇ. ಬೆಂಗಳೂರಿನ ಇತರ ವಾಹಿನಿಗಳಿಗೂ ಇಷ್ಟು ತಲೆ ಬರಲಿ ಅಂತ ಹರಸಬೇಕು!
6 ಅನಿಸಿಕೆಗಳು:
ಇದು ಕನ್ನಡ ಮನರಂಜನೆ ಮಾರುಕಟ್ಟೆಯ ವಿಸ್ತಾರ ಎನು ಅಂತ ತೊರಿಸಿಕೊಟ್ಟಿದೆ.
ide reeti ella FM Radio gaLu tamma dhorane badalisi kannada kaaryakrama bittarisuvantaagali
innu munde radio mirchi tanna hesarannu 'sakkat hot magaa' dinda 'tumba khaara guroo' anta badlayiskondre olledu :-)
ಇದು ಸಂತೋಷದ ವಿಚಾರವಾದರೂ ಹೀಗೆ ಎಷ್ಟುದಿನ ಇರುತ್ತೆ ಅಂತ ಹೇಳುವುದು ಕಷ್ಟ ಯಾಕಂದರೆ ರೇದಿಯೋ ಮಿರ್ಚಿ ಕೂಡ ಟೈಮ್ಸ ಆಫ್ ಇಂಡಿಯ ಪತ್ರಿಕೆಯ ಅಂಗ ಸಂಸ್ಥೆ, ನಮಗೆಲ್ಲರಿಗೂ ಗೊತ್ತೆ ಇದೆ ಟೈಮ್ಸ್ ನ ಪರ ಭಾಷಾ ಪ್ರೇಮ. ರೇದಿಯೊ ಮಿರ್ಚಿ ಮತ್ತು ಎಸ್ ಫ್ ಫ್ ( ಸನ್ ಟಿವಿ ಭಳಗ)ಗಳನ್ನು ನಂಭಲು ಸಾಧ್ಯವೇ ಇಲ್ಲ.ನಮಗೆ ಕನ್ನಡಿಗರಿಂದಲೇ ಅಥವ ಕನ್ನಡ ಚಿತ್ರ ರಂಗದವರಿಂದ ಒಂದು ಹೊಸ ವಾಹಿನಿ ಆರಂಭವಾದರೆ ಸರಿಯಾಗಿರುತ್ತದೆ.
"ಎಲ್ಲಾ ಓಕೆ, ಹಿಂದಿ ಜಾಹೀರಾಥು(!) ಯಾಕೆ ?"
ಮಿರ್ಚಿಯಲ್ಲಿ ಎಲೈಸಿ, ಸುಭಿಕ್ಷಾ ಇತ್ಯಾದಿಗಳ ಜಾಹೀರಾತುಗಳು ಇನ್ನೂ ಹಿಂದಿಯಲ್ಲಿ ಬರತಾ ಇವೆ. ಟೈಮ್ಸ ಗುಂಪಿಗೆ ಆದ ಜ್ಞಾನೋದಯ ಇವುಗಳಿಗೆ ಆಗಲಿಕ್ಕೆ ಇನ್ನೂ ಎಷ್ಟು ದಿನ ?
" Fever " eag "Bombat Kannada ashte".
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!