ಬೇರೆ ರಾಜ್ಯಗಳ ನಡುವ ಓಡಾಡುವ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಕರು ಕೇಳಿದರೆ ಬೇರೆ ಭಾಷೆಯಲ್ಲಿ ಮನರಂಜನೆ ಸಿಗತ್ತಂತೆ. ಇದು ಸಾಧುವೇ ಸರಿ. ಇನ್ನು ಕನ್ನಡಿಗರು ಚೆನ್ನೈಗೆ ಹೋಗ್ತಿದ್ರೆ "ನಮಗೆ ಕನ್ನಡ ಚಿತ್ರ ಬೇಕು" ಅಂತ ಕೇಳಬೇಕಷ್ಟೆ. ಕೇಳಿದರೆ ಇಲ್ಲ ಅನ್ನೋಹಂಗಿಲ್ಲ. ಇಬ್ಬರು ಹಿಂದಿಯೋರು ಎದ್ದು ಹಿಂದಿ ಬೇಕು ಅಂದ್ರೆ, ಇಲ್ಲಾ ಇಬ್ಬರು ತಮಿಳ್ರು ಎದ್ದು ತಮಿಳ್ ಬೇಕು ಅಂದ್ರೆ ಮಿಕ್ಕ ನಲವತ್ತು ಜನ ಕನ್ನಡದೋರು ಸುಮ್ಕೆ ಕೂತಿರಬಾರ್ದು, ಅಷ್ಟೆ. ಎದ್ದು ಹಕ್ಕು ಚಲಾಯಿಸಿಕೊಳ್ಳಬೇಕು. ಸೊಲ್ಪ ಮುನ್ನುಗ್ಗೋದನ್ನ ಕಲೀಬೇಕಷ್ಟೆ. "ಅಯ್ಯೋ ಔರು ಬೇಜಾರ್ ಮಾಡ್ಕೊತಾರೆ" ಅನ್ಕೊಂಡ್ ಕೂತಿದ್ದಕ್ಕೇ ಇಷ್ಟು ತಡವಾಗಿ ಕರಾರಸಾಸಂಗೆ ಬುದ್ಧಿ ಬರ್ತಿರೋದು.
ಬಸ್ ಮನರಂಜನೆ ಇನ್ನು ಕನ್ನಡದಲ್ಲಿ ಮಾತ್ರ
15.7.07
ಇಲ್ಲೀ ವರೆಗೆ ಕರ್ನಾಟಕದ ಒಂದು ಊರಿಂದ ಇನ್ನೊಂದು ಊರಿಗೆ ಹೋಗೋ "ಕರಾರಸಾಸಂ" ಬಸ್ಸುಗಳಲ್ಲಿ ನಮಗೆ ಒಂಚೂರೂ ಸಂಬಂಧವಿಲ್ಲದ ಭಾಷೆಗಳ ಚಿತ್ರಗಳನ್ನು, ಹಾಡುಗಳನ್ನು ಹಾಕ್ತಿದ್ರಲ್ಲ, ಆ ಅಸಂಬದ್ಧತೆಗೆ ಇನ್ನೇನು ತೆರೆ ಬೀಳಲಿದೆ. ಕೊನೆಗೂ ಕರಾರಸಾಸಂಗೆ ಜ್ಞಾನೋದಯ ಆಗಿ ಇನ್ನು ಮೇಲೆ ಕಡ್ಡಾಯವಾಗಿ ಮನರಂಜನೆ ಕನ್ನಡದಲ್ಲೇ ಇರಬೇಕು ಅಂತ ಸುತ್ತೋಲೆ ಹೊರಡಿಸಿದೆ.
11 ಅನಿಸಿಕೆಗಳು:
Hurray KSRTC ..
We needed this for a long time .. hoping that our kannadigas come forward to ask for kannada programme ..
ಮೊನ್ನೆ ವೋಲ್ವೋ ಬಸ್ಸು ಹತ್ತಿದ್ದೆ, ಎಲೆಕ್ಟ್ರಾನಿಕ್ಸ್ ಸಿಟಿಯಿಂದ.. ಹಿಂದಿ ಹಾಡುಗಳು ಬರುವ ರೇಡಿಯೋ ಸಿಟಿ ಹಾಕಿದ್ದ..ನಾನು ಕೇಳಿಕೊಂಡ ಮೇಲೆ ಕನ್ನಡ ಹಾಡುಗಳು ಬರುವ ರೇಡಿಯೋ ಮಿರ್ಚಿ ಹಾಕಿದ..ಮೊದಲೇ ಕನ್ನಡ ಹಾಡುಗಳನ್ನು ಹಾಕಿದ್ರೆ ಏನಾಗುತ್ತೆ? ಬೇರೆಯವ್ರಿಗೆ ಕುಶಿ ಕೊಡ್ಬೇಕು, ಅಶ್ಟೇ!
nanu ashte. ondsala bengurinda basavana bagevadige hogbekadre modalu hindi amele telugu chitra hakidru. hege kelodu anta sumne idde. ondu hudugi kannada chitra haku anta kelidur. aaga bus alli idda elru kanada beku endru.
elrigu kelidre enantari anta baya eddu nitu kelabeku ashte
nimmava
shringesh ullagaddi
kelavomme bengaLoorininda mysoorige baruvaaga Hindi chitragaLannu haakiruttare.
naanu onderaDu sala galaaTe maaDi adanna nillisalu prayatnisiddene.
parabhaashe chitragaLa VCD gaLannu igiruva ella bassugaLiMda KSRTC vapassu paDeyabEku.
ನೀವು ಕೊಟ್ಟಿರುವ ಲಿಂಕ್ ಸರಿಯಾಗಿಲ್ಲ. ಇನ್ನು ಮುಂದೆ ಆಯಾ ಪತ್ರಿಕೆಗಳ ಸುದ್ದಿ ಚಿತ್ರವನ್ನು ಬ್ಲಾಗ್ಗರ್ ಗೆ ಅಪ್ಲೋಡ್ ಮಾಡಿಬಿಡಿ.
ವೆಂಕಟ್ ಅವರೆ, ಕೊಂಡಿ ಸರಿಯಿಲ್ಲದಿರುವುದನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈಗ ಸರಿಪಡಿಸಿದೆ. ಮತ್ತೊಮ್ಮೆ ಒತ್ತಿ ನೋಡಿ. ಚಿತ್ರಗಳನ್ನು ಅಪ್ಲೋಡ್ ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುವುದರಿಂದ ಹೀಗೆ ಕೊಂಡಿ ಕೊಡುತ್ತೇವೆ. ಆದಾಗ ಚಿತ್ರವನ್ನೇ ಅಪ್ಲೋಡೂ ಮಾಡುತ್ತೇವೆ.
ಕೊನೆಗೂ ನಮ್ಮ ರಸ್ತೆ ಸಂಸ್ಥೆಗೆ ಸ್ವಲ್ಪ ಬುಧ್ಧಿ ಬಂತು. ಬೇರೆ ರಾಜ್ಯಕ್ಕೆ ಹೋಗುವ ಬಸ್ಸುಗಳಲ್ಲೂ ಯಾಕೆ ಬೇರೆ ಭಾಷೆಯ ಮನರಂಜನೆ ಬೇಕು,ಚೆನ್ನೈಗೆ ಹೋಗುವ ನಮ್ಮ ಬಸ್ಸುಗಳಿಗೆ ಒಂದು ರೀತಿಯ ವಿಚಿತ್ರ ಪ್ರೀತಿ ಭೇರೆ ಭಾಷೆಗಳ ಮೇಲೆ, ಯಾವಾಗಲೂ ಭೇರೆ ಭಾಷೆಯ ಮನರಂಜನೆಯನ್ನೇ ಕೊಡುತ್ತಾರೆ ಮತ್ತು ಪ್ರತಿ ಭಾರಿ ನಾವು ಬಹಳ ಕೇಳಿದರೆ ಬೇಜಾರು ಮಾಡಿಕೊಂಡು ಕನ್ನಡ ಹಾಕುತ್ತಾರೆ. ನೀವೂ ಯಾವುದೇ ತಮಿಳುನಾಡಿನ ಅಥವ ಆಂಧ್ರದ ಬಸ್ಸುಗಳಲ್ಲಿ ಎಂದಾದರೂ ಬೇರೆ ಭಾಷೆಯ ಮನರಂಜನೆ ನೋಡಿದ್ದೀರ??? ಈ ರೀತಿಯ ಉದಾರ ಭಾವನೆಯಿಂದಲೆ ನಮ್ಮ ಕನ್ನಡಕ್ಕೆ ಈ ಸ್ಥಿತಿ.
ಕನ್ನಡದೋರು ಇತರ ಭಾಷಿಕರ ತರಾ ಸ್ವಲ್ಪ ಮೊಂಡು, ಹಠ, ಅಹಂಕಾರ ಇತ್ಯಾದಿ ಅವಗುಣಗಳನ್ನು ಬೆಳಸಿಕೊಳ್ಳಬೇಕು. ಆಗ ನೋಡಿ... ನಮ್ಮ ಸ್ಥಿತಿ ಹೇಗೆ ಉತ್ತಮಗೊಳ್ಳುತ್ತೆ ಅಂತ!
“ಬೆತ್ತಲೆ ರಾಜ್ಯದಲ್ಲಿ ಬಟ್ಟೆ ತೊಟ್ಟವನೇ ಅವಿವೇಕಿ” ಬೇರೆಯೋರು ಬಟ್ಟೆ ಹಾಕ್ಕೊಳ್ಳೊ ಹಂಗೆ ಕಾಣಲ್ಲ. ನಾವೂ ಬಟ್ಟೆ ಬಿಚ್ಚೋದೇ ಉಳಿದಿರೋ ದಾರಿ!
ಕನ್ನಡ ಅನುಷ್ಟಾನ ಮಾಡುವದಕ್ಕೆ ನಾವು ಹೋರಾಟ ಮಾಡಬೇಕಾಗಿರುವುದು ಕರ್ಮಕಾಂಡ ಸರಿ.
ಕನ್ನಡ ಚಿತ್ರ ಹಾಕಿದರೆ ನಮ್ಮ ಸಾರಿಗೆ ಸಂಸ್ಥೆಗಳಿಗೆ ಜನ ಹತ್ತೊಲ್ಲ ಅನ್ನೊ ಭಯ ಅಂತೆ. ಜನ ಇವರು ತೋರಿಸೊ ಬೇರೆ ಭಾಷೆಯ ಡಬ್ಬಾ ಚಲನಚಿತ್ರಗಳನ್ನು ನೋಡಿ ಬರುತ್ತಾರೆ ಅನ್ನೊ ಭ್ರಮೆ ಬೇರೆ.
ಇದನ್ನು ಹೇಗೆ ಸರಿಯಾಗಿ ಪಾಲಿಸುತ್ತಾರೆ ಅಂತ ಜನರೇ ಹೇಳಬೇಕು..
kannadadalli comments kododu anta yaaraadru heLidre .. oLLedittu ..
enguru .. kannadadalli comments mododu anta ondu blog baritiya?
Snehitharey,
Neevu ETV Kannadadalli Minch, Manthana dharavahigalannu veekshisuthirabahudaste..madyadalli ommomme Canara banknaa hosa jaahiraathu paradharshitha gollatte...Adaralli obba kannadadadha atte sosegaagi gujaraathi kaliyodanna thoristhaarey..idara artha naavugalu kannadigaru parabhasheyavruu namma orinalli tikaani hoodalu bandre avrige comfortable agirlee antha hindi maathra alla bengali, oriya, gujaraathinu kalibeku annnodhu aa jahiraathina messageuu
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!