ಬಂಗಾಳಿ ಸಂಸ್ಕೃತಿ ಬಾಳಲಿ, ಕನ್ನಡ ಸಂಸ್ಕೃತಿ ಸಾಯಲಿ!

ಕೊಲ್ಕೋತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಾನ ಹೊಸದಾಗಿ ಕಟ್ಟೋ ಬಗ್ಗೆ ಕೇಂದ್ರದ ಮಂತ್ರಿ ಪ್ರಫುಲ್ಲ ಪಟೇಲ ಅವರು "ಈ ಹೊಸ ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆಯೆ ಎಲ್ಲರಿಗೂ ರವಿಂದ್ರನಾಥ ಠಾಗೋರ್ ಕನಸು ಕಂಡಿದ್ದ ಬಂಗಾಲಿ ಲೋಕ ಅನಿಸಬೇಕು" ಅಂತ ಅಂದಿದ್ದಾರೆ. ಕೊಲ್ಕೊತ್ತದ "ದಿ ಟೆಲಿಗ್ರಾಫ್" ನಲ್ಲಿ ಬಂದ ನೆನ್ನೆ ಸುದ್ದಿ ನೋಡಿ.

ಈ ವಯ್ಯಂಗೆ ಬಂಗಾಳಿ ಸಂಸ್ಕೃತಿ ಕಾಪಾಡಬೇಕು ಅನ್ನಿಸಿರೋದು ಒಳ್ಳೇದೇ ಅನ್ನಿ. ಆದ್ರೆ ಇದೇ ಆಸಾಮಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕರ್ನಾಟಕದ ಸಂಸ್ಕೃತಿ ಬಿಂಬಿಸೋ ವಿನ್ಯಾಸಾನ ಬೇಡಾಂತ ತಡೆ ಹಿಡಿದಿದ್ದು ನೆನಪಿದ್ಯಾ ನಿಮಗೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರೋ ವಿಮಾನ ನಿಲ್ದಾಣಕ್ಕೆ ಹಂಪಿಯ ವಿನ್ಯಾಸ ಒಂದು ಕಪ್ಪು ಚುಕ್ಕೆ ಅನ್ನೋ ಮನೆಹಾಳು ಮಾತಾಡಿದ್ದರು ಇದೇ ಪ್ರಫುಲ್ಲ ಪಟೇಲರು. ಇವರಿಗೆ ಹಂಪಿಯ ಸಂಸ್ಕೃತಿ ಆಗಿಬರಲಿಲ್ಲ, ಮೈಸೂರು ರೇಶ್ಮೆ ಪರದೆಗಳು ಆಗಿ ಬರಲಿಲ್ಲ, ಹಂಪಿಯ ಮಂಡಲ ಆಗಿ ಬರಲಿಲ್ಲ, ಇಲ್ಲೀದು ಯಾವುದೂ ಆಗಿ ಬರಲಿಲ್ಲ. ಇಂಥೋರು ಧೈರ್ಯವಾಗಿ ನಮ್ಮ ನಾಡಲ್ಲಿ ತಲೆ ಎತ್ಕೊಂಡು ಓಡಾಡ್ತಾರಲ್ಲ, ಅದಕ್ಕೆ ಬಡ್ಕೋಬೇಕು! ಇಂಥೋರನ್ನ ತಲೆ ಎತ್ಕೊಂಡು ಓಡಾಡಕ್ಕೆ ಬಿಡ್ತೀವಲ್ಲ, ನಮ್ಗೆ ನಾವೇ ಜೋಡು ತೊಗೊಂಡು ಹೊಡ್ಕೋಬೇಕು!

ಕೊಲ್ಕೊತ್ತಾನಲ್ಲಿ ಮಾತ್ರ ರವೀಂದ್ರರ ಕನಸು ನನಸಾಗಬೇಕು, ಬೆಂಗಳೂರಲ್ಲಿ ನಮ್ಮ ಆಲೂರ ವೆಂಕಟರಾಯರ ಕನಸಿಗೆ ಕೆಸರು ಎಸದರೂ ಪರವಾಗಿಲ್ಲ! ಇದ್ಯಾವ್ ನ್ಯಾಯ ಗುರು? ಕೇಂದ್ರಸರ್ಕಾರಕ್ಕೆ ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ, ಅದಕ್ಕೂ ತನ್ನದೇ ನುಡಿಯಿದೆ, ನಡವಳಿಕೆಯಿದೆ ಅನ್ನೋದು ಮರ್ತುಹೋಗಿದೆ ಅನ್ನೋದನ್ನ ಪದೇ ಪದೇ ತೋರಿಸ್ತಾ ಇದಾರಲ್ಲ ಗುರು? ಕರ್ನಾಟಕ ಅಂದ್ರೆ ಇಷ್ಟು ಅಗ್ಗಾನಾ ಗುರು?

ಬಂಗಾಳಿಗಳಿಗೆ ಬಂಗಾಳಿ ಸಂಸ್ಕೃತಿ ಎಷ್ಟು ಮುಖ್ಯಾನೋ ಕನ್ನಡಿಗರಿಗೆ ಕನ್ನಡದ ಸಂಸ್ಕೃತೀನೂ ಅಷ್ಟೇ ಮುಖ್ಯ ತಾನೆ? ನಮ್ಗೆ ನಿಮ್ಗೆ ಗೊತ್ತೇ ಇದೆ, ಬಿಡಿ. ಗೊತ್ತಾಗಬೇಕಾಗಿರೋದು ಕೇಂದ್ರಸರ್ಕಾರಕ್ಕೆ. ಮೊದ್ಲು ಔರಿಗೆ ಕನ್ನಡ ಅಂತ ಒಂದು ನುಡಿ ಇದೆ, ಕನ್ನಡಿಗ ಜನಾಂಗ ಅಂತ ಒಂದಿದೆ, ಕರ್ನಾಟಕ ಅಂತ ಒಂದು ರಾಜ್ಯ ಇಲ್ಲೇ, ಇದೇ ಭಾರತದಲ್ಲೇ ಇದೆ, ಇದು ಬರೀ "ರಿಯಲ್-ಎಸ್ಟೇಟ್ " ಅಲ್ಲ ಅಂತ ಯಾರಾದ್ರೂ ಒಸಿ ಯೋಳಿ ಗುರು!

16 ಅನಿಸಿಕೆಗಳು:

Anonymous ಅಂತಾರೆ...

“ಲೋ ಮನೆಹಾಳ ಮಂತ್ರಿ. ಇದು ನಮ್ಮ ಏರ್ಪೋರ್ಟು. ನಮಗೆ ಬೇಕಾದಂಗೆ ನಾವು ಮಾಡ್ಕೋತೀವಿ. ನೀನ್ ನಿಮ್ಮೂರಲ್ಲಿ ನಿಂಗೆ ಬೇಕಾದಂಗೆ ಮಾಡ್ಕೊ ಹೋಗ್” ಅಂತ ನಾವ್ಯಾಕೆ ಗದ್ರು ಹಾಕ್ಲಿಲ್ಲ ಅವ್ನಿಗೆ?

ತಮಿಳ್ರು, ಬೆಂಗಾಲಿಗ್ಳು, ಮರಾಟಿಗ್ರು... ಎಲ್ರೂ ಸ್ವಜನ ಪಕ್ಷಪಾತಿಗಳು. ಅವರೆಲ್ಲಾ ತಮಗೆ ಬೇಕಾದ ಪ್ರತಿಮೆಗಳನ್ನ, ವಿಮಾನ ನಿಲ್ದಾಣಗಳನ್ನ, ರಾಷ್ಟ್ರಪತಿಗಳನ್ನ ತಮಗೆ ಬೇಕಾದ ರೀತಿಯಲ್ಲಿ ಮಾಡ್ಕೋಬಹುದು. ನಾವು ಕನ್ನಡದೋರು ಮಾತ್ರ ಬೇರೆಯೋರು ಹೇಳಿದಂಗೆ ಕೇಳಬೇಕು. ಇದು ನಮ್ಮ ಸ್ವಯಂಕೃತಾಪರಾಧ. ಈ ಮೂರ್ಖತನಕ್ಕೆ ಬೇರೆಯೋರ್ನ ಯಾಕೆ ಬೈಬೇಕು? ನಾವೂ ಸಹಾ ಬೇರೆಯೋರ ತರಾ ಮೊಂಡುತನ, ಹಠಮಾರಿತನ, ಮುಂತಾದ ಕಲ್ಯಾಣಗುಣ ಗಳನ್ನ ಕಲೀದಿದ್ರೆ ಬದ್ಕೋದಕ್ಕಾಗಲ್ಲ.

ರಾಮೇಗೌಡ

Unknown ಅಂತಾರೆ...

It is not difficult to do the right thin. Only we need guts to do that. Our ministers and people should take matters seriously when India is being benefitted from Karnataka. Why kannadigas cant we learn from onther states or countries. We should not loose our identity.

Anonymous ಅಂತಾರೆ...

ಅಲ್ಲಾ ಗುರು, ವಿಮಾನ ನಿಲ್ದಾಣದ ವಾತಾವರಣ ಹೆಂಗಿರಬೇಕು ಅಂತ ನಾವೆಲ್ಲರೂ ನಮ್ಮ ಅಭಿಪ್ರಾಯ ತಿಳಿಸೋಕೆ ಏನಾದ್ರು ದಾರಿಗಳು ಇವೆಯಾ? ಯಾವುದಾದರೂ ಈಮೇಲ್ ವಿಳಾಸ, ಅಥವಾ ಆನ್‍ಲೈನ್ ಪಿಟಿಷನ್, ಇತ್ಯಾದಿ... ಇದ್ರೆ ತಿಳಿಸು ಗುರು.

ಬೇರಿ ಯಾರ್ಗಾದ್ರು ಗೊತ್ತಿದ್ರೆ ಯೋಳಿ ಗುರು... ಚಕ್ಕಂತ ಆ ಕೆಲಸ ಮಾಡುವ..

Anonymous ಅಂತಾರೆ...

idakkella onde aushadi. dandam dashagunam. idannu KRV gamanakke kudale tilisabeku. avara email id karnatakarakshanavedike.org, avra kacheri mejastic nalli ide. allige hogi helidre hege? nagararaja gowdarige vishaya tilisi. naavu avarige bembalisona.

Anonymous ಅಂತಾರೆ...

ಪ್ರಫುಲ್ ಪಟೇಲ್ ಜಾತಕ ಇಲ್ಲಿದೆ ನೋಡಿ:
href="http://164.100.24.167:8080/members/Website/Mainweb.asp?mpcode=208
ಈಮೇಲ್ ಆಡ್ರಸ್ಸೂ ಇದೆ. ಕನ್ನಡಿಗರೆಲ್ಲ ಇವನಿಗೆ ಬರೆದು ತಿಳಿಸೋಣ, ನಮ್ಮ ಅನಿಸಿಕೆ ಏನು ಎಂದು ಹೇಳೋಣ.

Anonymous ಅಂತಾರೆ...

ಸಧ್ಯಕ್ಕೆ ನಮ್ಮ ರಾಜಕಾರಣಿಗಳಿಗೂ (ಎಂ.ಪಿ) ತಿಳಿಸಬೇಕು. ಮುಂಡೇವು ಬಿಟ್ಟಿ ಅನ್ನ ತಿನ್ನ್ತಿವೆ!! ಬಡ್ಡಿಮಕ್ಳ, ನಮ್ಮ ನಾಡಿನ ಜನತೆಯನ್ನು ಕಾಪಾಡಿ, ನಮ್ಮ ಭಾಷೆಯನ್ನ ಕಾಪಾಡಿ. ಈ ಏರ್ಪೋರ್ಟ್ ವಿಚಾರಾನ ಸದನದಲ್ಲಿ ಎತ್ತಿ. ನಮಗೆ ನ್ಯಾಯ ದೊರಕಿಸಿಕೊಡಿ ಅಂತ ಯಾರಾದ್ರು ಹೇಳ್ಬೇಕು. ಕ.ರ.ವೆ ಯ ಸಹಾಯ ಈ ನಿಟ್ಟಿನಲ್ಲಿ ತೊಗೊಬೋದು ಅನ್ಸತ್ತೆ.. ಎಲ್ಲಾದಕ್ಕೂ ಕ.ರ.ವೆ ಅವರ ಸಹಾಯ ಯಾಚಿಸುವುದು ಅಷ್ಟು ಅನುಕೂಲಕರ ಅಲ್ಲ ಅನ್ಸತ್ತೆ.. ಆದರೂ ’ಕ.ರ.ವೆ’ಯ ಆಶೀರ್ವಾದ ಇದ್ದರೆ ಸಾಕು. ಏನಂತೀರ??

ಹಾಗಾದರೆ, ಇವಾಗ ನಮ್ಮ ’ಎಂ.ಪಿ’ಗಳಿಗೆ ಗಂಟೆ ಕಟ್ಟುವುದಕ್ಕೆ ಯೋಜನೆ ಹಾಕಬೇಕಲ್ಲ.. ವಿಚಾರಗಳನ್ನು ಇಲ್ಲಿ post ಮಾಡಿ.

ರೋಹಿತ್

Anonymous ಅಂತಾರೆ...

ಗುರುಗಳಿಗೆ ನಮಸ್ಕಾರ್..

ಪ್ರಫುಲ್ ಪಟೇಲ ಅವರಿಗೆ e-mail ಕಳ್ಸಿ ನಮ್ಮ ಬಗ್ಗೆ ಅಷ್ಟ ಹಿಂಗ ಯಾಕ್ ಮಾಡ್ತಿರಿ ಸರ್‍ ಅಂತ ಕೇಳೆನಿ.. ನೀವು ಎಲ್ಲಾರು ಒಂದೊಂದ್ e-mail ಕಳಸ್ರಿ... ನಾವು ಕನ್ನಡದವರು ಅಷ್ಟ ಎಲ್ಲಾರು ಹೇಳದಂಗ ಕೇಳಬೇಕು,, ಉಳಕಿ ಮಂದಿ ಹೆಂಗಾರು ಇರಬಹುದ ಅಂದ್ರ ಹೇಂಗಪಾ ತಮ್ಮ.. ಎಲ್ಲಾರು ದಯಮಾಡಿ e-mail ಕಳಸ್ರಪಾ ಪ್ರಫುಲ್ ಸಾಹೇಬ್ರಿಗ...

Anonymous ಅಂತಾರೆ...

rohit avaru, vasant helodu thumba thumba nija. hosa airport nalli
olagina alankaravaadaru namma samskruthiyannu bimbisuvamte maaDi emba ottaya maadalaaguvadillave ??.
idakkella shaktishali pradeshika pakshave maddu.

karuna

Anonymous ಅಂತಾರೆ...

When Praful Patel came to Bengalooru and commented on the design of the airport, why did not anyone,the elected representatives talk abt it? The immediate reaction should have been that we will design airport to depict our cultural heritage. Yaava nan maganu matadolla. ad bidi guru, Bengaloorina airport hesaru en idta iddare? nan maklu Kempegowdru hesaro atva Rajannana hesaru itttidre kannada nadige , kannadakke ondu level sigodu. ellara bayallu ivara hesaru mereyodu. adanna bittu namma govt navru, "bangalore international airport" anta hesaru idbeku anta proposal kalsiddare centre ge!! entaha abhimaanashoonya rajakaaranigalu nammavaru!!!

Anonymous ಅಂತಾರೆ...

ee janakke facility to design gu iro vyatyasa artha agilla ansutte. namma design yawa tharaddadaru irali aa model alli international airport ge iro ella facilities ide anta nododu bittu namma design bagge comment hodedidare. adanna oppikondu nawu saha badalayisalu mundagiddewe.
ishtella allade prafulla patel duopen partiality aytu. we really need to question for the justice.

Anonymous ಅಂತಾರೆ...

ನಮ್ಮ ಎಲ್ಲಾ ಸಮಸ್ಯೆಗಳಿಗೆ ಹೋರಾಡಬೇಕಾದ್ರೆ ನಮಗೆ (ಕನ್ನಡಿಗರಿಗೆ) ಕ.ರ.ವೆ ಸಹಾಯ ಬೇಕು. ಆದ್ರೆ ಅವರನ್ನ ನಾವು (ಕನ್ನಡಿಗರು) ಎಷ್ಟರ ಮಟ್ಟಿಗೆ ಸಪೋರ್ಟ್ ಮಾಡ್ತಾ ಇದೀವಿ?

ಪಾಕಿಸ್ತಾನ ನಮ್ಮ ಮೇಲೆ ಬಿದ್ದಾಗ ಮಾತ್ರ ನಮಗೆ ನಮ್ಮ ಸೈನಿಕರ ಮೇಲೆ ಅಭಿಮಾನ ಪ್ರೀತಿ ಉಕ್ಕಿ ಹರಿಯುತ್ತೆ. ಮಿಕ್ಕ ಸಮಯದಲ್ಲಿ ಅವ್ರನ್ನ ಕ್ಯಾರೇ ಅನ್ನೋರಿಲ್ಲ!

ಅದಕ್ಕೆ ಎಲ್ಲಾ ಕನ್ನಡಿಗರೂ ಕರವೆ ಗೆ ತಮ್ಮ ತನು, ಮನ, ಧನ ಸಹಾಯಾನ ಯಾವಾಗ್ಲೂ ಕೊಡ್ತಾ ಇರ್ಲಿ.

-ಕ್ರಿಷ್ಣ

Anonymous ಅಂತಾರೆ...

ಇದು ಸಕ್ಕತ್ interesting ಮತ್ತು controversial ವಿಷ್ಯ!

ಇಲ್ಲಿ ನಾವು ಬೇಕಾಗಿರೊಕ್ಕಿಂತಾ ಜಾಸ್ತಿ ಭಾವಾತ್ಮಕ ಆಗ್ತಾ ಇದೀವೇನೋ ಅನ್ಸುತ್ತೆ. ನಾವೂ ಲೋಕಲ್ ತೀಮ್ ಕೊಟ್ಕೊಬಹುದು ಗುರು! ರಬೀಂದ್ರ್ ನಾಥ್ ತಾಗೊರ್’ ಬೆಂಗಾಲ್ ಅಂದ್ರೆ ಎನು? ಅದನ್ನ ಅರ್ಥ ಮಾಡ್ಕೊಳ್ದೆ ಸುಮ್ನೆ ಈ ತರ emotional ಆಗಿ react ಮಾಡೋದು ಕನ್ನಡಿಗರಿಗೆ ಒಳ್ಳೆಯದಲ್ಲ. "greenery would be visible from the glass-fronted corridors that connect the planes to the terminal"..... context ಕಿತ್ ಹಾಕಿ ಸುಮ್ನೆ ಗಳಾಟೆ ಯಾಕ್ ಎಬ್ಬಿಸ್ಬೇಕು ಗುರು?

Are we comparing apples and cigarattes?

Anyway. ಎಂ.ಎಸ್. ರಾಮೈಯ್ಯಾ ಎಂಗಿನೀರಿಂಗ್ ಕಾಲೇಜ್ ಗೆ ಮೊದಲನೇ ಸಾರಿ ಹೋದಾಗ ನಂಗೆ ಸಕ್ಕತ್ ನಗು ಬಂದಿದ್ದು ನೆನಪು, ಶಿಲಾಬಾಲಿಕೆಗಳ್ನ ನೋಡಕ್ಕೆ, ನಮ್ ವಿಮಾನ ನಿಲ್ದಾಣ ಹಾಗ್ ಆಗ್ಬೇಕೂ ಅಂತೀರಾ? ತೀಮ್ ಇರ್ಬೇಕು ಆದ್ರೆ ಕನ್ನಡ ಮತ್ತು ಕನ್ನಡಿಗರ (ಜೊತೆಗೆ ಭಾರತದ) ನಗೆಪಾಟ್ಳು ಆಗ್ಬಾರ್ದು!!! this would be a great idea but if execution is poor (which in most probability it would be, because of the commitment we expect from our govts, evidenced by our roads) it would look extremely ricidulous.

ದಯವಿಟ್ಟು ಈ unintegrated atmosphere ನಿರ್ಮಾಣ ಮಾಡೋದ್ ಬೇಡ. ಈಗಾಗ್ಲೆ ನಮ್ ದೇಷ ನಾಯ್ ಪಾಲ್ ಆಗ್ತಾ ಇದೆ! ನಮ್ ಹಕ್ಕು ನಂಗೆ ಸಿಗ್ಬೇಕು, ಆದ್ರೆ ... ಹಾಗಂತ ಪ್ರತಿಯೊಂದ್ ವಿಷಯದಲ್ಲೂ ನಾವು ಹೀಗೆ ಗಲಾಟೆ ಮಾಡ್ಬೇಕೆ?

ನಂಗೆ ಸಾವಿರಾರು ಜನ್ರು ಕೆಟ್ದಾಗಿ ಬೈತೀರ ಈಗ, ಬೈರಿ ಪರ್ವಾಗಿಲ್ಲ, ಇದು ನನ ಅನಿಸಿಕೆ ಅಷ್ಟೆ.

Anonymous ಅಂತಾರೆ...

ಔದು, ನಾವು ಕನ್ನಡ್‌ದೋರು ಮಾತ್ರ ಬ್ಯಾರೆ ರಾಜ್ಯದೋರ ವಿಷ್ಯ ತಿಳ್ಕೋಬೈಕು! (ಬೆಂಗಾಲ್, ಠಾಗೂರ್...) ಆ ಜನ ನಮ್ಮೋರ್ಬಗ್ಗೆ ತಿಳ್ಕೊಳ್ಳೋದು ಬ್ಯಾಡವಾ? ಈ ಇಂದೆ ಯಾರೋ ಸರ್ಕಾರಿ ಅಧಿಕಾರಿ ಕರ್ನಾಟಕದ ಒಂದು ಬೀಚಿಗೆ ಠಾಗೋರ್ ಎಸ್ರು ಇಡ್ಬೇಕು ಅಂತ ಯೋಳಿದ್ರು. ರೈಲ್ವೇ ತಿಕೀಟ್ ಫಾರಮ್ಮುಗಳು ತ್ಯಮಿಳ್ನಾಗೆ ಬಂದ್ವು. ಇಂಗೆ ಎಲ್ಲಾ ಕಡೆ ಬ್ಯಾರೆ ಭಾಷೆಯೋರು ಕನ್ನಡದವ್ರನ್ನ ತುಳೀತಿರೋವಾಗ ನಾವು ಸ್ವಲ್ಪ ಎಮೋಶನಲ್ ಆದ್ರೆ ಅದು ಸಹಜ ಅಲ್ವಾ ಗುರು? ನಮ್ನೂ ಬ್ಯಾರೆ ರಾಜ್ಯದೋರ ತರಾ ಟ್ರೀಟ್ ಮಾಡ್ಲೇಳು. ಎಲ್ಲಾ ಬ್ಯಾರೆ ರಾಜ್ಯಗಳ ಏರ್ಪೋರ್ಟಿಗೂ ಅವರವರ ಎಸ್ರು ಮಡಕ್ಕೊಂಡವ್ರೆ. ನಮ್ದಕ್ಕೆ ‘ಬ್ಯಾಂಗಲೂರ್ ಏರ್ಪೊರ್ಟ್’ ಅಂತ ಮಾತ್ರ ಇಟ್ಟವ್ರೆ. ಇದು ನ್ಯಾಯವಾ?

‘ಹಂಪಿ ಡಿಜೈನ್ ಸರಿ ಕಾಣಲ್ಲ’ ಅಂತ ಸುಮ್ನೆ ಕಿತ್ತಕಿಬಿಟ್ರೆ ಹೆಂಗೆ ಸೋಮೆ? ಬ್ಯಾರೆ ಯಾವ್ದಾದ್ರೂ ನಮ್ಮ ಸಂಸ್ಕೃತೀನ ಬಿಂಬ್ಸೋ ಡಿಜೈನ್ ಹಾಕ್ಲಿ.

ನಮ್ಮ ಇರೀಕ್ರು ಯಾವ್ದಕ್ಕೂ ಗಲಾಟೆ ಮಾಡ್ದೇ ಸುಮ್ನೆ ಕುಂತ್ಕೊಂಡಿದ್ರಿಂದ್ಲೇ ಈವತ್ತು ನಮ್ಗತಿ ಇಂಗಾಗಿರೋದು. ನಾವೂ ಇಂತ ಸಣ್ಣ ಪುಟ್ಟ ವಿಷ್ಯಕ್ಕೆ ಕಚ್ಚಾಡೋಕೆ ಶುರು ಮಾಡ್ಬೇಕು. ಆಗ್ ನೋಡಿ ನಮ್ಸ್ಥಿತಿ ಎಂಗೆ ಸುದ್ರಾಯ್ಸ್ತದೆ ಅಂತ.

-ಬಡ್ಡಿಹೈದ

Anonymous ಅಂತಾರೆ...

ಗುರು ಬಡ್ಡಿಹೈದ! "ಬ್ಯಾಂಗಳೂರ್ ಏರ್ಪೋರ್ಟ್" ಅಂತ ಹೆಸ್ರು ಪ್ರಪೋಸ್ ಮಾಡಿರೊದು ಯಾರು? ಅದು ಮರೀಬ್ಯಾಡ. ನಮ್ ಕೈಲಿ ಕಂಟ್ರೊಲ್ ಐತೆ ಗುರು, ಸರ್ ಎಂ. ವಿಸ್ವೇಸ್ವರಯ್ಯ ಅಂತ ಇಡ್ಲಿ ಏಳು!

ತಮಿಳ್ ನಲ್ಲಿ ಟಿಕೆಟ್ ಪ್ರಿಂಟ್ ಮಾಡಿದ್ದು ಯಾರು ಗುರು? ಬೇರೆ ರಾಜ್ಯದವ್ರ್ ತಪ್ಪಾ? ಯಾರು ಗುರು ತುಳಿತಾ ಇರೋದು? ವಸಿ ನೋಡು ಗುರು! ನಮ್ಮನ್ನ ನಾವೇ ತುಳ್ಕೊತಾ ಇದೀವೆ ಇಷ್ಟೆಯ! ಕನ್ನಡ ಬಾರದ ಕನ್ನಡಿಗರು ಗುರು! ಕನ್ನಡ ಪ್ರೆಮ ಅಂದ್ರೆ ಕನ್ನಡ ಕಲಿ, ಕಲಿಸು, ಸುಮ್ನೆ ಎಲ್ಲಾವ್ದಕ್ಕೂ ಕಲ್ ಎತ್ಕೋಬೇಡ! ಮಿಲಿಟೆಂಟ್ ಮನೋಭಾವ ಬೇಕಿಲ್ಲ, ಅದು ಬರೀ ಹಾಳು ನಾಷ ಮಾಡುತ್ತೆ. ಒಗ್ಗೊಡ್ಸೊದು ಹೇಗೆ ಅಂತ ನೋಡೋಬದ್ಲು ಬರೀ ಹೇಟ್ರೆಡ್ ಪ್ರಚಾರ ಮಾಡ್ಬೇಕಿಲ್ಲ.

ಗಳಾಟೆ ಮಾಡೋದು, ಸುಮ್ನೆ ಇದ್-ಬದ್ಧಿದಕ್ಕೆಲ್ಲ ಕಾಲ್ ಕೆರ್ಕೊಂಡ್ ಜಗ್ಳಕ್ ಹೊಗ್ಬೇಕಿಲ್ಲ, ನಮ್ ಮನೆನ ನಾವು ಸ್ವಲ್ಪ ಕಿಲೀನ್ ಆಗಿ ಮಡಿಕ್ಕೊಂಡ್ರೆ ಸಾಕು, ಅದ್ ತಿಳ್ಕ!! ನಮ್ ರಾಜ್ಕಾರ್ಣಿಗಳ್ನ ಬೆಂಡ್ ಎತ್ತು! ಸುಮ್ನೆ ಆ ಭಾಷೆ, ಈ ಭಾಷೆ, ನೆರೆಹೊರೆ ಧೂಷಣೆ ಎನೂ ಪ್ರಯೊಜ್ನ ಇಲ್ಲ. ನಮ್ ಐಕ್ಳ್ಗೆ ಮೊದ್ಲು ಬುದ್ದಿ ಕಲ್ಸು, ಅದು ಆಗೊ ಹಾಗಿದ್ರೆ ನಮ್ಗೆ ಮರ್ವಾದೆ ಅಷ್ಟೆಯ!

ಯಾರೂ ನಮ್ಮನ್ನ ತುಳ್ಯಕ್ ಆಗಲ್ಲ! ಕನ್ನಡ, ಕನ್ನಡಿಗರು ಅಷ್ಟೇನು ಸುಲುಬ ಅಲ್ಲ ಅನ್ನೋ ಕಾನ್ಫಿಡೆಂನ್ಸ್ ಇದ್ದ್ರೆ ಸಾಕು! ಪ್ರೀತಿ ಬೆಳ್ಸ್ಕೊ, ಕನ್ನಡ ಕಲಿ, ಬಳಸು, ಕಲಸು. positive image through positive work helps in the long run, these short term negative tactics are waste and short lived, we will be creating a militant society this way!!

Anonymous ಅಂತಾರೆ...

ಸಾಧುಂಗೆ ಸಾಧು,ಮಾಧುರ್ಯಂಗೆ ಮಾಧುರ್ಯನ್, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್,ಮಾಧವೀತನ್ ಪೆರನಲ್ಲ ..
ಈಗಾಗ್ಲೆ ಕನ್ನಡಿಗರಸಹನ ಶೀಲತೆ ಜಗತ್ತಿಗೆಲ್ಲಾ ಜನಜನಿತವಾಗಿದ್ದು ಬೆಂಗಳೂರು ವಲಸಿಗರ ಸ್ವರ್ಗವಾಗಿದೆ. ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ್ ಅಗಲೇ ಬೇಕಾಗಿದೆ ಸ್ವಾಮಿ.ನಮ್ಮ ಹಕ್ಕುಗಳಿಗಾಗಿ ಎಲ್ಲ ರೀತಿಯ ಹೋರಾಟವೂ ಬೇಕು. ಇಷ್ಟಕ್ಕೂ ಕನ್ನದಿಗರ ಎಲ್ಲ ಹಿತಗಳನ್ನು ಬಲಿಕೊಟ್ಟಾದರೂ ಈ ದೇಶದ ಹಿತ ಕಾಪಾಡಬೇಕು ಅನ್ನೋದು ಸರೀನಾ? ಔಷಧಿ ಕಹಿಯಾದ್ರೂ ಬೇಕಾಗುತ್ತಲ್ವಾ? ಹಾವಿನ ವಿಷಾನೂ ಹಿತವಾದ್ರೆ ಮದ್ದು. ಹಾಗೆ ಇಂತಹ ಕ್ರಿಟಿಕ್ಸೂ ಕೂಡಾ. ಬರೀ ಸಾಹಿತ್ಯ ಹಿರಿಮೆ ಬಗ್ಗೆ ಕೊಚ್ಕೊಳ್ಲೋದು ಅತಿಯಾದ ಸಿಹಿ ವಿಷದಂತೆ ಗುರೂ. . .
ಮುಕುಂದ

Anonymous ಅಂತಾರೆ...

e baddi maga, l-ke-bal praful patel sulemaga calcutta dalli huttiddu adakke bengal kandre osi feelingu.

sulemaga bengaluru/karnataka avarappana aasti anta tilkondiddaane.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails