ಕನ್ನಡಿಗರೇ ಮೈಕ್ರೋಸಾಫ್ಟ್ ಕಟ್ಟಕ್ಕೆ ಏನೇನು ಬೇಕು?

ಜುಲೈ 29ರ ಹಿಂದೂನಲ್ಲಿ ಇ.ಸಿ. ಥಾಮಸ್ ಅನ್ನೋರು ಭಾರತದಲ್ಲಿ ಯಾವುದೇ ನಿಜವಾದ ಸಂಶೋಧನೆಗಳು ನಡೆಯುತ್ತಿಲ್ಲ, ಹೊಸ ತಂತ್ರಜ್ಞಾನದ ಬೆಳವಣಿಗೆ ಆಗ್ತಿಲ್ಲ, ಹೊಸ-ಹೊಸ ವಸ್ತುಗಳು ತಯಾರಾಗ್ತಿಲ್ಲ ಅಂತ ಅಳಲು ತೋಡ್ಕೊಂಡಿದಾರೆ ನೋಡಿ:

India has no products which have revolutionised the world scene...

Nor do we have innovative companies such as Google, Apple or Microsoft. Our IT giants are really glorified sub-contractors to the elite corporations of the world. Our great manufacturing enterprises are just makers of products engineered by others.


ಥಾಮಸ್ ಹೇಳೋದು ನಿಜ ಅಂತ ನಮಗೆ ಗೊತ್ತೇ ಇದೆ. ಎಲ್ಲಿವೆ ಪ್ರಪಂಚವನ್ನೇ ಅಲ್ಲಾಡಿಸೋ ಭಾರತೀಯ ಕಂಪನಿಗಳು? ಏನಿದ್ರೂ ಅದು-ಇದು ಚಿಕ್ಕ-ಪುಟ್ಟ ಕೆಲಸಗಳ್ನ ಗುತ್ತಿಗೆ ತೊಗೊಂಡು ಜೀವನ ಮಾಡೋದ್ರಲ್ಲೇ ಇದೀವಲ್ಲ ಗುರು?

ಕನ್ನಡಿಗನಿಗೆ ಕರ್ನಾಟಕವೇ ಭಾರತ

ಭಾರತದ ಬಗ್ಗೆ ಥಾಮಸ್ ಒಡ್ಡಿರೋಂಥಾ ಪ್ರಶ್ನೆಗಳ್ಗೆ ನಿಜವಾಗಲೂ ಉತ್ತರ ಕೊಡಬೇಕು ಅಂದ್ರೆ ಭಾರತದಲ್ಲಿರೋ ಭಾಷಾವಾರು ರಾಜ್ಯಗಳ್ನ ಮನಸ್ನಲ್ಲಿ ಇಟ್ಟುಕೊಳ್ದೇ ಇದ್ರೆ ಆಗಲ್ಲ. ಭಾರತ ಅಂದ್ರೆ ಅರ್ಥವಾದರೂ ಏನು? ಭಾಷಾವಾರು ರಾಜ್ಯಗಳ ಒಕ್ಕೂಟ. ಭಾರತದಲ್ಲಿ ಒಳ್ಳೇ ತಂತ್ರಜ್ಞಾನ ಹುಟ್ಬೇಕು ಅಂದ್ರೂ ಒಂದೇ ಕರ್ನಾಟಕದಲ್ಲಿ (ಹಾಗೇ ಪ್ರತಿಯೊಂದು ಭಾಷಾವಾರು ರಾಜ್ಯದಲ್ಲೂ) ಹುಟ್ಬೇಕು ಅಂದ್ರೂ ಒಂದೇ. ಭಾರತದೋರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ ಕನ್ನಡಿಗರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ.

ಕನ್ನಡಿಗರು ಉದ್ಧಾರ ಆಗದೆ ದೂರದ ಪ.ಬಂಗಾಳ ಉದ್ಧಾರವಾದರೆ ನಮಗೇನು? ಪಕ್ಕದ ಮನೇಲಿ ಕೂಸು ಹುಟ್ಟಿತು ಅಂತ ಇಲ್ಲಿ ತೊಟ್ಟಿಲು ತೂಗೋ ಪೆದ್ದರೇನು ನಾವಲ್ಲವಲ್ಲ? ನಮಗೆ ಕರ್ನಾಟಕವೇ ಭಾರತ. ಕರ್ನಾಟಕದ ಹೊರಗಿರೋ ಭಾರತ ಕರ್ನಾಟಕದ 99% ಜನರಿಗೆ ಭಾರತವೇ ಅಲ್ಲ ಅಷ್ಟೇ ಅಲ್ಲ, ಅದು ಅವರ ಮಟ್ಟಿಗೆ ಇಲ್ಲವೇ ಇಲ್ಲ; ಔರು ಆ ಮಣ್ನ ತಮ್ಮ ಜೀವನದಲ್ಲೇ ಮೆಟ್ಟಲ್ಲ. ಆ ಕಾಲ್ಪನಿಕ ಭಾರತವನ್ನ ಮನಸ್ಸಲ್ಲಿಟ್ಕೊಂಡು ಇಲ್ಲಿ ನಾವು ಉತ್ರ ಕೊಡಕ್ಕೆ ಹೊರ್ಟಿರೋಂಥಾ ಗಂಭೀರ ಪ್ರಶ್ನೆಗಳ್ಗೆ ಉತ್ರ ಕೊಡಕ್ಕಾಗಲ್ಲ. ಆದ್ದರಿಂದ ಕರ್ನಾಟಕವನ್ನೇ ಕ್ಷೇತ್ರವಾಗಿಟ್ಟುಕೊಂಡು ಉತ್ರ ಕೊಡೋಣ.

ಇದೇ ಭಾರತದ ಬೇರೆ ರಾಜ್ಯಗಳ್ಗೂ ಅನ್ವಯಿಸತ್ತೆ ಅನ್ನೋದು ನಮ್ಮ ಉತ್ತರದ ವಿಶೀಷ. ಈ ಮೂಲಕವೇ ಭಾರತದ ಉದ್ಧಾರ ಸಾಧ್ಯ. ಇರೋ ವಿವಿಧತೇನ ಮರೆತರೆ ಚೊಂಬು!

ಎರಡು ಉತ್ತರಗಳು

ಕರ್ನಾಟಕದಲ್ಲಿ ಹೊಸಹೊಸ ತಂತ್ರಜ್ಞಾನ ಹುಟ್ಟಬೇಕು, ಅದ್ಭುತವಾದ ಕಂಪನಿಗಳು ಬರ್ಬೇಕು ಅಂದ್ರೆ ಏನೇನ್ ಇರ್ಬೇಕು ಅಂತ ಯೋಚ್ನೆ ಮಾಡಿದ್ರೆ ಮುಖ್ಯವಾಗಿ ಎರಡು ಅಂತ ಉತ್ರ ಸಿಗತ್ತೆ ಗುರು:
  1. ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ
  2. ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ
ಈ ಎರಡನ್ನೂ ಸ್ವಲ್ಪ ವಿವರವಾಗಿ ನೋಡ್ಮ, ಆಮೇಲೆ ಇವೆರ್ಡನ್ನ ಆಗುಮಾಡಿಸಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆ ಏನು ಅಂತ ನೋಡ್ಮ.

ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ


"ಇಂಥದ್ದು ಬೇಕು" ಅಂತ ಯಾರಿಗೆ ಮೊದ್ಲು ಅನ್ನಿಸತ್ತೋ ಔನಿಗೇ ಅದನ್ನ ಮಾಡಕ್ಕೆ ತುಡಿತ ಬರೋದು, ಅವನೇ ಮಾಡೋದು. ಇದನ್ನ ಸಕ್ಕತ್ ವರ್ಷದಿಂದ ನಾವು ಮಾಡದೇ ಮಾಡದೇ ತೊಮ್ಮೆಗಳಾಗಿರೋದ್ರಿಂದ ನಮಗೆ "ಇಂಥದ್ದು ಬೇಕು" ಅಂತ್ಲೂ ಹೊರಗಿನೋರೇ ಅರ್ಥಮಾಡ್ಕೊಂಬುಟ್ಟಿದಾರೆ!
  • ಫಿನ್‍ಲ್ಯಾಂಡ್ ಜನಕ್ಕೆ (ನೋಕಿಯಾನೋರ್ಗೆ) ಕನ್ನಡಿಗರಿಗೆ ಮೊಬೈಲ್-ಫೋನು ಬೇಕು ಅಂತ ನಮಗಿಂತ ಮುಂಚೆ ಗೊತ್ತಾಗಿತ್ತು! ಅದಕ್ಕೆ ಔರೇ ಮೊದ್ಲು ಅದ್ನ ತಯಾರ್ಸಿದ್ದು, ನಾವು "ಅವರ ಅಂಗಡೀಲಿ ಪಟ್ನ ಕಟ್ಟಕ್" ಕೂತಿರೋದು ಈಗ!
  • ಗಣಕಯಂತ್ರ ಅನ್ನೋದು ಬೇಕು ಅಂತ ಮೊದ್ಲು ಅನ್ನಿಸಿದ್ದು ಇಂಗ್ಲೀಷ್ ಮಾತಾಡೊರಿಗೆ, ಅದಕ್ಕೇ ಇವತ್ತೂ ಕನ್ನಡದ ಕೀಲಿಮಣಿ ಇಲ್ಲದೆ ಇಂಗ್ಲೀಷ್ ಕೀಲಿಮಣೆ ಮೇಲೇ ಇಲ್ಲಸಲ್ಲದ ದೊಮ್ಮರಾಟ ಮಾಡ್ಕೊಂಡು ಕನ್ನಡ ಬರೀತಿರೋದು.
  • ಕರ್ನಾಟಕದ ಜನಕ್ಕೆ ಕನ್ನಡದ ಹಾಡುಗಳು ಬೇಕು ಅಂತ ನಮಗಲ್ದೆ ಇತ್ತೀಚೆಗೆ ಹೊರರಾಜ್ಯದೋರಿಗೆ ಅನ್ಸಿರೋದು ನೋಡಿದ್ರೆ ನಗು ಬರತ್ತೆ ಗುರು! ಅದಕ್ಕೇ ಔರು ಮುಂದುಬಂದು ಕನ್ನಡ ಎಫ್.ಎಂ. ಚಾನೆಲ್ಗಳ್ನ ತೆಗೀತಿರೋದು!
  • ಅದೆಲ್ಲ ಹಾಳಾಗೋಗ್ಲಿ ಗುರು, ದಿನಸಿ ಅಂಗಡಿ, ತರ್ಕಾರಿ ಅಂಗಡೀನೂ ಇತ್ತೀಚೆಗೆ ಬೇರೆಯೋರು ಬಂದು ಇಡ್ತಿದಾರಲ್ಲ, ನಾವು ಅದ್ರಲ್ಲೂ ಪಟ್ನ ಕಟ್ಕೊಂಡ್ ಇರ್ತೀವಿ ಅಂತಿದೀವಲ್ಲ, ಈ ನಮ್ಮ ಕಾಲ್ಮೇಲೆ ನಾವೇ ಚಪ್ಪಡಿ ಎಳ್ಕೊಳೋ ಸೋಮಾರಿತನ ಮೊದ್ಲು ಹೋಗ್ಬೇಕು ಗುರು!
ಈಗ್ಲೂ ಕಾಲ ಮಿಂಚಿಲ್ಲ. ನಿಜವಾದ ಉದ್ಯಮಶೀಲ ಬುದ್ಧಿ ಇರೋನಿಗೆ ಇವತ್ತೂ ಸುತ್ತ ಮುತ್ತ ನೋಡಿದ್ರೆ ಐಡಿಯಾಗಳ್ಗೇನು ಕಮ್ಮಿಯಿಲ್ಲ. ಉದ್ಯಮಶೀಲತೆ ಬೆಳಸಿಕೊಳ್ಳೋದು ಬಹಳ ಮುಖ್ಯ ಗುರು! ಕಂಪನಿ ಗಿಂಪನಿ ತೆಗ್ಯೋದೆಲ್ಲ ನಂ ಕೆಲಸ ಅಲ್ಲ, ನಾವೇನಿದ್ರೂ ಔರ್ ಕೈಕೆಳ್ಗೆ ಕೆಲ್ಸಾ ಮಾಡ್ಕೊಂಡಿರೋದಕ್ಕೇ ಲಾಯಕ್ಕು ಅಂದ್ಕೊಳೋದ್ನ ನಾವು ಮೊದ್ಲು ಬಿಡಬೇಕು.

ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ


ಅಲ್ಲಿ-ಇಲ್ಲಿ, ಔರ್-ಇವರಿಗೆ ಚಿಲ್ಲರೆ ಕೆಲಸ ಮಾಡ್ಕೊಂಡು ಜೀವನ ಕಳೀತೀನಿ ಅಂದ್ರೆ ಯಾವ ಹೆಚ್ಚಿನ ಜ್ಞಾನವೂ ಬೇಕಾಗಿಲ್ಲ. ಆದ್ರೆ ಪ್ರಪಂಚದಲ್ಲಿ ಎಲ್ರಿಂದ್ಲೂ ಮೆಚ್ಚುಗೆ ಪಡೆಯೋಂಥಾ ವಸ್ತುಗಳ್ನ ತಯಾರಿಸ್ತೀನಿ, ಅತ್ಯುತ್ತಮ ತಂತ್ರಜ್ಞಾನ ಹುಟ್ಟಿಸ್ತೀನಿ ಅನ್ನೋ ನಮ್ಮ ಗುರಿ ಸಾಧಿಸಕ್ಕೆ ನಿಜವಾದ ತಿಳುವಳಿಕೆ ಬೇಕೇ ಬೇಕು. ಈ ನಿಜವಾದ ತಿಳುವಳಿಕೆ, ನಿಜವಾದ ಜ್ಞಾನಾನ ನಮ್ಮ ನುಡಿಯಲ್ಲೇ ಕಲಿಯಕ್ಕೆ ಸಾಧ್ಯ. ಇದಕ್ಕೆ ಇಸ್ರೇಲ್, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್...ಮುಂತಾದ ದೇಶಗಳೇ ಉದಾಹರಣೆಗಳು. ಇವರು ಯಾರೂ ತಮ್ಮ ನುಡಿ ಬಿಟ್ಟು ಬೇರೆ ಒಂದ್ರಲ್ಲಿ ಶಿಕ್ಷಣ ಪಡ್ಕೋತೀನಿ ಅನ್ನಲ್ಲ. ನಮ್ಮ ನುಡಿಯಲ್ಲಿ ಕಲಿಯೋದೇ ಸುಲಭ ಅಂತ ಪ್ರಪಂಚದ ವಿಜ್ಞಾನಿಗಳು ಬೊಡ್ಕೋತಾನೇ ಇದಾರೆ, ಆದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಕಟ್ಟೋರ್ ಕಿವೀಗೂ ಬೀಳ್ತಿಲ್ಲ, ಇವತ್ತು ಕಾಸಿಗಾಗಿ ಇಂಗ್ಲೀಷಿಗೆ ಮೊರೆ ಹೋಗ್ತಿರೋರ್ ಕಿವೀಗೂ ಬೀಳ್ತಿಲ್ಲ.

ಕನ್ನಡದಲ್ಲೇ ಒಳ್ಳೇ ಕಲಿಕೆ ಕೊಡೋಂಥಾ ವ್ಯವಸ್ಥೆ ಇವತ್ತು ಇಲ್ಲಾಂತ ನಮಗೂ ಗೊತ್ತಿದೆ. ಆದರೆ ಆ ವ್ಯವಸ್ಥೆ ಕಟ್ಟದೆ ಬೇರೆ ದಾರಿಯೇ ಇಲ್ಲ. ಕನ್ನಡದಲ್ಲೇ ಉನ್ನತ ಶಿಕ್ಷಣವೂ ಸಿಗಬೇಕು, ಕನ್ನಡದಲ್ಲೇ ಇಂಜಿನಿಯರಿಂಗು, ಕನ್ನಡದಲ್ಲೇ ಮೆಡಿಕಲ್ಲುಗಳು ಕಲಿಯೋ ಹಾಗಿರಬೇಕು. ಅದೇ ನಿಜವಾದ ವ್ಯವಸ್ಥೆ, ಆ ವ್ಯವಸ್ಥೆಯಿಂದ್ಲೇ ನಮ್ಮ ಕನಸು ನನಸಾಗಕ್ಕೆ ಸಾಧ್ಯ.

ಇದಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆಯೇನು?

ಉದ್ಯಮಶೀಲತೆ ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಕಟ್ಟಬೇಕು. ಇವೆಲ್ಲ ಆಗಬೇಕಾದ್ರೆ ನಾವು ಇಡ್ಬೇಕಾದ ಮೊದಲ ಹೆಜ್ಜೆ ಏನು? ಇದಕ್ಕೂ ಉತ್ರಾನ ಥಾಮಸ್ಸೇ ಕೊಟ್ಟಿದಾರೆ:
We should ensure that the best of us do not become available to the highest bidder.

ಇವತ್ತಿನ ದಿನ ಈ ರೀತಿ ಯೋಚ್ನೆ ಮಾಡ್ತಾ ಇರೋ ನಮ್ಮ-ನಿಮ್ಮಂಥವರು ಸಮಾಜದಲ್ಲಿ ಮೇಲ್ದರ್ಜೆಯೋರು ಅಂತ ಅನ್ನಿಸಿಕೊಂಡಿದೀವಿ. ನಮ್ಮ ಮುಂದೆ highest bidder ಗಳಿಗೆ ಕಡಿಮೆ ಏನು ಇಲ್ಲ. ಆದರೆ ಬರೀ ದುಡ್ಡಿಗೆ ಮುಗಿದುಬಿದ್ದು ನಾವು ನಮ್ಮ ಜೀವನವನ್ನ ಹಾಳು ಮಾಡಿಕೊಳ್ಳದೆ ನಾಡು ಕಟ್ಟಕ್ಕೆ ಏನು ಮಾಡಬೇಕು ಅಂತ ಗಂಭೀರವಾಗಿ ಯೋಚ್ನೆ ಮಾಡಬೇಕಾಗಿದೆ, ಹೀಗೆ ಚಿಂತನೆ ಮಾಡೋರೆಲ್ಲ ಒಗ್ಗೂಡಿ ಒಂದೊಂದೇ ಇಟ್ಟಿಗೆ ಇಟ್ಟು ಕನ್ನಡದ ಮನೇನ ಕಟ್ಟಾಬೇಕಿದೆ.

ಕಟ್ಮ ಬರ್ತ್ಯಾ ಗುರು?

15 ಅನಿಸಿಕೆಗಳು:

Anivaarya ಅಂತಾರೆ...

ಗುರು ನಿನ್ ಲೆಖನ ಸಾಕಷ್ಟ್ ಚೆನ್ನಾಗಿದೆ, ಆದ್ರೆ ಸ್ವಲ್ಪ idealistic! ಕೆಲವು ವಿಚಾರಗಳು ಪಕ್ವವಾಗಿಲ್ಲ, ಹೆಳಕ್ಕೆ ಚೆನ್ನಾಗಿರುತ್ತೆ, ಕೇಳಕ್ಕೂ ಚೆನ್ನಾಗಿರುತ್ತೆ ಆದ್ರೆ ಅವುಗಳದೇ ಆದ ಒಂದು ಚೌಕಟ್ಟಿನಲ್ಲಿ ಕೂತ ಅನೇಕ ಇಂತಾ ಯೊಚನೆಗಳ ಮಧ್ಯೆ ಇಡ ಬಹುದು ಅಷ್ಟೆ.

೧)"ಕನ್ನಡಿಗರು ಉದ್ಧಾರ ಆಗದೆ ದೂರದ ಪ.ಬಂಗಾಳ ಉದ್ಧಾರವಾದರೆ ನಮಗೇನು?", ಈ ತರ disintegrated ಆಗಿ ಯೊಚ್ಸುದ್ರೆ ಬರೀ short term ಉದ್ದಾರ ಸಾಧ್ಯ ಅಷ್ಟೆ. ಕರ್ನಾಟಕದ ಗಾತ್ರದ ದೇಷ ಯಾವುದಾದರೂ ಹೀಗೆ ಉದ್ಧಾರ ಆಗಿರೋದುಂಟೆ? ಸಿಂಗಾಪುರ ಇದೆ, ಅದು ಬೇರೆಯೇ ಕಥೆ. ನೀವು ಇಸ್ರೇಲ್, ಜಪಾನ್, ಜೆರ್ಮನಿ ಅಂತೆಲ್ಲಾ ಹೆಳುದ್ರಲ್ಲ ಅವ್ರ್ಗೆಲ್ಲಾ ರಾಷ್ಟ್ರೀಯತೆ ಅನ್ನೋದಿದೆ, ನಮಗೆ ಬರೀ ರಾಜ್ಯೀಯತೆ ಇದ್ರೆ ಸಾಕೆ?

೨)"ಕರ್ನಾಟಕದ ಹೊರಗಿರೋ ಭಾರತ ಕರ್ನಾಟಕದ 99% ಜನರಿಗೆ ಭಾರತವೇ ಅಲ್ಲ", ಇಲ್ಲಿ ಮಾತು ನಡೀತಾ ಇರೋದು ಆ ೯೯% ಬಗ್ಗೆ ಅಲ್ಲ, ಇದು ಸಾಕಷ್ಟು "ಅರ್ಬನ್ ಟಾಲ್ಕ್" ಅಂತಾರಲ್ಲ ಹಾಗೆ. ಇಲ್ಲಿ ಮಾತು ಬಂದಿರೋದು technology ಬಗ್ಗೆ, technological innovation ಬಗ್ಗೆ, ಆದ್ದರಿಂದ ನಿಮ್ಮ basic premiseಏ ಸ್ವಲ್ಪ ಅಲಗಿದೆ, ಸರಿ ಇಲ್ಲ. ಆದ್ರಿಂದ ಭಾರತ ಅಂದ್ರೆ ಭಾರತವೇ ಆಗಬೇಕು. ಹೀಗೆ ಕಿತ್ತು-ಚಿಂದಿ ಮಾಡೋ ಅನಾಲಿಸಿಸ್ ಸರಿ ಬರಲ್ಲ. ಬರೀ ಜೋಶ್ ಬರ್ಸುದ್ರೆ ಸಾಲ್ದು, ಸತ್ವ ಇರ್ಬೇಕು. ಭಾರತ ಅನ್ನೋದನ್ನ ಒಂದು ಅಂತ ನೋಡದೇ ಇದ್ದಲ್ಲಿ ಈ ಕನಸು ಅರೆ ಕನಸಾಗೋದ್ರಲ್ಲಿ ಸಂದೇಹವೇ ಇಲ್ಲ.

೩)" "ಇಂಥದ್ದು ಬೇಕು" ಅಂತ ಯಾರಿಗೆ ಮೊದ್ಲು ಅನ್ನಿಸತ್ತೋ ಔನಿಗೇ ಅದನ್ನ ಮಾಡಕ್ಕೆ ತುಡಿತ ಬರೋದು, ಅವನೇ ಮಾಡೋದು." ಇದರಲ್ಲಿ ಎರ್ಡ್ ಮಾತಿಲ್ಲ, ಸರೆಯಾಗಿ ಹೆಳಿದ್ರಿ. ಆದ್ರೆ ಇದನ್ನ ಯಾರೂ ಹೇರಕ್ಕಾಗಲ್ಲ, ಹೇಳ್ಕೊಡಕ್ಕಾಗಲ್ಲ. entrepreneurial aspirationsಗೆ ಯಾರೂ ತರಬೇತಿಯಾಗ್ಲೀ ಕೊಡಕ್ಕಾಗಲ್ಲ. ಆದ್ರೆ ಕನ್ನಡಿಗರು ಮಾಡಿರೋ ನೂರಾರು ಕಂಪನಿಗಳನ್ನ ನೋಡಿ, ನಾರಾಯಣ ಮೂರ್ತಿ ಅವರ ಗುಂಪನ್ನ ನೋಡಿ, ಮಾಡ್ಬೇಕು ಅನ್ನೋ ಚಲ ಬೇಕು ಅಷ್ಟೆ. ಎಲ್ಲರೂ ತಮ್ಮದೆ ಆದ ಉಧ್ಯಮಶೀಲತೆ ಇರುತ್ತೆ. ಕೆಲವರಿಗೆ ಇದು ಸ್ವಲ್ಪ ಜಾಸ್ತಿ ಇರುತ್ತೆ, ಹೇಗೆ ಯಾಕೆ ಅಂತ ತಿಳ್ಕೊಳಕ್ಕೆ ಇನ್ನೂ ಮುಕ್ಕರಿತಾ ಇದಾರೆ ನನ್ ಜೊತೆ ಇರೊ ಕೆಲವು anthropology ಓದೋ ಸ್ನೇಹಿತರು. ಆದ್ರಿಂದ ನೀವು ಹೇಳೊ ಅಷ್ಟು ಸುಲುಬದ ವಿಷಯವಲ್ಲ. ಆದಲ್ಲಿ ಒಳ್ಳೆಯದು, ಆದ್ರೆ overnight ಆಗೋ ಅಂತ ಮಾಯ ಅಲ್ಲ ಅದು.

೪)"ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ", ಶಿಕ್ಷಣಕ್ಕೂ ಉಧ್ಯಮಶೀಲತೆ ತುಂಬಾ ಜಾಸ್ತಿ ಸಂಭಂದವಿಲ್ಲ ಅನ್ನಕ್ಕೆ ಸಾಕಷ್ಟು ಉಧಾಹರಣೆ ಇವ. ಬಿಲ್ ಗೇಟ್ಸ್ ಆಗ್ಲೀ, ಅಂಬಾನಿ ಆಗ್ಲೀ, ಎಡಿಸನ್ ಆಗ್ಲೀ ಎಲ್ಲಾ ಓದಿಲ್ದೇ ಇರೋ ಅಂತ ಪಂಟ್ರುಗಳೆ. ಅವರಿಗೆ ಇದ್ದ ಕಿಚ್ಚು ಬೇಕು ಅಷ್ಟೆ, ಇಲ್ದೇ ಇದ್ದ್ರೆ harvard educate ಆದ್ರೂ ಅಷ್ಟೆ ಮರಮ್ಮನ ದೋಡ್ಡಿ ಸ್ಕೂಲ್ ಆದ್ರೂ ಅಷ್ಟೆ. ಇಸ್ರೇಲ್, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ಅಂತೆಲ್ಲಾ ಉಧಾಹರಣೆ ತೊಗೊಂಡ್ರಲ್ಲ ಇವಲ್ಲಿ ಯಾವ್ದುವೇ ದಬ್ಬಾಳಿಕೆಯಲ್ಲಿರ್ರ್ಲಿಲ್ಲಾ (ಇತ್ತು, ಆದ್ರೆ ನಮ್ಮಷ್ಟಲ), ಬೆಳವಣಿಗೆಯ ಮೇಲೆ ಹಿಡಿತವಿರಲಿಲ್ಲ. ಉದ್ಧಾರ ಆಗಿರೋದು ಬೇರೆ ಒಂದು ದೇಷನ ತುಳ್ದು ಎಕ್ಸಪ್ಲಾಯ್ಟ್ ಮಾಡಿ. ಅವರಿಗೆಲ್ಲ necessity is the mother of innovation ಅಂತಾರಲ್ಲ ಹಾಗೆ ಆಯ್ತು ಅಷ್ಟೆ. ನಮ್ ದೇಷ ಈಗ ಇನ್ನೂ ಚೇತರ್ಸ್ಕೊಳ್ಳೋದ್ರಲ್ಲೆ ಇದೆ, ನಮ್ಮ ರಾಜಕಾರಣಿಗಳು ಅದಕ್ಕೆ ಅಡ್ಡ ನಿಂತಿದ್ದಾರೆ ಅಷ್ಟೆ. ಇವೆಲ್ಲಾ ದೇಶ ದೇಶವಾಗೇ ಇವೆ, ನಂದು ಚಿಂದಿ ಚಿತ್ತ್ರಾನ್ನ ಆಗಿದೆ. ಈ ಡೈವರ್ಸಿಟಿ ಅನ್ನೋ ಹಾವು ಕಚ್ಚೀ ಕಚ್ಚಿ ಸಾಯಿಸ್ತಾ ಇದೆ ನಮ್ ದೇಶನ್ನ. ನಮ್ ದೇಶ ನಮ್ಗೇ ಬೇಡ, ನಾವು ಉದ್ದಾರ ಆದ್ರೆ ಸಾಕು ಅನ್ನೋ ಮನೋಭಾವ ಇರೊ ತನ್ಕ ಈ ನಿಮ್ ಉಧಾಹರಣೆ ಸರಿ ಇಲ್ಲ.

ನಮ್ಮ ಭಾಷೆಯಲ್ಲೇ ಕಲಿಯೋದಕ್ಕಿಂತ ಉತ್ತಮವಾದ ಕಲಿಕೆ ಬೇರೆ ಇಲ್ಲ, ಅದು ನಿಜ, ಆದರೆ ನಮ್ಮ ಶಿಕ್ಷಕರು ತಯಾರಾಗಿದ್ದಾರೆಯೆ? ಸಿಸ್ಟೆಮ್ ತಯಾರಿದೆಯೇ? ತಂದೆ-ತಾಯಿಯರು ತಯಾರಿದ್ದಾರೆಯೆ? ಸರ್ಕಾರ ಒಂದು ರೂಲ್ ಮಾಡುದ್ರೆ ಸಾಲ್ದು ಅದು ಒಂದು ಸಿಸ್ಟಮ್ಯಾಟಿಕ್ ಪ್ರೋಸಸ್ ಅನ್ನೋದನ್ನ ಮರೀ ಬಾರ್ದು. ಸಮಯ ತೊಗೊಳುತ್ತೆ ಆದ್ರೆ ಶುರು ಮಾಡ್ಬೇಕು, ಹೇಗೆ ಶುರು ಆಗುತ್ತೆ? ಈ ಬ್ಲಾಗೆಲ್ಲಾ ಒಳ್ಳೆದು ಆದ್ರೆ ಇದಕ್ಕಿಂತಾ ಮಿಗಿಲಾದ action, execution, implementation ಬೇಕು. idealistic ಆಗಿ ಮಾತಾಡೊ ಹಾಗಿದ್ರೆ ಹೀಗೇ ನೂರಾರು ಸಲಹೆಗಳು ಕೊಡಕ್ಕೆ ನಂಗೆನ್ ಕಷ್ಟ ಹೇಳಿ!

ಅದನ್ನ ಅಳವಡಿಸೋದಕ್ಕೆ ಬೇಕಾದ ಪ್ರಯೊಗಗಳಿಗೆ ಸ್ವಲ್ಪ ಯೊಚನೆ, ಯೊಜನೆ ಮುಖ್ಯ. ಅದಕ್ಕೆ ರಾಜಕೀಯ ದೃಡತೆ ಬೇಕು, ಅದೇ ಇಲ್ದೆ ಈ ತಿಪ್ಪಣಿಗಳ್ಗೆ ಅರ್ಥವೇ ಇಲ್ಲ. ಮೊದಲು ರಜಕೀಯಕ್ಕೆ ಇಳೀರಿ ಆಮೆಲೆ ಮುಂದಿನ ಮಾತು!!!

Anonymous ಅಂತಾರೆ...

ಯಾರಯ್ಯ ಅದು?!

ನಿಮ್ಮ ಅನಿಸಿಕೆ ಓದಿ ಈ ಫೋರಮ್-ನಲ್ಲಿ ಇಂತಹ ವಿಷಯಗಳ ಬಗ್ಗೆ ತೆರೆದ ಮನಸ್ಸಿನಿಂದ ಮತ್ತು ಬೀದಿನಾಯಿಗಳ ತರಹ ಮಾತನಾಡದೆ ಸಂಯಮದಿಂದಲೂ ಉತ್ತರ ಕೊಡುವ ಜನ ಇದ್ದಾರೆ ಎಂದು ಸಂತೋಷವಾಯಿತು. ನಿಮ್ಮ ಅನಿಸಿಕೆಗಳಿಗೆ ನನ್ನ ಅನಿಸಿಕೆ:

೧) ಇಲ್ಲಿ ಯಾವ disintegrated ಯೋಚನೇನೂ ನನಗೆ ಕಾಣಿಸುತ್ತಿಲ್ಲ. ನಮ್ಮನ್ನು ನಾವು ಕನ್ನಡಿಗರು ಅಂತ ಅಂದುಕೊಂಡ ತಕ್ಷಣ ನಿಮಗೆ disintegration ಅಂತ ಯಾಕೆ ಅನ್ನಿಸಬೇಕು? ಪ.ಬಂಗಾಳದ ಉದಾಹರಣೆ ನಿಜಕ್ಕೂ ಸರಿಯಾಗಿದೆ. ಅಲ್ಲಿಯ ಜನರಿಗೆ ಪೆಟ್ರೋಲ್ ಹತ್ತು ರೂಪಾಯಿ ಕಡಿಮೆಗೆ ಸಿಕ್ಕಿತು ಅಂದುಕೊಳ್ಳಿ...ಅದರಿಂದ ನಿಮಗೆ ಯಾಕೆ ಖುಷಿ? ಪೆದ್ದತನದ ಮಾತು ಆಡಬೇಡಿ.

೨) ರಾಷ್ಟ್ರೀಯತೆ ಅನ್ನೋ ಪದ ಅರ್ಥ ಮಾಡಿಕೊಳ್ಳಿ. ಭಾರತ ಮಟ್ಟಿಗೆ ರಾಷ್ಟ್ರೀಯುತೆ ಎಂದರೆ ಕರ್ನಾಟಕಕ್ಕೆ ನಿಮ್ಮ ಬದ್ಧತೆಯಷ್ಟೇ. ಕರ್ನಾಟಕದಲ್ಲಿ ಇಂಥದ್ದು ಮಾಡಿ ತೋರಿಸಿ ಅಂದರೆ "ಇಲ್ಲ ಇಲ್ಲ, ನಾನು ಪ.ಬಂಗಾಳಾನ ಉದ್ಧಾರ ಮಾಡ್ತಿದೀನಿ" ಅನನ್ನೋರು ಬರೀ escapists ಅಷ್ಟೇ. ಯೋಗ್ಯತೆ ಇದ್ದರೆ ಇಲ್ಲೇ ಕೆಲಸ ತೋರಿಸಬೇಕು. ಮನೇಲೇ ಬೆಂಕಿ ಬಿದ್ದಿದೆ ಅನ್ನುವಾಗ ಇಲ್ಲ ಇಲ್ಲ, ಬೆಂಕಿ ಇಲ್ಲವೇ ಇಲ್ಲ ಅನ್ನುವವರು, ಅಥವಾ ಪಕ್ಕದ ಮನೆ ಬೆಂಕಿಯ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ ಅನ್ನುವವರು ಹಡ-ಸೋಮಾರಿಗಳು, ಅಷ್ಟೆ?

೩) ಉದ್ಯಮಶೀಲತೆ overnight ಹೆಚ್ಚಬೇಕು ಅಥವಾ ಹೆಚ್ಚಲಿ ಅಂತ ಲೇಖನದಲ್ಲಿ ಹೇಳಲಿಲ್ಲವಲ್ಲ? ಎಲ್ಲಾ overnight ಆಗಬೇಕು, ಯಾಕೆ ಅಂದರೆ "ಈ night ಆದಮೇಲೆ ನನಗೆ ಬೇರೆ ಕೆಲಸ ಇದೆ", ನಾಡಿನ ಏಳಿಗೆಗೆ ನನ್ನ ಬದ್ಧತೆ ಈ night ಇರುವ ವರೆಗೆ ಮಾತ್ರ ಅಂದುಕೊಂಡಿರುವವರೇ ನಿಮ್ಮಂಥ ಮಾತನ್ನು ಹೇಳುವುದು!

೪) ಭಾರತ ಒಂದಲ್ಲ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಭಾರತ ಒಂದೇ. ಹಾಗೆಯೇ ಭಾರತ ಬೇರೆಬೇರೆಯೂ ಕೂಡ. "ಡೈವರ್ಸಿಟಿ ಅನ್ನೋ ಹಾವು ಕಚ್ಚೀ ಕಚ್ಚಿ ಸಾಯಿಸ್ತಾ ಇದೆ ನಮ್ ದೇಶನ" ಎಂದು ನೀವು ಅಂದುಕೊಂಡಿರುವುದು ತಪ್ಪು. ಕಚ್ಚಿ ಕಚ್ಚಿ ಸಾಯಿಸ್ತಾ ಇರುವುದು ಡೈವರ್ಸಿಟಿ ಅಲ್ಲ, ಡೈವರ್ಸಿಟೀನ ಮ್ಯಾನೇಜು ಮಾಡಕ್ಕೆ, ಡೈವರ್ಸಿಟೀನ ಮೆರೆಸುತ್ತಲೇ ಯೂನಿಟೀನ ಕಾಪಾಡಿಕೊಳ್ಳಕ್ಕೆ ಆಗದೇ ಇರುವ ಮೂರ್ಖತನ.

೫) ನಮ್ಮ ಭಾಷೆಯಲ್ಲೇ ಕಲಿಕೆ ಆಗಬೇಕು, ಆದರೆ ಅದು ಆಗಬೇಕಾದರೆ action, execution, implementation ಸರಿಯಾಗಿ ಆಗಬೇಕು ಅನ್ನುವುದು ನಿಜ. ಆದರೆ ಇವೆಲ್ಲ overnight ಆಗುತ್ತದೆ ಅಂದುಕೊಳ್ಳಬೇಡಿ. You need to toil many nights before this can happen. The question is, are you ready?

Anonymous ಅಂತಾರೆ...

Ravi! I think it is time to ask yourself the question, are YOU ready? will YOU toil and not just talk about toiling? talking great things is easy, show some evidence of "readiness"! I would be glad to see a glowing India, which is Karnataka.

Anonymous ಅಂತಾರೆ...

ನಮಸ್ಕಾರ ಗುರುಗಳೇ,
ಇ ದಿಶೆಯಲ್ಲಿ ಮೊದಲ ಹೆಜ್ಜೆ ಅಂದ್ರೆ ಕನ್ನಡ ಮಾಧ್ಯಮದ ಸರಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಶಣ ಮಟ್ಟಾದ ಸುಧಾರಣೆ. ಕನ್ನಡ ಮಾಧ್ಯಮದ ಜೊತೆ ಅಲ್ಲಿನ ಶಾಲೆಗಳಲ್ಲಿ computer ಶಿಕ್ಷಣ, ರಾಜಕೀಯ ಪ್ರಜ್ಜ್ನೆ, ಉದ್ಯಮಶೀಲತೆ ಬೆಳೆಸುವಂತ ಶಿಕ್ಷಣ ನೀತಿ ರೂಪಿಸುವುದು. ಇದಕ್ಕೆಲ್ಲಾ ತುಂಬ ಹಣ ಬೇಡ. ಕೊಂಚ ರಾಜಕೀಯ ಇಚ್ಚಾ ಶಕ್ತಿ, ಕೊಂಚ ಮುಂದಾಲೋಚನೆ ಬೇಕು.IT capital ಬೆಂಗಳೂರಿನಲ್ಲಿ ಎಲ್ಲಾ ವಿಷಯಗಳ ಪರಿಣಿತರು ಲಭ್ಯರಿದ್ದಾರೆ.ನಮ್ಮ ಶಿಕ್ಷಣ ಇಲಾಖೆ ಅವರ ಸೇವೆ ಪಡೆದುಕೊಂಡು ಇ ದಿಶೆಯಲ್ಲಿ ನಡೆಯಬೇಕು.ಬೇರೆ ಏನು ಬೇಡ, ಪಕ್ಕದ ಗುಜರಾತ್, ತಮಿಳುನಾಡು, ಕೇರಳ, ಆಂಧ್ರಕ್ಕೆ ಹೊಲಿಸಿದರು ಗೊತ್ತಾಗುತ್ತೆ ನಾವು ಉದ್ಯಮಶೀಲತೆಯಲ್ಲಿ ಎಷ್ಟು ಹಿಂದೆ ಇದ್ದೆವೆ ಎಂದು. ಇಂದಿನ ಮಕ್ಕಳಲ್ಲೆ ನಾವು ಭಾಷೆಯ ಬಗ್ಗೆ ಒಲವು, ಆಕ್ರಮಣಕಾರಿ, ಮುನ್ನುಗ್ಗುವ ಛಾತಿ, ಅತ್ಯುತ್ತಮ ಶಿಕ್ಷಣ ವ್ಯವಸ್ತೆ ಕಲ್ಪಿಸಿದರೆ ನಮ್ಮ ಸಮಸ್ಯೆ ಅರ್ಧ ಪರಿಹಾರ ಆಗುತ್ತೆ. ಸಮಸ್ಯೆ ಬಗ್ಗೆ ಚರ್ಚೆ ಮಾಡೊಕು ಅಡ್ಡ ಬಾಯಿ ಹಾಕಿದ್ರೆ, ನಾವೆಲ್ಲ ಹೇಗಿದ್ದಿವೊ, ಹಾಗೆ ಉಳಕೊಳ್ಳತಿವಿ, ಬಾಯಿ ಬಡಕೊಳ್ಳೊದನ್ನ ಮಾತ್ರ ಮುಂದುವರಿಸಿ. ಬನವಾಸಿ ಬಳಗದ ಪ್ರಯತ್ನ ಒಂದು ಮೊದಲ ಹೆಜ್ಜೆ. ನಿಮ್ಮೊಂದಿಗೆ ನಾವಿದ್ದೆವೆ ಸರ್.

Anonymous ಅಂತಾರೆ...

Anonymous, Write to banavasibalaga AT gmail DOT com. We're ready. Let's see what we can do together.

Anonymous ಅಂತಾರೆ...

ಹೌದು ಗುರು, ಸರಿಯಾದ್ ಮಾತು ಹೇಳಿದಿರ. ಮೊದಲು ನಮ್ಮ ರಾಜ್ಯ ಉದ್ದಾರ ಮಾಡ್ಕೊಳ್ಳೋಣ. ನಮ್ಮನ್ನು ನೋಡಿ ಪಕ್ಕದ ತಮಿಳಿನವರು ಆಗಲಿ, ಹಾಗೆಯೆ ದೂರದ ಬಂಗಾಲಿಗಳು ಕಲಿಯಲಿ. ಹಾಗೆಯೆ ಇಡೀ ಭಾರತ ಉದ್ದಾರವಾಗುತ್ತೆ. ತಮಿಳ್ನಾಡು ನಮ್ಮ ದೇಶದಲ್ಲೆ ಇದೆ ಅಂತ ಅವರಿಗೆ ನಮ್ಮ ಕಾವೇರಿ ನೀರು ಬಿಡ್ತಿವ? ಹಾಗೆ ನಾವು ಬಿಡೊದಿಲ್ಲ ಅಂತ ಅವರು ಕರ್ನಾಟಕ ನಮ್ಮ ದೇಶದಲ್ಲೆ ಇದೆ ಪರ್ವಾಗಿಲ್ಲ ಅಂತ ಸುಮ್ನಿರ್ತಾರ? ಎಲ್ಲರು ಅವರವರ ಏಳಿಗೆ ಬಗ್ಗೆನೆ ಯೋಚನೆ ಮಾದೋದು. ನಾವು ಮಾತ್ರ ಭಾರತ, ರಾಶ್ತ್ರೀಯತೆ ಅಂತ ಹೊಡ್ಕೊತಿರ್ತಿವಿ.

ಇನ್ನು ೧೦೦ ವರ್ಷ ಬೇಕಾದ್ರು ತಗೊಳ್ಳಿ ಶಿಕ್ಷಣವನ್ನ ಸಂಪೂರ್ಣ ಕನ್ನಡದಲ್ಲೆ ಮಾಡೋಣ. ಈ ಬ್ಲಾಗ್ ನಲ್ಲಿ ಬರೆದಿರುವುದೆ ಇದಕ್ಕೆ ಮೊದಲ ಹೆಜ್ಜೆ. ಈ ಕೆಲಸಕ್ಕೆ ನಾನು ರೆಡಿ ಗುರು ಇದನ್ನು ಮಾಡಲಿಕ್ಕೆ ಏನೇನು ತಗೋಳತ್ತೊ ಎಲ್ಲಾನು ಮಾಡೋಕ್ಕೆ ರೆಡಿ.

Anonymous ಅಂತಾರೆ...

ಮತ್ತೊಂದು ಒಳ್ಳೇ ಬರಹ ಗುರು..

ಸೂಪರ್‍.. ನಿನ್ ಬರೆಯಪ್ಪ.. ಇವರ ಮಾತಿಗೆಲ್ಲ ತಲೆ ಕೆಡ್ಸ್ಕೋಬೇಡ

Anonymous ಅಂತಾರೆ...

HOUDU... houdu..namage shikshaNa kannaDadalle beku..

Rohith B R ಅಂತಾರೆ...

raviyavarige uttaravAgi anonymous Agi bardirO "anonymous" avru tiLkoLbEkAgirOdu iShTE. "nIvu tayyAridIrA" annO prashne alla illi ettirOdu. illi baMdiruva vicAra - uddArada kelasa mADalu horaDONa, kelasakke hIgIge kaShTagaLu barbOdu, iShTu janaru bEkAgbOdu, iShTu tyAgagaLu mADbEkAgbOdu, "nAnu mADalu tayyAridIni" aMta. Agatte aMdre nIvU kUDa "nAnu siddha" anni, illdE iddre aMtauranna tOrsikoDi! erDnEdU kUDa nIvu mADuva (uttamavAda) sEveyE anskoLatte..

Anonymous ಅಂತಾರೆ...

howdu guru. nanu nirdara madidhini innu 2 varshadalli enadru chikka (munde adu doddadagatte) samsthe shuru madoNa antha. chennagi bartha ide guru. yarige ene annisle nanna vicharadharene ninna vicharavu kooda.

karuna

Vijendra ( ವಿಜೇಂದ್ರ ರಾವ್ ) ಅಂತಾರೆ...

ಮೊಟ್ಟ ಮೊದಲು ನಮ್ಮ ಪ್ರಾಥಮಿಕ ಶಿಕ್ಶಣ ಬದಲಾಗ್ಬೇಕು.. ಮಹಮದ್ ಘಸ್ನಿ ಭಾರತದ ಮೇಲೆ ಎಷ್ಟು ಭಾರಿ ಆಕ್ರಮಣ ಮಾಡಿದ ಎಂಬುದಕ್ಕಿಂತ, ನಮ್ಮ ನಾಡು ನುಡಿಯ ಬಗೆಗಿನ ಇತಿಹಾಸದ ಚಿನ್ನದ ಪುಟಗಳ ಬಗ್ಗೆ ಅರಿವು ಮೂಡಿಸುವುದು ತುಂಬಾ ಮುಖ್ಯ.. ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಲು ಅದು ತುಂಬಾ ಅಗತ್ಯ..

Anonymous ಅಂತಾರೆ...

ವಿಜೇಂದ್ರ ಅವರ ಮಾತು ಚನ್ನಾಗಿದೆ.!

Anivaarya ಅಂತಾರೆ...

ಗುರು ರವಿ, ಒಳ್ಳೆ ತಿಪ್ಪಣಿ ...

"ಇಲ್ಲಿ ಯಾವ disintegrated ಯೋಚನೇನೂ ನನಗೆ ಕಾಣಿಸುತ್ತಿಲ್ಲ"

- ಸರ್ಯಾಗಿ ಹೇಳ್ದ್ರೀ ನಿಮ್ಗೆ ಕಾಣಿಸಲಿಲ್ಲ ಅಂತ. ನನಗೆ ಕಾಣಿಸ್ತು, ಹೇಳ್ದೆ ಅಷ್ಟೆ! ನೋಡೊ ರೀತಿ ಮೇಲೆ ಆದರವಾಗಿರುತ್ತೆ ಅಲ್ವೆ?!! ಈಗ ದೃಷ್ಟಿಕೋಣಗಳ ಮೇಲೆ ಲೇವ್ಡಿ, ವ್ಯಂಗ ಮಾಡಲು ಪ್ರಯತ್ನಿಸಬೇಡಿ ಯಾಕಂದ್ರೆ ಲೇವ್ಡಿ ಮಾಡೋದು ಸುಲಬ. ಅನಸಿಕೆಗಲನ್ನ ಬಿಚ್ಚಿ ಹೇಳೊ, ಹೊಸ ಹೊಸ ದೃಷ್ಟಿ ಕೋಣಗಳು ಹೊರ ಬರುವಂತೆ ಪ್ರಯತ್ನ ಮಾಡೊ ದಯವಿಟ್ಟು ಅವಕಾಶ ಮಾಡ್ಕೊಡಿ.

"ನಮ್ಮನ್ನು ನಾವು ಕನ್ನಡಿಗರು ಅಂತ ಅಂದುಕೊಂಡ ತಕ್ಷಣ ನಿಮಗೆ disintegration ಅಂತ ಯಾಕೆ ಅನ್ನಿಸಬೇಕು?"

- ನಮ್ಮ ಅಬ್ದುಲ್ ಕಲಾಮ್ ಅವರ ಲೆಖನ ಓದುದ್ರೆ ಅನ್ನಿಸೋ ಸಾಧ್ಯತೆ ಇದೆ!! ರಾಜ್ಯ ಮತ್ತು ದೇಷ ಎರಡರ ಮೇಲೂ ವಟ್ಟಿಗೆ ಗಮನ ಹರಿಸಬೇಕು ಅನ್ನೋ viewpoint. ನೀವು ಹೀಗೆ ಮಾಡ್ತಿಲ್ಲ ಅಂತ ನಾನು ನಿಜ್ವಾಗ್ಲೂ ಹೇಳ್ತಿಲ್ಲ. There are limitations to written communication, hope that is acknowledged, I do.

"ಅಲ್ಲಿಯ ಜನರಿಗೆ ಪೆಟ್ರೋಲ್ ಹತ್ತು ರೂಪಾಯಿ ಕಡಿಮೆಗೆ ಸಿಕ್ಕಿತು ಅಂದುಕೊಳ್ಳಿ... ಅದರಿಂದ ನಿಮಗೆ ಯಾಕೆ ಖುಷಿ? ಪೆದ್ದತನದ ಮಾತು ಆಡಬೇಡಿ."

- ಪೆದ್ದತನ, ಹುಚ್ಚುತನ ಅನ್ನೋ adjectives ಸರ್ವೇ ಸಾಮಾನ್ಯವಾಗಿ ಬಳಿಸೋದು ಬೇಡ ಗುರು :) ಸುಮ್ನೆ ಯಾಕೆ ನನ್ ಕಾಲ್ ಕೆರೀತೀರಾ? ನಿಮ್ಮ ಉಧಾಹರಣೆ ಚೆನ್ನಾಗಿದೆ ಆದ್ರೆ ಸ್ವಲ್ಪ ಆಫ್ಸೆಟ್ ಆಗಿದೆ ಅನ್ನಿಸ್ತು. ಯೋಚ್ಸಿ, ನ್ಯೂಕ್ಲಿಯಾರ್ ಟೆಸ್ಟ್ ಆಯ್ತಲ್ಲ, ಅಥವ ನಮ್ಮ ಕ್ರಿಕೇಟ್ ಪಟುಗಳು ಗೆದ್ದರಲ್ಲ, ಇನ್ಫೋಸಿಸ್ ಉದ್ದಾರ ಆಗ್ತಾ ಇದ್ಯೆಲ್ಲಾ, ಹಾಗೆ ನ್ಯಾಷನಲ್ ಗೆಲುವಿನ ಗುರಿ ಇರಬೇಕು. ಬರೀ ರಾಜ್ಯ ಮತ್ತು ರಾಜ್ಯದ ಜನತೆ ಉದ್ಧಾರ ಆದ್ರೆ ಸಾಲ್ದು, ಭಾರತವೇ ಉದ್ಧಾರ ಆಗ್ಬೇಕು; ರಾಜ್ಯಾನೇ ಭಾರತ ಅನ್ನೋ premise ಮೇಲೆ ನನ್ನ ಅನಿಸಿಕೆ ಇದ್ದಿದ್ದು. ರಾಜ್ಯ ಉದ್ಧಾರ ಆದ್ರೆ ರಾಷ್ಟ್ರ ಉದ್ಧಾರ ಆಗುತ್ತೆ ನಿಜ, ಹಾಗಂತ ಶುರುನೇ ಆ ತರಹ ಮಾಡ್ಬೇಕಿಲ್ಲ ಅಂದೆ ಅಷ್ಟೆ. micro ಮತ್ತು macro level developmentsನ ವ್ಯತ್ಯಾಸ ಮತ್ತು ಅವುಗಳ ಸಂಬಂಧ ಗೊತ್ತಿದೆ ನಿಮಗೆ ಅಂತ ಗೊತ್ತು, ಆದ್ರಿಂದ ಜಾಸ್ತಿ ಹೇಳೋಲ್ಲ. ರಾಜ್ಯ ಮಠ್ಠದ ಬೆಳವಣಿಗೆ ಆಗಲೇ ಬೇಕು, ರಾಜ್ಯಗಳ ಮದ್ಯೆ ಪೈಪೋಟಿ ಇರ್ಬೇಕು, ಅದು ಸಕ್ಕತ್ ಒಳ್ಳೆದು ರಾಷ್ಟ್ರಕ್ಕೂ. ಅದ್ರಿಂದ ಅದರ ಬಗ್ಗೆ ನಾನು ಟೀಕೆ ಮಾಡ್ಲಿಲ್ಲ. ನಮ್ಮ ಚಿಂತನೆ ಈ ಬ್ಲಾಗಿನ ಉದ್ಧೇಶ ನಾವು ಉದ್ಧಾರ ಆದ್ರೆ ಸಾಕು ಅಂತ ಅಲ್ಲ ಅಂತಾನೂ ಗೊತ್ತು ಆದ್ರೂ. ಆದ್ರೆ ಮಿಕ್ಕ ಬ್ಲಾಗ್-ಗಳ್ನ ನೋಡ್ದಾಗ ತೀಮ್ ಸ್ವಲ್ಪ ಹಾಗೆ ಕಣ್ಸುತ್ತೆ ಅದಕ್ಕೆ ಹೇಳ್ದೆ ಅಷ್ಟೆ. ದೂರ (ದುರಾ ಅನ್ನಿಸೋದು ಸಹಜ) ದೃಷ್ಟಿ ಇಂದ ನೋಡಿದಾಗ ಭಾರತವನ್ನ ಭಾರತವನ್ನಾಗೇ ಕಾಣಬೇಕು ಅಂತ ಅನ್ನಿಸ್ತು ಅದನ್ನ ಹೇಳ್ದೆ ಅಷ್ಟೆ.

"ರಾಷ್ಟ್ರೀಯತೆ ಅನ್ನೋ ಪದ ಅರ್ಥ ಮಾಡಿಕೊಳ್ಳಿ"
- ಗುರು, ಅರ್ಥ ಆಗಿರೋದಕ್ಕೆ ಹೇಳಿದ್ದು.

""ಇಲ್ಲ ಇಲ್ಲ, ನಾನು ಪ.ಬಂಗಾಳಾನ ಉದ್ಧಾರ ಮಾಡ್ತಿದೀನಿ" ಅನನ್ನೋರು ಬರೀ escapists ಅಷ್ಟೇ."

- ಪ.ಬಂಗಾಲ ಉದ್ದಾರ ಆದ್ರೆ ಹೊಟ್ಟೆ ಉರ್ಕೊಳ್ಳೋದು ಸರಿನಾ ಅಂತ ಕೇಳ್ದೆ ಅಷ್ಟೆ. ಗುರು ಎಲ್ಲರೂ ಒಂದ್ ತರ escapistsಏ. ಎಲ್ಲಿ opportunity ಇರುತ್ತೋ, ಸಿಗುತ್ತೋ, ಅಲ್ಲಿಗೆ ಹೋಗೋ ಮನೋಭಾವ ಎಲ್ಲರಿಗೂ ಇರುತ್ತೆ ಬರೀ ಕನ್ನಡಿಗರೆಗೆ ಆಗ್ಲೀ ಹೊರ ದೇಷದವರಿಗೇ ಆಗ್ಲೀ, ಅದನ್ನ opportunists ಅಂತಾರೆ. ಬೆಳ್ಳಿ ಚಮಚ ದಿಂದ ಬೇಳೆದ ಕೆಲವರಿಗೆ ಇದರ ಅರಿವು ಇರಲ್ಲ.

"ಯೋಗ್ಯತೆ ಇದ್ದರೆ ಇಲ್ಲೇ ಕೆಲಸ ತೋರಿಸಬೇಕು"
- ಯೋಗ್ಯತೆ ಇದ್ದೋರು ಎಲ್ಲಿಗೇ ಹೋದರೂ ಸಾದಿಸಿ ತೋರ್ಸ್ತಾರೆ ಗುರು, ಅಲ್ಲೇ ತಮ್ಮ ಭಾಷೆ ಮತ್ತು ದೆಷಕ್ಕೆ ಹೆಸರು ತರ್ತಾರೆ.

"ಮನೇಲೇ ಬೆಂಕಿ ಬಿದ್ದಿದೆ ಅನ್ನುವಾಗ ಇಲ್ಲ ಇಲ್ಲ, ಬೆಂಕಿ ಇಲ್ಲವೇ ಇಲ್ಲ ಅನ್ನುವವರು, ಅಥವಾ ಪಕ್ಕದ ಮನೆ ಬೆಂಕಿಯ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ ಅನ್ನುವವರು ಹಡ-ಸೋಮಾರಿಗಳು, ಅಷ್ಟೆ?"

- ಇದು ನಮ್ಮ ಕಾಂಟೆಕ್ಸ್ಟ್ ಇಂದ ಆಚೆ ಇದೆ, ಆದ್ರೂ ... ಇಲ್ಲದ ಬೆಂಕಿಯನ್ನ ಕಾಣುವವರನ್ನ ಏನ್ ಅನ್ಬೇಕು ಹೇಳಿ. ಸ್ವಲ್ಪ ಬಿಸಿ ಇದೆ, ಸ್ವಲ್ಪ ಕಾಳಜಿ ಬೇಕು, ಸ್ವಲ್ಪ ತಯಾರಿ ಬೇಕು, ತುಂಬಾ ಕುಣ್ದಾಡ್ಧ್ರೆ ಕೈ ಮೀರಿ ಹೋಗುತ್ತೆ. ಹಾಗಂತ ಕೈ ಕಟ್ ಕೂರ್ಬೇಕಿಲ್ಲ, ನಿಮ್ಮ ಪ್ರಯತ್ನ ನೀವ್ ಮಾಡಿ, ಎಲ್ಲರೂ ಅವರವರ ರೀತಿಲಿ contribute ಮಾಡ್ತಾರೆ. ಎಲ್ಲರಿಗೂ ನಿಮ್ಮಷ್ಟೆ ಕಾಳಜಿ, ಪ್ರೇಮ ಇದೆ ಗುರು, ಸುಮ್ನೆ ಸೋಮಾರಿಗಳು ಅಂತೆಲ್ಲ ಹೇಳ್ಬೇಡಾ, ಅವರವ್ರ್ದೇ ರೀತಿಲಿ ಮಾಡ್ತಾರೆ. ನಾನ್ ಮಾಡ್ತಾ ಇರೋದೆ ಸರಿ, ನಾನ್ ಅನ್ಕೊಂಡಿರೋದೆ ಸರಿ, ಬೇರೆಲ್ಲ ಪೆದ್ದ್ರು, ಹುಚ್ರು, ಸೋಮಾರಿಗಳು ಅನ್ನೊ moral, social, and personal high-handedness ಬೇಡ ಅಷ್ಟೆ. ಆದ್ರೂ ನಾವೆಲ್ಲಾ ಹಾಗೇ ಮಾಡ್ತೀವಿ, ಅಲ್ಲ್ವಾ? ಬಿಡಿ.

"ಕಚ್ಚಿ ಕಚ್ಚಿ ಸಾಯಿಸ್ತಾ ಇರುವುದು ಡೈವರ್ಸಿಟಿ ಅಲ್ಲ"

- ನಾವು ಒಂದರ ಬಗ್ಗೆ ಟೀಕೆ ಮಾಡುವಾಗ cause ಮೇಲೆ ಗಮನ ಹಾಕ್ತೀವಿ, ಅಲ್ವಾ? ಎಫೆಕ್ಟ್ ಮೇಲೂ ಕೂಡ. ದುಡ್ಡು ಮನಸ್ನ ಕೆಡುಸ್ತು ಅಂತಾರಲ್ಲ ಹಾಗೆ ಗುರು, ದುಡ್ಡು ಪಾಪ ಏನ್ ಮಾಡುತ್ತೆ, ಅಲ್ವೆ?

"ಡೈವರ್ಸಿಟೀನ ಮ್ಯಾನೇಜು ಮಾಡಕ್ಕೆ. ಡೈವರ್ಸಿಟೀನ ಮೆರೆಸುತ್ತಲೇ ಯೂನಿಟೀನ ಕಾಪಾಡಿಕೊಳ್ಳಕ್ಕೆ ಆಗದೇ ಇರುವ ಮೂರ್ಖತನ"

- ಯುನಿಟಿ ಹೇಗೆ ಕಾಪಡ್ಕೋಬೇಕು ಗುರು, ಹೇಗ್ ಮ್ಯಾನೇಜ್ ಮಾಡ್ಬೇಕು ಗುರು? ಈ ಮೂರ್ಖತನಕ್ಕೆ ಒಂದು ಸೊಲ್ಯೂಷನ್ ಕೊಡು ಗುರು!!! ಇಲ್ದೇ ಇದ್ರೆ ಬರೀ ಪೆದ್ದರೇ ಆಗೋಗ್ತಾರೆ ದೇಷವೆಲ್ಲ.

"You need to toil many nights before this can happen. The question is, are you ready?"

- I am not just ready, I am already doing what I have to in whatever capacity I can. I do not toil nights, but carry love (beyond just blind passion) for my language and country. Our love and passion will be evident to the people around us, and impact them deeper than the short term effect that force can enforce. People hate force, as you yourself do. Our approaches are different but please dont assume that only you are toiling or ready to toil.

ಖುಷ್-ಖುಷ್ಯಾಗಿರು. ಹೀಗೇ ಬರೀತಾ ಇರು.

Dr U B Pavanaja ಅಂತಾರೆ...

ಭಾರತೀಯ ಭಾಷೆಗಳಲ್ಲೇ ಪ್ರಫ್ರಥಮ ಬಾರಿಗೆ ಶಾಲಾಮಕ್ಕಳಿಗೆ ಬೇಕಾಗುವಂತಹ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್ ಕನ್ನಡ ಲೋಗೋವನ್ನು ನಾನು ತಯಾರಿಸಿ, ಅದಕ್ಕೆ ಮಂಥನ ಪ್ರಶಸ್ತಿ ತೆಗೆದುಕೊಂಡರೂ ಅದನ್ನು ಶಾಲೆಗಳಿಗೆ ನಮ್ಮ ಘನ ಸರಕಾರ ತಲುಪಿಸಿಲ್ಲ. ಕನಿಷ್ಠ ಇದು ಒಂದು ವಿಷಯದಲ್ಲಾದರೂ ನಾವು ಇತರೆ ಭಾರತೀಯ ಭಾಷೆಗಳಿಂದ ಮುಂದಿದ್ದೇವೆ.

-ಪವನಜ

ನವೀನ ಅಂತಾರೆ...

Yarayya ರವರ ಅನಿಸಿಕೆ, ಅಭಿಪ್ರಾಯ ಅಕ್ಷರಶಃ ಸತ್ಯ ಹಾಗು ಪ್ರಸ್ತುತ. ಸುಮ್ಮನೆ impulseಗಳಿಗೆ ಗುರಿಯಗುವುದಕ್ಕಿಂತ, ಸ್ವಲ್ಪ rational ಆಗಿ ಯೋಚಿಸಿದರೆ ಸರಿ ಅನ್ಸುತ್ತೆ ಅಲ್ವಾ ಗುರೂ.. ನಿಮ್ಮ ಅಭಿಪ್ರಾಯ ನಿಜ ಅನ್ನೋದ್ರಲ್ಲಿ ಎರಡನೇ ಮಾತಿಲ್ಲ. ನಿಮ್ಮ ಕೆಲಸ ಸಹ ಪ್ರಶಂಸಾರ್ಹ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails