ರೈಲ್ವೇ ಇಲಾಖೆಯೋರು ಕಾದಿರಿಸೋ ಅರ್ಜಿಯಲ್ಲಿ ಈಗ ಕನ್ನಡ ಕಿತ್ತುಹಾಕಿ ಇಂಗ್ಲೀಷ್-ತಮಿಳು ಅರ್ಜಿಗಳ್ನ ಸದ್ದಿಲ್ಲದೆ ಕನ್ನಡಿಗರ ಮೇಲೆ ತುರುಕ್ತಿರೋದನ್ನ ಕನ್ನಡಪ್ರಭ ಬಯಲು ಮಾಡಿದೆ.
ರೈಲ್ವೆ ಇಲಾಖೆಯ ತಮಿಳೊಲವನ್ನು ಹೊಸದಾಗಿ ಹೇಳಬೇಕಾಗೇನಿಲ್ಲ ಬಿಡಿ. ಯಾಕೆ ಹೀಗೆ? ಯಾಕೆ ಈ ರೈಲ್ವೆಯೋರಿಗೆ ಕನ್ನಡಾಂದ್ರೆ ಅಷ್ಟು ಅಸಡ್ಡೆ? ಯಾಕಿವರಿಗೆ ತಮಿಳೂಂದ್ರೆ ಅಷ್ಟು ಒಲವು? ಉತ್ತರ ಸಕ್ಕತ್ ಸುಲಭ: ಬ್ರಿಟಿಷರಿಂದ ಬಿಡುಗಡೆ ಹೊಂದಿದಮೇಲೆ ತಮ್ಮ ಬೇರೆತನವನ್ನ ದಿಲ್ಲಿಯಲ್ಲಿ ಕಾಣಿಸೋ ಹಾಗೆ ಎತ್ತಿಹಿಡಿದೋರು ಅಂದ್ರೆ ತಮಿಳ್ರು. ತಮ್ಮ ಕೂಗು ಕೂಗಿ ಕೂಗಿ ಒಳಗೊಳಗೇ ಒಗ್ಗಟ್ಟಾಗಿ ಕೇಂದ್ರದಲ್ಲಿ ತಮಗೆ ಬೇಕಾದ ಸೌಲತ್ತು ಪಡ್ಕೊಂಡ್ರು. ತಮಿಳ್ರನ್ನ ಕಡೆಗಣಿಸಕ್ಕೆ ಆಗಲ್ಲ ಅನ್ನೋದನ್ನ ತೋರಿಸಿದರು. ರೈಲ್ವೇ ಇಲಾಖೆ ಕೇಂದ್ರಾಡಳಿತಕ್ಕೆ ಬರೋದ್ರಿಂದ ಅಲ್ಲೆಲ್ಲ ಹರಡಿದರು. ಬೆಂಗಳೂರಿಂದ ಮೈಸೂರಿಗೆ ಹೋಗೋ ರೈಲಲ್ಲೂ ಟಿ.ಟಿ.ಗಳಾಗಿ ತುಂಬ್ಕೊಂಡ್ರು, ರೈಲು ಓಡ್ಸೋರಾಗಿ ತುಂಬ್ಕೊಂಡ್ರು, ನಿಲ್ದಾಣದಲ್ಲಿ ಕಾಫಿ ಮಾರೋರಾಗಿ ತುಂಬ್ಕೊಂಡ್ರು.
ಆಗ ಕನ್ನಡಿಗ ಮಲಗಿದ್ದ. ಬಗ್ಗು ಅಂದ್ರೆ ಬಗ್ತಿದ್ದ, ಏಳು ಅಂದ್ರೆ ಏಳ್ತಿದ್ದ, ಕೂರು ಅಂದ್ರೆ ಕೂರ್ತಿದ್ದ. ತಮಿಳ್ನಾಡಲ್ಲಿ ೪ ರೈಲು ಶುರುವಾದರೆ ದೇಶ ಮುಂದುವರೀತು ಅಂತ ಪಾಯಸದ ಊಟ ಮಾಡ್ತಿದ್ದ. ಅದ್ಕೇ ಈಗ ೨೦೦೭ರಲ್ಲಿ ಬೆಂಗಳೂರಲ್ಲಿ ತಮಿಳು ಅರ್ಜಿ!
ಆದ್ರೆ ಈಗ ಕನ್ನಡಿಗ ಎಚ್ಚೆತ್ತಿದ್ದಾನೆ! ಜಾಸ್ತಿ ದಿನ ನಿಲ್ಲಲ್ಲ ಈ ನಾಟ್ಕ.
ಇನ್ನೊಂದು ಸಾರಿ ರೈಲು ಕಾದಿರಿಸಕ್ಕೆ ಹೋದಾಗ ಇಂಗ್ಲೀಷಲ್ಲಿ ಅರ್ಜಿ ತುಂಬದೆ ಕನ್ನಡದಲ್ಲಿ ಇರ್ಬೇಕು ಅಂತ ಹೋಗಿ ನಾವೆಲ್ಲ ಕ್ಯಾಕರಿಸಿ ಉಗೀಬೇಕು. ಕನ್ನಡದ ಅರ್ಜಿ ತರಿಸಿ ಕನ್ನಡದಲ್ಲೇ ತುಂಬಬೇಕು. ಅದನ್ನ ಸರಿಯಾಗಿ ಅವರ ಗಣಕಜಾಲದಲ್ಲಿ ಹಾಕಿಕೊಳ್ಳೋ ಗೋಳು ಇಲಾಖೇದು. ಟಿಕೇಟ್ ಮೇಲೆ ಕನ್ನಡದಲ್ಲಿಲ್ಲದಿದ್ದರೆ ಅದಕ್ಕೂ ಪ್ರತಿಭಟನೆ ಮಾಡಬೇಕು. "ಕಂಪ್ಯೂಟರಲ್ಲಿ ಕನ್ನಡ ಬರಲ್ಲ" ಅಂದ್ರೆ "ಅವೆಲ್ಲ ನಂಗೊತ್ತಿಲ್ಲ, ಹೇಗಾದ್ರೂ ಮಾಡಿ ಕನ್ನಡದಲ್ಲೇ ಟಿಕೆಟ್ ಮುದ್ರಿಸಿ" ಅನ್ನಬೇಕು (ಕನ್ನಡದ ತಂತ್ರಾಂಶ ತಯಾರಿಸೋ ಕಂಪನಿಗಳಿಗೂ ಇದರಿಂದ ಒಳ್ಳೇದಾಗತ್ತೆ). ಅಧಿಕಾರಿಗಳ್ಗೆ ಬರೀಬೇಕು. ಕರ್ನಾಟಕದ ಎಂಪಿಗಳಿಗೆ ಬರೀಬೇಕು. ನಮ್ಮನಮ್ಮ ಕ್ಷೇತ್ರಗಳಿಗೆ ಅವರು ಬಂದಾಗ ಅರ್ಜಿ, ಟಿಕೆಟ್ಟು ಕನ್ನಡದಲ್ಲಿರೋ ಹಾಗೆ ಮಾಡದೆ ಹೋದರೆ ಮುಂದಿನ ಸಾರಿ ವೋಟು ಬೀಳಲ್ಲ ಅಂತ ತೋರಿಸಿಕೊಡಬೇಕು.
ಆಗ ರೈಲು ಹಳೀಗ್ ಬರತ್ತೆ ನೋಡಿ!
4 ಅನಿಸಿಕೆಗಳು:
"ಕನ್ನಡ ಅಳಿಸಿ, ತಮಿಳ್ ಉಳಿಸಿ", ಬಂಡಿಯ ಮೇಲೆ ಕನ್ನಡ ಅಳಿಸಿ, ತಮಿಳಿನಲ್ಲಿ ಬರದ್ದದ್ದಾಯಿತು, ನಂತರ ಹುಬ್ಬಳ್ಳಿಯಲ್ಲಿ ತಮಿಳ್ ಹುಳಿ; ಈಗ, ಕಾದಿರಿಸುವ ಅರ್ಜಿಯಯಲ್ಲಿ ತಮಿಳ್.
ಒಳಗೊಳಗೆ ಸಂಚು ನಡಿತ ಇರೋದು ಎದ್ದು ಕಾಣಿಸ್ತ ಇದೆ. ನಮ್ಮ ಸರ್ಕಾರವಾಗಲಿ ಅಥವ ಕರ್ನಾಟಕದಿಂದ ಕೇಂದ್ರಕ್ಕೆ ಹೋದ ರಾಜಕಾರರಣಿಗಳಾಗಲಿ "ಚ" ಕಾರವೆತ್ತುತಿಲ್ಲ.
ಈ ತಮಿಳ್ ಅಟ್ಟಹಾಸವನ್ನು ಮೆಟ್ಟಿದೇ ತೀರದು.
ಕನ್ನಡಿಗರ ಮೌನತನ, "ಷಂಡತನವಾಗಿ" ತೋರುತ್ತಿದೆ.
ಈಗಲಾದರು ಎಚ್ಚೆತ್ತುಕೊಳ್ಳೊಣಾ, ಏನ್ ಗುರು ಹೇಳಿದ ಹಾಗೆ, ಕನ್ನಡ ಅರ್ಜಿಗಾಗಿ ಒತ್ತಯಿಸೋಣ.
ಇಂತಿ
ಭೂತ
ಈ ರೈಲು ಅಂದ್ರೆ ಬಿಹಾರ-ತಮಿಳರ ಕಂಪೆನಿ ಹಂಗೆ ಆಗಿ ಹೋಗಿದೆ.
ಶತಾದ್ಧಿಯಲ್ಲಿ ಓಡಾಡಿದರೆ ತಿಳಿಯುವುದು. ಮೈಸೂರಿಂದ-ಚನ್ನೈಗೆ ಹೋಗುವ ಟ್ರೈನ್ ತುಂಬ ತಮಿಳು-ನಾಡು tourismನ adಗಳು. :)
ಹೆಚ್ಚು inter-state trainಗಳಲ್ಲಿ ಕನ್ನಡದಲ್ಲಿ ಬೋರ್ಡು ಇರಲ್ಲ!
“ಮಗೂ ಅಳದಿದ್ರೆ ಅಮ್ಮ ಕೂಡ ಹಾಲು ಕೊಡಲ್ಲ” ಅನ್ನೋ ಮಾತಿದೆ. ಇನ್ನು ಸರಕಾರದ ಬಗ್ಗೆ, ರೈಲ್ವೇ ಇಲಾಖೆಯೋರ ಬಗ್ಗೆ ಹೇಳೋದೇನಿದೆ? ನಮ್ಮನ್ನ ಯಾರೋ ಉದ್ಧಾರ ಮಾಡ್ತಾರೆ ಅಂತ ಕಾದುಕೊಂಡು ಕೂತಿರೋ ಕಾಲ ಯಾವತ್ತೂ ಇರಲಿಲ್ಲ. ನಮ್ಮ ಹಕ್ಕಿಗೇ ಹೋರಾಡಬೇಕಾದ ಕಾಲ ಎಂದೆಂದಿಗೂ ಇತ್ತು. ಮುಂದೂ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡು ನಾವು ಕನ್ನಡಿಗರು ಇಂತಹ ಪ್ರತಿಯೊಂದು ಅನ್ಯಾಯವನ್ನು “ಗಟ್ಟಿಯಾದ” ಧ್ವನಿಯಲ್ಲಿ ಪ್ರತಿಭಟಿಸಬೇಕು.
kannadiga echchtthiddane anta udaharaNe ellarigu tiLeebeku ..
intaha blaag gaLu adakke tumba sahakaari ..
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!