ಕರ್ನಾಟಕಕ್ಕೆ ನಿಜವಾಗಲೂ ಜನಸಂಖ್ಯೆ ತೊಂದರೇನಾ?

ಇವತ್ತು ಜಗತ್ತಿನ ಜನಸಂಖ್ಯಾ ದಿನ. ಜನಸಂಖ್ಯೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಇವತ್ತಾದರೂ ಚರ್ಚೆ ನಡೀಲಿ ಅನ್ನೋದೇ ಇದರ ಉದ್ದೇಶ. ಈ ದಿನ ಕರ್ನಾಟಕಕ್ಕೆ ಜನಸಂಖ್ಯೆ ನಿಜವಾಗಲೂ ಒಂದು ತೊಂದರೇನಾ ಅಂತ ನೋಡ್ಮ. ಬೀದೀಲಿ ಕಲ್ಲು - ಜನಸಂಖ್ಯೆ ಕಾರಣ. ತುಂಬಿ ತುಳುಕುತ್ತಿರೋ ಭ್ರಷ್ಟಾಚಾರ - ಜನಸಂಖ್ಯೆ ಕಾರಣ. ಉಗ್ರರ ಹಾವಳಿ - ಜನಸಂಖ್ಯೆ ಕಾರಣ. ಒಟ್ಟಿನಲ್ಲಿ ಈ ಜನಸಂಖ್ಯೆ ಅನ್ನೋದನ್ನ ಪ್ರತಿಯೊಂದಕ್ಕೂ ಉಗ್ದೂ ಉಗ್ದೂ ಇಡೋದು ನಮ್ಮ ಜನಕ್ಕೆ ಅದೇನು ಇಷ್ಟವೋ ಏನೋ.

ನಿಜವಾಗಲೂ ನೋಡಿದರೆ ಕರ್ನಾಟಕದ ಜನಸಂಖ್ಯೆಯ ಸಾಂದ್ರತೆ (೧ ಚದರ ಕಿ.ಮಿ.ನಲ್ಲಿರುವ ಜನ) ನೋಡಿದರೆ ಅಷ್ಟೇನಿಲ್ಲ ಅನ್ನಿಸತ್ತೆ. ಕೆಳಗಿರುವ ಪಟ್ಟಿ ನೋಡಿದರೆ ಅರ್ಥವಾಗುತ್ತೆ - ಕರ್ನಾಟಕದ ಸಾಂದ್ರತೆ ೨೦೨೬ರ ವರೆಗೆ ಅಷ್ಟೇನು ಹೆಚ್ಚಲಿಕ್ಕಿಲ್ಲ ಅಂತ. ಈ ಪಟ್ಟಿಯನ್ನು ಇಲ್ಲಿಂದ ತಯಾರಿಸಿದ್ದು. ಕರ್ನಾಟಕದ ಜನಸಂಖ್ಯೆ ಅಷ್ಟೇನು ಬೆಳಿಯಲಿಕ್ಕಿಲ್ಲ ಎನ್ನುವುದಾದರೆ ಅಕ್ಕಪಕ್ಕದ ರಾಜ್ಯಗಳಿಂದ ಜನ ಹೆಚ್ಚುಹೆಚ್ಚಾಗಿ ಇಲ್ಲಿಗೆ ವಲಸೆ ಬರುವುದರಲ್ಲಿ ಸಂದೇಹವಿಲ್ಲ. ತಡೆಯಿಲ್ಲದ ವಲಸೆಯಿಂದ ಕರ್ನಾಟಕದಲ್ಲಿ ಕನ್ನಡಿಗರ ಪಾಲೇನಾದೀತು ಎಂದು ನೀವೇ ಯೋಚಿಸಿ. ಒಟ್ಟಿನಲ್ಲಿ ಕರ್ನಾಟಕದ ಜನಸಂಖ್ಯಾ ಸಾಂದ್ರತೆ ಅಷ್ಟೇನು ಹೆಚ್ಚಾಗಿಲ್ಲ. ಇನ್ನೂ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಸುಳ್ಳೇ.










































































































ರಾಜ್ಯ200120062011201620212026
ಕರ್ನಾಟಕ276293310325338349
ಆಂಧ್ರ277293308321333342
ಮಹಾರಾಷ್ಟ್ರ315341366390413433
ಹರಿಯಾಣ478527575621664703
ತಮಿಳುನಾಡು480501519534545552
ಪಂಜಾಬ್484517550578602622
ಉ.ಪ್ರದೇಶ6907618339059741033
ಕೇರಳ819856889918941959
ಬಿಹಾರು8819641038110311621209
ಪ.ಬಂಗಾಳ9039601008105410971133

ಹಾಗೇ ಒಂದೆರಡು ಬೆಳವಣಿಗೆಹೊಂದಿರುವ ಹೊರದೇಶಗಳ ಇವತ್ತಿನ (೨೦೦೭ರ ಮಾಹಿತಿ; ಕರ್ನಾಟಕದ ಸಾಂದ್ರತೆಯನ್ನು ಮೇಲಿನ ಪಟ್ಟಿಯಿಂದ ತೊಗೊಂಡಿದೆ, ಇತರ ದೇಶಗಳ ಮಾಹಿತಿಯನ್ನು ವಿಕಿಪೀಡಿಯಾದಿಂದ ತೊಗೊಂಡಿದೆ) ಜನಸಂಖ್ಯಾ ಸಾಂದ್ರತೆಯನ್ನು ಕರ್ನಾಟಕದ ಸಾಂದ್ರತೆಗೆ ಹೋಲಿಸೋಣ:

























ಕರ್ನಾಟಕ293
ಜರ್ಮನಿ231
ನೆದರ್ಲ್ಯಾಂಡ್ಸ್394
ಜಪಾನ್337
ಇಸ್ರೇಲ್303

ಇದರಿಂದ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ - ನಮ್ಮ ಸಮಸ್ಯೆಗಳಿಗೆ ಜನಸಂಖ್ಯೆಯೇ ಮೂಲ ಎನ್ನುವುದು ಸರಿಯಲ್ಲವೇ ಅಲ್ಲ! ಕರ್ನಾಟಕಕ್ಕೆ ಜರ್ಮನಿ-ನೆದರ್ಲ್ಯಾಂಡ್ಸ್-ಜಪಾನ್-ಇಸ್ರೇಲ್-ಗಳಿಗಿಲ್ಲದ ಜನಸಂಖ್ಯೆಯ ಸಮಸ್ಯೆ ಇಲ್ಲ. ಹೌದು, ಉತ್ತರಪ್ರದೇಶಕ್ಕಿದೆ, ಕೇರಳಕ್ಕಿದೆ, ಬಿಹಾರಕ್ಕಿದೆ, ಪ.ಬಂಗಾಳಕ್ಕಿದೆ, ಆದರೆ ನಮಗೇನಿಲ್ಲ. ನಮ್ಮ ಸಮಸ್ಯೆಗಳ ಮೂಲ ಜನಸಂಖ್ಯೆಯಲ್ಲ, ಆ ಜನಸಂಖ್ಯೆ ನಾಡಿನ ಏಳ್ಗೆಗಾಗಿ ಏನು ಮಾಡುತ್ತಿದೆ ಅನ್ನೋದು. ಜರ್ಮನ್ನರು, ಡಚ್ಚರು, ಜಪಾನಿಯರು, ಇಸರೇಲಿಗಳಿಗೂ ಕನ್ನಡಿಗರಿಗೂ ಬೆಳವಣಿಗೆಯಲ್ಲಿ, ಜೀವನಶೈಲಿಯಲ್ಲಿ ವೆತ್ಯಾಸವಿದೆ ಅಂದರೆ ಕಾರಣ ಜನಸಂಖ್ಯೆಯಲ್ಲ ಅನ್ನೋದು ಇದರಿಂದ ಸ್ಪಷ್ಟವಾಗಬೇಕು. ಸುಮ್ಮನೆ ಭಾರತದ ಜನಸಂಖ್ಯೆ ಜಾಸ್ತಿ ಇದೆ ಅಂತ ಒಬ್ಬ ಕನ್ನಡಿಗ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹುಟ್ಟಿಸಬೇಕು, ಕನ್ನಡಿಗರು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕು!

7 ಅನಿಸಿಕೆಗಳು:

Anonymous ಅಂತಾರೆ...

Adare ee bageya valase naDItiruvAga namma rAjyadalli janasaMkhye-daTTaNe kammi aMta hELkoMDu tirgAD^dre, horagina jana innU khush-khushiyAgi illige bartAre, alwe? aa dRuShTiyalli nanagEno namma jana-daTTaNeyannu swalpa hechchu eMdu hELidareyE oLLEdu ansatte.. EnaMteera?

-Rohith

Anonymous ಅಂತಾರೆ...

ಕನ್ನಡದೋರು ಹೆಚ್ಚಾಗಬೇಕು ಸರಿ!!

ಮೊದಲು ಈಗ ಇರೋದು ಕನ್ನಡತನವನ್ನು ಹೆಚ್ಚು ಮಾಡಿಕೋ ಬೇಕು. ಇದು ಆಗ್ತಾ ಇರೋ ಹಂಗೆ ಕಾಣ್ತಾ ಇದೆ.

ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನನ್ನಿ!

ಉಉನಾಶೆ ಅಂತಾರೆ...

koneya eraDu maatugaLige nanna ommatavilla.

naanE duDidu saakOdE aadare, nanna kaiyalli saakalu (nanage sammadhaana aaguvamte) aagadaShTu makkaLu huTTisuvudu sariyalla.

sarakaara saakOdaadre paravaagilla :o) :o) :O)

IrsuMursu ಅಂತಾರೆ...

ಬರೀ numbers ಹೋಲಿಸಿದರೆ ಸಾಲದು. ಆ ದೇಶಗಳ ಇತಿಹಾಸ, ಸಂಪನ್ಮೂಲಗಳನ್ನೂ ಹೋಲಿಸಬೇಕು. ಜೊತೆಗೆ ಬೇರೆ ರಾಜ್ಯಗಳ ಹೊರೆ ಹೊರುವ ಹಣೆಬರಹ ಆ ದೇಶಗಳಿಗಿಲ್ಲ.

ಹೆಚ್ಚು ಮಕ್ಕಳನ್ನು ಹುಟ್ಟಿಸೋದಲ್ಲ, ಹುಟ್ಟುವ ಮಕ್ಕಳನ್ನು ಹೆಚ್ಚು ಕನ್ನಡಿಗರನ್ನಾಗಿ ಮಾಡಬೇಕು.

Anonymous ಅಂತಾರೆ...

ಇತಿಹಾಸ ಸಂಪನ್ಮೂಲಗಳಲ್ಲಿ ಕರ್ನಾಟಕ ಕಡಿಮೆಯೇನಿಲ್ಲ ಎಂದು ನಾವು ಕೇಳೇ ಇದ್ದೇವೆ.

ಹುಟ್ಟುವ ಮಕ್ಕಳನ್ನು ಹೆಚ್ಚು ಕನ್ನಡಿಗರಾಗಿ ಮಾಡಬೇಕು ಎನ್ನುವುದು ಒಪ್ಪಬೇಕಾದ್ದೇ.

ಆದರೆ ಕನ್ನಡಿಗರು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕೋ ಬೇಡವೋ ಎಂಬ ಪ್ರಶ್ನೆಗೆ ಈ ಬರಹ ಸರಿಯಾಗಿ ಉತ್ತರ ಕೊಟ್ಟಿದೆ ಎಂದು ನನ್ನ ಅನಿಸಿಕೆ.

Anonymous ಅಂತಾರೆ...

ಒಳ್ಳೆಯ ಉಂಕು. ನನಗೂ ಈ ಉಂಕು ಒಮ್ಮೆ ಸುಳಿದಿತ್ತು.
ನಮ್ಮ ನಾಡಿನಲ್ಲಿ "ಸಾಂದ್ರತೆ' ಆಟೋಂದು ಇಲ್ಲ ಗುರು.
ನಿಮ್ಮ ಬರಹದ ಮೊಗಸು ಸೊಗಸಾಗಿದೆ. ಮುಂದುವರೆಸಿ

ಹದುಳವಿರಲಿ,
ನನ್ನಿ !

Anonymous ಅಂತಾರೆ...

1 - Navu (Yuvakaru ) namage onde magu saku antha summanirade 2 makkaLannadaru maaDikoLLabEku.
Idara bagge naavellaru bahaLa serious agiye yochane maaDabEku.

2 - Parabhasheyavaranna kannadigarannagi parivarthisuvadu .

oLLe chiMtane, lEkana koTTiddakke danyavaada.

karuNaa

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails