"ಕಳ್ಳೇಕಾಯ್! ಕಳ್ಳೇಕಾಯ್!"

ಪ್ರತಿವರ್ಷದಂತೆ ಬೆಂಗಳೂರಿನ ಬಸವನಗುಡಿ ದೇವಸ್ಥಾನದ ಬಳಿ ಕಡಲೆಕಾಯಿ ಪರಿಷೆ (ಜಾತ್ರೆ) ಪ್ರಾರಂಭವಾದ ಬಗ್ಗೆ ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಒಂದು ಸುದ್ಧಿ. ಪ್ರತಿ ಕಾರ್ತಿಕ ಮಾಸದ ಕಡೆಯ ಸೋಮವಾರವಾದಂದು ಅಣಿಗೊಳ್ಳುವ ಈ ಜಾತ್ರೆ ನಿರಂತರವಾಗಿ 500 ವರ್ಷಗಳಿಂದ ಯಶಸ್ವಿಯಾಗಿ ಆಚರಣೆಗೊಳ್ಳುತ್ತಿರುವುದು ಸಂತಸ ಪಡಬೇಕಾದ ವಿಷಯವೇ ಗುರು.


ಪರಿಷೆ ಮುಂದಿನ ಹಂತಕ್ಕೆ ಹೋಗಬೇಕು

ಅಚ್ಚರಿಯ ಇತಿಹಾಸದ ಹಿನ್ನಲೆ ಇರುವ ಈ ಕಡಲೆಕಾಯಿ ಜಾತ್ರೆಯಲ್ಲಿ ಕರ್ನಾಟಕದೆಲ್ಲೆಡೆಗಳಲ್ಲಿ ಬೆಳೆಯುವ ವಿವಿಧ ತಳಿಗಳ ತರಹಾವರಿ ಕಡಲೆಕಾಯಿಗಳನ್ನು ಕಾಣಬಹುದಾಗಿದೆ. ನಮ್ಮ ಸಂಸ್ಕೃತಿಯನ್ನು ಇಂದಿನ-ಮುಂದಿನ ಪೀಳಿಗೆಗೆ ತಲುಪಿಸುವ ಇಂತಹ ಜಾತ್ರಗಳು ಅತ್ಯವಶ್ಯಕ. ಆದರೆ ಈ ಜಾತ್ರೆ ಕೇವಲ ಕಡಲೆಕಾಯಿ ಮಾರುವ/ಕೊಳ್ಳುವ ತಾಣ ಮಾತ್ರ ಆಗಬಾರದು. ಕಡಲೆಕಾಯಿ ಬೆಳೆಗಾರರು ಮತ್ತು ಪರಿಷೆಯ ಆಯೋಜಕರು ಉತ್ಪನ್ನಗಳ ಪ್ರದರ್ಶನ, ಅವುಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳು ಹೀಗೆ ಕಡಲೆ ಕಾಯಿ ಬಗ್ಗೆ ಸಂಪೂರ್ಣ ವರ್ತಮಾನ ನೀಡುವ ವೇದಿಕೆ ಆಗಬೇಕು.

ಕಡಲೇಕಾಯಿಂದ ಹೊಸ ಹೊಸ ತಿಂಡಿ ತಯಾರಿಸಿ ಇಡೀ ಪ್ರಪಂಚಕ್ಕೇ ಮಾರಬೇಕು

ಕಡಲೇ ಕಾಯಿ ಬೆಳೆಗೆ ಪೂರಕವಾದ ಮಣ್ಣು, ನೀರು, ಹವಾಗುಣ ಕರ್ನಾಟಕದಲ್ಲಿ ವಿಫುಲವಾಗಿದೆ. ಭಾರತದಲ್ಲಿ ಕಡಲೆಕಾಯಿ ಬೆಳೆಯುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕದ್ದು ಸಹ ದೊಡ್ಡ ಪಾಲಿದೆ. ಈಗಿರುವ ಕಡಲೆ ಕಾಯಿ ವ್ಯವಸಾಯದ ವ್ಯಾಪ್ತಿಯನ್ನು ಮೀರಿ ಮೊದಲ ಸ್ಥಾನಕ್ಕೇರುವ ಎಲ್ಲ ಅರ್ಹತೆ ಮತ್ತು ಅವಕಾಶಗಳು ಸಹ ಹೇರಳವಾಗಿದೆ. ಅದರ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಕಾರ್ಯಯೋಜಿತರಾಗಬೇಕಿದೆ.

ಬ್ರೆಡ್ಡು, ಬನ್ನುಗಳ ಜತೆ ನೆಂಚಿಕೊಳ್ಳುವುದಕ್ಕೆ 'Peanut butter' (ಕಡಲೆಕಾಯಿ ಹಿಟ್ಟಿನಂಟು) ಇಂದು ಹೊರದೇಶಗಳಲ್ಲಿ ತುಂಬ ಜನಪ್ರಿಯ. ಈ ರೀತಿಯ ಪದಾರ್ಥಗಳನ್ನು ನಮ್ಮಲ್ಲೇ ತಯಾರು ಮಾಡಿ ಹೊರಕ್ಕಟ್ಟುವ ವ್ಯವಸ್ಥೆ ಆದಲ್ಲಿ ಬೆಳೆಗಾರರಿಗೆ ಹೆಚ್ಚಿನ ಸ್ಪೂರ್ತಿ ದೊರಕತ್ತಲ್ವ ಗುರು?

ಬೆಂಗಳೂರಿನ ಗಾಂಧಿ ಬಜಾರಿನ ಬೇರೆಬೇರೆ ರೀತಿಯ ಕಡಲೆಕಾಯಿ ಮಸಾಲಗಳನ್ನು ಮತ್ತು ತಿಂಡಿಗಳನ್ನು ಇತರೆಡೆಗಳಿಗೆ / ಹೊರದೇಶಗಳಿಗೆ ರುಚಿ ತೋರಿಸಬೇಕು. ಕಳ್ಳೇಕಾಯಿಂದ ಏನೇನು ಮಾಡಬೋದು ಅನ್ನೋದರ ಬಗ್ಗೆ ನಾವು ಯೋಚ್ನೆ ಮಾಡಿ ಜನಮೆಚ್ಚುವ ತಿಂಡಿಗಳ್ನ ಮಾರುಕಟ್ಟೇಗೆ ತರ್ಬೇಕು. ವನೀಲಾ ಕಳ್ಳೇಕಾಯಿ, ಚಾಕಲೇಟ್ ಕಳ್ಳೇಕಾಯಿ, ಕಳ್ಳೇಕಾಯಿ ಐಸ್ ಕ್ರೀಮ್ - ಹೀಗೆ ಹತ್ತು ಹಲವಾರು ರುಚಿಯ ತಿಂಡಿಗಳ್ನ ಮಾಡಿ ಮಾರುಕಟ್ಟೆಗೆ ಬರಬಹುದು. ಮಾರುಕಟ್ಟೆ ವಿಸ್ತರಿಸುವ ಜಾಣ್ಮೆಯನ್ನು ನಾವು ತೋರಿಸಬೇಕಿದೆ ಅಷ್ಟೆ. ನಾವು ಕನ್ನಡಿಗರು ತೋರಿಸದೇ ಹೋದರೆ ಹಿಂದಿಯೋನೋ ತಮಿಳನೋ ಅಥವಾ ಅಮೇರಿಕದೋನೋ ಯಾವನೋ ಒಬ್ಬ ತೋರುಸ್ತಾನೆ, ನಾವು ಎಂದೆಂದಿಗೂ ಕಡಲೇಕಾಯಿ ಬೆಳ್ಕೊಂಡು ಹೀಗೇ ಬೀದೀಲಿ ಕೂತ್ಕೊಂಡು ಮೂರುಕಾಸಿಗೆ ಕಳ್ಳೇಕಾಯಿ ಮಾರಾಟ ಮಾಡ್ಕೊಂಡಿರಬೇಕಾಗತ್ತೆ. ಏನ್ ಗುರು?

11 ಅನಿಸಿಕೆಗಳು:

rta ಅಂತಾರೆ...

adu nijaaney....basmathi akkigey america patent hakidahagey aguthey namma stiti........wonderful and thougtprovoking

Anonymous ಅಂತಾರೆ...

idu post madbeku antha ninne yochne madtha idde

neeve hakbitidira :P

Anonymous ಅಂತಾರೆ...

kannadigaru business vishayadalli munduvarilikke eshtondu daarigalive. Yaavudannu sariyaagi balasikollade mattobbara ki-kelage dudiyuvudaralle trupti kaanuttiddivi :-(
namma sutta mutta noodidare imtaha aneka vishyagalu sigutwe. mysuru mallige, kadalekayi parishe idannella tilisikottaddakke dhanyavaadagalu

Rohith B R ಅಂತಾರೆ...

ಗುರು! ನೀವು ಇಲ್ಲಿ ಭಯ ಪಟ್ಟಿರೋದು ಈಗಾಗ್ಲೇ ನಡೀತಿದೆ ಅಂದ್ರೆ ಬೇಜಾರ್ ಮಾಡ್ಕೊಳ್ಬೇಡಿ.. ನಿನ್ನೆ ನಾನೂ ಅಲ್ಲಿಗೆ ಹೋಗಿದ್ದೆ.. ಅಲ್ಲಿ ಮಾರ್ತಿದ್ದ ಕಡಲೆ ಕಾಯಿಗಳಲ್ಲಿ ಕೆಲವರನ್ನ ಕೇಳ್ದೆ - ಸ್ವಲ್ಪ ಜನ ಮಾರಾಟಗಾರ್ರು ಮಾರ್ತಿರೋದು ಧರ್ಮಪುರಿಯ ಕಳ್ಳೇಕಾಯಿ! ಹೀಗೇ ಡೆಕನ್ ಅಥ್ವಾ ವಿ.ಕ ದಲ್ಲಿ ಇದು ಚಿತ್ರ-ಸಮೇತವಾಗಿ ವರದಿ ಕೂಡ ಆಗಿತ್ತು!

ಇವತ್ತು ಎರ್ಡು-ಮೂರು ಜನ ಬರ್ತಾರೆ, ನಾಳೆ ಮಳ್ಗೆಗಳ್ನ ಕೊಳ್ತಾರೆ, ಮುಂದಿನ ಬಾರಿ ಪರಿಷೇಲಿ ಅವ್ರದ್ದೇ ಮೇಲುಗೈ ಆಗ್ಬುಡತ್ತೆ :o ಅನ್ನೋ ಯೋಚನೆ..

ಇದನ್ನ ಕಂಡಾಗ ಮೈಸೂರು ಮಲ್ಲಿಗೆಗೆ ಆಗ್ತಿರೋದೇ ಇದಕ್ಕೂ ಆಗ್ತಿದ್ಯೇ ಅಂತ ಅನ್ಸಕ್ಕ್ ಶುರು ಆಯ್ತು ಅಲ್ಲಿ ನನಗೆ..

ಈ ಪರಿಷೆ ನಡ್ಸೋ ಜನ್ರ ಮುಖ್ಯಸ್ತ(ರು) ಯಾರಾದ್ರು ಸಿಕ್ಕ್ರೆ ಅವ್ರನ್ನ ಈ ವಿಷಯ್ದಲ್ಲಿ ಎಚ್ಚೆತ್ತಿಸಿ ಹೇಳ್ಬೇಕು..

Anonymous ಅಂತಾರೆ...

howdu nojavaada maatu. adre alli idda bahuteka vyaaparigalu tamilunaadinda bandavare !! .

Anonymous ಅಂತಾರೆ...

ವಿಷ್ಯ ಏನೋ ಸರಿನೇ ಗುರು.

ಆದ್ರೆ ಬಹಳ ಸಲ ನೋಡಿದಿನಿ ನಮ್ ಏನ್ ಗುರುಗಳು ’ಈ ವಿಷ್ಯ ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದಿದೆ’ ಅಂತ ಲಿಂಕ್ ಹಾಕಿರ್ತಾರಲ್ಲ. ಅದೇ ವಿಷ್ಯ ಪ್ರಜಾವಾಣೀನಲ್ಲೂ ಬಂದಿರತ್ತೆ, ಕನ್ನಡಪ್ರಭದಲ್ಲೂ ಬಂದಿರತ್ತೆ. ಅದ್ಯಾಕೆ ನಮ್ ಗುರುಗಳಿಗೆ ಇಂಗ್ಲೀಷ್ ಪತ್ರಿಕೆನಲ್ಲಿ ಬಂದಿರದೇ ಆಗ್ಬೇಕು?! ಇದೂ ಕೂಡ ಶಂಖದಿಂದ ಬಂದ್ರೆನೇ ತೀರ್ಥ ಅನ್ನೋಹಾಗಾ??

Rohith B R ಅಂತಾರೆ...

ಅಜಯ್ ಅವ್ರೆ,
ನಾವೆಲ್ಲಾ ಇಲ್ಲಿ ಚರ್ಚೆ ಮಾಡ್ತಿರೋದು ಒಂದು ವಿಷಯದ ಬಗ್ಗೆ, ಹಾಗಾಗಿ ಅದು ಯಾವ ಪತ್ರಿಕೇಲಿ ಬಂದಿದ್ಯೋ ಅದು ಮುಖ್ಯ ಅನಿಸ್ಕೊಳಲ್ಲ.. ಅದೂ ಅಲ್ದೆ ನೀವು ಹೇಳಿದ ಈ ಮಾತಿನ ನಂತರ e-ಪುಟಗಳ್ನ ತಿರುಗಿ ಹಾಕಿ ನೋಡ್ದೆ.. ಏನ್-ಗುರುಗಳು ಬರ್ದಿರೋ ಸುಮಾರು ೬೦% ಅಷ್ಟು ವಿಷಯಗಳಲ್ಲಿ ವಿ.ಕ ಪತ್ರಿಕೇದೇ ಲಿಂಕು.. ಇದಕ್ಕೇನಂತೀರ?

ನಿಮ್ಮ ಇನ್ನೊಂದು ಮಾತಲ್ಲಿ ನಿಜವಿದ್ಯೇನೊ ಅನ್ಸತ್ತೆ.. ಈಗಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಪತ್ರಿಕೇಲಿ ಬಂದಿರೋ ಈ ವರದಿಯನ್ನ ಓದಿರೋ ಜನ್ರು ಇನ್ನೂ ಸುಮಾರಿದಾರೆ. ಅವರಲ್ಲಿರೋ ಕನ್ನಡಿಗರಿಗೆ ಬೇಕಾಗುವ ಚಿಂತನೆ ಇಲ್ಲಿದೆ. ಅಷ್ಟೆ!

ಬನವಾಸಿ ಬಳಗ ಅಂತಾರೆ...

ಇಂಗ್ಲೀಷ್ ಪತ್ರಿಕೆಗಳ ಒಲವಿನಿಂದ ಅವುಗಳಿಗೆ ನಾವು ಲಿಂಕ್ ಮಾಡುವುದಿಲ್ಲ. ಇಂಗ್ಲೀಷ್ ಪತ್ರಿಕೆಗಳ URL ಹುಡುಕುವುದು ಇವತ್ತು ಸುಲಭ. ಕನ್ನಡ ಪತ್ರಿಕೆಗಳು ಯೂನಿಕೋಡ್ ಬಳಸಿದ್ದರೆ ಇದು ಅಲ್ಲೂ ಸುಲಭ ಆಗುತ್ತಿತ್ತು. ಆದರೆ ಆ ಶಿಸ್ತು ಅವರಿಗಿಲ್ಲವಲ್ಲ?!

Anonymous ಅಂತಾರೆ...

ಏನ್ ಗುರುಗಳೇ, ಇಲ್ಲಿ ನಾನು ಸುಮ್ನೇ ನಿಮ್ಮ ಮೇಲೆ ಅಪವಾದ ಮಾಡಿದೆ ಅಂತ ಅನ್ಯಥಾ ಭಾವಿಸಬೇಡಿ.

ಕನ್ನಡ ಪತ್ರಿಕೆಯಲ್ಲಿ ವಿಷಯ ಬಂದಿರೋದನ್ನ ಯುನಿಕೋಡ್ ನಿಂದ ಹುಡುಕಿಯೇ ತೆಗೆಯಬೇಕೆಂದೇನೂ ಇಲ್ಲ. ಒಂದು ಬಾರಿ ಆ ಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ನಮ್ಮ ಏನ್ ಗುರುಗಳು ದಿನವೂ ಅಷ್ಟನ್ನಂತೂ ಮಾಡಿಯೇ ಮಾಡುತ್ತಾರೆ ಎಂಬ ಖಾತ್ರಿ ನನಗಿದೆ.! ಸ್ವಲ್ಪ ಪ್ರಯತ್ನ ಹಾಕಿದರೂ ಪರ್ವಾಗಿಲ್ಲ ಆದಷ್ಟು ಕನ್ನಡ ಪತ್ರಿಕೆಯ ಲಿಂಕನ್ನೇ ಕೊಡಿ ಇನ್ನು ಮೇಲೆ. ಕನ್ನಡ ಕರ್ನಾಟಕದಲಿ ಸಾರ್ವಭೌಮನಾಗಬೇಕು, ಇಂಗ್ಲೀಷಿನ ಮೇಲೆ ಅವಲಂಬನೆ ಹೋಗಬೇಕು ಎಂದು ಹೇಳುತ್ತಾ ನಾವೇ ಅವಲಂಬನೆ ಮಾಡುವುದು ವಿರೋಧಾಭಾಸವೆನಿಸುವುದಿಲ್ಲವೇ !

ನನ್ನದು ಅಧಿಕ ಪ್ರಸಂಗವಾಗಿದ್ದರೆ ಕ್ಷಮಿಸಿ.
ಬನವಾಸಿ ಬಳಗದ ಕನ್ನಡ ಸೇವೆಯ ಬಗ್ಗೆ ನನ್ನಲ್ಲಿ ಗೌರವ ಮತ್ತು ಧನ್ಯತೆ ಇದೆ.

Priyank ಅಂತಾರೆ...

ಬ್ರೆಡ್ಡು, ಬನ್ನುಗಳ ಜತೆ ನೆಂಚಿಕೊಳ್ಳುವುದಕ್ಕೆ 'Peanut butter' (ಕಡಲೆಕಾಯಿ ಹಿಟ್ಟಿನಂಟು) ಇಂದು ಹೊರದೇಶಗಳಲ್ಲಿ ತುಂಬ ಜನಪ್ರಿಯ.

ಈ ಐಡಿಯಾ ಸೂಪೆರಾಗಿದೆ .
ಗುರುಗಳೇ !! ನೀವು ಈ ಕೆಲಸ ಕೈಗೆ ತಗೊಂಡು ಉತ್ಸಾಹಿಗಳ ಅಗತ್ಯ ಕಂಡು ಬಂದರೆ ಖಂಡಿತ ನನ್ನನ್ನು ಸಂಪರ್ಕಿಸಿ.

Ravi ಅಂತಾರೆ...

Kshamisi swami,

namma ganaka yantradalli Kannada Baralla hagagi enlishin aksharagalannu balasutiddene. Ella sari swami. Nammadanne tegedukondu bere hesarannu kottu olle duddu madtare petent anta bere togotare swami. Aamele namma kaiyalli chippu. Eli eddeli ennuv kranti barabeku. navu adakke shriganeshay hadbeku.

Ene aagali mumbai nalli swlpa kannada. Khushi AAytu swami nimmellar hattira matadi. hennu makkalu ksamisi nanu swami andidakke.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails