"ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ" - ಅನಕೃ

"ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ - ಕವಿ ಮಾನವೀಯತೆಯ ಪ್ರವಾದಿ" ಎಂಬ ಕರೆ ನೀಡಿ, ತಮ್ಮ ನಡೆ ನುಡಿ ಆಚಾರ ವಿಚಾರ ಕೃತಿ ಭಾಷಣಗಳೆಲ್ಲದರಲ್ಲೂ ಸಹಜಧರ್ಮ, ಮನುಷ್ಯತ್ವ ಮಾನವೀಯತೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಲೋಕದ ಸವ್ಯಸಾಚಿ, ಕಾದಂಬರಿ ಸಾರ್ವಭೌಮ 'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್' ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಇದು ಅಚ್ಚ ಕನ್ನಡ ಕಾರ್ಯಕರ್ತರಾಗಿದ್ದ ಅನಕೃ ಅವರ ಪರಿಚಯಿಸುವ ಒಂದು ಕಿರು ಪ್ರಯತ್ನ ಮಾತ್ರ. ಸಮುದ್ರದಿಂದ ಒಂದು ಬೊಗಸೆ ನೀರು ಪಡೆದಂತೆ.

ಈ ಶತಮಾನದ ಕರ್ನಾಟಕದ ಪವಾಡಪುರುಷ

ಅನಕೃ (ಜನನ: ಕೋಲಾರ ಮೇ ೯, ೧೯೦೮, ಮರಣ: ಬೆಂಗಳೂರು ಜುಲೈ ೮, ೧೯೭೧) ಈ ಶತಮಾನದ ಕರ್ನಾಟಕದ ಪವಾಡಪುರುಷ. ಅವರು ರಚಿಸಿದ ಸಾಹಿತ್ಯ ೮೦,೦೦೦ ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. ೧೯೩೦ ರಿಂದ ೧೯೭೧ ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆ ಯಂತೆ ಜೀವಿಸಿದ್ದರು.

ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಹುಟ್ಟು ಸೇನಾನಿ, ನಿಷ್ಕಪಟ ದಂಗೆಕೋರ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಪ್ರಗತಿಶೀಲತೆಯ ಅಧ್ವರ್ಯು, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ ಅನಕೃ ಅವರನ್ನು ಇಂದಿನ ಕನ್ನಡ ಪೀಳಿಗೆ ಬಹುವಾಗಿ ಗುರುತಿಸುವುದು ಕನ್ನಡ ಚಳುವಳಿಯ ಪಿತಾಮಹರೆಂದೆ!

ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಎಂಬ ಆ ಮೂರಕ್ಷರ ಕನ್ನಡಿಗರ ಬೀಜಮಂತ್ರ. ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಸೂಕ್ತ ಉತ್ತರಕ್ಕಾಗಿ, ಇಡೀ ಕನ್ನಡನಾಡು ಅನಕೃ ಅವರ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿತ್ತು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದ್ದರು.

ಕನ್ನಡತನದ ಅಳಿವು-ಉಳಿವಿಗಾಗಿ ಜಾತಿ-ಮತ-ಧರ್ಮ-ದೇವರನ್ನು ತೊರೆದು ಕನ್ನಡತ್ವವನ್ನು ಅಪ್ಪಿ ಹಿಡಿಯಲು ಅಂದೇ ಕರೆನೀಡಿದ್ದವರು ಅನಕೃ. ಅವರ ಅಚ್ಚ ಕನ್ನಡ ಪ್ರೇಮ ಅನೇಕ ಸಲ ಅವರ ಸ್ವಂತ ಅಣ್ಣನನ್ನೂ ಒಳಗೊಂಡಂತೆ ತಮ್ಮ ಸಮಕಾಲೀನ ಕನ್ನಡ ದಿಗ್ಗಜರನ್ನು ಎದುರು ಹಾಕಿಕೊಳ್ಳುವಂತೆ ಮಾಡಿತ್ತು.

ಕನ್ನಡಕ್ಕಾಗಿ ಕನ್ನಡ ದಿಗ್ಗಜರೊಡನೆಯೇ ಜಟಾಪಟಿ

ಕನ್ನಡ ಪ್ರೇಮಿಯಾಗಿದ್ದ ಶ್ರೀ ರಂ.ರಾ.ದಿವಾಕರರವರು ೧೯೩೯ ರಲ್ಲಿ, ಬಳ್ಳಾರಿಯಲ್ಲಿ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಮತ್ತು ಧೀಕ್ಷೆ ತೊಡುವ ಬದಲು ಹಿಂದಿ ಮೋಹಕ್ಕೆ ಬಲಿಯಾಗಿ, ಹಿಂದಿ ಪ್ರಚಾರವನ್ನು ಶುರುವಿಟ್ಟುಕೊಂಡರು.ಅಂದಿನ ಸರ್ಕಾರದ ಮೊರೆಹೊಕ್ಕು, ದೇಶದಲ್ಲೆಲ್ಲಾ ಸಂಚರಿಸಿ ಹಿಂದಿ ಪ್ರಚಾರ ಮಾಡುವುದನ್ನು ತಮ್ಮ ಧ್ಯೇಯ ಮಾಡಿಕೊಂಡರು. ಇದು ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದ್ದ ಕನ್ನಡದ ಕೆಲಸವನ್ನು ಕುಂಟಿತಗೊಳಿಸಿತ್ತು. ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅನಕೃ ಈ ಕುರಿತು ದಿವಾಕರರ ನಿಲುವನ್ನು ಖಂಡಿಸಿ ಕನ್ನಡ ನುಡಿಯಲ್ಲಿ ಲೇಖನವನ್ನು ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಅವರು ಅನಕೃ, ದಿವಾಕರರ ಕ್ಷಮೆ ಕೇಳಿ ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟು ಹಿಡಿದಾಗ ಅನಕೃ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಹೊರನಡೆದಿದ್ದರು. ಅನಕೃ ಗೆ ಆಗ ಕೇವಲ ೩೦ ವರ್ಷ. ಅಂದಿನಿಂದ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು ಅನಕೃ ತಮ್ಮ " ನನ್ನನ್ನು ನಾನೇ ಕಂಡೆ" ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಆಣ್ಣನನ್ನು ಎದುರು ಹಾಕಿಕೊಂಡ ತಮ್ಮ

ಅನಕೃ ನೇತೃತ್ವದಲ್ಲಿ ಕನ್ನಡ ಚಳವಳಿ ಎಷ್ಟೊಂದು ವ್ಯಾಪಕವಾಗಿ ಹಬ್ಬಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಕನ್ನಡಕ್ಕೆ ಸಂಬಂಧಪಟ್ಟ ಯಾವ ಕ್ಷೇತ್ರವನ್ನೂ ತಮ್ಮ ಚಳವಳಿಯಿಂದ ಬಿಡಲಿಲ್ಲ. ಆಗ ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುತ್ತಿದ್ದ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಹೆಸರುವಾಸಿ. ಆದರೆ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಛಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು. ಇಂಥ ದಿನ ಕೋಟೆ ಮೈದಾನದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮೀ ಕಛೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆ ಕಾಹಿದ ಅನಕೃ ನೇತೃತ್ವದ ದಂಡು ಪ್ರತಿಭಟನೆಯ ದನಿ ಮೊಳಗಿಸಿಯೇ ಬಿಟ್ಟಿತು. 'ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು' ಎಂದು ಅನಕೃ ಪಟ್ಟು ಹಿಡಿದರು. ಮಂಡಳಿಯೂ ಇದಕ್ಕೆ ಅಸ್ತು ಎಂದಿತು. ಅಂದಹಾಗೆ ಅನಕೃ ಹೀಗೆ ಸಿಡಿದೆದ್ದಾಗ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಎ.ಎನ್.ರಾಮರಾವ್. ಇವರು ಅನಕೃ ಅವರ ಸ್ವಂತ ಅಣ್ಣ! ಕನ್ನಡದ ವಿಚಾರದಲ್ಲಿ ಅನಕೃ ಯಾವ ರಾಜಿಗೂ ಸಿದ್ಧರಿರಲಿಲ್ಲ ಎನ್ನಲು ಇಷ್ಟು ಸಾಕು. (ಪುಟ ೨, ವಿಜಯ ಕರ್ನಾಟಕ, ೩ನೇ ಡಿಸಂಬರ್ ೨೦೦೭). ಈ ಸಂದರ್ಭದಲ್ಲೇ ಅನಕೃ ಅವರು ಕನ್ನಡ ಚಳವಳಿ ಸಂಯುಕ್ತ ರಂಗದ ಮಿತ್ರರ ಹೆಸರಿನಲ್ಲಿ ಕನ್ನಡ ಬಾರದವರಿಗೂ ಹಾಗು ಹೊರ ನಾಡವರಿಗೂ ನಮ್ಮ ಚಳವಳಿಯ ಧ್ಯೇಯೋದ್ದೇಶಗಳು ಪೂರ್ಣ ಮನವರಿಕೆಯಾಗಲೆಂದೇ ಇಂಗ್ಲೀಷ್‌ನಲ್ಲೊಂದು ಭಿತ್ತಿಪತ್ರ ಹೊರಡಿಸಿದರು.

ಕನ್ನಡದ ಕೆಲಸ ಮಾಡುವಾಗ ನಿನ್ನ ಸ್ವಂತದ್ದೇನಿದ್ದರೂ ಮದ್ಯೆ ತೂರಿಸಬೇಡ

ಒಮ್ಮೆ ಕನ್ನಡದ ಆಸ್ತಿ ಮಾಸ್ತಿ ಯವರೊಡನೆ ಅನಕೃ ಪರಿಷತ್ತಿನ ಕೆಲಸವೊಂದರ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂದು ಸರ್ಕಾರದಲ್ಲಿ ಹೆಸರು ಮಾಡಿದ್ದ ನಿಷ್ಠಾವಂತ ಅಧಿಕಾರಿ ಎ.ಸಿ.ದೇವೇಗೌಡ ಸಹ ಪ್ರಯಾಣಿಕರಾಗಿದ್ದರು. ಹಾಗೆಯೇ ಮಾತನಾಡುತ್ತ ಪ್ರಯಾಣಿಸುತ್ತಿದ್ದಾಗ, ಮಾಸ್ತಿಯವರು ಗೌಡರನ್ನು ತಮ್ಮ ಸ್ವಂತ ಪತ್ರಿಕೆ 'ಜೀವನ' ಕ್ಕೆ ಚಂದಾದಾರರಾಗಬೇಕಂದರು. ಆಗ ಅನಕೃ, ಮಾಸ್ತಿಯವರನ್ನು ಕುರಿತು ಹೇಳಿದ್ದು ಹೀಗೆ 'ಈಗ ನಾವು ಹೊರಟಿರುವುದು ಪರಿಷತ್ತಿನ ಕೆಲಸಕ್ಕೆ ಹೊರತು ನಮ್ಮ ಸ್ವಂತ ಕೆಲಸಕ್ಕಲ್ಲ. ಈಗ ನಾವು ಮಾಡಬೇಕಾಗಿರುವುದು ಪರಿಷತ್ತಿಗೆ ಸದಸ್ಯರನ್ನು ಕೂಡಿಸುವ ಕೆಲಸ ಮಾತ್ರ. ಅಂದು ಗೌಡರು ನಾನು 'ಜೀವನ'ಕ್ಕೂ ಚಂದಾದಾರನಾಗುತ್ತೇನೆ ಮತ್ತು ಪರಿಷತ್ತಿಗೂ ಸದಸ್ಯನಾಗುತ್ತೇನೆ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು (ಪುಟ ೩೦೩, "ಬರಹಗಾರನ ಬದುಕು", ಅನಕೃ)

"ನನಗಿರುವುದು ಒಂದೇ ಕನ್ನಡ!"

ಅನಕೃ ಪದೇ ಪದೇ ಒಂದು ವಿಷಯ ಪ್ರಸ್ತಾಪಿಸುತ್ತಿದ್ದರು: "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ". ಈ ಮಾತುಗಳನ್ನ ಕನ್ನಡಿಗರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆ ನೆನಸ್ಕೊಂಡು, ಕನ್ನಡದ ಏಳಿಗೆಗೆ ಕಿರುಬೆರಳನ್ನಾದ್ರೂ ಎತ್ತಿದ್ರೆನೇ ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಅನಕೃ ಅವರ ಕನ್ನಡ ಪರ ಕಾಳಜಿಗೆ ಸಾರ್ಥಕತೆ ಸಿಗೋದಲ್ವ ಗುರು!

21 ಅನಿಸಿಕೆಗಳು:

ಶ್ವೇತ ಅಂತಾರೆ...

lekhana tumba chennagide. kannadetara kalavidarannu ee hinde karesidaga aa na kru avaru chaluvali maadidarendu enguru nalli oodiddevu. adakke poorakavaagi aa na kru avara kiru parichaya kottiddu tumba chennagide. aa na kru avaranteye kannadetara kalaavidarannu karesiddannu bengaluru habbadalli naavu yaake pratibhatisabaaradu?

Anonymous ಅಂತಾರೆ...

ಅನಕೃ ಅವರ ಕನ್ನಡ ಪ್ರೀತಿ, ಕಾಳಜಿ, ಕೆಚ್ಚು ಇಷ್ಟೆಂದು ತಿಳಿದಿರಲಿಲ್ಲ, ಅಲ್ಪ ಸ್ವಲ್ಪ ಗೊತ್ತಿತ್ತಾದರೂ. ಉತ್ತಮ ಲೇಖನದ ಮೂಲಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಓದಿ ರೋಮಾಂಚನವಾಯ್ತು. ಈಗ ಏಕೆ ಇಂಥ ಸಾಹಿತಿಗಳಿಲ್ಲ, ಎಲ್ಲ ತಮ್ಮ ತಮ್ಮ ಪ್ರಚಾರದಲ್ಲೇ ಮಗ್ನರಾಗಿದ್ದಾರೆ.

Anonymous ಅಂತಾರೆ...

ನಿಮ್ಮ ಇವತ್ತಿನ ಬ್ಲಾಗ್ ನೋಡಿ ಕಣ್ಣಿರು ಕಪಾಳಕ್ಕೆ ಬಂತ್ರಿ ಗುರುಗಳೇ ..
ನಾಡು ನುಡಿ ಬಗ್ಗ ಅವರಿಗ್ ಇದ್ದ ಕಾಳಜಿ ನೋಡಿ ಅವರ ಬಗ್ಗ ಬಾಳ ಪ್ರೀತಿ ಬಂತ್ರಿ .. ಅವನೌನ್ ನಮ್ಮ ಹಲ್ಕಟ್ ಸರ್ಕಾರ ಇಂಥ ಮಹಾನಿರಾಯ ಬಗ್ಗ ಶಾಲಿನಾಗ್ ನಮಗೂ ತಿಳಸುದ್ ಬಿಟ್ಟು ಎಂಥ ದೊಡ್ಡ ಮೋಸ ಮಾಡ್ಲಿಕತ್ತೆತಿ ನೋಡ್ರಿ.. ಧಿಕ್ಕಾರ ಎ ಮಂಗ್ಯ ನನ್ ಮಕ್ಕಳಿಗೆ..
ಇಂಥ ವರದಿ ಆವಾಗವಾಗ ಬರೀರಿ ಗುರುಗಳೇ
ಹಂಗ ಇ ಲಿಂಕ್ ನೋಡ್ರಿ
http://www.baraha.com/anakru.htm

Anonymous ಅಂತಾರೆ...

Naanu anakru avaru kannada da chaluvali gara,karnatakada eki karanakke horadida maahanubhava endaste thilidithhu,Lekhana odi estho vicharagalu thilidu bandavu.
Kannada naadalle iddu kondu kannada maathadalu hinjeriva yuvaka-yavuthi aru ee lekhana odabeku,yavudo parakiyaa bhasheya vyomohakke olagagi handi cinema kshamisi Hindi cinema glannu nodi prabhavitharagi hindi alli maathaduthha kaala kalevuva igana yuvakarige gothhagabeku namma anakru avara kannada para horata.
Namma Anakru avara daariyalle nediyona//usiru irovaregu kannadakkagi horadonaa...enanthiya guru??????/
Siri gannadam gelge..
Uppigintha ruchi illa,thaayigintha devarilla,kannadikkintha migilada bhashe illa....

Anonymous ಅಂತಾರೆ...

shaleyalli yaake namagella idannu helalilla andre avrella kannadakkagi horadidavaru prashastigaagiyagali huddegaligaagali horadilla matte yaavude rajakaaranigala marji hidiyalilla. ivaru marxist barahagaaranthe edarangada bagge olavu belesiddare khanditha ivarigu prachara siktha ittu. nimma maatu nija kannada antha ivattenaadru ide andre adakke ANAKRU, GALAGANAATHA antavaru iddidrindale. ivarigella komuvaadi pattakatti ivarannella namm patyakramagalinda vyavastitavaagi dooaravidalaayitu. yaakendre ivarella muslim tushtikarana madalilla.. idannella odtha idre mai benki agutte.

Anonymous ಅಂತಾರೆ...

Anakru was neither a fanatic nor an extremist when he spearheaded the cause of Kannada. In his fight for Kannada, he never undervalued other languages or the people. He never meant others are enemies of Kannada or they are low, that we should drive away or torture people who speak other languages. Neither ignorance of other languages nor hatred towards them turned him to be a Kannada lover. His cardinal principle was that all people of all languages should live in harmony in Kannada land but not at the cost of trampling over Kannada and its culture.

Anonymous ಅಂತಾರೆ...

Anakru believed "Only humanism values can save the world from exploding; and writer is the prophet of humanism". While he fought for the cause of Kannada, he maintained friendly relationship with the writers and artists of the neighboring states. Once in a function in Tamilnadu, he made his speech in Tamil and surprised the fellow Tamil artists. His friendship with the Mumbai theatre brought icons like Prithviraj Kapoor to Kannada filmdom. Anakru believed that one should not ignore the regional languages of the Indian states in the name of nationality. "Strong states such as Karnataka, Andhra, Maharashtra, Bangala should save and nurture their rich regional, cultural specialities in order to build a strong Indian nation. A weak province is always the enemy of the nation. This is the reason why we fight for Kannada. Others may consider us as narrow minded. But time will decide everything" was his words. When the fight for Indian independence was at peek, he urged his followers to keep the Kannada agitation down. "This is the time we all Indians forget our internal differences, unite together and join the cause of independence, which is the only most important thing now. We can settle our internal differences later." was his words. Anakru was never an opportunistic. His love for Kannada was never against the nationalism.

Madhu ಅಂತಾರೆ...

Aa Na Kru ravara bagegina ivathina lekhana sakkathagidhe guru...

Lohith ಅಂತಾರೆ...

enta obru mahan pursha kannada ke idru anta evath nanag gotaythu guru....Danyavadagalu enta oba mahan pursha na bagye tels idake....E lekaniya koneya salu nanag tumba esta aythu guru......

Anonymous ಅಂತಾರೆ...

monne Aa.Na.Kru tavaraada ArakalaguDina maargavaagi hOguttiddaaga, allina mukhya bus nildaaNada mumbhaagadalli ondu Aa.Na.Kru pratime sthaapisiruvudu kaNDubantu. ishtu varshavaada melaadaroo ee kelasa maaDiddaralla andu konDe.

idannella namma makkaLige paTyapustakadalli aLavaDisi tiLisuvudu olleyadu. ee Aa.Na.Kru, Alura venkataraayaru ivara bagegina pAATagaLella ekilla guruve?

bari gandhiji nehruji paaTa maatra odustaaralla, namma naaDina veeraru ivarige kannige kaaNsode ilva?

Anonymous ಅಂತಾರೆ...

bahushaha pratinitya bareyuttiddante baalisha bhaasheyannu baLasade spashTa, uttama kannaDavannu baLasi barediruvudu neevu ide modalu.

anyway, intaha olleya lekhana kke thanks.

innu mundeyaadaroo proudhateyinda bhaasheyannu baLasi. college paddegaLu maatanaaDuvante bareyabEDi. adu bhaasheyannu keDisuttade ashte.

Anonymous ಅಂತಾರೆ...

ಲೆನಿನ್ , ಟ್ರೂಮನ್, ಗಾಂಧೀಜಿ ಬಗ್ಗೆ ಅನಕೃ ಹೇಳಿರುವುದು.

ಲೆನಿನ್ ಮಹಾಶಯ ಜಗತ್ತಿಗೆ ಕೊಟ್ಟ ಸಂದೇಶ ದ್ವೇಷ: ಟ್ರೂಮನ್ ಮಹಾಶಯ ಜಗತ್ತಿಗೆ ಕೊಟ್ಟ ಸಂದೇಶ ಪರಪೀಡನೆ: ಗಾಂಧೀಜಿ ಜಗತ್ತಿಗೆ ಕೊಟ್ಟ ಸಂದೇಶ ಪ್ರೇಮ. ಇವುಗಳಲ್ಲಿ ನಮಗೆ ಯಾವುದು ಬೇಕು-ಜಗತ್ತಿಗೆ ಯಾವುದು ಬೇಕು?

ಜಗತ್ತಿನ ಇತಿಹಾಸ ನೋಡಿದರೆ, ಜಗತ್ತಿನ ಶಾಂತಿಯನ್ನು ಸಾಧಿಸಿದ ದೇಶ ಭಾರತವೆನ್ನುವುದು ಸ್ವತಃಸಿದ್ಧವಾಗುತ್ತದೆ. ನಮಗೆ-ಹಾಗು ಜಗತ್ತಿಗೆ ಬೇಕಾದುದು ಅಮೇರಿಕನ್ ಜೀವನಕ್ರಮವೂ ಅಲ್ಲ: ಕಮ್ಯುನಿಸ್ಟ್ ಜೀವನ ಕ್ರಮವೂ ಅಲ್ಲ: ಭಾರತದ ಜೀವನಕ್ರಮ-ಉಪನಿಷತ್ತಿನ ಋಶಿಗಳು ತೋರಿಸಿಕೊಟ್ಟಿರುವ ರಾಜಮಾರ್ಗ.

ರೇಣುಕಾ ನಿಡಗುಂದಿ ಅಂತಾರೆ...

ನಿಮ್ಮ ಎಲ್ಲಾ ಬ್ಲಾಗ್ ಗಳು ಅನೇಕ ಚಿಂತನೆ,ಆಲೋಚನೆಗಳಿಂದ ಕೂಡಿವೆ. ಇಷ್ಟವಾಯಿತು. ಹೀಗೆ ಮುಂದುವರೆಯುತ್ತಿರಲಿ. ಅ.ನ್.ಕೃ. ಬಗ್ಗೆ ಮತ್ತಷ್ಟು ಓದಲು ನೀಡಿದ್ದಿರಿ. ಮಾಹಿತಿಪೂರ್ಣ ಲೇಖನ ಗುರು. ಧನ್ಯವಾದಗಳು.

Anonymous ಅಂತಾರೆ...

ಅನಕೃ ಹೇಳಿದ್ದಾರೆ.........

ಮಾನವನ ಮಹಾಯಾತ್ರೆಯಲ್ಲಿ ಗುರು ಒಂದು ಊರುಗೋಲಿದ್ದಂತೆ! ತಾನೆ ಯಾತ್ರೆ ಮಾಡಿಸಿದೆನೆಂದು ಊರುಗೋಲು ಹೇಳಲು ಸಾಧ್ಯವೆ?

ಗುರು ನಿಮಿತ್ತ ಮಾತ್ರ ಅವನು ಸಕಾಯನೂ ಆಗಿರಬಹುದು. ನೀಕಾಯನೂ ಆಗಿರಬಹುದು. ಸಂಚಿತ ಪ್ರಾರಬ್ಧ ಕರ್ಮದ ಭಾಧೆಯನ್ನು, ಪರಿಹರಿಸಿಕೊಳ್ಳುವ ಮಾರ್ಗವನ್ನೂ ಗುರು ನಿರ್ದೇಶಿಸಬಹುದು

ಆದರೆ ಆ ಮಾರ್ಗದಲ್ಲಿ ಶಿಷ್ಯನೇ ನಡೆಯಬೇಕಲ್ಲವೇ.


ಇಲ್ಲಿ ನಮ್ಮ ಗುರುಗಳ ಎಲ್ಲಾ ಲೇಖನವೂ ಕನ್ನಡಕ್ಕೆ ಊರುಗೋಲಿದ್ದಂತೆ. ಓದುವ ಶಿಷ್ಯಪಡೆ ಕನ್ನಡಕಾಯಕವನ್ನು ತಮ್ಮ ನಿತ್ಯಜೀವನದಲ್ಲಿ ಅನುಸರಿಸಿದಲ್ಲಿ ಗುರುಗಳ ಜನ್ಮ ಧನ್ಯ.

ನಾನು ಬರ್ದಿರೋದು ಸರೀನಾ ಗುರು!

ಈ ನಿಟ್ಟಿನಲ್ಲಿ ನಾನು ಒಂದೆರಡು ಹೆಜ್ಜೆ ಇಟ್ಟಿದ್ದೇನೆ.

ಮೊನ್ನೆ ನನ್ನ ಹುಟ್ಟುಹಬ್ಬದಂದು ನನ್ನ ಗೆಳತಿಯರೊಡನೆ 'ಪಿಜಾ ಗುಡಿಸಿಲಿಗೆ' ಹೋಗಿದ್ದೆ. ಅಲ್ಲಿ ಇಂಗ್ಲೀಷ್ ಮತ್ತು ಹಿಂದಿ ಹಾಡು ಪ್ರಸಾರ ಮಾಡ್ತಿದ್ರು. ನಾನು ಕನ್ನಡ ಬೇಕು ಎಂದೆ. ಇಲ್ಲ ಅಂದ್ರು. ನಾನು ತಿಂಡಿಗೆ ಆದೇಶ ಕೊಟ್ಟಿದ್ದೆ. ನನ್ನ ಗೆಳತಿಯರಿಗೆ ನಡೀರೆ ಇಲ್ಲಿಂದ ಹೋಗೋಣ ಅಂದೆ. ಮೇಡಮ್ ನಿಮ್ಮ ಆರ್ಡರ್ ಅಂತ ಬಂದ. [ಅವರು ಕನ್ನಡ ಸಹ ಮಾತಾಡೊಲ್ಲ]ಕನ್ನಡ ಹಾಡು ಹಾಕಿದ್ರೆ ಇಲ್ಲಿ ಕೂತು ತಿನ್ತೀವಿ ಇಲ್ಲದಿದ್ರೆ ಆರ್ಡರ್ ಮಾಡಿದ್ದು ನಿಮ್ಮ ಅಂಗಡೀಲಿರೊರೆಲ್ಲ ತಿನ್ನಿ ಅಂದೆ.

ಬಲವಂತೆ ಮಾಡಿದ್ದಕ್ಕೆ ಎಫ್.ಎಂ. ವಾಹಿನಿ ಬದಲಾಯಿಸಿದ್ರು. ಕನ್ನಡ ಹಾಡು ಕೇಳಿಬಂತು.

ನಾವು ಹುಡುಗೀರು ಸಹ ಬದಲಾಗಬೇಕು. ನಾವು ಓಡಾಡೋ ಕರೆ ಕೇಂದ್ರದ ವಾಹನದಲ್ಲಿ ಕನ್ನಡ ಹಾಡಿಗೆ ಡಿಮಾಂಡ್ ಮಾಡ್ಬೇಕು. ಬ್ಯಾಂಕು ಎಲ್ಲೇ ಹೋದ್ರು ಕನ್ನಡದಲ್ಲಿ ಮಾತಾಡಬೇಕು,ಬರೀಬೇಕು.

ನಮ್ಮ ಆಫೀಸಲ್ಲಿ ನನಗೆ ಕೆಳದಿ ಚೆನ್ನಮ್ಮ ಅಂತ ಅಡ್ಡ ಹೆಸರಿಟ್ಟಿದ್ದಾರೆ! ಅಂದ ಹಾಗೆ ನಾನು ಓದಿದ್ದು [ನಮ್ಮಪ್ಪ ಓದಿಸಿದ್ದು, ಕೆಲಸದ ಸಲುವಾಗಿ ಅವರು ಊರೂರು ತಿರುಗ್ತ ನನ್ನನ್ನೂ ತಿರುಗಿಸಿದ್ರು] ಇಂಗ್ಲೀಷು ಮೀಡಿಯಮ್ ! ನನ್ನ ಮನೆ ಭಾಷೆ ತಮಿಳ್ಗನ್ನಡ! ಕರ್ನಾಟಕದಲ್ಲಿ ಎಲ್ಲೇ ಇದ್ರೂ ಮನೆ ಹೊರಗೆ ಕಾಲಿಟ್ರೆ ನನ್ನ ಭಾಷೆ ಕನ್ನಡ!

ಇತ್ತೀಚೆಗೆ ಕೆಲವು ಅನಕೃ ಕಥೆ,ಕಾದಂಬರಿ ಓದ್ತಾ ಇದ್ದೀನಿ. ಬಹಳ ವಿಚಾರ ಪೂರ್ಣವಾದವುಗಳು.......

ಎಲ್ರೂ ಅನಕೃ ತರ ಕನ್ನಡಿಗರಾಗಿ.........

Anonymous ಅಂತಾರೆ...

ಜಯಂತಿಯವರ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಯ್ತು. ಜಯಂತಿಯವರೆ ನಿಮ್ಮ ತರ ನಮ್ಮ ಹುಡ್ಗೀರೆಲ್ಲ ಆದ್ರೆ ಮುಕ್ಕಾಲು ಭಾಗ ಕನ್ನಡ ಉದ್ಧಾರ ಆದಂಗೆ. ಬೇರೆ ಏನು ಬೇಡ.

Amarnath Shivashankar ಅಂತಾರೆ...

kannaDa chaLuvaLi pitaamaha Anaakru nammelarige spoorti..

ದೀಪಕ ಅಂತಾರೆ...

ವರಶೇರವರೇ,

ಅನಕೃರವರ ಬಗ್ಗೆ ನೀವು ಬರೆದಿರುವ ಈ ಲೇಖನ ಅದ್ಭುತವಾಗಿದೆ. ಕನ್ನಡವೇ ತನ್ನ ಉಸಿರೆನ್ನುತ್ತಿದ್ದ ಅನಕೃರವರ ಬಗ್ಗೆ ನನಗಿದ್ದ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

ಇ೦ತಿ,

ದೀಪಕ

Anonymous ಅಂತಾರೆ...

namaskara geleyare. Naanu anakru mammaga anirudh. nimma blog haagu comments nodi thumba khushi aaythu. Nimage anakru bagge innu mahithi bekaadare dayavittu www.anakru.com ge hogi. naavu hosadaagi shuru madideve.

Innondu olle suddi yenedare. avara granthagalanna naavu audio books naagi maadi release maduthiddeve. modalane grantha Sandhyaraaga, ee 25th bidugade ide. adara bagge thilidu kollalu www.anakru.com ge hogi.

prasadh ಅಂತಾರೆ...

ivaru nanna maadari purusha :)

ಪ್ರಶಾಂತ ಸೊರಟೂರ ಅಂತಾರೆ...

ಅ.ನ.ಕೃ ಅವರನ್ನ ಅರ್ಥಪೂರ್ಣವಾಗಿ ನೆನೆದಿದ್ದೀರಿ.
ಅಜಯ ಅವರಿಗೆ ಅನಿಸಿದಂತೆ, ಜಯಂತಿಯವರ ಪ್ರತಿಕ್ರಿಯೆ ಓದಿ ನನಗೂ ತುಂಬಾ ಸಂತೋಷವಾಯಿತು.
ಪ್ರತಿಯೊಬ್ಬರು ಇವರಂತೆ ಕನ್ನಡ ಪ್ರೀತಿ ಮೆರೆದರೆ, ಎಷ್ಟು ಚೆನ್ನ.
(ಪಿಜಾ "ಗುಡಿಸಲು" - ಹೆಸರು ಚೆನ್ನಾಗಿದೆ :-) )

Anonymous ಅಂತಾರೆ...

Namma janarige iruva basha vyamoha innadaru dooragali.
navu ega echhara golladiddare nale namma kannda bashaamrutha the ruchiyannu saviyalu mathu ethararege savisalu agadu.
AA NA KRISHNARAYARU kannada sahithya lokada meru parva.
sampadaka sri anand avarige nanna abinandanegalu.


nimma priyhiya

Somu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails