ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ. ಭ್ರಾಮಕ ಕಲ್ಪನೆಗಳನ್ನು ಬಿಟ್ಟು ಬಿಡೋಣ. ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನ ಶೂನ್ಯರು ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವಿನಿ ಮಾತ್ರೆಯನ್ನು ಹಾಕಿ ಚೇತನಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿ ಬಿಡುವಂಥ ಹುಳುಗಳನ್ನು ಕೊಲ್ಲಲು ಇತಿಹಾಸವೇ ಮದ್ದು.
ಕರ್ನಾಟಕವು ಇತಿಹಾಸದಲ್ಲಿ ಕೋಟಿಸೂರ್ಯಗಳ ಹೊಳಪಿನಿಂದ ಹೊಳೆಯುತ್ತಿತ್ತು. ಇಂದಿನ ತಮಿಳುನಾಡು, ಆಂಧ್ರಪದೇಶ, ಕೇರಳ, ಒರಿಸ್ಸಾ, ಶ್ರೀಲಂಕಾಗಳನ್ನೆಲ್ಲ ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ಕನ್ನಡಿಗ ಅರಸರನ್ನು ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ ಇವತ್ತು. ಇಂಥಾ ಇತಿಹಾಸವನ್ನು ನಾವು ಮರೆತಿರುವುದರಿಂದಲೇ ಇವತ್ತಿನ ದಿನ ನಮ್ಮನ್ನು ಅನಾದಿಕಾಲದಿಂದ ತಮಿಳರು ಆಳುತ್ತಿದ್ದರು ಎಂದು ಅನೇಕ ಭಾರತೀಯರು ನಂಬಿರುವುದು. ಏನ್ ಗುರು?
1 ಅನಿಸಿಕೆ:
ಗುರುಗಳೆ,
ನಮ್ಮ ರಟ್ಟಕೂಟರೇನು ಕಮ್ಮಿ ಇಲ್ಲ. ಮುಳಿಯ ತಿಮ್ಮಪ್ಪಯ್ಯನವರ 'ಕವಿರಾಜಮಾರ್ಗ ವಿವೇಕ ಬಾಗ ೧" ಓದಿದರೆ ತಿಳಿಯುತ್ತದೆ. ಅಮೋಗವರುಶನ ತಂದೆ ಗೋವಿಂದರಸ ನಮ್ಮ ಇಡೀ ಇಂಡಿಯಾಕ್ಕೆ ಚಕ್ರವರ್ತಿಯಾಗಿದ್ದನಂತೆ. ಇದನ್ನು ಎ.ಎಸ್.ಅಲ್ತೇಕರ್ ತಮ್ಮ "Rashtrakutas and their times" ಎಂಬ ಹೊತ್ತಿಗೆಯಲ್ಲಿ ಶಾಸನದ ಸಮೇತ ತೋರಿಸಿಕೊಟ್ಟಿದ್ದಾರೆ. ನಮ್ಮ ಗೋವಿಂದರಸನ ರಾಜ್ಯ ಕಾವೇರಿಯಿಂದ ಗಂಗಾ ಬಯಲಿನವರೆಗೂ ಹರಡಿತ್ತಂತೆ. http://www.sampada.net/blog/12/09/2007/5679
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!