ಮಹಾರಾಷ್ಟ್ರದಲ್ಲಿ ಮಾತ್ರ ಕನ್ನಡದ ಪ್ರವೇಶವಿರಲಿಲ್ಲವೆಂದು ಅನೇಕರು ಇನ್ನೂ ನಂಬುತ್ತಾರೆ. ಆದರೆ ಈ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ ನಮ್ಮ ಪರಮ ಸ್ನೇಹಿತರಾದ ನಾರಾಯಣ ಶ್ರೀನಿವಾಸ ರಾಜಪುರೋಹಿತ ಇವರು ’ಜ್ಞಾನೇಶ್ವರಿ’ ಯಲ್ಲಿ ಕನ್ನಡ ಶಬ್ದಗಳು ತುಂಬಿರುತ್ತವೆಂದೂ, ಗೋವೆಯಲ್ಲಿಯ ಲೆಕ್ಕಪತ್ರಗಳು ಮೊನ್ನೆ ಮೊನ್ನಿನ ವರೆಗೆ ಕನ್ನಡದಲ್ಲಿಯೆ ಇದ್ದುವೆಂದೂ, ಪಂಢರಪುರದ ಶ್ರೀವಿಟ್ಠಲನು ಮುಖ್ಯವಾಗಿ ಕನ್ನಡಿಗರ ದೇವತೆಯೇ ಎಂದೂ, ಪಂಢರಪುರದ ಸುತ್ತಲಿನ ಪ್ರದೇಶವು ಕನ್ನಡವೇ ಎಂದೂ, ಈಗ ೨೭ ವರ್ಷಗಳ ಕೆಳಗೆಯೇ ಮಾರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಪ್ರಸಿದ್ಧ "ಕೇಸರೀ" ಪತ್ರದಲ್ಲಿ "ಮಹಾರಾಷ್ಟ್ರ ವ ಕರ್ನಾಟಕ" ಎಂಬ ಲೇಖನಮಾಲೆಯಲ್ಲಿ ಸಪ್ರಮಾಣವಾಗಿ ಸಾಧಿಸಿರುವರು.
ಆದರೆ ಇದೇ ವಿಷಯವನ್ನು ವ್ಯಾಸಂಗ ಮಾಡುತ್ತಿರುವಾಗ ನಮಗೆ ಗೊತ್ತಾದ ಕೆಲವು ಮಹತ್ವದ ಹೆಚ್ಚಿನ ಸಂಗತಿಗಳನ್ನು ಇಲ್ಲಿ ನಾವು ಹೇಳುವೆವು. ಇತಿಹಾಸ ಸಂಶೋಧಕರು ಆ ಮಾರ್ಗದಿಂದ ಮುಂದೆ ಸಾಗಿ ಹೆಚ್ಚಿನ ಶೋಧಗಳನ್ನು ಮಾಡಿ, ಈಗಿನ ಮಹಾರಾಷ್ಟ್ರ ಭಾಷೆಯ ನಾಡಿನಲ್ಲಿ, ಕನ್ನಡಿಗರ ರಾಜ್ಯವಿಸ್ತಾರವಿದ್ದುದಲ್ಲದೆ, ಕನ್ನಡ ಭಾಷಾವಿಸ್ತಾರವು ಕೂಡ ಇತ್ತೆಂಬ ನಮ್ಮ ವಿಧಾನವನ್ನು ಹೆಚ್ಚಿಗೆ ಬಲಪಡಿಸಬೇಕೆಂದು ನಮ್ಮ ಪ್ರಾರ್ಥನೆ.
ನಮಗೆ ಗೊತ್ತಾದ ಸಂಗತಿಗಳು ಯಾವುವೆಂದರೆ -
(೧) ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ, ಕನ್ನಡಿಗರಿಗೆ ಆನಂದವೂ ಆಶ್ಚರ್ಯವೂ ಆಗದಿರದು. "ಕೆಂದೂರು" ಎಂಬ ಶುದ್ಧ ಕನ್ನಡದ ಹೆಸರಿನ ಊರು ಪುಣೆಯ ಹತ್ತರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠೀ ಜಿಲ್ಲೆಗಳಲ್ಲಿಯೂ, ಕನ್ನಡದ ಹೆಸರಿನ ಗ್ರಾಮಗಳು ತುಂಬಿರುತ್ತವೆ. ಉದಾಹರಣೆಗಾಗಿ -- ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೇರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪುರ, ಕುರಡೀವಾಡಿ, ಕಳಸ ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡದವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಮೊನ್ನೆ ಮೊನ್ನೆ ಒಪ್ಪಿಕೊಂಡಿದ್ದಾರೆ.
(೨) ಅಣ್ಣಂಭಟ್ಟ, ಕೃಷ್ಣಂಭಟ್ಟ ಮುಂತಾದ ಅಲ್ಲಿ ರೂಢವಿರುವ ಹೆಸರುಗಳೊಳಗಿನ ಮಕಾರವು ಕನ್ನಡ ಪ್ರತ್ಯಯವಾಗಿದೆ.
(೩) ಸಾತಾರಾ ಮುಂತಾದ ಸ್ಥಳಗಳಲ್ಲಿಯ ಜೈನರು ಬುನಾದಿಯಿಂದಲೂ ಕನ್ನಡ ಭಾಷೆಯನ್ನು ಆಡುತ್ತಾರೆ.
(೪) ಕರ್ನಾಟಕದಲ್ಲಿಯ ಹಲವು ಮನೆತನದ ಕುಲದೇವತೆಗಳು ಮಹಾರಾಷ್ಟ್ರದಲ್ಲಿವೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾಭವಾನಿ, ಇವೇ ಅವು.
(೫) ಕರ್ನಾಟಕದಲ್ಲಿಯ ಗುಡಿಗಳೊಳಗಿನ ಆಚಾರ-ಪದ್ಧತಿಗಳೇ ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತವೆ. ನಮ್ಮ ಮಿತ್ರರಾದ ಶ್ರೀ ರಾಜಪುರೋಹಿತರು ದೇವರಗುಡ್ಡದಲ್ಲಿಯ ಗುಡಿಗೂ, ಜೇಜೂರಿನಲ್ಲಿರುವ ಗುಡಿಗೂ ಇರುವ ಸಾಮ್ಯವನ್ನು ಸಿದ್ಧಪಡಿಸಿರುವರು. ಅದರಂತೆಯೇ ಚಿಪಲೂಣದ ಹತ್ತಿರವಿರುವ ಪರಶುರಾಮ-ರೇಣುಕಾ ಗುಡಿಯು ಸವದತ್ತಿಯ ಎಲ್ಲಮ್ಮನ ಗುಡಿಗೆ ಸಾಮ್ಯವಾಗಿರುತ್ತದೆ.
(೬) ಮುಂಬಯಿಯ ಸುತ್ತಮುತ್ತಲಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದರೆಂದು ಮುಂಬಯಿ ಗ್ಯಾಝೆಟಿಯರದಲ್ಲಿ (Bombay Gazzeteer) ಉಲ್ಲೇಖವಿದೆ.
(೭) ಕೊಲ್ಲಾಪುರದ ಅರಸುಮನೆತನದ ಲಗ್ನಗಳಲ್ಲಿ "ಬಿಸಿಲೂಟ" ಎಂಬುವ ಪದ್ಧತಿಯು ಉಂಟಂತೆ.
(೮) ಹಿಂದೂ ದೇಶದ ಬ್ರಾಹ್ಮಣರಲ್ಲಿ ಪಂಚದ್ರಾವಿಡರೆಂತಲೂ, ಪಂಚಗೌಡರೆಂತಲೂ ವರ್ಗಗಳು ಉಂಟು. ಮಹಾರಾಷ್ಟ್ರದೊಳಗಿನ ಕೊಂಕಣಸ್ಥ ಮತ್ತು ದೇಶಸ್ಥ ಬ್ರಾಹ್ಮಣರು ಪಂಚದ್ರಾವಿಡರಲ್ಲಿ ಸೇರುತ್ತಾರೆ. ಇದಕ್ಕೆ ಕಾರಣವೇನಿರಬಹುದು?
(೯) ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ "ದೋಡಾಮಾರ್ಗ" (ದೊಡ್ಡಮಾರ್ಗ) ಎಂದು ಈಗಲೂ ಕರೆಯುತ್ತಾರೆ.
(೧೦) ಕೊಂಕಣದಲ್ಲಿಯ ಮಹಾರಾಷ್ಟ್ರ ಭಾಷೆಯಲ್ಲಿ "ಮಣೆ", "ನಿಚ್ಚಣೆ" ಮುಂತಾದ ಕನ್ನಡದ ಹೆಸರುಗಳಿರುತ್ತವೆ.
(೧೧) ಜಕಣಾಚಾರ್ಯರು ಕಟ್ಟಿದ ಕಟ್ಟಡಗಳು ಮಹಾರಾಷ್ಟ್ರದಲ್ಲಿಯೂ ಇವೆ. ಅವುಗಳಿಗೆ ಅವರು "ಹೇಮಾಡಪಂತೀ" ಗುಡಿಗಳೆಂದೂ ಹೇಳುತ್ತಾರೆ.
(೧೨) ಇನ್ನೂ ಮಹತ್ವವುಳ್ಳ ಸಂಗತಿಯೇನೆಂದರೆ, ಮಧ್ಯ ಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲುಗಳೂ ದೊರೆತಿವೆ. ಸಾತಾರಾ ಜಿಲ್ಲೆಯ ಮಸವಡ ಎಂಬ ಗ್ರಾಮದಲ್ಲಿ ಒಂದು ಕನ್ನಡ ಶಿಲಾಶಾಸನ ದೊರೆತಿದೆ...
ಈಗ ನೀವೇ ಹೇಳಿ - ಇಂಥಾ ಕನ್ನಡ ನಾಡಿನಲ್ಲಿ ಇವತ್ತು ಬೆಳಾಗಾವಿ ಮರಾಠಿಗರ ಹಾವಳಿಯಿಂದ ಕಷ್ಟ ಪಡ್ತಿರೋದು ನೋಡುದ್ರೆ ನಗಬೇಕೋ ಅಳಬೇಕೋ ಗುರು?!
16 ಅನಿಸಿಕೆಗಳು:
bahaLashTu sangatigaLu nanage tiLidiralilla..
enguru sampaadakarige dhanyavaadagaLu
Someone, please let me know if there is a english version of this article. Also any other english language documents related to the same subjects are welcome.
ಇಂದಿಗೂ ದಕ್ಷಿಣ ಮಹರಾಷ್ಟ್ರದಲ್ಲಿ "ತಾಯಿ" ಮತ್ತು "ಅಣ್ಣ" ಪದಗಳನ್ನು ಹೆಸರಿನ ಜೊತೆಗೆ ಸೇರಿಸುತ್ತಾರೆ.
ಸಂಪದದಲ್ಲಿ ಕಂಡುಬಂದ ಕೊಂಡಿಯನ್ನು ನೋಡಿ. ಆರ್ಯಪೂರ್ವ ಭಾರತದಲ್ಲಿ ಕನ್ನಡ/ತಮಿಳು ನುಡಿಗಳ ಪ್ರಭಾವವಿದ್ದ ಪ್ರದೇಶಗಳ ನಕ್ಷೆ - http://www.sampada.net/image/6287.
ಮಹರಾಷ್ಟ್ರ ಹೋಗಲಿ, ಇದರ ಪ್ರಕಾರ ಇಂದಿನ ಭಾರತದ ಅರ್ಧದಷ್ಟು ಪ್ರದೇಶದಲ್ಲಿ ಕನ್ನಡ/ತಮಿಳು ನುಡಿಗಳನ್ನು ಜನ ಬಳಸುತ್ತಿದ್ದರು!!
en guru balagada sadasyarege nanna namana galu enta one visya namag telsidake
ಮಹಾರಾಷ್ಟ್ರದಲ್ಲಿ ಇರುವ ಒಂದು ಊರಿನ ಹೆಸರೇ ’ಕನ್ನಡ’.
ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ:
"ಕನ್ನಡ ನುಡಿದಿಯು ಕನ್ನಡ ಹಕ್ಕಿ
ಕನ್ನಡವೆಂದಿತು ಆ ಗೋದೆ" ಎಂದು ಬರೆದಿದ್ದಾರೆ. ಅವರೆ ಈ ಸಾಲುಗಲ್ಲಿ ಅಡಗಿದ pun ಬಿಡಿಸಿ ಹೇಳುವಾಗ ಗೋದಾವರಿ ನದಿಯ ದಂಡೆಯ ಮೇಲೆ "ಕನ್ನಡ" ಹೆಸರಿನ ಒಂದು ಹಳ್ಳಿ ಇದೆ ಎಂದು ಹೇಳಿದ್ದರು.
ಭಾರತದ ಅನೇಕ ಭಾಗಗಳಲ್ಲಿ ಕನ್ನಡ ಊರುಗಳು ಇವೆ. ಉದಾಹರಣೆಗೆ ಬಂಗಾಲದಲ್ಲಿರುವ ಪ್ರಸಿದ್ಧ "ಬೇಲೂರು".
ಕರ್ನಾಟಕದ ಸ್ಥಳನಾಮಗಳ ಬಗೆಗೆ ನಾನು ಬರೆದ ಪುಸ್ತಕವು ಬಹುಶ: ಜನೆವರಿ(೨೦೦೮)ಯಲ್ಲಿ ಪ್ರಕಟಗೊಳ್ಳಬಹುದು. ನಿಮ್ಮ ವಿಳಾಸ ನೀಡಿದರೆ ಒಂದು ಗೌರವ ಪ್ರತಿ ಕಳುಹಿಸಿಕೊಡುವೆ.
adbhuta baraha guru !!
ninage nine saaTi guru !
maharashtradallirorella ondanondu kalada kannadigare,,
nammante avarallu udhaara manobhava swalpa jaasti,, higagi mumbai indu valasigara paalagide..
ಸುಧೀಂದ್ರ ಅವರೆ,
ನಿಮ್ಮ ಪುಸ್ತಕವನ್ನು ಖಂಡಿತ ಓದುವ ಆಸೆಯಿದೆ. ದಯವಿಟ್ಟು banavasibalaga@gmail.com ಗೆ ಒಂದು ಮುಂಚೆ ಬರೆಯಿರಿ.
Olle research madiri guru! Bombay/Mumbai/Bombaiyi na British tegedu kondaga allina bhashe Kannada anta records nalli bardidare.
Adre edella ghata vaibhava, nam agina kalada Rajaru Rastrakutarinda - Tipu Sultan vargu karnatakana vistara madidru, navu yarigu maniyade Rajya belayitu. Adre evag nodi guru uttara karnataka esto kannadigaru marati samskruti ge palagidare,maharastra da kannadigaru antu marathigalagidare. Yella kade enda bere bere rajya prabhava hechagi karnataka soragi hogta ede.
ಗುರುಗಳ ಕನ್ನಡ ಅನ್ನೋದ ಒಂದ ಹಳ್ಳಿ ಅಲ್ಲ, ಅದು ಒಂದ ತಾಲೂಕಿನ ಕೇಂದ್ರ.ಅದು ಎಲ್ಲೋರಾ ಗುಹೆ ಇಂದ 20 ಕೀ.ಮಿ. ದೂರದಾಗ ಐತಿ. ನೀವು ಎಲ್ಲೋರಾ ಗುಹೆ ನೋಡಾಕ್ ಹೋದ್ರ ತಪ್ಪದ ನೋಡಕೊಂಡ್ ಬನ್ರೀ.
ವಿಜಯ ಕೋಟ್‌ಗಿ
ನಾನು ಮೊನ್ನಿ ಕೆಲಸ್ಸದ ಮ್ಯಾಲ ಪುಣೆ ಕ ಹೊಗೀದ್ದಿನಿ ಅಲ್ಲಿ ಆಕಸ್ಮಾತ ಒಬ್ಬರ ಪರಿಚಯ ಆಯ್ತು ಅವರು ಮಹಾರಾಷ್ಟ್ರದ ಅಕ್ಕಲ್ಕೊಟ್ ಊರಿನವರು. ಅವರು ಎಂದು ಕರ್ನಾಟಕ ಕ ಬಂದಿರ್ಕಿಲ್ಲ ಅದರ ಅವರು ಪಕ್ಕಾ ಕನ್ನಡ ಮಾತಾಡ್ತಾ ಇದ್ದ್ರು. ಅದಕ್ಕ ಕಾರಣ ಅಂದ್ರ ಆವ್ರ್ ತಾಯಿಯವರು ಗೋಕಾಕಡವರು. ನಮ್ಮ ಕನ್ನಡದ ಹೆಣ್ಣು ಮಕ್ಕಳು ಎಲ್ಲೇ ಇದ್ರು ನಮ್ಮ ನುಡಿ ಮತ್ತ್ ಬಾಷೆ ಬಿಟ್ಟುಕೋದಿಲ್ಲ ಅನ್ನೋದಕ್ಕ್ ಇದು ಒಂದ ಸಾಕ್ಷಿ ಅನ್ನಿಸಿತು.
oTTinalli ee blogspot deshada, prapanchada moole moolegaLalliruva kannaDigara sneha setuvaagi, kannaDigaru ondashtaadaroo swabhimaana beLesikonDare adE saarthaka!
Guru,
Sakath article.. illi barro ella article gallu ond ak intha ond super..
e article gatha vybhava ansisi kol bara dalvaa ?? yakendare ee hesaru gallanna innu badalay silla. idannu bada layisa baraddu kudda..
e vishaya kannade thriggu haradda bekku nama karnataka da hirimeya parichaya avariggu agga bekku.
nimma e article anna hogalalu nana hatiraa padagallu kammi.
inon dasthu mahiti:
marathi elli balassoo esto padagallu kannada de
Eg:
1)kosambari (marathi nalli kosambiri)
2) Kobbri (marathi nalli kopra/ kobra)
3)divasa
... innu halavarru idde, a patti nanigge nyapaka bartha illa.
ottagi naavu kannadgaru maththumaratgaru saansruthikavagi onde mooladinda bandhavaru,anthadralli,,we shoul solve issues like belAgavi with mutual consent & should not allow hindi biased union Govt, to step other wise they will divide and rule & what happened to marathis in mumbai may happen to kannadigs tommarrow in bangalore,,marathi people desreve our support in mumbai issue,,which we kannadigas need to extend
Hello, I am new to this site, Naanu Kannada premi, Kannada information nanna ee site nalli haakbeku antha thumba, uochane maadi, ee site open maadiddini, aadare nanna bali ashtu maahithi illa, Maahiti iruvaavaru pls, nanna ee mailid ge ondu mail kalisidare, Naanu avarannu nanna blogging site blogger permissiono annu kodutthene. leelu@linuxmail.org
Nanna website - Kannada Vybhava
Dhanyavaadagalu
Leeladhar
Leeladhar
Uttara karnatakadalli, hesaru Mallappa yendaagiddare, Mallyaa yendu, Shivakumar yendaagiddare, Shivyaa yenduu kareyuva roodi ide. Aatmeeyaru yaavude hesarannu kiridu maadi antyadalli 'ya' serisuttaare. Idu Mallayya, Shivayya yendu hinde kareyuttiddara vikruta roopavaagide yembudu nanna anisike. Maharashtra dallu ide paddati innu ide. avaru kooda eega aatmeeyarige hesarina antyadalli 'ya'(ayya) serisuttaare.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!