ಮೋದಿ ಗೆಲುವಿನ ಚಿತ್ತಾರ

ಇತ್ತೀಚೆಗೆ ನಡೆದ ಗುಜರಾತಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಂದಾಳ್ತನದಲ್ಲಿ ಭಾಜಪ ಜಯಭೇರಿ ಬಾರಿಸಿದ್ದು ಯಾಕಪ್ಪಾ ಅಂತ ಸಕ್ಕತ್ ವಿಶ್ಲೇಷಣೆಗಳು ನಡೀತಿವೆ. ನಿಜಕ್ಕೂ ಮೋದಿ ಗೆಲುವಿನ ಒಳಗುಟ್ಟು ಏನು ಅಂತ ನೋಡ್ಮ.

ಗುಜರಾತ್, ಗುಜರಾತ್, ಗುಜರಾತ್

ಈ ಬಾರಿ ಚುನಾವಣೆಯಲ್ಲಿ ಮೋದಿ ಅವರು ಮುಖ್ಯ ಅಸ್ತ್ರವಾಗಿ ಬಳಸಿದ್ದು ಇಡೀ ಭಾರತಕ್ಕೆ ಅನ್ವಯಿಸುವ ಯಾವುದೇ ಸಿದ್ಧಾಂತವನ್ನಲ್ಲ, ಬದಲಾಗಿ ಪ್ರತ್ಯೇಕವಾಗಿ ಗುಜರಾತ್ ರಾಜ್ಯದ ಏಳಿಗೆಯನ್ನು ಮತ್ತು ಎಲ್ಲಾ ರೀತಿಯಲ್ಲೂ ಸ್ಥಳೀಯತೆಯ ಮಂತ್ರವನ್ನು. ಮೋದಿಯ ಚುನಾವಣೆ ಪ್ರಚಾರದಲ್ಲಿ ಕೇಳಿಬಂದಿದ್ದು ಬರೀ "ಗುಜರಾತ್, ಗುಜರಾತಿ".

"ಗುಜರಾತಿ ಅಸ್ಮಿತಾ" ಮತ್ತು "Vibrant Gujarat" ಎಂಬ ಘೋಷಣೆಗಳು ಗುಜರಾತಿನಲ್ಲಿ ಈ ಬಾರಿ ಭಾಜಪದ ಮೂಲಮಂತ್ರವಾಗಿದ್ದವೇ ಹೊರತು ಗುಜರಾತಿಗಳಿಗೆ ಅರ್ಥವಾಗದ ಮತ್ತು ಸಂಬಂಧ ಎಲ್ಲಿ ಅಂತ ಹುಡುಕಬೇಕಾದ "ಭಾರತೀಯ ಅಸ್ಮಿತಾ" ಅಥವಾ "Vibrant India" ಗಳಲ್ಲ. "ಭಾರತಾನ ಹಂಗ್ ಉದ್ಧಾರ ಮಾಡ್ತೀನಿ ಹಿಂಗ್ ಉದ್ಧಾರ ಮಾಡ್ತೀನಿ" ಅಂತ ಗುಜರಾತಿನಲ್ಲಿ ಎಷ್ಟು ಬಡ್ಕೊಂಡ್ರೂ ಉಪಯೋಗವಿಲ್ಲ ಅಂತ ಅರ್ಥ ಮಾಡ್ಕೊಂಡು ಗುಜರಾತಿಗೇ ತಮ್ಮ ಬದ್ಧತೆ ಇರೋದು ಅಂತ ತೋರಿಸಿಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು. ಪಕ್ಷ ರಾಷ್ಟ್ರೀಯ ಆದ್ರೂ ನಿಜವಾದ ಕೆಲಸ ಸ್ಥಳೀಯವಾಗೇ ಇರಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ನಡ್ಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು.

ನಿಜವಾದ ಏಳಿಗೆಗೆ ಮಂತ್ರ ಸ್ಥಳೀಯತೆ

ಮೋದಿ ಅವರು "2010ರ ವೇಳೆಗೆ ಗುಜರಾತ್ ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳ ಜೊತೆ ಹೆಮ್ಮೆಯಿಂದ ಸ್ಪರ್ಧೆಗೆ ಇಳಿಯಬೇಕು" ಅಂತ ಘೋಷಿಸಿದ್ದಾರೆ. ಇಲ್ಲೆಲ್ಲೂ ಮೋದಿ ಭಾರತ ಅನ್ನುತ್ತಿಲ್ಲ. ಬೇರೆ ದೇಶಗಳ ಜೊತೆಗೇ ಪೈಪೋಟಿ ಮಾಡಬೇಕಾಗಿರೋದು ಗುಜರಾತೇ ಹೊರತು ಭಾರತ ಅಲ್ಲ ಅನ್ನೋ ವೈಜ್ಞಾನಿಕ ಸಂದೇಶವನ್ನ ಕೊಟ್ಟಿದ್ದಾರೆ. ನಿಜಕ್ಕೂ ಭಾರತವನ್ನ ಜರ್ಮನಿಗೋ ಫ್ರಾನ್ಸಿಗೋ ಹೋಲಿಸೋದು ಮೂರ್ಖತನವೇ ಸರಿ.

ಅರೆ, ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಕತೆಗೆ ಮಹತ್ವ ನೀಡತೊಡಗಿತು ಅಂತ ಗಾಬರಿಯಾಗಬೇಡಿ. ಗುಜರಾತಿನ ಏಳಿಗೆಯಿಂದ ಭಾರತದ ಏಳಿಗೆ ಅನ್ನೋದನ್ನು ಮೋದಿ ಮಾತಾಡ್ತಿರೋದನ್ನು ಗಮನಿಸಿ. ಗುಜರಾತಿನ ಅಸ್ಮಿತಾ ಅನ್ನುತ್ತಾ ಗುಜರಾತಿ ಸಂಸ್ಕೃತಿಯ ಅನನ್ಯತೆ ಮತ್ತು ಸ್ವಾಭಿಮಾನದ ಉದ್ದೀಪನೆಯೊಂದಿಗೆ ಏಳಿಗೆ ಆಗೋಣ ಎನ್ನುತ್ತಿರುವುದನ್ನು ಗಮನಿಸಿ. ಇದಕ್ಕಿಂತ ಮುಖ್ಯವಾಗಿ ಇಂಥಾ ನಿಲುವಿನಿಂದ ಜಯಗಳಿಸಿದ್ದನ್ನೂ ಗಮನಿಸಿ. ಕಾರಣ ಏನೇ ಇರಲಿ, ಈ ನಿಲುವು ಸರಿಯಾದದ್ದಾಗಿದೆ ಮತ್ತು ಆ ಕಾರಣದಿಂದಲೇ ಜನರ ಮನಸ್ಸನ್ನು ತಟ್ಟಿದೆ ಅನ್ನೋದು ಮಾತ್ರ ಸತ್ಯ.

ಕನ್ನಡತನದಿಂದಲೇ ಭಾರತೀಯತೆ

ಕನ್ನಡ, ಕರ್ನಾಟಕ, ಕನ್ನಡಿಗರ ಏಳಿಗೆ ಅಂತ ಮಾತೋಡದನ್ನು ಸಂಕುಚಿತತೆ, ಪ್ರಾದೇಶಿಕತೆ, ದೇಶದ ಏಳಿಗೆಗೆ ಮಾರಕ ಅಂತೆಲ್ಲಾ ಕೊಂಕು ಮಾತಾಡೋ ಜನ ಅರ್ಥ ಮಾಡ್ಕೋಬೇಕಿರೋದು ಕೂಡಾ ಇದನ್ನೇ. ಗುಜರಾತಿನೋರು ಗುಜರಾತನ್ನು, ಕರ್ನಾಟಕದೋರು ಕರ್ನಾಟಕವನ್ನು... ಉದ್ಧಾರ ಮಾಡಿದರೆ ಸಾಕು, ಭಾರತ ತಾನೇ ತಾನಾಗಿ ಉದ್ಧಾರವಾಗುತ್ತೆ ಅಂತ ಆಲೂರು ವೆಂಕಟರಾಯರಂತಹ ಮಹನೀಯರು ಹೇಳಿದ್ದೂ ಕೂಡಾ ಇದನ್ನೇ. ಗುಜರಾತಿನ ಜನ ಗುಜರಾತಿಗಳಾಗಿ ಒಗ್ಗೂಡಿ ಏಳಿಗೆ ಹೊಂದುವುದೇ ಭಾರತದ ಏಳಿಗೆಗೆ ದಾರಿ. ಅಂತೆಯೇ ತನ್ನತನದ ಹಿರಿಮೆಯನ್ನು ಅರಿತು ನಡೆಯುವ ಮೂಲಕ ಭಾರತೀಯನಾಗಿರುವುದೇ ನಿಜವಾದ ರಾಷ್ಟ್ರೀಯತೆ. ಏನ್ ಗುರು?

6 ಅನಿಸಿಕೆಗಳು:

Anonymous ಅಂತಾರೆ...

GurugaLe, olleya amsha gamanisiddeera. vyaktiya taaynudi, taaynelada saMskrutiyinda maatra avana udhaara annodanna jagattige saari heLabekide.

Anonymous ಅಂತಾರೆ...

೧೦೦ % ನಿಜ ಗುರು. ಆದರೆ ಯಾವ ಮಾಧ್ಯಮಗಳೂ ಈ ನಿಟ್ಟಿನಲ್ಲಿ ವಿಶ್ಲೇಷಣೆ ಮಾಡಿದ್ದನ್ನ ಕಾಣಲಿಲ್ಲ. ಮೋದಿಯವರು ಗುಜರಾತ್ ಅಂದ್ರೆನೆ ಒಂದು ದೇಶ ಅನ್ನೋ ರೀತಿ ಅಭಿವೃದ್ಧಿ ಮಾಡಿದ್ರು. ಆದರೆ ಅವರು ಭಾರತ ಗಣರಾಜ್ಯದೊಳಗೇ ತಾವು ಇದ್ದೇವೆ ಎನ್ನುವುದನ್ನೂ ಮರೆಯಲಿಲ್ಲ. ಇನ್ನೊಂದು ವಿಷ್ಯ ಮುಖ್ಯವಾಗಿ ಗಮನಿಸಬೇಕಾದ್ದು ಎಂದರೆ ಗುಜರಾತಿಗಳ ಯಾವುದೇ ಬೋರ್ಡ್, ಬ್ಯಾನರ್ ಏನೇ ಆಗಲಿ ಅದು ಬರಿ ’ಗುಜರಾತಿ’ ಭಾಷೆಯಲ್ಲಿ ಮಾತ್ರ ಇರತ್ತೆ. ದೆಹಲಿಯಿಂದ ಯಾರೇ ಬಂದಿರಲಿ, ಯಾವುದೇ ಕಾರ್ಯಕ್ರಮವಾಗಿರಲಿ ಅಥವಾ ಇನ್ನೇನೆ ಆಗಿರಲಿ ಅವರದ್ದು ಏನಿದ್ರೂ ಗುಜರಾತಿ ಮಂತ್ರ ಮಾತ್ರ. ಅವರು ಈ ಗುಜರಾತಿ ಮಂತ್ರವನ್ನು ಏನೋ ವಿಶೇಷ ಎನ್ನುವಂತೆ ಬಳಸೋಲ್ಲ ಅವರಿಗೆ ಅದು ಮಾಮೂಲಿಯಾಗಿದೆ.

Anonymous ಅಂತಾರೆ...

super baraha guru !!

Modi hindutva baLasi gedda antha ankondavrige, aata baLasiro innondu poll tactic explain maadiddira. bari baayi maatalli vibrant gujarat annade nijavagiyu aa kelsa maadiro aata worth congradulating. Hope he will take all sections of the society together.

nama karnatakadalliro manku timmarige idella artha aagbeku.

Yediyurappa,,, are u listening???

Unknown ಅಂತಾರೆ...

ಎನ್ ಗುರು, ತುಂಬಾ ಚೆನ್ನಾಗಿ ಬರೆದಿದ್ದಿರ.
IBN ದ ಸರ್ದೆಸೈ ಮತ್ತು ಥಪಾರ್ ಗೆ ಕನ್ನಡ ಬರಬೇಕು ಇದನ್ನು ಓದಲಿಕ್ಕೆ. ಅಲ್ಲ ಸಾರ್, ಪ್ರತಿ ರಾಜ್ಯ ನ develop ಮಾಡಿದರೆ ದೇಶ ಉಧ್ಧರ ಆಗೋದು ಅಲ್ವ. Communal Parties and LEft Parties ಅದೇನು ಹೊಡ್ಕೊತರೋ - ರಾಸ್ಥ್ರಿಯತೆ ಅಂತ ಗೊತ್ತಿಲ್ಲ.
Nationalism can't be defined as care for country when you don't have plan for micro level development like for a State. That is what is done by Modi. But it is termed as anti-Nationalism ! One mor ething very interesting for us to understand with all this sytematic multi media propoganda unleashed on Modi and all of us is - WHEN STOKING OF HINDUS IS CALLED COMMUNAL but the same STOKING OF MUSLIMS IS CALLED SECULARISM !!! God save these guys, but for a moment it looks like they can sell their mothers and sisters in the name of vote bank. Wish we can also talk about development of Karnataka, which we'r enot far off , look at beautiful roads created by Ashok Khenny , man with balls. En guru, we can also say ಕರ್ನಾಟಕ ಗೆಲ್ಲುತ್ತೆ ಅಂತ May 2008 ಅಲ್ಲಿ.

Anonymous ಅಂತಾರೆ...

Incorrect and incomplete information that is not citing 'Karnataka music', the original name of South Indian classical music and also no mention of Sri Purandara Daasa, the founder, is posted on the central official site.

http://india.gov.in/knowindia/classical_music.php

It is time to protest through feed back.

Anonymous ಅಂತಾರೆ...

In Album Confluence of Elements, Karnataka (Carnatic) Music founder, Sri Purandara Daasa’s great Kannada composition ‘Jagadodaarana’ is rendered in different way than norms set by B.S RajIyengar, MS and others. The words are split irregularly to fit music. I do not mind if some would like to enjoy this way. But what struck me is no mention of composer Sri Purandara Daasa's name on the album's webpage [http://www.confluenceofelements.com]. If what I saw is true, then I can not believe the mean attitude of so-called popular musicians. All need to protest.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails