ನಾಮಫಲಕಗಳಲ್ಲಿ ಕನ್ನಡ ದೊಡ್ದಾಗಿ ಇರಬೇಕು ಅಂತ ಅದೇಶ ಹೊರಡ್ಸಿರೋ ಕರ್ನಾಟಕ ಸರ್ಕಾರಕ್ಕೆ ಯಾಪಾಟಿ ಕನ್ನಡ ಪರ ಕಾಳಜಿ ಐತಲ್ಲಪ್ಪಾ ಅಂತ ಬೆಂಗಳೂರಿನ ಜನವೆಲ್ಲಾ ದಂಗಾಗ್ ನಿಂತ್ಕಂಬುಟವ್ರೆ ಗುರು.
ನಮ್ಮೂರಿನ ಯವಸ್ತೆ ನಮಗೋಸ್ಕರ ಇರ್ಬೇಕು ಗುರು..
'ಬೆಂಗಳೂರು ಮಹಾನಗರ ಪಾಲಿಕೆ ಅದ್ಯಾವಾಗ ಬೃಹತ್ ಬೆಂಗಳೂರು ಮಾನಗರ ಪಾಲಿಕೆ ಆಯ್ತೋ ಏನೋ ಸಿವಾ, ಗರ ಬಡ್ಕೊಂಬುಟೈತೆ ಅದ್ಕೆ. ಗಾಳಿ ಮೆಟ್ಕೊಂಡ್ ಬುಟೈತೆ ಅದ್ಕೆ . ರಸ್ತೆ ಬದೀನಾಗೆ ಗಿಡಾ ನೆಟ್ಟು ಅದಕ್ಕೊಂದು ಬೇಲಿ ಕಟ್ಸೋ ಪಾಲಿಕೆ ಆ ಬೇಲಿ ಮ್ಯಾಗೆಲ್ಲಾ ಟುಸ್ಸು ಪುಸ್ಸು ಅಂತ ಇಂಗ್ಲೀಸ್ ನಾಗ್ ಬರ್ದಿರೋದ್ನ ಒಸಿ ನೀನೂ ನೋಡು ಗುರು' ಅಂತ ಕಂಡ್ ಕಂಡವರ್ಗೆಲ್ಲಾ ಕರ್ದೂ ಕರ್ದೂ ತೋರುಸ್ತವ್ರೆ ಗುರು.
ಇಂಗ್ಲೀಸು ಇಂಟರ್ ನ್ಯಾಸನಲ್ ...
ನಮ್ ಬೆಂಗಳೂರು ಬರೀ ಬಾರತ ಅಲ್ಲಾ, ಇಡೀ ಪರ್ಪಂಚದಾಗೆಲ್ಲಾ ಹೆಸರಾಗಿರೋ 'ಇಂಟರ್ ನ್ಯಾಸನಲ್ ಸಿಟಿ'. ಇಲ್ಲಿ ಬೇರೆ ಬೇರೆ ಭಾಷೆಯೋರು, ಬೇರೆ ಬೇರೆ ದೇಶದೋರು ಬತ್ತಾನೆ ಇತ್ತಾರೆ. ಅವ್ರುಗೆಲ್ಲಾ ಕನ್ನಡ ತಿಳ್ಯಕಿಲ್ಲಾ, ಅದ್ಕೆಯಾ ಇಂಗ್ಲೀಸು ಅನ್ನೋ ಸಿಖಾಮಣಿಗಳಿಗೆ ಇಲ್ಲದೆ ನೋಡಿ ಉತ್ರ.
ನಮ್ ಬೆಂಗಳೂರು ಬರೀ ಬಾರತ ಅಲ್ಲಾ, ಇಡೀ ಪರ್ಪಂಚದಾಗೆಲ್ಲಾ ಹೆಸರಾಗಿರೋ 'ಇಂಟರ್ ನ್ಯಾಸನಲ್ ಸಿಟಿ'. ಇಲ್ಲಿ ಬೇರೆ ಬೇರೆ ಭಾಷೆಯೋರು, ಬೇರೆ ಬೇರೆ ದೇಶದೋರು ಬತ್ತಾನೆ ಇತ್ತಾರೆ. ಅವ್ರುಗೆಲ್ಲಾ ಕನ್ನಡ ತಿಳ್ಯಕಿಲ್ಲಾ, ಅದ್ಕೆಯಾ ಇಂಗ್ಲೀಸು ಅನ್ನೋ ಸಿಖಾಮಣಿಗಳಿಗೆ ಇಲ್ಲದೆ ನೋಡಿ ಉತ್ರ.
ನಮ್ಮೂರಿನ ಯವಸ್ತೆ ನಮಗೋಸ್ಕರ ಇರ್ಬೇಕು ಗುರು..
ಇಡೀ ಬಾರತದಾಗೆ ಪ್ರವಾಸಿಗಳು ಅತಿ ಎಚ್ಚು ಬರೋ ರಾಜ್ಯಗಳಲ್ಲಿ ದೊಡ್ ಹೆಸ್ರು ರಾಜಸ್ತಾನದ್ದು ಗುರು. ಅಲ್ಲಿ ದೊಡ್ ಪಟ್ಣ ಅಂದ್ರೆ ಜೈಪುರ. ಅಲ್ಲೂ ಒಂದು ನಗರ ಪಾಲಿಕೆ ಐತೆ. ಅವ್ರೂ ಗಿಡ ನೆಡ್ತಾರೆ, ಅವ್ರೂ ಅದಕ್ಕೆ ಬೇಲಿ ಕಟ್ತಾರೆ. ಆದ್ರೆ ಆ ಬೇಲಿ ಮ್ಯಾಗೆ ತಮ್ಮ ಬಾಸೇಲೆ ಬರ್ಕೊಳಕ್ಕೆ ಮಾತ್ರಾ ಒಂಚೂರು ನಾಚ್ಕೆ ಇಲ್ಲ ಗುರು ಅವ್ರಿಗೆ.
ಯಾರಾನಾ ಇದ್ಯಾಕ್ಲಾ ಇಂಗೇ ಅಂತ ಕೇಳುದ್ರೆ 'ಅಲ್ಲಾ ಪರದೇಸಿಗಳು ಇಲ್ಲಿಗ್ ಬರೋದು ರಾಜಸ್ತಾನ ನೋಡಕ್ಕೆ. ಇಲ್ಲೂ ಅವ್ರುಗಳ ಕಣ್ಣಿಗೆ ಇಂಗ್ಲೀಸೇ ರಾಚುದ್ರೆ ಅದ್ಯಾಕ್ ಇಲ್ಲಿಗ್ ಬತ್ತಾರೆ, ಇಂಗ್ಲೇಂಡ್ ಗೆ ಓಯ್ತಾರೆ ಅಷ್ಟೆಯಾ' ಅಂತ ತಮ್ ರಾಜ್ಯದ ಪ್ರವಾಸೋದ್ಯಮದ ಯಶಸ್ಸಿನ ಗುಟ್ಟನ್ನೇ ಬಿಚ್ಚಿಡ್ತಾರೆ. ಅಸ್ಟೇ ಅಲ್ಲಾ, 'ನಮ್ಮೂರಾಗ್ ನಮ್ ಬಾಸೆ ಬಳುಸೋದು ನಮ್ ಜನಕ್ ಅರ್ತ ಆಗ್ಲಿ ಅಂತ ಅಲ್ವಾ? ನಮ್ಮೂರಿನ ಯವಸ್ತೆಗಳೆಲ್ಲಾ ಇರೋದು ನಮ್ ಜನಕ್ಕೆ ಅನುಕೂಲ ಮಾಡ್ಕೊಡ್ಲಿ ಅಂತಲ್ವಾ, ಇದುನ್ ಬುಟ್ಟು ಅದ್ಯಾವ್ ಮಂಗ ನನ್ ಮಗ ಬೇರೆ ಬಾಸೆ ಆಕ್ತಾನೆ' ಅಂತ ಕೇಳ್ತಾರೆ ಗುರು.
ಈ ಕಡೆ ನಮ್ ಬೆಂಗ್ಳೂರಿನ ಜನ ಎಲ್ಲಾ 'ಅಲ್ಲಾ ಸಾಮಿ, ಕರ್ನಾಟಕದ ರಾಜಧಾನೀಲೆ ಕನ್ನಡ ಇಲ್ದಂಗಾದ್ರೆ ಇನ್ನೆಲ್ ತಾನೆ ಉಳ್ದೀತು 'ಅಂತ ಮಾತಾಡ್ಕೋತಾ ಔವ್ರೆ ಗುರು. ಇದೆಲ್ಲಾ ನಮ್ಮ ಮಾನಗರ ಪಾಲಿಕೆಗೆ ಅದ್ಯಾವಾಗ್ ತಿಳೀತದೋ, ಕನ್ನಡ ಬಳ್ಸೋದಕ್ಕೆ ಇರೋ ಕೀಳರಿಮೆ ರೋಗಾ ಅದ್ಯಾವಾಗ ಬಿಟ್ ಹೋಯ್ತದೋ ಅಂತ ತುದಿಗಾಲಲ್ಲಿ ಕಾಯ್ಕಂಡ್ ನಿಂತವ್ರೆ ಗುರು.
ಯಾರಾನಾ ಇದ್ಯಾಕ್ಲಾ ಇಂಗೇ ಅಂತ ಕೇಳುದ್ರೆ 'ಅಲ್ಲಾ ಪರದೇಸಿಗಳು ಇಲ್ಲಿಗ್ ಬರೋದು ರಾಜಸ್ತಾನ ನೋಡಕ್ಕೆ. ಇಲ್ಲೂ ಅವ್ರುಗಳ ಕಣ್ಣಿಗೆ ಇಂಗ್ಲೀಸೇ ರಾಚುದ್ರೆ ಅದ್ಯಾಕ್ ಇಲ್ಲಿಗ್ ಬತ್ತಾರೆ, ಇಂಗ್ಲೇಂಡ್ ಗೆ ಓಯ್ತಾರೆ ಅಷ್ಟೆಯಾ' ಅಂತ ತಮ್ ರಾಜ್ಯದ ಪ್ರವಾಸೋದ್ಯಮದ ಯಶಸ್ಸಿನ ಗುಟ್ಟನ್ನೇ ಬಿಚ್ಚಿಡ್ತಾರೆ. ಅಸ್ಟೇ ಅಲ್ಲಾ, 'ನಮ್ಮೂರಾಗ್ ನಮ್ ಬಾಸೆ ಬಳುಸೋದು ನಮ್ ಜನಕ್ ಅರ್ತ ಆಗ್ಲಿ ಅಂತ ಅಲ್ವಾ? ನಮ್ಮೂರಿನ ಯವಸ್ತೆಗಳೆಲ್ಲಾ ಇರೋದು ನಮ್ ಜನಕ್ಕೆ ಅನುಕೂಲ ಮಾಡ್ಕೊಡ್ಲಿ ಅಂತಲ್ವಾ, ಇದುನ್ ಬುಟ್ಟು ಅದ್ಯಾವ್ ಮಂಗ ನನ್ ಮಗ ಬೇರೆ ಬಾಸೆ ಆಕ್ತಾನೆ' ಅಂತ ಕೇಳ್ತಾರೆ ಗುರು.
ಈ ಕಡೆ ನಮ್ ಬೆಂಗ್ಳೂರಿನ ಜನ ಎಲ್ಲಾ 'ಅಲ್ಲಾ ಸಾಮಿ, ಕರ್ನಾಟಕದ ರಾಜಧಾನೀಲೆ ಕನ್ನಡ ಇಲ್ದಂಗಾದ್ರೆ ಇನ್ನೆಲ್ ತಾನೆ ಉಳ್ದೀತು 'ಅಂತ ಮಾತಾಡ್ಕೋತಾ ಔವ್ರೆ ಗುರು. ಇದೆಲ್ಲಾ ನಮ್ಮ ಮಾನಗರ ಪಾಲಿಕೆಗೆ ಅದ್ಯಾವಾಗ್ ತಿಳೀತದೋ, ಕನ್ನಡ ಬಳ್ಸೋದಕ್ಕೆ ಇರೋ ಕೀಳರಿಮೆ ರೋಗಾ ಅದ್ಯಾವಾಗ ಬಿಟ್ ಹೋಯ್ತದೋ ಅಂತ ತುದಿಗಾಲಲ್ಲಿ ಕಾಯ್ಕಂಡ್ ನಿಂತವ್ರೆ ಗುರು.
13 ಅನಿಸಿಕೆಗಳು:
bengaluru anta kooda baride bruhat bangalore anta english nalli bareyokke adeshtu dhairya noodi ee paalikeyavarige. beliye eddu hola maida haagide iwra vartane. namma janane hinge aadre innu mikkavara bagge helodenu bantu. olleya lekhana.
ಗುರು ಬರಿ ಇದಲ್ಲ, ವಿಮಾನ ನಿಲ್ದಾಣದ ಕಡೆ ಅಕ್ರಮ ಸಕ್ರಮ ದ ಬಗ್ಗೆ ದೊಡ್ಡ ದೊಡ್ಡ ಪೋಸ್ಟರ್ ಗಳೂ ಕೊಡ ಇಂಗ್ಲೀಶ್ ನಲ್ಲಿದೆ.. ಈ ತರ ಮಾಡ್ತಿರೊ ಅಧಿಕಾರಿಗಳಿಗೆ ಚಪ್ಪಲಿ ತಗೊಂಡು ಹೊಡೆದು.. ಕತ್ತೆಮೇಲೆ ಕೂರಿಸಿ ಮೆರವಣಿಗೆ ಮಾಡಿ...ನಂದಿ ಬೆಟ್ಟದ ಮೇಲಿಂದ ಕೆಳಕ್ಕೆ ನೂಕಿ ಸಾಯಿಸಿ..ಸತ್ತಮೇಲೆ ಹೆಣನ ಬೆಂಗಳೂರಲ್ಲಿ ಊಟ ಸಿಗದೆ ಓಡಾಡ್ತಿರೋ ನಾಯಿಗಳಿಗೆ ಹಾಕಬೇಕು...
ivarige kera tagondu jwara baro varegu hodibeku guru...
jaipura da example kodo mulakha sariyaag explain maadidiya guru..
ivatte idanella sari maadkollalilla andre naale mumbai stithi namage barutte..
ಥೂ..ಇವರ..
ಏನ್ ಹೇಳದು ಗುರು ಇವ್ರಿಗೆ. !
ಈ ಇಂಟರ್ನ್ಯಾಷನಲ್ ರೋಗ ಹೆಂಗೆ ವಾಸಿ ಮಾಡೋದು. ಮೊದ್ಲು ಲೋಕಲ್ , ಆಮೇಲೆ ಬೇಕಾದ್ರೆ ಮಾತ್ರ ಇಂಟರ್ನ್ಯಾಷನಲ್ ಅಂತ ನಮ್ಮೋರು ತಿಳ್ಕೋಳೋದು ಯಾವಾಗ ಗುರು. ದೇವ್ರಾಣೆ ಹೇಳ್ತಿನಿ ಕೇಳು, ಕನ್ನಡ ಕಡೆಗಣಿಸ್ತಾ ಇರೋರು ಕನ್ನಡಿಗರು,ಕರ್ನಾಟಕದವ್ರೇ ಹೊರತು
ಬೇರೆ ಯಾರೂ ಅಲ್ಲ. ಅದ್ಯಾಕಯ್ಯ ಸುಮ್ ಸುಮ್ನೆ ಇಂಗ್ಲೀಷಲ್ಲಿ ಬರಿತಿರಾ ಅಂತ ಕೇಳ್ನೋಡು, ಸುತ್ತಲೂ ಇರುವ ಕನ್ನಡಿಗರೇ ನಮ್ಮನ್ನೇ ಭಾಷಾ ದುರಭಿಮಾನಿ ತರ ನೋಡ್ತಾರೆ.
When I had called up BDA customer service some time back, they tried their best to answer in Englsih though I was asking in KannaDa.
They just want to show off that if they can speak english, that means they are 'developed'.
Even our BBMP authorities, when they try to give interviews to media, they speak English only.
Even our ministers too, the moment a national TV like NDTV appears, our ministers speak English. ade karuNanidhiyannu tegedukoLLi, prana hogtidru tamil nalle maatadtaare, bekadre neevu translate maadkoLi antaare.
antaha budhi bereyavarige yaake illa?
nammavaru idannella gamanisabeku
ನಮ್ಮೊರ್ಗೆ ಸ್ವಲ್ಪ ಇಂಗ್ಲಿಷ್ ರೋಗ . ಇಂಗ್ಲಿಸ್ನಾಗೆ ಬರೆಯೋದು ಅಂದ್ರೆ ಅದೇನೋ ಖುಷಿ. ಇವರಿಗೆಲ್ಲ ರೋಡ್ನಲ್ಲಿ ಅಮ್ಮ ಅಪ್ಪ ಅನ್ನೋ ತನಕ ಪರ್ಕೆ, ಬೂಟು , ಕೊಳೆತ ಟೊಮೇಟೊ, ಮೊಟ್ಟೆ, ಇತ್ಯಾದಿ ಗಳಿಂದ ಬಾರಿಸಬೇಕು
chennagi barediddira sir,
nijakku ivattu sarkarada maargasoochigallanna ella samsteyavaru gaalige toori, taavu englang raniya momakkalu taraha adtha meritha idare. inthavarigella belagaavi mayor vijay more ge maadida taraha pooja maddre sari daarige barthre annisuthe.
dhanayavaada
ee nan makLu bruhat bengaLooru anta bengaLoorna expand madta irodu ella harkal-parkal haLLigaLna sersi..adakke English board bere noDrappa..enta jokergaLu..
BBMP nalli kelsa maDo nan makLige 4 akshara English kooDa bartiralla..adru show off maDbekalla, adakke Tus-pus shoki..
en maDudru namma kannaDIgara daasyada janmagaLu badlaagalla biDri guru
ಬೃಹತ್ ಬೆಂಗಳೂರು ಅನ್ನೋದಕ್ಕೆ ಬದ್ಲು “ದೊಡ್ಡ ಬೆಂಗಳೂರು” ಅಥವಾ ಹೆಬ್ಬೆಂಗಳೂರು ಅಂತ ಕರೆಯಕ್ಕೆ ಆಗೊಲ್ವಾ? ದೊಡ್ಡಬಳ್ಳಾಪುರಾನ “ಬೃಹತ್ ಬಳ್ಳಾಪುರ” ಅಂತ ಕರೆದ್ರೆ ಎಷ್ಟು ಕೆಟ್ಟದಾಗಿರತ್ತೆ ಅಲ್ವಾ?
-ಗುಂಡ
ಅವರು kannada dalli baride erodu tappu .English hagu kannada samavaagi upiyogisa beku. namannu bere rajyadavarige holisikollodannu kammi maadi. English annu urugolagi upiyogisona kannada vannu vishva wyapi haradisalu. dwe bhasa sutra tumbaahaleyadu. aaginara raja manetanadavaru(hoysala, kadamba, vijayanagar mutaadavu) kooda Samskutada jyote kannada belisutiddaru, aadakaranadinda kannada rajya eegina madhya pradeshatanaka haradittu. aaga samskruta vishwa bhashe yagittu eega English aste.
ದೊಡ್ಬೆಂಗ್ಳೂರನ್ನ ನೋಡಿಕೊಳ್ತಾ ಇರೋರ್ನ ಪ್ರಜಾವಾಣಿಯಲ್ಲಿ ಬಂದಿರೋ ಈ ಈ-ಮೈಲ್ ಐಡಿಗಳಲ್ಲೂ ಗುಮ್ಮಿ.
commissioner@bmponline.org
suggestion@bmponline.org
complaints@bmponline.org
pro@bmponline.org
ಗುರು, ಒಂದ್ವಿಷ್ಯ. ಈ ಕಾಮೆಂಟ್ ನಲ್ಲಿ Anonymous ಬದಲು ಅನಾಮಿಕ ಅಂತ ಉಪಯೋಗಿಸೋಕೆ ಆಗೊಲ್ವಾ ಗುರು ?
namma adhikarigalige kannada andare kasivisi. Aadre, avara english bahala chennagide antalla. ivrugalige kannada baralla, english tiliyolla. Bhasheyalli odi baredu abhyasa iddare taane adannu nityada vyaharadalli balasalu saadhya. ivara Ee bhasha kurudige madde illa. aneka kade ide hanebaraha. Koramangaladalli vaatar tank endu kannadadalli baresiddare aadare waatar hogi vatar aagide. Intaha nooraaru udaharanegalu bengaloorinallella bruhattagi kanuttade. A boardugalige masi baliyuva badalu ivara mukhakke balidare sariyennisuttade.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!