ಕರಾರಸಾಸಂ: ಬಸ್ಸಿಗ್ಯಾಕೆ ಹಿಂದಿ ಹೆಸರು?

ಮೊನ್ನ್-ಮೊನ್ನೆ ಕರ್ನಾಟಕದಲ್ಲಿ ಓಡಾಡೋ ಬಸ್ಗಳಲ್ಲಿ ಕಡ್ಡಾಯವಾಗಿ ಮನರಂಜನೆ ಕನ್ನಡದಲ್ಲೇ ಇರ್ಬೇಕು ಅಂತ ಹೇಳಿ ಕನ್ನಡಿಗರಿಗೆ ಖುಷಿ ತಂದಿದ್ದ ಕ.ರಾ.ರ.ಸಾ.ಸಂ. ಬಾಲ ಮತ್ತೆ ಡೊಂಕಾಗಿರೋಹಂಗ್ ಇದ್ಯಲ್ಲ ಗುರು? ಹೊಸಾ ಬಸ್ಸಿಗೆ ಎಷ್ಟು ಚೆನ್ನಾಗಿ "ತಂಗಾಳಿ" ಅಂತ ಹೆಸ್ರು ಇಡ್ಬೋದಿತ್ತು...ಅದು ಬಿಟ್ಟು "ಶೀತಲ್" ಅಂತ ಹಿಂದೀ ಹೆಸ್ರು ಯಾಕ್ ಇಡಬೇಕಾಗಿತ್ತು?

ಇದೇನಿದು ಹೆಸ್ರುಗೆಲ್ಲ ಇಷ್ಟು ತಲೆ ಕೆಡುಸ್ಕೋತೀರ ಅಂತೀರಾ? ಇನ್ನೊಂದ್ಸರಿ ಯೋಚ್ನೆ ಮಾಡಿ: ಇಲ್ಲಿ ತಂಗಾಳಿ ಅಂತ ಹೆಸರಿಡೋ ಬದ್ಲು ಶೀತಲ್ ಅಂತ ಇಟ್ಟಿರೋದರ ಹಿಂದೆ ಹೆಸರಿಟ್ಟೋನು ಮಾಡಿರೋ ತಪ್ಪುಗಳು ನಮ್ಮ ಉಳಿವಿಗೇ ಮಚ್ಚಿನೇಟು ಹಾಕೋಂಥವು. ಯಾವ ತಪ್ಪುಗಳು ಅವು? ಸರಿಯೇನು? ಅಂದರೆ...
  1. ತಪ್ಪು: ಹೆಸ್ರಿಟ್ಟ್ರೆ ಅದು ಹಿಂದೀನಲ್ಲಿದ್ರೇ ಒಳ್ಳೇದು, ಯಾಕೇಂದ್ರೆ ಹಿಂದಿ "ರಾಷ್ಟ್ರಭಾಷೆ". ಸರಿ: ಹಿಂದಿ ರಾಷ್ಟ್ರಭಾಷೆ ಅನ್ನೋದು ಸುಳ್ಳು.
  2. ತಪ್ಪು: ಈ ಬಸ್ಸಲ್ಲಿ ಜಾಸ್ತಿ ಕನ್ನಡಿಗರು ಓಡಾಡಲ್ಲ. ಸರಿ: ಕರ್ನಾಟಕದೊಳಗೆ ಓಡಾಡೋ ಬಸ್ಸುಗಳಲ್ಲಿ ಕನ್ನಡಿಗರೇ ಹೆಚ್ಚು.
  3. ತಪ್ಪು: "ಶೀತಲ್" ಅಂತ ಹೆಸ್ರಿಟ್ರೆ ಅದು ಕನ್ನಡಾನೇ. ಸರಿ: "ಶೀತಲ್" ಅನ್ನೋ ಪದ ಅರ್ಥವಾಗೋ ಕನ್ನಡಿಗರ್ನ ಬೂದುಗಾಜು ಇಟ್ಕೊಂಡು ಹುಡುಕಿದ್ರೂ ಸಿಗಲ್ಲ! ಓದ್ತಿದೀರಲ್ಲ, ನಿಮಗೆ ಗೊತ್ತಾ ಶೀತಲ್ ಅಂದ್ರೆ? ಬೇಗ್ ಹೇಳಿ!
  4. ತಪ್ಪು: "ತಂಗಾಳಿ" ಅಂತ ಹೆಸ್ರಿಟ್ರೆ ಬೇರೆ ಭಾಷೆಯೋರಿಗೆ ಅರ್ಥವಾಗಲ್ಲ. ಸರಿ: ಕನ್ನಡವನ್ನ ಬೇರೆ ಭಾಷೆಯೋರ ಮುಂದೆ ಇಡಕ್ಕೇ ಇಷ್ಟು ಹಿಂದೇಟು ಹಾಕಿದರೆ ಇನ್ನೆಲ್ಲಿಂದ ಅರ್ಥವಾದೀತು? ಇಡಬೇಕು, ಅವರಿಗೂ ಕನ್ನಡದ ಸವಿ ಸವಿಯೋ ಅವಕಾಶ ಕೊಡಬೇಕು.
ಹಿಂದೀಲಾದ್ರೂ ಇಟ್ರಲ್ಲ, ಇಂಗ್ಲೀಷಲ್ಲಿ ಇಡಲಿಲ್ಲವಲ್ಲ ಅಂತ ಖುಷಿ ಪಡೋ ಜನ್ರೂ ಇರ್ತಾರೆ. ಆದರೆ ಪ್ರಶ್ನೆ ಕರ್ನಾಟಕಕ್ಕೆ ಅತಿ ಹತ್ತಿರವಾದ ಯಾವ ಭಾಷೇಲಿ ಹೆಸ್ರು ಇಡಬೇಕು ಅನ್ನೋದಲ್ಲ. ಪ್ರಶ್ನೆ: "ಕನ್ನಡದಲ್ಲೇ ಯಾಕ್ ಇಡಬಾರದು?" ಅನ್ನೋದು. ಕನ್ನಡದಲ್ಲೇ ಯಾಕ್ ಇಡಬಾರದು ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ. ನಿಮ್ಮ ಬಗ್ಗೆ, ನಿಮ್ಮ ಭಾಷೆ ಬಗ್ಗೆ, ನಿಮ್ಮ ನಾಡಿನ ಬಗ್ಗೆ ನೀವೇ ಎಲ್ಲಾ ರೀತಿಯ ಕೀಳರಿಮೆ ಕಿತ್ತು ಎಸೆದಾಗ.

ಎಸೀಬೇಕು, ಕನ್ನಡದ ಬಗ್ಗೆ ಕೀಳರಿಮೆ ಕಿತ್ತೆಸೀಬೇಕು ಗುರು!

22 ಅನಿಸಿಕೆಗಳು:

Anonymous ಅಂತಾರೆ...

I read through all the articles in the blog. I did't realise what this enguru is up to?

Be open. say what you want? don't put yourself to question mark enguru?

you want kannda everywhere! say so,

don't say yes when you want to say no

Anivaarya ಅಂತಾರೆ...

ಇದು ಸಕ್ಕತ್ ಪೋಶ್ಟ್ ಗುರು! ನಮ್ ಕ.ರಾ.ರ.ಸಾ.ಸಂ ಸಕ್ಕತ್ ಕೆಲ್ಸ ಮಾಡ್ತಾ ಇದೆ, ಚೆನ್ನಾಗಿ ಬೆಳೀತಾ ಇದೆ, ಆದ್ರೆ ಇಂತಾ ವಿಷಯಗಳಿಗೆ ಸ್ವಲ್ಪ ಗಮನ ಹರ್ಸ್ಬೇಕು ಗುರು! ಈ ಬ್ಲಾಗ್ನಲ್ಲಿ ಅಧಿಕಾರದಲ್ಲಿ ಇರೊ ಕೆಲವು ಸದಸ್ಯರನ್ನ ಕೂರ್ಸ್ಬೇಕು, ಅವರಿಗೆ ಸ್ವಲ್ಪ out of the box ideas ಬೇಕು ಗುರು! ಮುಂಚೆ ಇಂದಾನೂ ಒಂದೇ ತರ ಯೋಚ್ಸಿ ಯೋಚ್ಸಿ ಇಂತಾ ವಿಷತಗಳ ಕಡೆ ತಲೆ ಸ್ವಲ್ಪ ಓಡೋದ್ ಕಷ್ಟ ಅವ್ರ್ಗೆ. ಒಳ್ಳೆ ಸಲಹೆ ಗುರು. thumbs up!

Unknown ಅಂತಾರೆ...

ಸಿದ್ಧಾರೂಢರೆ,

ಇಲ್ಲಿಯ ಲೇಖನಗಳಲ್ಲಿ ಅಶ್ಟು ಗಲಿಬಿಲಿ ಆಗೋ ಅಂಥಾದ್ದು ಏನು ಕಾಣಿಸಲಿಲ್ಲ. ಹಾಗೆ ನೋಡಕ್ಕೆ ಹೋದರೆ ಎಲ್ಲ ಲೇKಅನಗಳೂ ನೇರವಾಗಿ ಹೇಳ್ತಾ ಇರೋದೆ ಕರ್ನಾಟಕದಲ್ಲಿ ಎಲ್ಲಾ ಕನ್ನಡವಾಗಿರಬೇಕು, ಎಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅಷ್ಟೇ ಅಲ್ಲ ಭಾರತದ ಎಲ್ಲಾ ರಾಜ್ಯಗಳಲ್ಲೂ ಹಾಗೆ ಅಲ್ಲಿಯ ಭಾಷೆಗಳೇ ಇರಬೇಕು ಅಂತ ಬರೆದಿದೆ.

ನನ್ನಿ

Anonymous ಅಂತಾರೆ...

ಸಿದ್ದಾರೂಡ,
"...Be open. say what you want? don't put yourself to question mark enguru?...."

ನೀವು ಬರಹಗಳನ್ನ ಓದಿಲ್ಲಾ ಅಂತ ಗೊತ್ತಾತು. ಇನ್ನೊಂದು ಸಲ ಓದಿ ಗುರುವೇ. ಎಲ್ಲ ಅರ್ತ ಆಗುತ್ತೆ. ಬರೀ ಕೇಳ್ಮೆಗಳಿಲ್ಲ
ಮರುಲಿ(answer)ಗಳೂ ಇಲ್ಲಿವೆ.

Anonymous ಅಂತಾರೆ...

ಈ ಬಿ ಎಮ್ ಟಿ ಸಿ ಕಥೆ ಒಳ್ಳೇ ನಮ್ಮ ನಾಣಿ ಕಥೆ ಥರ ಇದ್ಯಲ್ಲ ಗುರು. ಅವ್ರು ರಾಷ್ಟ್ರ ಗೀತೆ ಹಾಡಿಸಿದರೆ ಬೇರೆಯವರ ಮುಂದೆ ಅವಮಾನ ಆಗುತ್ತೆ ಅಂದ್ರಲ್ಲ ಅವರಿಗು ಇವರಿಗು ವ್ಯತ್ಯಾಸ ಇಲ್ಲ ಬಿಡಿ. ತಮ್ಮ ಭಾಷೆಗೆ ಗೌರವ ತೋರಿಸದೇ ಇರುವ ಇವರು, ರಾಷ್ತ್ರ ಭಾಷೆಗೆ ಎಂತ ಗೌರವ ತೋರಿಸಿದಂಗಾಯ್ತು ಹೇಳಿ. ಮೊದಲು ನಮ್ಮ ಮನೆಗಳಲ್ಲಿ ಸರಿ ಇರ್ಬೇಕು, ಅಮೆಲೆ ತಮ್ಮ ರಾಜ್ಯದಲ್ಲಿ ಅವಾಗ ತನ್ನಂತಾನೆ ದೇಶಕ್ಕು ಒಳ್ಳೆಯ ಪ್ರಜೆಗಳಾಗ್ತರೆ.
ಪೊಳ್ಳು ರಾಷ್ಟ್ರೀಯತೆ ಮೆರೆಯೋದ್ರಲ್ಲಿ ಇವರಿಗಿಂತಾ ಒಳ್ಳೆಯ ಉದಾಹರಣೆ ಇನ್ನೊಂದಿಲ್ಲ. ಕಣ್ಣು ತೆರೆಸುವ ಲೇಖನ.

P K Bhat ಅಂತಾರೆ...

siddaruda ravare,

enguru ge yen bEku anta chennagi gottu. aadare namma gurugaLu itara Kannadigaralli jaagruti mUdisalu ee taraha prashnegLannu kEli, ondu swalpa yoochaane maaDi anta hELtidaane.
yaavattu taama nilavannu bEreyavara mEle hoorisa baaradu, adara badalu namma niluvaa yaake heege ide anta samartisikoLLabEku.
ee kElasavanne namma gurugaLu maadtaa iroodu, innu ivaru nilavu sariyo tappo, mathe naavu ee reetiyaada nilavu tegedukoLbEka biDabEka annuvudu, ooduvavarige biTTidu.

iMti,
P Karthik Bhat

Anonymous ಅಂತಾರೆ...

ಏನ್ ಗುರುಗಳೇ,

'ತಂಗಾಳಿ' ಹೆಸರು ಅತ್ಯಂತ ಸೂಕ್ತವಾಗಿದೆ ಮತ್ತು ಕೇಳಲು ಬಹಳ ಹಿತಕರವಾಗಿದೆ, ಖಂಡಿತವಾಗಿಯೂ ಸಾರಿಗೆ ಇಲಾಖೆ ಈ ನಿಮ್ಮ ಸಲಹೆಯನ್ನು ಅನುಷ್ಟಾನಕ್ಕೆ ತರುತ್ತದೆ ಎಂದು ಭಾವಿಸುತ್ತೇನೆ ಎನೇ ಆಗಲಿ ಕರಾರಸಾಸಂ ಕನ್ನಡದ ವಿಷಯಗಳಲ್ಲಿ ಸದಾ ಮುಂದಿರುವ ಸಂಸ್ಥೆ ಅಲ್ಲವೆ.

ಶಾಂತಕುಮಾರ್ ಕಪ್ಪಗಲ್

Anonymous ಅಂತಾರೆ...

"I read through all the articles in the blog. I did't realise what this enguru is up to?".

Mr.Siddagouda,
May be its your thinking limitation ?. Never mind, accept your limitations then go beyond it, in simple follow ENGURU.


-Mallik

Chidambara Hebbar ಅಂತಾರೆ...

namma karma ...
yestu badkondroo ee lofer rajakaranigalige artha aagolvalla...
ivrannna arisiddakka chaplili navu hodkobeku..

Anonymous ಅಂತಾರೆ...

haage ella bassugaLigu savi, sihi, huNNime, iMta achcha kannaDada hesarugaLanni iTTare chennagiratte guru. oLLe lEKana koTTIddakke danyavaada guru.

karuNaa

Anonymous ಅಂತಾರೆ...

ನಿಮ್ಮ ಬ್ಲಾಗಿನಲ್ಲಿ ಹಾಕಿರುವುದು ಅಕ್ಶರಷ ನಿಜ ನೋಡಿ, ಅದರಲ್ಲೂ ೪ ಸರಿ-ತಪ್ಪು, ನಮ್ಮ ಜನರ ಕೀಳರಿಮೆ ಹಿಡಿದ ಕನ್ನಡಿ ಆಗಿದೆ ನೋಡಿ. ನಮ್ಮ ಅತಿಯಾದ "ಅಥಿತಿದೇವೊಭವ" ನೀತಿಯಿಂದ ಭಾಷೆ ಸೊರಗುತ್ತಿದೆ ಅಷ್ಟೇ. ನಮ್ಮ ಊರಿನ ksrtc ಕರ್ಮಕಾಂಡ ಬಗ್ಗೆ ಉದಯವಾಣಿಯ ಈ ಲೇಖನ ನೋಡಿ,
http://img329.imageshack.us/img329/9169/ksrtcjj7.jpg

-ಪ್ರದೀಪ್ ರಾವ್
ಪುತ್ತೂರು

Anonymous ಅಂತಾರೆ...

KSRTC ಅವರು ಯಾವತ್ತು ಕನ್ನಡದ ಹೆಸರು ಇಟ್ಟಿದ್ದಾರೆ

ನೋಡಿ ಅವರು ಇಟ್ಟವೆಲ್ಲ ಸಂಸ್ಕೃತದದ್ದು ಈಗ ಹಿಂದಿ

ಐರಾವತ, ಮಯೂರ, ರಾಜಹಂಸ ಇವೆಲ್ಲ ಸಂಸ್ಕೃತ
ಶೀಥಲ ಇದು ಸಂಸ್ಕೃತವೇ

ಕನ್ನಡದಲ್ಲಿ ನವಿಲು, ಗಿಳಿ, ತಂಗಾಳಿ, ಬೆಳದಿಂಗಳು, ತೇರು, ಇವೆಲ್ಲಿ ಇಡಬೋದು. ಆದ್ರೆ ನಮ್ಮೋರಿಗೆ ಏನೇ ಆದ್ರು ಅದಕ್ಕೆ ಸಂಸ್ಕೃತ-ಹಿಂದಿ ಮಂತ್ರ ಬೀಳಲೇ ಬೇಕು.

ಬೃಹತ್ ಬೆಂಗಳೂರು ಯಾಕೆ? ಹಿರಿಬೆಂಗಳೂರು, ದೊಡ್ಡಬೆಂಗಳೂರು, ಹೆಬ್ಬಂಗಳೂರು, ಹಿರೇಬೆಂಗಳೂರು ಇವೆಲ್ಲ ಚನ್ನಾಗಿಲ್ವಂತೆ. ಇವೆಲ್ಲ ಕೇಳಕ್ಕೆ ಒರಟಂತೆ.

ನಮ್ಮ ಕನ್ನಡ ಮಂದಿ, ಯಾವ ಕನ್ನಡ ಯಾವುದು ಸಂಸ್ಕೃತ ಯಾವುದು, ಕನ್ನಡ ಸಂಸ್ಕೃತದಿಂದ ಬಂದಿಲ್ಲ ಅಂತ ಚನ್ನಾಗಿ ತಿಳಿದುಕೊಳ್ಳುವರೂ ಅಲ್ಲಿಯ ವರೆಗೂ ಹಿಂಗೆ.

ಬರಹ ಚನ್ನಾಗಿದೆ.!

Anonymous ಅಂತಾರೆ...

thumbha chennagi baritheera gurugale.
Innodhu vishaya naanu gaminisirodhu andhre ,hora rajyakke horaduva ಕ.ರಾ.ರ.ಸಾ.ಸಂ gadigalu ,oorina hesarannu tamil athva telugu nalli hakiruthave.
adhe bere rajyada hora hoguva vahanagalu avaradhe bashe yelli baristhare.
Idu yeke heghe antha gurugale.Namma ಕ.ರಾ.ರ.ಸಾ.ಸಂ ge yeke intha dhorane antha artha agodhilla.
idekella alli iruva kannadigarallada adikarigala kai chalaka ansuthe.Idannu avrighe hege tilisodu!
-Prashanth

Anonymous ಅಂತಾರೆ...

onchooroo bhaashe, saMskrutiyamele abhimaanavillada mantrigaLiddare heege aagodu..jaati, tOlbala, haNada baladinda geddu bandavaru mantrigaLaadare avarinda innenu taane bayasalu saadhya??

Anonymous ಅಂತಾರೆ...

Prashanth haagu Pradeep awaru hELiruwudannu naanu saha gamanisiddene. MalayaaligaLu aa pradeshadalli hecchiddare awaru prayaana maaDuttiddare awaru kannaDa kaliyali allawe, adu bittu awarige anukoolawaagali eMdu yaake awara bhasheyalli haakabEku? naanu kEraLa kke hOdaaga gamanisiddeneMdare, even karnaataka kEraLa border nali kooDa poortiyaagi malayaaLam nalle aMgaDi muMgattugaLa hesaru ide. Even English nalli kooDa illa. bahaLa kaShTa pattewu alli.

Rohith B R ಅಂತಾರೆ...

ನಂಗ್ ಅನ್ಸೋದೇನು ಅಂದ್ರೆ ಈ ವಿಷಯದಲ್ಲಿ ಕ.ರಾ.ರ.ಸಾ.ಸಂ ಅವ್ರು ಕನ್ನಡ ಸಂಸ್ಕೃತದಿಂದ ಬಂದಿಲ್ಲ ಎಂಬ "ದೊಡ್ಡ" ಸತ್ಯವನ್ನೇನು ತಿಳ್ಕೊಳ್ಬೇಕಾಗಿಲ್ಲ.. ಬರೀ ಕನ್ನಡದ ಬಗ್ಗೆ ಹೆಚ್ಚಾದ ಪ್ರೀತಿ ಮತ್ತು ಕಾಳಜಿ ಇಟ್ಟ್ಕೊಂಡ್ರೆ ಸಾಕು.. ಏನಂತೀರ?
ಈಗ ಕ.ರಾ.ರ.ಸಾ.ಸಂ ಹೊಸ ಬಸ್ ಒಂದು ಹೊರಡಿಸ್ತು.. ಒಳ್ಗೆ ತಣುವಾದ ಗಾಳಿ ಇರತ್ತೆ, ಪ್ರಯಾಣ ಸುಖಕರವಾಗಿರತ್ತೆ, ಇತರೆ ಅಂಶಗಳು - ಇದನ್ನ ವಿವರ್ಸಕ್ಕೆ, ಗುರು ಹೇಳ್ದ್‍ಹಾಗೆ ತಂಗಾಳಿ ಎಂಬ ಪದವೇ ಅಲ್ವೆ ಒಬ್ಬ ಕನ್ನಡಿಗನು ಯೋಚಿಸುವುದು? ಕ.ರಾ.ರ.ಸಾ.ಸಂ ಅವ್ರು ಯಾಕೆ ಭಿನ್ನ್ನವಾಗ್ ಯೋಚಿಸ್ಬೇಕು? ಇದಕ್ಕೆಲ್ಲ ಸಂಸ್ಕೃತ ಕನ್ನಡದ ಸಂಬಂಧ ಎಲ್ಲ ಏಕೆ ಗೊತ್ತಿರ್ಬೇಕು ಸಿವ?!

Anonymous ಅಂತಾರೆ...

siddaruDa,
neevu yenu artha aaglilla annOdanna oMderaDu udaahaaraNe koDade irOdu open maatgaLu alve?
nODi, "ka.raa.ra.saa.saM" annO aarticle nalli gurugaLinda naavu kaliyabEkaagirOdu ivugaLna
1. obba javaabdaari sarkaari saMsthe tanna ellaa/eNe kelasagaLalli sthaLeeya vaataavaraNa da bagge kaaLaji vahisi nirdhaaragaLanna togObEku(nimage gottalla bengaLUru aMtararaaShTrIya vimaana nildaaNada kathe).
2. janasaamaanyaru iMtaha nirdhaaragaLige hEge spaMdisabEku. yaavudu sari yaavudu tappu eMdu yOchisabEku.
3. keeLarimeyinda namage aaguttiruva anyaayagaLa manavarike aagide. idariMda horage baralu daari.
4. Last but not the least... eShTO siddarUDhaaru ee bagge yOchisi nijavaada prajegaLaagidaare :-)innEnu bEku nimge hELi. yOchane maaDi nijavaada praje aagi.

-Sanju

Anonymous ಅಂತಾರೆ...

ನಮ್ಮ ಜನರ ಹೇಡಿತನದ ಜೊತೆಗೆ ಹೊರರಾಜ್ಯದ IAS ಅಧಿಕಾರಿಗಳೂ ಇದಕ್ಕೆ ಕಾರಣ. ಹಿಂದೀಕರಣ ಮತ್ತು ಸಂಸ್ಕೃತೀಕರಣ ನಿಲ್ಲಬೇಕು. ಬೇರೆ ನುಡಿಗಳು ಮೇಲು ನಮ್ಮದೆಲ್ಲಾ ಕೀಳು ಎನ್ನುವ ಕೀಳರಿಮೆ ಹೋಗಲಿ.

Anonymous ಅಂತಾರೆ...

First condemn the names of establishments mall, housing complexes, restaurants, roads etc like “ Forum mall, Margosa road, Maple trees, Tamarind tree, coconut grove, Irish pub, Jockey Club, Ittina series houses [does any one know what is the meaning], printing press, Dairy, Infosys, VRL logistics, MTR. Adigas delicacy, Diagnostic centre, pharmacy etc which are very much owned by Kannadiga’s that are in English, which is not really our native, troublesome for the common kannadiga to understand.

One more thing, see the names wonderland and fantasy park. Have you people boycotted! Stopped taking your kids to these amusement parks? Instead have you protested, suggested Kannada names [beragu boomi for wonderland] to these authorities.

At least some of the Hindi-Sanskrit words [naama padagaLu] are as that similar that of Kannada. Just think of your mother, wife, sister, and daughters name before writing such articles. Could be some Shital, Dimple, shalin may be around!

Oh! For got! what about your names guru? Are you all annappa, sannappa, siddappa, marappa, beemappa, running this blog.

Come out of the glasshouse...................

Anonymous ಅಂತಾರೆ...

Obalappa,

Ah what logic you apply!

Here are some people out to rebuild the land, who have identified that there is a problem X ("Sheetal" story) and are making people realize it...

And you go about talking about another problem Y (Names of a fraction of Kannadigas who live in cities or belong to a particular section of the society).

Did anyone say Y is not a problem?

Get a basic course on logic before you come to fora like this.

Anonymous ಅಂತಾರೆ...

ಎಷ್ಟು ಸಿಟ್ಟು ಬರುತ್ತೆ ನಮ್ಮ ಸರಕಾರದ ವರ್ತನೆಗೆ. ಎಲ್ಲದರಲ್ಲೂ ಬೇರೆಯವರನ್ನೇ ಮೆಚ್ಚಿಸಲಿಕ್ಕೇ ಹೋಗುವುದು. ಇದಕ್ಕೇನಾದ್ರೂ ನಮ್ಮ ಪ್ರತಿಭಟನೆ ಕಳಿಸಬಹುದಾ ?

Anonymous ಅಂತಾರೆ...

ಓದಲಪ್ಪ, ಮತ್ತೊಬ್ಬ

ಕನ್ನಡದಲ್ಲಿ ಬರೇರೀ.. ಯಾಕೆ?

ನಿಮಗೆ ಕನ್ನಡ ಬರೊಲ್ವ? ಮತ್ತೇನ್ ನಿಮ್ದು ಇಂಗ್ಲೀಶಲ್ಲಿ?

ಈ ಓದಲಪ್ಪ, ನೆನ್ನೆ ಮೊನ್ನೆ ಬಿಹಾರದಿಂದ ಓಡಿ ಬಂದ ಬಿಕಾರಿ ತರ ಆಡ್ತಾನೆ..

ಎಲ್ರೂ ಕನ್ನಡದಲ್ಲಿ ಬರೀರಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails