ಬೆಳಗಾವಿ ಎ.ಪಿ.ಏಂ.ಸಿ. ಚುನಾವಣೇಲಿ ಮೇಲುಗೈ ಸಾಧಿಸೋದಕ್ಕೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆಗೆ ಭಾ.ಜ.ಪ. ನೆನ್ನೆ ಕೈ ಕುಲುಕಿದೆ ಅಂತ ಇವತ್ತು ಕನ್ನಡಪ್ರಭ ವರದಿ ಮಾಡಿದೆ. ಇಂಡಿಯನ್ ಎಕ್ಸ್ರ್‍ಪ್ರೆಸ್ ನಲ್ಲಿ ಕೂಡ ಇದೇ ಸುದ್ದಿ. ಬರೋ ಎರಡು ತಿಂಗ್ಳಲ್ಲಿ ರಾಜ್ಯದ ಆಡಳಿತ ಕೈಗ್ ತೊಗೊಳಕ್ ಹೊರಟಿರೋ ಭಾ.ಜ.ಪ. ಅಧಿಕಾರಕ್ಕಾಗಿ ಕನ್ನಡವಿರೋಧಿಗಳ ಜೊತೆಗೂ ಕೈಗೂಡಿಸೋದಕ್ಕೆ ಹಿಂಜರಿಯಲ್ಲ ಅಂತ ತೋರಿಸಿಕೊಟ್ಟಿದಾರೆ. ಇವರಿಗೆ ಬೇಕಾಗಿರೋದು ಅಧಿಕಾರ, ಅಷ್ಟೆ. ಅದಕ್ಕೆ ಏನು ಮಾಡಕ್ಕೂ ತಯಾರು ಇವ್ರು. ಈ ರಾಷ್ಟ್ರೀಯ ಪಕ್ಷಗಳಿಗೆ ಕನ್ನಡನಾಡು ಬರೀ ರಿಯಲ್ ಎಸ್ಟೇಟು ಗುರು! ಯಾರ ಜೊತೆ ಕೈಜೋಡಿಸಿದರೆ ಕುರ್ಚಿ ಭದ್ರಾನೋ ಔರ ಜೊತೆ ಸೇರ್ಕೊಂಡು ನಾಡ್ನ ಹಿಂದ್-ಮುಂದ್ ನೋಡದೆ ಮಾರಿಹಾಕೋ ಜನ ಇವ್ರು.
ಕನ್ನಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ
ಈ "ಮಹಾರಾಷ್ಟ್ರ ಏಕೀಕರಣ ಸಮಿತಿ" ಅನ್ನೋದನ್ನ ಕರ್ನಾಟಕದಲ್ಲಿ ಕಾಲಿಡಕ್ಕೆ ಬಿಟ್ಟಿರೋದೇ ತಪ್ಪು. ಬೆಳಗಾವೀಲಿ ಬಂದು ಏನು ಮಹಾರಾಷ್ಟ್ರದ ಏಕೀಕರಣ ಮಾಡೋದು ಇವ್ರು? ಇವರ ಅಜೆಂಡಾನೇ ಅಕ್ಕಪಕ್ಕದ ರಾಜ್ಯಗಳ ಊರುಗಳ್ನ ನುಂಗೋದು. ಇಂಥಾ ರಾಜಕೀಯ ಪಕ್ಷಗಳು ಇರೋದಕ್ಕೆ ಒಪ್ಪಿಗೆ ಕೊಟ್ಟಿರೋದು ಭಾರತದ ಒಕ್ಕೂಟ ವ್ಯವಸ್ಥೆಗೇ ಒಂದು ಕಪ್ಪುಚುಕ್ಕೆ. ಈ ಎಂ.ಇ.ಎಸ್. ನೋರು ಮಾಡಿರೋ ಹಲ್ಕಾ ಕೆಲ್ಸ ಒಂದೊಂದಲ್ಲ. ಬೆಳಗಾವೀನ ಮಹಾರಾಷ್ಟ್ರಕ್ಕೆ ಸೇರಿಸ್ತೀವಿ ಅಂತ ಸಾರಿ ಸಾರಿ ಹೇಳೋದು, ಸಾಂಗ್ಲೀಲಿದ್ದ ಮರಾಠಿ ಸಮ್ಮೇಳನಾನ ಬೆಳಗಾವೀಲಿ ಮಾಡಿ ಅನ್ನೋದು, ಇಂಥಾ ಕನ್ನಡವಿರೋಧಿ ಚಟುವಟಿಕೆಗಳ್ನ ಮಾಡೋದೇ ಇವರ ಜಾಯಮಾನ.
ರಾಷ್ಟ್ರದ್ರೋಹಿ ರಾಷ್ಟ್ರೀಯ ಪಕ್ಷಗಳು
ಅಲ್ಲ, ಅಧಿಕಾರಕ್ಕಾಗಿ ಇಂಥೋರ ಜೊತೆ ಕೈಜೋಡಿಸುವುದಕ್ಕೂ ಹಿಂದೇಟಾಕ್ಲಿಲ್ಲವಲ್ಲ ಭಾ.ಜ.ಪ.? ಇವ್ರ ಕೈಲಿ ಕರ್ನಾಟಕದ ಆಡಳಿತ ಕೊಡಕ್ಕಾದ್ರೂ ಹೆಂಗಾಗತ್ತೆ ಗುರು? ಇವರಿಗೆ ಕರ್ನಾಟಕ ಅನ್ನೋದು ಗೌಣ, ಅಧಿಕಾರ ಅನ್ನೋದೇ ಮೊದ್ಲು. ಭಾ.ಜ.ಪ. ಅಷ್ಟೇ ಅಲ್ಲ, ಇವತ್ತಿನ ರಾಷ್ಟ್ರೀಯ ಪಕ್ಷಗಳಿಗೆಲ್ಲ ಇರೋ ರೋಗವೇ ಇದು. ಇವರಿಗೆ ಕನ್ನಡವೂ ಗೌಣ, ಕನ್ನಡಿಗರೂ ಗೌಣ, ಕರ್ನಾಟಕವೂ ಗೌಣ (ಆ ಮೂಲಕ ಭಾರತವೂ ಗೌಣ; ನಮಗೆ ಕರ್ನಾಟಕವೇ ಭಾರತ). ಇವತ್ತು ಭಾ.ಜ.ಪ. ಜಾಗದಲ್ಲಿ ಕಂಗ್ರೆಸ್ ಇದ್ದಿದ್ರೆ ಎಂ.ಇ.ಎಸ್. ಜೊತೆ ಅವರೇ ಕೈ ಜೋಡಿಸುತ್ತಾ ಇದ್ರು ಅಂತ ಹೇಳಬೇಕಾಗೇ ಇಲ್ಲ.
ಪ್ರತಿಯೊಂದು ತೀರ್ಮಾನವೂ ಈ "ರಾಷ್ಟ್ರೀಯ ಪಕ್ಷ"ಗಳ ತೂಗುತಲೆ ದಾಸರಿಗೆ ದಿಲ್ಲಿಯಿಂದಾನೇ ಬರಬೇಕು. ತಮ್ಮ ನಾಡಿಗೇ ದ್ರೋಹ ಬಗಿ ಅಂತ ಹೇಳ್ಕೊಟ್ರೂ ತಲೆ ಅಲ್ಲಾಡಿಸೋ ದ್ರೋಹಿಗಳು ಇವ್ರು. ಹಿಂದೆ ಬ್ರಿಟೀಷರು ನಾಡದ್ರೋಹಿ ಭಾರತೀಯರನ್ನ ಸಾಕ್ಕೊಂಡು ಭಾರತಕ್ಕೇ ದ್ರೋಹ ಬಗಿ ಅಂತ ಹೇಳಿಕೊಟ್ಟರೂ ತಲೆ ಅಲ್ಲಾಡಿಸಿಕೊಂಡು ಮಾಡ್ತಿದ್ರಲ್ಲ, ಅವ್ರಿಗೂ ಇವತ್ತಿನ ರಾಷ್ಟ್ರೀಯ ಪಕ್ಷಗಳಿಗೂ ಏನು ವೆತ್ಯಾಸ? ನಮ್ಮನ್ನ ಆಳೋರ್ನ ಅವತ್ತು ಬ್ರಿಟೀಷರು ಸಾಕ್ಕೊಂಡಿದ್ರು, ಇವತ್ತು ದಿಲ್ಲಿಯೋರು ಸಾಕ್ಕೊಂಡಿದಾರೆ, ಅಷ್ಟೆ. ಕರ್ನಾಟಕಕ್ಕೆ ಇವ್ರಿಬ್ರಿಂದ್ಲೂ ಸಿಗ್ತಿರೋ "ಸುಖ" ಒಂದೇ.
ಈ ಐವತ್ ವರ್ಷ್ದಲ್ಲಿ ಕರ್ನಾಟಕವನ್ನ ಆಳಿರೋ ಪಕ್ಷಗಳೆಲ್ಲ "ರಾಷ್ತ್ರೀಯ ಪಕ್ಷ"ಗಳೇ, ಎಲ್ಲರೂ ಕರ್ನಾಟಕದ್ರೋಹಿಗಳೇ, ರಾಷ್ಟ್ರದ್ರೋಹಿಗಳೇ. ಇವ್ರ್ಯಾರಿಂದ್ಲೂ ಕಾವೇರಿ ಸಮಸ್ಯೆ ಬಗೆಹರಿಸಕ್ಕಾಗ್ಲಿಲ್ಲ, ಮಹಾಜನ್ ವರದಿ ಜಾರೀಗ್ ಬರ್ಲಿಲ್ಲ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡ್ಸಕ್ಕಾಗಿಲ್ಲ. ಯಾವ್ದೇ ರೀತೀಲೂ ಇವ್ರು ಕರ್ನಾಟಕದ ಗಡಿ-ನುಡಿ, ನೆಲ-ಜಲ ಕಾಯ್ಲಿಲ್ಲ.
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆ ಇದೇ ಮಣ್ಣಿನಲ್ಲಿ ಹುಟ್ಟಿದ ಪಕ್ಷಗಳ ಕೈಲಿ ಮಾತ್ರ ಸಾಧ್ಯ
ನೆಲ-ಜಲಗಳ್ನ ಕಾಯೋ ಕೆಲ್ಸಗಳ್ನೇ ಮಾಡಕ್ಕೆ ಯೋಗ್ತೆ ಇಲ್ದೇ ಇರೋ ಭಾ.ಜ.ಪ., ಕಾಂಗ್ರೆಸ್ಸು, ಮುಂತಾದ "ರಾಷ್ಟ್ರೀಯ ಪಕ್ಷ"ಗಳಿಗೆ ಕರ್ನಾಟಕದ ಏಳ್ಗೆ ಬೇಡವೇ ಬೇಡ. ಇವರನ್ನ ನಂಬ್ಕೊಂಡ್ರೆ ಕನ್ನಡ ಹೀಬ್ರೂ, ಜರ್ಮನ್, ಫ್ರೆಂಚ್, ಇಂಗ್ಲೀಷ್ ಗಳಷ್ಟು ಬಲಿಷ್ಠ ಭಾಷೆ ಆದಂಗೇ, ಕರ್ನಾಟಕ ಪ್ರಪಂಚದಾದ್ಯಂತ ಹೆಸರು ಮಾಡಿದಂಗೇ, ಕನ್ನಡಿಗ ಸಾಧನೆಯ ಶಿಖರಕ್ಕೆ ಏರಿದಂಗೇ. ಇವರನ್ನ ನಂಬ್ಕೊಂಡ್ರೆ ಬೆಂಗಳೂರಿನ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಇವತ್ತು ಆಗ್ತಿರೋ ಅವಮಾನ ನಿಂತಂಗೇ, ಇವರನ್ನ ನಂಬ್ಕೊಂಡ್ರೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಕೆಲಸ ಸಿಕ್ಕಿದಂಗೇ.
ಈ ರಾಷ್ಟ್ರೀಯ ಪಕ್ಷಗಳ್ನ ನಂಬಕ್ಕಾಗಲ್ಲ ಗುರು. ನಮಗೆ ನಮ್ಮದೇ ಪಕ್ಷಗಳು ಬೇಕು. ಕರ್ನಾಟಕವನ್ನೇ ಕರ್ಮಭೂಮಿಯಾಗಿಟ್ಟುಕೊಂಡಿರೋ ಪಕ್ಷಗಳು ಬೇಕು. ಕನ್ನಡಿಗರ ಏಳ್ಗೆಯನ್ನೇ ಗುರಿಯಾಗಿ ಇಟ್ಟುಕೊಂಡಿರೋ ಪಕ್ಷಗಳು ಬೇಕು. ಕನ್ನಡಾಂಬೆಯನ್ನೇ ದೇವಿ ಅಂತ ನಂಬಿರೋ ಪಕ್ಷಗಳು ಬೇಕು. ಕನ್ನಡ-ಕನ್ನಡಿಗ-ಕರ್ನಾಟಕಗಳ ವಿಷ್ಯ ಬಂದಾಗ ಕೂದಲೆಳೆಯಷ್ಟೂ ರಾಜಿಮಾಡ್ಕೊಳಕ್ಕೆ ತಯಾರಿಲ್ಲದಿರೋ ಪಕ್ಷಗಳು ಬೇಕು, ಇದೇ ಮಣ್ಣಲ್ಲಿ ಹುಟ್ಟಿದ ಪಕ್ಷಗಳು ಬೇಕು.
10 ಅನಿಸಿಕೆಗಳು:
ಕರ್ನಾಟಕ ರಕ್ಷಣಾ ವೇದಿಕೆ ಒಂದೇ ಈವತ್ತು ಕನ್ನಡಿಗರಿಗೆ ಇರುವ ಆಶಾಕಿರಣ. ಅವರು ರಾಜಕೀಯಕ್ಕೆ ಧುಮುಕುವುದೊಂದೆ ಈಗಿರುವ ದಾರಿ. ಈಗಿರುವ ಎಲ್ಲಾ ರಾಜಕಾರಣಿಗಳು ದುಡ್ಡಿನಾಸೆಗೆ ಅವರಮ್ಮನನ್ನೂ ಬೇಕಾದ್ರೂ ಮಾರಬಲ್ಲ ದೇಶತ್ಯಾಗಿಗಳು, ಸ್ವಾರ್ಥಪ್ರೇಮಿಗಳು...
Karnataka Rakshana vedike has bloody screwed these MES bastards royally but the shameless MES goonDas are still continuing their cheap practices.
Its high time, KRV turns out into a political outfit and starts taking charge, especially in the border areas like beLLary, kolar and beLagaavi
ಏನ್ ಗುರು, ಭಾಜಪದ ಮಾತೃ ಸಂಸ್ಥೆಯಾದ ರಾಸಸಂ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ 'ಹಿಂದಿ, ಹಿಂದೂ ಮತ್ತು ಹಿಂದೂಸ್ತಾನ್ '(ಹಿಂದಿ ಮತ್ತು ಹಿಂದೂಗಳಿಂದ ಮಾತ್ರ ದೇಶದ ಹಿತ ಸಾಧ್ಯವೆನ್ನುವಂತೆ ಅರ್ಥೈಸಿ) ಅಂತ ಘೋಷಣೆಯನ್ನು ಮೊಳಗಿಸತ್ತಾ ಇದ್ದಂತ ಸಂಘ ಪರಿವಾರದ ಅಂಗ ಪಕ್ಷವಾದ ಭಾಜಪದಿಂದಿ ಕರ್ನಾಟಕದ ಮತ್ತು ಕನ್ನಡದ ಹಿತವನ್ನು ಹೇಗೆ ತಾನೇ ನಿರೀಶಿಕ್ಷಿಸಲು ಸಾಧ್ಯ ಗುರು, ಆದ್ದರಿಂದ ಭಾಜಪವನ್ನು ಕಿತ್ತೋಗೆಯುವುದೊಂದೆ ದಾರಿ ಮತ್ತು ಕರವೇ ಶಿವಸೇನೆ ತರಹ ಖದರು ಬೆಳೆಸಿಕೊಂಡರೆ ಸಾಕು ರಾಜಕೀಯ ಅನಾವಶ್ಯಕ.
ಶಾಂತಕುಮಾರ್ ಕಪ್ಪಗಲ್
ಕರ್ನಾಟಕ ರಕ್ಷಣ ವೇದಿಕೆ ಅಧಿಕಾರಕ್ಕೆ ಬಂದರೆ ನಮಗೆ ಒಳ್ಳೆಯದಾಗುತ್ತೆ ಅನ್ನಿಸುತ್ತೆ , ಈಗಿನ ಪರಿಸ್ಥಿತಿ ಮುಂದುವರೆದರೆ ಕನ್ನಡಕ್ಕೆ ಉಳಿಗಾಲವಿಲ್ಲ.
oppuvaMtaa maatu guru.
kannaDa oMdu raajakeeya anivaaryate aagabEku.
Namma Rajyada rajakaranigalige duddu,adhikara yerdu idre saaku.
Idhu varegu naanu kandiruvanthe yevudhe Kannadapara/Kannada Uddarakke ghoshane athva kanoonu yenu horadisilla.
Ondhu paksha tamilu nadnalli athva andhradalli, Bengaluru kandantha belavanighey kanddidare avara basheygalu anthar-rasthriya maattadaali belastha idru allina rajakiya pakshagalu....
Ka Ra Ve ghe idhu sooktha samaya rajakiya praveshakke
-Prashanth
belagaviyalli banditaragiro karave karyakartharu beda bidugadeyagali
ಚೆನ್ನಾಗಿ ಬರ್ದಿದ್ದೀರ, ಧನ್ಯವಾದಗಳು.
ಒಂದೇ ಒಂದು ವಿಚಾರ, ಕರ್ನಾಟಕ ರಕ್ಷಣ ವೇದಿಕೆ ಅನ್ನೋದು ಒಂದು ರಾಜಕೀಯ ಪಕ್ಷ ಆಗ್ಬಾರ್ದು, ಹಾಗಾದಲ್ಲಿ ಅದೂ ಇತರ ರಾಜಕೀಯ ಪಕ್ಷಗಳ limitationsಗೆ ಸಿಕ್ಕಿ ಹಾಕಿಕೊಳ್ಳುತ್ತೆ, ಆಗ್ತಾ ಇರೋ ಕೆಲ್ಸಗಳೊ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ವೆ. ಅದಕ್ಕೆ ಜನರ ಶಕ್ತಿ ಸಿಗಬೇಕು ಅಷ್ಟೆ. ಅದು ಒಂದು ಇಂಡಿಪೆಂಡೆಂಟ್ ಸಂಸ್ಥೆ ಆಗಿದ್ದರೇ ಕೆಲ್ಸ ಚೆನ್ನಾಗಿ ಆಗೋದು, ಇಲ್ಲವಾದಲ್ಲಿ ರಜಕೀಯ ಅದರ ನಿಯತ್ತನ್ನೂ ಹಾಳು ಮಾಡೊ ಸಾಧ್ಯತೆ ಬರುತ್ತೆ.
ಜೊತೆಗೆ ರಾಜ್ಯವೆಂದರೆ ಬರೀ ಭಾಷೆ ಮತ್ತು ಸಂಸ್ಕೃತಿಯೇ ಆಗುವುದಿಲ್ಲ, ಅಲ್ವಾ? ಹಣಕಾಸು, ವ್ಯವಹಾರ, ಎಡ್ಯುಕೇಷನ್, ಪರರಾಜ್ಯಗಳ ಸಂಬಂಧ, ಹೀಗೆ ಮಣ್ಣು ಮಸಿ ಅಂತ ಇರುತ್ತೆ, ಇವುಗಳು ಕರವೆಯ ತಾಕತಲ್ಲ (ತಾಕತ್ತಿಲ್ಲ ಅಂತ ಹೇಳ್ತಿಲ್ಲ, these are not its strength/strong areas anta ashte). ಇವುಗಳ ಮಧ್ಯೆ ಕರವೆ ಯ ಮೂಲವಾದ ಕನ್ನಡದ ಮೇಲಿನ focus dilute ಆದೋ ಸಾಧ್ಯತೆ ಇದೆ. ಅಸ್ಸಾಮಿನ revolutionary ಪಾರ್ಟಿಯ ಸೋಲೆ ಇದಕ್ಕೆ ಸಾಕ್ಷಿ ಅನ್ಸುತ್ತೆ. ಆದ್ರಿಂದ ಅದು ಒಂದು ರಾಜಕೀಯ ಪಕ್ಷ ಆಗೋದು ಸರಿ ಅಲ್ಲ ಅಂತ ನನಗೆ ಅನ್ನಿಸುತ್ತೆ.
ನೋಡೋಣ ಹೇಗಾಗುತ್ತೆ ಅಂತ.
ಕ ರ ವೇ ಖಂಡಿತವಾಗಿ ರಾಜಕೀಯಕ್ಕೆ ಇಳೀಬಾರ್ದು....ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಅಂತ ನನ್ನ ಅನಿಸಿಕೆ. ಅದರ ಬದಲು ಅದು ರಾಜಕೀಯ ಪಕ್ಷಗಳನ್ನು ತನಗೆ ಬೇಕಾದ ಹಾಗೆ ಕುಣಿಸುವಂತಹ ಬಲವನ್ನು ಬೆಳೆಸಿಕೊಳ್ಬೆಕು.
I went through the 6 page application form and no where though that they are pro/against some language.
Few clarifications ...this neither means im related to bank in some way nor i dont have kannada abhimana in me .....
1. The posting can be out of karnataka also. They hav not mentioned the posting will be in karnataka only. So they asked for HINDI, which is widely spoken/understood in majority of North Indian states.
2. They also have mentioned this: 'Candidates should have studied State/Regional Language as one of the language
subjects at least up to SSLC/X Standard. The relevant mark-sheet showing the state
language as one of the subjects should be highlighted'
I appreciate and very happy for the concern enguru is showing towards kannada but We should always remeber that a thin line separates abhimana and fanatism.
~Kannada Abhimani
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!