ಶಾಸ್ತ್ರೀಯ ಭಾಷೆ ಅನ್ನುಸ್ಕೊಳಕ್ಕೆ ಏನೇನೋ ಸುಡುಗಾಡು-ಶುಂಠೀಹಾಳು ಶರತ್ತು ಪೂರೈಸ್ಬೇಕು, ತಜ್ಞರ ಸಮಿತಿ ವರದಿ ಕೊಡ್ಬೇಕು ಅಂತ ಕನ್ನಡದ ವಿಷಯಕ್ಕೆ ಹೇಳ್ತಿರೋ ಕೇಂದ್ರ ಸರ್ಕಾರ ತಮಿಳಿಗೆ ಅದೇ ಸ್ಥಾನಮಾನ ಕೊಟ್ಟಾಗ ಇದ್ನೆಲ್ಲಾ ಕೇಳಲೇ ಇಲ್ಲ ಅನ್ನೋದನ್ನ ಮರೀಬೇಡಿ. ಇವತ್ತಿನ ದಿನ ಕನ್ನಡ ಆ ಎಲ್ಲಾ ಶರತ್ತುಗಳನ್ನೂ ಪೂರೈಸುವಂಥಾ ಭಾಷೆ ಆಗಿದ್ರೂ ನಮಗೆ ಇನ್ನೂ ಆ ಸ್ಥಾನಮಾನ ಸಿಕ್ಕಿಲ್ಲ ಅನ್ನೋದನ್ನೂ ಮರೀಬೇಡಿ.
ಶಾಸ್ತ್ರೀಯ ಸ್ಥಾನ ಕೊಡಕ್ಕೆ ಒಂದು ನಿಯಮಾವಳಿ ಇದ್ದು, ಅದ್ನ ಪೂರೈಸೋ ಭಾಷೆಗೆಲ್ಲಾ ಆ ಸ್ಥಾನಮಾನ ಕೊಟ್ಟಿದ್ದಿದ್ರೆ ನಾವೂ ತಲೆ ಕೆಡುಸ್ಕೋಬೇಕಿತ್ತಿಲ್ಲ. ತಮಿಳು ಭಾಷೆಗೆ ಲೋಕಸಭೇಲಿ ಶಾಸ್ತ್ರೀಯ ಸ್ಥಾನಮಾನಾನ ಘೋಷಣೆ ಮಾಡ್ದಾಗ ಅವರ ಮುಂದೆ ಯಾವ ಸಮಿತಿಯ ವರದೀನೂ ಇರ್ಲಿಲ್ಲ. ಸರ್ಕಾರದ ಮುಂದೆ ಆಗ ಇದ್ದದ್ದು ಡಿ.ಎಂ.ಕೆ. ಲೋಕಸಭಾ ಚುನಾವಣಾ ಪ್ರಣಾಳಿಕೆಯ ಈ ಭಾಗ...
Tamil as a Classical Language
DMK will continue to insist for the declaration of Tamil as a Classical Language as it would enable the allocation of funds for Tamil research by the Central government and would also facilitate Tamil research in various universities in India and abroad.
... ಮತ್ತೆ ಇದನ್ನ ಡಿ.ಎಂ.ಕೆ.ಗೆ ಮಾಡಕ್ಕೆ ಬಿಡದೇ ಹೋದ್ರೆ ಎಲ್ಲಿ ಕೇಂದ್ರಸರ್ಕಾರದಿಂದ ಕಾಲು ಎತ್ತುಬಿಡ್ತಾರೋ ಅನ್ನೋ ಹೆದರಿಕೆ ಮಾತ್ರ.
ಇದರಿಂದೆಲ್ಲ ಅರ್ಥವಾಗಬೇಕಾಗಿರೋದು ಏನಪ್ಪಾ ಅಂದ್ರೆ...ನಂ ದೇಶದಲ್ಲಿ ಎಲ್ಲಾ ರಾಜ್ಯಗಳ್ಗೂ ಒಂದೇ ನಿಯಮ ಒಂದೇ ನೀತಿ ಒಂದೇ ಮಾನದಂಡ ಯಾವತ್ತು ಜಾರೀಗ್ ಬರತ್ತೋ ಅವತ್ತು ನಿಜವಾದ ಒಕ್ಕೂಟ ವ್ಯವಸ್ಥೆ ಅನ್ನೋ ಪದಕ್ಕೆ ಅರ್ಥ/ ಸಾರ್ಥಕತೆ ಬರೋದು. ಆ ಸಮಾನತೆ ಇವತ್ತಿನ ದಿನ ಮಂತ್ರಕ್ಕೆ ಉದುರೋ ಮಾವಿನಕಾಯಲ್ಲ, ಮರ ಹತ್ತಿ ಬಲವಂತವಾಗಿ ಕಿತ್ತುಕೋಬೇಕಾದ ಮಾವಿನಕಾಯಿ ಗುರು! ಕನ್ನಡಿಗರದು ಇವತ್ತಿನ ದಿನ ಕೇಂದ್ರದಿಂದ ಎತ್ತಕ್ಕೆ "ಕಾಲು" ಅನ್ನೋದು ಇಲ್ಲವೇ ಇಲ್ಲವಲ್ಲ ಗುರು!
ಕಾಲೇ ಇಲ್ಲದೆ ಹೇಗೆ ಮರ ಹತ್ತೋದು, ಹೇಗೆ ಮಾವಿನಕಾಯಿ ಕಿತ್ಕೊಳೋದು?! ನಿಜವಾದ "ಕಾಲು" ಕಟ್ಟದೆ ಕೈ ಕಟ್ಟಿಕೊಂದು ಕೂತಿದ್ರೆ ಮಾವಿನಕಾಯೂ ಇಲ್ಲ, ಯಾವ ಮಣ್ಣೂ ಇಲ್ಲ!
11 ಅನಿಸಿಕೆಗಳು:
ಧನ್ಯವಾದಗಳು ಒಂದು ಒಳ್ಳೆಯ ಲೆಖನವನ್ನ ಹಾಕಿದಕ್ಕೆ. ಅದಂತೂ ನಿಜ, ಕೇಂದ್ರದಲ್ಲಿ ನಿಯತ್ತಿನಿಂದ ಕೆಲಸ ಮಾಡೊ ಸದಸ್ಯರಿದ್ದಾರೆಯೇ ಅನ್ನೋ ಪ್ರಶ್ಣೆ. ಕನ್ನಡನಾಡಿನಲ್ಲಿ ತನ್ನದೇ ಆದ ಕನ್ನಡ ಪ್ರಭಲವಾದ ರಾಜಕೀಯ ಪಕ್ಷ ಇಲ್ಲದೇ ಇರುವುದು, ಒಂದು regional agenda ಇಲ್ಲದೇ ಕಾರ್ಯ ಮಾಡೋ ಅಂತ ಕೇಂದ್ರ ಪಕ್ಷಗಳ ಸುತ್ತ ಕೇಂದ್ರಿತವಾದ ಪಕ್ಷಗಳಲ್ಲಿ ಬರೀ ದುಡ್ಡು ಮಾಡಿದರೆ ಸಾಕು ಅನ್ನೋ ಮನೋಭಾವವಿರುವ ಪ್ರತಿನಿದಿಗಳಿದ್ದರೆ ಕೆಲ್ಸ ಆಗೋದು ಸಾಧ್ಯವೆ? ಅದೊಂದೇ ಅಲ್ಲ, ಕನ್ನಡ ಅಭಿಮಾನ ಈಗಿನಷ್ಟು ಯುವಕರಲ್ಲಿ ಇಂದು ಎಂದೂ ಇರಲಿಲ್ಲವೇನೋ ಅನ್ನೋ ಅಷ್ಟು ಉತ್ಸಾಹ, ಕಿಚ್ಚು, ನಂಬಿಕೆ ಈಗ ಕಾಣುಸ್ತಾ ಇದೆ. ಇದೇ ದಿಕ್ಕಿನಲ್ಲಿ ಸಾಗಿದರೆ ಕನ್ನಡಕ್ಕೆ ಇಂತಾ ರೆಕೊಗ್ನಿಶನ್ನುಗಳು ದೂರವೇನಿಲ್ಲ.
ತಮಿಳರಿಗೆ ಭಾಷಾ ಪ್ರೇಮ ಸ್ವಲ್ಪ ಜಾಸ್ತಿ ಅನ್ನೋ feeling ಎಲ್ಲರಿಗೂ ಸರ್ವೇಸಾಮಾನ್ಯವಾಗಿ ಕಾಣುತ್ತೆ, ಎಲ್ಲಿ ಹೋದರೂ ಅವರ ಮಾತು ಕೇಳೊ ಹಾಗೆ ಮಾಡ್ಕೊತಾರೆ, ಅದಕ್ಕೆ ತಕ್ಕ ಉದಾಹರನೆ ಸಿಂಗಾಪುರ. ಇರೋ ೭-೮% ಜನಸಂಕ್ಯೆಗೆ ಅದನ್ನ ಒಂದು official language status ಪಡೆದುಕೊಂಡಿದ್ದಾರೆ. ಅವರು ಆದಷ್ಟೂ ಅವರ ಭಾಷೆಯನ್ನೇ ಬಳಿಸಿ ಬೆಳೆಸುತ್ತಾರೆ, ಬೇರೆಯವರ ಬಗ್ಗೆ ಯೋಚಿಸದೇ ಅವರ ಭಾಷೆಯಲ್ಲೇ ಮಾತಾಡ್ಕೊತಾರೆ. ಕೆಲವೊಮ್ಮೆ ಅದೇ ಸರಿ ಅನ್ಸುತ್ತೆ, ಅವರ ಭಾಷೆ ನಾವೂ ತಿಳಿಯಬೇಕೇನೊ ಅನ್ನೋ ಅಂತ ವಾತಾವರಣ ತಯಾರು ಮಾಡ್ತಾರೆ. ಮಚ್ಚಾ, ಸಾಂಬಾರ್, ತೋಸೈ, ಚುಮ್ಮ ಅಂತ ಪದಗಳನ್ನ popularize ಮಾಡ್ಕೊತಾರೆ.
ಅದ್ರೆ ನಾನು ಸಾಕಷ್ಟ್ ವಿಚಿತ್ರ ಕನ್ನಡದವರ್ನ ನೋಡಿದ್ದೇನೆ. ಎದ್ರುಗಡೆ ಸಿಕ್ಕ್ರೂ ಕನ್ನಡ ಮಾತಾಡಕ್ಕೆ ಏನೊ ಮುಸು ಮುಸು ಅಂತಾರೆ. ಕನ್ನಡದಲ್ಲಿ ಮಾತನಾಡಿಸುದ್ರೂ ಆಂಗ್ಲದಲ್ಲೋ ಅತ್ವಾ ಹಿಂದಿಯಲ್ಲೋ ಮಾತಾಡೊ ಕೆಲವು ಸಹಯೋಗಿಗಳನ್ನೂ ಕಂಡಿದ್ದೇನೆ. ನಗೆಗೇಡು ಅಂದ್ರೆ, ಕನ್ನಡ ಓದ-ಬರೆಯಲು ಬರೋದಿಲ್ಲ ಅಂತ ತಮಾಷೆಯಾಗಿ (ಜಂಬದಿಂದ ಕೂಡ) ಹೇಳಿಕೊಳ್ಳೋದನ್ನೂ ನೊಡೀದ್ದೇನೆ. ಅದ್ಯಾಕೆ, ಬೆಂಗಳೂರಿನಲ್ಲೆ ಕನ್ನಡದಲ್ಲಿ, ಕನ್ನಡದ ಬಗ್ಗೆ debate ಮಾಡಲು ಮುಜುಗರಿಸುತ್ತೇವೆ ಅದಕ್ಕಿಂತಾ ವಿಚಿತ್ರ ಬೇಕೆ? ಹೀಗಿದ್ದಾಗ ನಮ್ಮ ಭಾಷೆಯನ್ನ ನಾವೇ ಬೆಳಸದ್ದಿದ್ದರೆ ಹೇಗೆ ಉದ್ಧಾರ ಅಲ್ವೆ?
ಆದ್ರೆ ಈ ಬ್ಲಾಗಿನಲ್ಲಿರೋ ಮಾತುಕಥೆಗಳ್ನ ನೋಡುದ್ರೆ ಸಾಕಷ್ಟು ಬರವಸೆ ಬರುತ್ತೆ; ಕನ್ನಡಿಗರ ಅಭಿಮಾನ, ಸ್ವಾಭಿಮಾನ, ಕನ್ನಡದ ಮೇಲಿನ ಪ್ರೇಮ, ಒಲವು ಬೆಳೆದು ಬರ್ತಾ ಇದೆ ಅಂತ ಖುಷಿ ಆಗುತ್ತೆ. ಶೇಶಾದ್ರಿಯವರು ಹೇಳಿದ ಹಾಗೆ ಆ status ಸಿಗಕ್ಕೆ ಮುಂಚೆ ಸಾಕಷ್ಟು ಕೆಲ್ಸ ಆಗಬೇಕಿದೆ.
ಮತ್ತೊಮ್ಮೆ ಧನ್ಯವಾದಗಳು ಏನ್ಗುರು! ಹೊಸ ಹೊಸ ಚಿಂತನೆಗೆ ದಾರಿ ಮಾಡ್ಕೊಡ್ತಾ ಇದೀರ, ಇದು ಸಾಕಷ್ಟು impact ಮಾಡುತ್ತೆ.
ಗುರುಗಳಿಗೆ ಶರಣು,,
ನೀವು ಹೇಳಿದು ಮಾತು ನೂರಕ್ಕ ನೂರ ಖರೇ ಐತಿ.. ಬೇರೆ ಎಲ್ಲಾ ವಿಷಯಕಿಂತಾ ದಿಲ್ಲಿನಾಗ್ ನಮ್ಮ ತಾಕತ್ ತೋರಸು ಸಲುವಾಗ್ಯಾರು ನಾವು ಎಲ್ಲಾ ಕೂಡಿ ಹೋರಾಟ ಮಾಡಿ classical status ಪಡ್ಕೊಬೇಕು. ಇ ಬಿ.ಜೆ.ಪಿ, ಕಾಂಗ್ರೆಸ್ ಪಾರ್ಟಿಗೊಳನ್ನ ಕರ್ನಾಟಕದಿಂದ ಒದ್ದು ಹೊರಗ ಹಾಕಿ ನಮ್ಮ ನಾಡು, ನಮ್ಮ ನುಡಿ, ನಮ್ಮ ಮಂದಿ ಬಗ್ಗೆ ಖರೇ ಕಾಳಜಿ ಇರು ಒಂದ ಲೋಕಲ್ ಪಕ್ಷ ಮಾಡಕೋಬೇಕು. ಅದರಿಂದ ಮಾತ್ರಾ ಇ ಕೇಂದ್ರದ ಮಲತಾಯಿ ಧೋರಣಾ ಸರಿ ಮಾಡಾಕ್ ಆಗತೇತಿ.. ಚಲೋ ಬರದೀರಿ ಗುರುಗಳೇ.. ಹಿಂಗ ಬರೀರಿ..
ಹಿರೇಮಠ ಅನ್ನುವವರು ಒಂದು ಹೊತ್ತಗೆ ಬರೆದಿದ್ದಾರೆ.
ಅದರಲ್ಲಿ ಈ ಸಂಗತಿ ಬಗ್ಗೆ ಬಿಡಿಸಿ ಬಿಡಿಸಿ ಹೇಳಿದ್ದಾರೆ.
ಆ ನಾಲ್ಕು ಕಟ್ಟಳೆಗಳಲ್ಲಿ ಒಂದನ್ನು ಕನ್ನಡ ಪೂರಯಿಸಲು ಕನ್ನಡಕ್ಕೆ ತುಸು ತೊಂದರೆ ಇದೆ ಎಂದಿದ್ದಾರೆ.
ಕನ್ನಡಕ್ಕೆ ತನ್ನದೇ ಆದ ಕಾವ್ಯ ಶೈಲಿ ಇದೆಯೇ? ಎನ್ನುವುದು ಗೊಡವೆ.
ಮಹೇಶ ಅವರೆ,
ಕಾವ್ಯ ಶೈಲಿ ಬೇಕಿದ್ದರೆ ಜಾನಪದ ಇಲ್ಲವೆ? ಆದರೆ ಆ ಮಾತು ಇಲ್ಲಿ ಬೇಡ.
ಈ ಕಟ್ಟಳೆಗಳೆಲ್ಲ ಹುಟ್ಟಿಕೊಂಡಿರುವುದು ಕನ್ನಡ "ಅರ್ಜಿ" ಸಲ್ಲಿಸಿದಾಗ ಮಾತ್ರ!
ನಾವು ಗೋಲ್ ಹೊಡೀತೀವಿ ಅಂತ ಬಂದಾಗ ಗೋಲ್-ಪೋಸ್ಟ್ ನ ದೂರದೂರಕ್ಕೆ ತೆಗೆದುಕೊಂಡು ಹೋಗುವುದು ಎಲ್ಲಿಯ ನ್ಯಾಯ?
ಇವೆಲ್ಲಾ ಬರೀ ತಮಿಳ್ರು ಕೇಂದ್ರಸರ್ಕಾರದ ಕೈಲಿ ಆಡಿಸುತ್ತಿರುವ ದೊಮ್ಮರಾಟ, ಅಷ್ಟೆ.
ರವಿ ಅಯ್ಯ!
ನಾನು ಆ ಹೊತ್ತಿಗೆಯಲ್ಲಿ ಬಿತ್ತರವಾದ ಸಂಗತಿ ಹೇಳಿದನನಿತೇ.
ನನಗೆ ತಮಿಳರ ಮೇಲೆ ಯಾವ ದೂರಿಲ್ಲ.
ಅವರವರ ನುಡಿಯ ಉಳಿವು , ಬೆಳೆವು, ಹೆಮ್ಮೆಗಳಿಗಾಗಿ ಅವರವರು ದುಡಿಯಬೇಕು ಎಂಬುದನ್ನು ತಮಿಳು ತಂಬಿಗಳು ತೋರಿಸಿಕೊಟ್ಟಿದ್ದಾರೆ.
ಅವರು "ಶಾಸ್ತ್ರೀಯ" ಪಟ್ಟಕ್ಕೆ ದುಡಿದುದು ತಮಿಳಿಗೆ ಒಳ್ಳೆಯದು ಮಾಡಲು ಹೊರತು, ಕನ್ನಡದ ಕೆಡುಕಿಗಾಗಲ್ಲ.
ಆದುದರಿಂದ, ನಾವು ಕನ್ನಡದವರು ಕನ್ನಡಕ್ಕೆ ದುಡಿದು, ಇಂತಹ ಪಟ್ಟಗಳನ್ನು ಕನ್ನಡಕ್ಕೆ ಗಿಟ್ಟಿಸಿಕೊಡಬೇಕೇ, ಹೊರತು, ಬೇರೆ ನುಡಿಗೆ ಸಂದ ಬಿರುದು, ಮೇಲ್ಮೆಯನ್ನು "ಅವರ ಬಿಂಕು/ಮೋಸ" ಎಂದು ಜರಿದು ಕುಳಿತಿರುವುದಲ್ಲ.
ನಾನೂ ಎವರ ಕೂಟೇ ಇಲ್ಲಿ ವಾದಕ್ಕೆ ಇಳಿಯಲು ಒಪ್ಪಲ್ಲ. ಇದೇ ನನ್ನ ಕೊನೆಯ ಮಾತು.
ಮುಂದಿನದು, ಅವರವರ ಒಳನಿಸಿಕೆ.
ನಂನಿ!
"ಕಾವ್ಯ ಶೈಲಿ ಬೇಕಿದ್ದರೆ ಜಾನಪದ ಇಲ್ಲವೆ?"
ಇದೊಂದು ಮರೆತಿದ್ದೆ.
ಕನ್ನಡದ್ದೇ ಆದ ಕಾವ್ಯಶೈಲಿ ರಗಳೆ ಮತ್ತು ವಚನಗಳು ಅಂತೆ. ಇವು ೧೨೦೦-೧೩೦೦ ಹತ್ತಿರ ಬಂದವು.
im using IE-7 and still not able to read kannada properly.... most of the time i see mistakes in word pronounciation ... is it browser related issue or the writer committed mistake ?
udAharaNegagi dodda 'ಷ' kke badalagi saNNa 'ಶ ' ide .... 'ನೋಡುದ್ರೆ' instead of 'ನೊಡಿದ್ರೆ'
-Rohith
ರೋಹಿತ್ ಅವರೆ,
ಅದು ನಿಮ್ಮ IE7 ಮಾಡುತ್ತಿರುವ "ತಪ್ಪು" ಅಲ್ಲ, ಬರಹಗಾರ ಮಾಡುತ್ತಿರುವ "ತಪ್ಪೂ" ಅಲ್ಲ.
ನೋಡಿದ್ರೆ ಬದ್ಲು ನೋಡುದ್ರೆ, ಶ್ ಬದ್ಲು ಷ - ಇವೆಲ್ಲ ಬೇಕೂಂತ್ಲೇ ಬರೆಯುತ್ತಿರುವುದು. ಆದಷ್ಟೂ ಆಡುನುಡಿಯಲ್ಲೇ ಬರೆಯೋಣ ಎಂದು ನಾವು ಪಣ ತೊಟ್ಟಿರುವುದರಿಂದ ಹೀಗೆ.
ಓಹ್ ಹಾಗಾ ವಿಷ್ಯ .. ಓಳ್ಳೇದು ಆಡು ಭಾಷೆಯಲ್ಲೇ ಬರಿಯೋಣ
-ರೋಹಿತ್
kaavya shyli andare yenu?? bhaamini shatpadi/vaardhaka shatpadigaLoo kaavyagaLallave??
ಇಲ್ಲ ನೀವು ಹೇಳ್ತಾ ಇರೋದು ಛಂಧಸ್ಸುಗಳ ಹೆಸರುಗಳನ್ನ, ಅದೆ ಕಾವ್ಯದ ಹಾಡಬಿಲಿಟಿ (singability) ಅಳೆಯುವ meter ಬಗ್ಗೆ.
ಕಾವ್ಯ ಶೈಲಿ ಬೇರೆ, ಆದ್ರೆ ಅದನ್ನ ತಿಳಿಸಿ ಹೇಳೋಕೆ ಗೊತ್ತಿಲ್ಲ. ತಿಳಿದೋರು ಸ್ವಲ್ಪ ಬೆಳಕು ಚೆಲ್ಲಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!