ಬೆಳಗಾವಿ ವಿಷಯ ಬಿಡಿ, ಮೊದ್ಲು ಮುಂಬೈ ಉಳಿಸಿಕೊಳ್ಳಿ

ಮುಂಬೈನಾಗೆ ಮರಾಠಿ ಸಂಸ್ಕ್ರತಿ 'ವಿಠ್ಠಲ ವಿಠ್ಠಲ ಪಾಂಡುರಂಗ' ಅಂತ ಮಕಾಡೆ ಮಲ್ಗಿರೋದು ಎಲ್ರಿಗೂ ತಿಳ್ದ ವಿಷ್ಯ. ೯ನೇ ಆಗಸ್ಟ್ ೨೦೦೭ ರಂದು ಮಹಾರಾಷ್ಟ್ರದ ಮುಂಚೂಣಿ ನಾಯಕ್ರಲ್ಲಿ ಒಬ್ಬರಾದ 'ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ' ರಾಜ್ ಠಾಕ್ರೆ ದಿಡೀರ್ನೆ ಮುಂಬೈ ಮಹಾನಗರ ಪಾಲಿಕೆ ಕಛೇರಿಗೆ ದೌಡಾಯ್ಸಿ ಒಂದು ನಿವೇದ್ನೆ ಸಲ್ಸಿದ್ದ್ರ ಬಗ್ಗೆ ನಿಮ್ಗೆನಾದ್ರು ಗೊತ್ತಾ?

ಯಾವುದೇ ರೀತಿಯ ಹೆಸರಿನ ಹಲಗೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕೊಡ್ಬೇಕು ಅನ್ನೊ ಇತ್ತೀಚ್ಗೆ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಹೊರಡ್ಸಿರೋ ಆದೇಶದ ಬೈಲಾನ ರಾಜ್ ಠಾಕ್ರೆ ಮುಂಬೈ ಪಾಲಿಕೆಗ್ ತೋರ್ಸಿ, 'ಮುಂಬೈಲಿ ಮರಾಠಿ ಉಳ್ಸ್ಕೊಳಕ್ ಈ ರೀತಿ ಒಂದ್ ದಾರಿ ಇದೆ, ಕರ್ನಾಟಕದ ತರ ನೀವೂ ಈ ನಿಯಮ ಜಾರಿಗ್ ತನ್ನಿ' ಎಂದಿದ್ದಾರೆ. ನಮ್ಮ ಸರ್ಕಾರದ ಈ ಆದೇಶ ಪರರಾಜ್ಯದ ಸಂಸ್ಕೃತಿ ಉಳ್ವಿಗೆ ನೆರುವಾಗೋಕೆ ಕೆಲವರ ಕಣ್ ತೆರ್ಸಿರೋದು ಸಂತೋಷದ್ ಸಂಗತಿನೇ! ಈ ಆದೇಶ ಇದ್ರೂನೂ ಅನುಷ್ಠಾನದ ನ್ಯೂನತೆ ಇನ್ನೂ ಕಂಡ್ಬರ್ತಿದೆ.

ಎಲ್ಲಾ ಹಲಗೆಗಳಲ್ಲೂ ಕನ್ನಡ ಎದ್ದು ಕಾಣ್ಬೇಕು, ಈ ಊರಿಗೆ ಯಾರೇ ಬಂದಿಳಿದ್ರೂ ಅವರ್ಗೆ ಕನ್ನಡ ಕಾಣ್ಸಿ, ನಮ್ಮ ಭಾಷೆ ಬಗ್ಗೆ ಗೌರವ ಮೂಡ್ಸ್ಬೇಕು. ಆಗ್ಲೇ ಅಲ್ವೇ ಆದೇಶಕ್ ದೊರಕುವ ಸಾರ್ಥಕತೆ? ಎಲ್ಲಾ ಇಲಾಖೆಯಾಲ್ಲೂ ಅದು ಕಡ್ಡಾಯವಾಗಿ ಅನುಷ್ಠಾನ ಆಗ್ಬೇಕು. ಅವುಗಳು ಬೇರೆ ರಾಜ್ಯದ್ ಸಂಸ್ಕೃತಿನೂ ಉಳ್ಸಕ್ಕೆ ಆಯಾ ರಾಜ್ಯದ್ ನಾಯಕರಿಗೆ ಮಾದರಿ ಆಗ್ಬೇಕು. ಕರ್ನಾಟಕದಲ್ಲಿ ಕನ್ನಡ ಅಂತ ನಾವು ಹೇಗೆ ಹೇಳ್ತಿದಿವೋ ಹಾಗೆ ತಮಿಳ್ನಾಡಲ್ ತಮಿಳ್, ಆಂಧ್ರದಲ್ಲಿ ತೆಲ್ಗು, ಗುಜ್ರಾತ್‍ನಲ್ಲಿ ಗುಜ್ರಾತಿ ಇರ್ಬೇಕು. ಅದೇ ಈ ಭಾರತ್ ಮಾತೆ ಈ ದೇಶಾನ್ ಹೆತ್ತಾಗ್ ಕಂಡಿರೋ ಕನಸು.

ಕೊನೆ ಸಿಡಿ: ಮುಂಬೈನಾಗ್ ಹೋಟೆಲ್ - ಡ್ಯಾನ್ಸ್ ಬಾರ್ - ಇತ್ರೆ ವ್ಯಾಪಾರ ನಡೆಸ್ತಿರೋ ನಮ್ಮ ದಕ್ಸಿಣ ಕನ್ನಡದ್ ಜನ ಹೇಗೆ ಹೋಂದುಕೊಂಡು ಹೋಗ್ತಾ ಇದ್ದಾರೋ, ಹಾಗೆ ಇರೋದು ಬಿಟ್ಟು ಬೆಳ್ಗಾವಿ ಮಹಾರಾಷ್ಟ್ರಕ್ ಸೇರ್ಬೇಕು ಅಂತ ಅಲ್ಲಿನ್ ಕೆಲ್ವು ಮರಾಠಿ ಪುಂಡ್ರು ಚೀರಾಡ್ಕೋತಾ ತೂರಾಡ್ತಿರೋ ಸುದ್ದಿ ಕೇಳಿದ್ರೆ ಒಸಿ ನಗು ಬರ್ತಿದೆ ಗುರು. ಮರಾಠಿ ಏಕೀಕರಣ ಬೆಳಗಾವಿನಾಗಲ್ಲ, ಮೊದ್ಲಿಗೆ ಮುಂಬೈ ಉಳ್ಸಿಕೊಳ್ಳಿ ಅಂತ ಅವರಿಗೆ ಕಿವಿಮಾತು ಹೇಳಬೇಕು.

7 ಅನಿಸಿಕೆಗಳು:

Anonymous ಅಂತಾರೆ...

Guru, maratigaLige mumbai tamma ky tappide anta gottagide. adke avru mumbai annu northy gaLige daana kottu beLagaum natta kannittirabeku. Mumbai nalli marati gaLu andre baree bus driver/conductors and some state govt employees aste, bereyavrella horaginavru. harbour line nalli poorta south Indians, central line sutta baree parsigaLu, UP mattu bihara davaru mattu western line sutta mutta baree gujaraatigaLu hagoo bengaLigalu tumbi kondiddare alli. asahya huttisuvashtu koLakaagide Mumbai nagari. namma udyaana nagari bengalooru ade haadi hidiyadirali.

beLagaavi nammade. ashte alla Bijapura, gulbarga, bidar mattu belagaum jillegaLige hondikondiruva kolhapura(kolapur),Sollapura(solapur),nanded(nandihalli),Usmanabad, dound jillegaLu kannadadave. bekaadare hogi nodi alli indigoo kannadigaru iddare. Hechchina vivaragaLige kaa.vem.sreenivaasamurthy yavara 'kannaDapara chintane mattu parampare' yemba samshodhana krutiyannu vodiri..

Anonymous ಅಂತಾರೆ...

ಹೌದು ಮೊನ್ನೆ ಆರ್ಕುಟ್ ನಲ್ಲಿ ಒಂದು ಕಮ್ಯುನಿಟಿಯಲ್ಲಿ ಮುಂಗಾರು ಮಳೆ ಪುಣೆಯಲ್ಲಿ ರಿಲೀಸ್ ಆಗಿದ್ದಕ್ಕೆ ಜನ ಬೈಯುತ್ತಾ ಇದ್ದದ್ದನ್ನ ನೋಡಿದೆ. ಅಲ್ಲಿ ಮರಾಠಿ ಚಿತ್ರಗಳು ರಿಲೀಸ್ ಆಗುತ್ತಿಲ್ಲ, ಕನ್ನಡದ ಮುಂಗಾರು ಮಳೆ, ತಮಿಳಿನ ಶಿವಾಜಿ ಇತರ ಚಿತ್ರಗಳೆ ತುಂಬಿವೆ ಎಂದು ಬೈದಾಡುತ್ತಿದ್ದರು. ಅವರ ಚಿತ್ರಗಳು ಯಾಕೆ ಬಿಡುಗಡೆ ಆಗುತ್ತಿಲ್ಲ ಎಂದರೆ ಅಲ್ಲಿ ಪೂರ್ತಿ ಹಿಂದಿ ಚಿತ್ರಗಳೆ ತುಂಬಿಕೊಂಡಿರುತ್ತವೆ. ತಮ್ಮನ್ನು ತಾವು ಆರ್ಯರು ಉತ್ತರ ಭಾರತದವರು ಎಂದೆಲ್ಲಾ ಕರೆದುಕೊಂಡು ಅಪ್ಪಟ ಹಿಂದಿ ಪ್ರೇಮಿಗಳ ಹಾಗೆ ಆಗಿ, ಮರಾಠಿ ಯನ್ನು ಕಳೆದುಕೊಂಡರು. ಅಲ್ಲಿ ಹಿಂದಿ ಚಿತ್ರ ಬಿಡುಗಡೆ ಆದ್ರೆ ಪರ್ವಾಗಿಲ್ಲ ದಕ್ಶಿಣದ ಚಿತ್ರಗಳು ಆಗಬಾರದು, ಇದೆಂತಹ ಮರಾಠಿ ಪ್ರೇಮವೊ? ಈಗ ಅವರದನ್ನು ಉಳಿಸಿಕೊವ ಬದಲು ನಮ್ಮ ಬೆಳಗಾವಿ ತಂಟೆಗೆ ಬಂದಿದ್ದಾರೆ. ನಮ್ಮೈಂದ ಸ್ವಲ್ಪ ಕಲಿತು ನಿಮ್ಮ ಮರಾಠಿ ಉಳಿಸಿಕೊಳ್ಳಿ ಮರಾಠಿಗರೆ.

Anonymous ಅಂತಾರೆ...

ತುಂಬಾ ಒಳ್ಳೇ ಲೇಖನ ಗುರು. ಮರಾಠಿಗರು ತಮ್ಮ ನಾಡಲ್ಲೇ ಬೆಂಕಿ ಬಿದ್ದಿರುವಾಗ ಪಕ್ಕದ ನಾಡಿನಲ್ಲಿ ಮೂಗು ತೂರಿಸುತ್ತಿರುವುದು ವಿಪರ್ಯಾಸವೇ ಸರಿ. ಅವರ ಮುಂಬೈ ನಗರಿಯಲ್ಲೆ ತಯಾರಾಗುತ್ತಿರುವ ಹಿಂದಿ ಚಿತ್ರಗಳು, ಮನೆ ಸಿನಿಮಾಗಳಲ್ಲಿ, ಮರಾಠಿಗರನ್ನು ತೋರಿಸುವುದು ಮನೆ ಕೆಲಸದವರ ರೀತಿ. ಮನೆ ಯಜಮಾನರು ಯಾರೊ ಬೆಂಗಾಳಿಗಳೊ, ಗುಜರಾತಿಗಳೊ ಇಲ್ಲ ರಾಜಸ್ಥಾನದವರೋ ಆಗಿರುತ್ತಾರೆ. ಅವರ ಮನೆಕೆಲಸದ ಬಾಯಿ (ಮನೆ ಕೆಲಸದ ಹೆಣ್ಣು ಮಗಳು) ಮರಾಠಿಯವಳು. ಮನೆ ಕೆಲಸ ಮಾಡುವುದು ಅವಮಾನಕರವಾದ ಕೆಲ್ಸಾಲ್ಲವಾದರು ಇವರು ತೋರಿಸುತ್ತಿರುವ ರೀತಿ ಬೇರೆಯದೇ ಆಗಿದೆ. ಇನ್ನಾದರು ಕನ್ನಡಿಗರಿಂದ ಕಲಿಯುತ್ತಿದ್ದಾರಲ್ಲ ಎಲ್ಲರಿಗು ಒಳ್ಳೆಯದಾಗಲಿ.

P K Bhat ಅಂತಾರೆ...

ಮರಾಠಿಗರನ್ನು ಹಾಗು ಮರಾಠಿ ಬಾಷೆಯನ್ನು ಉಳಿಸಲು ಜನ್ಮ ತಾಳಿದ ಶಿವ ಸೇನೆಯವರು ಮೊದಲು ದಕ್ಷಿಣ ಭಾರತದವರನ್ನು ಅವರ ವಿರಧಿಗಳಂತೆ ನೋಡಿ, ಉತ್ತರ ಭಾರತದವರನ್ನು ಮಿತ್ರರಂತೆ ಕಂಡರು. ಆದರೆ ಈಗ ಅವರಿಗೆ ಗೊತ್ತಾಗುತ್ತಿದೆ ಯಾರು ನಿಜವಾದ ಶತ್ರು ಏಂದು. ಈ ಹಿಂದಿ ಭಾಷಿಕರು ಆ ಭಾಷೆ ರಾಷ್ಟ್ರ ಭಾಷೆ ಏಂಬ ಸುಳ್ಳನ್ನು ಏಲ್ಲೆಡೆ ಸಾರುತ್ತಾ ಬಂದಿದ್ದಾರೆ. ಮೊದಲು ನಾವು ಇದನ್ನು ತಡೆಗಟ್ಟಬೇಕು. ನಾವು ಬೆಂಗಳೂರಿನಲ್ಲಿ ಯಾವುದೆ ಕಾರಣಕ್ಕು ಹಿಂದಿಯನ್ನು ಬೆಳೆಯಲು ಬಿಡಬಾರದು. ಆಗ ನಮ್ಮ ಭಾಷೆ ಹಾಗು ಸಂಸ್ಕ್ರತಿ ಉಳಿಯುತ್ತದೆ.

Anonymous ಅಂತಾರೆ...

There are nearly 20 lakh kannadigas in Mumbai and suburbs.
Kannadigas are the only non marathi community in Mumbai read-write and speak Marathi and respect Marathi culture. Marathis should realize and understand this and respect Kannadigas in the similar way.....

very good writeup

Prasanna Deshpande,
Borivili
Mumbai

Anonymous ಅಂತಾರೆ...

evathu paper nalli bandide nodguru belagavi hesaru maatra belgaum iratte antha. idella "Shivraj patil" pitoori iratte antha kaanatte.
navella sollapur, kolhapur ityadi oorgala thantege hogtiva guru ?.yakguru avarige mumbai na rakshskolbeku anno buddi ilva.. adna bittu bereyavara thantege hogtharalla ??? yakguru ...

Anonymous ಅಂತಾರೆ...

ಪ್ರಸನ್ನರವರ ವಿಚಾರ ವಾಸ್ತವಿಕವಾಗಿದೆ, ಈ ವಿಚಾರವನ್ನು ನನ್ನ ಮರಾಠಿ ಮಿತ್ರನೊಬ್ಬನಿಗೆ ತಿಳಿಸಲು ಯತ್ನಿಸಿ ವಿಫಲನಾಗಿದ್ದೇನೆ ಕಾರಣ ಅವರಿಗೆ ಶಾಲಾ ದಿನಗಳಲ್ಲೆ ಕನ್ನಡ ವಿರೋಧಿ ನಿಲುವನ್ನು ಬೋಧಿಸಲಾಗಿದೆ (ವಿಶೇಷವಾಗಿ ಗಡಿ ಭಾಗಗಳಲ್ಲಿ).

ಈ ವಿಷಯಕ್ಕೆ ಸಂಬಂಧಿಸದಂತೆ ವ್ಯಾಪಕ ಪ್ರಚಾರವನ್ನು ಹರಿಯ ಬಿಡಬೇಕಾಗಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails