ಇಂಗ್ಲೀಷಲ್ಲಿ ನಮ್ಮ ಊರುಗಳ ಹೆಸರು ಬದಲಾಯಿಸೋದು ಒಳ್ಳೇದೇ

Bangalore ಅನ್ನೋದು ಇನ್ನುಮೇಲೆ Bengaluru ಅಂತ ಆಗ್ತಿರೋ ಹಿನ್ನೆಲೇಲಿ ಯಾರೋ ನಂದಿನಿ ಸುಂದರ್ ಅನ್ನೋರು "ಹೆಸರಲ್ಲಿ ಏನಿದೆ ?"ಅಂತ ಆಗಸ್ಟ 25ನೇ ತಾರೀಕಿನ ಡೆಕ್ಕನ್ ಹೆರಾಲ್ಡನಲ್ಲಿ ಆಕಾಶ ತಲೆ ಮೇಲೆ ಬಿದ್ದ ಹಾಗೆ ಬರೆದಿದ್ದಾರೆ.

ಇರ್ಲಿ. ಇಲ್ಲಿ ನಮ್ಮ ಕೆಲ್ಸ ಈವೆಂಗ್ಸಿಗೆ ಈ ವಿಷಯದಲ್ಲಿ ಅದೇನೇನೇನೋ ಪ್ರಸ್ನೆಗಳಿವ್ಯಂತಲ್ಲ, ಔಗಳ್ಗೆ ಉತ್ರ ಕೊಡೋದು. ಕೇಳ್ತಾರೆ ಮೇಡಮ್ಮು:
What is in a name? Does it have the power to change the character, culture of a place?

ಹೌದು ಮತ್ತೆ, ಹೆಸರು ಮುಖ್ಯಾನೇ. ಇಲ್ದೇ ಹೋದ್ರೆ ಮೇಡಮ್ಮು "ಕೆಟ್ಟಮುಖದವಳು" ಅಂತ ಹೆಸ್ರಿಟ್ಕೊಳ್ಳಿ! ತಮಾಷೆ ಇರಲಿ. Bangalore ಅನ್ನೋದನ್ನ Bengaluru ಅಂತ ಸರಿಯಾಗಿ ಕರಿಯಕ್ಕೆ ಹೊರಟಿರೋದ್ರಿಂದ ಈ ಊರಿಗೆ ಕನ್ನಡದ ಕಳೆ ವಾಪಸ್ ತಂದಂಗಾಗತ್ತೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಬೆಂಗಳೂರು ಅನ್ನೋದು ನಮ್ಮದೇ ಊರು ಅಂತ ಕನ್ನಡಿಗರಿಗೆಲ್ಲ ಅನ್ಸೋದ್ರಲ್ಲಿ ಸಂದೇಹವೇ ಇಲ್ಲ. ಈ ಊರ್ನ ಯಾವನೋ ಬ್ರಿಟಿಷನೋ ಯಾವನೋ ಹಿಂದಿಯೋನೋ ಇನ್ಯಾವನೋ ಕಟ್ಟಿಲ್ಲ, ಕನ್ನಡಿಗರೇ ಯಾರೋ ಕಟ್ಟಿರಬೇಕು ಅಂತ ಖಂಡಿತ ಕನ್ನಡಿಗ್ರುಗೂ ಗೊತ್ತಾಗತ್ತೆ, ಹೊರದೇಶದೋರ್ಗೂ ಗೊತ್ತಾಗತ್ತೆ ಗುರು. ಇವತ್ತಿನ ದಿನ ಇದು ಬಹಳ ಮುಖ್ಯವಾದ್ದು. ಬೆಂಗಳೂರಿನ ಸಂಸ್ಕೃತಿ ಕನ್ನಡದ ಸಂಸ್ಕೃತಿ, ಇಲ್ಲಿಯ ಇತಿಹಾಸ ಕನ್ನಡದ ಇತಿಹಾಸ, ಇಲ್ಲಿಯ ವರ್ತಮಾನ ಕನ್ನಡದ ವರ್ತಮಾನ, ಇಲ್ಲಿಯ ಭವಿಷ್ಯ ಕನ್ನಡದ ಭವಿಷ್ಯ ಅಂತ ಸಾರಿ ಸರಿ ಹೇಳತ್ತೆ ಈ ಬದಲಾವಣೆ. ಮೇಡಂ ಅಂತಾರೆ:
A new settler from varied background is never made to feel out of place, drawn into its comforting folds almost instantly. Unfortunately, the city has grown beyond its capacity to hold and comfort and that explains the many ills plaguing it.

ಇಲ್ಲಿ ಇವರ ಚಿಂತನೆಗೆ ಸ್ವಲ್ಪ ಲಕ್ವಾ ಹೊಡ್ದಂಗಿಲ್ವಾ? ಅಲ್ಲಾ - "new settler"ಗಳಿಗೋಸ್ಕರ ಇಲ್ಲಿ ನಮ್ಮದೆಲ್ಲವನ್ನು ಬಿಸಾಕಿ ಕಾಲಿಗೆ ಬೀಳಕ್ಕೆ ನಾವೇನು ಕಿವಿಮೇಲೆ ಹೂ ಮಡೀಕೊಂಡಿದೀವಾ ಗುರು? ಕರ್ನಾಟಕದ ಬೇರೆಬೇರೆ ಕಡೆಗಳಿಂದ ಬರೋರಿಗೆ ಇದು ತಮ್ಮ ರಾಜಧಾನಿ ಅನ್ನಿಸಬೇಕೋ ಬೇಡ್ವೋ? ನಂಜನಗೂಡಿಂದ್ಲೋ, ಗಲಗಲಿಯಿಂದ್ಲೋ, ಮತ್ತೊಂದು ಕಡೆಯಿಂದ್ಲೋ ಬಂದೋನಿಗೆ ಇಲ್ಲಿ ಹೂವಿನ ಹಾಸಿಗೆ ಹಾಸಿಕೊಡಬೇಕೋ ಕರ್ನಾಟದ ಹೊರಗಿಂದ ಬಂದೋನಿಗೋ? ಅದಿರ್ಲಿ, ತಮಾಷೆ ಅಂದ್ರೆ - ಒಂದು ಕಡೆ ಊರು ತುಂಬಾ ಬೆಳದಿದೆ ಅಂತಾರೆ, ಇನ್ನೊಂದು ಕಡೆ ವಲಸಿಗರ್ನ ಇನ್ನೂ ಕಣ್ಣೀರಿಟ್ಕೊಂಡು ತಬ್ಕೋಬೇಕು ಅಂತಾರಲ್ಲ ಗುರು - ತಲೇಲಿ ಸೊಲ್ಪ ಬುದ್ಧಿ ಇಟ್ಕೊಂಡ್ ಮಾತಾಡ್ಬೇಕು ಅಂತ ಹೊಸದಾಗಿ ಏನಾದ್ರೂ ಹೇಳಬೇಕಾ ಇವರಿಗೆ? ಇನ್ನೂ ಇವರ ಪೆದ್ದತನ ನೋಡಿ:
There is nothing wrong in changing a name if majority of a city’s residents desire it. But were the residents asked? Was a referendum held on this? Don’t the residents have the right to have a say in this? Why should the city undergo a change of name on the whim of a few individuals?

ಅಲ್ಲ - ಕರ್ನಾಟಕ ಸರ್ಕಾರ ಅನ್ನೋದು ಕನ್ನಡಿಗರು ಚುನಾಯಿಸಿರೋ ಸರ್ಕಾರ ತಾನೆ? ಇವರು ಇಂಥಾ ನಿರ್ಧಾರಗಳ್ನ ತೊಗೊಳ್ಳಿ ಅಂತಾನೇ ಕನ್ನಡಿಗರು ಇವರನ್ನ ಆಯ್ಕೆಮಾಡ್ಕೊಂಡಿರೋದು. ಜನಪ್ರಿಯ ಸರ್ಕಾರ ಜನರಿಗೆ ಬೇಕಾದ್ದನ್ನ ಮಾಡಿದ್ದೂ ಇವರಿಗೆ ಹಿಡ್ಸಲ್ಲ ಅಂದ್ರೆ ಇವರಿಗೆ ಪ್ರಜಾಪ್ರಭುತ್ವದ "ಅಆಇಈ"ನೂ ಗೊತ್ತಿಲ್ಲ ಅನ್ನೋದು ಸ್ಪಷ್ಟ. ಇವರು ಹೀಗೆ ಬದಲಾಗಬಾರದು ಅಂತ ಮೆತ್ತಮೆತ್ತಗೆ ಅಡ್ಡಗೋಡೆಮೇಲೆ ಇಟ್ಟಂಗೆ ಅನ್ತಿರೋದೇ "whim of a few individual"ಸು. ಇಡೀ ಕರ್ನಾಟಕ ಇದನ್ನ ಒಪ್ಕೊಂಡಿರುವಾಗ ಇವರದೇನು ಗೋಳು? ಇಂಥವರಿಗೆ ಪತ್ರಿಕೆಗಳಲ್ಲಿ ಬರೆಯೋದಕ್ಕೆ ಬಿಡ್ತಾರಲ್ಲ, ಅದಕ್ಕೆ ಬಡ್ಕೋಬೇಕು!
Perhaps the name Bengaluru, with its halli twang, is more appropriate to denote our city which now resembles more of a halli with its almost non-existent infrastructure than a hi-tech city.

ಎಂಥಾ ವ್ಯಂಗ್ಯದ ಮಾತು! ನಿಜವಾಗಲೂ ಬೆಂಗಳೂರಿನ ಸೌಲಭ್ಯಗಳ ಸಮಸ್ಯೆ ಬಗೆಹರಿಸೋದೇ ಇವರ ಉದ್ದೇಶವಾಗಿದ್ದರೆ ಈ ಬದಲಾವಣೆ ಯಾಕೆ ಮಾಡಬೇಕು ಅನ್ನೋದು ಖಂಡಿತ ಅರ್ಥವಾಗ್ತಿತ್ತು. ನಿಜವಾಗಲೂ ನೋಡಿದರೆ ಬೆಂಗಳೂರಿನ ಮೂಲ ಸಮಸ್ಯೇನೇ ಲಂಗು-ಲಗಾಮಿಲ್ಲದ ವಲಸೆ. ಯಾವುದೇ ನಿಯಂತ್ರಣಾನೂ ಇಲ್ದೆ ಇಲ್ಲಿಗೆ "new settler"ಗಳು ಬಂದೂ ಬಂದೂ ಒಕ್ಕರಿಸಿಕೊಳ್ತಿರೋದೇ ಇದರ ದೊಡ್ಡ ಸಮಸ್ಯೆ. ಈ ಸಮಸ್ಯೆ ಎಷ್ಟು ಹೆಚ್ಚಿದೆ ಅನ್ನಕ್ಕೆ ಉದಾಹರಣೇನೇ Bangalore ಅನ್ನೋ ಸ್ಪೆಲಿಂಗು. ಈ ಲಂಗು-ಲಗಾಮಿಲ್ಲದ ವಲಸೇನ ನಿಲ್ಲಿಸೋದಕ್ಕೆ ಏನ್ ಮಾಡಬೇಕು ಅಂತ ಯೋಚ್ನೆ ಮಾಡದೆ ಸುಮ್ನೆ ವ್ಯಂಗ್ಯದ ಮಾತು ಆಡ್ಕೊಂಡಿರೋರಿಗೆ ಡೆಕ್ಕನ್ ಹೆರಾಲ್ಡಲ್ಲಿ ಬರ್ಯಕ್ಕಾದ್ರೂ ಯಾಕ್ ಬಿಡ್ತಾರೋ ಏನೋ!

ಕೊನೆ 2 ಗುಟುಕು
  1. ಈಗ ಆಗ್ತಿರೋ ಬದಲಾವಣೆಯಾದರೂ ಏನು? ನಮ್ಮ ಊರುಗಳ ನಿಜವಾದ ಹೆಸರೇನು ಬದಲಾಗ್ತಿಲ್ಲ. ಇಂಗ್ಲೀಷಲ್ಲಿ ಆ ಹೆಸರುಗಳನ್ನ ಬರೆಯೋ ರೀತಿ ಬದಲಾಗ್ತಿದೆ, ಅಷ್ಟೆ. Bangalore ಅನ್ನೋದು Bengaluru ಅಂತ ಆಗ್ತಿದೆ, ಅಷ್ಟೆ. ಇದರಿಂದ ಕನ್ನಡ ಬರದೇ ಇರೋರಿಗೂ ಕನ್ನಡನಾಡಿನ ರಾಜಧಾನಿಯ ಹೆಸರು ಸರಿಯಾಗಿ ಹೇಳಕ್ಕೆ ಅನುಕೂಲ ಆಗ್ತಿದೆ, ಅಷ್ಟೆ. ಇಂಗ್ಲೀಷಿಗೂ ನಮಗೂ ಸಂಬಂಧ ಈ ನಂದಿನಿಯಂತೋರು ಅಂದ್ಕೊಂಡಿರೋಂಥದ್ದೇನಲ್ಲ. ಏನೇ ಇರಲಿ, ಸದ್ಯಕ್ಕಂತೂ ಇಂಗ್ಲೀಷ್ನ ತಲೆಮೇಲೆ ಕೂಡಿಸಿಕೊಂಡಿರುವಂಥಾ ವ್ಯವಸ್ಥೇನೇ ಇರೋದು. ಇಂಥಾ ವ್ಯವಸ್ಥೆಯಲ್ಲಿ ಓಡಾಡೋ ದಾಖಲೆಗಳ ಮೇಲೆ, ಇಂಗ್ಲೀಷು ಪತ್ರಿಕೆಗಳ ಮೇಲೆ ನಮ್ಮೂರ ಹೆಸರುಗಳು ನಮ್ಮೂರ ಹೆಸರುಗಳಂತೆಯೇ ಮತ್ತೊಮ್ಮೆ ಕಾಣಿಸುತ್ತವೆ ಅಂದ್ರೆ ಜಾಸ್ತಿ ಅಲ್ಲದೇ ಹೋದ್ರೂ ಸ್ವಲ್ಪವಾದರೂ ಖುಷಿಪಡಬೇಕಾದ್ದೇ.
  2. ಅಲ್ಲ - ನಿಜವಾಗಲೂ ನೋಡಿದರೆ ಇವರ "Nandini" ಅನ್ನೋ ಸ್ಪೆಲಿಂಗೂ ಸರಿಯಿಲ್ಲ. ಇದರಿಂದ ಹೊರದೇಶದೋರು ಇವರನ್ನ "ನ್ಯಾಂಡೀನಿ" ಅಂತ ಕರೀತಾರೆ. ಹೌದು ತಾನೆ? ಅದರ ಬದ್ಲು "Nundhinny" ಅಂತ ಬದಲಾಯಿಸಿದರೆ "ನಂದಿನಿ" ಅನ್ನೋದಕ್ಕೆ ಇನ್ನೂ ಹತ್ರ ಆಗತ್ತೆ (ದಕಾರ ಇಂಗ್ಲೀಷಿಗರ ಬಾಯಲ್ಲಿ ಬರ್ಸೋದು ಕಷ್ಟ, ಬಿಡಿ). ಹೌದು ತಾನೆ? ಇಷ್ಟೇ ಸಾಕು ಈ ಸ್ಪೆಲಿಂಗ್ ಬದಲಾವಣೆ ಸರಿ ಅಂತ ವಾದ್ಸಕ್ಕೆ.

16 ಅನಿಸಿಕೆಗಳು:

Anonymous ಅಂತಾರೆ...

ಅವ್ವಾ ನಂದಿನಿ... ಅಳೇ ಕನ್ನಡ ಸಿನಿಮಾದಾಗೆ ಪಟ್ಣದಿಂದ ಅಳ್ಳಿಗೆ ಬಂದ ಎಣ್ಮಗ ಅಳ್ಳಿಯೋರ್ನ ಬೈದಂಗೆ ಆಡ್ಬ್ಯಾಡ ಕಣವ್ವಾ. "ಬೆಂಗಳೂರು" ಅಂದ್ರೆ ಹಳ್ಳಿ ಎಸ್ರು ಅಂತ ನಿಂಗ್ಯಾರವ್ವಾ ಯೋಳಿದ್ದು. ಇಂತಾ ಸಣ್ಣ ಬುದ್ದಿ ನಿನ್ನಂತ ಎಂಗುಸ್ರುಗೆ ಇರಬಾರ್ದವ್ವಾ. ನಿನ್ ನೋಡುದ್ರೆ ಅಣ್ಣೋರ ಆಡು ಗ್ಯಪ್ತಿ ಬಂತು.

ಏನೆ ಸುಬ್ಬಿ ತುಂಬಾ ಕೊಬ್ಬಿ ಗೇಲಿ ಮಾಡಿ ಕೆಳಕ್ಕೆ ದಬ್ಬಿ ಕಿಸ್ ಕಿಸ್ ನಗ್ತೀಯಾಕೆ ಅಲ್ಲುಬ್ಬಿ...

-ಅಳ್ಳಿಮುಕ್ಕ

Anonymous ಅಂತಾರೆ...

ಲೇಖನ ತುಂಬ ಚೆನ್ನಾಗಿದೆ. ನಮ್ಮ ಊರಿನ ಹೆಸರನ್ನ ನಾವೆಲ್ಲರು ಸಹಮತದಿಂದ ಬದಲಾಯಿಸಿಕೊಂಡರೆ ಇವರಿಗೇನು ಉರಿನೋ ಗೊತ್ತಾಗೋಲ್ಲ. ಮೊದಲಿಗೆ ಈ ವಿಶ್ಯವನ್ನ ಕರ್ನಾಟಕ ಸರ್ಕಾರ ಪ್ರಕಟಿಸಿದಾಗ ಕೆಲವರು ಪ್ರತಿಕ್ರಿಯಿಸಿದ್ದಂತು ವಿಚಿತ್ರ ಅನಿಸಿತು. ಮುಂಬೈ ಇಂದ ಬಂದವರೊಬ್ಬರು 'The name sounds weird' ಅಂತ ಅಂದ್ರು. ಅವರ ಊರಿನ ಹೆಸರನ್ನ ಬಾಂಬೆ ಇಂದ ಮುಂಬೈ ಅಂತ ಬದಲಾಯಿಸಬಹುದು ನಮ್ಮ ಊರಿನ ಹೆಸರನ್ನ ಬದಲಾಯಿಸಬಾರದು. ಇದೆಂತ ವಿಚಿತ್ರ ನೋಡಿ. ನಮ್ಮ ದೇಶದ ಇತರ ನಗರಗಳ ಹೆಸರು ಬದಲಾದಾಗ ಯಾರು ಏನು ಅನ್ನಲಿಲ್ಲ ಇವಾಗ comment ಹೊಡೆಯಕ್ಕೆ ಬಂದಿದ್ದಾರೆ. ಇದಕ್ಕೆ ನಮ್ಮ ಸಹನ ಶೀಲತೆಯೇ ಕಾರಣ. ಯಾರು ಏನು ಅಂದರು ನಾವು ಸುಮ್ಮನೆ ಇರುತ್ತೀವಿ ನೋಡಿ ಅದಕ್ಕೆ.
ಮತ್ಯಾರೋ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು ಹೀಗೆ.
http://kannadablogs.blogspot.com/2006/11/blog-post_23.html
ಇವರಿಗೆಲ್ಲ ನಿಮ್ಮ ಈ ಲೇಖನ ಸೂಕ್ತ ಮಾರ್ಗದರ್ಶನ ಕೊಡಲಿದೆ.

Anonymous ಅಂತಾರೆ...

nanna keLidre Bangalore annu BengaLuru anta badlaaysiddu tumbaa tappu..

adara badalu 'bendakaaLooru' anta badlaaysidre chennagittu. adondu achcha kannaDada, moola hesaraaguttittu. hesaranna ondsala badlaaysade kashta. adakke modale ee hesaranna soochisabekaagittu.

GurugaLe, ee deccan heraldu ondu gulDu patrike swamy. adakkinta TOI eshto vaasi. ee deccan herald navarige kannaDa kandre aagolla adke heegella patragaLu bartave nodi. athva avre barkotaaro yeno.

Anonymous ಅಂತಾರೆ...

ಶರಣು ಗುರುಗಳೇ,,
ನಾವೆಲ್ಲ ಬೆಂಗಳೂರಿಗೆ ಬೆಂಗಳೂರು ಅಂತಾನೆ ಕರಿತೆವಿ, ಆದ್ರೆ ಇಡಿ ಜಗತನ್ಯಾಗ್ ಎಲ್ಲಾರು ಅದು ಬ್ಯಾಂಗಲೂರ್ ಅಂತಾ ಅನ್ಕೊಂಡಾರ್,, ಅವರಿಗೆಲ್ಲ ಅದು ಬ್ಯಾಂಗಲೂರ್ ಅಲ್ಲಾ ಶಿವಾ ಅದು ಬೆಂಗಳೂರು ,, ಅದನ್ನ ಕನ್ನಡ ಮಂದಿ ನೂರಾರ್ ವರ್ಷದ ಹಿಂದ ಕಟ್ಟಿದ್ದು ಅಂತ ತಿಳಸಿ ಹೇಳು ಸಲುವಗ್ಯಾರು ಬ್ಯಾಂಗಲೂರ್ ಹೋಗಿ ಬೆಂಗಳೂರು ಬರಬೇಕ್ರಿ.. ಅವನೌನ್ ಇ times of india ದಾಗ್ ಬರು ಪೇಜ್ 3 ಸೂ.. ಮಕ್ಕಳು ಬ್ಯಾಂಗಲೂರ್ ಬ್ಯಾಂಗಲೂರ್ ಅಂತ ಬಾಯಿ ಬಡಕೊಂಡ್ರ ನಾವೆನ್ ಕೇರ್ ಮಾಡಬೇಕಾಗಿಲ್ರಿ..

Anonymous ಅಂತಾರೆ...

GurugaLe, 'Karnataka' andre yenu? idannu "kannaDa naaDu" yendu yeke badalaayisabaaradu? (simillar to "tamiLu Nadu")

ಉಉನಾಶೆ ಅಂತಾರೆ...

geLeyare:
iShTannu deccanherald nalli barediddEne.
aadre vishya enappa aMtaMdre vishya hot aMta heege barevavaru hechchaaguttare! prakaTsuvavaroo hechchaaguttare.

Ms Nancy's [what's in a name? Let me call her Nancy! :O) :O)] article was misplaced. Please reprint it in comics section.
(a) Changing a name does not make any of the changes she listed. Same time, not changing the name bring those changes either. Money spent in name-change cant fix any of the problems she listed.
(b) "cosmopolitan culture" - I knew for sure, this word will be there in this article.! :O)
(c) When I visit India next time, I would like to stay in Ms. Nancy's [:O] residence, to be drawn into comforting folds. Forget the city, hopefully her home retains those folds.
(d) What is a referendum? I have not heard of any such thing in Indian model of democracy. Elected reps of maha nagara paalike and govt - wanted it, and they represent residents. Congress, JDS, BJP i.e about 80-90% of electorate is part of that decision.
(e) She asks about 'right of residents' for the name-change and then 2 sentence later asks to address "locals conversing less in Kannada". :O) :O) Ultimate Joke!
(f) Diverting technique?? - Name-change is a long long process, hope she noticed. Not a quick & dirty technique to divert anything or to get apolitical mileage.
(g) Last para - crap except last three words... "naming it appropriately".
uunaashe

Anonymous ಅಂತಾರೆ...

Deccan Herald nalli ee tara tarale madtanne irtarre guru.
adakke yella kannadigaru adara sampadakarige ugidhu baribeku

idu email id :- letters@deccanherald.co.in


subject hige irali.
Letters to Editor comments on Whats in Name article.


nimma patra chikka mattu chokkavagi irali, ketta maathu avachya shabdagalu beda.

Anonymous ಅಂತಾರೆ...

ಈ Deccan Heraldನಲ್ಲಿ ಕನ್ನಡೇತರರ ದರ್ಬಾರು ನಡೀತಾ ಇದೆ. ನಾವೆಲ್ಲ ಈ ಪತ್ರಿಕೆ ಓದೋದನ್ನೆ ನಿಲ್ಲಿಸಬೇಕು. ಯಾವ ಜಾಹೀರಾತು ಹಾಕಬರ್ದು. ಅವಾಗ ಬುದ್ದಿ ಬರುತ್ತೆ.

ಇದೇ ರೀತಿ ರಮೇಶ್ ಮೆನನ್ ಅನ್ನೋ ವ್ಯಕ್ತಿ (ಈತ columnist ಬೇರೆ!!) ಹಗಲೆಲ್ಲ ಬರೀತಾ ಇರ್ತಾನೆ. ಈ ನಂದಿನಿ ಮೇಡಮ್ಮು ಅದನ್ನೆ ಮತ್ತೆ ವಾಂತಿ ಮಾಡಿದ್ದಾರೆ. ನಮ್ಮ ನಾಡು, ನುಡಿ, ಸಂಸ್ಕೃತಿ ಏನೂ ಬೇಡ. ನಮ್ಮಿಂದ ಬರೀ infrastructure ಬೇಕು ಈ ಬೇವರ್ಸಿಗಳಿಗೆ.

ಇದು ಹೆಸರು ಬದಲಾವಣೆ ಅಲ್ಲ. ಇದಕ್ಕೆ de-anglicisation ಅಂತಾರೆ.

Referundum ಅನ್ನೋದು ಬಾಲಿಷ. ನಮ್ಮ ದೇಶದಲ್ಲಿ referendum ಅನ್ನೋದು ನಡೆದಿದೆಯೆ? ನಾಳೆ ನಾನು ಈ de-anglicisation ವಿರೋಧಿಸುವ ನಂದಿನಿಯಂತವರನ್ನೆಲ್ಲಾ ರಾಜ್ಯದಿಂದ ಗಡಿಪಾರು ಮಾಡಬೇಕು ಅಂತ referendum ನಡೆಸಿದ್ರೆ ಹೇಗಿರುತ್ತೆ?

Referendum, Infrastructure, Brand Name ಇತ್ಯಾದಿಗಳು ನಮ್ಮ ದಾರಿ ತಪ್ಪಿಸುವ ಹುನ್ನಾರಗಳಷ್ಟೆ. ನೇರವಾಗಿ ನನಗೆ ಕನ್ನಡವೆಂದ್ರೆ ಆಗಲ್ಲ ಅನ್ನೋ ಬದಲು ಈ ರೀತಿಯ ಮೆತ್ತನೆಯ ಮಾತುಗಳು.

Anonymous ಅಂತಾರೆ...

ನಂದಿನಿ ಅವರ ಅಭಿಪ್ರಾಯ ಬೆಂಗಳೂರು ಹಳ್ಳಿಪದ ಎಂಬುದು ತಮಾಷೆಯಾಗಿದೆ! ಇಂಗ್ಲೆಂಡಿನಲ್ಲಿ ಮಳೆ ಬಂದ್ರೆ ಬೆಂಗ್ಳೂರಿನಲ್ಲಿ ಕೊಡೆ ಹಿಡಿಯುವ ಮನೋಭಾವ ಇದು.

ಅಮೆರಿಕೆಯ ಏರ್ ಇಂಡಿಯಾದ ಜಾಹೀರಾತೊಂದರಲ್ಲಿ Bengaluru ಅಂತ ನೋಡಿದೆ. ಗೂಗಲ್ ಅರ್ತ್, ವಿಕಿಮ್ಯಾಪಿಯಾ ಗಳಲ್ಲಿ ಈಗ Bengaluru, Belagavi ಅಂತ ಕಾಣಿಸಿಕೊಳ್ಳುತ್ತೆ.

-ಶೇಷಾದ್ರಿವಾಸು

Anonymous ಅಂತಾರೆ...

ಹೌದ್ರೀ, ಇ.ಇ.ಟೈಮ್ಸ್ ನಲ್ಲೂ BengaLuru ಅಂತಾನೇ ಬರಿಯೋದು.

ಉದಾಹರಣೆಗೆ ನೋಡಿ:
http://www.eetimes.com/showArticle.jhtml;jsessionid=SFNXTJVXD31OAQSNDLOSKH0CJUNN2JVN?articleID=201803436

http://www.eetimes.com/showArticle.jhtml;jsessionid=SFNXTJVXD31OAQSNDLOSKH0CJUNN2JVN?articleID=201200820

ಆದರೆ, ಕರ್ನಾಟಕದ ನೆಲದಲ್ಲೇ ಬೆಳೆದು ನಿಂತ ಡೆಕನ್ ಹೆರಾಲ್ಡ್ ಪತ್ರಿಕೆಗೆ ಹೀಗೆ ಬರೆಯುವ ಯೋಗ್ಯತೆಯಿಲ್ಲದೇ ಹೋಗಿದೆ.

-ನೀಲಾಂಜನ

Unknown ಅಂತಾರೆ...

Changing the spelling for a place will result in huge amounts of money to go down the drain. One has to understand that the government is doing such gimmicks because, it cannot really perform in any other front. It is foolish to think that we have achieved something great by changing the spelling. I would be happy if the living conditions of people in the slums is improved or if the traffic situation or public transportation improves.

Bangalore or Bengalooru or whatever, the place stinks with garbage piles everywhere. The spelling change cannot bring about any change to the shameless people who pee on the roadside causing disgust to everyone around. It is HELL on earth.

Anonymous ಅಂತಾರೆ...

ನೋಡಪ್ಪ ನಾಗರಾಜು,

ಒಂದ್ ಕಿತ ಗುರುಗಳು ಮೇಲೆ ಬರ್ದಿರೋದನ್ನ ಓದು ಮಗ. ಸುಮ್ನೆ ಎಲ್ಲ್ ಇಡ್ಲಿ ಯಾರಿಗ್ ಇಡ್ಲಿ ಅಂತ ಬಂದ್ ಬಾಯಿಗೆ ಬಂದಂಗೆ ಮಾತಾಡಬೇಡ.

ಹೆಸರು ಬದಲಾಯಿಸೋದರಿಂದ ನಿಮ್ಮ ಮನೆ ಮುಂದಿರೋ ಹೇಸಿಗೆ ಹೋಗಲ್ಲ, ಅಂತ ಗೊತ್ತು ಮಗ. ಆದರೆ ಅದರಿಂದ ಏನೇನು ಲಾಭ ಇದೆ ಅಂತ ಮೇಲ್ ಬರ್ದೈತಲ್ಲ, ಒಂತಪ್ಪ ಓದಿ ಅರ್ತ ಮಾಡ್ಕೋ ಮಗ.

living conditions improve ಮಾಡಕ್ಕೆ ನೀನಿದ್ಯಲ್ಲ ಕೂಸು? ಮಾಡು. ಔರು ಅದ್ ಮಾಡ್ಲಿಲ್ಲ ಇದ್ ಮಾಡ್ಲಿಲ್ಲ, ನಾನ್ ಇಡ್ತೀನಿ ಅನ್ನೋದು ಬದ್ಲು ಮಾಡಿರೋದ್ರಲ್ಲಿ ಒಳ್ಳೇದೇನೈತೆ ಅಂತ್ ಯೋಳೌರೆ ಒಸಿ ಓದಿ ಅರ್ಥಾ ಮಾಡ್ಕೋ ಕೂಸ.

ಬೆಂಗ್ಳೂರು ನಿಂಗೆ Hell ಆಗಿದ್ರೆ ಇನ್ನೂ ಇಲ್ಲೇ ಯಾಕ ಒಕ್ಕರಿಸಿಕೊಂಡಿದೀಯಮ್ಮ? ಹೋಗು ನಿನ್ನ Heavenಗೆ!

Anonymous ಅಂತಾರೆ...

I agree with Nagraj. Hesaru change maadakke 25 - 30 crore rupees kharchagutte anta andaaju maadidare. EE duddanna yaara thaata kodthaare? Yaaroo alla bengalurina tax payers kodthare.

Ishtaadroo bengaluru antanaadru bariri, bengaluru anthaadru bariri, beyngaalooru anthaadru bariri, pronounce maadakke bardirorge yaavattu maadakkagalla.

Aadroo avru "Hell" antha karibaardaagittu....

Anonymous ಅಂತಾರೆ...

ಅಪ್ಪಾ ಅನಾನಸ್ಸು,

25 ಕೋಟಿ ನಿಂಗೆ ಜಾಸ್ತಿ ಅನ್ನಿಸಬಹುದು ಕಣಯ್ಯಾ, ಆದರೆ ಅದು ಕರ್ನಾಟಕದ ರಾಜಧಾನಿ ಹೆಸರಲ್ಲಿ ಇನ್ನೆಂದೆಂದಿಗೂ ಉಳಿಯೋ ದಾಸ್ಯದ ಗುರುತನ್ನ ಅಳಿಸಿಕೊಳ್ಳಕ್ಕೆ ಒಂದು ರಾಜ್ಯ ಕೊಡ್ತಿರೋ 25ಪೈಸ ಇದ್ದಂಗೆ!

ನಿನ್ನ ಮಗಳಿಗೆ Monica Lewinsky ಅಂತ ಹೆಸರು ಇಟ್ಟುಬಿಡು - ಹೆಸರಲ್ಲೇನಿದೆ? ಯಾವನೋ ಲೋಪರ್ ನನ್ ಮಗ ಹಂಗೆ ಹೆಸರು ಇಟ್ಟಿದ್ದ್ರೆ ವಾಪಸ್ಸು "ಗೌರಿ" ಅಂತ ಇಡಬೇಕಾದ್ರೆ 25 ರೂಪಾಯೋ 25 ಸಾವಿರ ರೂಪಾಯೋ ಕೊಡಕ್ಕೆ ಹಿಂಜರೀತ್ಯಾ?

Bindiya ಅಂತಾರೆ...

Bangalore annodanna Bengaluru antha maadale beku. eegina paristhithiyalli kannada bhashege eetharada badalaavane avashyakavaagide.

Shree ಅಂತಾರೆ...

ಅವ್ವಾ ನಂದಿನಿ ಸುಂದರ್ ಈ ನಿನ್ನ ಹೆಸರಿನ ಮುಂದೆ ಇರೋ Sundar ನ್ನ ಯಾವ ರೀತಿ spell ಮಾಡ್ತಿಯಾ? Sundar ತಪ್ಪಲ್ವಾ? ಅದು Sunder ಅಂದ್ರೆ ಚೆನ್ನಗಿರೋದು ನಿಂಗೆ ಹೆಸರು ಇಂಗ್ಲಿಷ್ ನಲ್ಲಿ ಬೇಕು ತಾನೆ?
ಮೊದ್ಲು ಹೇಳು ನೀನು ಎಲ್ಲಿಯವಳು ಅಂತ ಕರ್ನಾಟಕ ದವಳಂತು ಅಲ್ಲ ಅಲ್ವಾ..? ಕರ್ನಾಟಕದವಳಾದ್ರೆ ಈ ರೀತಿ ಕೋತಿ ತರ ಆಡ್ತಿರಲಿಲ್ಲಾ.

ನಮ್ಮ ಭಾಷೆ, ನಮ್ಮ ರಾಜ್ಯ, ನಮ್ಮ ಬೆಂಗಳೂರು ನಮ್ಮಿಷ್ಟದಂತೆ ಅದರ ಹೆಸರನ್ನ ನಮ್ಗೆ ಸರಿ ಅನಿಸೋ ಹಾಗೆ ಬದಲಾಯ್ತಿವಿ.. ಅದರಲ್ಲಿ ನಿಂಗೇನ್ ಕಷ್ಟ. ಹೆಸರು ಬದಲಾಗಿರೋ ಬೆಂಗಳೂರಿ ನಲ್ಲಿ ಇರೋಕೆ ಇಷ್ಟ ಇಲ್ವಾ..? ನಿನ್ನ ಇಷ್ಟ ತಂಕೊಂಡ್ ನಾವೇನ ಮಾಡೋದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails