೬ ತಿಂಗಳ ಹಿಂದೆ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಎದುರು ಕಾವೇರಿ ಪ್ರತಿಭಟನೆ ನಡೆದಾಗ ಬರದ ಪತ್ರಿಕೆಗಳಿಲ್ಲ, ತೋರಿಸದ ಟಿ.ವಿ ವಾಹಿನಿಗಳಿಲ್ಲ. ಯಾಕಪ್ಪ ಅಂದ್ರೆ ಆವತ್ತು ಕನ್ನಡದ ಬಾವುಟ ಹಿಡಿದು ಘೋಷಣೆಗಳ್ನ ಕೂಗ್ದೋರು ಬೇರೆ ಯಾರು ಅಲ್ಲಾ, ಕರ್ನಾಟಕದ ಮೂಲೆಮೂಲೆಗಳಿಂದ ಬಂದು ಬೆಂಗಳೂರಿಗೆ ಸೇರಿರೋ ಐಟಿ ಮಂದಿ.
ಇದೆಲ್ಲಾ ಯಾಕೆ ಗುರು?
ದಿನಕ್ಕೆ ೧೦ ಅಪರಾಧವಾದರೂ ಸುದ್ದಿ ಆಗದಿರೋದು, ಒಬ್ಬ ಐಟಿ ತಂತ್ರಜ್ಞನ ಮೇಲೆ ಆದರೆ ದೊಡ್ಡ ಸುದ್ದಿಯಾಗೊತ್ತೆ.
ಇದೆಲ್ಲಾ ಯಾಕೆ ಗುರು?
ನೀವು ಚೆನ್ನಾಗಿ ಓದಿದೀರಿ, ಅಮೇರಿಕಾ-ಯುರೋಪನ ಕಾಲಾಸಿಪಾಳ್ಯ-ಮೆಜಸ್ಟಿಕ್ ತರ ಸುತ್ತಿದೀರಿ, ಚೆನ್ನಾಗಿ ಸಂಪಾದನೆ ಮಾಡ್ತೀರಿ, ಕೈ ಹಾಕಿದ ಕೆಲ್ಸ ಸಖತ್ ಆಗಿ ಮಾಡ್ತೀರಿ... ಇವೆಲ್ಲಾ ಇದೆ ಅಂತಾನೇ ಈ ಸಮಾಜಕ್ಕೆ ನಿಮ್ಮ ಬಗ್ಗೆ ಬೋ ಗೌರವ ಇದೆ ಗುರು! ಅದಕ್ಕೇ ನೋಡಿ, ನಿಮಗೆ ಬೇಕೊ ಬೇಡ್ವೊ ಜನ ನಿಮ್ಮ ಅನುಕರಣೆ ಮಾಡ್ತಾರೆ. ನೀವು ಕನ್ನಡದ ಬಗ್ಗೆ ಕಾಳಜಿ ಮಾಡಿದ್ರೆ ಅವ್ರೂ ಮಾಡ್ತಾರೆ, ನೀವು ಮಾಡಲಿಲ್ಲ ಅಂದ್ರೆ ಅವ್ರೂ ಮಾಡಕ್ಕಿಲ್ಲ.
"ಸರಿ ಗುರುವೇ, ಈಗ ನಾವೇನು ಮಾಡಬೇಕು ಅಂತ ಒಸಿ ಹೇಳಿ" ಅಂತೀರಾ?
ಕಾಫಿ ಕುಡೀತಾ ಇಲ್ಲಿ ಕೇಳಿರೋ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚನೆ ಮಾಡಿ:
"ಸರಿ ಗುರುವೇ, ಈಗ ನಾವೇನು ಮಾಡಬೇಕು ಅಂತ ಒಸಿ ಹೇಳಿ" ಅಂತೀರಾ?
ಕಾಫಿ ಕುಡೀತಾ ಇಲ್ಲಿ ಕೇಳಿರೋ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚನೆ ಮಾಡಿ:
- ಒಂದು ಒಳ್ಳೆ ಕನ್ನಡ ಚಲನಚಿತ್ರ ನೋಡಿ, ಅದನ್ನು ಬೇರೆಯವರ ಜೊತೆ ಹಂಚ್ಕೊಬೇಕು ಅಂತ ಅನಿಸ್ತಾ ಇದೆಯಾ?
- ನಿಮ್ಮ ಸಂಸ್ಥೆಯಲ್ಲಿ ಕನ್ನಡ ಕಲಿಸೋದು ಹೇಗೆ ಅಂತ ತಲೆ ಕೆಡ್ತಾ ಇದೆಯಾ?
- ಯಾವುದೋ ಸಂಸ್ಥೆಗೆ ಕೆಲ್ಸಕ್ಕೆ ಹಾಕಬೇಕು, ಅಲ್ಲಿ ಕೆಲ್ಸ ಮಾಡೊರ ಸಂಪರ್ಕ ಬೇಕಾ?
- ನಿಮ್ಮ ಸಂಸ್ಥೆಯಲ್ಲಿ ಕೆಲ್ಸ ಖಾಲಿ ಇದೆ, ಯಾವ ಕನ್ನಡಿಗನೂ ಬರ್ತಾ ಇಲ್ಲಾ ಅಂತ ಬೇಜಾರಾ?
- ಕನ್ನಡ ಇರೋ ಸಂಚಾರಿ ದೂರವಾಣಿ ಬಗ್ಗೆ ತಿಳ್ಕೊಬೇಕಾ?
- ತಂತ್ರಜ್ಞಾನದಲ್ಲಿ ಕನ್ನಡ ತರೋದು ಹೇಗೆ ಅಂತ ಚರ್ಚೆ ಮಾಡಬೇಕಾ? ಅಥವಾ ತರಬೇಕಾ? ಅಥವಾ ತಂದಿರೋದರ ಬಗ್ಗೆ ಚರ್ಚೆ ಮಾಡಬೇಕಾ?
- ಕನ್ನಡ ಅಂದ್ರೆ ಎನ್ನಡ ಅನ್ನೋ ಗ್ರಾಹಕ ಸೇವೆ ಬಗ್ಗೆ ಉರಿ ಇದೆಯಾ ?
- ನಿಮ್ಮ ಸಂಸ್ಥೆಯಲ್ಲಿ ಕನ್ನಡ ಸಮಾರಂಭ ಮಾಡೊಕ್ಕೆ ಭರ್ಜರಿ ಐಡಿಯಾ ಬೇಕಾ?
- ನೀವು ಕೆಲಸ ಹುಡುಕಕ್ಕೆ ಪಟ್ಟ ಕಷ್ಟ ಬೇರೆಯವರಿಗೆ ಬರೋದು ಬೇಡ, ಹೊಸಬರಿಗೆ ದಾರಿ ತೋರಿಸಿಕೊಡಬ್ಕು ಅಂತ ಅನ್ನಿಸ್ತಾ ಇದೆಯಾ ?
9 ಅನಿಸಿಕೆಗಳು:
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ:
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ||
ಶ್ರೇಷ್ಠನು ಏನೇನು ಆಚರಣೆಗಳನ್ನು ಮಾಡುತ್ತಾನೋ ಅದನ್ನೇ ಇತರ ಜನರು ಮಾಡುತ್ತಾರೆ. ಅವನು ಮಾಡಿದ ಪ್ರಮಾಣಗಳನ್ನು ಲೋಕವು ಅನುಸರಿಸುತ್ತದೆ.
ಇವತ್ತಿನ ದಿನ ಐಟಿ ಕನ್ನಡಿಗರು ಸಮಾಜದಲ್ಲಿ ಶ್ರೇಷ್ಠರು ಎಂಬ ಹೆಸರನ್ನು ಪಡೆದಿದ್ದಾರೆ. ಅವರು ಏನನ್ನು "ಆಚರಿಸುತ್ತಾರೋ" ಅದನ್ನೇ ಎಲ್ಲರೂ ಮಾಡುತ್ತಾರೆ. ಅವರು ಕನ್ನಡವನ್ನು ಕಡೆಗಣಿಸಿದರೆ ಎಲ್ಲರೂ ಕಡೆಗಣಿಸುತ್ತಾರೆ. ಅವರು "ಕನ್ನಡದಲ್ಲಿ ಏನೂ ಆಗುವುದಿಲ್ಲ" ಎಂದರೆ ಎಲ್ಲರೂ ನಂಬುತ್ತಾರೆ. ಅವರು "ಕನ್ನಡದಲ್ಲಿ ತಂತ್ರಜ್ಞಾನ ಸಾಧ್ಯವಿಲ್ಲ" ಎಂದರೆ ಎಲ್ಲರೂ ನಂಬುತ್ತಾರೆ. ಅವರು ಕಾವೇರಿ ಪ್ರತಿಭಟನೆಗೆ ಕೂಟರೆ ಎಲ್ಲರಿಗೂ ಕೂಡಬೇಕೆನಿಸುತ್ತದೆ. ಅವರು ಕರ್ನಾಟಕದ ಏಳ್ಗೆಯ ಬಗ್ಗೆ ಕಾಳಜಿ ತೋರಿಸಿದರೆ ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ.
ಹಾಗೆಯೇ ಐಟಿ ಕನ್ನಡಿಗರು ಏನು "ಪ್ರಮಾಣ" ಗಳನ್ನು ಮಾಡುತ್ತಾರೋ, ಅದೇ ಪ್ರಮಾಣಗಳನ್ನು ಕೋಟಿಗಟ್ಟಲೆ ಜನ ಇವತ್ತು ಅನುಸರಿಸುತ್ತಾರೆ. "ನಾನು ನಾಡನ್ನು ಕಟ್ಟುತ್ತೇನೆ" ಎಂದರೆ ಅದೇ ಪ್ರಮಾಣವನ್ನು ಜನ ಮಾಡುತ್ತಾರೆ. "ನಾನು ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ದುಡಿಯುತ್ತೇನೆ" ಎಂದರೆ ಎಲ್ಲರೂ ಅದೇ ಪ್ರಮಾಣವನ್ನು ಮಾಡುತ್ತಾರೆ. ಅದು ಬಿಟ್ಟು "ಕನ್ನಡ-ಕನ್ನಡಿಗ-ಕರ್ನಾಟಕಗಳು ಇವತ್ತಿನ ದಿನ ಗೌಣ" ಎಂದರೆ ಅದೇ ಪ್ರಮಾಣಾವನ್ನು ಜನ ಮಾಡುತ್ತಾರೆ.
ಬರಹಗಾರರು ಹೇಳಿರುವಂತೆ ಐಟಿ ಕನ್ನಡಿಗರು ಇವತ್ತಿನ ದಿನ ಕನ್ನಡನಾಡಿನ ಭವಿಷ್ಯವನ್ನು ರೂಪಿಸುವುದರಲ್ಲಿ ಬಹಳ ಮುಖ್ಯವಾದ ಪಾತ್ರದಲ್ಲಿದ್ದಾರೆ.
ಐಟಿ ಕನ್ನಡಿಗರು ಎಡವಿದರೆ ಕರ್ನಾಟಕ ಎಡವುತ್ತದೆ, ಕೋಟಿ ಗಟ್ಟಲೆ ಕನ್ನಡಿಗರು ಎಡವುತ್ತಾರೆ, ಕನ್ನಡ ನಿಧಾನವಾಗಿ ಸಾವೊಪ್ಪಿಕೊಳ್ಳುತ್ತದೆ.
ಆದ್ದರಿಂದ ಐಟಿ ಕನ್ನಡಿಗರದು ಜವಾಬ್ದಾರಿಯಿಂದ ಹೆಜ್ಜೆಗಳನ್ನು ಇಡಬೇಕಾದ್ದು ಬಹಳ ಮುಖ್ಯ.
howdu neevu helodu sari.
naavu buddivantaru, naavu sariyadaddannu ene madidru bere ella janaru adne madthare.
eega naavu kannada andre ondu brand antha madbekagide. kannada dallu , kannada dinda nu sakashtu uddimege , vyavaharakke avakasha ide antha navu thorisi kodbeku.
namma namma samsthegalalli kannada kali maadidre saku mundina yojanegaLige adannu prarambika hejje tara madkobodu - Dhanyasi
namaskara,
nanage bahala kushi ayithu idannu nodi. naanu last year career councelling ge bandidde. adu bahala help ayitu nange. ide rithi kelsa maadta iri. itkannadigaru group ge yella seri namma kannadigarige udyoga kodisabeku.
ಇದು ನನ್ನ ಮೊದಲ ಕಾಮೆಂಟ್, ಮೊದಲಿಗೆ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿ ಬರ್ತಾ ಇದೆ. ಇದನ್ನು ನನಗೆ ಪರಿಚಯಿಸಿದ ಸುರೇಶಗೆ ನನ್ನ ಥಾಂಕ್ಸ.
ನೀವು ಹೇಳಿದ ಕಾವೇರಿ ಹೋರಾಟದಲ್ಲಿ ನಾನು ಪಾಲ್ಗೋಂಡಿದ್ದೆ. ಆಗ ಅಲ್ಲಿಯ ಪೋಲಿಸ್ ಅಧಿಕಾರಿ ಜೊತೆ ಹಾಗೆ ಮಾತಾಡೊವಾಗ ಅವರು ಹೇಳಿದ್ದು ಕೇಳಿ ಬಹಳ ಸಂತೋಷ ಆಯಿತು. ಅವರು ಹೇಳಿದ್ದು ಒಂದೇ, ನೀವು ಒಬ್ಬರಿಗೆ ಒಬ್ಬರು ಪರಿಚಯ ಇಲ್ಲದಿದ್ದರೂ ಇಷ್ಟು ಚೆನ್ನಾಗಿ, ಇಷ್ಟು ವ್ಯವಸ್ಥಿತರಾಗಿ ಕೆಲ್ಸ ಮಾಡ್ತ ಇದ್ದೀರಾ, ನಿಮ್ಮಂತವರು ೧೦೦೦ ಅಲ್ಲಾ ೧೦೦೦೦ ಇದ್ರು ನಮಗೆ ಚಿಂತೆ ಇಲ್ಲಾ. ಯಾಕೆ ಎಂದರೆ ಆ ಶಿಸ್ತು ನಿಮ್ಮಲ್ಲಿ ಇದೆ. ನೀವು ಎಲ್ಲಾ ಒಂದು ಕಡೆ ಸೇರಿ,ಒಟ್ಟಿಗೆ ಇನ್ನಾ ಕೆಲ್ಸ ಮಾಡಬೇಕು. ಸುಮ್ಮನೆ ಕನ್ನಡ ಅಂತ ಹಾರಡೋರಿಗೆ ಸ್ವಲ್ಪ ಮಾರ್ಗದರ್ಶನ ಕೋಡಬೇಕು ಅಂತ ಹೇಳಿದ್ರು. ಬಹುಶ: ಆವರು ಹೇಳಿದ್ದು ಐಟಿ ಕನ್ನಡಿಗರ ಈ ಗುಂಪು ಮಾಡಲಿ.
ಅದು ಇವತ್ತು ಬೆಳಿಗ್ಗೆ, ಈ ಲೇಖನ+ಕಾಮೆಂಟ್ ಓದಿದ ಮೇಲೆ
ಬುದ್ದಿನಿಗೆ ಆಗೋ ಜ್ಞಾನೋದಯ ತರ ನನಗೆ ಆಗಿದೆ. ನಮ್ಮ ಊರಿನಲ್ಲಿ ನನ್ನ ಜೀವನ ಶೈಲಿ ಹೇಗಿದೆ ಅಂತ ತಿಳ್ಕೊಳಕ್ಕೆ ನನ್ನ ಕಜಿನ್ಸ ಕಾಯುತ್ತ ಇರುತ್ತಾರೆ, ಊರಿಗೆ ಹೋದ್ರೆ ಸಾಕು, ೧೦-೧೫ ಪ್ರಶ್ನೆ ಹಾಕುತ್ತಾರೆ. ಯಾವ ಹೋಟಲಗೆ ಹೋಗುತ್ತಿರಾ, ಯಾವ ಪುಸ್ತಕ ಒದಿದ್ರಿ, ಯಾವ ಹೊಸ ಮೂವಿ ನೋಡಿದ್ರಿ, ಅಮೇರಿಕಾಗೆ ಯಾವಗ ..ಹೀಗೆ. ನಾನು ಸುಮ್ಮನೆ ಉತ್ತರ ಕೋಡುತ್ತ ಇದ್ದೆ, ಅದ್ರೆ ನನ್ನ ಉತ್ತರ ಮೇಲೆ ಅವರೂ ಅನುಕರಣೆ ಮಾಡ್ತಾರೆ ಅಂತ ಈಗ ಅನಿಸ್ತಾ ಇದೆ. ಇನ್ನ ಮೇಲೆ ನನ್ನ ಮೇಲೆ ಸ್ವಲ್ಪ ಹೆಚ್ಚಿಗೆ ಜವಬ್ದಾರಿ ಇದೆ.
ನನ್ನ ಚಿಕ್ಕಪ್ಪನ ಮಗಳು ಒಮ್ಮೆ ನನ್ನ ಹತ್ತಿರ ಬಂದು ನೀನು ಬೆಂಗಳೂರಿನಲ್ಲಿ ಎಲ್ಲರ ಜೊತೆ ಇಂಗ್ಲೀಷನಲ್ಲಿ ಮಾತಾಡ್ತಿಯಾ, ಅದಕ್ಕೆ ನಾವು ನಮ್ಮ ಕಾಲೇಜಿನಲ್ಲಿ ಎಲ್ಲಾ ಇಂಗ್ಲೀಷನಲ್ಲೇ ಮಾತಡೊದು ಅಂದಳು. ಒಂದು ನಿಮಿಷ ನನಗೆ ಗಾಭರಿಯಾಗಿ ಅವಳಿಗೆ ತಿಳಿ ಹೇಳಿದೆ. ನಾವು ಓದಿರೋ ಜನ ಎಷ್ಟು ಕನ್ನಡ ಮಾತನಾಡುತ್ತೆವೆ, ವಿದೇಶದಲ್ಲಿ ಕನ್ನಡ ಚಿತ್ರ ನೋಡಿದ್ದು ಹೇಳಿ. ಅವಳ ಗೆಳತಿಯರನ್ನು ಭೇಟಿ ಮಾಡಿ ಸ್ವಲ್ಪ ಬುದ್ದಿ ಹೇಳಿದೆ. ಮುಂದಿನ ಸಲ ಊರಿಗೆ ಹೋದಾಗ ನೋಡಬೇಕು ನನ್ನ ಮಾತು ಎಷ್ಟರ ಮಟ್ಟಿಗೆ ಫಲಿಸಿದೆ ಅಂತ.
- ಶ್ರೀನಿವಾಸ
ಗೋರುರು
ಗುರುಗಳೇ,,
ಅಡ್ಡ ಬಿದ್ದೆ ...ನಿಮ್ಮ ಬ್ಲಾಗಿನ ಮುಖೇನ್ ನೀವು ಮಾಡಾಕತ್ತಿರಲ್ಲ .. ಇ ಕೆಲಸಕ್ಕ ನಿಮಗ ನನ್ನ ಅನಂತ ಅನಂತ ನಮಸ್ಕಾರ.. ಬೆಂಗಳೂರಿಗ ಬಂದ ಫಸ್ಟ ೬ ತಿಂಗಳನಾಗ್ ಎಲ್ಲಾ ಹುಡುಗರು, ಹುಡಗ್ಯಾರು ಬೇರೆ ಮಂದಿ ಹೆಂಗೆ behave ಮಾಡತಾರ್ ಅಂತ observe ಮಾಡತಾರ್. ಅವರೆಲ್ಲಾ english ನಾಗ್ ಟಸ್ಸು-ಪುಸ್ಸು ಅಂದ್ರ ಇವರು ಅದನ್ನ ಮಾಡತಾರ್.. ಆಮ್ಯಾಲ್ ಅವರ ಒಂದ opinion ಮಾಡಕೊಂಡ ಬಿಡ್ತಾರ್.. ಬೆಂಗಳೂರಾಗ್ English ಮಾತಾಡಲಿಲ್ಲ ಅಂದ್ರ ಬಾಳ್ ಅಸಯ್ಯ .. ಕನ್ನಡ ಮಾತಾಡಿದ್ರ ಅಸಯ್ಯ ಮಾಡತಾರ್, ಕನ್ನಡ ಪಿಚ್ಚರ್ ನೋಡು ಮಂದಿ ಬಗ್ಗ ಕೀಳಾಗ್ ನೋಡತಾರ,, ಇತ್ಯಾದಿ ಇತ್ಯಾದಿ... ಹಿಂಗಾಗಿ,, ನಾವೆಲ್ಲ ಬೆಂಗಳೂರಾಗ್ ಒಂದಿಷ್ಟ ವರ್ಷದಿಂದ ಇರು ಮಂದಿ ಮ್ಯಾಲೆ ಬಾಳ ಜವಾಬ್ದಾರಿ ಐತ್ರಿ.. ನಮ್ಮ ನಡೆ , ನುಡಿ, ನಮ್ಮ ನಡವಳಿಕೆನ ಅನುಸರಿಸು ಬಾಳ ಮಂದಿ ಇರತಾರ್,, ಹಿಂಗಾಗಿ ನಾ ನಮ್ಮ ಕನ್ನಡದ IT ಮಂದಿಗ್ ಕೇಳಕೊಳ್ಳುದ ಇಷ್ಟಾ.. ತಾವೆಲ್ಲರು ತಮ್ಮ ತಂಗಿ ತಮ್ಮಂದಿರಿಗೆ ಕೆಟ್ಟ ಉದಾಹರಣಿ ಆಗು ಹಂಗ ಇರಬ್ಯಾಡ್ರಿ...
GurugaLe, ivattu kannadigaru yeke oggatagilla yendu swalpa yochisi, moola samasye yenu yendu gurutisi, aa samasyeya parihaara kandukondare maatra kannada, Kannadigara udhaara saadhya..Marakke berige neeru haakabeke horatu kombegaLige alla allave??
nimma gumpinavaru jaaNaru, swalpa karnatakada charitreyannu avalokisi, prasakta rajakeeya sthitigaLannoo avalokisi, nimage samasyeya yeleyu gocharisabahudu.
internet centre nalli baraha illa aaddariMda kannadawannu english nalli bareyuttiddene. kshamisabeku.
naanu saha banavasi balagada IT kannadigara kootada cauvery pratibhataneyalli paalgondidde. pratibhataneyalli paalgollalu nanna snehita snehitarige email kalisidde. adannu itararigu ravaanisalu tilisidde. mattashutu maahiti bekendare nannage kare maadalu nanna ph. number kooda kottidde. kelawaru nanage kare maadi, nijawaagiyu pratibhatane maaduttiddera? adarallu IT kshetradalli iruwawarella maaduttiddera? nambalu kashtavaagta ide anta helidaru. awarellaru tumba samtoshadinda bandu paalgondaru.
idaralli gamanisabekaadaddenendare, IT yalliruwawaru bari office nalli late night kelasa maadi, weekends maja maadikoMdu tiruguttaare, iwarige naaDina bagge kaaLaji illa eMde jana tiLidukoMdiruwudu. haagu naawu Enaadaru maaDalu horatare ellaru nammannu anukarisutaare. aaddariMda ellaru muMde IT kannaDigara guMpannu sErikoLLabEku. kannada kelsa maaDabEku.
ನಮಸ್ಕಾರ, ಇನ್ನೊಂದು ಮುಖ್ಯವಾದ ಮಾತೆಂದರೆ ಐ.ಟಿ ಜನ ಕಾವೇರಿ ಪ್ರತಿಭಟನೆ ಮಾಡಿದ ಮೇಲೇ ನಾನಾ ವೃತ್ತಿಪರರು ಹೋರಾಟಕ್ಕೆ ಇಳುದ್ರು. ಜನ ನಮ್ಮನ್ನು ಆದರ್ಶ / ಮಾದರಿ ಅಂತ ನೋಡ್ತಿದ್ದಾಗ ನಾಡುನುಡಿ ಬಗ್ಗೆ ನಾವು ಧ್ವನಿ ಎತ್ತಬೇಕು ಎನ್ನುವುದು ಸರಿಯಾಗಿದೆ. ನಿಮಗೆ ಯಶ ಸಿಗಲಿ
ತಿಮ್ಮಯ್ಯ
ellarigu namaskaara... nanagondu vishyada bagge maahitibekide.. kelavu tingaLa hinde kannada abhivrudhdhi praadhikaaradavaru IT udyogigaLige kannadaheLikoDtivanta news paper-nalli announce maDidru.. idara bagge yaarigaadru gotte? dayavittu idara-bagge tiLisi.. namma office-nalli tumba jana bere rajyadavaru idaare.. kelavarige naanu kannada kalisuva prayatna maDtha idini.. aadre idu enuu salldu antha ansatte,,, sarkaara kannada-kalike-na kaDDaya maaDidre maatrane ee horaginavaru kalitaare illandre kaliri antha heLo nammantor mele nagtaare..
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!