ಬಾನಲ್ಲೂ ನೀನೇ, ಭುವಿಯಲ್ಲು ನೀನೇ, ಸಿಂಗಾಪುರ್ ಏರ್ಲೈನ್ಸಲ್ಲೂ ನೀನೇ!

ಕಳೆದ ಭಾನುವಾರದ ವಿ.ಕ.ದಲ್ಲಿ ಶ್ರೀ ವಿಶ್ವೇಶ್ವರ ಭಟ್ಟರು ಸಿಂಗಾಪುರ್ ಎರಲೈನ್ನ್ ನಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಕನ್ನಡದ್ ಮೆನು ನೋಡಿ ಸಕ್ಕತ್ ಸಂತೋಷ ಪಟ್ಟು ಬರ್ದಿದಾರೆ. ಸಂತೋಷದ್ ವಿಷ್ಯಾನೇ, ಗುರು!

2004-2005 ರಲ್ಲಿ "ವಿಮಾನಗಳಲ್ಲಿ ಕನ್ನಡ" ಅನ್ನೋ ಬಗ್ಗೆ ಸಕ್ಕತ್ ಚರ್ಚೆಯಾಗಿ ವಿಮಾನಗಳಲ್ಲಿ ಓಡಾಡೋ ಬಹಳ ಕನ್ನಡಿಗರು ಬಳಗದ ಜೊತೆ ಸೇರಿ ಒಗ್ಗಟ್ಟಿಂದ ಲುಫ್ತಾನ್ಸಾ ಮತ್ತೆ ಸಿಂಗಾಪುರ್ ಎರಲೈನ್ಸಗಳ ಗ್ರಾಹಕ ಸೇವೆನೋರಿಗೆ ಕನ್ನಡದಲ್ ಸೇವೆ ಕೊಡಿ ಅಂತ ಮಿಂಚೆಗಳ ಹೊಳೆ ಹರಿಸಿ ಕೇಳ್ಕೊಂಡಿದ್ವು. ಅದಕ್ಕೆ ಸ್ಪಂದಿಸಿ ಸಿಂಗಾಪುರ್ ಎರಲೈನ್ಸ್ ನೋರು 2005 ಮಾರ್ಚಿಯಿಂದ ಕನ್ನಡದಲ್ಲಿ ಮೆನು ಇಡ್ತೀವಿ ಅಂತ ನಮಗೆ ಮಾತು ಕೊಟ್ಟಿದ್ರು:
From: SAA_Feedback@singaporeair.com.sg

Thank you for your email reply dated 19 February.

I appreciate the time and effort taken to convey your feedback to us. I have highlighted your comments to the relevant Departmental Heads for their attention and consideration.

I am also pleased to share with you that menu cards in KannaDa will be made available from March 2005 onwards.

Thank you for flying with Singapore Airlines. We look forward to welcoming you on board our flights again soon.

Yours sincerely

Chin Hsiang San (Ms)
Manager Customer Services

ಕೊಟ್ಟ ಮಾತ್ನ ಸಿಂಗಾಪುರ್ ಏರ್ಲೈನ್ಸ್ ನೋರು ಉಳಿಸಿಕೊಂಡಿದಾರೆ ಅನ್ನೋದು ಒಳ್ಳೇ ಸುದ್ದಿ ಗುರು!

ಇವತ್ತಿನ ದಿನ ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ವಿಮಾನಗಳಲ್ಲಿ ಕನ್ನಡ ಇಲ್ಲ, ಇರೋದು ಹಿಂದಿ ಮತ್ತೆ ಇಂಗ್ಲೀಷು. ಇದಕ್ಕೆ ಒಪ್ಪಿಕೊಂಡು ಯಾಕ್ ಕೂತ್ಕೋಬೇಕು? ಗಿರಾಕೀಗ್ ಬೇಕಾಗಿರೋದನ್ನ ಕಂಪನಿಯೋರು ಕೊಡಬೇಕೋ ಇಲ್ಲಾ ಔರು ಕೊಟ್ಟಿದ್ನ ಗಿರಾಕಿಗಳು ಇಸ್ಕೋಬೇಕೋ? ಹಿಂದೀನಂತೂ ಇಂತಾ ಕಡೆಯಲ್ಲಾ ಮೆರ್ಸಿ ಮೆರ್ಸಿ ಅದಕ್ಕೆ ಇಲ್ಲದ ಒಪ್ಪುಗೆ ಭಾರತದಲ್ಲಿ ಇದೆ ಅನ್ನೋ ಸುಳ್ನ ಪ್ರಪಂಚಕ್ಕೆಲ್ಲಾ ಇಲ್ಲೀವರೆಗೂ ಹೇಳ್ಕೊಂಡ್ ಬಂದಿರೋದಂತೂ ಮನೆಹಾಳು ಕೆಲ್ಸಾನೇ ಗುರು! ಬೆಂಗಳೂರಿಂದ ಚೆನ್ನೈಗೆ ಹೋಗೋ ವಿಮಾನಗಳಲ್ಲೂ ಹಿಂದೀಲಿ ಮಾತಾಡೋರ್ನ ಕೂರ್ಸಿ, ಹಿಂದೀಲಿ ಸೂಚನೆಗಳ್ನ ಕೊಡಿಸೋ ಪೆದ್ದತನ ಮೊದ್ಲು ಶುರುವಾಗಿದ್ದು ಇಂಡಿಯನ್ ಏರ್ಲೈನ್ಸ್ ನಿಂದ. ಅದೇ ರೋಗ ಈಗ ಜೆಟ್ಟು-ಕಿಂಗ್ಫಿಷರ್ರುಗಳಿಗೂ ಅಂಟ್ಕೊಂಡಿದೆ, ಲುಫ್ತಾನ್ಸಾ-ಗಿಫ್ತಾನ್ಸಾಗಳ್ಗೂ ಅಂಟ್ಕೊಂಡಿದೆ ಅಷ್ಟೆ.

ಕರ್ನಾಟಕದ ಯಾವುದೇ ಊರಿಂದ/ಊರಿಗೆ ಹಾರೋ ಈ ಹಕ್ಕಿಗಳಿಗೆ ಬಂದಿರೋ ರೋಗಕ್ಕೆ ಮದ್ದು ಇದ್ದೇ ಇದೆ, ಕುಡುಸ್ಬೇಕು, ಅಷ್ಟೆ:

"ವಿಮಾನದಲ್ಲಿ ಓಡಾಡುವಾಗ ಕನ್ನಡದಲ್ಲಿ ಮಾತಾಡೋದು ಅಂದ್ರೇನು? ಛೆ! ಛೆ!...ಇಷ್ಟು ಮೇಲೆ ಬಂದು ಕನ್ನಡ ಮಾತಾಡೋದು ಅಂದ್ರೇನು!" ಅಂದುಕೊಳ್ಳೋಷ್ಟು ಕೀಳರಿಮೇನ ಹೂತಾಕ್ಬೇಕು! ಕೇಳಬೇಕು, ಕನ್ನಡದಲ್ಲಿ ಸೇವೆ ಕೊಡಿ ಅಂತ ಒತ್ತಾಯ ಮಾಡ್ಬೇಕು! ಪಡ್ಕೊಳೋದು ನಮ್ಮ ಹಕ್ಕು, ಕೊಡೋದು ನಿಮ್ಮ ಕರ್ತವ್ಯ ಅಂತ ಗದರುಹಾಕ್ಬೇಕು! ಮೆನು ಅಷ್ಟೇ ಅಲ್ಲ, ಅಲ್ಲಿಟ್ಟಿರೋ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿ, ಬಾಂಗೆಳತಿಯರ/ಗೆಳೆಯರ ಮಾತು, ಅಲ್ಲಿಲ್ಲಿ ಅಂಟಿಸಿರೋ ಸೂಚನೆಗಳು, ಹತ್ತೋ ಪಾಸು, ಔರು ಕೊಡೋ ತಿಂಡಿಗಳ ಕವರ್ಗಳ ಮೇಲೆ ಬರ್ದಿರೋ ಮಾಹಿತಿ, ಮನರಂಜನೆ, ಕಾಗದದ್ ಲೋಟದ ಮೇಲೆ ಬರ್ದಿರೋ ಹಾಳು-ಮೂಳು, ಎಲ್ಲವೂ ಕನ್ನಡದಲ್ಲೇ ಇರಬೇಕು ಅಂತ ಒತ್ತಾಯ ಮಾಡ್ಬೇಕು.

ಅದು ಬಾನೇ ಆಗಲಿ ಭುವಿಯೇ ಆಗಲಿ, ಕನ್ನಡದಲ್ಲಿ ಸೇವೆ ಪಡ್ಕೊಳೋದು ನಮ್ಮ ಹಕ್ಕು. ಕಾನೂನು ಕೂಡ ಇದನ್ನೇ ಹೇಳೋದು. ಕನ್ನಡದಲ್ಲಿ ಸೇವೆ ಕೊಡಲ್ಲ ಅಂದ್ರೆ ಅಂತೌರಿಗೆ ಕನ್ನಡ ನಾಡಲ್ಲಿ ಯಾಪಾರ ಮಾಡಕ್ಕೆ ಹಕ್ಕೇ ಇಲ್ಲ ಗುರು!

ಇನ್ನೂ ಲುಫ್ತಾನ್ಸಾ ಆಗ್ಲಿ ಬೇರೆ ವಿಮಾನ ಸಂಸ್ಥೆಗಳಾಗ್ಲಿ ಉತ್ರ ಕೊಟ್ಟಿಲ್ಲ. ನೆ.ನ.ಪಿ.ರ.ಲಿ.!

15 ಅನಿಸಿಕೆಗಳು:

Anonymous ಅಂತಾರೆ...

ಗುರುಗಳೇ,
ಇಲ್ಲಿ ನೋಡಿ,

ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ.

ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು.


"Thank you for your email to compliment our inflight entertainment system. We are also grateful for your suggestion on the addition of movies in the Kannada language, as well as the link to Wikipedia which you have kindly provided. We will be forwarding your feedback to our Inflight Entertainment department for their attention and review.

We would also like to take this opportunity to thank you for your business and support to Singapore Airlines. We wish you only the very best and look forward to welcome you back on board our flights again soon.

Yours sincerely "

ನಿಮಗೂ ವಿಮಾನ್ದಲ್ಲಿ ಕನ್ನಡ ಸಿನಿಮಾ ನೋಡುವ ಆಸೆಯಿದ್ದರೆ ನೀವು ಇಲ್ಲಿಂದ ಕಳಿಸಬಹುದು

http://www.singaporeair.com/saa/Feedback/feFeedbackInit.jspx

Anivaarya ಅಂತಾರೆ...

ಇದು ಸಕ್ಕತ್ ಸಿಹಿ ಸುದ್ದಿ. ಇದರ ಸಂಪೂರ್ಣ ಸಫಲತೆಗೆ ನಮ್ಮ ಕಾಣಿಕೆ ಹೇಗ್ ಇರ್ಬೇಕು ಅಂತ ಯೋಚಿಸಬೇಕು, contribute ಮಾಡಬೇಕು. ಅವರ ಈ ಹೆಜ್ಜೆಯನ್ನ ನಾವು ನೋಡಿದ್ದೇವೆ, ಮೆಚ್ಹಿದ್ದೇವೆ ಅಂತ "appreciation" ತಿಳಿಸುವುದೂ complain ಮಾಡೋ ಅಷ್ಟೇ important ಅಲ್ವೆ?

ಜೊತೆಗೆ ನಮ್ಮಲ್ಲಿ ಕೆಲವು behavioral changes ತೋರಿಸಬೇಕಾಗುತ್ತೆ ಅಲ್ವೆ, ಬೇರೆ airlineಗಳ್ಗೆ ಇದು ಮಾದರಿಯಾಗಬೇಕಾದ್ರೆ?:

ಸ್ವಲ್ಪ ಜಾಸ್ತಿ ಆದರೂ ಪರ್ವಾಗಿಲ್ಲ ಇಂತಾ airlineಗಳಲ್ಲೆ ಹೋಗಬೇಕು; ಬರೀ ಹೋದರೇ ಸಾಲದು, ನಾವು ಈ ವ್ಯತ್ಯಾಸವನ್ನ ನೋಡಿದ್ದೇವೆ, ಪ್ರಶಂಸಿಸುತ್ತೇವೆ, ಮತ್ತು ನಮ್ಗೆ ಸಂತೋಷ ಕೊಟ್ಟಿದೆ ಅಂತ ತಿಳಿಸಬೇಕು. ಈ ಪ್ರಯೋಗಗಳನ್ನ ಸಂಪೂರ್ಣವಾಗಿ ಬಳಿಸಬೇಕು. ಇಲ್ಲಿಯ "ಸಧಸ್ಯ"ರಿಗೇನೊ ಹೇಳಬೇಕಿಲ್ಲ, ಪಕ್ಕ ಕನ್ನಡದೋವ್ರೇ ಇರೋದು, ಆದರೂ ಯಾವುದೇ airlineಆಗ್ಲೀ ಗ್ರಾಹಕರ behaviors ಮೇಲೆ ಅವರ offeringsನ ಕೊಡೋದು ಸಹಜ. ಅವರ ಕೊಡುಗೆಯು ಅಷ್ಟು ಯಾವುದೇ ವ್ಯತ್ಯಾಸ ಮಾಡಿಲ್ಲಾ ಅಂತಾಗ್ಲೀ, ಲಬಧಾಯಕವಲ್ಲ ಅಂತಾಗ್ಲೀ ಅನ್ಸುದ್ರೆ, ವ್ಯವಹಾರದ ದೃಷ್ಟಿಯಿಂದ change ಮಾಡಬೇಕಾಗುತ್ತದೆ.

ಬ್ಯಾಂಕಿನಲ್ಲಿ ಕನ್ನಡದಲ್ಲಿ (ಅತ್ವಾ ಯಾವುದೇ non-english) menu option ಇದ್ದ್ರೂ englishನಲ್ಲೇ ವ್ಯವಹಾರ ಮಾಡೋ ಅಭ್ಯಾಸ ಮಾಡ್ಕೊಂಡಿದ್ದೇವೇನೋ ಅನ್ಸುತ್ತೆ, ಇದರ ಹಾಗೆ ವಿಮಾನದಲ್ಲೂ ಮಾಡಿದರೆ ಅದು ಒಳ್ಳೆಯ ಸೂಚನೆಯನ್ನ ಕೊಡೋದಿಲ್ಲ. ಇಲ್ಲಿಯ ಜೋಶನ್ನ ನೋಡುದ್ರೆ ಸಿಂಗಾಪೂರ್ ಏರ್ಲೈನ್ ಕಂಡಿತಾ ಅವರ ಈ ಹೆಜ್ಜೆ ಅವರಿಗೆ ಸಕ್ಕತ್ ಒಳ್ಳೆಯದನ್ನ ಮಾಡುತ್ತೇ ಅನ್ನೋ ಬರವಸೆ ಅವರಿಗೆ ಸಿಗುತ್ತೆ.

ಹೀಗೇ ಎಲ್ಲೆಡೆ ಕನ್ನಡವಾದ್ರೆ ಸೂಪರ್. ಚೆನ್ನಾಗಿ ನಡೀತಾ ಇದೆ, ಹೀಗೇ ಮುಂದುವರೆಯಲಿ.

Anonymous ಅಂತಾರೆ...

ಯಾರೈನೋರೆ, appreciationನೂ ಹೋಗಿದೆ, ಹೆದರಿಕೊಳ್ಳಬೇಡಿ. ಈ behavioral change ಕನ್ನಡಿಗರಲ್ಲಿ ಆಗಬೇಕೇನಿಲ್ಲ, ನಮ್ಮಲ್ಲಿ ಇದ್ದೇ ಇದೆ, ಬಿಡಿ!

Rohith B R ಅಂತಾರೆ...

ಸಿಂಗಾಪೂರಿನಲ್ಲಿ ತಮಿಳು ಒಂದು official ಭಾಷೆ ಆಗಿದ್ದೂ ಈ ಸಿಹಿ-ಸುದ್ದಿ ಅಂದ್ರೆ, ನಿಜ್ವಾಗ್ಲೂ ಇದು ಗಮನಿಸಬೇಕಾದ್ದೇ.. KSRTC ಕನ್ನಡ ಚಿತ್ರ ಹಾಕ್ತಾರೋ ಇಲ್ವೊ, ಇವ್ರಂತೂ ಖಂಡಿತ ಹಾಕ್ತಾರೆ ಅನ್ಸತ್ತೆ.. ಆದ್ರೆ, ಮತ್ತೆ ಅದೇ ಮಾತು, ನಮಗೆ KSRTC ಕೂಡ ಕನ್ನಡ ಚಿತ್ರ ಹಾಕೋದು ಬಹಳ ಮುಖ್ಯ!

Anonymous ಅಂತಾರೆ...

ಈ ಲೇಖನವನ್ನು ಓದುವ ಎಲ್ಲರೂ ಇನ್ನು ಮುಂದೆ ಕರ್ನಾಟಕದ ಯಾವುದೇ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳಸಿದರೂ, ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಬೇರೆಡೆಯಂದ ಪ್ರಯಾಣಿಸುತ್ತಿದ್ದರೆ, ಆಯಾ ವಿಮಾನ ಸಂಸ್ಥೆಗಳಿಂದ ಮರುಮಾಹಿತಿ ವಿಷಯ ಸಂಗ್ರಹ [Service feed back]ನಮೂನೆಯನ್ನು ಪಡೆದು ಅದರಲ್ಲಿ ಈ ಕೆಳಗಿನಂತೆ, ನಿಮಗೆ ತಿಳಿದು ಬರುವ ಕನ್ನಡ ಅನುಷ್ಥಾನದ ಯಾವುದೇ ಸಲಹೆಯನ್ನು ದಾಖಲಿಸಿ. [ಕನ್ನಡದಲ್ಲೇ ದಾಖಲಿಸಿ!]

೧] ಬೆಂಗಳೂರು, ಮಂಗಳೂರು ಸೇರಿದಂತೆ ನಾಡಿನ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರ ಹೋಗುವ ಮತ್ತು ಒಳಬರುವ ವಿಮಾನಗಳಲ್ಲಿ ಮೇಲೆರುವ, ನೆಲಕ್ಕಿಳಿಯುವ, ಹಾರಾಡುವ ಮತ್ತು ಸುರಕ್ಷತಾ ಸೂಚನೆಗಳು ಸೇರಿದಂತೆ ಎಲ್ಲ ಉದ್ಘೋಷಗಳು ಕನ್ನಡದಲ್ಲಿರಬೇಕು.

೨] ವಿಮಾನ ನಿಲ್ದಾಣದ ತಮ್ಮ ಕಚೇರಿಗಳ ನಾಮ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು.

೩] ಎಲ್ಲಾ ವಿಮಾನ ಸಂಸ್ಥೆಗಳೂ ನಿಲ್ದಾಣದಲ್ಲಿನ ಘೋಷಣೆಗಳನ್ನು ಮೊದಲು ಕನ್ನಡಲ್ಲಿ ಮಾಡಬೇಕು.

೪] ವಿಮಾನದ ಒಳಗಡೆ ಆಸನದ ಮುಂಭಾಗದಲ್ಲಿ ಇಡಲಾಗುವ ವಿಮಾನ ಯಾನದ ಸುರಕ್ಷತೆಗೆ ಸಂಬಂಧ ಪಟ್ಟ ಪ್ರಕಟಣೆಗಳು ಕನ್ನಡದಲ್ಲಿರಬೇಕು

೫] ವಿಮಾನದೊಳಗೆ ದೊರಕುವ ಸಿನೆಮಾ, ಸಂಗೀತ ಮುಂತಾದ ಮನರಂಜನೆ ಕನ್ನಡದಲ್ಲಿರಬೇಕು.

೬] ಚೆಕ್-ಇನ್ ಕೌಂಟರುಗಳ ಬಳಿ ವಿಮಾನದ ಮಾಹಿತಿ ಕನ್ನಡದಲ್ಲಿ ಪ್ರದರ್ಶಿಸಬೇಕು.

೭] ಪ್ರಯಾಣದ ಸಮಯದಲ್ಲಿ ವಿಮಾನ ಸಂಸ್ಥೆಗಳು ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ವಿತರಿಸಬೇಕು.

೮] ಸ್ವಯಂಚಾಲಿತ ಪ್ರವೇಶ ದಾಖಲೆ ಮುದ್ರಿಸುವ [check-in Kiosk] ಯಂತ್ರಗಳು, ಬ್ಯಾಂಕ್ ಹಣ ಪಡೆಯುವ [ATM] ಯಂತ್ರಗಳು ಕನ್ನಡ ಭಾಷೆ ಹೊಂದಿರಬೇಕು.

೯] ಮರುಮಾಹಿತಿ ವಿಷಯ ಸಂಗ್ರಹ [Service feed back] ಕ್ಕೆ ವಿಮಾನ ಸಂಸ್ಥೆಗಳು ಕನ್ನಡದ ನಮೂನೆಗಳನ್ನು ಒದಗಿಸಬೇಕು.

೧೦] ವಿಮಾನ ಯಾನ ಸಂಸ್ಥೆಗಳ ವಿಮಾನ ನಿಲ್ದಾಣ ಕಚೇರಿ ಅಥವ ನಗರದಲ್ಲಿನ ಕಚೇರಿಗಳಲ್ಲಿ ಕನ್ನಡ ಸಹಾಯವಾಣಿ ದೊರಕಬೇಕು.

೧೧] ವಿಮಾನದಲ್ಲಿ ನೀಡುವ ತಿಂಡಿ-ತಿನಿಸು-ಪಾನೀಯದ ವಿವರಗಳು ಕನ್ನಡದಲ್ಲಿರಬೇಕು. ನಮ್ಮ ಇಡ್ಲಿ, ವಡೆ, ಖಾರಾ-ಕೇಸರಿ ಭಾತ್ [ಚೌ ಚೌ ಭಾತ್] ಹುಗ್ಗಿ, ಬಿಸಿಬೇಳೆ ಬಾತ್, ಚಿತ್ರಾನ್ನ, ಮದ್ದೂರ್ ವಡೆ, ಕಡುಬು, ರಾಗಿ / ಅಕ್ಕಿ ರೊಟ್ಟಿ, ಮುದ್ದೆ ವಿತರಿಸುವ ವ್ಯವಸ್ಥೆಯಾಗಬೇಕು

Anonymous ಅಂತಾರೆ...

ಸಖತ್ ಖುಶಿ ವಿಶ್ಯ ಇದು. ಆದರೆ,ನಮ್ಮ ನಾಡಿನಲ್ಲಿ ಓಡಾಡುವ ವಿಮಾನಗಳಲ್ಲಿ ಕನ್ನಡ ಅನುಷ್ಟಾನ ಆಗದೇ ಇರುವುದು ಬೇಜಾರಿನ ಸಂಗತಿ. ಯಾವಾಗಲಾದರು ಕರ್ನಾಟಕದ ಊರುಗಳಿಂದ ಅಥವ ಕರ್ನಾಟಕದ ಊರುಗಳಿಗೆ ವಿಮಾನದಲ್ಲಿ ಓಡಾಡುವ ಪ್ರಸಂಗ ಬಂದರೆ, ಚಂ. ಕ. ರಾ. ಅವರು ಹೇಳಿರುವುದನ್ನು ಖಂಡಿತ ಬರೆಯುತ್ತೇನೆ.

ಇದು, ಇಲ್ಲಿಯವರೆಗು ಅನುಷ್ಟಾನಕ್ಕೆ ಬಂದಿಲ್ಲದೆ ಇರುವುದು ಆಶ್ಚರ್ಯಕರ. ಒಳ್ಳೇಯ ಲೇಖನ ಗುರು.

ಮತ್ತೆ ಬೆಂಗಳುರಿನಿಂದ ಚೆನ್ನೈ ಗೆ ಹೋಗುವ ಎಲ್ಲಾ ರೈಲುಗಳಲ್ಲು ತಮಿಳರೆ ತುಂಬಿಕೊಂಡಿದ್ದಾರೆ. ಅವರು ನಮ್ಮ ಕನ್ನಡದ ತಿಂಡಿ ತೀರ್ಥಗಳಿಗೆ ತಮಿಳ ಹೆಸರು ಕೊಡೊದು ನೋಡಿ. ಹೋಳಿಗೆಗೆ ಪೋಳಿ ಅಂತಾರೆ. ಬಿಸಿ ಅನ್ನೊಕ್ಕೆ ಸೂಡ ಅಂತಾರೆ :(
ಕನ್ನಡದಲ್ಲಿ ಮಾತಾಡಿದ್ರು ಉತ್ತರ ಸಿಗೋಲ್ಲ.

Anonymous ಅಂತಾರೆ...

ಗುರುಗಳೇ,, ಅಗದಿ ಹಾಲು ಸಕ್ರಿ ತಿಂದಂಗ ಆತ್ರಿ ಸಿಂಗಾಪುರ್ ಏರಲೈನ್ಸ್ ಅವರ ಪತ್ರಾ ನೋಡಿ. ಯಾವದೊ ದೇಶದ ಕಂಪನಿ ಕನ್ನಡದವರ ಪತ್ರಕ್ಕ ಇಂತಾ ಚಲೋ ಉತ್ತರಾ ಕೊಡತೆತಿ.. ಆದರ ನಮ್ಮ ಕರ್ನಾಟಕದ್ದ ಆದ ೨ ವಿಮಾನ ಯಾನ ಸಂಸ್ಥಾ ಅದಾವ,, ಏರ್ ಡೆಕ್ಕನ್ ಮತ್ತ ಕಿಂಗಫಿಷರ್ ಏರಲೈನ್ಸ್,, ಅಲ್ಲಿ ನೋಡಿದ್ರ ಎಲ್ಲಾ ತುಂಡ್ ಆಫ್ ಲಂಡನ್ ಅನ್ನು ಹಂಗ ಆಡತಾರ್. ಇನ್ನ ಮ್ಯಾಲೆ ಕನ್ನಡದಾಗ್ ಸೇವ ಕೊಡದಿರು ಏರಲೈನ್ಸ್ಗೊಳ ವೆಬ್ ಸೈಟಿಗೆ ಹೋಗಿ ನಮಗ ನಮ್ಮ ಭಾಷಾದಾಗ್ ಸೇವಾ ಕೊಟ್ಟಿಲ್ಲದೆ ಇರು ಕಾರಣಕ್ಕ ನಿಮ್ಮ ವಿಮಾನದಾಗ್ ಹೊಗುದಿಲ್ಲಾ ಅಂತ feedback ನ್ಯಾಗ್ ಬರಿಯೋಣ...

ಬನವಾಸಿ ಬಳಗ ಅಂತಾರೆ...

ಇಬ್ಬರು ಅನಾನಿಮಸ್ಸುಗಳು ಬರೆದ ಅನಿಸಿಕೆಗಳನ್ನು ಇಲ್ಲಿಂದ ತೆಗೆದುಹಾಕಿದ್ದೇವೆ. ಹಾಗೇ "ಸಂಸ್ಕೃತ..." ಬರಹಕ್ಕೆ ಬರೆದಿದ್ದ ಕೆಲವು ಅನಿಸಿಕೆಗಳನ್ನೂ ತೆಗೆದುಹಾಕಿದ್ದೇವೆ.

ಕಾರಣಗಳು: (೧) ಕೆಟ್ಟ ಪದಗಳ ಬಳಕೆ (೨) ವಿಷಯಕ್ಕೆ ಉತ್ತರವಾಗಿ ಅನಿಸಿಕೆ ಬರೆಯದೆ ವಿಷಯ ಬರೆದವನ ಜಾತಿ ಮುಂತಾದವುಗಳ ಬಗ್ಗೆ ಚರ್ಚೆಯನ್ನು ಎಳೆಯುವಿಕೆ.

ಕನ್ನಡವೇ ನಮ್ಮ ಜಾತಿ. ಇಲ್ಲಿ ಕನ್ನಡೇತರನೇ ಹೊರಜಾತಿಯವನು. ಕನ್ನಡಿಗರದೆಲ್ಲ ಒಂದೇ ಜಾತಿ. ಇದನ್ನು ಮರೆಯಬೇಡಿ. ಇದೇ ನಮ್ಮ ಏಳ್ಗೆಗೆ ಕಾರಣಾವಾಗಬಲ್ಲದು, ಬೇರೊಂದಲ್ಲ.

ಅನಿಸಿಕೆಗಳು ಸಾತ್ವಿಕವಾಗಿರಲಿ.

Anonymous ಅಂತಾರೆ...

ಛಲೋ ಸುದ್ದೀ ತಂದೀರಿ!! ಎರ್ಡ್ ವರ್ಷದ ಹಿಂದ Lufthansa ದೊಳಗ "ಬೆಂಗಳೂರು" ಅಂಥ German Air Hostess ಹೇಳಿದಾಗ ಭಾಳ ಖುಶಿಯಾಗಿತ್ತು.

ಇದನ್ನೆಲ್ಲಾ ನೋಡಿ ನಮ್ಮ ಮಂದಿ ಯಾವಾಗ ಕಲೀತಾರೋ ಎನೋ. ಮೊನ್ನೆ Airtelಲ್ಲಿಗೆ ಫೋನ್ ಮಾಡ್ದ್ಯಾಗ "ಕನ್ನಡದಲ್ಲಿ ಸೇವೆ"ಗೆ ೧ ಒತ್ತಿ ಅಂದ್ರು. ೧ ಒತ್ತಿದ್ರ ಆ ಕಡೆ ಇಂಗ್ಲೀಷ್ನಾಗ ಮಾತು. ನಮ್ಮ ರಾಷ್ಟ್ರೀಕೃತ ಬ್ಯಾಂಕ ನೋಡ್ರಿ..ಬರೇ ಇಂಗ್ಲೀಷ ಇಲ್ಲಾ ಹಿಂದೀಯೊಳಗ ಚಲನ್ ಮತ್ತ ಅರ್ಜಿ ಫಾರ್ಮ ಕೊಡ್ತಾರ. ಬರೇ ಕನ್ನಡ ಬರವ್ರಿಗೆ ಯಾದೋ ಬ್ಯಾರೆ ದೇಶಕ್ಕ ಹೋದಂಗ ಆಕ್ಕೇತಿ.

Anonymous ಅಂತಾರೆ...

ಸಿಂಗಪುರ್‍ ಏರ್‍ಲೈನ್ಸಲ್ಲಿ ಈ facility ಇರುವುದು ಕೇಳಿ ಬಹಲ ಸಂತೋಷಾ ಆಯುತು.

ನನಗ ಕನ್ನಡ ಸರಿಯಗಿ ಬರೆಯಲಿಕ್ಕೆ ಬರವದಿಲ್ಲ. ನಮ್ಮ representation ಆ ಕಡೆ ಇದೆ ಅಂತ ತಿಳಿದು ಖುಶಿ ಆಯತು.

thanks.

I too have noticed this in Singapore Airlines. They serve good south Indian food too. We can watch Tamil movies, I could not find any Kannada movie.

Anonymous ಅಂತಾರೆ...

good article

Anonymous ಅಂತಾರೆ...

ayyo guru, hindinsarti illige barbekadre lufthansa airlines ge dooravani maadide. ticket book madsbekittu. nanu kannadadalli matadi anta kannadadalle helide....adu avlige artha adru avlu english nalle utra kotlu. kannadadalli adre matadalla andlu (avl!@#$%^). blore nalle booking office itkondu kannada matadalla andre yenmosa guru :((! ade airlines navru netherlands nalli dutch nalli matadtare...france nalli french matadtare - idu experience agide nange. hotte uriyatte siva....baritini nanu customer service ge....adyaak kannadadalli matadalla naanu nodtini...
kushi agiddu andre swiss air booking office nalli 4 varsha hinde obru lady estu chennagi kannadadalli matadidru gotta.....ahahahaha kushi aytu kanri...bere airlines navrige enu roga?
inti,
deepak

Anonymous ಅಂತಾರೆ...

olle suddi .. agaage heege olle suddi keltaa idre berayavarigu email maadaNa ansatte ..

nidhi

Anonymous ಅಂತಾರೆ...

Guru bidlilla guru email madide lufthansa avrige...avra reply nodma guru :)....

It is with great regret we read of your dissatisfaction with the treatment you received from our call centre agent when you contacted the Bangalore office. We have been informed that several agents in our Bangalore office do speak the local language and we regret that we could not assist you in Kannada on this occasion.

Friendliness and helpfulness are fundamental to Lufthansa’s corporate philosophy and we were very disappointed to read that our efforts in this regard were not borne out on this occasion. Please accept our sincerest apologies for any discomfort this may have caused you.

We have forwarded your comments regarding the languages spoken at our Bangalore office to our head office for further internal handling and possible improvement in the future.

We greatly appreciate your custom with Lufthansa and we hope this unfortunate experience will not prevent us welcoming you on board one of our flights again soon. We assure you that we will do our utmost to make certain that your future flights with us proceed as comfortably as possible.

inti,
deepak

giri ಅಂತಾರೆ...

hi all,
was happy to read the article and was pleased to know that singapore airlines has provided that facility,would also like to mention that indian airlines has the same facility of inflight entertainment in kannada (at least one kannada channel will be there in the inflingt entertainment). the safety demonstration can also be done in kannada there should be enough demand for that.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails