"ಬೆಳಗಾವಿಯನ್ನು ಬೆಳಗಾಂ ಅಂತಾನೇ ಕರೀಬೇಕು ಅಂತ" ಇವತ್ತಿನ ಡೆಕ್ಕನ್ ಹೆರಾಲ್ಡನ ೨೧/೮/೨೦೦೭ ಮುಖಪುಟದಲ್ಲಿ ಹಾಕಿದ್ದಾರೆ. ಏನೇ ಹೇಳಿ ಕೇಂದ್ರದಲ್ಲಿ ಲಾಬಿ ಮಾಡೋ ವಿಷಯಕ್ಕೆ ಬಂದರೆ ಮರಾಠಿಗರ ಒಗ್ಗಟ್ಟು ನಿಜಕ್ಕೂ ಬಲಶಾಲೀನೆ.
ನಮ್ಮ ನಾಯಕರಗಳ ಕಂಬಿ ಇಲ್ದ ರೈಲು
ಸುವರ್ಣ ಕರ್ನಾಟಕದ ಆಚರಣೆ ಸಂದರ್ಭದಲ್ಲಿ, ತಪ್ಪು ತಪ್ಪಾಗಿ ನಮ್ಮ ಊರುಗಳ್ನ ಕರೆಯುತ್ತಿದ್ದದ್ನ ಸರಿ ಮಾಡಕ್ಕೆ ೧೨ ಊರುಗಳ ಹೆಸರುಗಳ ಬದಲಾವಣೆ ಮಾಡೋ ಮನ್ಸ್ ಮಾಡ್ತು ನಮ್ ಸರ್ಕಾರ. ಅದಷ್ಟ್ ಸುಲಭಾನಾ? ಒಂದು ವಾರದಲ್ಲಿ ಮಾಡಿಬಿಡ್ತೀವಿ ಅಂತ ನಮ್ಮ ನಾಯಕರುಗಳು ಕಿವಿ ಮೇಲೆ ಹೂ ಇಟ್ಟರೇ ವಿನಹ ಬೇರೆ ಏನೂ ಮಾಡಲಿಲ್ಲ. ಈಗ ಒಂದೂಮುಕ್ಕಾಲು ವರ್ಷದ ಮೇಲೆ ಬೆಳಗಾವಿಯ ಹೆಸರನ್ನು ಬಿಟ್ಟು ಉಳಿದ ೧೧ ಊರುಗಳ ಹೆಸರುಗಳನ್ನು ಬದಲಾಯಿಸಿಕೊಳ್ಳಬಹುದು ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ಮಜಾ ಅಂದ್ರೆ ಬೆಳಗಾವಿ ಹೆಸರು ಯಾಕೆ ಕೇಂದ್ರ ಬೇಡ ಅನ್ತು ಅನ್ನೋ ಕಾರಣ ಖುದ್ದು ನಮ್ಮ ಮುಖ್ಯಮಂತ್ರಿಗಳಿಗೂ ಗೊತ್ತಿಲ್ವಂತೆ. ಆದ್ರು ನಾವು ನಮ್ಮ ನಿರ್ಧಾರದಲ್ಲಿ ಮುಂದುವರೆಯುತ್ತೇವೆ ಅಂತ ಹೇಳೋದು ನೋಡಿದ್ರೆ ನಗು ಬರುತ್ತೆ, ಹಾಗ್ ಇದ್ದಿದ್ರೆ ಯಾಕೆ 1 ವರ್ಷ 9 ತಿಂಗಳೂ ಕೇಂದ್ರದ ಒಪ್ಪಿಗೆಗೆ ಕಾಯಬೇಕಿತ್ತು ಅಂತ ಪ್ರಶ್ನೆ ಬರೋಲ್ವಾ?
ನಮ್ಮ ಜುಟ್ಟು ಕೇಂದ್ರದ ಕೈನಲ್ಲಿ
ಕಳೆದ ವಾರ ನಾವು ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷ ಆಯಿತು ಅಂತ ಬಾವುಟ ಹಾರಿಸಿ, ಚಪ್ಪಾಳೆ ತಟ್ಟಿ, ಸಿಹಿ ತಿಂದ್ವಿ. ಆದ್ರೆ ಈಗ ನಮ್ಮೂರ್ ಹೆಸ್ರು ಬದಲಾಯಿಸಿಕೊಳ್ಳೋ ಅಷ್ಟೂ ಸ್ವಾತಂತ್ರ ಹೊಂದಿಲ್ಲ ಅನ್ನೋದು ಸ್ವಾತಂತ್ರ ಅನ್ನೋ ಪದದ ಸಖತ್ ವಿಡಂಬನೆ ಅಲ್ವಾ ಗುರು?
ಇದೊಂದೇ ವಿಷ್ಯಾ ಅಲ್ಲಾ, ನಿಮ್ಮೂರಿನ ಕೆರೆ ಹೂಳೆತ್ತಕ್ಕೆ, ನಿಮ್ ಮಕ್ಕಳಿಗೆ ಏನು ಪಾಠ ಮಾಡ್ಬೇಕು ಅಂತ ತೀರ್ಮಾನ ಮಾಡಕ್ಕೆ, ನಿಮ್ಮ ವಿಮಾನ ನಿಲ್ದಾಣಕ್ಕೆ ನಿಮಗೆ ಬೇಕಾದ ಹೆಸ್ರಿಡಕ್ಕೆ...ಹೀಗೆ ತುಂಬಾ ವಿಷ್ಯಗಳಲ್ಲಿ ನಮಗೆ ಕೇಂದ್ರ ಸರ್ಕಾರದ್ ಒಪ್ಪಿಗೆ ಬೇಕು. ಅಷ್ಟೊಂದು ಸ್ವಾಯತ್ತತೆ (ಒಳಸ್ವಾತಂತ್ರ) ನಮಗಿದೆ. ಇದನ್ನೆಲ್ಲಾ ನೋಡಿದರೆ ನಮಗೆ ಸ್ವಾತಂತ್ರ ಬಂದಿಲ್ಲ, ಬಂದಿರೋದು ಕೇವಲ ಬ್ರಿಟಿಷರಿಂದ ಬಿಡುಗಡೆ ಮಾತ್ರ ಅಂತ ಅನ್ಸಲ್ವಾ ಗುರೂ?
ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್‍ಕರೆಂಟ್ ಪಟ್ಟಿ ಅಂತ ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ, ಆದರೆ ಈಗಿನ ವ್ಯವಸ್ಥೆಯಲ್ಲಿ ಬೇಕಾದ ಹಾಗೂ ಬೇಡವಾದ ವಿಷಯಗಳಲ್ಲೆಲ್ಲಾ ನಾವು ಕೇಂದ್ರದ ಹಿಡಿತದಲ್ಲಿಯೇ.
ಹೋಗ್ಲಿ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅಂದ್ರೂ, ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ನೊಡ್ತಾರೆ ಅಂದ್ರೆ ಇವತ್ತಿಗೂ ನಾವು ಇನ್ನೊಬ್ಬರ ಅಧೀನವೇ ಅಲ್ವಾ ಗುರು?
ಒಟ್ಟಿನಲ್ಲಿ ನಮ್ಮ ಊರುಗಳ ಹೆಸರನ್ನು ಸರಿಪಡಿಸುವ ಕನಿಷ್ಠ ಸ್ವಾತಂತ್ರ ಕೂಡ ನಮಗಿನ್ನೂ ಸಿಕ್ಕಿಲ್ಲ ಅಂತ ಇದರ ಅರ್ಥ ಅಲ್ವಾ?

5 ಅನಿಸಿಕೆಗಳು:
ಇದೇ ಘಟನೆ ಒಂದ್ವೇಳೆ ತಮಿಳು ನಾಡ್ನಲ್ಲಿ ನಡ್ದಿದ್ರೆ ಎಣಗ್ಳು ಉರುಳಿ ಓಗ್ತಿದ್ವು. ಭಾಷೆ, ಸಂಸ್ಕೃತಿ ವಿಷ್ಯದಲ್ಲಿ ಯಾವ್ದನ್ನೂ ರಾಜಿ ಮಾಡ್ಕೊಳಲ್ಲ ಅವ್ರು. "ಕನ್ನಡಿಗರು ಸಹನಶೀಲರು, ಗುಣ ಗ್ರಾಹಿಗಳು..." ಅನ್ನೋ ಮಾತು ಕೇಳಿ ಕೇಳಿ ವಾಕರಿಕೆ ಬಂದಿದೆ. ಈಗ ನಮಗಿರೋ ಒಂದು ಆಶಾಕಿರಣ ಅಂದ್ರೆ ಕ.ರ.ವೇ ಅವ್ರು. ಇಂತಹಾ ಅನೇಕ ವಿಷ್ಯಗಳಿಗೆ ಅವ್ರು ಓರಾಟ ಮಾಡಿದ್ದಾರೆ. ಕ.ರ.ವೇ ಇನ್ನಷ್ಟು ಬಲಿಷ್ಠವಾಗ್ಬೇಕು. ಇಂತಾ ವಿಷ್ಯದಲ್ಲಿ ಯಾರ್ ಮುಕಾ ಮೂತಿ ನೋಡ್ದೆ, ಯಾವ್ ನನ್ಮಗ ಏನ್ಬೇಕಾದ್ರೂ ಅಂದ್ಕೊಳ್ಳಿ ಅಂತ ಜಿದ್ದಿನಿಂದ ಹೊಡೆದಾಡ್ಬೇಕು...
-ಅಳ್ಳಿಮುಕ್ಕ
ಈ ನಿಟ್ಟ್ಟಲ್ಲೇ ನಾವು ನಮ್ಮದೇ ಆದ ರೀತಿಯ ಹೋರಾಟ ಮಾಡ್ಬೇಕು ಅಂದ್ರೆ ಬೆಳಗಾವಿ ಬಿಟ್ಟು ಇನ್ನ್ಯಾವ ಹೆಸ್ರಿಂದ್ಲೂ ಕರಿಯೋದು ಬೇಡ ಆ ಊರನ್ನ.. ಯಾರಾದ್ರು belgaum ಅಂತ ಕೇಳ್ದ್ರೆ ಏನದು ಅಥ್ವಾ ಯಾವ ಊರೋ ಗೊತ್ತಾಗ್ಲಿಲ್ಲ ಅಂತ ಹೇಳ್ಬೇಕು.. ಇದೇ ಮುಂದುವರೆದಾಗ "ಓ! ಈ ಊರಿನ ಹೆಸರು ನಿಜವಾಗ್ಲೂ ಬೆಳಗಾವಿಯೇ" ಅಂತ ಮನವರಿಕೆ ಆಗತ್ತೆ ಈ ಕೆಂದ್ರದವರಿಗೆ. ದುರಾದ್ರುಷ್ಟ ದಿಂದ ನಮ್ಮ ಊರುಗಳ ಹೆಸ್ರುಗಳನ್ನ ಬದಲು ಮಾಡಕ್ಕೆ ಈ ಕಂತ್ರಿ ಕೇಂದ್ರದೌವ್ರನ್ನ ಕೇಳ್ಬೇಕು! ಸರಿ ನಾವು ತೋರ್ಸಣ ಬಿಡಿ ಹೀಗೆ ನಮ್ಮ ಬುದ್ಧಿವಂತಿಕೆನ.. ಏನಂತೀರ?
ನಮಸ್ಕಾರ ಗುರುಗಳಿಗೆ,
ನೀವಾ ನೋಡಾಕತ್ತಿರಲ್ಲಾ,, ಬೆಳಗಾವಿ ಹೆಸರ ಚೇಂಜ್ ಮಾಡುದಿಲ್ಲ ಅಂತ ಕೇಂದ್ರದವರ ಅಂದ್ರ ನಮ್ಮ ಬಾಯಿಸತ್ತಿರು ರಾಜಕಾರಣಿಗೊಳು ಎನಾರ್ ಕಮಕ್-ಕಿಮಕ್ ಅಂದ್ರಾ ಅವನೌನ್..? ಅವರಿಗೆಲ್ಲ ತಯಾರ ಆಗಿ ಚೈನಾ ಪ್ರವಾಸ ಮಾಡುದ ಹತ್ತೆತಿ,, ಇಂತ ಮಂಗ್ಯಾ ಸೂ.. ಮಕ್ಕಳ ಕೈಲೆ ನಮ್ಮ ಕರ್ನಾಟಕ ಉದ್ಧಾರ್ ಆಕ್ಕೆತಿ ಅಂತ ನೀರೀಕ್ಷೆ ಮಾಡತೆವಲ್ಲ ,, ನಮ್ಮ ಚಪ್ಪಲ್ ತಗೊಂಡ ನಾವ ಹೊಡ್ಕೊಬೇಕ್ ನೋಡ್ರಿ.. ದಳಾ ಹೋಗಿ ಬಿ.ಜೆ.ಪಿ ಸರ್ಕಾರ ಬಂತು ಅಂದ್ರ,, ಆಮ್ಯಾಲ್ ನೋಡ್ರಿ ನೀವು,, ಉತ್ತರ ಭಾರತದ ಬನಿಯಾಗೊಳಿಗೆ ನಮ್ಮ ನೆಲ, ಜಲಾನ ಅರ್ಧಾ ರೇಟಿಗ ಮಾರಿ ಕೈ ತೊಳಕೊತಾರ್. ಬ್ರಿಟಿಶರ ಕೈಯಾಗಿಂದ ಬಿಡಸಕೊಂಡ್ ಕೇಂದ್ರದ ಕೈಯಾಗ್ ಸಿಕ್ಕೊಂಡಿದ್ದು ಒಂತರ ಊದುದ ಕೊಟ್ಟ ಬಾರಸುದ ತಗೊಂಡಗ ಆತ ನೊಡ್ರಿ..
ಸರಿ ಹೋಯ್ತು.!!
ಇವೊತ್ತು ನಮ್ಮ ಉಪಮುಕ್ಯಮಂತ್ರಿ ಅವರ ಹೇಳಿಕೆಯನ್ನು ಕನ್ನಡಪ್ರಬದಾಗೆ ನೋಡ್ರಿ.
ಹಿಂಗೇ ನಾವು ಎಲ್ಲರನ್ನು ತೆಲೆ ಮೇಲೆ ಕೂರಿಸಿಕೊಂಡು ಕೆಟ್ಟವು.
ಮುಂಬಯಿ, ಚನ್ನೈಗಳಿಕೆ ಕೇಂದ್ರೆ ಸರಕಾರ ಒಪ್ಪಿಗೆ ಕೊಡಕ್ಕೆ ಮುಂಚೆಯೇ ಅವರು ಹೆಸರು ಬದಲಾಯಿಸಿಬಿಟ್ರು.
ಇದಕ್ಕೆ ಬೆಳಗಾವಿ ಮಂದಿ ಇನ್ನೂ ಏನೂ ಅಂದೇ ಇರೋದು ಯಾಕೋ?
ಇದನ್ನ ಇಷ್ಟಕ್ಕೆ, ಇಲ್ಲಿಗೇ ಬಿಡ್ಬಾರ್ದು ಗುರು, ಬೆಳಗಾವಿ "ಬೆಳಗಾವಿ" ಆಗೋವರ್ಗೂ ನಾವು ಹೋಗಿ ಕೇಳ್ತಾನೇ ಇರ್ಬೇಕು .... ಅಥ್ವಾ ನಮ್ ಪಾಡ್ಗೆ ನಾವು ಅದನ್ನ ಬೆಳ್ಗಾವಿ ಅಂತ ಕರ್ಕೊತಾ ಇರ್ಬೇಕು ... ಕನ್ನಡದವ್ರು ಯಾವತ್ತೂ ಬೆಳ್ಗಾಂ ಅನ್ಬಾರ್ದು, ಯಾರಾದ್ರೂ ಅಂದ್ರೆ "ಯಾವ್ ಊರದು" ಅನ್ನೋ ಹಾಗ್ ಮಾಡ್ಬೇಕು. ಈ ನಮ್ ರಾಜ್ಕಾರ್ಣಿಗಳ್ಗೆ ತಲೆ ಸರಿ ಮಾಡ್ಬೇಕು!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!