ವಲಸಿಗರಿಗೆ ಕನ್ನಡ ಕಲಿಸದೇ ಇರುವುದು ನಮ್ಮ ಏಳ್ಗೆಗೇ ಮಾರಕ

ಮೊನ್-ಮೊನ್ನೆ ಡೆಕನ್ ಹೆರಾಲ್ಡಲ್ಲಿ ಕನ್ನಡದ ಕಲಿಕೆ ಹೇಗೆ ಕನ್ನಡ ಬರದೇ ಇರೋರ ಮನೆಮನೆಗೆ ತಲುಪ್ತಾ ಇದೆ ಅಂತ ಒಂದು ವರದಿ ಬಂದಿತ್ತು. ನಿಧಾನವಾಗಾದರೂ ವಲಸಿಗರಿಗೆ ಕನ್ನಡ ಕಲಿಸಬೇಕು ಅನ್ನೋ ಬುದ್ಧಿ ಕನ್ನಡ ಜನಾಂಗಕ್ಕೆ ಬರ್ತಿರೋದು ಬಹಳ ಒಳ್ಳೇದು ಗುರು! ಈ ವಿಷ್ಯಕ್ಕೆ ಕೊಡಬೇಕಾದ ಗೌರವ ಇಲ್ಲೀವರೆಗೆ ಕನ್ನಡಿಗರು ಕೊಟ್ಟಿಲ್ದೇ ಇರೋದ್ರಿಂದ ಸಕ್ಕತ್ ಕಷ್ಟಕ್ಕೆ ಸಿಕಾಕೊಂಡಿದೀವಿ! ಆದ್ರಿಂದ ಇದನ್ನ ಒಸಿ ಬೂದ್ಗಾಜ್ ಇಟ್ಟು ನೋಡ್ಮ.

ವಲಸಿಗರು ಸ್ಥಳೀಯ ಭಾಷೆ ಕಲೀದೇ ಇರೋದು ನಾಡಿನ ಏಳ್ಗೆಗೆ ಮಾರಕ

ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಟಲಿ, ಯಾಕೆ ಇಡೀ ಯೂರೋಪು, ಇನ್ನು ಈಕಡೆ ಇಸ್ರೇಲು - ಇವೆಲ್ಲ ಪ್ರಪಂಚದಲ್ಲಿ ಸಕ್ಕತ್ ಬೆಳ್ವಣಿಗೆ ಹೊಂದಿರೋ ದೇಶಗಳು. ಇವುಗಳ್ಗೆಲ್ಲ ಕಾಮನ್ನಾಗಿರೋ ಇನ್ನೊಂದು ವಿಷ್ಯ ಏನು ಅಂದ್ರೆ - ಇಲ್ಲೆಲ್ಲ ಜೀವನದ ಎಲ್ಲಾ ಹಂತಗಳಲ್ಲೂ, ಕೆಲಸಗಳಲ್ಲೂ ಸ್ಥಳೀಯ ಭಾಷೆಗಳ್ನೇ ಬಳಸ್ತಾರೆ. ಸಮಾಜದಲ್ಲಿ ಎಲ್ಲಾ ವ್ಯವಹಾರಗಳಷ್ಟೇ ಅಲ್ಲ, ಎಲ್ಲಾ ರೀತಿಯ ಉನ್ನತ ಶಿಕ್ಷಣ (ಇಂಜಿನಿಯರಿಂಗು, ಮೆಡಿಕಲ್ಲು ಕೂಡ) ಮತ್ತು ಉದ್ಯೋಗಗಳು - ಇದ್ಯಾವ್ದೂ ಔರೌರ ಭಾಷೇಲಲ್ದೆ ಬೇರೆ ಒಂದು ಭಾಷೇಲಿ ಮಾಡಬೇಕು ಅನ್ನೋ ಕೆಟ್ಟ ಯೋಚನೇನ ಔರು ಮನಸ್ಸಿಗೇ ತಂದ್ಕೊಂಡಿಲ್ಲ! ಒಟ್ನಲ್ಲಿ ಇವುಗಳ ಏಳ್ಗೆಗೆ ಇವುಗಳು ತಂತಮ್ಮ ಭಾಷೆಗಳ್ನ ಚೆನ್ನಾಗಿ "ಇಟ್ಕೊಂಡ್" ಇರೋದು ಬಹಳ ಮುಖ್ಯವಾದ ಕಾರಣ ಅನ್ನೋದು ಸ್ಪಷ್ಟ.

ಈ ದೇಶಗಳಿಗೂ ವಲಸಿಗರು ಬರದೆ ಏನಿಲ್ಲ. ಆದರೆ ಇವುಗಳಲ್ಲಿ ಅಲ್ಲಲ್ಲೀ ಭಾಷೆ ಕಲೀದೆ ವಲಸಿಗರ್ಗೆ ಬದುಕೋದೇ ಕಷ್ಟ ಅಂತ ನಿಮಗೆ ಗೊತ್ತಿದ್ಯಾ? ಅಲ್ಲಿಗೆ ಹೋಗೋ ಜನ ಅಲ್ಲಲ್ಲೀ ಭಾಷೆ ಕಲ್ತೇ ಕಲೀತಾರೆ. ಯಾಕೆ? ಯಕೇಂದ್ರೆ ಅಲ್ಲೀ ಜನ (ಸರ್ಕಾರಾನೂ ಸೇರಿದಂತೆ) ತಂತಮ್ಮ ಭಾಷೆಗಳ್ನ ಅಷ್ಟು ಗೌರವಿಸಿ, ಅದನ್ನ ಕಲೀದೇ ಇರೋರು ಒಳಗೆ ಬಂದ್ರೆ ಔರು ನಿಧಾನವಾಗಿ ಸ್ಥಳೀಯರಲ್ಲಿ "ಒಬ್ಬರಾ"ಗದೆ ಅವರದೇ "ರಾಜ್ಯ" ಮಾಡ್ಕೊಳಕ್ಕೆ ಶುರು ಮಾಡ್ತಾರೆ ಅನ್ನೋದ್ನ ಅರ್ಥ ಮಾಡ್ಕೊಂಡಿರೋದೇ ಮುಖ್ಯವಾದ ಕಾರಣ.

ಇದನ್ನ ನಾವೂ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ನಾವೇ ಸರ್ವನಾಶ ಆಗಿಹೋಗೋಂಥಾ ಪರಿಸ್ಥಿತಿ ಇವತ್ತು ನಮ್ಮ ಮುಂದೆ ಐತೆ ಗುರು!

ಇವತ್ತಿನ ದಿನ ಬೆಂಗ್ಳೂರಲ್ಲಿ (ಮತ್ತು ನಿಧಾನವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮುಂತಾದ ಜಾಗಗಳಲ್ಲಿ) ವಲಸಿಗ್ರು ಬಂದು ಕನ್ನಡವನ್ನೇ ಮೂಲೆಗುಂಪು ಮಾಡಕ್ಕೆ ಹೊರ್ಟಿರೋದಕ್ಕೆ ನಮ್ಮ ಪೆದ್ದತನಾನೇ ಕಾರಣ, ನಮ್ಮ ಅತಿಯಾದ ವಿನಯಶೀಲತೇನೇ ಕಾರಣ ಗುರು! ಇದು ಹೀಗೇ ಮುಂದುವರೆದರೆ ಕನ್ನಡನಾಡು ಕನ್ನಡಿಗರದಾಗಿ ಉಳೀದೆ ಹಿಂದಿಯೋರ್ದೋ ತಮಿಳ್ರುದೋ ತೆಲುಗ್ರುದೋ ಬಂಗಾಳಿಗಳ್ದೋ ಆಗಿ ಚೂರುಚೂರಾಗೋಗತ್ತೆ ಗುರು. ಇದರಿಂದ ಕನ್ನಡಿಗರು ಸರ್ವನಾಶ ಆಗೋಗ್ತಾರೆ ಗುರು!

ಇದ್ನ ತಡೆಗಟ್ಟಕ್ಕೆ ಸರ್ಕಾರ ಮಾಡ್ಬೇಕಾಗಿರೋದು

ಇದನ್ನ ತಡೆಗಟ್ಟೋ ಕೆಲಸವನ್ನ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಸರಿಯಾಗಿ ಮಾಡ್ಕೊಂಡ್ ಹೋದ್ರೆ ಕನ್ನಡಕ್ಕೆ (ಮತ್ತು ಅದರ ಮೂಲಕ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ) ನಿಜವಾದ ರಕ್ಷಣೆ ಕೊಟ್ಟಂಗಾಗತ್ತೆ ಗುರು.

ನಮ್ಮ ಸರ್ಕಾರ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲೀಲೇಬೇಕು ಅನ್ನೋ ನಿಯಮ ಮಾಡ್ಬೇಕು. ವಲಸಿಗರು ಕನ್ನಡಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಕಡೆಗಣಿಸಕ್ಕೆ ಬಿಡಬಾರದು (CBSE/ICSE ನೌರು ಇದ್ನ ಸಕ್ಕತ್ತಾಗಿ ಕಲ್ತಿದಾರೆ!). ಹಾಗೇ ಕನ್ನಡದಲ್ಲಿ ಮಾತ್ರ ಸರ್ಕಾರದ ಯಾವುದೇ ಇಲಾಖೆ ಜೊತೆ ಸುಲಭವಾಗಿ ವ್ಯವಹಾರ ಮಾಡಕ್ಕಾಗೋದು ಅನ್ನೋ ವ್ಯವಸ್ಥೆ ಜಾರಿಗೆ ತರ್ಬೇಕು. ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡವಿಲ್ದೆ ಬದುಕಕ್ಕೇ ಕಷ್ಟ ಅನ್ನೋ ದಿನ ಬರ್ಬೇಕು ಗುರು. ಇದರಿಂದ ವಲಸಿಗರ್ಗೆ ಕಷ್ಟ ಕೊಡಬೇಕು ಅನ್ನೋದು ಉದ್ದೇಶವಾಗಿರಬಾರದು, ನಮಗೆ - ಅಂದ್ರೆ ಕನ್ನಡಿಗರಿಗೆ ಒಳ್ಳೇದಾಗಬೇಕು ಅನ್ನೋದೇ ಉದ್ದೇಶವಾಗಿರ್ಬೇಕು. ಕನ್ನಡನಾಡಲ್ಲಿ ವಲಸಿಗರಿಗೆ ಹೂವಿನ ಹಾಸಿಗೆ ಹಾಸಿಕೊಟ್ಟು ಕನ್ನಡಿಗರ್ನೇ ಮುಳ್ಳ ಮೇಲೆ ಬಿದ್ದುಗೊಳ್ಳಿ ಅಂತ ಹೇಳ್ತಿರೋ ಇವತ್ತಿನ ವ್ಯವಸ್ಥೇನ ಬದಲಾಯಿಸಬೇಕು ಗುರು!

ನಾವು-ನೀವು ಮಾಡಬೇಕಾಗಿರೋದು

ನಾಡಿನ ಏಳ್ಗೆಗಾಗಿ ಇನ್ನೇನು ಮಾಡದೇ ಹೋದರೂ ನಾವು ಹೊರಗಿನೋರ್ನ ಕನ್ನಡದಲ್ಲಿ ಮಾತಾಡಿಸೋದಕ್ಕಾದರೂ ಪ್ರಯತ್ನ ಪಡಬೋದಲ್ಲ? ಇದರ ಮೂಲಕಾನೇ ಕನ್ನಡ ಕಲಿಸಬೋದಲ್ಲ? ಎಷ್ಟೇ ಆದರೂ ಔರಿಗೂ ಅಕ್ಕ-ಪಕ್ಕ ಕೇಳಿ ಸೊಲ್ಪ ಕನ್ನಡ ಬಂದೇ ಬರ್ತಿರತ್ತೆ. ಔರ್ನ ಕನ್ನಡದಲ್ಲಿ ಮಾತಾಡ್ಸೋ ಪ್ರಯತ್ನ ಮಾಡದೆ ಔರೌರ್ನ ಔರೌರ್ ಭಾಷೇಲೇ ಮಾತಾಡಿಸ್ತೀವಲ್ಲ, ಅದೇ ನಾವು ಮಾಡೋ ಮೊದಲನೇ ತಪ್ಪು. ಇದ್ನ ತಿದ್ಕೋಬೇಕು ಗುರು. ಮೊದ್ಲಿಂದ್ಲೇ ಕನ್ನಡಾನ ನಾವು ಬಿಟ್ಕೊಟ್ಬುಟ್ರೆ ಔರಿಗೆ ಮೊದಲನೇ ಸೆಕೆಂಡಿಂದಾನೇ "ಓಹೋ ಇವರಿಗೇ ಕನ್ನಡ ಬೇಡ!" ಅನ್ನಿಸಿಬಿಡುತ್ತೆ. ಹೀಗಾಗಬಾರ್ದು.

ಹಾಗೇ ಕನ್ನಡ ಕಲ್ಸೋದನ್ನ ಕನ್ನಡಿಗರು "ಸಮಾಜಸೇವೆ" ಅಂತ ಯೋಚ್ನೆ ಮಾಡ್ದೆ ಅದನ್ನ ಒಂದು ಉದ್ಯಮ ಅಂತ ತೊಗೋಬೇಕು. ಇದೊಂದು ಹಳೇ ರೋಗ. ಕನ್ನಡಕ್ಕೆ ಸಂಬಂಧಪಟ್ಟಿದ್ದೆಲ್ಲ "ಸೇವೆ" ಅಂದ್ಕೊಳೋ ಅವಷ್ಯಕತೇನೇ ಇಲ್ಲ. ಇದೂ ಒಂದು ಉದ್ಯಮ. ಇದರಲ್ಲಿ ಸಕ್ಕತ್ ದುಡ್ಡಿದೆ ಗುರು! ಅಲ್ಲ - ಅದೆಲ್ಲಿಂದ್ಲೋ ಪ್ಯಾರಿಸ್ಸಿಂದ (Alliance Francaise), ಬರ್ಲಿನ್ನಿಂದ (Goethe Institut - Max Mueller Bhavan) ಬಂದು ನಮ್ಗೇ ಬೇರೆ ದೇಶಗಳ ಭಾಷೆ ಕಲಿಸ್ತಾ ಇರುವಾಗ ಕನ್ನಡನಾಡಲ್ಲೇ ಕನ್ನಡ ಕಲಿಸೋದನ್ನ ಒಂದು ಉದ್ಯಮ ಮಾಡ್ಕೊಂಡು ದುಡ್ಡು ಮಾಡ್ಕೊಳೋ ಯೋಗ್ತೇನೂ ನಮ್ಗೆ ಇಲ್ವಾ? ಖಂಡಿತ ಇದೆ ಗುರು!

ಇನ್ನು ನಮ್ಮ ನಮ್ಮ ಕಂಪನಿಗಳಲ್ಲಿ ಕನ್ನಡ-ಕಲಿ ಕಾರ್ಯಕ್ರಮಗಳ್ನ ನಡಿಸಕ್ಕೆ ಸಹಾಯ ಮಾಡಬೇಕು. ಮ್ಯಾನೇಜ್ಮೆಂಟಿನೋರು ಒಪ್ಪಲ್ಲ ಅಂತ ಮೊದಲಿಂದ್ಲೇ ಕೈಕಟ್ಟಿ ಕೂತ್ಕೋಬಾರ್ದು. [ಬನವಾಸಿ ಬಳಗದಿಂದ ಕನ್ನಡ-ಕಲಿ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ನೆರವು ಬೇಕಾಗಿದ್ದರೆ ನಮಗೆ ಕೂಡ್ಲೆ ಮಿಂಚಿಸಿ.]

9 ಅನಿಸಿಕೆಗಳು:

Anonymous ಅಂತಾರೆ...

Aa deccan herald suddi odi tumba kushi aaytu. (http://www.deccanherald.com/Content/Aug182007/metrosat2007081719718.asp). namma "enguru" vati yinda avarigondu prashamse patra kaLisibidi.

Padma narayan ra abhimaana mechchabeku.

Nidhi

Tarale Seena ಅಂತಾರೆ...

All Shiva, Kendra Sarkari soole makkalu namma naadinalli namage bekada hesaridale anumati koduttilla, ee bevarsigalu Kannada kalisoke naavu yatna maadidhare biduttara bolimakkalu?

Bhashe mele dayavittu kshame irali!

P K Bhat ಅಂತಾರೆ...

ನಮ್ಮ ಸಂಸ್ಥೆಯಲ್ಲಿ ಕಳೆದ ೩ ವರ್ಷದಿಂದ (ಸೆಪ್ಟೆಂಬರ್ ೨೦೦೪) ಪರ ಬಾಷಿಕರಿಗೆ ಕನ್ನಡವನ್ನು ಕಲಿಸುತ್ತಿದೀವಿ. ಪ್ರಾರಂಬದಲ್ಲಿ ಸ್ವಲ್ಪ ಕಷ್ಟ ವಾದರು ನಂತರ ಸುಗಮವಾಗಿ ಸಾಗಿದೆ. ಕಳೆದ ಬಾರಿಯಂತು ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಕನ್ನಡ ಕಲಿ ಕಾರ್ಯಕ್ರಮದಲ್ಲಿ ಪಾಲ್ಗೊಂದಿದ್ದರು.
ಕನ್ನಡ ಕಲಿಯಲು ಬಹಳಶ್ಟು ಜನ ಆಸಕ್ತರಿದ್ದಾರೆ. ನಾವು ಹೊಸ batch ಶುರುವಾಗುತ್ತೆಂದು ಹೇಳಿ ಏರಡು ಮೂರು ದಿನಗಳಲ್ಲಿ ೫೦ ರಿಂದ ೬೦ ಸಂಖೆಯಶ್ಟು ಜನ ಬರುತ್ತಾರೆ.ಮತ್ತೆ ನಾವುಗಳು ಕಷ್ಟ ಪಡಬೇಕಿಲ್ಲ. ನಾವು ಹುಟ್ಟಿನ್ನಿಂದ ಮಾತಾಡುತ್ತಿರುವುದನ್ನು ಅವರಿಗೆ ಹೇಳಿ ಕೊಡಬೇಕು ಅಷ್ಟೆ.

Anonymous ಅಂತಾರೆ...

hora raajyagaLinda baro bevarsigaLige oddu kannaDa kalisabeku guru. ildidre inmele karnatakadalli badukabeku andre deshada 14 bhaashegaLannoo kaliyo paristhiti barutte nodu..

kelavu tingaLugaLa hinde city market na KPN travels ge hogiddaaga tamil nalle vyavaharisidaru. kannada maataadi andiddakke allina clerk, javaana aadiyaagi illi kannaDa yaarigoo barolla yendu tamil nalli heLidaru.

innondu watch angadiyalli namma mitrarobbaru kannaDa maataaDi andiddakke allina turukaru avanige kapaalakke hoDedu kaLisiddaru.

idenguru bengluru yaava rajyakke seriddu anta nimgenadru gotta??

Anonymous ಅಂತಾರೆ...

Ranga avre,

ee turukaru karnatakadalli kannaDavannu maatanaaduvudilla. adenu rogavo avarige gottilla. Ramzaan, id-milad modalaada habbagaLige Chandana TV vaahiniyalli ee turukaru kaaNisikolluttare. alli avaru maatanaaDuvudu bari Urdu athava Hindi.

modalu Urdu shaalegaLannu muchchisabeku nodi namma sarkaaradavru. nantara tamiL, telugu shaalegaLannoo muchisabeku.
CBSE navrenu Thames neeru kuDidu bandavra?? CBSE nalli KannaDa heLikoDalla andre adannoo muchisabeku ashte.

Anonymous ಅಂತಾರೆ...

ನೀವು ಹೇಳೋದು ಖರೇ ಐತಿ. ತಮಿಳ್ನಾಡಿನ್ಯಾಗ ಶೇ.೮೫ಕ್ಕಿಂತ ಹೆಚ್ಚು ತಮಿಳರು ಇದ್ರೂ ಅಲ್ಲಿ ನೋಡ್ರಿ ಹೆಂಗ ತಮಿಳನ್ನ ಕಡ್ಡಾಯ ಮಾಡ್ಯಾರ: - http://www.hindu.com/2007/08/24/stories/2007082460410800.htm.

ತಮಿಳು ಕಲೀಲಿಲ್ಲಾ ಅಂದ್ರ ಜಾಗಾ ಖಾಲಿ ಮಾಡಬೇಕಲ್ಲೆ. ನಮ್ಮ ರಾಜ್ಯದಾಗ ಕನ್ನಡ ಕಲಸಬಾರ್ದ್ ಅನ್ನವ್ರು ತಮ್ಮ ಮಕ್ಕಳ್ನ ICSE/CBSE ಸಾಲಿಗೆ ಹಾಕ್ತಾರ!!

Rohith B R ಅಂತಾರೆ...

ರಂಗ ಮತ್ತೆ ಮೋಹನ್ ಅವ್ರೆ, ನೀವು ಹೇಳುವ ಮಾತುಗಳಲ್ಲಿ ಒಂದು ಅಂಶ ನಿಜ - ನಮ್ಮ ನಾಡಿನಲ್ಲಿ ಮುಸ್ಲಿಮರು ಕನ್ನಡ ಮಾತಾಡಲು ಹಿಂಜರಿಯುತ್ತಾರೆ. ನಾನು ಮುಸ್ಲಿಮನಲ್ಲ, ಆದರೆ ನನಗೆ ಏನ್ ಅನ್ಸತ್ತೆ ಅಂದ್ರೆ - ಇದು ಇತರ ಕನ್ನಡಿಗರಿಗೆ ಹೋಲಿಸಿದರೆ ಹೇಗೆ ಭಿನ್ನ ಹೇಳಿ? ಇದರಲ್ಲಿ ಜಾತಿಯ ಮಾತು ನಾವೂ ಆಡಿದರೆ ನಮಗೂ ನಮ್ಮ ಸರ್ಕಾರಕ್ಕೂ ಏನು ವ್ಯತ್ಯಾಸ ಉಳ್ಯಲ್ಲ.. ನಮ್ಮ ರಾಜ್ಯದ ಕಚಡ ಸರ್ಕಾರ ಇದುವರೆಗೂ ಎಂತವು ಬಂದಿವೆ ಎಂದರೆ ಅವೆಲ್ಲವೂ ಜನರನ್ನು ಜಾತಿಯ ಆಧಾರದ ಮೇಲೆ ಒಡೆದು, ನಾವು ಸೆಕ್ಯುಲರ್ ಅಂತೆಲ್ಲ ಸುಳ್ಳ್-ಬೊಗಳಿ ನಮ್ಮನ್ನೆಲ್ಲ ಮೋಸ ಮಾಡ್ತಿದಾರೆ.. ಮುಸ್ಲಿಮರ ವೋಟು ಪಡೆಯೋಕ್ಕೆ ನಮ್ಮ ರಾಜ್ಯದ ಎಲ್ಲಾ ಸರ್ಕಾರಗಳು ಅವರಿಗೆ ಉರ್ದು ವ್ಯವಸ್ಥೆಗಳನ್ನು ಮಾಡಿಸಿ ಕೊಟ್ಟು ಅವರಲ್ಲಿ ಕನ್ನಡ ಉಳಿಯದೇ ಇರೋ ಹಾಗೆ ಮಾಡಿ, ಅವರ ವೋಟು ಪಡೆದು ಅವರಲ್ಲೆಲ್ಲಾ ಕನ್ನಡವ್ನು ಕಿತ್ತು-ಹಾಕಿದ್ದಾರೆ. ಹೀಗೇ ವೋಟಿಗಾಗಿ ಕನ್ನಡವನ್ನು ಹೇಗೆಲ್ಲಾ ಬಲಿ ನೀಡಿದ್ದಾರೆ - ಹೀಗಿರುವಾಗ ನಾವು ನಮ್ಮೆಲ್ಲರ ನಡುವೆ ಬಿರುಕಿಗೆ ಸ್ಕೋಪ್ ಕೊಡೋದು ಬೇಡ ಅನ್ಸತ್ತೆ, ಅದರ ಬದಲು ಇನ್ನು ಮುಂದೆ ನಮ್ಮ ಮಧ್ಯೆ ಕನ್ನಡ-ಪರ ಸರ್ಕಾರ ಬರೋ ಹಾಗೆ ಒತ್ತಾಯಿಸಬೇಕು/ಯತ್ನಿಸಬೇಕು ಅನ್ಸತ್ತೆ.. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ನಾಡಿನ ನೆಲದ ಮೇಲೆ ಕನ್ನಡವೇ ಭಾಷೆ, ಕನ್ನಡವೇ ಜಾತಿ ಆಗಿರ್ಬೇಕು. ಏನಂತೀರ ಗೆಳೆಯರೆ?

Anonymous ಅಂತಾರೆ...

Sumsumke yavare,
noDi ee 'raashtra' (drohi?) paksha Congress ee turukara mata bank gaagi prativarsha Urdu shaalegaLige anudhaana, adu idu anta kodutte. adannella nillisabeku. baree kannaDa shaalegaLannu maatra protsaahisabeku.

Anonymous ಅಂತಾರೆ...

naavu namma samste (symphony) yalli KK shuru madidvi. eega modalane batch nalli sumaru 25 jana kannada kalitha iddare. nange anso hage thumba janakke kannada kaliyo ase ide. adre nammavare adakke thakka avakasha kodtha illa.
Matte kannada kalso udyamada bagge hecchina chintane madbeku .. - karuNaa

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails