"ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!"

ಕರ್ನಾಟಕದಲ್ಲಿ ಮೊಸರಿಗೂ ಹಿಂದೀರೋಗ ಹಿಡಿದಿರೋ ಉದಾಹರಣೆ ಇಲ್ಲಿ ನೋಡು ಗುರು (ರೋಮನ್ ಅಕ್ಷರದಲ್ಲಿ ಹಿಂದೀನ ಮೆತ್ತಗೆ ನಮ್ಮ ಮನೆಗಳಿಗೆ ತುರುಕೋ ಕೆಲಸ ಈ ಜಾಹೀರಾತು ಕೊಡೋರಷ್ಟೇ ಅಲ್ಲ, ಕೆಲವು ಪತ್ರಿಕೆಗಳೂ ಮಾಡ್ತಿವೆ. ಅದು ಬೇರೆ ವಿಷ್ಯ ಬಿಡಿ):


ಯಾರದು ತಪ್ಪು? ನೆಸ್ಲೆ ಎಷ್ಟೇ ಆದರೂ ಹೊರದೇಶದ ಕಂಪನಿ, ಅವರಿಗೇನು ಗೊತ್ತು? ಹಿಂದಿ ಹೇರಿಕೆಯನ್ನ ಒಂದು ಕಸುಬು ಮಾಡ್ಕೊಂಡಿರೋ ನಮ್ಮ ಕೇಂದ್ರಸರ್ಕಾರ, "ಬೊಂಬೆಯಾಟವಯ್ಯ, ಕರ್ನಾಟಕವೇ ಆ ಕೇಂದ್ರದವರ ಬೊಂಬೆಯಾಟವಯ್ಯ" ಅನ್ನೋ ಹಾಡಿಗೆ ಕುಣೀತಿರೋ ನಮ್ಮ ವಿಧಾನಸೌಧದ ತೂಗುತಲೆಯಪ್ಪನವರ್ಗಳು, ಕನ್ನಡಕ್ಕೆ ಬೆಂಕಿ ಬಿದ್ದಿದ್ದರೂ ಹಿಂದೀಭಕ್ತಿಯಲ್ಲಿ ತೂರಾಡ್ತಿರೋ ಕನ್ನಡದ ಜನ, ಕನ್ನಡಿಗರು ಕಂಪನಿಗಳಲ್ಲಿ ಇದ್ದರೂ ಸತ್ತಂತೆ ಕನ್ನಡದಲ್ಲಿ ಮಾತಡುವುದನ್ನೇ ಮರೆತಿರುವುದು, ನೆಸ್ಲೆಯಂಥಾ ಕಂಪನಿಗಳಲ್ಲಿ "ಛೆ! ಛೆ! ಹಿಂದಿಯಲ್ಲೇ ಜಾಹೀರಾತು ಹಾಕೋಣ, ಹಿಂದಿ ಎಷ್ಟೇ ಆದರೂ ರಾಷ್ಟ್ರಭಾಷೆ" ಅಂತ ತಪ್ಪು ತಿಳುವಳಿಕೆಯಿರೋ ಜನರು - ಇವೆಲ್ಲದರ ಕಲಸುಮೇಲೋಗರ ಕೊಳೆತು ನಾರ್ತಾ ಇರೋದಲ್ಲದೆ ಇದು ಇನ್ನೇನು ಗುರು?

ನಮ್ಮ ಕನ್ನಡ ನಾಡಲ್ಲಿ ಮುಂದೆ ಹುಟ್ಟುವ ಕನ್ನಡದ ಮಕ್ಕಳಿಗೆ ಮೊಸರು ಅಂದ್ರೆ ಏನು ಅಂತ ಗೊತ್ತಿಲ್ಲದೆ ದಹಿ ಅಂದ್ರೇನು ಅಂತ ಮಾತ್ರ ಗೊತ್ತಿರೋ ಪರಿಸ್ಥಿತಿ ಬಂದ್ರೆ ಹೆಂಗಿರತ್ತೆ ಗುರು? ಹೀಗೇ ಮುಂದುವರೆದರೆ ಮುಂದೆ ಈ ಮಕ್ಕಳು ತಾಯಂದಿರಿಗೆ "ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!" ಅಂತ ಕೇಳೋ ದಿನವೂ ಬಂದಾತು!

ನಮ್ಮ ಭಾಷೆ ಬದುಕಿರುವಾಗ್ಲೇ ಇನ್ನೊಂದು ಭಾಷೆಗೆ ಮೋರೆ ಹೋಗಿ ನಮ್ಮ ಭಾಷೆಗೆ ಎಳ್ಳು-ನೀರು ಬಿಡೋದು ಎಂತಾ ಮೂರ್ಖತನ ಅಂತ ಯೋಚನೆ ಮಾಡು ಗುರು!

ಮೊಸ್ರಿರುವಾಗ ದಹಿ ತಂದ್ ಮುಖಕ್ ಹಿಡೀತೀರಲ್ಲಾ ನಿಮಗೆ ಮೈಮೇಲೇನಾದ್ರೂ ಜ್ಞಾನ ಇದ್ಯಾ ಅಂತ ಈ ನೆಸ್ಲೆಯೋರ್ಗೆ ಕ್ಯಾಕರ್ಸ್ ಮಿಂಚೆ ಬರ್ದು, ಫೋನ್ ಹೊಡ್ದು, ಕಾಗ್ದ ಬರ್ದು, ಖುದ್ದಾಗಿ ಭೇಟಿಯಾಗಿ - ಎಲ್ಲಾ ರೀತಿಯಲ್ಲೂ ಉಗೀಬೇಕು ಗುರು! ಕರ್ನಾಟಕದಲ್ಲಿ ಮಾರಾಟ ಮಾಡಕ್ಕೆ ಕನ್ನಡದ್ ಹೊಸ ಅಂಟಿಕೆ (ಸ್ಟಿಕ್ಕರ್) ಮಾಡಿಸೋ ದುಡ್ನೂ ಉಳ್ಸಕ್ಕೆ ಹೊರ್ಟಿರೋ ನೆಸ್ಲೆಯೋರ್ಗೆ ಔರ್ ತಪ್ಪು ಗೊತ್ತಾಗೋಹಂಗ್ ಮಾಡ್ಬೇಕು ಗುರು!

32 ಅನಿಸಿಕೆಗಳು:

Anonymous ಅಂತಾರೆ...

en swamy,

Bengalurina yava hotel nalli nimge mosarode sigutte??

ella kade dahi vade athava thair vade matra sigodu.

modlu benglurina udupi hotel [kannadavaru] owners ge buddi heLi.

nave modlu sari illa. innu horaginavandenu maha

Anivaarya ಅಂತಾರೆ...

ಹೌದು, ನಂಗೂ ತಾಯಣ್ಣ ಹೇಳಿದ ಹಾಗೇ ಅನ್ನುಸ್ತು. ಇದ್ರಲ್ಲಿ ಕೊಂಕ್ ಕಂಡ್ರೆ ಏನ್ ಹೇಳ್ಬೇಕು ಗೊತ್ತಿಲ್ಲ, ಇದು ನನ್ನ ಅನುಭವದಿಂದ ಅನಿಸಿಕೆಯಷ್ಟೆ.

ಬರೀ ತೈರ್-ವಡೈ ಅಲ್ಲ, ಧೂದ್-ಪೇಡ ಗೊತ್ತು ಹಾಲಿನ ಪೇಡ ಅಂದ್ರೆ ಗೊತ್ತಾ ಗುರು? ಸಾಂಬಾರ ಗೊತ್ತು, ಹುಳಿ ಅಂದ್ರೆ ಗೊತ್ತಾ ಗುರು? ರಸಮ್ ಸಿಗುತ್ತೆ ಸಾರು ಅಂದ್ರೆ ಗೊತ್ತಿಲ್ಲ, "side item" ಅತ್ವಾ ಸಬ್ಜಿ ಸಿಗುತ್ತೆ ಪಲ್ಯ ಅಂದ್ರೆ ಗೊತ್ತಿರಲ್ಲ, ಉಪ್ಮ ಸಿಗುತ್ತೆ ಉಪ್ಪಿಟ್ಟು ಗೊತ್ತಿಲ್ಲ, ಮೆಧು ವಡ ಸಿಗುತ್ತೆ ಉದ್ದಿನ್ವಡೆ ಗೊತ್ತಿರಲ್ಲ, ವಾಂಗೀಬಾತ್ ಸಿಗುತ್ತೆ ಬದ್ನೆಕಾಯ್ಅನ್ನ ಅಂದ್ರೆ ಹಾ ಅಂತ ಬಾಯ್ ಬಿಡ್ತಾರೆ, "ಚಾಟ್" ಅಂಗಡಿಗೆ ಹೋಗ್ತೀವಿ ದಹಿ-ಪುರಿ, ಭೇಲ್ ಪುರಿ,ಪಾನಿ-ಪುರಿ ಅಂತೆಲ್ಲ ತಿಂತೀವಿ, ಯಾರಾದ್ರೂ ಮೊಸ್ರು-ಪೂರಿ ಬೇಕು ಅಂತ ಕೇಳಿದೀವಾ? ಹಪ್ಳ ಬಿಟ್ಟು ಪಾಪಡ್ ಅಂತಾರೆ, "salt and pepper" ಉಪ್ಪು-ಮೆಣ್ಸು ಅನ್ನಲ್ಲ, "paper"-ಮಸಾಲ, butter chicken ಸಿಗುತ್ತೆ, ಮಸಾಲಾ-ಪಾಪಡ್ ಸಿಗುತ್ತೆ, ಲಸ್ಸಿ ಸಿಗುತ್ತೆ ಮಜ್ಗೆ ಸಿಗಲ್ಲ, ಮಲೈ ಗೊತ್ತು ಕೆನೆ ಗೊತ್ತಿಲ್ಲ. ಚೋಲೆ-ಬತೂರೆ, ಚನ್ನಾಮಸಾಲಾ, ಕಾಜೂ ಬಫೀ, ರಸ್-ಮಲಾಯ್ .... ಹೀಗೇ ಹೋಗ್ತಾ ಇರುತ್ತೆ ಹೆಸ್ರುಗಳು ...

ಇಷ್ಟೇ ಯಾಕೆ, ರಾತ್ರಿ ಹೊತ್ ಬೆಂಗ್ಳೂರಿನ ಎಷ್ಟೊ ಹೊಟೆಲ್ಗಳಲ್ಲಿ ಧಕ್ಷಿಣ ಭಾರತದ ಊಟ ಅತ್ವಾ ತಿಂಡಿ ಸಿಗುತ್ತಾ? ಇಲ್ಲ ಗುರು, ಎಲ್ಲಾರ್ಗೂ ನಾರ್ತ್ ಇಂಡಿಯನ್ ಹುಚ್ಚು ಹಿಡ್ದಿದೆ - ಬರೀ ಪರಾಟಾ, ಮೂಲಿಕಾ ಪರಾಟಾ, ಪಾಲಕ್ ಪನ್ನೀರ್, ನಾನ್, butter-ನಾನ್, ಬೈನ್ಗನ್ ಮಸಾಲಾ, ರೋಟಿ, ಟಂಡೂರೀ, ಬಿರ್ಯಾನೀ, ಕಬಾಬ್, ರಾಜ್ಮ ಮಸಾಲಾ, ಮಖನ್-ಧಾಲ್, ಬೆಯಿಂಗನ್ಕಾ ಬರ್ತಾ, ಆಲೂ ಪಾರಾಟಾ, south Indian "ತಾಲಿ", north Indian "ತಾಲಿ" ಸಿಗೋದು ....

ಆದ್ರಿಂದ ಇಲ್ಲಿ ಬರೀ ಹಿಂದಿ ಭಾಷೆಯನ್ನ ಹಿಡ್ದು ಎಳ್ದಾಡೋದು, ಅತ್ವಾ ಬೇರೆ ಯಾರ್ನೊ ಜಾಲಾಡೊದು ಸರಿನ ಅನ್ಸುತ್ತೆ. ಇವೆಲ್ಲಾವುದ್ರಲ್ಲೊ ಇದೇ ಬದಲಾವಣೆಗಳನ್ನ ಕಾಣ್ಬೇಕಾಗುತ್ತೆ, ಆಗ್ಲೇಬೇಕು.

ಜೊತೆಗೆ, ಇಲ್ಲಿಯ ನೆಸ್ಲೆ ಅವರ ಜಾಹಿರಾತು ನೋಡಿದ್ರೆ ಅದು "coming to India" ಅಂತ ಇದೆ, ಆದ್ರಿಂದ ಇದರ scope ಏನು ಅಂತ ಗೊತ್ತಿಲ್ಲ. ಇಲ್ಲಿ ಭಾಷೆ ದಬ್ಬಾಳಿಕೆ ನಂಗೆ ಕಾಣುಸ್ಲಿಲ್ಲ, ಆದ್ರೆ ಈ ಬದಲಾವಣೆಯನ್ನ ನಮ್ಮ ಸರ್ಕಾರ ಮತ್ತು ನಾವು ತರ್ಬೇಕು. multiple language ಪ್ರಯೊಗ ತರ್ಬೇಕು. ಸಿಂಗಾಪುರದಲ್ಲಿ ನಾಲ್ಕೂ ಭಾಷೆಗಳಲ್ಲಿ ಹಾಕಿರ್ತಾರೆ, ಕ್ಯಾನಡಾದಲ್ಲಿ ಫ್ರೆಂಚ್ ಮತ್ತು ಆಂಗ್ಲದಲ್ಲಿ ಬರೀತಾರೆ, ಹೀಗೆ ಒಂದು local ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಬರೀಬೇಕಾದದ್ದು ಅವರಿಗೆ ಗೊತ್ತಾಗ್ಬೇಕು.

ಕೊನೆಗೆ, ಇಲ್ಲಿ ಬರೀ ಒಂದು ನೆಸ್ಲೆಯ ವಿಚಾರ ಮಾತಾಡ್ತಾ ಇಲ್ಲ ಅಂತ ಗೊತ್ತು ಆದ್ರಿಂದ ಬದಲಾವಣೆ ಎಲ್ಲಾ ಮೂಲೆಗಳಲ್ಲೂ ಆಗ್ಬೇಕು, ಮೊದಲು ನಮ್ಮಲ್ಲಿ ಆಗ್ಬೇಕು - ಕೆಲವೊಮ್ಮೆ ತಾಯಣ್ಣ ಹೇಳೋ ಹಾಗೆ ನಾವೆ ಸರಿ ಇಲ್ವೇನೋ ಬೇರೆಯವ್ರ್ ಬಗ್ಗೆ ಹೇಳೊದರ ಜೊತೆ ನಾವು ಬದಲಾಗ್ಬೇಕು. ಎರಡೊ ಜೊತೆಗೆ ಆಗ್ಬೇಕು.

ಯಾರೋ ನಂಗೆ ಕೇಳುದ್ರು ಅಲ್ಲಾ ರೀ ಮಿಠಾಯ್ (ಮಿಟಾಯ್, ಕೊಬ್ರಿ ಮಿಟಾಯ್, ಕಡ್ಳೆಕಾಯ್ ಮಿಟಾಯ್) ಅನ್ನಕ್ಕೆ ಕನ್ನಡದ ಪದ ಏನ್ರೀ ಅಂತ. ಆದ್ರಿಂದ ನೀವು ಹೇಳಿದ ಹಾಗೆ ಮುಂದೆ ನಾವು ನೀರನ್ನೂ ಪಾನಿ ಅಂತೀವೇನೊ, ತರ್ಕಾರಿಗೆ ಸಬ್ಜಿ ಅಂತೀವೇನೊ, ತಟ್ಟೆ ಬಿಟ್ಟು ತಾಲಿ ಅಂತೀವೇನೊ!!

ಆದ್ರಿಂದ ನಮ್ಮಲಿ ಈ ಬದಲಾವಣೆ ನಮ್ಮಲ್ಲಿ ಮೊದಲು ಬರ್ಬೇಕು ....

Anivaarya ಅಂತಾರೆ...

ನಿಮ್ಮ ತಮಾಷೆ ("ಅಮ್ಮಾ ಅಮ್ಮಾ, ಮೊಸ್ರನ್ನ ಬೇಡ, ದಹಿ-ಅನ್ನ ಹಾಕಮ್ಮ!")ಯ ಬಗ್ಗೆ ಸುಮ್ನೆ ಯೋಚುಸ್ತಾ ಇದ್ದೆ ಆಗ ಅನ್ನುಸ್ತು ... ಈಗ ದಹೀ, ಮೊಸ್ರೂ, ಕರ್ಡ್ ಎಲ್ಲಾ ಬಿಟ್ಟು ಯೋಗರ್ಟ್ ಅನ್ನೋ ಕಾಲ ಸ್ವಾಮಿ :) ಅದ್ ಬಿಡಿ ... ಇವನ್ನೆಲ್ಲಾ ಬಿಟ್ಟೂ ಬರೀ ಕಾರ್ನ್-ಫ್ಲೇಕ್ಸ್, ಪಿಜ್ಜಾ, ಬರ್ಗರ್, ನಗ್ಗೆಟ್ಸ್, ಪಾನಿನಿ, ಟಾರ್ಟಿಲ್ಲಾ, ಮಾಕರೋನಿ, ನೂಡಲ್ಸ್, ಪಾಸ್ತಾ, ಆಪಲ್-ಪೈ, ಟಾಕೊ, ಫಾಜಿಟಾ, ಸಾಲ್ಸಾ, ಬರಿಟ್ಟೊ, ಡಿಮ್ಸನ್, ಶೆಜುವಾನ್,ಯಾಂಗ್-ಝಾವ್, ಸೂಶಿ ..... ಮಣ್ಣು ಮಸೀ ಕೇಳೋ ಕಾಲಾ ಸ್ವಾಮಿ :) ಪರ್ವಾಗಿಲ್ಲಾ ಅಂತೀರಾ? :)

ಹಾಗೇ ಯೊಚುಸ್ತಾ ಹೋದ್ರೆ ಏಷ್ಟೊ ಜನ್ರುಗೆ "ಹೂಕೋಸು" ಅನ್ನಿ ಬಾಯ್ ಬಿಡ್ತಾರೆ, ಗೋಬಿ ಅನ್ನಿ "ಓಹ್ ಗೋಬಿನಾ" ಅಂತಾರೆ. ಕಡ್ಲೇಹಿಟ್ಟಿನ-ಉಂಡೆನ ಬೇಸನ್ಕಾ-ಲಡ್ಡು (ಅತ್ವಾ ಬೇಸನ್ ಲಾಡು) ಅಂತಾರೆ, ಅಜ್ವಾಯಿನ್ ಅಂದ್ರೆ ತಿಳ್ಯುತ್ತೆ ಓಮಾ ಅಂದ್ರೆ ಗೊತ್ತಾಗಲ್ಲ, ಬಸಲೆ ಸೊಪ್ಪು ಅಂದ್ರೆ ಕಣ್ ಮೇಲ್ ಹೋಗುತ್ತೆ ಸ್ಪಿನಾಚ್ ಅನ್ಬೇಕು ಇಲ್ದೇ ಇದ್ರೆ ಪಾಲಕ್ಕು ಅನ್ಬೇಕು.

ಸುಮ್ನೆ ಅನ್ನಿಸ್ತು ತಮಾಷೆಗೆ ಹೇಳ್ದೆ ಅಷ್ಟೆ, ಈಗ ಮಚ್ಚು-ಕತ್ತಿ ಮಸೀತಾ ಬರ್ಬೇಡಿ ನನ್ ಆತ್ಮೀಯ ಸ್ನೇಹಿತ್ರೆ!! :)

ಪ್ರೀತಿಯ,
ಯಾರಯ್ಯ

Rohith B R ಅಂತಾರೆ...

ಬಹಳ ಸರಿಯಾದ ಮಾತು ಹೇಳ್ದ್ರಿ ತಾಯಣ್ಣನವ್ರೆ.. ಆದ್ರೆ ಈಗ ಏನಾಗಿದೆ ಅಂದ್ರೆ, ನಮ್ಮ ಜನ ಹೊರಗಿನವರನ್ನು ತುಂಬ ನಕಲು ಮಾಡೋದು ಕಲಿತ್ ಬಿಟ್ಟಿದಾರೆ.. ಅವರ ಬಣ್ಣ, ಅವರ ವೇಷ, ಭೂಷಣ, ಅವರ ಮಾತಿನ ಶೈಲಿ, ನಡವಳಿಕೆ ಇತ್ಯಾದಿಗಳೊಡಣೆ ಅವರ ಭಾಷೆಯನ್ನೂ ನಕಲ್ಸಿದಾರೆ. ನೀವು ಹೇಳಿದ ಹಾಗೆ ಹೊರಗಿನೌವ್ರ್ನ ಸರಿ-ಪಡ್ಸೋ ಮುನ್ನ ನಮ್ಮವ್ರನ್ನೇ ಸರಿ-ಪಡ್ಸೋದಿದೆ. ನಮ್ಮವರ ಈ "ನಕಲಿ"ತನ ಇರುವ ಹಿನ್ನೆಲೆಯಲ್ಲಿ ಅವರನ್ನ ಬದಲಿಸಲು ಹೊರಗಿನವರ ಸಹಯೋಗದಿಂದ ಸುಲಭ ಆಗತ್ತೆ. ಹೊರಗಿನವ್ರು ಬಂದು "ತೊಗೊಳಪ್ಪ, ಓ ಕನ್ನಡಿಗನೆ, ಇದುವೆ ’ಮೊಸರು’, ಇದನ್ನ ನೀನು styleಆಗಿ ಮೊಸರು ಅಂತ ಕರೆ, ದಹಿ style ಪದ ಅಲ್ಲ" ಅಂತ ಹೇಳಿ ಹೋಗಲಿ, ನಾಳೆಯೇ ಊರಲ್ಲೇಲ್ಲ ಕಡೆ ಮೊಸರು-ವಡೆ ಅಂತ ಸಿಗತ್ತೆ ನಿಮ್‍ಗೆ ಹೋಟೆಲ್‍ಗಳಲ್ಲಿ. ಇದು ಒಂದು ಬಗೆಯ ಪರಿಹಾರ ಅಂತ ನನ್ನ ಅನಿಸಿಕೆ, ಏನಂತೀರ?

ಇಲ್ಲದೇ ನಮ್ಮ ಜನ್ರನ್ನೇ ಎಚ್ಚೆತ್ತಿಸಿ, ಒಟ್ಟಿಗೆ ತೈರ್- ಅಥ್ವಾ ದಹಿ-ವಡ ಇಂದ ಮೊಸರು-ವಡೆ ಕಡೆಗೆ ಹೇಗೆ ಕರೆದೊಯ್ಯುವ ಯೋಜನೆ ಇಟ್ಕೊಂಡಿದೀರ ಹೇಳಿ? ಇನ್ನ್ಯಾವ್ದಾದ್ರು ಸರಳ ಹಾಗು ಒಳ್ಳೆಯ ಯೋಜನೆ ಇದ್ಯಾ?

Anonymous ಅಂತಾರೆ...

Illi bareyuvavarantha jana namma itihasadalli iddiddare naavu inna haleganaddavanne mathaadutha kooduthiddevu.

Ondu samayavaadaru Englishna popularity bagge yochisiddira? Yaava bhaasheyannu kadeganisade ella bhaashegalindallu adu padagalannu thegedhukondu thanna asthitvavannu padedide. Namma bhaasheya ondu pada englishnalli serikondare naavu eshtu hemme padutheve!

Kannadada ee udaaratheyendale namma bhaasheyalli ondu padakke halaavaru synonyms siguthave. Samudra (sanskrit) jothe kadalu (kannada/tamil) padavu balasutheve. Chhatri (persian) jothe kode (kannada/tamil) annu balesutheve. Halaavaru intha udaaharane kodabahudu. Idarinda namma bhaashe innashtu shreemanthike hondide. Mosarina jothe yogurt matte dahi serikondare adaralli thappenu? Nimma argument prakaara hodare, kadalu haagu samudra iverudu uliyuvudakke avakaashave illa.

Naavu Hinglish, Kanglish antha enannuthevo avugalu janapriyavaadare, adaralli thappenilla. Bhaasheyu samparkada maadhyama. Aa guri saadhisidare ashte saaku.

Eegina makkalige Shakespeare (hale english) anna odalikke kashta endu hosa english na pustakagalu haagu comics bandive. Idaralli thappenilla. Shakespeare annu oduva janaru kammiyu aagilla.

Kannadalli tomato, train, munthaduvakke nanna thiluvalikeyalli bere padagalilla. Adannu huttisuvudu thapilladdidaru agathyavu illa.

Illiya ellarigu "The meme concept of language" odalikke prothsahisuthene.

Anonymous ಅಂತಾರೆ...

GurugaLe,
illi neevu heLiruva samasye, "Anivaariah" navaru heLiruva samasyegaLu bahaLashtu bhaashaa sookshmagaLannu torisuttave.

MTR,Annapoorna, Sun pure modalaada companygaLu sthaleeya bhaashegaLalli mudrisiruvaaga bere companygaLige yeke saadhyavaaguvudilla? idara bagge naavu companyge minchisi pratibhatisabeku..

innu 'Anivaarya' ru heLiruva samasyegaLu bahaLa mukhyavaadavu, avugaLannella hege saripaDisuvudu?

pizza, masala poori, parota, car, bus, auto, bycycle ivugaLige kannaDa padagaLiveye? hosa hosa padagalannu serisikondu taane ondu bhaashe beLeyabeku? idakkella yenu parihaara? yelliya kone?? intaha hosa padgaLannella kannaDeekarisi, kannaDa shabdha bhanDaarakke serisuvudu yaara hoNe?

chintakaru vuttarisi.

Anonymous ಅಂತಾರೆ...

ಅಯ್ಯಾ ಸ್ಯಾಡ್ ಕನ್ನಡಿಗ!

ಪ್ರಶ್ನೆ ಹೊಸ ಪದಗಳನ್ನು ಸೇರಿಸಿಕೊಳ್ಳಬಹುದೋ ಬೇಡವೋ ಎನ್ನುವುದಲ್ಲ. ಖಂಡಿತ ಹೊಸ ಪದಗಳನ್ನು ಕನ್ನಡಕ್ಕೆ ಸೇರಿಸಿಕೊಳ್ಳುವುದು ಸರಿಯೇ. ಸೇರಿಸಿಕೊಳ್ಳಬೇಡಿ ಎಂದು ಯಾರೂ ಹೇಳಲಿಲ್ಲವಲ್ಲ? ಸುಮ್ಮನೆ ಸಂಬಂಧವಿಲ್ಲದ ಮಾತು ಆಡಬೇಡಿ.

ಇಲ್ಲಿ ಯಾವ ಪದದ ಬಾಲಕ್ಕೆ ಕೋಟಿಗಟ್ಟಲೆ ರೂಪಾಯಿ ಕಟ್ಟುತ್ತೀರಿ ಎನ್ನುವುದು ಪ್ರಶ್ನೆ. ದಹಿ ಎನ್ನುವುದಕ್ಕೋ ಮೊಸರು ಎನ್ನುವುದಕ್ಕೋ?

ಮೊಸರು ಎಂದು ಹಾಕಿದರೆ ಅದರಲ್ಲಿ ತಪ್ಪೇನಾದರೂ ಇದೆಯಾ ಹೇಳಿ? ಮೊಸರು ಅನ್ನುವ ಪದ ಇಂತಹ ಪದಾರ್ಥಗಳ ಮೇಲೆ ಬರೆದಿದ್ದರೆ ನಿಮಗೇನು ದೊಡ್ರೋಗ?

ನಿಮ್ಮಂತೆ ನಮ್ಮದೆಲ್ಲವನ್ನೂ ಬಿಟ್ಟುಕೊಟ್ಟರೂ ಏನೂ ಪರವಾಗಿಲ್ಲ ಎಂದು ವಾದಿಸುವವರಿಂದಲೇ ಕನ್ನಡಕ್ಕೆ ಇವತ್ತು ತೊಂದರೆ ಬಂದಿರುವುದು.

ಸ್ವಲ್ಪ ಯೋಚನೆ ಮಾಡಿ ಆಮೇಲೆ ಬರೆಯಿರಿ.

Anonymous ಅಂತಾರೆ...

ಸ್ಯಾಡ್ ಕನ್ನಡಿಗರು ಸ್ವಲ್ಪ ಇಲ್ಲಿ ಕೇಳಿ:

ಭಾಷೆ ಕೇವಲ ಸಂಪರ್ಕ-ಮಾಧ್ಯಮ ಅಲ್ಲ. ಅದು ಸಹಕಾರದ ಮಾಧ್ಯಮವೂ ಹೌದು. ಸಂಪರ್ಕಕ್ಕೆ ಮಾತ್ರ ಮೀಸಲಾಗಿಟ್ಟರೆ ಅದು ನಾಯಿ-ನರಿಗಳಲ್ಲಿ ಈಗಾಗಲೇ ಇದೆ. ಸಹಕಾರದಿಂದಲೇ ಇವತ್ತಿನ ದಿನ ಮನುಷ್ಯ ತನ್ನ ಸಾಧನೆಗಳನ್ನು ಮಾಡಲಾಗಿರುವುದು. ಇದನ್ನು ಮರೆಯಬೇಡಿ.

ಕನ್ನಡಿಗರು ಸಹಕರಿಸಬೇಕಾದರೆ ಅದು ಕನ್ನಡದಲ್ಲೇ ಸಾಧ್ಯ, ಅದು ಕನ್ನಡದಲ್ಲೇ ಸಹಜ, ಅದು ಕನ್ನಡದಲ್ಲೇ ಸುಲಭ, ಅದು ಕನ್ನಡದಲ್ಲೇ ಹೆಚ್ಚು ಪರಿಣಾಮಕಾರಿ.

Anonymous ಅಂತಾರೆ...

Jagga, Ravi

Idu charche. Horaatada maidanavalla. Aadarinda thaalme!

Modalige, bhaasheya padagala mele bele kattuvudu nanage arthavaguvudilla. Dahi antha pada baredidakke naale mosarina balake ninthu hoguvudilla. Antaha eshtu padagalu beku. Namma uttara karnataka (Hubballi) manegalalli nashta, sabji, bhaandi (paatre), aravi (batte) munthaada shabdagalannu halavaaru warshagalinda prayogisuthideve. Idarinda adara naamarthagalige thondare enu aagilla.

Ravi, nimage bhaasheya meliruvashtu preethi jeevanada itara vasthugala mele kooda irali (hora raajya, deshadavarannu serisi) endu haaraisuthene. Nanage bhaashe samparkada maadhyama bittu hechhenu alla. Adarinda naanu yaava uddharavannu padeyalikke horatilla. Kannadavannu eshtu preethisutheneyo ashte hindi, sanskrit, English, Urdu haagu French annu preethisuthene. Ella bhaashegalinda nanna gnaana innashtu hechhagide. Ivella bhaasheyalli maathuduva snehitharu nanna bali iddare (sanskrit bittu). Adarinda nanna jeevana innashtu belagide. Bhaashegala aadharavillade naanu kannadigaranne snehitharannagi madikolluva paristhiti baruthittu.

Anonymous ಅಂತಾರೆ...

ಭಾಷೆಯ ಪದಗಳಿಗೆ ಬೆಲೆ ಕಟ್ಟುವುದು ನಿಮಗೆ ಅರ್ಥವಾಗದಿದ್ದರೆ ದಯವಿಟ್ಟು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಿ.

ಇಲ್ಲಿ ಪ್ರಶ್ನೆ ದಹಿ ಎನ್ನುವುದರ ಬಗ್ಗೆಯೇ ಹೊರತು ನೀವು ಕೊಟ್ಟಿರುವ ಬೇರೆ ಪದಗಳ ಬಗ್ಗೆ ಅಲ್ಲ. ದಹಿ ಎಂದು ಯಾವ ಕನ್ನಡಿಗ ಹೇಳುತ್ತಾನೆ? ಮೊಸರು ಎನ್ನುವ ಪದ ಇರುವಾಗ ಅದನ್ನು ಬಿಟ್ಟು ದಹಿ ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ.

ಇದರಿಂದ "ಮೊಸರು" ಪದದ ಬಳಕೆ ನಿಂತುಹೋಗುವುದಿಲ್ಲ ಎಂದು ನೀವು ತಿಳಿದುಕೊಂಡಿರುವುದು ತಪ್ಪು. "ಮೊಸರು" ಪದದ ಬಳಕೆ ಈ ಒಂದು ನೆಸ್ಲೆಯವರು ಮಾರಾಟಮಾಡುವ ಮೊಸರಿನಿಂದಂತೂ ನಿಂತುಹೋಗುತ್ತದೆ ತಾನೆ? ನಿಜವಾದ ಮೊಸರಿನ ಮೇಲೆ ಇಲ್ಲದ "ಮೊಸರು" ಎಂಬ ಪದ ಯಾವ ಪುಸ್ತಕದಲ್ಲಿ, ಯಾವ ಸಾಹಿತಿಯ ಕಾಡು-ಹರಟೆಯಲ್ಲಿ ಇದ್ದರೇನು ಬಿಟ್ಟರೇನು?!

ಈ ನಿಂತುಹೋಗುವಿಕೆಯ ಹನಿಗಳು ಕೂಡಿ ಕೂಡಿ ದೊಡ್ಡ ಕಡಲಾಗಕೂಡದು ತಾನೆ? ಆದ್ದರಿಂದಲೇ ಈ ಹುನ್ನಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

Anonymous ಅಂತಾರೆ...

ಅಪ್ಪಾ ಸ್ಯಾಡಪ್ಪ ಕನ್ನಡಿಗಪ್ಪ!

ನಿಮಗೆ ಭಾಷೆ ಬರೀ ಸಂಪರ್ಕದ ಮಾಧ್ಯಮ ಎನ್ನುವುದಷ್ಟೇ ಆದರೆ ಮೊದಲನೆಯದಾಗಿ ನಿಮಗೆ "ತಂಡಗಾರಿಕೆ" ಅಥವಾ "teamwork" ಎನ್ನುವುದರ ಅರ್ಥವೇ ಗೊತ್ತಿಲ್ಲ, ಬಿಡಿ. ಇನ್ನು ನಿಮ್ಮಂಥವರೊಡನೆ ಇಡೀ ಕನ್ನಡನಾಡೇ ಒಗ್ಗೂಡಿ ಏಳ್ಗೆಗಾಗಿ ದುಡಿಯುವ ಬಗ್ಗೆಯ ಮಾತಾಡುವುದೇ ದಂಡ!

ಇಲ್ಲಿ ಕರ್ನಾಟಕದ ಏಳ್ಗೆಯ ಬಗ್ಗೆ ಮಾತಾಡುತ್ತಿರುವಾಗಲೂ, ಕನ್ನಡ ಜನಾಂಗದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೂ ತುಚ್ಛವಾಗಿ "ನನಗೆ ಇವುಗಳಿಂದ ಏನೂ ಆಗಬೇಕಿಲ್ಲ" ಎನ್ನುವ ವಾದ ಮಾಡುವ ನಿಮಗೆ ಏನು ಹೇಳಿದರೇನು, ಬಿಟ್ಟರೇನು? ನಿಮ್ಮ ಒಂದು ದೇಹವನ್ನು ಬಿಟ್ಟು ಹೊರಗಡೆಯ ಪ್ರಪಂಚದ ಬಗ್ಗೆ ಯಾವಾಗ ನಿಮಗೆ ಕಾಳಜಿ ಬರುತ್ತದೆಯೋ ಆಗ ತಿರುಗಿ ಬಂದು ಇಲ್ಲಿ ಮಾತನಾಡಿ.

ಇನ್ನು ನಿಮ್ಮ ಬೇರೆಭಾಷೆಗಳ ಪ್ರೀತಿ ಯಾವ ದೊಡ್ಡಸ್ತಿಕೆಯ ವಿಷಯವೂ ಅಲ್ಲ. ನನಗೂ ನೀವು ಹೇಳುವ ಭಾಷೆಗಳ ಬಗ್ಗೆ ಪ್ರೀತಿಯಿದೆ, ಅವುಗಳಲ್ಲಿ ಮಾತನಾಡುವ ಗೆಳೆಯ/ಗೆಳತಿಯರಿದ್ದಾರೆ, ಅವುಗಳನ್ನು ಬಲ್ಲವನೂ ಆಗಿದ್ದೇನೆ (ಆದರೆ ಫ್ರೆಂಚ್ ಬದಲು ಸ್ಪ್ಯಾನಿಷ್). ಆದರೆ ಕನ್ನಡಕ್ಕೆ ನಾನು ಮಾಡಲೇಬೇಕಾದ ಕರ್ತವ್ಯಗಳಿವೆ. ಅದನ್ನು ನಾನು ಮರೆತು ದೊಡ್ಡ ದೊಡ್ಡ ಮಾತನ್ನು ಆಡುತ್ತಿಲ್ಲ, ಅಷ್ಟೆ.

ಇನ್ನು ಜೀವನದ ಇತರ ವಸ್ತುಗಳ ಬಗ್ಗೆ ನನಗಿರುವ ಪ್ರೀತಿಯ ಬಗ್ಗೆ ನಿಮಗೆ ಕಾಳಜಿಯಿರುವುದು ಸಂತೋಷ. ಅದು ಸಾಕಷ್ಟೇ ಇದೆ, ಬಿಡಿ!

Anonymous ಅಂತಾರೆ...

"Namma uttara karnataka (Hubballi) manegalalli nashta, sabji, bhaandi (paatre), aravi (batte) munthaada shabdagalannu halavaaru warshagalinda prayogisuthideve"


ಆಹಾ ಏನ್ ಮಾತು ಅಂತ ಆಡ್ತೀರಿ.. ನೀವು ಉತ್ರ ಕರ್ನಾಟಕದೋರು ಅಂತ ಹಿಂದಿ ತಂದು ಬರೆಸಿದ್ರೂ ನಾವು ಸುಮ್ನಿರಬೇಕಾ?

ಅಲ್ರೀ ಯಾಕೆ ನಿಮಗೇಏ ಯಾವಾಗಲೂ ಉತ್ರ, ದಕ್ಸಿಣ ಅಂತ ಸುರುವಾಗೋದು.

ಇಲ್ಲಿ ಯಾರಾರ ಉತ್ರ, ದಕ್ಷಿಣ ಅಂತ ಮಾತಾಡ್ತಾ ಇದ್ದಾರ?


ಕನ್ನಡದಾಗೆ ಕನ್ನಡದ್ದೇ ಪದಗೊಳ ಇರಬೇಕು. ನಮಗೆ ಹಿಂದಿಯೂ ಬೇಡ, ಮರಾಠಿಯೂ ಬೇಡ, ಸಂಸ್ಕೃತವೂ ಬೇಡ, ಇಂಗಲೀಸೂ ಬೇಡ.

ಒಂದು ವೇಳೆ ಇಲ್ಲ ಅಂದ್ರೆ ತಗೊಂಡ್ರಾಯಿತು.ಇರೋದನ್ನ ಯಾಕೆ ಬಿಡಬೇಕು?

ಈಗ ಅಮ್ಮ ಅನ್ನಕ್ಕೆ ಮಮ್ಮಿ, ಮಾ, ಮಾತೆ, ಮದರು ಎಲ್ಲ ಅವೆ. ಅಂತ ನಾಳೇ ಕನ್ನಡದಾಗೆ ಅಮ್ಮಂಗೆ ಮಮ್ಮಿ ಅಂತಾರೆ ಅಂದ್ರೆ ನ್ಯಾಯವಾ?

ಸೊಲ್ಪ ಇಲ್ಲಿ ಹೋಳೋದು ತಿಳ್ಕೊಳ್ಳೀ. ನಿಮ್ಮ ಉತ್ರ, ದಕ್ಸಿಣ ಬೇಕಾಗಿಲ್ಲ.

ಈವಯ್ಯ ತನ್ದೇ ಮಾತು ಗೆಲ್ಬೇಕು ಅಂತ, ಹಿಂಗೆ ನಾನು ಉತ್ರ ಕರ್ನಾಟಕ, ಅದಕ್ಕೆ ನಾನ್ ಹೇಳ್ತೀನಿ ಅಂತಾನ!!

ಜಗ್ಗ, ರವಿ.. ನೀವು ಎಸ್ಟು ಅಂತ ಹೇಳ್ತೀರ.. ಏಟೇ ಆದ್ರು ಅವ Sad Kannadiga, ( ಏನು ಕನ್ನಡಿಗ ಆಗಿರೊದಕ್ಕೇ ಸ್ಯಾಡೇನೋ )!!

ಇನ್ನು ಅನಿವಾರ್ಯ ಬುಡಿ.. , ಆವಯ್ಯ ಹೇಳೋದು ಯಾವಾಗಲೂ ಹೆಂಗೆಂಗೋ!

ಏನ್ಗುರು.. ಶಭಾಸ್.. ಈ ಹಿಂದಿ ಹೇರೋರ್ಗೆ ಸರಿಯಾಗಿ ಹೇಳಿದ್ದಿ

Anonymous ಅಂತಾರೆ...

Heliruva vishayavanne mattomme heluthene. Bere bhaasheya padagalu beda annuvadakkinta aa padavannu saha namma granthadalli balasutheve annuvudaralle bhaasheya hitavide. Nanage gottida mattage halegannadalli ammanige appan endu kareyuthidaru. Neevu eshte bhaasheya badalaavaneyannu thadeyalikke saadhyavilla. Mundina peeligeyavaru thamma anukulakke thakkante bhaasheyannu upayogisuthaare. Neevu kannadadalli hindiya padagala viruddha horadalikke prayathnisuthidare, hindiyavaru englishannu thadeyallike prayathnisuthidare. Bere bhaashegalu namma bhaasheya viruddha antha thilida Sanskrit haagu Latin bhaashegalige enayithu endu namage gottu. Haageye ella bhaashegala padagalannu thegethukonda Englishna udaharane namma mundide.

Obba manushya eshtanta horata maadalu saadhya? Bhaashe, jaati, desha, rajya, parivara...enisadashtu ide. Kannadavu neevu hedaridante ashtu bega mareyaaguvudilla. Aadare adara roopa nimage ishtavilladiddaru badalugathade. Adu nimage ishtavilladiddare nimmanu badige haaki beliyuthade.

Nimma uddhara bhaashyindaagalu saadhyavilla. Nimma yochaneya seemeyannu belesuvudaralli ide. Bhaashege preethiya neravu bekagilla.

Anonymous ಅಂತಾರೆ...

ade tara saaru ge rasam annodu, mosaranna kke curdrise annodu .. elladakku lakshanavagi namma hesaru bittu lemonrice, tomato rice annodu.
namma samsthe yalli iro kannadada caterers ge sumaru sala helaithu kannanada da pada eheli antha adre avarige buddi bandilla ... - karuNa

Anivaarya ಅಂತಾರೆ...

ಮಹರಾಯ "ನಿಂಗೇನು", ನಾನು ಏನಯ್ಯಾ "ಹೆಂಗೆಂಗೋ" ಹೇಳಿದೀನಿ ? ಹೆಂಗೆಂಗೋ ಅರ್ಥ ಮಾಡ್ಕೊಂಡ್ರೆ ಯಾರ್ದ್ ಗುರು ತಪ್ಪು? ಸುಮ್ನೆ ಕುದ್ರೆ ಕಡಿವಾಣ ಹಾಕ್ದಂಗೆ ಮಾತ್ ಬೇಡ, ಸ್ವಲ್ಪ ಆಚೆ ಈಚೆನೂ ನೋಡೋ ಅಭ್ಯಾಸ ಇರ್ಲಿ ... ಏನ್ಗುರು ಹೇಳೋ ಹಾಗೆ ಎಲ್ಲಾವುದಕ್ಕೂ "ಬೊಂಬೆ ಆಟವಯ್ಯಾ" ಅಂತ ತಲೆ ಅಲ್ಲಾಡುಸ್ಕೊಂಡ್ ಇರ್ಬೇಕು ಅನ್ನು? ಅತ್ವಾ ಮುಂಚೆ ಒಂದ್ ಹೇಳುದ್ರಲ್ಲ ಅದ್ರ್ ತರ "ನಾವು ತಾಳಕ್ಕೆ ತಕ್ಕಂತೆ ಕುಣ್ಯಬೇಕು"
ಅನ್ಬೇಕಾ "ಕಲಕ್ಕೆ ತಕ್ಕಂತೆ ನಡ್ಯಬೇಕು.." ಅನ್ಬೇಕಾ?

ಇವೆಲ್ಲಾ ಇದ್ದಿದ್ದೆ, ನಾನು ಹೇಗೆ ಇರ್ಬೇಕು ಅಂತ ಹೇಳಿಲ್ಲ, ಹೀಗಿದೆ ಅಂತ ಹೇಳಿದೀನಿ ಅಷ್ಟೆ, ಅದರ ಬಗ್ಗೆ ಸ್ವಲ್ಪ ಮಾತಾಡು ಗುರು.... ಪಾನಿ ಪೂರಿ, ದಹಿ-ಪುರಿ, ಕಾಜು ಬರ್ಫಿ, ಮಿಠಾಯ್, ಗೋಬೀ ಮಂಚೂರಿಯನ್, ಚನ್ನಾಮಸಾಲಾ, ರಸ್ ಮಲಾಯ್, ಪಾವ್-ಭಾಜಿ, ಲಸ್ಸಿ ..... ಮಣ್ಣೂ ಮಸಿ ಅಂತೆಲ್ಲಾ ಉಪ್ಯೋಗುಸ್ತೀವಲ್ಲಾ ಅದ್ರ್ ಬಾಗೆ ಯೋಚುಸ್ತಾ ಇದ್ದೆ ಅಷ್ಟೆ. ಅದು ಸರಿ ಅಂತ ಹೇಳಿಲ್ಲಾ. ಯೋಚ್ಸಿ ನಿಮ್ಮ ವಯ್ಯಕ್ತಿಕ ಅನಿಸಿಕೆ ಹಾಕಿ, ವ್ಯಕ್ತಿ ಧೂಷಣೆ ಬೇಡ, ಅದು ಎಲ್ಲಾರ್ಗೂ ಮಾಡಕ್ ಬರುತ್ತೆ!!!!

ನಾನು ನಮ್ಮ ಸಾಡ್ ಕನ್ನಡಿಗನ ಮಾತನ್ನ ಸಂಪೂರ್ಣವಾಗಿ ಒಪ್ಪಲ್ಲ, ಆದ್ರೆ ಅದು ಅವ್ರ್ ವಿಚಾರ, ಅವ್ರುಗೆ ಅನ್ಸಿದ್ದು ಹೇಳ್ಳೀ ಅಷ್ಟೆ. ಅವರು ಕನ್ನಡದಿಂದ ಸ್ಯಾಡೋ, ಕನ್ನಡಿಗರಿಂದ ಸ್ಯಾಡೋ, ಕನ್ನಡಿಗನಾಗಿ ಸ್ಯಾಡೋ ಅನ್ನೋದು ಅವ್ರುಗೆ ಬಿಟ್ಟಿದ್ದು.

ನಮ್ ನಮ್ ಅನಿಸಿಕೆಗಳ್ನ ಹಂಚ್ಕೊಳ್ಳೋಣ ಗುರು, ಸುಮ್ನೆ ನಂದ್ ಸರಿ, ನಿಂದ್ ಸರಿ, ಅವ್ನ್ ಹಿಂಗೆ ಇವ್ನ್ ಹಿಂಗೆ ಬೇಡ .... ವಿಚಾರದ ಮೇಲೆ ಮಾತಾಗ್ಲಿ, ವ್ಯಕ್ತಿಯ ಮೇಲಲ್ಲ ...

ವ್ಯಾಸರಾಜ ಅಂತಾರೆ...

sariyagi bardidira enguru avre.. karnatakadaali yaare enee maarbekadru kannadavanne upyogis beku ... bekadre vishayavannu bere bhasheloo print maadli aadre mukhyavagai kannada irlEbeku .....

@others : bardiro blog goo matte comments goo jaasti relations kaaNta illa .....

there are many versions of kannada ( which are influenced by marathi/hindi/telegu/tamil ) etc and the dialect varies from place to place ..... like managalore/udupi/karwar ppl have their own vocabulary and in same way hubballi/belagavi ge bere ide and raichooru/kalburgi ge ide ) ... and yaaradru bidar bhashe keLidre gottagutte avara kannada eshtu vibhinna vaagide aMta .... so we cant expect a common kannada out of every kannadiga and we have to live with all the different dialects as long as they are the showcases of that region ....

so naavella serkondu kannada da uLivu/beLavaNige ge horadabeke horatu bhaashe/regionalism jote alla .....

Anonymous ಅಂತಾರೆ...

ಅನಿವಾರ್ಯ ಅಂತೂ ತನ್ ತುತ್ತೂರಿ ನಿಲ್ಸಲ್ಲ..

ಬೇಡ ಬುಡಿ, ಕೇಳೋರ ಯಾರು!


ಈ Sad Kannadiga ಪುಲ್ ಸ್ಯಾಡೋ ಸ್ಯಾಡು. ತಾನ ಹೇಳಿದ್ದು, ಅದಕ್ಕೆ ನಲವತ್ತು ಮಂದಿ ಬಂದು ತಪ್ಪಂದ್ರು ನಂದೇ ಸರಿ ಅಂತ, ಈ ಗೋಳಿನ ಮೇಳಕ್ಕೆ 'ಪಿಡುಗು ಅನಿವಾರ್ಯ'!! :)

ಸಕ್ಕತ್ ಜೋಡಿ. ಅತ್ವ ಇಬ್ರೂ ಒಬ್ರೇನಾ?

ದೇವಾ ದೇವ! ನಾಳೆ ಕಲಗಚ್ಚನ್ನು ಇವರು rice water ಅಂದ್ರೆ ಯಾವ ಸೋಜಿಗ ಇಲ್ಲ.

ನಂಗೆ ಕನ್ನಡ ಬರಕ್ಕಿಲ್ಲ, ಆದ್ರೆ ನಾನೇ ಸಂಭೋದಿಸಿವ ಸಭ್ಯ. ಯಾಕೆ ಅಂದ್ರೆ ನಾನ್ "ಅನಿವಾರ್ಯ" ಅಂತ ಧೋರಣೆ. :)

ಬಂಡತನ ಅಂದ್ರೆ ಇದೇ!!

ಪಾಪ ಜಗ್ಗ ರವಿ, ಮೆತ್ತಗೆ ಹೇಳಿದ್ರೆ ಈವಯ್ಯರು ಕಿವಿ ಹಾಕ್ಕೊಂಡ್ರಾ? ತಮ್ ತುತ್ತೂರಿದೇ ಸಾವೇರಿ ಸರಿ ಅಂತ ನಿಂತವ್ರೇ!!

ಅಣ್ಣ ಏನ್ಗುರು.. ಒಂದ್ ರೀತಿ ನೀನ್ ಬರೆಯೋ ವಿಷಯಗಳಲ್ಲಿ, ನಮ್ ಕನ್ನಡಕ್ಕೆ ವಿಷ ಹಿಂಡೋ "ಸಂಭೋದಿಸುವವ"ರಿಗೆ ಈ ಸ್ಯಾಡು ಮತ್ತು ಅವನ ತುತ್ತೂರಿಗೆ ವಾಲಗ ಈ ಅನಿವಾರ್ಯವಾದ ಅನಿವಾರ್ಯ ಒಳ್ಳೇ ಉದಾರಣೆಗಳು!!

ನೋಡ್ರಪ್ಪ.. ಇವರಿಗಿನ್ನ ದೊಡ್ ಕನ್ನಡದೊರಿಲ್ವಂತೆ. ಊರಿಗೆಲ್ಲ ಬುದ್ದಿವಾದ ಹೇಳೋ ಮಾನ್‌ಬಾವರು.. ಕನ್ನಡ ಅಂದ್ರೆ ಇವರ ಪ್ರಾಣ. ಆದ್ರೆ ಯಾವೋನೋ ಬಂದು ಕನ್ನಡದಾಗೆ ದಹಿ ಅಂದ್ರೆ ಮೊಸರು, ಗಿಹಿ ಅಂದ್ರೆ ಗಿಣ್ಣು, ನಹಿ ಅಂದ್ರೆ ಇಲ್ಲ, ಸಹಿ ಅಂದ್ರೆ ಸರಿ , ಇಂಗೆ ನಮ್ಮ ಕನ್ನಡವನ್ನು ಕಹಿ ಕಹಿ ಮಾತಾಡೋರ ಕೆಲಸವೇ ಸೈ ಅಂತ ಇವರ ನಿಲ್ಲದ ತುತ್ತೂರಿ!!

ಅನಿವಾರ್ಯ ಹೆಂಗೆಂಗೋ ಏನು, ಏನೇನೋ ಮಾತಾಡೋದು ಉಂಟು. ಒಟ್ನಲ್ಲಿ "ನಾನೊಬ್ಬ ಸರಿ, ಊರಿಗೆಲ್ಲ ಉಪದೇಸ ಮಾಡ್ತೀನಿ, ನೀವೆಲ್ಲ ಕೇಳ್ರಿ, ನನ್ನ ತುತ್ತೂರಿ ನಿಲ್ಸಕ್ಕಿಲ್ಲ"

ಅನಿವಾರ್ಯ ಮತ್ತು ಸ್ಯಾಡ್ಗೆ ಜೈ!! :)

Anivaarya ಅಂತಾರೆ...

ತುಂಬಾ ಚೆನ್ನಾಗಿ ಹೇಳಿದ್ದೀರಾ ವ್ಯಾಸರಾಜರೆ ...

ಸ್ಥಳೀಯ ಭಾಷೆ ಮತ್ತು ಆಂಗ್ಲ ಏರ್ಡರಲ್ಲೂ ಕಡ್ಡಾಯವಾಗಿ ಇರ್ಬೇಕಾದದ್ದು ಅಂತ ಮಾಡಬೇಕು. ಕರ್ನಾಟಕಕ್ಕೆ ಬರೊ ಹೊತ್ಗೆ "coming to karnataka" ಅಂತ ಹೇಳಿ ಮೊಸ್ರು ಅಂತ ಹಾಗುದ್ರೆ ಒಳ್ಳೆದು. ನಮ್ಮ ಅನೇಕ ಕಂಪನಿಗಳು ಹೀಗೆ ಮಾಡುತ್ತಿವೆ, ಸಂತಸ ಕೊಟ್ಟಿದ್ದು ಅಂದ್ರೆ ಸಬೀನ ಅನ್ನೋ ಒಂದು ಪಾತ್ರೆ ಉಜ್ಜುವ ಪುಡಿ. ಈ ಚಿಕ್ಕ ಪಾಠವನ್ನ ನೆಸ್ಲೆ ಅಂತಹಾ ಬೃಹತ್ ಕಂಪನಿಯೊಂದು ಕಾಣದೆ ಇದ್ಯಲ್ಲ ಅಂತ ಆಶ್ಚರ್ಯವಾಯ್ತು; localization ಅನ್ನೋದು ಪ್ರತಿಯೊಂದೂ ಮಾಡಲೇ ಬೇಕಾದದ್ದು.

ಪ್ರೀತಿಯ ಸ್ಯಾಡ್ ಕನ್ನಡಿಗರೆ, ದಹಿ ಅಂದುಬಿಟ್ರೆ ಕನ್ನಡಕ್ಕೆ ಏನೂ ಆಗಲ್ಲ ಸರಿ, ಆದ್ರೆ ಮೊಸ್ರು ಅನ್ನಕ್ಕೆ ಏನ್ ಕಷ್ಟ ಅಂತ ಪ್ರಶ್ಣೆ ಅಷ್ಟೆ. ನಾವು ಹೊಸ ಹೊಸ ಪದಗಳನ್ನ ಬಳ್ಸೋಣಾ, ಆದ್ರೆ ನಮ್ಮದೇ ಇರ್ಬೇಕಾದ್ರೆ ಅದನ್ನ ಬಿಡೋದ್ ಬೇಡ ಅನ್ನೋ ವಾದ ಅಷ್ಟೆ. ಅದಕ್ಕೆ ಹೇಳಿದ್ದು ನಮಗೆ ಬಸ್ಲೆ ಸೊಪ್ಪು ಗೊತ್ತಿಲ್ಲ, ಒಂದು exampleಆಗಿ. ಈಗಾಗ್ಲೇ ನಾವು ಏಷ್ಟೋ ಪದಗಳನ್ನ, ಅವುಗಳ ಅರ್ಥಗಳನ್ನ ಕಳ್ಕೊಂಡ್ ಇದೇವೆ, ಮತ್ತೇ ಅದೇ ತಪ್ಪು ಅಗ್ಬಾರ್ದು ಅನ್ನೋ ಒಂದು ಕಾಳಜಿಯನ್ನ ಅರ್ಥ ಮಾಡ್ಕೊಬೇಕಾಗುತ್ತೆ. ಏನ್ಗುರು ವಿಷೇಷ ಅಂದ್ರೆ ಒಂದು specific problem ತೆಗೆದು ಅದರ ಬಗ್ಗೆ ಟೀಕೆ ಮಾಡಿ ಗಮನವನ್ನ general problem ಕಡೆಗೆ ಹರ್ಸೋ ಪ್ರಯತ್ನ ಮಾಡ್ತಾರೆ. ಇಲ್ಲಿ ದಹಿ ಅನ್ನೋದು ಬರೀ ನೆಪಮಾತ್ರ ಅನ್ನೋದನ್ನ ತಿಳ್ಕೋಬೇಕಾಗುತ್ತೆ.

ಚೆನ್ನಾಗಿ ಮೂಡಿಬರ್ತಾ ಇದೆ, ಹೀಗೆ ಬರ್ಲಿ, ಸಂತೋಷ.

Anonymous ಅಂತಾರೆ...

ತಾಯಣ್ಣನವರೇ,
ನಮ್ಮ ಇಂದಿನ ಪರಿಸ್ಥಿತಿ ಸರಿಯಿಲ್ಲ ಅಂತಿದೀರಾ, ನಿಜ. ಆದರೆ ಈ ಪರಿಸ್ಥಿತಿ ಸುಧಾರಿಸಬೇಕು ಅನ್ನೋದರ ಬಗ್ಗೆ ನಿಮ್ಮ ತಕರಾರು ಇಲ್ಲ ತಾನೆ?
ಹಾಗೆ ಮಾಡಬೇಕಾದರೆ ಎರಡು ಕೆಲ್ಸ ಆಗ್ಬೆಕು. ಒಂದು ಹೊರಗಿನಿಂದ ರೋಗ ಬರದ ಹಾಗೆ ತಡೆಯೋ ಬೇಲಿ ಹಾಕೋದು. ಇನ್ನೊಂದು ಒಳಗಿನ ರೋಗಕ್ಕೆ ಮದ್ದು ಕೊಡೋದು. ಒಳಗೆ ರೋಗ ಇದೆ ಅನ್ನೋ ಕಾರಣಕ್ಕೇ ಹೊರಗಿಂದ ಬರೊ ರೋಗಗಳನ್ನು ತಡೆಯೋ ಪ್ರಯತ್ನ ಮಾಡೊದೇ ತಪ್ಪು ಅಂತ ವಾದ ಮಾಡಿದರೆ ಸರಿನೋ ತಪ್ಪೋ? ಲಾಭಾನೋ ನಷ್ಟಾನೋ? ಈ ಪ್ರಶ್ನೆಗೆ ಉತ್ತರ ಯೋಚ್ಸಿ ಆಮೇಲೆ ಇನ್ನೊಮ್ಮೆ ಈ ಬ್ಲಾಗ್ ಓದಿ.
ಅನಿವಾರ್ಯನವರೇ,
ನೀವು ಕೊಟ್ಟಂತಹ ನೂರಾರು ಪದಗಳ ಉದಾಹರಣೆ ಕೊಡೋದು ಸಾಧ್ಯ. ಅದು ವಾಸ್ತವಾನೆ ಅನ್ನೋದು ನಿಜ. ನೀವು ಹೇಳುತ್ತಿರೋ ಪಟ್ತಿಯಲ್ಲಿ ಎರಡು ಬಗೆ ಇದೆ. ಮೊದಲನೆಯದು ಬೇರೆ ಬೇರೆ ಪ್ರದೇಶಗಳಲ್ಲಿನ ವಸ್ತುಗಳು ಇಲ್ಲಿಗೆ ಬರುವಾಗ ಹೆಸರಿನ ಸಮೇತ ಬರೋದು. ಅಂತಹವು ನಮ್ಮ ನಾಲಗೇಲಿ ಸರಳವಾಗಿ ಹೇಳೋಕ್ಕಾದ್ರೆ ಹಾಗೇ ಉಳ್ಕಂಡ್ ಬಿಡುತ್ವೆ ಮತ್ತು ತಪ್ಪೇನೂ ಇಲ್ಲ. ಎರಡನೇದು, ನಮ್ಮ ಪ್ರದೇಶದಲ್ಲಿಯೂ ಬಳಕೆಯಲ್ಲಿ ಆದಿಕಾಲದಿಂದ ಇರೋ ವಸ್ತುಗಳ ಹೆಸರುಗಳು. ಅವುಗಳ ಹೆಸರುಗಳನ್ನು ಬದಲಾಯಿಸಿಕೊಳ್ಳುವುದರಿಂದ ನಮ್ಮ ಪದಸಂಪತ್ತು ಸಾಯುತ್ತೆ ಅನ್ನೋದು ನಿಜ. ಬಳಕೆಯಲ್ಲಿ ಇಲ್ಲದ ಪದವನ್ನು ಬೇಕಿಲ್ಲದೆಯೇ ಬಳಕೆಗೆ ತರೋದು ಹೇರಿಕೆ ಆಗುತ್ತೆ. ಕನ್ನಡದವರು ಮನೆಗೆ ಮೊಸರು ತರಬೇಕು ಅಂತಾರ್ಯೇ ಹೊರ್ತು ದಹಿ ತರಬೇಕು ಅನ್ನಲ್ಲ. ಹೆಪ್ಪಿಗೆ ಮೊಸರು ಹೇಕು ಅಂತಾರ್ಯೆ ಹೊರತು ದಹಿ ಬೇಕು ಅಲ್ಲ. ಇದು ನಿಮಗೆ ಇಷ್ಟ ಆದ್ರೂ ಆಗ್ದೆ ಹೋದ್ರೂ ಸತ್ಯ. ಇದನ್ನು ಬದಲಾಯಿಸೋ ಯಾವುದೇ ಪ್ರಯತ್ನ ತಪ್ಪು ಅನ್ನೋದು ಈ ಲೇಖನದ ಉದ್ದೇಶ. ಇದಕ್ಕಿಂತ ಮುಖ್ಯವಾದ ಉದ್ದೇಶ ಇಲ್ಲಿ ಕನ್ನಡಾ ಬಳಸಿಲ್ಲ ಅನ್ನೋಕ್ಕಿಂತ ಕನ್ನಡ ಭಾಷೆ, ಭಾಷಿಕರ ಬಗ್ಗೆ ತೋರುಸ್ತಿರೋ ತಾತ್ಸಾರ ಭಾವನೆ ಗಮನ್ಸಿ. ಆ ಜಾಹಿರಾತನ್ನು ನಾನೂ ನೋಡಿದ್ದೇನೆ. ಅದರಲ್ಲಿ ಸ್ಪಷ್ಟವಾಗಿ ಬೆಂಗಳೂರಿಗೆ ಪರಿಚಯಿಸುತ್ತಿದ್ದೇವೆ ಅಂತಲೇ ಇದೆ.
[ ಬ್ಲಾಗ್ ನಿರ್ವಹಿಸುವವರಿಗೆ: (ದಯಮಾಡಿ ಪೂರ್ತಿ ಜಾಹಿರಾತು ಹಾಕಿದರೆ, ಈ ಗೊಂದಲವನ್ನು ನಿವಾರಿಸಬಹುದು)]
ಇನ್ನು ಹಿಂದಿ ಬಗ್ಗೆ ವಿಶೇಷವಾಗಿ ಯಾಕೆ ಬರೆಯಲಾಗುತ್ತದೆ ಅನ್ನೋ ಪ್ರಶ್ನೆಗೆ .... ಕನ್ನಡದ ಜೊತೆಗೆ ಕನ್ನಡ ಭಾಷಾ ಗುಂಪಿಗೆ ಯಾವ ರೀತಿಯಲ್ಲೂ ಹತ್ತಿರವಲ್ಲದ ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಸೇರಿಕೊಳ್ಳುತ್ತಿರುವುದು ಕನ್ನಡಿಗರ ಪಾಲಿಗೆ ಅಸಹಜವೇ ಆಗಿದೆ. ಹಾಗಾಗಿ ಅಂತಹ ಎಲ್ಲ ಪ್ರಯತ್ನಗಳನ್ನು ಖಂಡಿಸೋದು ಸರಿಯೇ ಆಗಿದೆ. ಗಮನಿಸಿ, ಕನ್ನಡಕ್ಕೆ ಈ ಭಾಷೆಗಳಿಂದ ಪದಗಳು ಬಂದಿಲ್ಲ, ಬರಬಾರದು ಅಂತ ಯಾರೂ ಹೇಳ್ತಿಲ್ಲ ಆದರೆ ಆಕ್ಷೇಪ ಇರುವುದು ನಮ್ಮಲ್ಲಿ ಬಳಕೆಯಲ್ಲಿರುವ ವಸ್ತುವಿಗೆ ಬಳಕೆಯಲ್ಲಿಲ್ಲದ ಹೆಸರನ್ನು ಜಾರಿಗೆ ತರುವ ಪ್ರಯತ್ನಗಳ ಬಗ್ಗೆ.
ಸ್ಯಾಡ್ ಕನ್ನಡಿಗರೇ,
ನಿಮ್ಮ ಹೆಚ್ಚಿನ ಪ್ರಶ್ನೆಗಳಿಗೆ ಮೇಲೇ ಉತ್ತರ ಕೊಟ್ಟಿದ್ದೀನಿ. ಆದರೆ ನಿಮಗೆ ಹೇಳಲೇ ಬೇಕಾದ ಒಂದು ಮಾತಿದೆ.
ಈ ಲೇಖನದಲ್ಲಿ ಏನು ಹೇಳಲಾಗುತ್ತಿದೆ ಎನ್ನುವುದು ನಿಮಗೆ ಅರ್ಥವಾಗಿದೆಯೋ ಅಥವಾ ಅರ್ಥವಾದರೂ ಮೊಂಡುವಾದ ಮಾಡುತ್ತಿರುವಿರೋ ಅಥವಾ ಸಮಯ ಕಳೆಯಕ್ಕೆ ಹುಡುಗಾಟ ಮಾಡುತ್ತಿದ್ದೀರೋ ಗೊತ್ತಿಲ್ಲ. ಆದರೂ ನಿಮ್ಮ ಮಾತುಗಳ ಭಾವಾರ್ಥ ದಹಿ ಎನ್ನುವುದನ್ನು ವಿರೋಧಿಸುವುದು ತಪ್ಪಲ್ಲ, ಭಾಷೆ ನನ್ನ ಪಾಲಿಗೆ ಸಂಪರ್ಕ ಮಾಧ್ಯಮ ಮಾತ್ರ ಅನ್ನುತ್ತೀರ. ಭಾಷೆ ನಿಮ್ಮ ಪಾಲಿಗೆ ಏನಾದರೂ ಆಗಿರಬಹುದು ಆದರೆ ಒಂದು ಭಾಷಾ ಜನಾಂಗಕ್ಕೆ ಅದು ಬರಿಯ ಸಂಪರ್ಕ ಮಾಧ್ಯಮ ಅಲ್ಲ ಅದು ರವಿಯವರು ಹೇಳಿದ ಹಾಗೆ ಸಹಕಾರದ ಮಾಧ್ಯಮ ಕೂಡಾ ಆಗಿದೆ. ಇದು ರವಿಯವರು ಹೇಳಿದ್ದಲ್ಲ, ಭಾಷಾ ವಿಜ್ಞಾನಿಗಳು, ವಿಜ್ಞಾನಗಳು ಹೇಳಿರುವುದು.
ಮೊಸರನ್ನು ದಹಿ ಅಂದು ಬಿಟ್ಟರೆ ಅದರ ಬಳಕೆ ನಿಂತುಹೋಗುತ್ತಾ ಅನ್ನೋದು ನಿಜಾನೆ. ಮೊಸರನ್ನು ಮೊಸರು ಅಂದ್ರೂ, ದಹಿ ಅಂದ್ರೂ, ಕೆಸರು ಅಂದ್ರೂ, ಸೆಗಣಿ ಅಂದ್ರೂ ಅದನ್ನು ಬಳಸೋ ಹಾಗೇ ಬಳುಸ್ತೀವಿ ಮತ್ತು ಅದರ ರುಚಿ ಏನು ಬದಲಾಗಲ್ಲ. ಆದರೆ ನಿಮ್ಮನ್ನು ಮನುಷ್ಯ ಅನ್ನದೇ ನಾಯಿ, ಹಂದಿ ಅಂದರೆ ನಿಮ್ಮ ಜೀವವೇನು ಹೋಗಿಬಿಡುತ್ತಾ? ಅನ್ನುವ ಹಾಗಿದೆ ನಿಮ್ಮ ವಾದ. ಸ್ವಲ್ಪ ಯೋಚಿಸಿ ವಾದ ಮಾಡಿ ಅಷ್ಟೆ.
ಗೆಳೆಯರೇ,
ಹಿಂದೆ ಸಂಸ್ಕೃತ ಪದಗಳ ಸೇರ್ಪಡೆಯಿಂದ ಸಮಾಜದಲ್ಲಿ ಉಂಟಾದ ವಿಪ್ಲವವನ್ನು ಗಮನಿಸಿ. ಸಂಸ್ಕೃತ ಬೆರೆಸಿ ಮಾತಾಡುವ ಜನ ಶ್ರೇಷ್ಟರು ಮತ್ತು ಹಾಗಲ್ಲದವರು ನಿಕೃಷ್ಟರೆಂಬ ವರ್ಗ ಹುಟ್ಟಿಕೊಂಡ ಹಾಗೆ ಕಳೆದ ಶತಮಾನದ ಕೊನೆಯ ದಶಕಗಳಿಂದ ಇಂಗ್ಲಿಷ್ ಕಲಿತವರು ಮೇಲು ಕಲಿಯದವರು ಕೀಳು ಅನ್ನುವ ಮನಸ್ಥಿತಿ (ಸಂಸ್ಕೃತ ಸತ್ತ ನಂತರ) ಹುಟ್ಟಿಕೊಂಡಿದೆ. ಇದು ಆ ಭಾಷೆಯನ್ನು ಕಲಿತವರಿಗೆ ಸಿಗುವ ಅರಿವು, ಉದ್ಯೋಗ, ಅವಕಾಶಗಳಿಂದ ದೊರಕಿರುವ ಸ್ಥಾನಮಾನ.ಆದರೆ ಇಂತಹ ಸ್ಥಾನಮಾನಗಳು ಪ್ರಪಂಚದ ಎಲ್ಲಕಡೆ ಇಂಗ್ಲಿಷ್ ಭಾಷೆಯಿಂದಲೇ ದೊರಕುತ್ತಿಲ್ಲ. ಮತ್ತು ಅದು ಜ್ಞಾನದ ಮತ್ತು ಪರಿಣಿತಿಯ ಕಾರಣದಿಂದ ದೊರಕುತ್ತಿದೆ. ಅಂತಹ ಜ್ಞಾನ ಮತ್ತು ಪರಿಣಿತಿಯನ್ನು ಆ ಜನ ಸಾಧಿಸಲು ಸಾಧ್ಯವಾಗಿರುವುದೂ ಕೂಡಾ ತಮ್ಮ ಭಾಷೆಯಲ್ಲಿ ಕಲಿತದ್ದರಿಂದಲೇ ಅನ್ನುವುದು ಸತ್ಯವಾದ ಮಾತಾಗಿದೆ. ನಾವೂ ಕೂಡಾ ನಮ್ಮೆಲ್ಲ ಕಲಿಕೆಯನ್ನು ಕನ್ನಡದಲ್ಲಿ ಮಾಡುವುದು ಸಹಜವೂ ಪರಿಣಾಮಕಾರಿಯಾದುದೂ ಆಗಿದೆ. ಆ ದಾರಿಯಲ್ಲಿ ಹೋದರೆ ಮಾತ್ರ ನಮಗೂ ವಿಶ್ವದರ್ಜೆಯ ಉತ್ಪನ್ನಗಳಾನ್ನು ತಯಾರಿಸಲು ಸಾಧ್ಯವಾಗುವುದು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಲು ಆಗುವುದು. ಇಂದು ಹಾಗೆ ಮಾಡಲು ಸಾಧ್ಯವಿಲ್ಲ ಅನ್ನೋ ಸತ್ಯವೂ ಗೊತ್ತಿದೆ ಹಾಗೆಂದು ಸೋಲೊಪ್ಪಿಕೊಂಡವರ ಗುಂಪು ಬೇರೆಯೇ ಇದೆ. ನಾವು ಇಂದು ವ್ಯವಸ್ಥೆ ಸರಿಮಾಡೊ ಈ ದಿಕ್ಕಿನಲ್ಲಿ ಅಡಿಯಿಡೋಣ ಎಂದೇ ಹೊರಟಿದ್ದೇವೆ.ಜೊತೇಲ್ ಬರ್ತೀರಾ?

ತಿಮ್ಮಯ್ಯ

Anonymous ಅಂತಾರೆ...

Anivaaryare,

Bere pradeshadinda banda kelavu vastugalannu ade hesarininda sambhodhisabekaagide. Mithai, burfi, dahi-puri hege kannaDadalli illavo haageye Japani, french athava German bhaashegaLallu illadirabahudu. innu ee nelada padagaLaada aggishtike, puliyogare muntaada padagaLannu German bhaasheyalli hudukuvudu moorkhatanavenisuttade.


aadare illi samasye taledoriruvudu, mosaru, oota modalaada achcha kannaDa padagaLiddagyoo avugaLannu bittu inyaavudo bhaasheyannu heralu horatiruvudu. idakke kaDivaaNa haakabekaagide.

Anonymous ಅಂತಾರೆ...

Ishtu varsha yaava multinational packet melu sthaleeya padagaliralilla. Ishtu varsha Curd prayog thappu annadavaru, thamma deshada bhaasheyannu upayogisuvadakke virodshisuvdu nodi aashcharyavaaguthade. Modalige, namage namma deshada bhaashegaliginta bere deshada bhaashegala oppige jaasti anta naavu oppikollabeku. My enemy's enemy is my friend na chikka udaaharane.

Illiruva eshtu mandi thamma makkalannu Kannada maadhyamadalli odisuthaare anta nanage gottilla. Haage maadidaru namage unnatha shikshanadalli kannadada yaava pusthakagalu illa. Neevu kannadadalli pusthakagalu baredu, (specifically science) adaralli nimma makallannu odisuthira antha vichaaradavariddare, nimma kanasugalige namane. Adhakke bekaada resources namalli illa. Adannnu hutissalikke neevu horatiddare, all the best!

Weekends nalli naanu Kannada, Hindi, haagu urdu bada makkalige helikoduthene. Aadarinda nanage yaava bhaasheya melu mohavilla. Dahi purige mosarina puri endu kareyuva ichheyu illa.

Anonymous ಅಂತಾರೆ...

GurugaLe, neevu yaavudo MNC yavaru dahi andru anta anteeralla, nammoorinavare aada 'Nandini' haalina jaaheeraatannu gamanisiddeera?? adu

'mooru dashakagaLalli saagaravaada ksheera dhaare' yendide..

eega heLi idakke yenu maaDutteera?

Anonymous ಅಂತಾರೆ...

ಸ್ಯಾಡು..

ನೋಡು

"Modalige, namage namma deshada bhaashegaliginta bere deshada bhaashegala oppige jaasti anta naavu oppikollabeku"

ನೀನು ಹೇಳ್ದೆ ಅಂತ ಒಪ್ಕೋ ಬೇಕಾ? ಹಾ!

"Weekends nalli naanu Kannada, Hindi, haagu urdu bada makkalige helikoduthene."

ದೇವರಾಣೆ ಹೇಳ್ತೀನಿ ಈ ವಯ್ಯ ಕನ್ನಡದ ಮಕ್ಳಿಗೆ ಹಿಂದಿ ಹೇಳಿಕೊಡ್ತಾನೆ. ಹಿಂದಿಯೊರು ಕನ್ನಡ ಕಲಿತಾರ?

"Adhakke bekaada resources namalli illa."

ನೋಡಪ್ಪ ಸರ್ವಜ್ಞ ಹೇಳ್ದ. resource ಇಲ್ವಂತೆ. weekendsಗೆ ವಾರದ ಕೊನೆ ಅನ್ನಬೋದಲ್ಲ.

ಸ್ಯಾಡು. ಹೆಂಗು ನಿಂಗೆ ಇದು ಬ್ಯಾಡ ಅಂದ್ರೆ ಯಾಕೆ ಸುಮ್ನೆ ಉರ್ಕೊಂಡು ಬರೀತೀಯ, ಅನಿವಾರ್ಯನ ರೋಗ ಬಂದೈತಾ, ವದರ್ತಾನೇ ಇರೋದು!

ಇನ್ನೂ ದಾಮೋದರ...

ಸರಿ ಏನ್ಗುರು "mooru dashakagaLalli saagaravaada ksheera dhaare'" ಇರದ ಬಗ್ಗೆ ಬರೆದಿಲ್ಲ ಸರಿ.

ನೀನೇನು ಕತ್ತೆ ಕಾಯ್ತಿರ? ನೀನೇ ಹೋಗಿ ನಂದಿನಿ ಅವರಿಗೆ ಹೇಳ್ರೀ.

ಈಗ ಏನು ಹೇಳೋದು. ನೀವು ಏನೇ ಕಡೆದು ಕಿಸಿದ್ದೀರಿ?
ಏನ್ಗರು ಇಸ್ಟನ್ನಾದ್ರು ಮಾಡ್ತೈತೆ. ನೀವೇನ್ ಮಾಡೀರಿ?

ಈ ಸಂಭೋದಿಸುವವ ಉಪದೇಸ ಬಿಗಿಯೋರ ಕಮೆಂಟುಗಳ ಇಲ್ಲಿ 'ಅನಿವಾರ್ಯವೇ'!!

ಏನ್ಗುರು ಇವನ್ನೆಲ್ಲ ಕಿತ್ತು ಹಾಕಪ್ಪ.

ಇವರು ಹೆಂಗ ಅಂದ್ರೆ ದಾರಿ ಬಿದ್ದಿರೋ ಕಲ್ಗೊಳು. ಸುಮ್ನೆ ಓಡೋರ್ಗೆಲ್ಲ ಅಡ್ಡ.

ನೀನ್ ಸಕ್ಕತ್ತಾಗಿ ಬರೀತೀಯ. ಮುಂದುವರಿಸು!!

ಈ ಸ್ಯಾಡು, ಅನಿವಾರ್ಯ, ಡಮೊಡರ್‍ ಇವರೆಲ್ಲ ಯಾಕೆ ಲೆಕ್ಕಕ್ಕೆ?

Anonymous ಅಂತಾರೆ...

ಉತ್ಕ್ರುಷ್ಟ ಲೇಖನ ಗುರು..

Anonymous ಅಂತಾರೆ...

Kannadavarige Hindi helukoduthene nija. Aadare bahalashutu bere-raajyada janarige (Hindi included) Kannada heli koduthene. Ivarellaru thamma hotte paadige bhaashe kaliyabekantha baruthare. Yaava preethiyindalla.

Eshto mandi Kannada hudugaru eega unnatha darjeya hotelnalli kelasa maduthidaare. Aa hotelgalalli English haagu Hindi barabekemba niyamavittu. Udupi hotel na eradu kaasina vetana bittu avareega saakashtu sampaayisuthidaare. Haageye Kannada kaletha Hindi hudugaru chikka hotelgalalli kelasa maduthiddare. Eega dodda hotelgalige hogi neevu Kannadavarannu yaake thegedukoluthilla endu vaadisuva shakti nannalilla.

Naanu idannu bareyuva uddesha swayam prachaarakalla. Bhaashege enu maadade bari type maduthaane endu anisi kolla baaradantha.

Naanu munche helida haage bhaasheyannu balikege horathaagi preethiya vasthuvaagi balasuvudilla. Preethi maaduvavaralli bhaashege eshtu maaduthiddare annuvudu nanage gotilla.

Anonymous ಅಂತಾರೆ...

ನಾವು ಇರೋದೇ ಹಿಂಗೆ, ನಿಂಗೇನು?

swalpa bhasheya mele kadivaNa iralai ...elubillada naalige anta sikkallella haayakka bidbeda ....



@ enguru : oLLe kelsa maadta idira ... dayaviTTu munduvaresi and pls take out all the comments which are offensive or personal attacks .... namma nammalle naavu kittadidre innu moorneyavnu yaakri namma hatra bartane .....

Anonymous ಅಂತಾರೆ...

"swalpa bhasheya mele kadivaNa iralai ...elubillada naalige anta sikkallella haayakka bidbeda ...."

ಬಿಟ್ಟಿ ಉಪದೇಸಕ್ಕೆ ದನ್ವಾದ!

ಮೊದಲು ವಿಸಯ ನೋಡಿ!

ನನ್ ಬಾಸೆ ಚಂದಾಕೇ ಐತೆ. ನಿಮಗೆ ಹಿಡಿಸಿಲಿಲ್ಲ ಅಂದ್ರೆ ಅದಕ್ಕೆ ನಾನೇನ್ ಮಾಡಲಿ.

ನಾನು ನಿಮಗೆ ಬರೆತಿಲ್ವಲ್ಲ!! :)

ನಾವು ಇರೋದೇ ಹಿಂಗೆ, ನಿಮಗಾಗಿ ( ಇಲ್ವೇ ಯಾವ ದೊಣ್ಣೆನಾಯಕನಿಗಾಗಿ ) ಬದಲಾಯಿಸಿಕೊಳ್ಳಕ್ಕೆ ಆಗಲ್ಲ.


ಏನ್ಗುರು.. ಏನಪ್ಪ ಇದು ಬಿಟ್ಟಿ ಉಪದೇಸಗಳನ್ನು ಹಾಕ್ತಾರಲ್ಲ.

ಅವನು ನಮ್ಮ "ನಂದಿನಿ" ಹಾಲೋರ ಬೋರ್ಡು ಸರಿಗಿಲ್ಲ ಏನ್ಗುರು ನೀನು ಮಾತಾಡು ಅಂತಾನೆ. ಯಾಕೆ ಅವನಿಗೆ ನಾಲಗೆ ಇಲ್ವಾ? ಅತ್ವಾ ನಾಲಗೆ ಮೇಲೆ ಕುರ ಎದ್ದದ್ದ?

Anonymous ಅಂತಾರೆ...

Lo ನಾವು ಇರೋದೇ ಹಿಂಗೆ, ನಿಂಗೇನು?

naanu noDida vishyagaLanna illi tandu ee baLagadavara hattiraidanna hege sari madbahudu anta charche maadteeni.. aadare ninu yenmadtidiya illi? kachaDa naayi thara yellara meloo bogaLta kutidiya ashte..

Rohith B R ಅಂತಾರೆ...

ಇಲ್ಲಿ ನಿಮ್ಮ್‍ನಿಮ್ಮ ಅನಿಸಿಕೆ ಹೇಳ್ಕೊಂಡಿರೋವ್ರೆಲ್ಲ್ರಿಗೂ ಇದು ತಿಳ್ದಿರ್ಲಿ: ಈ ಪೋಸ್ಟಿನಲ್ಲಿ ನೀವು ಕಂಡ ನೆಸ್ಲೆ ಅವರ ಜಾಹೀರಾತನ್ನು ಪೂರ್ತಿಯಾಗಿ ಪೇಪರ್ ನಲ್ಲಿ ನೋಡಿದರೆ ಗೊತ್ತಾಗತ್ತೆ.. ಅದು ಕೇವಲ ಬೆಂಗಳೂರನ್ನು ಉದ್ದೇಶಿಸಿ ಹಾಕಿರುವ ಜಾಹಿರಾತು.. ಬೆಂಗಳೂರಿನವಿರಿಗೆ ತಂದಿದೀವಿ ನೋಡಿ ನೆಸ್ವಿಟ-ದಹಿ ಅಂತ ಹೇಳತ್ತೆ.. ಹೋದ ವಾರದ deccan-herald ಕೊನೆಯ ಪುಟ ನೋಡಿ..
ಇದರ ಅರ್ಥ ಏನು? nestle ಅವರು ಬೆಂಗ್ಳೂರನ್ನು ಏನಂತ ತಿಳ್ದಿದಾರೆ? ಇಲ್ಲಿ ಮೊಸರಿಗೆ ಹಿಂದಿಯ ದಹಿಯೇ ಪದ ಅಂತ.. ಇದು ಕನ್ನಡಕ್ಕೇ ಆಗಿರುವ ಅವಮಾನ. ಇಂತಹ ಅವಮಾನದ ಬೆಂಕಿಯಲ್ಲಿ sad-kannadiga ಅಂತವರು ಸುಡಲ್ಲ ಗುರು.. ತಪ್ಪಿಸಿಕೊಂಡು ಶಂಡರ ಹಾಗೆ ನೆರೆ ರಾಜ್ಯದಲ್ಲಿ ಅವರ ಭಾಷೆ ಕೇಳಿಕೊಡ್ತೀವಿ ಅಂತ ಮೋರೆ ಹೋಗ್ತಾರೆ ಅಷ್ಟೆ. ಅಂತವರ ಮಾತಿಗೇಕೆ ಇಲ್ಲಿ ಬೆಲೆ..ಮುಂದ್ ಹೋಗೊಲೋ ಸ್ಯಾಡು..

ಬನವಾಸಿ ಬಳಗ ಅಂತಾರೆ...

ದಯವಿಟ್ಟು ಅನಿಸಿಕೆ ಬರೆಯುವಾಗ

ಕೆಟ್ಟಪದಗಳ ಬಳಕೆ ಮಾಡಬೇಡಿ.
ವಿಷಯಕ್ಕೆ ಸಂಬಂಧವಿಲ್ಲದ ಮಾತುಗಳನ್ನು ಆಡಬೇಡಿ.

ಒಳ್ಳೆಯ ಚರ್ಚೆ ನಡೆಯುವುದಕ್ಕೆ ಮೇಲಿನವುಗಳು ಅಡ್ಡಿಯಾಗುತ್ತವೆ. ದಯವಿಟ್ಟು ಸಹಕರಿಸಿ.

harshagatt ಅಂತಾರೆ...

sakat aghi ide Guru, ee lekhana.. inna mele adru Kannadigaru, "ivaru sari illa avaru sari illa" ano badlu.. navu sari hogake navu madabekadu yenu antha yochane madidre olledu..
bere avaru namma mele bashe herike madidre, namma bashe na kelake yesthu jana munde barthare? Kannadigaru ge bashe abhimana ide, adru torosoke hinjarike asthe..
yella ok, nachike yake?

Anonymous ಅಂತಾರೆ...

ಎಂದಿನಂತೆ ಏನ್ಗುರು ಒಂದು ಒಳ್ಳೆಯ ವಿಷಯದ ಬಗ್ಗೆಯೇ ಬರೆದಿದ್ದಾರೆ.

ಆದರೆ ಇಲ್ಲಿನ ಕೆಲವೊಂದು ಅನಿಸಿಕೆಗಳನ್ನು ನೋಡಿದಾಗ ಕಂಡು ಬರುವ ಅಂಶವೆಂದರೆ, ಹೊಸ ಪದಗಳನ್ನು ಕನ್ನಡದಲ್ಲಿ ಸೇರಿಸಿಕೊಂಡರೆ ತಪ್ಪೇನು ಎಂಬುದು. ಕನ್ನಡದಲ್ಲಿ ಆ ವಸ್ತುಗಳಿಗೆ ಪದಗಳು ಮೊದಲೇ ಇದ್ದಲ್ಲಿ ಬಲವಂತವಾಗಿ ಬೇರೆ ಭಾಷೆಯ ಪದಗಳನ್ನು ಸೇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ
ನಾವುಗಳು ಕಾಣುತ್ತಿರುವಂತೆ ಹಾಗೆ ಬಂದ ಪದಗಳು ಈಗಾಗಲೇ ಇರುವ ಕನ್ನಡದ ಪದಗಳ ಗುಂಪಿಗೆ ಸೇರುತ್ತಿಲ್ಲ. ಬದಲಾಗಿ ಆವುಗಳ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ತರಕಾರಿ ಮಾರುವವನಿಂದ ಹಿಡಿದು ಟಿ.ವಿ.ಯಲ್ಲಿ ಬರುವ ಅಡಿಗೆ ಕಾರ್ಯಕ್ರಮದ ವರೆಗೆ ನೋಡಿದರೆ ದಿನ ಕಳೆದಂತೆ ಕನ್ನಡದ ಪದಗಳ ಜಾಗವನ್ನು ಹಿಂದಿ, ಇಂಗ್ಲಿಷ್ ಪದಗಳು ಆಕ್ರಮಿಸಿಕೊಳ್ಳುತ್ತಿವೆ. ಕನ್ನಡಪದಗಳು ತಿಳಿದಿದ್ದರೂ ಕೀಳರಿಮೆಯಿಂದ ಬಲವಂತವಾಗಿ ಹಿಂದಿ/ಇಂಗ್ಲಿಷಿನ ಪದಗಳ ಬಳಕೆಯಾಗುತ್ತಿದೆ. ಇದನ್ನೆಲ್ಲಾ ನೋಡಿದಾಗ ಮನಸ್ಸಿಗೆ ಬಹಳ ಬೇಜಾರಾಗುತ್ತದೆ. ಬೇರೆಭಾಷೆಗಳಿಂದ ಆಮದಾಗುತ್ತಿರುವ ಪ್ರತಿಯೊಂದು ಪದದ ಬಳಕೆಯೂ ಕನ್ನಡಿಗರ ಕೀಳರಿಮೆಯ ಬೆಳವಣಿಗೆಗೆ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಗೆಳೆಯರೆ, ಇದು ನಿಜವಾಗಿಯೂ ನಮಗೆ ಬೇಕಾ?

ಇನ್ನು ನಂದಿನಿ ಹಾಲಿನ ವಿಷಯಕ್ಕೆ ಬಂದರೆ, "ಕ್ಷೀರ ಧಾರೆ" ಪದದ ಬಗ್ಗೆ ಪ್ರತಿಭಟಿಸಬೇಕೇ ಹೊರತು ಇದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದು. ತಿಮ್ಮಯ್ಯನವರು ಉದಾಹರಿಸಿರುವಂತೆ, ರೋಗವು ಮೊದಲಿನಿಂದ ಇದೆ ಹಾಗಾಗಿ ಹೊರಗಿನಿಂದ ಬರುವ ರೋಗಗಳಿಗೂ ನಮ್ಮನ್ನು ಒಡ್ಡಿಕೊಂಡರೆ ತಪ್ಪೇನು ಎಂಬಂತೆ ಇರುತ್ತದೆ. ಹೊರರೋಗಗಳಿಗೆ ಕಡಿವಾಣ ಹಾಕಿ ಒಳಗಿರುವ ರೋಗಕ್ಕೆ ಮದ್ದನ್ನು ಮಾಡುವುದು ಒಳಿತು.
ಹಿಂದಿನಿಂದ ನಡೆದುಕೊಂಡು ಬಂದಿದೆ ಆದ್ದರಿಂದ ಎಲ್ಲವೂ ಸರಿಯಾಗಿಯೇ ಇದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದರೆ ಈ ಸಮಾಜಕ್ಕೆ ಒಬ್ಬ ಬುದ್ಧನಾಗಲಿ ಅಥವಾ ಬಸವಣ್ಣನಾಗಲಿ ದೊರಕುತ್ತಿರಲಿಲ್ಲ.

ಕಡಂಗೋಡ್ಲು ಶಂಕರಭಟ್ಟರು ಹೇಳುವಂತೆ "ತೊರೆಯ ಜೊತೆಗೆ ಸಾಗಲು ಹುಲ್ಲುಕಡ್ಡಿಯೇ ಸಾಕು, ತೊರೆಯ ಎದುರಿಗೆ ಈಜಲು ಜೀವಂತ ಮತ್ಸ್ಯವೇ ಬೇಕು", ಜೀವಂತ ಮತ್ಸ್ಯವಾಗುತ್ತೇವೆಯೋ ಅಥವಾ ಹುಲ್ಲುಕಡ್ಡಿಯಾಗಿಯೇ ಉಳಿಯುತ್ತೇವೆಯೋ ಎಂಬುದನ್ನು ನಾವು ನಿರ್ಧರಿಸಬೇಕಾಗಿದೆ.

ಹರೀಶ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails