ಕಬ್ಬಿಣ ತಿನ್ನಕ್ಕೆ ಬಂದ ತೆಲುಗರಿಂದ ಕರ್ನಾಟಕವೇ ಗುಳುಂ!

ನಮಗೂ ಆಂಧ್ರಕ್ಕೂ ನಡುವೆಯಿರೋ ಬೆಟ್ಟಗಾಡಲ್ಲಿ ಸಿಗೋ ಕಬ್ಬಿಣದ ಅದಿರನ್ನು ನಿಧಾನವಾಗಿ ತೆಲುಗರು ಗುಳುಂ ಮಾಡ್ತಾ ಮಾಡ್ತಾ ಬೆಟ್ಟದ ತುದೀನೇ ಜರಗಿಸಿ ಬಳ್ಳಾರಿಯೊಳಗೆ ದೂಕಿದ್ದಾರೆ, ಆ ಬೆಟ್ಟದ ತುದಿ ಎರಡು ರಾಜ್ಯಗಳ ನಡುವೆಯ ಗಡಿಯ ಗುರುತಾಗಿದ್ರಿಂದ ಈಗ ಕರ್ನಾಟಕವೇ ಚಿಕ್ಕದಾಗಿಹೋಗಿದೆ ಅಂತ ದಿ ಹಿಂದೂನಲ್ಲಿ ಸುದ್ದಿ.

ಗಡಿ ಕಾಪಾಡೋದು ನಮ್ಮ ಸರ್ಕಾರದ ಮೊದಲನೇ ಕೆಲಸ. ಕರ್ನಾಟಕ ದಿನದಿನಕ್ಕೆ ಚಿಕ್ಕದಾಗ್ತಾ ಹೋದರೆ ನಾವು ಹೋಗೋದಾದರೂ ಎಲ್ಲಿಗೆ ಅಂತ ಯೋಚ್ನೆ ಮಾಡು ಗುರು! ನಮ್ಮ ಸರ್ಕಾರ ನಿಗಾ ವಹಿಸಿದ್ರೆ ಇಷ್ಟೆಲ್ಲ ಆಗ್ತಿರಲಿಲ್ಲ ಗುರು! ಎಲ್ಲಾ ಆದಮೇಲೆ ಕೇಂದ್ರಸರ್ಕಾರಕ್ಕೆ ದೂರು ಕೊಡ್ತೀನಿ ಅಂತ ನಮ್ಮ ಮು.ಮಂತ್ರಿ ಏನೋ ಹೇಳ್ತಿದಾರೆ, ಆದ್ರೆ ತಡೆಗಟ್ಟಬೋದಾಗಿದ್ದ ರೋಗ ಬರಿಸಿಕೊಳ್ಳೋದು, ಮೈಯೆಲ್ಲಾ ಹುಣ್ಣು ಮಾಡ್ಕೊಳೋದು, ಆಮೇಲೆ ಮದ್ದು ಚುಚ್ಚಿಸಿಕೊಳ್ಳೋದು ಎಲ್ಲಾ ಯಾಕೆ? ಮೊದಲಿಂದಲೇ ಹೀಗೆ ಆಗದಿರೋಹಾಗೆ ನೋಡ್ಕೋಬಾರದೆ? ಗಡಿಪ್ರದೇಶಗಳ ಆಗುಹೋಗುಗಳ ಮೇಲೆ ಮೊದಲಿಂದ್ಲೇ ನಿಗಾ ಇಡಕ್ಕೇನು ಬ್ಯಾನೆ ನಮ್ಮ ಸರ್ಕಾರಕ್ಕೆ?

ಕೆಲವರು ಹೇಳಬಹುದು - ಭಾರತದ ಒಳಗಡೆ ರಾಜ್ಯಗಳ ನಡುವಿನ ಗಡಿ ಬಗ್ಗೆ ಯೋಚ್ನೆ ಮಾಡಬೇಡಿ, ಭಾರತಕ್ಕೂ ಪಾಕಿಸ್ತಾನಕ್ಕೂ ನಡುವೆ ಇರೋ ಗಡಿ ಬಗ್ಗೆ ಯೋಚ್ನೆ ಮಾಡಿದರೆ ಸಾಕು ಅಂತ. ಅಂತೋರು ಏನಾದ್ರೂ ತಮ್ಮ 60x40 ಸೈಟಲ್ಲಿ ಪೂರ್ವಕ್ಕೆ 5 ಅಡೀನ ಪಕ್ಕದ ಸೈಟಿನ ಮಾಲೀಕಂಗೆ ಬಿಟ್ಕೊಡ್ತಾರಾ?!

ಸ್ವಲ್ಪ ಯೋಚ್ನೆ ಮಾಡಿ: ಹೀಗೇ ನಮ್ಮ ನಾಡ್ನ, ನಮ್ಮತನವನ್ನೆಲ್ಲಾ ಬಿಟ್ಟುಕೊಡ್ತಾ ಇದ್ರೆ ಕರ್ನಾಟಕಕ್ಕೆ ಹಿಂದೆ ಬ್ರಿಟೀಷರ ಕಾಲದಲ್ಲಿದ್ದ ಪಾಡೇ ಮತ್ತೊಮ್ಮೆ ಹಿಂತಿರುಗೆ ಬರತ್ತೆ, ಮತ್ತೊಮ್ಮೆ ಕರ್ನಾಟಕ ಚೂರುಚೂರಾಗಿಹೋಗತ್ತೆ, ಕನ್ನಡಿಗರು ಆಯಾ ಚೂರುಗಳಲ್ಲೆಲ್ಲಾ ಅಲ್ಪಸಂಖ್ಯಾತರಾಗಿಹೋಗ್ತಾರೆ, ಕನ್ನಡ ಕಸಕ್ಕಿಂತ ಕಡೆಯಾಗಿಹೋಗತ್ತೆ. ಹಿಂಗಾದ್ರೆ ಎಲ್ಲಾ ಕಲಿಕೆಗೂ ಎಲ್ಲಾ ಸಹಕಾರಕ್ಕೂ ಸಾಧನವಾದ ನಮ್ಮ ಭಾಷೇನೇ ಕಳ್ಕೊಂಡು, ನಮ್ಮ ಸ್ವಾಭಿಮಾನಾನೂ ಕಳ್ಕೊಂಡು, ಕನ್ನಡ ಜನಾಂಗದ ನಾವು ಸರ್ವನಾಶ ಆಗೋಗ್ತೀವಿ ಗುರು!

ಕಬ್ಬಿಣ ತಿನ್ನಕ್ಕೆ ಬಂದೋರು ನಾಡ್ನೇ ತೊಗೊಂಡು ಹೋಗ್ತಿದ್ರೂ ನಾವು ಎಚ್ಚೆತ್ತುಕೋಬೇಡ್ವಾ ಗುರು?

10 ಅನಿಸಿಕೆಗಳು:

Anonymous ಅಂತಾರೆ...

ide en guru, bengaloornalli yaava area nalli nodidru ella site owners bandu reddy reddy.. heege adre en madodu.. alla melinda belagavi namdu anta maratigalu tale tinta idre, ballari olage gultgalu nugta idare. itta b'lorenalli n.indians mattu kaatpaadigala kaata, mangaloorige hodre alli malayaaligala kaata.. nam jana yaake heege horagadeinda bandorna tale mele koorskotaro gottilla. nan maklu bhikarigala taraha bartare amele nam mele dabbalike madtare.. when do we put an end to this menace?

Anonymous ಅಂತಾರೆ...

ಗುರುಗಳೆ, ಇದು ಗಣಿ-ಧಣಿಗಳ ಕುತಂತ್ರ. ಅದಿರಿನಿಂದ ಬರೊ ದುಡ್ಡಿನಾಸೆಗೆ ಮಾಡಿದ ಕೆಲಸ. ಭಾಷಾಂಧರ ಕೆಲಸವಲ್ಲ. ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಿ ಇದನ್ನು ಬೇಗ ಸರಿಪಡಿಸಬೇಕು.

ನಮ್ಮ ಮತ್ತು ತೆಲುಗರ ನಡುವೆ ಭಾಷೆಯ ಬಗ್ಗೆ ಜಗಳಗಳಿಲ್ಲ.ನನಗೆ ಗೊತ್ತಿರೊ ಬಹುತೇಕ ತೆಲುಗರು ಕನ್ನಡವನ್ನು ಚನ್ನಾಗಿ ಮಾತಡ್ತಾರೆ.ರಾಜ್ಯಕ್ಕೆ ಹೊಸದಾಗಿ ಬಂದಿರುವ ತೆಲುಗರೂ ಕನ್ನಡವನ್ನ ಬೇಗಾನೆ ಕಲೀತಾರೆ.

Anonymous ಅಂತಾರೆ...

ನಮ್ಮ ಸರ್ಕಾರದವ್ರು ಯಾಕೆ ಇದರ ಬಗ್ಗೆ ನಿಗಾ ವಹಿಸಿಲ್ಲ ಅಂದ್ರೆ, ಅವರು ಕಬ್ಬಿಣವನ್ನ ನುಂಗಿ ನೀರು ಕುಡಿಯುವುದರಲ್ಲಿ ಮಗ್ನವಾಗಿದ್ರು. ಸಿಕ್ಕಾಪಟ್ಟೆ ಲಂಚ ಇಸ್ಕೊಂಡು ಕರ್ನಾಟಕನ ಮಾರ್ಕೊಳ್ಳೋದ್ರಲ್ಲಿ ಇದಾರೆ ಇವರೆಲ್ಲ. ಬಳ್ಳಾರಿ ಅದಿರಿನ ವಿಶ್ಯದಲ್ಲಿ ನಮ್ಮ ರಾಜ್ಯದ ರಾಜಕಾರಿಣಿಗಳೆ ಸೇರಿಕೊಂಡಿರುವುದನ್ನ ಪ್ರತಿದಿನ ಟಿ ವಿ ಯಲ್ಲಿ ನೋದುತ್ತಿದ್ವಿ ಅಲ್ವ? ಗಡಿ ಪ್ರದೇಶದ ಬಗ್ಗೆ ಮೊದಲಿಂದನು ಅಸಡ್ಡೆ. ಬೆಳಗಾವಿಯಲ್ಲಿ ತೊಂದರೆ ಶುರುವಾವ ನಂತರ ಅಲ್ಲಿ ಎರಡನೇ ವಿಧಾನ ಸೌಧ ಕಟ್ಟಲಿಕ್ಕೆ ಹೊರಟಿದ್ದಾರೆ. ರೋಗ ಬಂದ ಮೇಲೆ ವಾಸಿ ಮಾಡಿಕೊಳ್ಳುವುದಕ್ಕಿಂತ ಬರದಂತೆ ಎಚ್ಚರ ವಹಿಸುವುದು ಮುಖ್ಯ ಅಂತ ಇವರಿಗೇಕೆ ಅರ್ಥವಾಗುತ್ತಿಲ್ಲವೋ ಗೊತ್ತಾಗುತ್ತಿಲ್ಲ.

Anonymous ಅಂತಾರೆ...

Belagaaviyalli innondu vidhaanasoudha kattisi adannu yeke 2ne raajadhaani maadidro gottilla. gaDibhaagagaLalli raajadhaani maaDidare valasege kaaranavaaguttade. udaaharaNe yendare namma Bengaluru.

aaddarinda belagaavi badalu hubli/dharavaaDa vannu 2ne raaja dhaani yannaagi maaDabekittu.

Anonymous ಅಂತಾರೆ...

innondu vishya gotta guru nammavaru ella nirdara thagoLodrallu thumba nidana. nodi 5-6 varshada hinde bengalooru matte mysorinalli sitegala bele eshtu kadime ittu antha. aaga naavu enu maadidvi gotta adu jasti idu jasti antha sumene bitvi. adre ee reddy, jain itaregalu enu maadidru adanella cheapagi thagondu bitru. adanne matte naavu idaru varsha ada mele matte adara hattarashtu bele kottu thagondvi. mysorinalladru swalpa naavu hechchu jana site thagolo thara agbeku ansatte... - karuna

Anonymous ಅಂತಾರೆ...

ಬಳ್ಳಾರಿ ಊರಲ್ಲಿ ತೆಲುಗು ಮಂದಿ ಹೆಚ್ಚಿಗೆ ಇದ್ದಾರೆ. ಆದ್ರೆ ಅಲ್ಲಿ ಬೆಳಗಾವಿಯಂತೆ ಭಾಷೆ ಮೇಲೆ ಕಿತ್ತಾಟವಿಲ್ಲ. ಕನ್ನಡದವರು ಆಂದ್ರದ ಆಲೂರು, ಆದೋನಿ, ರಾಯದುರ್ಗ, ಅನಂತಪುರ ಇಲ್ಲೆಲ್ಲ ತುಂಬಾ ಮಂದಿ ಇದ್ದಾರೆ.

ಇದನ್ನು ನಾವು ಬರೀ ಕೆಲವು ಮಂದಿ ತಮ್ಮ ದುರಾಸೆಗಾಗಿ ಮಾಡಿದ, ಕೆಟ್ಟಕೆಲಸ ಅಂತ ನೋಡಬೇಕು.

ಆದ್ರೆ, ಬಳ್ಳಾರಿಯ ಕನ್ನಡದ ಮಂದಿಗೆ ಯಾಕೆ ಇದರ ಬಗ್ಗೆ ದನಿಯೆತ್ತಬೇಕು ಎಂದು ಅನ್ನಿಸ್ತಿಲ್ಲ? ಅವರು ಯಾಕೆ ಸುಮ್ನಿದ್ದಾರೆ?

ಆದ್ರೆ ಕರ್ನಾಟಕದ ರಾಜಕಾರಣಿಗಳು ಹೇಗೆ ಇದನ್ನು ಆಗಲು ಬಿಟ್ಟರು?

ಒಟ್ಟಿನಲ್ಲಿ, ನಮ್ಮ ಪಾಡು ಹೀಗೆ. !! ಯಾವಾಗಲೂ ಕೈಲಾಗದವರ ಪಾಡು!!

Amarnath Shivashankar ಅಂತಾರೆ...

lekhana tuMba chennagide..
modalige gaDi bhaadalliruva kannaDigarige ee samasye manavarikeyaagabEku...gaDi bhaagagalalli parakeeyara bhaashe matanaaDuvudanella nillisabEku.
gaDi bhaagadalli hecchu hecchu kannaDa chaTuvaTikegaLaagabEku....

Anonymous ಅಂತಾರೆ...

ಗುರು ನಾವು ಕರ್ನಾಟಕದಲ್ಲಿ ತೆಲುಗರಿಗೆ ಸಿಕ್ಕಾಪಟ್ಟೆ ಸದರ ಕೊಟ್ಟಿದೀವಿ, ಈಗಲೇ ಎಚ್ಚರಗೊಳ್ಳದಿದ್ದರೆ ತೆಲುಗರು ನಮ್ಮನ್ನು ಮಣ್ಣು ಮುಕ್ಕಿಸದೇ ಇರ್ತಾರ? ಅವರ ಸಿನಿಮಾಗಳನ್ನು ನಾವು ಒಳ್ಳೆ ಜೊಲ್ಲು ಸುರಿಸಿಕೊಂಡು ನೋಡ್ತೀವಿ, ಅದನ್ನು ಬಿಡಬೇಕು, ಟಿ.ವಿ.9 ನಲ್ಲಿ ತೆಲುಗು ಸಿನಿಮಾಗಳ ಬಗ್ಗೆ ಹೊಗಳಿದ್ದೇ ಹೊಗಳಿದ್ದು, ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನಿರೋದು ಸರಿನಾ?

Anonymous ಅಂತಾರೆ...

gaDi bhaagagalinda ugraru karnaatakakke nusuLadante echara vahisabeku.

Anonymous ಅಂತಾರೆ...

Guru raayara 336 ne aaradhana mahotsavada shubhaashayagaLu tammellarigoo..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails