4.4 ಕೋಟಿಗೆ ಬರೀ 14 ಲಕ್ಷ ಓದುಗರು ಸಾಕಾ?

ಮೊನ್ನೆ ವಿಜಯಕರ್ನಾಟಕದಲ್ಲಿ ಕನ್ನಡ ದಿನಪತ್ರಿಕೆಗಳ ಪ್ರಸಾರದ ಬಗ್ಗೆ ಒಂದು ಜಾಹಿರಾತು ಬಂದಿದೆ(ಕೆಳಗಿರುವ ಚಿತ್ರ ನೋಡಿ).

ಅಲ್ರೀ ಪ್ರಪಂಚದಲ್ಲಿ ಕನ್ನಡಿಗರ ಜನಸಂಖ್ಯೆ 4.4 ಕೋಟಿ ಇದೆಯಂತೆ. ಅದರಲ್ಲಿ ಓದು ಬರಹ ತಿಳ್ದಿರೋರು ನೂರಕ್ಕೆ ಅರವತ್ತೇಳು ಜನ. ಅಂದ್ರೆ ಒಟ್ಟು 2.95 ಕೋಟಿ ಜನರು. ಆದ್ರೆ ಒಟ್ಟು ಮಾರಾಟವಾಗೋ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಕೂಡ್ಸುದ್ರೆ ಆ ಸಂಖ್ಯೆ ಬರೀ 14.2 ಲಕ್ಷಾನೂ (14,19,981) ದಾಟಲ್ಲ ಅಂದ್ರೆ ಸಂಕಟ ಆಗಲ್ವೇನ್ರಿ?

ಅದೇ ಪ್ರಪಂಚದ ಒಟ್ಟು ಮಲಯಾಳಿಗಳ ಜನಸಂಖ್ಯೆ 3.6 ಕೋಟಿ,
ಅಕ್ಷರ ಕಲ್ತೋರು ನೂರಕ್ಕೆ 70 ಜನ ಅಂದರೆ 2.50 ಕೋಟಿ ಜನ. ಆದ್ರೆ
ಮಲಯಾಳ ಮನೋರಮ ಅನ್ನೋ ಒಂದು ಪತ್ರಿಕೇನೇ ಎಷ್ಟು ಮಾರಾಟ ಆಗುತ್ತೆ ಗೊತ್ತಾ? 74 ಲಕ್ಷ ಪ್ರತಿಗಳು. ಅದನ್ನು ಓದೋರು 1.5 ಕೋಟಿ ಜನರು.

ಇದಕ್ಕೆ ಎನು ಕಾರಣ?

ದೊಡ್ಡಸ್ತಿಕೆಗಾಗಿ, ಕಲಿಕೆಗಾಗಿ, ವಿಶೇಷ ರೀತಿಯ ಮಾಹಿತಿಗಳಿಗಾಗಿ (ಆರ್ಥಿಕ, ವ್ಯಾಪಾರಿ, ಶೇರು ಸಂಬಂಧಿ ಮಾಹಿತಿ), ಬೇರೆಯವರು ಏನಂದುಕೋತಾರೊ ಅಂತ ಕೀಳರಿಮೆ ತೊಡೆದುಕೊಳ್ಳೋಕ್ಕಾಗಿ ಅಂತೆಲ್ಲಾ , ಇಂಗ್ಲಿಷ್ ಪತ್ರಿಕೇನ ಕೈಲಿಟ್ಟುಕೊಂಡು ಓಡಾಡ್ತೀವಿ.

ನಮ್ಮ ಮಾಧ್ಯಮದವರೂ ಕೂಡಾ ಕನ್ನಡದಲ್ಲೇ ಜಾಗತಿಕ ಗುಣಮಟ್ಟದ ಎಲ್ಲ ವಿಷಯಗಳಿಗೂ ಸಂಬಂಧಪಟ್ಟ ಬೇರೆ ಬೇರೆ ಅಭಿರುಚಿಗಳನ್ನು ತಣಿಸೋ ಪತ್ರಿಕೆಗಳನ್ನು ಹೊರತರಲೇ ಬೇಕಾಗಿದೆ. ಕನ್ನಡದಲ್ಲೇ India today ಬರಲಿ, ಜೊತೇಲೇ ಅದನ್ನು ಮೀರ್ಸೋ ಕನ್ನಡದ್ದೇ ಟುಡೇಗಳು ಬರ್ಬೇಕಲ್ವಾ ಗುರು? ಅಂತದ್ದನ್ನು ಬೆಳೆಸೋ ಹೊಣೆಗಾರ್ಕೆ ನಮ್ದು ನಿಮ್ದು ಎಲ್ರದ್ದೂ ಕೂಡಾ.

ಒಂದು ಸಣ್ಣ ತೀರ್ಮಾನ ಮಾಡೋಣ್ವಾ?
  • ನಾವು ಕೊಂಡ್ಕೊಳ್ಳೋ ಮೊದಲ್ನೇ ಪತ್ರಿಕೆ ಕನ್ನಡದ್ದೇ ಆಗಬೇಕಿದೆ. ಆಮೇಲೆ ಬೇಕಾದ್ರೆ ಎರಡನೇ ಪತ್ರಿಕೆಯಾಗಿ ಟೈಮ್ಸೋ, ಮತ್ತೊಂದೋ ಕೊಂಡ್ಕೊಳ್ಳೊಣ.
  • ಕೊಂಡ್ಕೊಳ್ಳೋ ಕನ್ನಡ ಪತ್ರಿಕೆಯನ್ನ ನಮ್ಮ ಕಾರಲ್ಲೋ, ಕ್ಯಾಬಲ್ಲೋ ಹೋಗ್ಬೇಕಾದ್ರೆ ಎಲ್ರೂಗೂ ಕಾಣೋ ಹಾಗೆ ಕೈಲಿಟ್ಟುಕೊಂಡು ಹೋಗೋಣ.
  • ನಮ್ಮ ಸಂಸ್ಥೆಗಳಲ್ಲಿ ಕನ್ನಡದ್ ಒಂದಾದ್ರೂ ಪತ್ರಿಕೆ ತರ್ಸಕ್ ವ್ಯವಸ್ಥೆ ಮಾಡೋಣ.

ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯ. ಏನಂತ್ಯ ಗುರು?

24 ಅನಿಸಿಕೆಗಳು:

Rohith B R ಅಂತಾರೆ...

ಎಲ್ಲೆಲ್ಲಿ (ಬೆಂಗ್ಳೂರಲ್ಲಿ ಯಾವ್ಯಾವ ಕಂಪನಿಗಳಲ್ಲಿ) ಕನ್ನಡ-ಕಲಿ/ಇತರ-ಕನ್ನಡ-ಪಾಠ ನಡೀತಿದ್ಯೋ ಅಲ್ಲೆಲ್ಲಾ ಕನ್ನಡ ದಿನ/ಮಾಸ ಪತ್ರಿಕೆಗಳ್ನ ತರ್ಸೋದು ಕಷ್ಟ ಆಗ್ಬಾರ್ದು.. ಅಲ್ವೆ? ಕನ್ನಡ ಪಾಠಗಳು ಲಿಪಿ ಕಲಿಸುವ ಹಂತ ಬಂದಾಗ ತಮ್ಮ್-ತಮ್ಮ ಕಚೇರಿಗಳಲ್ಲಿ ಈ ವಿಷಯ ಪ್ರಸ್ತಾಪ ಮಾಡ್ಬೋದು!

ಇದೇ ವಿಚಾರದಲ್ಲಿ ಇನ್ನೊಂದು ಅಂಶ ಏನಂದ್ರೆ ಕನ್ನಡಿಗರೇ ನಡ್ಸ್ತಿರೋ ವಾಣಿಜ್ಯಗಳಲ್ಲಿ ಕನ್ನಡದ ಏಳಿಗೆ ಇದೆ, ಕನ್ನಡಕ್ಕೆ ಬೆಲೆ ಸಿಗತ್ತೆ - ಇಂತಹ ಯೋಚನೆಗೆ ವಿರುದ್ಧ ವಾಗಿದೆ ನಮಗೆಲ್ಲಾ ಗೊತ್ತಿರೋ ಕಾಫಿ-ಡೇ ಅಂಗ್ಡಿಗಳು.. ಈ ನನ್ನ್ ಮಗ ಕನ್ನಡದೋವ್ನೇ ಆಗಿದ್ದ್ರೂ, ಅದೂ ಚಿಕ್ಕಮಗಳೂರೌವ್ನೇ ಆಗಿದ್ದ್ರೂ ಇವನ ಯಾವ್ದೇ ಅಂಗ್ಡಿಗಳಲ್ಲಿರೋ ಹುಡ್ಗ್ರು ಕನ್ನಡದಲ್ಲಿ ಮೊದಲು ಮಾತಾಡಲ್ಲ, ಆಡಿದ್ರೂ ಬಹಳ ಹೆದರಿ ಮಾತಾಡ್ತಾರೆ. ಕನ್ನಡದೌವ್ನೇ ಇಂತಹ ಚೆನ್ನಾಗಿರೋ ಅಂಗ್ಡಿ ಇಟ್ಟಿದ್ದ್ರೂ ಇದ್ಯಾಕೆ ಕನ್ನಡ ಉಪ್ಯೋಗ್ಸಕ್ಕೆ ನಾಚಿಕೆ/ಹೆದರಿಕೆ? ನಮ್ಮ ಅಂಗ್ಡಿಯಲ್ಲಿ ನಮಗೇ ಕೆಲ್ಸ ಸಿಗಬೇಕು, ನಮ್ಮದೇ ಭಾಷೆ ನಡೀಬೇಕು, ಅಲ್ವ? :o

ಹೀಗಿದ್ದಾಗ ಇನ್ನೊಂದು ನಿರ್ಧಾರ ನಾವೆಲ್ಲ ಮಾಡ್ಬೇಕು ಅನ್ಸತ್ತೆ.. ಇನ್ನು ಮೇಲಿಂದ ನಾವ್ಯಾರೂ ಕೂಡ ಕಾಫಿ-ಡೇಗೆ ಹೋಗೋದಿಲ್ಲ, ಯಾರನ್ನೂ ಕರ್ಕೊಂಡು ಹೋಗೋದಿಲ್ಲ. ಇಲ್ಲವೇ, ಅನಿವಾರ್ಯವಾಗಿ ಅಲ್ಲಿ ಹೋದಾಗ ಒಂದು ಅಕ್ಷರ ಕನ್ನಡೇತರ ಭಾಷೆಯನ್ನೂ ತಡೆಯೋಲ್ಲ ಅಂತ ಸರಿಯಾಗಿ ಸೂಚಿಸೋಣ. ಅದು ಹಾಡಿನ, ಮಾತಿನ ಅಥ್ವಾ ಟಿ.ವಿ ರೂಪದಲ್ಲಿಯೇ ಇರ್ಬೋದು. ಕನ್ನಡವೇ ಇರ್ಬೇಕು. ಅಲ್ಲೇನಾದ್ರು juke-box ಗೀಕ್-ಬಾಕ್ಸ್ ಅಂತ ಬೇರೆ ಭಾಷೆಯ ಹಾಡು ಹಾಕಿದರೆ ಪ್ರತಿಭಟಿಸಿ - ಯೋಚನೆ ಮಾಡೋ ಅವಷ್ಯಕತೆಯೇ ಇಲ್ಲ - ಅಲ್ಲಿ ಸುಮಾರು ಎಲ್ಲ್ರೂ ಕನ್ನಡದೋವ್ರೇ ಇರ್ತಾರೆ, ಯಾರೂ ನಿಮ್ಮನ್ನ ವಿರೋಧ್ಸಲ್ಲ.. ಒಟ್ಟಿನಲ್ಲಿ ಈ ನಾಡಿನಲ್ಲಿ ಕನ್ನಡದ ಕಂಪು ಎಲ್ಲಿ ನೋಡಿದರೂ ಸಿಗ್ತಿರ್ಬೇಕು!

admin ಅಂತಾರೆ...

ಗುರುಗಳೇ, ಕನ್ನಡಿಗರ ಸಂಕೆ ೪.೪ ಕೋಟಿ ಅಲ್ಲ, ೬ ಕೋಟಿ.

Anonymous ಅಂತಾರೆ...

ನಮ್ಮ ಮನೆಯಲ್ಲಿ ಇಂಗ್ಲಿಷ್ ಪತ್ರಿಕೆಯನ್ನ ಮುಂಚೆ ತರಿಸುತ್ತಿದ್ದರು. ಈಗ ಮೊದಲನೆಯದಾಗಿ ವಿ. ಕ. ಕನ್ನಡ ಪತ್ರಿಕೆಯನ್ನ ತರಿಸುತ್ತಿದ್ದೇವೆ, ಮತ್ತು ಟೈಮ್ಸ್ ಪತ್ರಿಕೆಯನ್ನು ಎರಡನೆಯದಾಗಿ. ಟೈಮ್ಸ್ ಪತ್ರಿಕೆಯನ್ನು ಜನರು ತರಿಸುವುದು ಮುಖ್ಹ್ಯವಾಗಿ ಅದರಲ್ಲಿ ಬರುವ ಕೆಲಸದ ಅವಕಾಶದ ವರದಿಗಳಿಗಾಗಿಯೆ. ಇವೆಲ್ಲವು ಕನ್ನಡ ಪತ್ರಿಕೆಗಳಲ್ಲು ಬರುವಂತಿದ್ದರೆ ಇಂಗ್ಲಿಷ್ ನ ಮೊರೆ ಯಾಕೆ ಹೋಗುತ್ತಿದ್ದರು? ಗುರುಗಳು ತಿಳಿಸಿರುವಂತೆ 'ಜಾಗತಿಕ ಗುಣಮಟ್ಟದ ಎಲ್ಲ ವಿಷಯಗಳಿಗೂ ಸಂಬಂಧಪಟ್ಟ ಬೇರೆ ಬೇರೆ ಅಭಿರುಚಿಗಳನ್ನು ತಣಿಸೋ ಪತ್ರಿಕೆಗಳನ್ನು ಹೊರತರಲೇ ಬೇಕಾಗಿದೆ'

ಮತ್ತು ಟಿ.ವಿ. ಯಲ್ಲಿ ಸಹ ಟಿವಿ9, ಉದಯ ವಾರ್ತೆಗಳು ಇವನ್ನು ಕೇವಲ ಸ್ಥಳೀಯ ವಾರ್ತೆಗಳನ್ನು ತಿಳಿದುಕೊಳ್ಳಲು ನೋಡುತ್ತಾರೆ. ಅದೇ ರಾಷ್ತ್ರೀಯ ಅಥವ ಅಂತರ ರಾಷ್ತ್ರೀಯ ವಾರ್ತೆಗಳಿಗೆ CNN, NDTV ಮುಂತಾದವುಗಳ ಮೊರೆ ಹೋಗುತ್ತಾರೆ ಯಾಕೆಂದರೆ ಅವುಗಳ coverage ಚೆನ್ನಗಿರುತ್ತದೆ ಎಂಬ ಕಾರಣಕ್ಕೆ. ಇದೇ ಮಾದರಿಯ ಅತಿ ಹೆಚ್ಚು coverage ಇರುವ ಚಾನಲ್ ಗಳು ಕನ್ನಡದಲ್ಲೆ ಬರಲಿ ಎಂದು ನನ್ನ ಆಶಯ.

Anonymous ಅಂತಾರೆ...

Houdu, kannaDa patrike vodugaru hechaagabeku. ivattu naavu yene Times of India androo adu karchaaguvudu Bengaloorinalli mattu kelavu itara jilla kendragaLalli maatra. indigoo kannaDapatrikegaLa usirannu uLisiruvavaru graameeNa janate. eega nammalle nodi bhinnaabhipraayagaLive. KannaDa kaliyiri, kannada patrikegaLannu vodiri andre atta kaDeyinda dalita naayakarugaLu bandu 'naavyaake kannaDa vodbeku, naavoo english kaleetivi' anta bobbe haaktaare. idakke kelavu budhi(ladhi?)jeevigala bembalavoo ide.

monne english annu 1st standard ninda shuru maaDidaagaloo ee dalita sanghatanegaLu virodhisidavu. ivarige yenaagide?

nanna gamanakke banda prakaara 'Vijaya karnataka' kannaDada atyuttama patrike. prajnavanta kannaDigarellaroo vodalebekaada patrike. adaralli kannadapara vichaaragaLu, chintanegaLu bahaLashtu iruttave.'kannaDa prabha',samyukta karnaataka, UdayavaaNi kooDa uttamavaagive.

innu vaara patrikegaLalli 'Taranga' atyuttama. Nantarada sthaanagaLu 'sudha', 'mangaLa' mattu 'karmaveera'. Tabloid galalli 'Hai Bangalore' vonde chennagirodu.

mitrare nimma manegaLalloo kaddayavaagi vondu kannaDa dina patrike haagoo vaara patrike tarisi vodi, vuttama vishayagaLannu tiLidukolli, aa moolaka kannaDa vuLisi.

Anonymous ಅಂತಾರೆ...

nam nam kacherigaLalli hege kannada dina patrike tarsodu antha yaradu salahe kodthira ? . sumsumke heldaage kannada-kali li lipi kalso hanta bandaga tarasbodu antha. adre naavu ella kade bari maatadodu maatra kalastha idivi. idara bagge ellaru swalpa alochane maadidre uttama. - karuNaa

Anonymous ಅಂತಾರೆ...

melina nanna anisikege ondu chikka tiddupadi-
"monne english annu 1st standard ninda shuru maaDidaagaloo ee dalita sanghatanegaLu virodhisidavu. ivarige yenaagide?"

embudu

"monne english annu 1st standard ninda shuru maaDidaagaloo ee dalita sanghatanegaLu swaagatisiidavu. ivarige yenaagide?"

yendaagabeku..

Anonymous ಅಂತಾರೆ...

There are two reasons why I don't read Kannada papers.

1) The languages used is not straight forward and tough to understand for many of us. Whereas English papers are very easy to read ( except Hindu of course )

2) Content wise too, I am not happy with Kannada papers, specially one Kannada paper which flares up unwanted controversy amongst people just like some stupid Hindi News channel.

3) Packaging is not attractive. The way they say thing are still like 50-60, our paper needs to change the style with time.

Anonymous ಅಂತಾರೆ...

RamaDhyani avare,

'Vijaya Karnataka' antha paper irodindle naanu kannada paper ododu kammi maadirodu .... VK has been TOI in Kannada ( even before it was bought by TOI) .... oLLe kannada patrike aMdre prajavaNi .... naanu sumaru 15-20 varshandida adanne odta idini and i must say they have maintained the quality of news through out ! ... alde bhanuvara barta idda kelavu columngaLu ( nimageshTu gottu by N Vasudev, igo kannada by Prof Venkatasubbiaha tumba oLLedagi barta idvu ) ...

TV9 kooda taanu gaLisida janapriyatenne aadharavagittu kondu itara bhasheya channel tarah news bittu baaki ella torista ide ...

kannda odugara sankhye beLibekadre papergaLu karnatakavannu chennagi cover maadbeku ...

alde enguru avre ...namagyake beku Kannadada India today ... namagillave sudha/taraMga .... asthu saaku :)

Anonymous ಅಂತಾರೆ...

ದೊಡ್ದಸ್ತಿಕೆಗೆ ಇಂಗ್ಲೀಷ್ ಪತ್ರಿಕೆ ಓದವ್ರೆ ಹೆಚ್ಚು. ಇಂಗ್ಲೀಷ್ ಪತ್ರಿಕೆಗಳ ಗುಣಮಟ್ಟವೂ ತೀರಾ ಕಡಿಮೆ. Times of India (Toilet of India or Trash of India), Deccan Herald ಮುಂತಾದವುಗಳ ಗುಣಮಟ್ಟ ಕೀಳು. ಇದ್ದುದರಲ್ಲಿ The Hindu ಪತ್ರಿಕೆಯ ಗುಣಮಟ್ಟ ಚನ್ನಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಮುಖ್ಯ ಸುದ್ದಿಗಳನ್ನು ಕೆಲ ಕನ್ನಡ ಪತ್ರಿಕೆಗಳಿಗಿಂತ ಚನ್ನಾಗಿ ಕವರ್ ಮಾಡುತ್ತೆ ಈ ಪತ್ರಿಕೆ. (ನಾನು ಮನೆಯಲ್ಲಿ ಓದೋದು The Hindu ಮತ್ತು ವಿ.ಕ).

ಕನ್ನಡ ಪತ್ರಿಕೆಗಳ ಗುಣಮಟ್ಟ ಮೊದಲು ಸುಧಾರಿಸಬೇಕು. ಎಲ್ಲಾ ನಗರವಾಸಿಗಳು ಒಂದಾದರೂ ಕನ್ನಡ ಪತ್ರಿಕೆಯನ್ನು ಓದಲಿ.

Anonymous ಅಂತಾರೆ...

Anonymous avare,

neevu andukondante Vijaya karnataka patrikeyu 'TOI' policy gaLannu mygoodisikondilla. Vishweshwara bhat avaru uttama vaagi nadesuttiddare. itteechina udaharaNe yendare.
1) 1 ne taragatiyinda English:
TOI navaru support maadidru, VK navaru oppose maadidru.
2) Kanglish shaalegaLa maanyate radhati: TOI opposed it, VK supported it.
Like these there are many instances to prove that VK has its own idealogy. Moreover, VK is targetting all segments of readers right from school children and upto intellects. Whereas Prajavaani are Leftists, they report only farmers problems, labour problem, support naxalism etc. Their target segment is labours and farmers from villages. They dont cater to intellects who are interested in kannaDa literature, exploring new topics in science, philosophy etc. While VK gives all these. Be it science, technology, real estate, literature, philosophy, everything is available in VK.

No wonder just in about 5 years VK has managed to take top slot among kannada Dailies in spite of presence of other paepers for more than 25 years. Reader's verdict says it all, what they want.

P K Bhat ಅಂತಾರೆ...

kachEriyalli Kannada patrikeyabagge ondu vishaya hELalu bayasuteeni, nanna snehitarobbaru avaru taruva Kannada dinapatrikeyannu, businalli oodida naMtara, kachEriya reciption jaagadalli bEre dina patrikegaLoMdige iduttaraMte.
nanage idu oMdu oLLeya hejje annisutte. idannu noodi yaadaru kacheriya sibaMdi Kannada dinapatrikeyannu tarisabahudu.

Anonymous ಅಂತಾರೆ...

Ram avare, neevu helidri:
1) The languages used is not straight forward and tough to understand for many of us. Whereas English papers are very easy to read ( except Hindu of course )

>> this shows that you have not studied in kannaDa medium. If you have studied then you would have really enjoyed the language and the content.

2) Content wise too, I am not happy with Kannada papers, specially one Kannada paper which flares up unwanted controversy amongst people just like some stupid Hindi News channel.

>>kannaDa papers are mainly karnataka news oriented and highlight what is important in the interests of karnataka unlike national papers like TOI which concentrate on national/international news. For eg: Dr Raj's death, Cauvery issue, belgaum issue, English medium issue are of importance in kannaDa papers whereas English dailies dont bother about them.

3) Packaging is not attractive. The way they say thing are still like 50-60, our paper needs to change the style with time.
>> I dont feel so. They give very good package containing education, business, philosophy, personality development, science, literature, technology. What else you need??

Anonymous ಅಂತಾರೆ...

kannada patrike galalli content illa anno maatu dodda sullu.
kannada prabha ,prajavani odiddera--- saahitya,aarogya,pravaasa,share maarukatte, cinema, dhaarmika vichaara -- yella ide swami.
namage karnataka , india news mukhya , britney spears pamela anderson waist size alla.
TOI--- kutumba varga oduva patrike khandita alla . adondu sex patrike ashte.

Anonymous ಅಂತಾರೆ...

vasudeva buddy..


Yes you are right, I didn't study in Kannada medium.


But it would be good if, the language used is simple Kannada, instead of using many tough words like hatye, viLamba, etc.. I never heard these using in speech.

Are they really Kannada words? or Sanskrit or Persian or Tamil?

As you say, it seems that Kannada papers are published for only Kannada medium students, we English medium students need to take a course to understand.

Buddy don't feel bad. I just put my opinion, and since I am an English medium student my Kannada ability may be limited....

But still I would appreciate simpler and easy Kannada in papers, IF THEY CAN.

I generally like Kannada Prabha, though sometime I could not understand in that too.

Rohith B R ಅಂತಾರೆ...

Ram,
You're partially correct in your reasoning for not reading kannada newspapers - I am referring to the cosmetic lack-luster of our papers. But, before anyone can comment on your words, you need to tell us if you are a kannadiga by choice or nature? If you're a natural kannadiga but still making those remarks, you are a loser. Because its like you dont want to read news in your language just because the paper doesnt look good, or because it is difficult to understand (which is rather absurd in the first place!). You would rather try hard by putting in your best efforts (by reaching to that dictionary) to read a paper in a foreign language, but not a paper in your own language! Shame! Its a shame that you provided those as reasons for not reading a paper in your language. Besides you lack the urge to even "desire" that the papers need to get better. Instead you've already jumped across the fence and made your choice of a foreign news daily. Again shameful, isnt it?

On the other hand, if you're not a kannadiga then you have indeed tried a lot at kannada papers and that itself is appreciable. My suggestion is you should stick on for a li'l more time and you'll soon see the kannada news industry flourish and bloom in more vibrant colours than ever..

(This portion after seeing your latest comment):

Again, partly right there.. there are some alien words used in Kannada but in most cases when there are no equivalents in Kannada for them.

But your alibi that you come from English medium background for the crime of not understanding kannada in most of kannada dailies doesn't stand strong, buddy! I think a major chunk of people here are from english medium itself, but have very strongly realised the importance of having instruction in kannada medium. Hence these discussions. You seem to be regretting that there IS a kannada medium. Cut your crap!

Anonymous ಅಂತಾರೆ...

ಏನ್ಗುರು, ನೀವು ಕೊಟ್ಟ ಅಂಕಿ-ಅಂಶ ನೋಡಿ ತಲೆ ಗಿರ್‍ರ್‍ ಅಂತು! ಆದ್ರೆ ಮಲಯಾಳ ಮನೋರಮ ಒಂದು ವಾರ ಪತ್ರಿಕೆ ಅಂತ ಗೊತ್ತಾದ ಮೇಲೆ ಸ್ವಲ್ಪ ಸುದಾರಿಸಿಕೊಂಡೆ. ಈ ವಿಶಯಾನ ನೀವು ಬಿಟ್ಟಿದ್ದು ಯಾಕೆ ಅಂತ ತಿಳೀಲಿಲ್ಲ!

ಏನೇ ಆದ್ರು ಓದು-ಬರ ತಿಳಿದೋರಲ್ಲಿ 5% ಮಾತ್ರ ಕನ್ನಡ ಪತ್ರಿಕೆ ಒದ್ತಾರೆ ಅಂದ್ರೆ ನಾಚಿಕೆ ಆಗ್ಬೇಕು...ಮಿಕ್ದೋರೆಲ್ಲ ಥೇಮ್ಸ್ ಅಲ್ಲಿ ತಿ... ತೊಳಿಯೋರು ಇರ್ಬೇಕು.

ಸುಮ್ಸುಕ್ಕೆ ಮಾತ್ತು ರಾಮ್ ಅವರ ವರಸೆಗೆ ಪೂರಕವಾಗಿ ಈ ಕೊಂಡಿ ನೋಡಿ: http://thatskannada.oneindia.in/sahitya/my_karnataka/310707kannada_language_grammar.html

-ಇರ್ಸುಮುರ್ಸು

Tarale Seena ಅಂತಾರೆ...

I dont know if Ram spouted any opposition to the existence of a Kannada medi(a?)um. But hesitating to read Kannada newspapers because they have poor print and colour quality is akin to disowning ones own parents because they are not good looking. Like sumsumke said, more numbers encouraging Kannada news media will bring better quality newsprint and more life into our news papers.

Anonymous ಅಂತಾರೆ...

OK!!

I do put effort to read Kannada. Since I have interest in reading Kannada I commented here.

I am a Kannadiga both nature as well as choice.

I thought of putting an opinion here, I didn't mean to discourage Kannada reader.

There are many Kannada papers, I would appreciate a single simple Kannada paper, which people like me can read easily without peeking to dictionaries( sometime I don't words in Kannada dictionaries too, may be I need to get a big dictionary )

Rather I would suggest a Kanglish newspaper would be more welcome for Kanglish people like me.

Whatever great work..

Don't be too conservative and too traditional( highly traditionally decent). That is not a good way of Marketing.!!

Anonymous ಅಂತಾರೆ...

Ram avre,
nimage mattu nimmanthavarige kannaDavannu poorNavaagi kaliyalu icheyillavaaddarinda 'kanglish' patrike beku yendu heLuttiruviri. ee maatu heLalu naachikeyaaguvudillave nimage? neevu english medium nalli vodida maatrakke kannaDadalli yellu vyavaharisabaaradu, kannaDa patrikegaLannu vodabaaradu yendu niyama ideye? nimmanthavaru English annu maneyallu, snehitarodaneyu haagoo samaajadalli neevu hodeDeyella upayogisi kannaDavanne mareyuva hanta talupiddeeri. nimmantha yeDabiDangi janagaLa avashyakate kannaDa haagoo kannaDa patrikegaLige illa. nimmanthavarigaagi 'kanglish' patrikegaLannu tayaarisalu illi yaaroo sidharilla. nimage sulabhavaagi arthavaaguva English patrikegaLannu vodikolli hogi.

kannaDavannu preetisuva, kannaDavannu poshisuva manassulla bahaLashtu mandi illi iddare, anthavarindale kannaDa innashtu pravardHamaanakke baruttade bidi.

Anonymous ಅಂತಾರೆ...

Man Vasudev

It is not "vodida", "vodabaaradu", if I am correct it is "Odida" and "Odabaaradu".

But thats ok!!

You need be so raged about my comments buddy!!

I just put an opinion and I don't feel my comments carried any anti-kannada sentiments.

If you are so proud of present style, status, and quality of the Kannada newspaper, then what ever is said in the article carries value.

But I agree with the article and we have to increase the circulation of Kannada papers. For that I suggested changing the style of the language used to easier and cool/modern way!!

So don't be raged and take my words as just a stray opinion.!!

Take Care!!

Anonymous ಅಂತಾರೆ...

ನಮಸ್ಕಾರ ರಾಮ್ ಮತ್ತು ಗೆಳೆಯರೇ,
ನಮ್ಮ ಕನ್ನಡದ ಪತ್ರಿಕೆಗಳನ್ನು ನಾವು ಕೊಂಡು ಓದಬೇಕು. ಅದು ಇದೂ ಕೊರತೆಗಳ ನೆಪ ಹೇಳ್ಕೊಂಡು ಸುಲಭವಾಗಿ ಬೇರೆ ಭಾಷೆ ಪತ್ರಿಕೇನ ಕೊಂಡ್ಕೊಳೋದು ತಪ್ಪಾದೀತು. ನಮ್ಮ ಭಾರತ ಬಡದೇಶ ಅಂತ ಅಮೇರಿಕಾಗೆ ಹೋಗೋಕ್ಕೂ ಕನ್ನಡ ಪತ್ರಿಕೆಗಳಲ್ಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲಾ, ನೋಡಕ್ ಚಂದ ಇಲ್ಲ ಅಂತ ಇಂಗ್ಲೀಷ್ ಪೇಪರ್ ತೊಗೊಳ್ಳೋದು ಎರಡೂ ಒಂದೇ.
ಅಷ್ಟರ ಮೇಲೆ ಪತ್ರಿಕೆಗಳಲ್ಲಿ ಬಳಸೋ ಭಾಷೆ ಸರಿಯಿಲ್ಲದೆಇದ್ದರೆ,ಸರೀ ಮಾಡೋ ಹೊಣೇನೂ ಕನ್ನಡಿಗರಾದ ನಮ್ಮದೇ ಅಲ್ವಾ? ಮೊದಲು ಸಲ್ಲದ ನೆಪ ಹೇಳದೆ ಪ್ರಸಾರ ಹೆಚ್ಚು ಮಾಡ್ಸದ್ ನೋಡೋಣ. ಆಮೇಲೆ ಗುಣಮಟ್ಟಾನೂ ತಾನೆ ತಾನಾಗಿ ಬರುತ್ತೆ. (ಈಗ ಇಲ್ಲ ಅನ್ನೋದು ಅರೆ ಸತ್ಯ. ಇಂಗ್ಲಿಷ್ ಸರಳವಾಗಿರುತ್ತೆ ಅನ್ನೋ ವಾದ ಕೂಡಾ ಅರೆ ಸತ್ಯ ಮತ್ತು ಕನ್ನಾಡ ಕಠಿನವಾಗಿರುತ್ತೇ ಅನ್ನೋದು ಕೂಡಾ)

ಪ್ರೀತಿಯಿಂದ
ತಿಮ್ಮಯ್ಯ

Anivaarya ಅಂತಾರೆ...

ಅಲ್ಲಾ ಗುರು, ಕನ್ನಡ ಪೇಪರ್ ನಾ "ಹಳೆಕಬ್ಬಿಣ ಕಾಲೀ ಸೀಸ" ಹತ್ರ ತೊಗೊಂಡ್ ಹೋಗಿ ಅವ್ನೂ "ಕೆ.ಜಿ.ಗೆ ಕನ್ನಡ ಪೆಪರ್ ಮೂರ್ ರೂಪಾಯ್, ಇಂಗ್ಲೀಷ್ ಐದ್ ರೂಪಾಯ್" ಅಂತಾನೆ.

ಹೌದು ಕೆಲವು ಬದಲಾವಣೆಗಳು ಬೇಕಿವೆ, ಆದ್ರೆ ಇತ್ತೀಚೆಗೆ ಕನ್ನಡ ಪತ್ರಿಕೆಗಳ ಮಾರಾಟ ಜಾಸ್ತಿ ಆಗ್ತಾ ಇರೋದು ಒಳ್ಳೆಯ ಸಂಕೇತ. ಭಾರತದ average READERSHIP ಶೇಕಡ ೫.೨%, ಜೊತೆಗೆ ಪತ್ರಿಕೆಗಳನ್ನ ಓದೊವ್ರ್ ಸಂಖ್ಯೆ ಕೂಡ ಸಕ್ಕತ್ ಕಮ್ಮಿ ಆಗ್ತಾ ಇದೆ. ವ್ಯವಹಾರ, ಮಾರುಕಟ್ಟೆ ಮತ್ತು ಕ್ರೀಡಾ ವಾರ್ತೆಗಳನ್ನ ಓದೋದು ಜಾಸ್ತಿ ಆಗಿರುವಾಗ ಇವುಗಳನ್ನ ಅಷ್ಟ್ ಚೆನ್ನಾಗಿ ಕವರ್ ಮಾಡ್ದೆ ಇದ್ರೆ ಮುಂದೆನೊ ಇದ್ದಿದ್ದೆ ಕಷ್ಟ. ಆದ್ರೆ ಈ ಲೆಕ್ಕದಲ್ಲಿ ನೋಡುದ್ರೆ ಕನ್ನಡ ೪.೯% ಬರ್ತಾ ಇರೋದು ಒಳ್ಳೆಯ ಸೂಚನೆ. ಆದ್ರೆ ಇದು justification ಆಗ್ಬಾರ್ದು.

ಮುಂದಕ್ಕೆ ಹೇಗೆ ಜಾಸ್ತಿ ಮಾಡ್ಬೇಕು ಅನ್ನೋದನ್ನ ನಮ್ಮ ಕನ್ನಡ ಪತ್ರಿಕೋಧ್ಯಮ ಯೋಚಿಸಬೇಕು. ಅಲ್ಲಿಯ ಜನರಿಗೆ ಒಳ್ಳೆಯ ಸಂಬಳ ಸಿಕ್ಕುದ್ರೆ ಒಳ್ಳೆ ಪತ್ರಕರ್ತರು ನಮ್ ಭಾಷೆಗೆ ಕೆಲ್ಸಾ ಮಾಡ್ತಾರೆ, ಆದ್ರಿಂದ ಇದೊಂತರಾ vicious cycle ಅಂತಾರಲ್ಲ ಹಾಗೆ. ಕೋಳಿ-ಮೊಟ್ಟೆ ಸಮಸ್ಯೆ, ಅದನ್ನ ಮುರ್ಯಕ್ಕೆ ನಾವು ಬರೀ ಕನ್ನಡ ಪತ್ರಿಕೆಗಳ್ನೆ ಕೊಂಡು ಓದ್ಬೇಕು.

ಆಂಗ್ಲ ಪತ್ರಿಕೆ ಎಲ್ಲಿ ಜಾಸ್ತಿ ಮಾರಾಟ ಆಗೋದು? ಸಿಟಿಲಿ ತಾನೆ? ಈಗ ನಾವೆಲ್ಲಾ ಬೇರೆ ವಾರ್ತೆಗಳನ್ನೆಲ್ಲಾ ಬೇಕಿದ್ರೆ ಅಂತರ್ಜಾಲದಲ್ಲೇ ಓದ್ಕೊಂಡು ಕನ್ನಡ ಪತ್ರಿಕೆಯನ್ನೇ ತರ್ಸ್ಕೋಬೇಕು.

ಶ್ವೇತಾ ತುಂಬಾ ಚೆನ್ನಾಗಿ ಹೇಳಿದ್ದಾರೆ. ನಮ್ಮ ಪತ್ರಿಕೆಗಳು ಈಗ ಸಾಕಷ್ಟು ಚೆನ್ನಾಗಿ ಬರ್ತಾ ಇವೆ ಆದ್ರೆ ಇನ್ನೂ ಬದಲಾಗ್ಬೇಕು. ಜಾಸ್ತಿ ಜನ್ರು ಕನ್ನಡ ಪತ್ರಿಕೆಗಳನ್ನ ತೊಗೊಳಕ್ಕೆ ಓದಕ್ಕೆ ಶುರು ಮಾಡಿದಾರೆ, ಹೀಗೇ ಮುಂದ್ವರಿಬೇಕು.

ಆದ್ರೂ ಕನ್ನಡ ಓದಕ್ಕೆ ಬರಲ್ಲ, ಅಷ್ಟ್ ಚೆನ್ನಾಗಿ ಮಾತಾಡಕ್ಕೆ ಬರಲ್ಲ ಅಂತ ಜಂಬದಿಂದ ಹೇಳ್ಕೊಳೊ ಕನ್ನಡಿಗರ ಸಂಖ್ಯೆ ಏನೂ ಕಮ್ಮಿ ಇಲ್ಲ ಅನ್ನಿ, ಅಂತವ್ರು ಕನ್ನಡ ಪತ್ರಿಕೆ ಕೈಯಲ್ಲಿ ಹಿಡ್ಕೊಂಡ್ ಹೋಗ್ತಾರಾ ಅನ್ನೋ ಕೆಲವು ಸಂಶಯಗಳಿವೆ ಅನ್ನೋದ್ ಬಿಟ್ರೆ ಕನ್ನಡ ಏಂದೂ ಹಸಿರು, ನಮ್ ಉಸಿರು.

ಪ್ರೀತಿಯ,
ಯಾರಯ್ಯ

Amarnath Shivashankar ಅಂತಾರೆ...

naachike geTTa kannaDIgarige kannaDa paper oduvudu avamaana ankoMDiddare..
saaviraaru, lakshaaMtara ruppayi saMpadistaare.adre tiMgaLige 90-100 rs kottu kannaDa paper koLLuvudakke yogyate illa.
karnataka viDi iMtaha ayogya kannaDigare tuMbiddare..thooo ivara daridra janmagaLige

shiva ಅಂತಾರೆ...

its good, first Kannada then other language, languages is important but same time mother language is very important.
shivalingayya

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails