Working knowledge of Hindi is essential. The candidates should have studied Hindi as one of the subjects till Secondary School level. The relevant mark sheet containing Hindi as one of the subjects should be highlighted.
ಇದರ ಅರ್ಥ ಏನು ಗೊತ್ತಾ?
ಏನು? ನೀವು ಕನ್ನಡಿಗ್ರಾ? ಹಿಂದಿ ಬರಲ್ವಾ? ಹಾಗಾದ್ರೆ ನಿಮಗೆ ಲಕ್ಕಿಲ್ಲ ಬಿಡಿ. ಉತ್ತರಪ್ರದೇಶದಲ್ಲೋ ಬಿಹಾರಲ್ಲೋ ಮಧ್ಯಪ್ರದೇಶದಲ್ಲೋ ಹುಟ್ಬೇಕಾಗಿತ್ತು, ಕನ್ನಡನಾಡಲ್ಲಿ ಹುಟ್ಟಿ ಕೇಟ್ರಿ, ಕನ್ನಡಾನ ತಾಯ್ನುಡಿಯಾಗಿಟ್ಕೊಂಡು ಕೆಟ್ರಿ. ಈ "ಕಪ್ಪು ಚುಕ್ಕೆ" ನಿಮ್ಮ ಮೇಲೆ ಇರೋ ತನಕ ನೀವು ಎಂಥಾ ಬುದ್ವಂತ್ರಾಗಿದ್ರೂ ಉಪ್ಯೋಗ್ವಿಲ್ಲ ಬಿಡಿ.
ಹಿಂದೀನೋ ಹಿಂದೀತರದ್ದು ಇನ್ನೊಂದು ಭಾಷೇನೋ ತಾಯ್ನುಡಿಯಾಗಿ ಹೊಂದಿರೋ ಒಂದೆರಡು ಉತ್ತರಭಾರತದ ರಾಜ್ಯಗಳ ಜನರನ್ನ ವಲಸೆ ಆದ್ರೂ ಮಾಡ್ಸಿ ಬ್ಯಾಂಕುಗಳಲ್ಲಿ ತುಂಬಕ್ಕೆ ಮಾಡ್ತಿರೋ ಸಂಚಲ್ಲದೆ ಇದಿನ್ನೇನು? ಕನ್ನಡಿಗರಿಗೆ ಹಿಂದಿ ಹೇಗಿದ್ರೂ ಬರಲ್ಲ, ಆದ್ರಿಂದ ಇವ್ರುಗೆ "ಬೇಕಾದ ಅರ್ಹತೆ ಇಲ್ಲ" ಅಂತ ಸುಲಭವಾಗಿ ಹಿಂದೆ ತಳ್ಳಬಹುದು ಅಂತ ಮಾಡ್ತಿರೋ ಮೋಸವಲ್ಲದೆ ಇದು ಇನ್ನೇನು?
ಬ್ಯಾಂಕ್ ಕೆಲಸಕ್ಕೆ ಸೇರೋ ಮೊದ್ಲೇ ಈ ತಾರತಮ್ಯ ಆದ್ರೆ ಇನ್ನು ಸೇರಿದಮೇಲೆ?
ಬ್ಯಾಂಕ್ ಕೆಲಸಗಾರರಿಗೆ ಹಿಂದಿ ಪರೀಕ್ಷೆಗಳ್ನ ಕೊಟ್ಟು ಅದ್ರಲ್ಲಿ ಪಾಸಾದೋರಿಗೆ ಬಡ್ತಿ ಕೊಡೋದು, ಹೆಚ್ಚು ಸಂಬಳ ಅಂತ ಆಮಿಷ ಒಡ್ಡೋದು - ಇವೆಲ್ಲ ಹೊಸದೇನಲ್ಲ. ಬ್ಯಾಂಕ್ ಮ್ಯಾನೇಜರುಗಳಿಗೆ ತಮ್ಮ ಬ್ಯಾಂಕಲ್ಲಿ ಹಿಂದಿ ಅನುಷ್ಠಾನ ಮಾಡೋ ಜವಾಬ್ದಾರಿ ಇರತ್ತೆ. ಅದಕ್ಕೇ ನೋಡಿ ಪ್ರತಿ ಬ್ಯಾಂಕಲ್ಲೂ - ಅದು ಎಂಥಾ ಹಳ್ಳೀಲಿದ್ರೂ ಸರಿ - ಒಂದು ಬೋರ್ಡಲ್ಲಿ "ದಿನಕ್ಕೊಂದು ಹಿಂದಿ ಪದ" ಕಣ್ಣಿಗೆ ಕುಕ್ಕತ್ತೆ. ಇನ್ನು ಗುಮಾಸ್ತರ ಹತ್ರ ಸ್ವಲ್ಪ ಬೆಳ್ಳಗಿರೋರು ಹೋದ್ರೆ "ಕ್ಯಾ ಚಾಯೀಯೆ" ಅಂತ ಹಿಂದಿಯಲ್ಲೇ ಮಾತಾಡ್ಸೋದೂ ಉಂಟು.
ಬ್ಯಾಂಕಲ್ಲಿ ಕನ್ನಡ ಕಾಲ ಕಸಕ್ಕಿಂತ ಕಡೆ ಅನ್ಕೊಳ್ತಿರೋ ಕನ್ನಡದ ಗ್ರಾಹಕ
ಇವತ್ತು ತನ್ನ ನಾಡಲ್ಲೇ ಕನ್ನಡಿಗ ಗ್ರಾಹಕನ ಸ್ಥಿತಿ ನೋಡುದ್ರೆ ಬೇಜಾರಾಗತ್ತೆ ಗುರು! ತನ್ನ ನಾಡಲ್ಲೇ ಇರೋ ಬ್ಯಾಂಕಲ್ಲಿ ಕೆಲಸ ಆಗಬೇಕು ಅಂದ್ರೆ ಕಷ್ಟ ಪಟ್ಟಾದ್ರೂ ಹಿಂದೀಲಿ ಮಾತಾಡಬೇಕಾದ ಅನಿವಾರ್ಯತೆ ಬಹಳ ಕಡೆ ಎದ್ರಾಗತ್ತೆ. ಕನ್ನಡದಲ್ಲಿ ಕೇಳ್ದ್ರೆ "ಇರಿ ಒಂದ್ಸೊಲ್ಪ" ಅಂತ ಶಬರಿ ಥರಾ ಕಾಯಿಸ್ತಾರೆ, ಕಾಯ್ಸಿ ಕಾಯ್ಸಿ "ಸಾರಿ, ಇಲ್ಲಿ ಕನ್ನಡ ಬರೋರು ಯಾರೂ ಇಲ್ಲ" ಅನ್ನೋದು, ಇಲ್ಲಾ "ಲೋ ಹೋಗೋ ಹಳ್ಳೀ ಗುಗ್ಗೂ ನನ್ ಮಗ್ನೆ!" ಅನ್ನೋಹಂಗೆ ಮಾತಾಡ್ಸೋದು - ಇವೆಲ್ಲಾ ದಿನಾ ನಡೆಯುವಂಥವು! ಇನ್ನು ಏಟೀಯಮ್ಗಳಲ್ಲಿ ಇಲ್ಲಾ ಹಿಂದಿ ಬರಬೇಕು ಇಲ್ಲಾ ಇಂಗ್ಲೀಷ್ ಬರಬೇಕು ಅನ್ನೋ ಪರಿಸ್ಥಿತಿ ಇವತ್ತಿದೆ.
ಇವೆಲ್ಲದರಿಂದ ಇವತ್ತಿನ ದಿನ ಕನ್ನಡಿಗನಿಗೆ ತನ್ನ ನುಡಿ ಕಾಲ ಕಸಕ್ಕಿಂತ ಕಡೆ, ಹಿಂದಿಯಲ್ಲಿ ಮಾತಾಡಿದರೇ ಕೆಲಸ ಆಗೋದು ಅಂತ ಅನ್ಸಿ ಹಿಂದಿ ಹೇರಿಕೆಗೆ ಕನ್ನಡಿಗ ಸೋಲ್ತಿದಾನೆ, ನಿಧಾನವಾಗಿ "ನಾನು ಕೀಳು, ನಮ್ಮಪ್ಪ ಕೀಳು, ನಿಮ್ಮವ್ವ ಕೀಳು, ನಿನ್ ನಾಡು ಕೀಳು, ನನ್ ನುಡಿ ಕೀಳು" ಅನ್ನೋ ವಿಷಾನ ನುಂಗ್ತಿದಾನೆ.
ಹಿಂದಿ ಹೇರಿಕೆ ಬ್ಯಾಂಕುಗಳನ್ನ ಮಾತ್ರ ಅಲ್ಲ, ಇಡೀ ಕರ್ನಾಟಕವನ್ನ ನಿಧಾನವಾಗಿ ತಿಂತಿರೋ ಗೆದ್ದಲು
ಮೇಲಿಂದ ಮೇಲೆ ಸಿಕ್ಕಸಿಕ್ಕ ಕಡೆಯೆಲ್ಲಾ "ಹಿಂದಿ ಭಾರತದ ಮಿಕ್ಕೆಲ್ಲ ಭಾಷೆಗಳಿಗಿಂತ ಮೇಲು", ಅದು "ರಾಷ್ಟ್ರಭಾಷೆ" ಅಂತೆಲ್ಲ ಸುಳ್ಳು ಹೇಳಿ ಹೇಳಿ, ಚಿಕ್ಕವಯಸ್ಸಿಂದ ಪಠ್ಯಪುಸ್ತಕಗಳಲ್ಲಿ ಇದನ್ನೇ ಮಕ್ಕಳ ತಲೆಗಳಿಗೆ ತುಂಬಿ, ಬಾಕಿ ಭಾಷೆಗಳೆಲ್ಲ ಬರೀ ಮನೇಲಿ ಆಡ್ಕೊಳೋಂಥವು, ಹಿಂದಿ ಮಾತ್ರ ಮೇಲ್ದರ್ಜೆ ಭಾಷೆ ಅನ್ನೋ ಹುಳವನ್ನ ಇಡೀ ದೇಶದಲ್ಲಿ ಬಿಟ್ಟು ದಾರಿ ತಪ್ಪಿಸೋ ಕೆಲಸ ಮಾಡ್ತಿರೋರು ಇನ್ಯಾರೂ ಅಲ್ಲ, ಕೇಂದ್ರಸರ್ಕಾರವೇ. ಇದರಿಂದ ಕರ್ನಾಟಕ ನಿಧಾನವಾಗಿ ನಾಶವಾಗ್ತಾ ಇದೆ.
ಹಿಂದಿ ಹೋಗಿ ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗೋ ವರಗೆ ನಮ್ಮ ಭವಿಷ್ಯದಲ್ಲಿ ಕತ್ತಲೇನೇ
ಈ ಹಿಂದಿ ಗೆದ್ದಲು ನಮ್ನ, ನಮ್ಮ ಆತ್ಮವಿಶ್ವಾಸವನ್ನ, ನಮ್ಮ ನುಡಿಯನ್ನ, ನಮ್ಮ ನಾಡ್ನ ತಿಂದುಹಾಕೋದಕ್ಕೆ ಹೊರ್ಟಿದೆ. ಇದನ್ನ ಮೊದ್ಲು ಅರ್ಥ ಮಾಡ್ಕೊಂಡೋರು ಅಂದ್ರೆ ತಮಿಳ್ರು. ಇವತ್ಗೂ ಅವರು ಈ ವಿರೋಧವನ್ನ ಬಿಟ್ಟಿಲ್ಲ. ಅಂದ ಮಾತ್ರಕ್ಕೆ ಅವರೇನು ವಿರೋಧಿಸೋದ್ರಲ್ಲಿ ಬಹಳ ಗೆಲುವು ಕಂಡಿದಾರೆ ಅಂತೇನಿಲ್ಲ, ನಮಗಿಂತ ತುಂಬ ಮುಂದಿದಾರೆ, ಅಷ್ಟೆ. ನಮ್ಮ ತೂಗುತಲೆ ದಾಸರು (=ರಾಜಕಾರಣಿಗಳು) ಹಿಂದಿಯಿಂದ್ಲೇ ತಮ್ಮ ಕುರ್ಚಿ ಭದ್ರವಾಗಿರೋದು ಅಂದ್ಕೊಂಡು ಕನ್ನಡಕ್ಕೆ ದ್ರೋಹ ಮಾಡೋದ್ರಲ್ಲೇ ಇನ್ನೂ ಇದಾರಲ್ಲ ಗುರು!
ಹಿಂದಿ ಎಲ್ಲೀವರೆಗೆ ಭಾರತದ ಬೇರೆಯೆಲ್ಲಾ ಭಾಷೆಗಳಂಗೆ "ಒಂದು ಭಾಷೆ" ಅನ್ನಿಸಿಕೊಂಡು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಲ್ವೋ ಅಲ್ಲೀ ವರೆಗೆ ನಮಗೆ ಹತ್ತಿರೋ ಗೆದ್ಲು ನಮ್ನ ನಿಧಾನವಾಗಿ ತಿಂತಾ ಇರತ್ತೆ, ಭವಿಷ್ಯದಲ್ಲಿ ಕತ್ತಲೇನೇ ತುಂಬಿರತ್ತೆ ಗುರು!
ಈಗ್ಲೂ ಕಾಲ ಮಿಂಚಿಲ್ಲ, ಕನ್ನಡಿಗರು ಎಚ್ಚೆತ್ತುಕೋಬೇಕು, ಕಾಲು ಒದ್ರುಕೋಬೇಕು, ಅಷ್ಟೆ.
23 ಅನಿಸಿಕೆಗಳು:
idara virudda dooru daakalisalu ee koMdi baLasi
http://syndicatebank.in/asp/SyndComp.asp
ಈ ವಿಚಾರದಲ್ಲಿ ನಂಗೆ ಈಗ ಬರ್ತಿರೋ ಯೋಚ್ನೆ ಇದು: ಇತರ ರಾಜ್ಯದವರು ಬಂದು ಇಲ್ಲಿ ನೆಲೆಸಿ, ಇಲ್ಲಿಯದ್ದನ್ನೇ ಎಲ್ಲ ಉಪ್ಯೋಗ್ಸ್ಕೊಂಡು, ಇಲ್ಲಿ ಬಂಡವಾಳ ಹೂಡಿ ವಾಣಿಜ್ಯ ಮಾಡ್ತಿರೋದನ್ನ ಇದುವರೆಗೂ ಕಂಡಿದೀವಿ.. ಹಾಗೇ ಅವರ ಈ ಸಂಸ್ಥೆಗಳಲ್ಲಿ ಕನ್ನಡಿಗರ ಮೇಲೆ ಶೋಶಣೆ ಆಗ್ತಿರೋದ್ನೂ ಕಂಡಿದೀವಿ.. ಈಗ ಇಲ್ಲಿ ನಾವು ನೋಡ್ತಿರೋದು ಸಿಂಡಿಕೇಟ್ ಬ್ಯಾಂಕು - ಪೂರ್ತಿ ಕನ್ನಡಿಗರೇ ಮಾಡಿರುವ ಬ್ಯಾಂಕು - ಈ ಬ್ಯಾಂಕಿನಲ್ಲಿ ಬಹುಶಃ ೬೦ರಿಂದ ೭೦ ಶೇಕಡ ಕೊಂಕಣಿಯರೇ/ಕನ್ನಡಿಗರೇ ಇರೋದು.. ಹಾಗಾಗಿ ಇದು "ನಮ್ಮ" ವಾಣಿಜ್ಯ ಸಂಸ್ಥೆ. ಆದ್ರೂ ಈ ರೀತಿಯ ಹಿಂದಿ ದಾಸತ್ವ ಇದೆ ಅಂದ್ರೆ ಇದಕ್ಕೇನೋ ಬಲವಾದ ಕಾರಣ ಇದ್ಯೇನೊ ಅಂತ ನನ್ನ ಊಹೆ. ಯಾರಾದ್ರು ಈ ರೀತಿ ಯೋಚನೆ ಮಾಡಿದ್ದಲ್ಲಿ ಕಾರಣ ಏನಿರ್ಬೋದು ಅಂತ ತಿಳಿ ಹೇಳ್ತೀರ?
ಹಾಗ್ ನೋಡಿದ್ರೆ, ICICI ಬ್ಯಾಂಕಂತು ಈ ರೀತಿಯಲ್ಲಿ ಅತಿ ದೊಡ್ಡ (ಕೆಟ್ಟ) ಉದಾಹರಣೆ ಕೂಡ!! ನಮ್ಮವರು ಅಂತ ಬ್ಯಾಂಕ್ ಶುರು ಮಾಡ್ತಾರೆ, ಆಮೇಲೆ ಅದ್ಯಾರೊ ಬೇವರ್ಸಿನ ಕರ್ಸಿ MDನೋ Chairmanಓ ಮಾಡ್ ಕೂಡ್ಸ್ತಾರೆ.. ಇದೇ ಇರ್ಬೇಕು ಕಾರಣ ಅಲ್ವ? ಏನ್ಗುರು?
ನಮಸ್ಕಾರ ಎಲ್ರಿಗು,
ನಮ್ಮ ತಂದೆ ಅವರು ಕೂಡ ಬ್ಯಾಂಕ್ (ಕೆನರ)ನಲ್ಲೇ ಕೆಲಸ ಮಾಡುತ್ತಿರುವುದು. ಆದರೆ ಈ ರೀತಿಯ ದೂರನ್ನಾಗಲಿ, ಶೋಷಣೆಯನ್ನಾಗಲಿ ಅವರ ಬಾಯಿಂದ ಎಂದೂ ಕೇಳಿಲ್ಲ. ಆದರೆ ನಮ್ಮ ಗುರುಗಳು ಹೇಳಿದ್ದಾರೆ ಎಂದ ಮೇಲೆ ಸರಿಯಾಗೆ ಇರುತ್ತದೆ. ಅವರನ್ನು ಇನ್ನೊಮ್ಮೆ ಈ ವಿಶಯದಲ್ಲಿ ವಿಚಾರಿಸುತ್ತೇನೆ.
ಸುಂಸುಂಮ್ಕೆ ಅವರು ಹೇಳಿರುವಂತೆ ನಮ್ಮ ರಾಜ್ಯದವರೆ ನಡೆಸುತ್ತಿರುವ ವಾಣಿಜ್ಯ ಉದ್ಯಮಗಳಾದರು ಏಕೆ ಹೀಗೆ ಎಂದು ಸ್ವಲ್ಪ ಯೋಚನೆ ಮಾಡಿದಾಗ ನನಗನಿಸಿದ್ದು, ಇವೆಲ್ಲವು ರಾಷ್ತ್ರೀಕ್ರುತ ಬ್ಯಾಂಕ್ ಗಳು. ಹಾಗೂ ಇವುಗಳಲ್ಲಿ ಪರ ರಾಜ್ಯಗಳಿಗೆ ವರ್ಗಾವಣೆ ಮಾಡುವುದು ಸರ್ವೇ ಸಾಮಾನ್ಯ. ಅದರಲ್ಲು ಉನ್ನತ ಹುದ್ದೆ manager, officer ಆದವರಿಗಂತು compulsory ವರ್ಗಾವಣೆ. ಇದೇ ಕಾರಣಕ್ಕೆ ನಮ್ಮ ತಂದೆಯವರು ಸಹ ವರ್ಗಾವಣೆ ಬೇಡವೆಂದು ಹೇಳಿದ್ದು ನೆನಪಿದೆ. ಈ ಕಾರಣಕ್ಕೆ ಹಿಂದಿ compulsory ಇರಬಹುದೇ?
ಏನೇ ಆದರು ಹಿಂದಿ ಹೇರಿಕೆ ಸ್ವಲ್ಪವು ಸರಿ ಅಲ್ಲ. ಇದಕ್ಕೆ ಏನಾದರು ಪರ್ಯಾಯವಾಗಿ ನಾವು ಸಲಹೆ ಸೂಚಿಸಿದರೆ ಬ್ಯಾಂಕುಗಳಿಗು ಅನುಕೂಲ.
ಹೊಯ್ ಗುರುಗಳೇ..
ನಮ್ಮ ಉಡುಪಿ -ಮಂಗಳೂರಿನ ಹೆಮ್ಮೆಯ ಸಿಂಡಿಕೇಟ್ ಬ್ಯಾಂಕ್ ಲಿ ಇ ರೀತಿ ಮಾಡುದ್ ಕಂಡ್ ಭಾರಿ ಬೇಜಾರ್ ಆಯ್ತು ಮರಾಯ್ರೆ.. ನಮ್ಮ ಕುಂದಾಪುರದ ಬದಿಗ್ ಬಂದ ಹಿಂದಿ ಅಂದ್ರ " ಎಂತಾ ,, ಹಂದಿ ಯ??" ಅಂತ ಜನ ಕೇಂತ್ರ,, ಅಲ್ಲೆಲ್ಲ ಹಿಂದಿ ಅಂದ್ರೆ ಎಂತಾ ಅಂತೇ ..ಗೊತ್ತಿಲ್ಲ ಜನಕ್ಕೆ.. ಹಿಂದಿ ಮೆರಸಿ ಮೆರಸಿಯೆ ಹಿಂಗಾದ್ದ ಮರಾಯ್ರೆ.. ಇದನ್ನ ನಮ್ಮ ಜನರ ಮಂಡೆಯಿಂದ ತೆಗಿಕ ಅಂದ್ರೆ ಒಂಚುರ್ ಟೈಮ್ ಬೇಕ.. ನೀವ್ ಲಾಯ್ಕ್ ಮಾಡಿ ಕೆಲ್ಸ ಮಾಡ್ತಾ ಇದ್ರಿ,, ಹೀಂಗೆ ಮಾಡ್ತಾ ಐಕಣಿ..
What a gross article!
Namma maneyalli thande marathi, thaayi Kannada, thatha Telugu avaru. Aadharinda ellara anakoolakke Hindi matadutheve. Ondu rashtravagirabekadare, ondu bhaasheyu athyagathya. Americadalli halavaru bhaashe mathaduva janariddaru, alliya bhaashe onde. India bittare diverse culture iruva naadu adonde antha ee udhaaharane.
Naanu bharathadyanta odadidenne. Bhasheya korathe endu aagilla (tamil nadu bittu). Haagantha kannadavannu marethilla.
Koopastha mandukaragi, namma bhaashe, adara hemme annuvavavaru shuddha moorkharu. Nimmantha narrow-minded blog namma janara miniscule proportion anna represent maduthade endu nambuthene.
Except for spreading mindless hatred, you have achieved little else in your blog. Adara badalu, ella bhaashegala madhya prema belisallike prayathnisi. Hatred can only give rise to more hatred. Adarinda yaava preethiyu huttalu saadhyavilla.
ayya sacred letteru,
Ninage ee lekhana arthavagideya aMta nanage anumaana barta ide. ee blognalli nanage yara melu dwesha kaarta iddare amta nanagenu annisalla. ee lekhanagaLalli kannada preethi kaaNutte adanne neevu bere bhaashegaLa viruddha iro dwesha annikondare, adu nimma artha maadikoLLo capacity torisutte. matte neevu tanna bhaasheya bagge hemme paduvavaru moorkaru andiddira, alle gottagutte nimma mooratana hegide aMta.
enguru, neevu iMta shata moorka muTTala shikamani bagge tale kediskobedi, nimma kelsa munduvaresi.
nimmava,
Sunil
@Scarred Letters
What a CROSS family !!
vishyakke barona, nimma samsara ondu exception.nimmalli yarigu gottirada parakiya basheyannu yellaru balasutta irodhu kooda bahala virala mattu ee tara samsara yeshtive andare beralanike ashte.addarinda adu example agokke sadyve illa.
yellara samsara nimma tarane ide antha neevu andukollodhu, yellara samsaradallu HINDI balasi antha helodhu nijavaada koopa manduka vaada.yaake andare, vastave bere ide.
nimma logic mele hodre baya agotte, kelsakke baro 3-4 jana byank adikaarigala saluvaagi 100000+ jana avarige gottirada bashe kalibeka ?. 10000+ hosa bashe kaliyodhu sulbhave illa 3-4 jana janara bashe kaliyodhu sulabava nive nirdara maadi.
allari swami, neevu Karnatakadalli SSLC odidhirra ?. Marks hecchu barabeku antha hecchagi First Lang Samskruta, 2nd Lang - English, 3rd Lang Kannada thogolorre hecchu. illa idara reverse combination thogotarre. andare Highschool nalli HINDI odo prameyave barolla anthavaru yen u mannu tinnabekaa ?
idu HATERED bhavane samanyavaagi tarolvaa ?
intha hucchu tuqlaq rules na neevu HINDI ide antha support madodhu nodidre nagu barotte. swalpa VASTAVA artha madkolli swaami.
bashe madye prema barabeku andare, yella sama chittadalli nodabeku. ondu kannige benne, innodhu kannige sunna maadidannu prathibatisade irodhu DEMOCRACY ya avamana agotte ashte.
Scarred mahaatmare,
yellarannu hedarisibitralree neevu!! nimma maneyalli obbaru kannadigaru, obbaru Marati mattobbaru Telugu. nim prakaara yaarigoo beda anta yellarigoo aparichitavaada Hindi tandu maneli koorisikondideera..
So, Nim logic prakaara yellara food desires annu neutralize madakke anta dina maneli pizza madkond tinteera??
I went through the 6 page application form and no where though that they are pro/against some language.
Few clarifications ...this neither means im related to bank in some way nor i dont have kannada abhimana in me .....
1. The posting can be out of karnataka also. They hav not mentioned the posting will be in karnataka only. So they asked for HINDI, which is widely spoken/understood in majority of North Indian states.
2. They also have mentioned this: 'Candidates should have studied State/Regional Language as one of the language
subjects at least up to SSLC/X Standard. The relevant mark-sheet showing the state
language as one of the subjects should be highlighted'
I appreciate and very happy for the concern enguru is showing towards kannada but We should always remeber that a thin line separates abhimana and fanatism.
~Kannada Abhimani
ನಮ್ಮ ಕರಾವಳಿಯ ಉದ್ಯಮಿಗಳು ಶುರು ಮಾಡಿದ ಬ್ಯಾಂಕಗಳನ್ನ ರಾಷ್ಟ್ರೀಕೃತಗೊಳಿಸಿ ಈಗ ನಮ್ಮ ಮೇಲೆ ಹಿಂದಿ ಹೇರ್ತಾ ಇದೆ ಕೇಂದ್ರ ಸರ್ಕಾರ. ಈ ಅಧಿಕಾರ ಕೇಂದ್ರೀಕರಣ ಅತೀಯಾಯ್ತು. ಈ ಕೇಂದ್ರೀಕರಣಕ್ಕೆ ಮೊದಲು ಕೊಡಲಿ ಪೆಟ್ಟು ಹಾಕಬೇಕು.
@Scarred Letters: ನಿಮ್ಮ ತರ್ಕ ಸರಿಯಿಲ್ಲ. ನಮ್ಮ ರಾಜ್ಯದಲ್ಲಿ ಕೆಲಸ ಮಾಡವ್ರಿಗೆ ಕನ್ನಡ ಮೊದಲು ಬರಬೇಕು. ಬೆಂಗಳೂರಿನ ಕೆಲ ಬ್ಯಾಂಕಗಳಲ್ಲಿ ಕನ್ನಡದ ಗಂಧವಿಲ್ಲದ ಕೆಲವರು ಗ್ರಾಹಕರ "ಸೇವೆ" ಮಾಡ್ತಾರೆ. ನಾವೆಲ್ಲ ಇವರ ಭಾಷೆ ಕಲಿಬೇಕು ಅನ್ನೋದು ನಿಮ್ಮ ಮೂರ್ಖತನ.
ಇದೇ ಪರಿಸ್ಥಿತಿ ಮುಂದುವರಿದರೆ ಒಂದು ದಿನ ಸಾಮಾಜಿಕ ತಿಕ್ಕಾಟ/ಹೊಡೆದಾಟಗಳು ಹೆಚ್ಚಾಗ್ತವೆ. ಅಸ್ಸಾಮಿನ ಪರಿಸ್ಥಿತಿ ಇಲ್ಲಿಗೂ ಬರಬಹುದು.
karnaaTakadalli siMDikET byAMk mattu railwe ilaakhe maatra kannaDa virOdhi neeti anusarisuttilla.
ella kEMdra sarkaari kaChErigaLalloo kannaDakke dorakabEkaada maana, sanmaana, praamukhyate, sthaana dorakuttilla. hiMdivaadigaLu tuMbikoMDEruva I kEMdra sarkaari kaCErigaLu kannaDada bagge malataayi dhOraNe taLediruvudu kaTuvaada satya.
tribhaaShA sUtrada prakAra karnaaTakadalli kannaDakke agra sthaana dorakabEku. aadare kannaDakke elloo prAshastya doretilla. saMvidhaanadallillada "raaShTra bhaaShe" eMba paTTakaTTi hiMdi bhaaSheyannu namma mEle hErutiddaare. idu khaMDaneeya.
saMvidhaanada prakaara 17 bhaaShegaLannu adhikRuta bhaaShegaLeMdu gurutisalaagide. hiMdi bhaaShe saha kannaDada haage adhikRuta bhaaShe maatra. adakke kannaDakke siguva sthaana maanagaLaShTu maatra dorakabEku. innU hecchu praashastya sigabEkAddu kannaDakke karnaaTakadalli.
saMvidhaanadalli yaavudE bhaashage "RAShTra BaaShe" eMba sthaana neeDilla.
modalu ee hiMdivaadigaLa viruddha samara saarabEku. hiMdi naamaphalakagalige DaaMbaru hacchi, hiMdi chitragaLannu bhahiShkarisi, beMgaLoorannu haaLu maaDiruva hiMdi valasigarannu hoDedODisi. aga dehaliyalli ecchettukoLLuttaare. tamiLunaaDinalli I hiMdivaadigaLa aaTa naDeyuvudilla. Eke? allina jana hiMdiyavara baala kattarisiddaare. iDI raajyada janate hiMdiyannu okkoraliniMda BahiShkarisuttaare.
karnaaTakada namma "seeDles" pratinidhigaLLannu modalu ugiyabEku.
idara bagge kannaDigarellarU vichaara maadi gamanaharasabEku.
Adarsh
scarred letters avare ,
eega assam nalli nodi vipareetha hindi herike maadidrinda enu agtha ide antha. elle agali "nammathana" kke dhakke bandre aaga horata maadale bekagatte. idu prakrutiya niyama. eega karnatakakke "KANNADA" anta ondu bhashe irbekadre bere bhashe yaake beku swami. nammadannu naavu ishta patre adu hege narrow mindedness agatte.
Swalpa "Hindi andre rashtreeyate" , "Hindi andre Rahstra bhashe annobrame" yinda ache banni. - Danyasi
guru ka(kannada abimani),
summane ee tara hesaru itkondu bayige bandiddhu baredre siva mecchutanna.
melagade obbaru sariyaagi helidarre, adannu artha madkollade
idi form odi inneno artha madikonda haage ide. yenu annokku agolla yaake adre heLo munchene WARNING bere kottidhiyya.
Siva, ni helidanne 2 cases aagi thogolona.
Case 1) Hindi clause
ee ondu requirement ittu South India inda baro ardhakke ardha applications na reject madtarre.
Case 2) Regional Lang clause
yaavude raajyadalli CBSE/ICSE odiro haikalige aaya rajyada basheya gandha gaali gottirolla,so avarella filter agi bidtarre.
inna ulkoloru yaaru ??
BIMARU states naavaru maatra, yake andre Case -1 helo haage HINDI chennagi odirtarre, saladakke avara regional language kooda Hindine agirotte so 2 Cases pass madkondu bartarre.
ide tara buddi balista idre munde CENTRAL GOVT kelsadalli BIMARU rajyadavaru bittu bere yaaru kanisolla guru.
-dEEPu
"nandu berene Typeu"
ಹೆಸರಿಲ್ಲದವರೇ,
ಒಂದು ದೇಶಕ್ಕೆ ಒಂದೇ ಭಾಷೆಯಿರಬೇಕು ಅಂತ ತಮ್ಮ ಅನಿಸಿಕೆಯಾದರೆ ಇದಕ್ಕಿಂತ ದೊಡ್ಡ ದೇಶದ್ರೋಹದ ಕೆಲಸ ಇನ್ನೊಂದಿಲ್ಲ. ಯಾವ ದೇಶವೂ ಒಂದು ದೇಶವಾಗಿದೆ ಅಂತ ಒಂದು ಭಾಷೆಯನ್ನು ಒಪ್ಪಿಕೊಂಡಿಲ್ಲ. ಒಂದು ಭಾಷೆಯನ್ನು ಮಾತಡ್ತಾರೆ ಅಲ್ಲಿ ಜನ ಅಂತ ಒಂದು ದೇಶ ಹುಟ್ಟುತ್ತೆ ಅಷ್ಟೆ. ಒಂದು ದೇಶವಾಗಿದ್ದೇವೆ ಅನ್ನುವ ಅಥವಾ ಒಂದು ದೇಶವಾಗಿರಬೇಕು ಎನ್ನುವ ಕಾರಣಕ್ಕಾಗಿ ಹಿಂದಿಯನ್ನು ಒಪ್ಪಿಕೊಳ್ಳಬೇಕು ಅನ್ನುವುದಾದರೆ, ನಾವಿನ್ನೂ ಭಾರತದ ದೇಶದಲ್ಲಿರಬೇಕಾ ಅಂತ ಯೋಚಿಸಬೇಕಾಗುತ್ತದೆ.
ಈ ಪ್ರಶ್ನೆ ದೇಶಕ್ಕೆ ಸ್ವಾತಂತ್ರ ಬರುವ ಮೊದಲೇ ಹುಟ್ಟಿಕೊಂಡಿತ್ತು. ಆಗ ಎಲ್ಲ ಭಾಷೆಗಳೂ, ಭಾಷಿಕರೂ, ಧರ್ಮದವರೂ, ಪ್ರದೇಶದವರೂ ಸಮಾನವಾದ ಹಕ್ಕುಗಳನ್ನು ಹೊಂದಿದ್ದಾರೆ ಅಂತ ಬೆಣ್ಣೆಯಂತೆ ಮಾತಾಡಿ ಅದನ್ನೇ ಸಂವಿಧಾನದ ಆಶಯ ಎಂದು ಹೇಳಿ ಯಾಮಾರಿಸಿದರು. ಅದಾದ ಕ್ಷಣದಿಂದಲೇ ಮೆಲ್ಲಗೆ ಆದಳಿತ ಭಾಶೆಯಾಗಿ ಹಿಂದಿ, ಅಧಿಕೃತ ಭಾಷೆಯಾಗಿ ಹಿಂದಿ, ಹಿಂದಿ ಪ್ರಚಾರ ಪರಿಷತ್ ಇತ್ಯಾದಿಗಳನ್ನ್ನು ಒಂದೊಂದಾಗಿ ಹೇರಿಕೊಂಡು ಬಂದರು. ಇರಲಿ ಬಿಡ್ರಿ ದೇಶದ ೯೦% ಜನ ಹಿಂದಿ ಮಾತಾದ್ಲಿ. ಸೋ ವಾಟ್. ಅದಕ್ಕೆ ನಾವು ನಮ್ಮ ಭಾಷೆಗಿಂತ ಮೇಲಿನ ಸ್ಥಾನ ಹಿಂದಿಗ್ ಕೊಡಕ್ ಆಗುತ್ತಾ? ಕನ್ನಡ ಕನ್ನಡಿಗರಿಗೆ ಬರಿ ಮನೆ ಮಾತು ಅಂತ ಅಂದುಕೊಂಡರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ. ಐದು ಕೋಟಿ ಕನ್ನಡಿಗರಲ್ಲಿ ಎಷ್ಟು ಜನಕ್ಕೆ ಹಿಂದಿ ಕಲಿಸ್ತೀರಾ? ಯಾಕ್ ಕಲೀಬೇಕು? ನಮ್ಮೂರಲ್ಲಿರೋ ಫೋರಮ್ ಮಳೀಗೆಗೆ ಹೋದ್ರೆ ಹಿಂದಿ ಬರ್ಲೇ ಬೇಕು ಅನ್ನೋದಾದ್ರೆ, ನನ್ನೂರಿನ ಬಿಗ್ ಬಜಾರ್ ನಲ್ಲಿ ನಂಗೆ ಕೆಲಸ ಬೇಕು ಅಂದ್ರೆ ಹಿಂದಿ ಕಲಿತಿರಲೆ ಬೇಕು ಅನ್ನೋದಾದ್ರೆ ಯಾಕ್ರೀ ಹಿಂದೀನ ದ್ವೇಶ ಮಾಡಬಾರದು.
ಒಂದು ತಿಳ್ಕೊಳ್ಳಿ. ದ್ವೇಷ ಯಾವ ಭಾಶೆ ಬಗ್ಗೇನೂ ಇರಲ್ಲ. ದ್ವೇಷ ಇರೋದು ನಮ್ಮದಲ್ಲದ ಭಾಷೆಯನ್ನು, ಸಂಸ್ಕೃತಿಯನ್ನು ನಮಗೆ ಅನಿವಾರ್ಯಯೆನ್ನುವ ಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನ ಮಾಡುವುದನ್ನು. ಈ ಕೆಲಸವನ್ನು ವಲಸಿಗರೇ ಮಾಡಲೀ, ಸರ್ಕಾರಗಳೇ ಮಾಡಲೀ ಅಥವಾ ತಮ್ಮಂತಹ 'ಹಿಂದಿ ಪ್ರವಕ್ತ' ಕನ್ನಡಿಗರೇ ಮಾಡಲಿ ಅದನ್ನು ಧಿಕ್ಕರಿಸಲೇ ಬೇಕು. ಇಲ್ಲದಿದ್ದರೆ ನಮ್ಮ ನಾಡು ನುಡಿಯ ಅವನತಿಯನ್ನು ಕಾಣಬೇಕಾಗುತ್ತದೆ ಅಷ್ಟೆ.
ವೈವಿಧ್ಯತೆಯನ್ನು ಅಳಿಸೋ ಪ್ರಯತ್ನ ಮಾಡಿದರೆ ಅದು ನಮ್ಮ ಪ್ರೀತಿಯ ಭಾರತ ದೇಶವು ಛಿದ್ರ ಛಿದ್ರವಾಗಲು ಕಾರಣವಾದೀತು ಅನ್ನೋ ಆತಂಕ ನಮ್ಮದು . . . ಅರ್ಥ ಮಾಡ್ಕೊಳ್ಳಿ.
ನಮಸ್ಕಾರ
ನೈಜ ಭಾರತೀಯ
-dEEPu, ("nindu yaavdo ondu Typeu" )
neevu heLo logic opkotini adarartha
naanen baayige bandiddella bardidini anta alla .... haagantha central govt huddegalalli/bank nalli kannadigare illa anta andre nagtare ...
and what makes you think the southies dont know hindi ? If you ever travelled to Northern part of karnataka almost every one knows hindi (atleast can speak/understand properly ) ...now dont tell me they dont represent karnataka ....
Asking for kannada in w.bengal is fanaticism. asking for kannada in assam is fanaticism. Asking for kannada in Karnataka is my birth right as a kannadiga. hindi herike in karnataka is hindi fanaticism by n.indians.nammooralli nam bhashe kelidere adanne fanaticism antare... yaar gotte? nam janaane guruuuu!! adakke ee paristhiti bandirodu.. navella blog nalli barita irodu...
ಅಪ್ಪಾ ಸ್ಕಾರ್ಡ್ ಲೆಟರ್ಸು, ಭಾಷೆಗಳ ನಡುವೆ ಪ್ರೇಮ ಬೆಳೆಯಬೇಕಾದರೆ ಆ ಭಾಷೆಗಳು ಮೊದಲು ಉಳಿಯಬೇಕು ತಾನೆ? ಹ್ಹಹ್ಹಹ್ಹ! ಒಂದಾದ ಮೇಲೊಂದು ಕ್ಷೇತ್ರದಿಂದ ಹಿಂದಿ/ಇಂಗ್ಲೀಷ್ ಬಿಟ್ಟು ಬೇರೆ ಭಾಷೆಗಳು ಮಾಯವಾಗುತ್ತಿರುವಾಗಲೂ ನಿಮ್ಮಂಥವರಿಗೆ ಅರ್ಥವಾಗುತ್ತಿಲ್ಲವಲ್ಲಪ್ಪ! ಕಣ್ಣು ಬಿಡು ಮಗು!
"ಕನ್ನಡ ಅಭಿಮಾನಿ" ಚೆನ್ನಗಿ ಹೇಳಿದ್ದೀರ. ಮೊದಲು ನನಗೂ ಹಾಗೇ ಅನ್ನುಸ್ತು, ಈ ಹುದ್ದೆ ಕರ್ನಾಟಕದಲ್ಲಿ ಇಲ್ವೇನೋ, ನಮ್ ಏನ್ಗುರು ಯಾಕೋ ಈ ಸಾರಿ ಸ್ವಲ್ಪ ಜಾಸ್ತಿನೇ hypothetical ಆಗಿದ್ದ್ರು ಅಂತ. ಕನ್ನಡ, ಕನ್ನಡಿಗರನ್ನ ತುಳಿಯೋದಕ್ಕೆ ಯಾರಿಂದಲೂ, ಯಾವಾಗಲೂ ಸಾಧ್ಯವಿಲ್ಲ ಗುರು :) ನಾವು ಬಿಟ್ಕೊಟ್ರೆ ಆಗುತ್ತೆ ಅಷ್ಟೆ. anonymous ನಿಮ್ಮ ಅನಿಸಿಕೆಗಳೂ ಸ್ವಲ್ಪ ಸರಿಯಾಗೇ ಇದೆ.
"ಕನ್ನಡ ಅಭಿಮಾನಿ" ಮತ್ತು anonymous, ಅದೆಲ್ಲಾ ಸರಿ, ಆದ್ರೆ ದಯವಿಟ್ಟು ಅಲ್ಲಿಗೇ ನಿಲ್ಬೇಡಿ ಸ್ವಲ್ಪ ಮುಂದೆ ಬನ್ನಿ, ಸ್ವಲ್ಪ ಒಳಗೆ ನೋಡಿ; ಈ ಬ್ಲಾಗಿನಲ್ಲಿ there is a deeper intent than that ಅಂತ ಅರ್ಥ ಆಗುತ್ತೆ.
ಇದು ಬರೀ ಸಿಂಡಿಕೇಟ್ ಬ್ಯಾಂಕಿನ ವಿಷಯವಲ್ಲ, but a more general problem being addressed through a not-so-general example ಅಂತ ಗೊತ್ತಾಗುತ್ತೆ. ಧಯವಿಟ್ಟು ಅದನ್ನ ತಿಳ್ಕೋಬೇಕು. ಎಷ್ಟೊ ಕರ್ನಾಟಕದ ಹುದ್ದೆಗಳಿಗೆ ಈ requirement ಕೇಳೊದರ ಬಗ್ಗೆ ಈ ಟೀಕೆ, ನಮ್ಮ horizonನ ನಾವೇ ಸರಿ ಮಾಡ್ಕೋಬೇಕು.
ಆದ್ರೂ ನನ್ನ ಪ್ರೀತಿಯ ಗೆಳಯರೆ, ಎಲ್ಲರೂ ಅವರವರ ಅಭಿಪ್ರಾಯಗಳನ್ನ ಮುಕ್ತವಾಗಿ ವ್ಯಕ್ತ ಪಡಿಸೋ ಮುಕ್ತ ಫೊರಮ್ ಇದು ಆದ್ರೆ ಒಳ್ಳೆದು ಅನ್ಸುತ್ತೆ. ಹುಚ್ಚುತನ, ಪೆದ್ದುತನ, ತಲೆಕೆಟ್ಟೊರು ಅಂತೆಲ್ಲ ವಿಷೇಶಣಗಳನ್ನ ಬಳೆಸೋದು ಕಡ್ಮೆ ಮಾಡುದ್ರೆ ಒಳ್ಳೇದೇನೊ ಅನ್ಸುತ್ತೆ. ಇರ್ಲಿ.
೧) ನಾನು ಮೊದಲನೇ ಬಾರಿ ಈ ಫೊರಮ್ ಗೆ ಬಂದಾಗ ನಾನೂ ಇಲ್ಲಿಯ ಸಧಸ್ಯರನ್ನ "fanatics" ಅಂತ ಕರೆದಿದ್ದು ಉಂಟು, ನನ್ಗೂ ಸ್ವಲ್ಪ fundamentalistic tone ಕಾಣಿಸ್ತು ನಿಜ. ಆದ್ರೆ ಕೆಲವು ಲೆಖನಗಳ ನಂತರ ಸ್ವಲ್ಪ ಅರ್ಥ ಆಯ್ತು ನಂಗೆ ಈ ಬ್ಲಾಗಿನ ವಿಷೇಶತೆ ಏನು ಅಂತ. ಇದು ಸಾಕಷ್ಟು ಒಳ್ಳೆ ಉದ್ಧೇಷದಿಂದ ಶುರು ಆಗಿ, ನಡೀತಾ ಇರೋದು ಅಂತ. ನೀವೊ ಹೀಗೆ ಓದುತ್ತಾ ಬನ್ನಿ ಗೊತ್ತಾಗುತ್ತೆ.
೨) ಇಂತಾ ಯಾವುದೇ open forumನಲ್ಲಿ ನೀವು ಹೋದಾಗ fanatics, passionate ones, "ಬುದ್ದಿಜೀವಿಗಳು", rationalists, "literates", ಸಿಗ್ತಾರೆ. ಹೀಗೆ ಒಂದು ಡೈವರ್ಸ್ ಗುಂಪು ಸಿಕ್ಕೇ-ಸಿಗುತ್ತೆ. ಅಂತಾ ಗುಂಪಿದ್ದಾಗ ಡೈವರ್ಸ್, ವಿಬಿನ್ನ ಅಭಿಪ್ರಾವಗಳು, ದೃಷ್ಟಿಗಳು ವ್ಯಕ್ತವಾಗುತ್ತೆ, ಅದನ್ನ ದಯವಿಟ್ಟು ಅರ್ಥಾಮಾಡ್ಕೋಬೇಕು. ಎಲ್ಲರಿಗೂ ಅವರವರು ಹೇಳೋದೇ ಸರಿ ಅನ್ನಿಸೋದು ಸಹಜ, ನಿಮಗೂ ಕೂಡ. ಆದ್ರಿಂದ ಕನ್ನಡದ ಬಗ್ಗೆ ಸ್ವಲ್ಪ ಯೋಚಿಸಿ ದಯವಿಟ್ಟು ಸ್ವಲ್ಪ ಬಿಚ್ಚು(open) ಮನಸ್ಸಿನಿಂದ contribute ಮಾಡಿ. ಈ forum ಆ ದಿಕ್ಕಿನಲ್ಲಿ ಒಂದು practise ground ಆಗ್ಲಿ ಅಂತ ಇದರ ಉದ್ದೇಶ ಅಂತ ತಿಳೀರಿ. ಇರ್ಲಿ.
೩) ಮೇಲೆ ಹೇಳ್ದಂತೆ, ಕೆಲವೊಮ್ಮೆ ಬಿನ್ನಾಭಿಪ್ರಾಯಗಳು ಬರೋದು ಸಹಜ, ಅದು ಎಲ್ಲಾ open forums ನಲ್ಲೂ ಇದ್ದದ್ದೆ, ಆದ್ರೆ ಈ ಬ್ಲಾಗ್ ಮಾಡ್ತಿರೋ grassroot level ಕೆಲ್ಸ ಆಗ್ಲೇ ಬೇಕು. ಅದರ ಬಗ್ಗೆ ಸ್ವಲ್ಪ ಯೊಚ್ಸಿ.
೪) ಹಿಂದಿ ಕೆಲೆತು, ಬಳೆಸಿ, ಹೊಗಳಿ, ಪ್ರೀತಿಸಿ, ಉಪಯೋಗಿಸೋ ಅಂತಾ ಕನ್ನಡ ಅಭಿಮಾನಿಗಳೂ ಇದ್ದಾರೆ, ನಾನೂ ಕೂಡ ಭಯಂಕರ ಹಿಂದಿ ಅಭಿಮಾನಿ. ಹಿಂದಿ ನನಗೆ ಬೇರೆ ಭಾರತೀಯರ ಜೊತೆ ಸಂಬಂಧ ಬೆಳೆಸಲು ತುಂಬಾ ಅನುಕೂಲ ಮಾಡಿಕೊಟ್ಟಿದೆ. ಹಿಂದಿ ಕಲೆಯಿರಿ, ಬೇಕಾದ್ರೆ ಕಲೆಸಿರಿ, ಬಳೆಸಿರಿ, ಆದರೆ ಅದನ್ನ enforce ಮಾಡಲು ಹೋಗಬೇಡಿ ಅನ್ನೋ ಮನೋಭಾವ ಇಲ್ಲಿ ವ್ಯಕ್ತವಾಗುತ್ತೆ ಅಷ್ಟೆ.
ಸಂಸ್ಕೃತದ ಬಗ್ಗೆಯೂ ನನ್ನ ಪ್ರಕಾರ "ಕೆಟ್ಟ" ಟೀಕೆಗಳು ಬಂದ್ವು ಇಲ್ಲಿ, ಸ್ವಲ್ಪ ಕೋಪ ಬಂತು, ಜಗಳವಾಡುದ್ವೀ , ಅದೆಲ್ಲಾ ಸಹಜ. ಆದ್ರೆ ಕನ್ನಡಕ್ಕೆ ಅವರದೇ ಆದಂತ ಶೈಲಿಯಲ್ಲಿ ಕೆಲ್ಸ ಮಾಡ್ತೀವಿ ಅಂತ ಮುಂದು ಬಂದಿರೋ ಇಲ್ಲಿಯ ಅಭಿಮಾನಿಗಳಿಗೆ ಪ್ರೋತ್ಸಾಹ ಕೊಡಬಯಸಿ, ಕನ್ನಡಕ್ಕೆ ಅದು ಒಳ್ಳೆಯದು. ನಿಮಗೆ ಯಾವುದಾದರೂ ತಪ್ಪು ಅನಿಸಿದರೆ ವ್ಯಕ್ತ ಪಡೆಸಿ, ಆದರೆ ಬರೀ ತಪ್ಪುಗಳನ್ನೇ ಕಂಡ್-ಹಿಡೀತಾ ಇರ್ಬೇಡಿ ಆಗ ನೀವೇ negative ಆಗ್ತೀರಾ. ಅಲ್ವಾ?
೫) ಕನ್ನಡನಾಡಿನಲ್ಲಿ ಈಗಿನ ವಾತಾವರಣ ಮತ್ತು ಅವ್ಯವಸ್ಥೆ ನೋಡಿದರೆ, ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಯೋಚಿಸಿದರೆ, ನಮ್ಮ ಬೆಂಗಳೂರಿನ ಮಿಶ್ರ (heterogenous nature)ನ ನೋಡಿದ್ರೆ ಗೊತ್ತಾಗುತ್ತೆ, ನಾವು ಸ್ವಲ್ಪ ಜೋಕೇಯಾಗಿಲ್ಲದಿದ್ದಲ್ಲಿ ನಮ್ಮ identityಯನ್ನ ಕಳ್ಕೊತೀವಿ ಅಂತ. ಚೈನಾದಲ್ಲಿ ಕೆಲವು ವರ್ಷಗಳ ಹಿಂದೆ ಮಾವ್ಅವರ "cultural revolution" ಬೇಕಾಗೇ ಇರ್ಲಿಲ್ಲ ಹಾಗ್ ನೋಡುದ್ರೆ, ಆದ್ರೆ ಕೆಲವೊಮ್ಮೆ ಏಕೀಕರಣಕ್ಕೆ ಈ ತರಹದ ಕೆಲಸಗಳು ಅವಶ್ಯಕ.
Change Management ಅಂದ್ರೆ ನಿಮ್ಗೆ ಗೊತ್ತಿರ್ಬೇಕು, ಇಲ್ಲಿ ಅದೇ ಆಗ್ಬೇಕು, ಸ್ವಲ್ಪ ತಳಮಳ ಸಹಜ ಆದ್ರೆ ಆಗ್ಲೇಬೇಕಾದ ಕೆಲಸಗಳಿವು.
ಇವುಗಳ ಜೊತೆಗೆ ಕೆಳಗಿನ ಮುತ್ತುಗಳನ್ನ ತಲೆಯಲ್ಲಿ ಇಟ್ಟುಕೊಂಡು ಇನ್ನೂ ಅರೆಯೋಣ ... ಈ ಬ್ಲಾಗ್ ಇವುಗಳನ್ನ ಮೀರಿ ಯೊಚಿಸುತ್ತಿಲ್ಲವೆಂದೂ ದಯವಿಟ್ಟು ತಿಳಿಯಿರಿ ...
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೂ? - ಮಂಕುತಿಮ್ಮ || ೧೬
ಒಂದೆ ಗಗನವ ಕಾಣುತೊಂದೆ ನೆಲವನು ತುಲಿಯು |
ತೊಂದೆ ಧ್ಯಾನವನುಣ್ಣುತೊಂದೆ ನೀರ್ಗುರ್ಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೋಳಗೆಂತು |
ಬಂದುದೀ ವೈಷಮ್ಯ ? - ಮಂಕುತಿಮ್ಮ || ೧೪
ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದೆ |
ತಳಮಳಕೆ ಕಡೆಯೆಂದೋ? - ಮಂಕುತಿಮ್ಮ || ೧೫
ಮಜ ಮಾಡಿ.
ಕನ್ನಡ ಬಾಳಲಿ, ಬೆಳೆಯಲಿ.
ಧನ್ಯವಾದ ಏನ್ಗುರು, ಹೊಸಹೊಸ viewpointsನ ತೋರ್ಸ್ಕೊಡ್ತಿರೋದಕ್ಕೆ.
Kannada is #1, If I need a second language I will choose that to be English. I can talk to 5 billion more people.
Hindi & Tamil, I will never learn unless I have to kiss their ass for any reason.
http://budubudike.blogspot.com/2007/08/blog-post_10.html
ಸ್ವಾಮಿ ananumous, ಸುಮ್ಸುಮ್ಮನೆ ವಿಚಿತ್ರ ಅರ್ಥ ತೆಗೆದು ಮಾತಡಬೇಡಿ. ದೀಪು ಹೇಳಿದ್ದು ಸುಮಾರು ಜನ ದ.ಭಾ ದವರು ಅವಕಾಶ ವಂಚಿತರಾಗ್ತಾರೆ ಅಂತ ಹೊರತು ಕನ್ನಡದವರು ಯಾರು ಇಲ್ಲವೇ ಇಲ್ಲ ಅಂತ ಅಲ್ಲ. ಬರೀಬೇಕು ಅಂತ ಬರೀಬೇಡಿ, ವಿಶಯ ಇದ್ರೆ ಹೇಳಿ ಇಲ್ದಿದ್ರೆ ಸ್ವಲ್ಪ ಮುಚ್ಕೊಂಡಿರಿ.
ಇಲ್ಲಿ ಉತ್ತರ ಅಥವ ದಕ್ಷಿಣ ಕರ್ನಾಟಕ ಅಂತ ಬೇದಭಾವ ಇಲ್ಲ, ಎರಡು ಕಡೆ ಹಿಂದಿ ಬರದವರು ಬರುವವರು ಇದ್ದಾರೆ.
enguru, modalu blog inda anonymous tegiri, intha FACELESS COWARDSge reply mado karma tappoptte.
ananimasa() swami naan nima type alla, yake andre nim arguments pelava antha gottu nimage. odi miss understand madkolodrallii neevu Sbramaniyam swami na miristira bidi. naanu heliddhu yenu , neevu helodhu yenu.
* Bankinalli kannadavaru illa antha yar heliddhu, ,avarannu Kannada virodhi antha yav nan maga karediddu. allari ee blog na hako dardhu ee enguruge yen ittu?. hinde serkondaga ee HINDI fitting iralilla kanri, iga hosadaagi maadidarre andre yen artha ?. idara mundina parinaama yen agotte antha yochane maadi. nan tara Highschool nalli HINDI odade irodhu nam skool inda prathi varusha 3000 jana bartarre . aa tara yeshtu jana iddare antha omme yochane maadi.
baya ilde nimma hesaru haaki.
- Deepu
"kannadigare nimage heditana suit agolla.
ಈ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳಲ್ಲಿ (ಉದ್ದಿಮೆಗಳಲ್ಲಿ) ಹಿಂದಿ ಹೇರಿಕೆ ವ್ಯವಸ್ಥಿತವಾಗಿ ಬಹಳ ದಿನಗಳಿಂದ ನಡೆದುಕೊಂಡು ಬರುತ್ತಿದೆ. ಕೆಲವು ಉದಾಹರಣೆಗಳನ್ನೇ ತೆಗೆದುಕೊಳ್ಳೋಣ.
೧. ಪ್ರತಿ ವರುಷ ಸೆ. ೧೪ ರಿಂದ ೨೦ ರಂದು ಹಿಂದಿ ವಾರವನ್ನಾಗಿ ಎಲ್ಲ ಸರ್ಕಾರೀ ಉದ್ದಿಮೆಗಳೂ ಆಚರಿಸುತ್ತವೆ. ಇದಕ್ಕಾಗಿ ಎಲ್ಲಾ ಸ್ಪರ್ಧೆಗಳೂ ಹಿಂದೀಮಯವಿರುತ್ತದೆ. ಅಂದರೆ ನಮ್ಮ ಕನ್ನಡಿಗರೂ ಇದರಲ್ಲಿ ಹಿಂದಿ ಕಳಿತು ಭಾಗವಹಿಸಬೇಕು.
೨. ಈ ಸಂಸ್ಥೆಗಳು (ಬೆಂಗಳೂರು, ಮಂಗಳೂರು ಇವುಗಳ ಹುಟ್ಟೂರು) ಪ್ರತಿ ವರ್ಷ ಹೊರತರುವ ಹೊತ್ತಿಗೆಗಳಲ್ಲಿ ಂಗ್ಲ ಭಾಷೆ ಹಾಗೂ ಹಿಂದಿಯ ಲೇಖನಗಳು ಇರುತ್ತವೆ. ಆದರೆ ಬೇರೆ ಭಾಷೆಯ ಲೇಖನಗಳು ಇರುವುದಿಲ್ಲ. (ಶ್ವೇತ ಅವರೆ:- ನಿಮ್ಮ ತಂದೆಯವರನ್ನು ಇದರ ಬಗ್ಗೆ ಕೇಳಿ ನೋಡಿ. ನಾನು ಕೆನರಾ ಬ್ಯಾಂಕಿನ ಈ ವಾರ್ಷಿಕ ಹೊತ್ತಿಗೆಯ ಬಗ್ಗೆ ನನ್ನ ಪರಿಚಿತ ಮ್ಯಾನೇಜರರ ಬಳಿ ಬಹಳವೇ ಕಿತ್ತಾಡಿದ್ದೇನೆ).
೩. ಈ ಬ್ಯಾಂಕುಗಳಾ ಮೂಲಕ ಕನ್ನಡಿಗರ ಮೇಲೆ ಸುಲಭವಾಗಿ ಹಿಂದಿಯ ಪ್ರಭಾವ ಬೀರಲು ಕೇಂದ್ರ ಸರ್ಕಾರ ಪ್ರತಿದಿನ ಬ್ಯಾಂಕುಗಳ ಬಾಗಿಲುಗಳ ಬಳಿ ಒಂದು ಕರಿ ಹಲಗೆಯ ಮೇಲೆ ದೊಡ್ದದಾಗಿ "ಇಂದಿನ ಹಿಂದಿ ಪದ" ಎಂದು ಬರೆದು ಸಾರ್ವಜನಿಕರನ್ನು ಹಿಂದಿ ಗುಲಾಮರನ್ನಾಗಿಸಬೇಕೆಂದು ಒಂದು ಸುತ್ತೋಲೆ ಹೊರಡಿಸಿದೆ. ಈ ನಿರ್ಧಾರವನ್ನು ನಮ್ಮ ಕನ್ನಡ ಮ್ಯಾನೇಜರದು ಬಹಳ ಶ್ರಧ್ಧೆಇಂದ ನೆರೆವೇರಿಸುತ್ತಾರೆ. ಕೆನರಾಬ್ಯಾಂಕಿನ ಬಸವನ ಗುಡಿ ಶಾಖೆಯಲ್ಲಿ ನಾಲ್ಕು ವರುಷದ ಕೆಳಗೆ ಇದು ನಡೆಯುತ್ತಿತ್ತು. ನನ್ನ ಸಂಬಂಧಿಯೊಬ್ಬರು ಅಲ್ಲಿ ಆಗ ಇದ್ದರು. ಅವರೊಡನೆ ಇದರ ಬಗ್ಗೆ ಬಹಳವೇ ಹೇಳಿದ್ದೆ. ಆದರೆ ಆ ಸಮಯದಲ್ಲಿ ಬಳಗ ಇನ್ನು ಹುಟ್ತಿರಲಿಲ್ಲ ಹಾಗಾಗಿ ಒಂದು ಗುಂಪಾಗಿ ಪ್ರತಿಭಟಿಸುವುದು ಸಾಧ್ಯವಿರಲಿಲ್ಲ.
೪. ಕರ್ನಾಟಕದಿಂದ ಉತ್ತರ ಭಾರತಕ್ಕೆ ವರ್ಗವಾಗುವ ಬ್ಯಾಂಕಿನ ಅಧಿಕಾರಿಗಳು ತಮ್ಮ ಕೆಲಸ ನಿರ್ವಹಿಸಲು ಹಿಂದಿ ಕಲಿಯಲೇ ಬೇಕು. ಆದರೆ ಇಲ್ಲಿಗೆ ವರ್ಗವಾಗುವ ಉತ್ತರಭಾರತದ ಅಧಿಕಾರಿಗಳು ಹಿಂದಿಯಲ್ಲೇ ಅಧಿಕಾರ ನಡೆಸುತ್ತಾರೆ. (ಬಸವೇಶ್ವರ ನಗರದ ಬ್ಯಾಂಕ ಆಫ ಇಂಡಿಯಾದಲ್ಲಿ ಮೂರು ವರ್ಷದ ಕೆಳಗೆ ಇದ್ದ ಒಬ್ಬ ಅಧಿಕಾರಿ ನನ್ನ ಬಳಿ ಇದಕ್ಕೆ ಬಯ್ಯಿಸಿಕೊಂಡಿದ್ದ. ಎಚ.ಡಿ.ಎಫ.ಸಿ ಬ್ಯಾಂಕಿನ ಕೋರಮಂಗಲ ಶಾಖೆಯಲ್ಲಿ ಆರು ವರ್ಷದ ಕೆಳಗೆ ಇದೇ ಕಾರಣಕ್ಕೇ ನಾನು ಮ್ಯಾನೇಜರನ ಬಳಿ ದೂರು ದಾಖಲಿಸಿದ್ದೆ.)
ಇದು ಕೇವಲ ಒಂದೆರಡು ಉದಾಹರಣೆಗಳಷ್ಟೇ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!