ಇತ್ತೀಚೆಗೆ ಬೆಳಗಾವಿಯ ಅಥಣಿ ತಾಲೂಕಿನ ರೈತರು ಬಯೋ-ಡೈಜೆಸ್ಟರ್ ಅನ್ನೋ ಪ್ರಾಕೃತಿಕ ಗುಣಗಳುಳ್ಳ ಗೊಬ್ಬರವನ್ನ ಕಂಡುಹಿಡಿದು ಇನ್ನೇನು ಪೇಟೆಂಟ್ ಕೂಡ ಗಿಟ್ಟಿಸಿಕೋತಿದಾರೆ ಅಂತ ಇದೇ ತಿಂಗಳ 28ರಂದು ಡೆಕನ್-ಹೆರಾಲ್ಡ್ ಸುದ್ದಿ. ಇದು ಸಕ್ಕತ್ ಖುಷಿ ತರೋ ವಿಷಯಾಮ್ಮಾ!
ಈ ಪೇಟೆಂಟಿಗೆ ಇಂಗ್ಲೀಷೇನು ಬೇಕಾಗಲಿಲ್ಲ
ಕರ್ನಾಟಕದ ರೈತರು ಮಾಡಿರೋ ಈ ಸಾಧನೆ ಅಂತಿಂತದ್ದಲ್ಲ ಗುರು! ನಮ್ಮ ರೈತರು ಹೊಸ-ಹೊಸ ತಂತ್ರಜ್ಞಾನಗಳ್ನ ಕಂಡುಹಿಡಿದು ಮಾರುಕಟ್ಟೆಯಲ್ಲಿ ಹೆಚ್ತಿರೋ ಬೇಡಿಕೆಗಳಿಗೆ ಸ್ಪಂದಿಸಿ ಲಾಭ ಪಡ್ದುಕೊಳ್ತಿದಾರೆ ಅನ್ನೋದು ಒಳ್ಳೇ ಬೆಳವಣಿಗೇನೇ. ರಾಜ್ಯದ ಹಲವು ಕಡೆ ರೈತರು ಸಾಲ ತೀರಿಸಕ್ಕಾಗದೆ ನರಳುತ್ತಾ ಆತ್ಮಹತ್ಯೆ ಮಾಡ್ಕೊಂಡಿರೋದೂ ಉಂಟು. ಈ ಹಿನ್ನೆಲೆಯಲ್ಲಿ ಅಥಣಿ ರೈತರು ಮಾಡಿರೋ ಕೆಲ್ಸ ಎಲ್ಲರಿಗೂ ದಾರಿ ತೋರ್ಸೋಹಂಗಿದೆ ಗುರು! ಯಾವ ಕೆಲ್ಸದಲ್ಲಿ ನಷ್ಟದ ಸಾಧ್ಯತೆ ಇಲ್ಲ ಹೇಳಿ? ನಷ್ಟಗಳಿಂದ ತಪ್ಪಿಸ್ಕೊಳಕ್ಕೆ ಹೊಸ ಚಿಂತನೆ ಮತ್ತು ಕ್ರಿಯಾಶೀಲತೆ ಬಹಳ ಉಪಯುಕ್ತ ಸಾಧನ ಅಂತ ತೋರ್ಸ್ಕೊಟ್ಟಿದಾರೆ ಇವ್ರು.
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಹೊಂದಿರೋ ನಮ್ಮ ರೈತರು ಆಂಗ್ಲ ಮಾಧ್ಯಮದಲ್ಲಿ ಓದಿ ಕೊಳೆ ಹಾಕ್ಕೊಂಡಿರೋರಿಗೂ ಕಷ್ಟ ಅನ್ನಿಸೋ ಪೇಟೆಂಟಿಗೇ ಕೈ ಹಾಕಿದಾರೆ. ಮೂಲಭೂತ ಕಲಿಕೆ ಮಾತ್ರ ಪಡೆಯೋ ನಮ್ಮ ರೈತರು ಇಂಥಾ ಸಂಶೋಧನೆಗಳ್ನ ಮಾಡ್ತಿರುವಾಗ ಒಳ್ಳೇ ಉನ್ನತಶಿಕ್ಷಣವನ್ನ ಕನ್ನಡದಲ್ಲೇ ಪಡ್ಕೊಂಡ್ರೆ ಇನ್ನೇನೇನು ಸಾಧಿಸಬಹುದು ಅಂತ ಯೋಚ್ನೆ ಮಾಡಿದರೇ ಕೈಯಲ್ಲಿ ಕೂದಲು ಎದ್ದು ನಿಲ್ಲತ್ತೆ ಗುರು!
ಪೇಟೆಂಟುಗಳಿಂದ ಇಡೀ ಪ್ರಪಂಚದಿಂದ ಗೌರವಧನ ಗಿಟ್ಟಿಸಿಕೊಳ್ಳಬೇಕು
ಈ ಪೇಟೆಂಟಿಂದ ನಮ್ಮ ರೈತರ ಸಂಶೋಧನೆಗೆ ರಕ್ಷಣೆ ಏನೋ ಸಿಗೋಹಾಗಿದೆ. ಆದ್ರೆ ಇಂತಹ ಉತ್ತಮ ಸಂಶೋಧನೆಗಳ್ನ ಪೇಟೆಂಟು ಮಾಡಿಸಿಕೊಂಡು ಗೌರವಧನ ಗಿಟ್ಟಿಸಿಕೊಳಕ್ಕೆ ಯಾಕೆ ಪ್ರಯತ್ನ ಮಾಡಬಾರದು? ಹುಳಿಮಾವಿನ ಜೈವಿಕ-ಕೇಂದ್ರದ ಮುಖ್ಯಸ್ತರು ಹೇಳಿರೋ ಪ್ರಕಾರ ಈ ಪೇಟೆಂಟಿಂದ ನಮಗೆ ದುಡ್ಡು ಹುಟ್ಟೋ ಮಟ್ಟಿಗೆ ಕಾಣೆ! ಈ ವಿಷಯದಲ್ಲಿ ನಾವು ಸಕ್ಕತ್ ಹುಷಾರಾಗಿರಬೇಕು ಗುರು! ಪೇಟೆಂಟ್ ಮಾಡಿಕೊಂಡು ಇಡೀ ಪ್ರಪಂಚದಿಂದ ಗೌರವಧನ ಗುಟ್ಟಿಸಿಕೊಳೋದು ಹೇಗೆ ಅಂತ ನೋಡ್ಕೋಬೇಕು. ಯಾವುದೋ ಕೀಳರಿಮೆಗೆ ತಲೆಬಗ್ಗಿಸಿಕೊಂಡು ಇಂಥಾ ಒಳ್ಳೇ ಅವಕಾಶಾನ ಕೈಬಿಡಬಾರದು. ಏನ್ ಗುರು?
2 ಅನಿಸಿಕೆಗಳು:
idu thumbane olle suddi
ತುಂಬ ಒಳ್ಳೆಯ ಸುದ್ದಿ .ಧನ್ಯವಾದ. ಇಂತಹ ವಿಷಯಗಳಿಗೆ ಹೆಚ್ಚು ಪ್ರಚಾರ ಸಿಗಲಿಮತ್ತು ಆ ಮೂಲಕ ನಮ್ಮ ರೈತರಿಗೆ ಇನ್ನಷ್ಟು ಶಕ್ತಿ, ಸ್ಫೂರ್ತಿ ಸಿಗುವಂತಾಗಲಿ.
ನಾವು ಐ.ಟಿ ಕನ್ನಡಿಗರು ನಮ್ಮ ರೈತರ ಬೆಂಬಲಕ್ಕೆ ನಿಲ್ಲಬೇಕಾದ್ದು ಅತ್ಯಂತ
ಅವಶ್ಯಕ. ಏನ್ ಗುರೂ ಇನ್ನಸ್ಟು ರೈತಪರ ವಿಷಯಗಳನ್ನು ಪ್ರಕಟಿಸುವಂತಾಗಲಿ.
ರಾಮಚಂದ್ರ ಹೆಗಡೆ ಸಿ.ಎಸ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!