"ನಮಸ್ಕಾರ! ಹೇಗಿದೀರಾ?"

ಮುಂಬೈನ DNA ಅನ್ನೋ ಇಂಗ್ಲೀಷ್ ಪತ್ರಿಕೇಲಿ ಈ ಹಿಂದೆ ನಮಗೆ "ಕನ್ನಡ ಗೊತ್ತಿಲ್ಲ" ಅಂತಿದ್ದ ಬೆಂಗಳೂರಿನ ವಲಸಿಗರು ಇವತ್ತು "ನಮಸ್ಕಾರ ಹೇಗಿದೀರಾ?" ಅನ್ನುತ್ತ ಕನ್ನಡ ಕಲೀತಿದಾರೆ ಅನ್ನೋ ಸುದ್ದಿ ವರದಿ ಆಗಿದೆ.

ನಿಧಾನವಾಗಾದರೂ ಕನ್ನಡ ಕಲಿಯೋ ನಿರ್ಧಾರ ತೊಗೊಂಡು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ ಹುರಿದುಂಬಿಸಬೇಕು ಗುರು! ಆಷ್ಟೇ ಅಲ್ಲದೆ ಇವರ ಕನ್ನಡ ಕಲಿಯುವ ಉತ್ಸಾಹ, ಕನ್ನಡದ ಪ್ರಾಮುಖ್ಯದ ತಿಳುವಳಿಕೆ, ಕನ್ನಡ ತಮ್ಮ ಬದುಕಿನ ಭಾಗ ಆಗ್ಬೇಕು ಅನ್ನೋ ನಿಲುವು, ಕನ್ನಡಿಗರೊಡನೆ ಬೆರೀಬೇಕು ಅನ್ನೋ ಆಸೆ, ಕನ್ನಡ ಸಂಸ್ಕೃಯಲ್ಲಿ ಒಂದಾಗಕ್ಕೆ ಇವ್ರು ತೋರುಸ್ತಿರೋ ಹವಣಿಕೆ - ಇವೆಲ್ಲಾ ಹೊಗಳಿಕೆಗೆ ಪಾತ್ರ ಗುರು!

ಒಂದು ಪ್ರದೇಶದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ, ಅಲ್ಲಿನ ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣೆಗೆ ಮತ್ತು ಪೂರ್ಣ ಒಗ್ಗಟ್ಟಿಗೆ ಅಲ್ಲಿನ ಭಾಷೆ ಮತ್ತು ಸಂಸ್ಕೃತಿ ಉತ್ತಮ ವಾಹಕವಾಗಿರುತ್ತದೆ. ಹಾಗಾಗಿ ವಲಸಿಗರು ತಾವು ನೆಲಸುವ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಗೆ ಸಹಮತ ತೋರುವುದು ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸುತ್ತೆ ಗುರು. ವಲಸಿಗನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣೆ ಹಿಡಿಯುತ್ತದೆ. ತಾನು ಈ ಊರಿನಲ್ಲಿ ಒಬ್ಬಂಟಿಯಲ್ಲ, ಎಲ್ಲರೊಡನೆ ಒಬ್ಬ ಎಂಬ ಹೆಮ್ಮೆಯನ್ನು ಸಂಪಾದಿಸಿಕೊಡುತ್ತೆ ಗುರು. ಇದು ವಲಸಿಗನಿಗೂ ಒಳ್ಳೇದು, ನಮಗೂ ಒಳ್ಳೇದು.

ಬೆಂಗಳೂರು-ಕರ್ನಾಟಕಕ್ಕೆ ಸಂಬಂಧಪಟ್ಟ ಈ ಸುದ್ಧಿ ಮುಂಬೈನಲ್ಲಿ ವಲಸಿಗರು ಮರಾಠಿ ಕಲಿಯಕ್ಕೆ, ಹಾಗೆಯೇ ಕೋಲ್ಕೋತ್ತಾದಲ್ಲಿ ಬಂಗಾಳಿ ಕಲಿಯಕ್ಕೆ, ಪ್ರೇರಕ ಆಗಬೇಕು. ಭಾರತ ಹಲವು ಭಾಷೆ-ಹಲವು ಸಂಸ್ಕೃತಿಗಳ ರಾಜ್ಯಗಳ ಒಕ್ಕೂಟ. ಈ ಒಕ್ಕೂಟದ ಒಳಿತಿನ ದೃಷ್ಟಿಯಿಂದ, ವಲಸಿಗರು ತಾವು ವಲಸೆ ಹೋದ ಜಾಗದ ನಾಡು-ನುಡಿ-ನಡೆಗಳ್ನ ಗೌರವಿಸಿ ಅವುಗಳಲ್ಲಿ ಒಂದಾಗೋದು ಬಹಳ ಮುಖ್ಯವಾದ ಪಾತ್ರ ವಹಿಸಿದೆ ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಇದು ನಿಜವಾಗಿ ಸಂತೋಷ ಪಡಬೇಕಾದ ವಿಷಯ. ಇಂತಹವರು ಹೆಚ್ಚಲಿ!

-ನೀಲಾಂಜನ

Anonymous ಅಂತಾರೆ...

ಕನ್ನಡ ಕಲಿಯಲು ಬರುವ ಉತ್ಸಾಹಿಗಳು ವರದಿಯಲ್ಲಿರುವಂತೆ ಇದ್ದರೆ ನಿಜ. ಆದರೆ ಕನ್ನಡದ ಅವಶ್ಯಕತೆ ತಮಗೆ ಇಲ್ಲವೆ ಇಲ್ಲ ಅದರ ಬದಲು ಪೋಲೀಸರಿಂದ ಹಿಡಿದು ಎಲ್ಲರೂ ಹಿಂದಿ ಅಥ್ವ ಇಂಗ್ಲಿಷ್ ನಲ್ಲಿ ನಮ್ಮ ಜೊತೆ ವ್ಯವಹರಿಸಬೇಕು ಅನ್ನೋರೆ ಜಾಸ್ತಿ. ಆದರು ಇದು ಒಳ್ಳೆಯ ಬೆಳವಣಿಗೆ. ಇನ್ನು ಹೆಚ್ಚು ಹೆಚ್ಚು ಕನ್ನಡ ಕಲಿ ಶಾಲೆಗಳು ಬರಲಿ. ಕನ್ನಡ ಕಲಿ ಶಾಲೆಗಳ ಬಗ್ಗೆ ಮುಖ್ಯವಾಹಿನಿಗಳಾದ ಟಿ.ವಿ. ಎಫ್ ಎಮ್ ರೇಡಿಯೋ ಗಳಲ್ಲಿ ಮಾಹಿತಿ ಸಿಗುವಂತಾದರೆ ಕಲಿಯುವವರಿಗೆ ಉತ್ತಮ ಮಾರ್ಗದರ್ಶನ ಸಿಕ್ಕಂತಾಗುತ್ತದೆ.

Anonymous ಅಂತಾರೆ...

ellaroo kannaDa kalitare uttama.

Anonymous ಅಂತಾರೆ...

swetha avaru helodu nija. namma samsthe yalli kelavaru bahala utsaha dinda kalitaru. anekaru ee karyakramadalli paalgollalu utsahadinda iddare.

namma FM vaahinigalu ketta ketta kannada kalisuva badalu dina prime time nalli (Belagge 8 - 10 ) naduve KK karyakrama maado tara idre chennagiratte. aaga thumba jana kacherige hogo samayadalli thamma thamma vaahanadalli radio keltha irtare.

- karuNaa

Rohith B R ಅಂತಾರೆ...

ಶ್ವೇತಾ ಅವ್ರೆ.. ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ಇತ್ತೀಚೆಗೆ TOIನಲ್ಲಿ ವರದಿ ಆಗಿತ್ತು.. ಅದು ಇಂಗ್ಲಿಷಿನ TOIನಲಿ.. ಹೀಗಾಗಿ ಬೆಂಗ್ಳೂರಿನಲ್ಲಿ ಕನ್ನಡ ಬಾರದೋರಿಗೆ ಇದು ಮಾರ್ಗದರ್ಶಿ ಆಗಿತ್ತು.. ಆದರೆ ಅದು ಸಾಲದು ಅನ್ನೋದು ನಿಜ. ಕನ್ನಡ ಕಲಿಕೆಯ ಶಾಲೆಗಳು ಹೆಚ್ಚಲೂ ಬೇಕು, ಮತ್ತವುಗಳ ಬಗ್ಗೆ ಮಾಹಿತಿಯೂ ಹೆಚ್ಚಾಗಿ ಮಾಧ್ಯಮಗಳಲ್ಲಿ ಪ್ರಸಾರ ಆಗ್ಬೇಕು..

ಇತ್ತೀಚೆಗೆ ITKK ಗುಂಪಲ್ಲಿ ಮಿಂಚೆ ಬಂದಿತ್ತಲ್ಲ.. ಅದ್ಯಾವ್ನೋ ಅಕ್ಷಯ್ ಮಿಶ್ರ ಅನ್ನೋನ್ದು.. ಔವ್ನಿಗೆ ಈ ಬ್ಲಾಗಿನ ಇಂಗ್ಲಿಷ್ ಅನುವಾದ ಸಿಗ್ಬೇಕು.. ಅವನಿಂದ್ಲೇ ಇನ್ನಷ್ಟು ಜನ್ರಿಗೆ ಪ್ರಸಾರವಾಗ್ಬೇಕು.. ಏನಂತೀರ??

Unknown ಅಂತಾರೆ...

ಇದು ತುಂಬಾ ನಲಿವು ತರುವಂತ ಸುದ್ದಿ.

ಇದು ಶುರು ಇದು ಹೀಗೆ ಮುಂದುವರಿಯಬೇಕು.

Anonymous ಅಂತಾರೆ...

Idu olleya visheya.Nanu kelavobrunna nodidini, tamil dinda bandu kannada kaliyokke ishta padtare,ellargu santosh taro vichara.

Matte innu kelavaru kannada baroru, karnataka nalle idkondu kannada matadoke onthara madtare, inthavranna en sir madbeku ???

Karnatkadalli iro ellargu Kannada complulsory madbeku sir antha situation CREATE madbeku.

-Vinod.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails