ಕನ್ನಡಿಗನಾದ ಗ್ರಾಹಕನಾಗಿ ನಿಮ್ಮ ಅನುಭವ ಹಂಚಿಕೊಳ್ಳಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಇಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಎಲ್ಲದರಲ್ಲೂ ಆದ್ಯತೆ ಸಿಗಬೇಕು ಅಂತ ಹಂಬಲಿಸೋ ಅಂಥೋರಿಗೆ, ಇದನ್ನು ನಮ್ಮ ಹಕ್ಕು ಅಂತ ಈಗಾಗಲೇ ಅರಿತಿರೋ ಕನ್ನಡಿಗರಿಗೆಲ್ಲಾ ನಮಸ್ಕಾರಗಳು. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರೋ ಸಂಗತಿಗಳು ನಮ್ಮ ನಿಮ್ಮ ಗಮನಕ್ಕೆ ಬಂದಾಗ ಸಂಕಟ ಪಟ್ಕೋತೀವಿ. ಆ ಸಮಸ್ಯೆ ಬಗೆಹರೀಲಿ ಅಂತಾ ತುಡೀತೀವಿ. ಬದಲಾವಣೆಗಳು ಆದಾಗ ಹಿಗ್ಗುತ್ತೀವಿ. ಆ ಬದಲಾವಣೆಗಳು ನಮ್ಮಿಂದಲೇ ಆಗಿದ್ದರೆ ಮೆರೀತೀವಿ.ಪೆಟ್ರೋಲ್ ಬಂಕಿನವರು ಹೇಗಿದ್ದರು ನೋಡಿ, ಕನ್ನಡದವರಿಗೆ ಇಂಗ್ಲಿಷ್ ಲಿಪೀಲಿ ಹಿಂದಿ ಹೇಳ್ಕೊಡ್ತಾ ಇದಾರೆ...ಪಾಪ. ಇದು ನಮ್ ಬೆಂಗಳೂರಿನ ಒಂದು ಪೆಟ್ರೋಲ್ ಬಂಕಲ್ಲಿ ಹಾಕಿದ್ದ ನಾಮಫಲಕ.
ಇದೇ ಬಂಕ್ ನವರೇ ಈಗ ಹೇಗೆ ಬದಲಾಗಿದಾರೆ ಅಂತ ನೋಡಿ. ಖುಷಿ ಆಗ್ತಿದೆ ಅಲ್ವಾ?

ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳು ಒಂದು ವರ್ಷದ ಹಿಂದೆ "ನಮ್ಮದು 100% ಬಾಲಿವುಡ್ ಸ್ಟೇಷನ್" "ಕನ್ನಡಕ್ಕೆ ಮಾರುಕಟ್ಟೆ ಇಲ್ಲ" "ಕನ್ನಡ ಹಾಡುಗಳು ಸಿಗ್ತಿಲ್ಲ" ಅಂತ ಕುಂಟು ನೆಪ ಹೇಳ್ತಾ ೧೦~೧೫% ಕನ್ನಡ ಹಾಡುಗಳನ್ನು ಹಾಕ್ತಿದ್ರು. ಆದ್ರೆ ಇವತ್ತು ಬೆಂಗಳೂರಿನ ಟಾಪ್ 3 ಎಫ್.ಎಂಗಳಲ್ಲಿ ಕಡಿಮೆ ಅಂದ್ರೆ 80% ಕನ್ನಡ ಹಾಡುಗಳೇ ಬರುತ್ತಿವೆ. ಸಿಂಗಪೂರ್ ಏರ್ ಲೈನ್ಸ್ ನವರು ಕನ್ನಡಿಗರ ಒತ್ತಾಯಕ್ಕೆ ಮಣಿದು ತಮ್ಮ ವಿಮಾನಗಳಲ್ಲಿ ಕನ್ನಡದ ಮೆನು ಸಿಗೋ ಹಾಗೆ ಮಾಡಿದಾರೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ.

ಈ ಬದಲಾವಣೆಗೆ ಕಾರಣವೇನು?

ಇವೆಲ್ಲಾ ಹೇಗಾಯ್ತು ಅಂದ್ರೆ ಅದಕ್ಕೆ ಉತ್ತರ ಗ್ರಾಹಕನಾಗಿ ಕನ್ನಡಿಗ ಒಗ್ಗಟ್ಟಾಗಿ ನಿಂತದ್ದರಿಂದ ಆಯ್ತು. ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು. ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದು, ಮಿಂಚೆ (e-mail) ಚಳವಳಿ ನಡೆಸಿದ್ದು, ಪತ್ರಿಕೆಗಳಿಗೆ ಬರೆದಿದ್ದು...ಇವೇ ಕಾರಣ. ನಿಜ, ನಾವು ಒಟ್ಟಾಗಿ ಧ್ವನಿ ಎತ್ತೋಣ. ಮತ್ತಷ್ಟು ಬದಲಾವಣೆಗಳಿಗೆ ಕಾರಣರಾಗೋಣ.

ನೀವೇನು ಮಾಡಬಹುದು?

ನಿಮ್ಮ ಅನುಭವಗಳನ್ನು ವಿವರಗಳೊಂದಿಗೆ graahaka@gmail.com ಗೆ ಮಿಂಚಿಸಿ. ಸೂಕ್ತವಾದವುಗಳನ್ನು ಏನ್‌ಗುರುವಿನಲ್ಲಿ ಪ್ರಕಟಪಡಿಸಲಾಗುತ್ತದೆ. ಆ ಮೂಲಕ ಕನ್ನಡಿಗರನ್ನು ಒಗ್ಗೂಡಿಸೋಣ. ಬನ್ನಿ, ನೀವೂ ಬದಲಾವಣೆ ಮಾಡಬಲ್ಲಿರಿ...ಐದು ಬೆರಳು ಸೇರಿದರೆ ಮುಷ್ಟಿ ...

8 ಅನಿಸಿಕೆಗಳು:

Madhu ಅಂತಾರೆ...

Nanna Anubhavadalli... Airtel grahaka sevege naan call madidagella olle prathikriye kannadadalle sikkidhe.. Bere kade PVR nalli prathisala ticket counternalli jagaLa adi kannada baruvavara hathira ticket kondu kondidhene.

Anonymous ಅಂತಾರೆ...

Be the change you want to see antha gandhiji heLidange,, nammuralli namma bhasheli seve beku andre naaavu modalu adanna demand maadodanna kalibeku,, adu aadaag saakashTu badaLavaNe kanDita sadya.

Enguru, nimma barahagaLanna dina gamanisidavirige gottago ondu amsha andre,, neevu bari blog barita kuroralla,, nimage saakashTu yojane idey, plans idey,, mattu avella kannada-kannadiga-karnataka vannu driShTi li iTTukonDu maadtha irodu antha,, nanna oLLe haaraike nimmondigide,,

Anonymous ಅಂತಾರೆ...

bahaLa oLLE idea idu ..

Unknown ಅಂತಾರೆ...

ನನ್ನದೊಂದು ಸಲಹೆ (ನನ್ನ ಅನುಭವ ಕೂಡ...)
ಈಗ ಮೂರು ವರ್ಷಗಳ ಹಿಂದೆ ಕಂಪನಿಯೊಂದಕ್ಕೆ ಸೇರಿದಾಗ ಬ್ಯಾಂಕಿನಲ್ಲಿ ಹೊಸದಾಗಿ ಖಾತೆ ಮಾಡಿಸಬೇಕಾಗಿ ಬಂತು. ಬ್ಯಾಂಕಿನಿಂದ ಹೊರಬಂದ ಮೇಲೆ ಅನ್ನಿಸಿತು....ಅರೆರೆ, ನಾನು ಕೆಲ್ಸ ಮಾಡೋದು ಕನ್ನಡದ ನೆಲದಲ್ಲಿ, ದುಡಿಯೋದು ಇಲ್ಲೇ, ದುಡ್ಡೂ ನಂದೇ..ಹಣ ತಗೊಳೋನೂ ನಾನೇ, ಸಾಲ ಹಿಂದಿರುಗಿಸೋನು ನಾನೇ...ಆದ್ರೆ ಇಂಗ್ಲಿಷಲ್ಲಿ ಯಾಕೆ ಮಾತಾಡ್ಬೇಕು ಅಂತ ಅನ್ಕೊಂಡೆ.......ಹಾಗೇ ಅನ್ಕೊಂಡು ವಾಪಸ್ ಬರಬೇಕಾದರೆ ಯಾವ್ದೋ ಏರ್ತೆಲ್ಲೋ, ಹಚ್ಚೋ...ಒಂದು ಕರೆ ಬಂತು....ಅವಳಿಗೆ ನೇರವಾಗಿ ಹೇಳ್ದೆ...ನೀವು ಕನ್ನಡದಲ್ಲಿ ಮಾತನಾಡಿದರೆ ಮಾತ್ರ ನೀವು ಹೇಳೋದೆಲ್ಲವನ್ನು ಕೇಳ್ತೀನಿ...ಇಲ್ಲಾಂದ್ರೆ ನೀವು ಫೋನ್ ಮಡಗಬಹುದು...ಅಂತ..
ಗೆಳೆಯರೆ, ಅಲ್ಲಿಂದ ಇಂದಿನವರೆಗೂ (ಬಹುಶಃ ನನ್ನ ಕಡೆಯ ಉಸಿರಿರುವವರೆಗೂ) ......ಈ ರೀತಿಯ ವೈಯುಕ್ತಿಕ ಸಂಭಾಷಣೆಗಳಲ್ಲಿ, ಕನ್ನಡವನ್ನೇ ಮಾತಾಡುತ್ತೇನೆ.....ಇದರಿಂದ ಎಷ್ಟೋ ನಮ್ಮ ಕನ್ನಡಿಗರ ಪರಿಚಯ ಆಗಿದೆ...ಹಾಗೂ ಅವರಲ್ಲಿ ಕೂಡ ಕನ್ನಡತನವನ್ನು ಪೋಷಿಸಿದಂತಾಗಿದೆ.....
.....ನೀವು ಯಾವುದೇ ಕರೆಕೇಂದ್ರ (ಕಾಲ್ ಸೆಂಟರ್) ಗಳಿಂದ ಕರೆ ಬಂದರೂ ಕೂಡ...ನಿಮಗೆ ಆ ವಸ್ತು, ಸೇವೆ ಬೇಡದಿದ್ದರೂ ಕೂಡ.....ಪೂರ್ತಿ ೫ ನಿಮಿಷ ಕನ್ನಡದಲ್ಲೆ ವಿಚಾರಿಸಿ...ನಮಗೆ ಗೊತ್ತಿಲ್ಲ ಅಷ್ಟೆ....ನಮ್ಮ ಎಷ್ಟೋ ಕನ್ನಡದ ಹೆಣ್ಣುಮಕ್ಕಳು ಅಪರ್ಣ, ಅರ್ಚನಾ ಅವರನ್ನು ಮೀರಿಸಿ ಹಿತವಾಗುವ ಕನ್ನಡದಲ್ಲೇ ಮಾತಾಡ್ತಾರೆ.....ಅವರ ದನಿಗೆ ಕಿವಿಯಾಗಿ..
ಮುಲಾಜು, ಮುಜುಗರ ಇಲ್ಲದೇನೆ ಕನ್ನಡ ಮಾತಾಡಿದರೆ ಈಗ ಎಲ್ಲರೂ ಸ್ಪಂದಿಸುತ್ತಾರೆ.....ಹಾಗಾಗಿ ನಮ್ಮ ಅನಗತ್ಯ "ವಿಶ್ವಮಾನವ"ತನವನ್ನು ಬಿಟ್ಟು ಕನ್ನಡದಲ್ಲಿ ಮಾತಾಡಬೇಕು.....ಇದು ಕನ್ನಡ, ಕರ್ನಾಟಕ ಕಟ್ಟುವ ಮೊದಲ ಹಾಗೂ ಕನಿಷ್ಠ ಅಗತ್ಯ.

kote ಅಂತಾರೆ...

Monne ICICI chennai enda credit card bagge call bandittu.Caller first english nalli math adsiddlu, nanu kannadadalli uttra kotte. Amele hindi barotha antha keliddlu, aglu kannada matra baroudu ande. Next "tamil teriyama" antha keliddlu , so neenu call madtha eroudu karnatakakke so kannada dalli mat adu ande, adikke avlu ardambarda knglish, tamil mix madi mathadsidlu. Amele nale kannadur hattirane call madsthini antha heli marne dina kannadadunu hattira call madsidlu. Navu kannada matra math adiddre avru darige barthare.

Anonymous ಅಂತಾರೆ...

Guru,

Ee grahaka eddeLu section noDi tumba santosha aaytu .. KannaDakkagi eddu nintavara kathe keLi santoshaa aagatte, haage bereyavaru maadalikke uttejana needatte ..

Nidhi

Anonymous ಅಂತಾರೆ...

pratiyondu karegu " Hello" annuv badalagi " HeLi" antha prarbhisidare mundina ella matugaLu kannadalliruttave.



nanu ittichige maduttiruvudu adanne, HDFC credit card,Airport taxi bookung heegi halvaru sevegalu Kanndalli paditairodu.

ಗುಡುಗು ಮಿಂಚು ಅಂತಾರೆ...

ಕನ್ನಡ ಜನರೆಲ್ಲಾ ಒಂದಾದರೆ ಏನನ್ನು ಬೇಕಾದರೂ ಎದುರಿಸಬಹುದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails