ಈ CNN IBN ವರದಿ ಇನ್ನ್ಯಾವ ಊರಿನ ಬಗ್ಗೆಯೂ ಅಲ್ಲ, ಈಗ ಕೇರಳಕ್ಕೆ ಸೇರಿಹೋಗಿರುವ, ಮಹಾಜನ್ ವರದಿ ಪ್ರಕಾರ ಕರ್ನಾಟಕಕ್ಕೆ ಸೇರಬೇಕಾಗಿರುವ ಕಾಸರಗೋಡಿನ ಬಗ್ಗೆ, ಗುರು! ವರದಿ ಏನ್ ಹೇಳತ್ತೆ ನೋಡಿ:
ಇಲ್ಲಿ ಒಟ್ಟು 60% ಜನ ಕನ್ನಡ ಮಾತಾಡುತ್ತಾರೆ. ಇಲ್ಲಿಂದ ಆಯ್ಕೆಯಾದ ಎಮ್ಮೆಲ್ಲೆ ಕೂಡ ಕನ್ನಡದಲ್ಲೇ ಪ್ರಮಾಣವಚನ ತೊಗೊಂಡ್ರು. [ಕನ್ನಡ] ಭಾಷೆಯ ಪ್ರಭಾವ ಅಷ್ಟಿದೆ ಇಲ್ಲಿ!
[...]
ಮಂಜೇಶ್ವರದಲ್ಲಿ ಕನ್ನಡ ರಾರಾಜಿಸುತ್ತಿದೆ. ಇಲ್ಲೀ ಶೇಂದಿ ಅಂಗಡಿಗಳಿಂದ ಹಿಡಿದು ದೇವರಗುಡಿಗಳವರೆಗೆ ಎಲ್ಲೆಲ್ಲೂ ನಿಮಗೆ ಕನ್ನಡದ ಬೋರ್ಡುಗಳು ಕಾಣುತ್ತವೆ.
[...]
ಇಲ್ಲಿ ಎಲ್.ಡಿ.ಎಫ್. ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳೂ ಕನ್ನಡದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿವೆ. ಮಂಜೇಶ್ವರದ ಹಾಲಿ ಎಮ್ಮೆಲ್ಲೆಯ ಪ್ರಣಾಳಿಕೆ ಕನ್ನಡದಲ್ಲೂ ಇದೆ.
[...]
ಇಲ್ಲಿ ಕನ್ನಡವೇ ಮುಖ್ಯವಾದ ಭಾಷೆ, ಕನ್ನಡಿಗರೇ ಇಲ್ಲಿ ಮುಖ್ಯವಾದವರು.
3 ಅನಿಸಿಕೆಗಳು:
ಬಹಳ ಆಶ್ಚರ್ಯ ಅಗ್ತಿದೆ ಗುರು. ಬೇರೆ ರಾಜ್ಯಕ್ಕೆ ಸೇರಿ ಹೋಗಿರುವ ಭಾಗದಲ್ಲಿ ಕನ್ನಡದ ಅನೇಕ ಸಾಹಿತಿಗಳು ಇದ್ದಾರೆ ಅಂತ ತಿಳಿದಿತ್ತು. ಅಲ್ಲಿ ೬೦% ಕನ್ನಡದವರಿದ್ದಾರೆ ಎಂದು ತಿಳಿದಿರಲಿಲ್ಲ. ಮಹಾಜನ್ ವರದಿ ಎಷ್ಟು ಬೇಗ ಜಾರಿಗೆ ಬರುತ್ತದೋ ಅಷ್ಟು ಒಳ್ಳೆಯದು. ಅದರಲ್ಲು ಬೆಳಗಾವಿ ಈಗಿರುವಂತ ಅತಂತ್ರ ಸ್ಥಿತಿಯಲ್ಲಿ ಉಳಿಯುವುದು ತಪ್ಪುತ್ತದೆ. ನಮ್ಮ ನಾಡಿನ ಪ್ರದೇಶಗಳು ನಮ್ಮವೇ ಆಗುವುದು ಸಾಧ್ಯವಾಗುತ್ತೆ.
really surprising
because people have not forgotten kannada
after a few generations there is a tendency that a language gets mixed up
i'm really proud
and so are kannada people
but unfortunately bangalore is running out of hands
save bangalore from kerala freaks
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!