ರಿಮೋಟುಗಳು ಕುಣಿಸಿದಂತೆ ಕುಣಿಯುವ ಒಕ್ಕೂಟ ವ್ಯವಸ್ಥೆಗಳು

ಮೊನ್ನೆ ಮೊನ್ನೆ ದಿಲ್ಲೀಲಿ ನಾಲ್ಕನೇ ಒಕ್ಕೂಟ ವ್ಯವಸ್ಥೆಗಳ ಅಂತರರಾಷ್ಟ್ರೀಯ ಸಮ್ಮೇಳನ (International conference on Federalism) ನಡೀತು. ಇದರ ಉದ್ಘಾಟನಾ ಭಾಷಣದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಕ್ಕೂಟ ವ್ಯವಸ್ಥೆಗಳು, ಅವುಗಳಿಂದ ಆಗುತ್ತಿರುವ ಒಳಿತು, ಅವುಗಳು ಎದುರಿಸ್ತಾ ಇರೋ ಸವಾಲುಗಳು - ಇವುಗಳ ಬಗ್ಗೆ ಸಾಕಷ್ಟು ಚಿಂತನೆಗಳ್ನ ಮುಂದಿಟ್ರು. ಇವುಗಳಿಗೆ ಸೂಕ್ತವಾಗಿ ಭಾರತದ ಉದಾಹರಣೆಗಳ್ನೂ ಕೊಟ್ಟು ಮಾತಾಡಿದ ಸಿಂಗ್ ಹೇಳಿದಂಗೆ ಒಕ್ಕೂಟ ವ್ಯವಸ್ಥೆಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ನಡುವಣ ಜವಾಬ್ದಾರಿಗಳ ಹಂಚಿಕೆ ವಿಷಯದಲ್ಲಿ ಆಗಾಗ ಬದಲಾವಣೆಗಳು ಆಗಬೇಕಾಗಿರೋದೇನೋ ಸರೀನೇ; ಆದ್ರೆ ಈಗಿರೋ ಭಾರತೀಯ ಒಕ್ಕೂಟದಲ್ಲೇ ಕೇಂದ್ರ ತನ್ನ ಕೆಲಸ ಸರಿಯಾಗಿ ನಿಭಾಯಿಸ್ತಾ ಇದ್ಯಾ ಗುರು?

ಉದಾಹರಣೆಗೆ ಕೇಂದ್ರದ ರಿಮೋಟು ಇಟ್ಟುಕೊಂಡಿರೋದ್ರಿಂದ ತಮಿಳ್ನಾಡು ತಮಿಳಿಗೆ ಹೇಗೆ ಶಾಸ್ತ್ರೀಯ ಭಾಷೆ ಸ್ಥಾನ ಗಿಟ್ಟಿಸಿಕೊಳ್ತು, ರಿಮೋಟಿಲ್ಲದ ಕರ್ನಾಟಕಕ್ಕೆ ಹೇಗೆ ಗಿಟ್ಟಿಸಿಕೊಳ್ಳಕ್ಕಾಗಿಲ್ಲ ಅನ್ನೋದನ್ನೇ ತೊಗೊಳ್ಳಿ. ತಮಿಳ್ನಾಡು ತೋರಿಸುತ್ತಾ ಇರೋ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗೆ ತಲೆಬಾಗಿಸಿ, ಎಲ್ಲಿ ಸರ್ಕಾರ ಬಿದ್ದುಹೋಗತ್ತೋ ಅಂತ ಕೇಂದ್ರ ತಮಿಳ್ನಾಡಿಗೆ ಯಾವಾಗಲೂ ಮಣೆಹಾಕಿ, ಕರ್ನಾಟಕಕ್ಕೆ ಯಾವಾಗಲೂ ಸೋಲಾಗೋಹಂಗೇ ಮಾಡ್ತಾ ಇರೋದು ವ್ಯವಸ್ಥೆಯಲ್ಲಿರೋ ಕೊರತೆಗಳ್ನ ಮಾತ್ರ ಅಲ್ಲ, ಅದನ್ನ ನಡೆಸುತ್ತಾ ಇರೋ ರಾಜಕಾರಣಿಗಳ ಮುತ್ಸದ್ದಿತನದ ಕೊರತೇನೂ ತೋರಿಸುತ್ತೆ, ನಿಜವಾದ ನ್ಯಾಯದ ಬದಲಾಗಿ ತಂತಮ್ಮ ಕುರ್ಚಿಗಳಿಗೆ ಬದ್ಧವಾಗಿರೋದನ್ನೂ ತೋರಿಸುತ್ತೆ.

ಸಿಂಗ್ ಅವರ ಸರ್ಕಾರಕ್ಕೆ ನಿಜಕ್ಕೂ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅದು ತಮಿಳ್ನಾಡಿನ ಒತ್ತಡಕ್ಕೆ ಹೆಜ್ಜೆಹೆಜ್ಜೆಗೂ ಮಣೀತಿರ್ಲಿಲ್ಲ. ಹಾಗೇ ತಮಿಳ್ನಾಡಿಗೂ ಕೇಂದ್ರದಲ್ಲಿ ರಿಮೋಟಿಂದ ತನ್ನ ಬೇಳೆ ಬೇಯಲ್ಲ ಅನ್ನೋ ಸಂದೇಶಾನೂ ಹೋಗ್ತಿತ್ತು. ಆದ್ರೆ ಸಿಂಗ್ ಅವರ ಸರ್ಕಾರಕ್ಕೆ ತಾನು ಬೀಳದೆ ಮುಂದುವರಿಯೋದೇ ಆದ್ಯತೆಯಾಗಿತ್ತಲ್ಲ? ಒಟ್ಟಿನಲ್ಲಿ ತಮಿಳ್ನಾಡು ಮತ್ತು ಕೇಂದ್ರ - ಇವರಿಬ್ಬರ "ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ("narrow political considerations") ಗಳಿಂದ ಕರ್ನಾಟಕ ಬಡವಾಯ್ತು, ಅಷ್ಟೆ! ಏನ್ ಗುರು?

9 ಅನಿಸಿಕೆಗಳು:

ಶ್ವೇತ ಅಂತಾರೆ...

namma raajya sarkaara sari iddu, namma janakke namma naadige eenadru madle beku anno dhorane iddidre yaava kendra sarkaaranu care madbekagirlilla. Aadre namma raajya sarkaaradavare awara high-command ge jai kaara haaki nammannu moole gumpu maadiruvaaga yaarige eenandu enu prayojana? :-(
ella namma kharma ankobekeno

Anonymous ಅಂತಾರೆ...

ನಮ್ಮ ಸಂವಿಧಾನವೇ ಈ ರೀತಿ ದುರ್ಬಲವಾಗಿ ಇರ್ಬೇಕಾದ್ರೆ ಇನ್ನೇನು ಮಾಡೋಕಾಗತ್ತೆ. ಎಲ್ಲಾ ರಾಜಕಾರಣಿಗಳ ಕೈಯಲ್ಲೇ ಇರುವಂತೆ ಮಾಡಿಟ್ಟಿದ್ದಾರೆ. ಅದನ್ನ ತಿದ್ಬೇಕು ಅಂದ್ರೆನೂ ರಾಜ್ಕಾರಣಿಗಳೇ ಬೇಕು. ಒಟ್ಟಿನಲ್ಲಿ ಹುಚ್ಚು ಬಿಡೋವರೆಗೂ ಮದುವೆ ಆಗೋಲ್ಲ, ಮದುವೆ ಆಗೋವರೆಗೂ ಹುಚ್ಚು ಬಿಡೋಲ್ಲ ಅನ್ನುವ ಸ್ಥಿತಿ ಈ ಭಾರತದ್ದು !

Lohith ಅಂತಾರೆ...

Nam Karnataka da bagya ne estu....State al baro govt central al erola ed tumba kaladidalu agede....Ed nam duradrusta anbohudu....E av-vyavaste yavag sari hogoto a devrage gottu....Otnal namagu one fine day barle anta ashisbeku aste

Anonymous ಅಂತಾರೆ...

namma samasyege uttara andre nammade ondu party,, adakke atleast 20 MP seats sigodu aamele central govt ge support maadodu,, aamele naavunu namma naadige bekaad yella kelsa maadkoboudu..

forming a party is not that difficult,, if a party comes and bags just 5 seats and does a neat job in assembly,, it will grow in notime,, remember BJP grew from 4 to 79 in 25 years...

Unknown ಅಂತಾರೆ...

ಭಾರತವನ್ನು ಯುರೋಪಿಯನ್ ಯೂನಿಯನ್ ನ ಮಾದರಿಯಲ್ಲಿ ರೂಪಿಸಬೇಕು. ರಾಜ್ಯಗಳಿಗೆ ಸಂಪೂರ್ಣ ಸ್ವಾಯುತ್ತತೆ (ಸಿಟಿಸನ್‌ಶಿಪ್ ಮತ್ತು ತೆರಿಗೆ ಸಂಗ್ರಹ ಇತ್ಯಾದಿಗಳೆಲ್ಲವೂ ಸೇರಿದಂತೆ) ಕೊಡಬೇಕು. ಕೇವಲ ಡಿಫೆನ್ಸ್ ಮಾತು ವಿದೇಶಾಂಗ ನೀತಿಗಳಿಗೆ ಒಟ್ಟಾಗಿ ಒಕ್ಕೂಟ ರೂಪದಲ್ಲಿ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಎಲ್ಲ ರಾಜ್ಯಗಳು ತೆರಿಗೆ ಹಣದಲ್ಲಿ ಸ್ವಲ್ಪ ಪಾಲನ್ನು ಕೇಂದ್ರಕ್ಕೇ ನೀಡಬೇಕು. ಈ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಮತದಾನದ ಹಕ್ಕೂ ಕೊಡುವಂತೆ ಆಗ್ರಹಿಸಬೇಕು. ನಮ್ಮೆಲ್ಲ ಸಮಸ್ಯೆಗಳಿಗೂ ಇದು ಭರ್ಜರಿ ಪರಿಹಾರ. ಆಗ ಈ ವಲಸೆ ಸಮಸ್ಯೆ, ಕರ್ನಾಟಕಕ್ಕೆ ಅನ್ಯಾಯ ಮಾಡಿ ತಮಿಳುನಾಡಿಗೆ ಕೊಡುತ್ತಿರುವ ವಿಶೇಷ ಸೌಲಭ್ಯಗಳಿಗೆಲ್ಲ ಕಡಿವಾಣ ಬೀಳುತ್ತದೆ.

Rohith B R ಅಂತಾರೆ...

having a regional or a national level party is not the crucial point here according to me. the point our reps are missing here is the self-confidence and the awareness of our immensely rich history and culture. besides it takes nothing more than mere understanding of one's responsibilities in the political line - if we elect a person to be our MP (whether s/he belongs to JDS or BJP or Congress) s/he has to remember who s/he has to work for, and what richness s/he represents and what s/he needs to protect.

If these are taken care of then who cares if it is a regional or a national party! An example of a regional party failing these is JD(S) - although I feel even today it is better we have them in power than a BJP or Congress, who with national level motives are so useless for us - they cant even pronounce our state name correctly - if they had a will they could have!

Anonymous ಅಂತಾರೆ...

@sumsumke

While what you're saying is correct in theory, national parties will never in practice be able to succesfully represent 'local aspirations' at the center to any acceptable level of satisfaction of Kannadigas.

The reasons for this are simple enough, and you have yourself identified a couple of them: firstly, our MPs have to understand their responsibilities; secondly they have to remember who they are working for. Both these sound simple to you and me, but are qualities which are next to impossible to find in them. Instead, what is needed is a system itself which forces our MPs to act in favour of their electorate. And to that system we shall be nearer with local parties than national ones.

Anonymous ಅಂತಾರೆ...

"ಸಂಕುಚಿತ ರಾಜಕೀಯ ಇಚ್ಛಾಶಕ್ತಿ" ಇದಕ್ಕೆ ಅಚ್ಚಕನ್ನಡದಲ್ಲಿ ಹೇಗೆ ಹೇಳಬಹುದು ತಿಳಿಸಿ?

Anonymous ಅಂತಾರೆ...

I am commenting only on that Shastriya stana maana. ಇದರ ಬಗ್ಗೆ (ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ) ನಮ್ಮ ನಾಡಿನ ಜನ ಪ್ರತಿನಿಧಿಗಳು ಯಳ್ಳಸ್ಟೂ ತಲೆ ಕೆಡೆಸಿ ಕೊಂಡಿಲ್ಲ ಎನ್ನುವುದು ವಿಪರ್ಯಾಸ. ಹಿರಿಯ ರಾಜಕಾರಣಿಗಳು ದಿನಕ್ಕೊಂದು ಷರತ್ತುಗಳನ್ನು ಹುಡುಕುವುದರಲ್ಲಿ ತಲ್ಲೀನರಾಗಿದ್ದಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails